ವೇದೋಪನಿಷತ್ತು, ಬ್ರಹ್ಮಸೂತ್ರ, ಗೀತೆಗಳನ್ನು ಅರಿಯದವರು ಹೋರಿಸ್ವಾಮಿಯನ್ನಲ್ಲದೆ ಇನ್ನಾರನ್ನು ಬೆಂಬಲಿಸಿಯಾರು?

ವೇದೋಪನಿಷತ್ತು, ಬ್ರಹ್ಮಸೂತ್ರ, ಗೀತೆಗಳನ್ನು ಅರಿಯದವರು ಹೋರಿಸ್ವಾಮಿಯನ್ನಲ್ಲದೆ ಇನ್ನಾರನ್ನು ಬೆಂಬಲಿಸಿಯಾರು?

ಸಾಮಾನ್ಯವಾಗಿ ನಮ್ಮ ಹಳ್ಳಿಗಳಲ್ಲಿ ಪುರೋಹಿತರನ್ನು/ಭಟ್ಟರನ್ನು ಕರ್ಮಾಂಗಕ್ಕೆ ಕೂರಿಸಿ ಸಂಕಲ್ಪ ಮಾಡಿಸಿದ ನಂತರ, ಯಜಮಾನ ಮನುಷ್ಯ ಬೇರೆ ಕೆಲಸದ ನಿಮಿತ್ತ ಅಲ್ಲಿಂದ ಕಾಲ್ತೆಗೆಯುತ್ತಾನೆ ಅಥವಾ ಅನ್ಯ ವ್ಯವಹಾರಗಳಲ್ಲಿ ನಿಮಗ್ನನಾಗಿ ಯಾಂತ್ರಿಕವಾಗಿ ಭಟ್ಟರ ಜೊತೆ ಕೂತುಕೊಳ್ತಾನೆ. ದೇವಿ ಮಹಾತ್ಮೆ ಅಥವಾ ಸಪ್ತಶತಿಗೆ ಭಟ್ಟರು ತೊಡಗಿದ ನಂತರ ಯಜಮಾನ ತೋಟಕ್ಕೋ ಪ್ಯಾಕ್ಟರಿಗೋ ಹೋಗುತ್ತಾನೆ. ಕೇಳಿದರೆ, “ಅದೆಂತದ, ಗೊತ್ತಿಪ್ಪದ್ದೇಯ, ಒಂದಷ್ಟು ರಾಕ್ಸಸರ ವಧೆ ಇಪ್ಪ ಕತೆ ಇನ್ನೆಂತ?” ಎಂದು ಉತ್ತರಿಸ್ತಾರೆ. ಮಾಡುವ ಕರ್ಮಾಂಗಗಳಲ್ಲಿ ಭಕ್ತಿ-ಶ್ರದ್ಧೆ ಇಲ್ಲದಿದ್ದರೆ ಯಾವ ಫಲವನ್ನು ನಿರೀಕ್ಷಸಲು ಸಾಧ್ಯ?

ಇದೆಷ್ಟು ದೊಡ್ಡ ಅಪಚಾರ ಎಂದರೆ ಕರ್ಮಾಂಗ ಮಾಡದಿದ್ದರೂ ಪರವಾಗಿಲ್ಲ, ಹೀಗೆ ಮಾಡಬಾರದು. ಅತ್ಯಂತ ಪ್ರೀತಿಪಾತ್ರ ಅತಿಥಿಗಳು, ನೆಂಟರು ಮನೆಗೆ ಬಂದಾಗ ನೀವು ಹೀಗೇ ನಡೆದುಕೊಳ್ಳುವಿರೇ? ಇಲ್ಲವಲ್ಲ? ಅಂದಮೇಲೆ ದೇವರನ್ನೇ ಕರೆದು ನೀವು ಬೇರೆಡೆಗೆ ಹೋದರೆ ಅಥವಾ ಬೇರೆ ಕೆಲಸಗಳಲ್ಲಿ ತೊಡಗಿಕೊಂಡರೆ ದೇವರಿಗೆ ಏನೆನಿಸಬೇಡ?

ಕಳೆದ ಒಂದು ಲೇಖನದಲ್ಲಿ ಶ್ರೀಯಂತ್ರದ ಬ್ರಹ್ಮಾಂಡ ವ್ಯಾಪ್ತಿಯ ಬಗ್ಗೆ ಸ್ಥೂಲವಾಗಿ ಹೇಳಿದ್ದೆ. ಅದರ ಬಗ್ಗೆ ವಿದೇಶೀಯ ವಿಜ್ಞಾನಿಗಳು ಮತ್ತು ಗಣಿತಜ್ಞರು ಅದೆಷ್ಟು ತಲೆಕೆಡಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ಇಲ್ಲೊಂದು ಕೊಂಡಿ ಕೊಡುತ್ತೇನೆ. ಓದಿ ತಿಳಿದುಕೊಳ್ಳಿ. ಹಲವು ಅಧ್ಯಾಯಗಳುಳ್ಳ ಈ ಮಾಹಿತಿ ಕಣಜವನ್ನು ಸ್ಟೀಫನ್ ಎಂ. ಫಿಲಿಪ್ಸ್ ಎಂಬವರು ದಾಖಲಿಸಿದ್ದಾರೆ. (www.smphillips.8m.com/article-35.html )

ಇದೇ ಸರಿಯಾದ ಮಾಹಿತಿ ಎಂದು ತುಮರಿ ಹೇಳುತ್ತಿಲ್ಲ. ಆದರೆ ಶ್ರೀಯಂತ್ರದ ಮಹತ್ವವನ್ನು ಅರಿಯುವ ಹಾದಿಯಲ್ಲಿ ನಡೆದಿರುವ ಒಂದು ಪ್ರಯತ್ನವನ್ನು ನಿಮಗಿಲ್ಲಿ ತೋರಿಸುತ್ತಿದ್ದೇನೆ. ಇಷ್ಟೇ ಕಾಳಜಿ ನಮ್ಮವರಿಗೂ ಇದ್ದಿದ್ದರೆ ಹೇಗಿರಬಹುದಿತ್ತು?

ಶ್ರೀಯಂತ್ರದಲ್ಲಿ ಒಟ್ಟು ಒಂಬತ್ತು ದೊಡ್ಡ ತ್ರಿಕೋನಗಳಿವೆ. ಅವುಗಳ ಹೆಣೆದುಕೊಳ್ಳುವಿಕೆಯಿಂದ ಒಳಗಡೆ ನಲ್ವತ್ಮೂರು ತ್ರಿಕೋನಗಳಿವೆ. ಇದು ವಿಶ್ವಗರ್ಭವನ್ನು ಧರಿಸಿದ ಅದ್ವೈತವನ್ನು ಪ್ರತಿನಿಧಿಸುತ್ತದೆ. ಇದರ ಹೊರಗೆ ಅಷ್ಟದಳ ಕಮಲವಿದೆ. ಅದರ ಹೊರಗೆ ಹದಿನಾರು[ಷೋಡಶ]ದಳಗಳ ಕಮಲವಿದೆ. ಅದರ ಹೊರಗೆ ಇರುವ ನಾಲ್ಕು ದ್ವಾರಗಳುಳ್ಳ ಚೌಕಾಕಾರ, ದೇವಸ್ಥಾನವನ್ನು ಪ್ರತಿನಿಧಿಸುತ್ತದೆ. ಖಡ್ಗಮಾಲಾ ಸ್ತೋತ್ರದಲ್ಲಿ ಶ್ರೀಯಂತ್ರದ ನವಾವರಣ ಅಂದರೆ ಒಂಬತ್ತು ಪದರಗಳಲ್ಲಿ ಇರುವ ದೇವಿಯ ವಿವಿಧ ಶಕ್ತಿ ಸ್ವರೂಪಗಳನ್ನು ಹೆಸರಿಸಿದ್ದಾರೆ. ವಿದ್ಯಾಲಂಕಾರ ಪ್ರೊ.ಎಸ್.ಕೆ.ರಾಮಚಂದ್ರರಾಯರು ’ದಿ ತಂತ್ರ ಆಫ್ ಶ್ರೀಚಕ್ರ-ಭಾವೋಪನಿಷತ್’ಎಂಬ ಪುಸ್ತಕವನ್ನೇ ಬರೆದಿದ್ದಾರೆ.

ಹಾಗಾದರೆ ಈ ಪ್ರಪಂಚದ ಅನೇಕ ಶ್ರದ್ಧಾಳುಗಳು ತಲೆಯಿಲ್ಲದೆ ಭಟ್ಟರು ಬರೆಯುವ ಯಂತ್ರಗಳನ್ನು ನೋಡಿ ತಲೆಕೆಡಿಸಿಕೊಂಡರೇ? ಇಲ್ಲ. ಆದಿಶಂಕರರು ಮೋಜಿಗಾಗಿ ಶ್ರೀಯಂತ್ರವನ್ನು ನೀಡಿದರೇ? ಇಲ್ಲ. ಅದರ ವಿಶ್ವವ್ಯಾಪಕತೆಯನ್ನು ಕಂಡೇ ಶಂಕರರು ಅದನ್ನು ಜಗತ್ತಿಗೆ ಪರಿಚಯಿಸಿದರು. ಶ್ರೀಯಂತ್ರದ ಹಲವು ಸಣ್ಣ ತ್ರಿಕೋನಗಳು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇವೆ. ಒಂಬತ್ತು ತ್ರಿಕೋನಗಳ ಪೈಕಿ ಮೂರು ಅತ್ಯಂತ ಪ್ರಬಲವಾಗಿವೆ. ಮೂರರ ಪೈಕಿ ಅತ್ಯಂತ ಒಳಗಿನ ತ್ರಿಕೋನ ಶಕ್ತಿಯ ಆಗರವೇ ಆಗಿದೆ. ಅದು ಭಾರತದಲ್ಲಿದೆ ಎಂಬುದು ನಮ್ಮ ಹೆಮ್ಮೆ.

ನಮ್ಮ ಯುವಜನಾಂಗಕ್ಕೆ ವೇದೋಪನಿಷತ್ತುಗಳಲ್ಲಿ, ಬ್ರಹ್ಮಸೂತ್ರದಲ್ಲಿ, ಭಗವದ್ಗೀತೆಯಲ್ಲಿ ಮೊದಲನೆಯದಾಗಿ ಆಸತ್ಕಿಯಿಲ್ಲ, ಎರಡನೆಯದಾಗಿ ಸ್ಪಷ್ಟವಾದ ಮಾಹಿತಿಯೂ ಇಲ್ಲ. ಮಂತ್ರಗಳನ್ನು ಉರುಹೊಡೆದು ಪಠಿಸುವ ಪುರೋಹಿತರಲ್ಲೇ ಹಲವರಿಗೆ ಅವುಗಳ ಅರ್ಥವಾಗಲೀ ಮಾಹಿತಿಯಾಗಲೀ ಇರುವುದಿಲ್ಲ. ಅದೆನ್ನಲ್ಲ ತಿಳಿದುಕೊಂಡಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅವರ ಲೆಕ್ಕದಲ್ಲಿ ಅದೆಲ್ಲ ಮಡಿ ಭಟ್ಟರ ಜೋಳಿಗೆಯ ಕೆಲ್ಸಕ್ಕೆ ಬಾರದ ಗ್ರಂಥಗಳಾಗಿರಬಹುದು. ಯಾಕೆಂದರೆ ಅನೇಕ ಯುವಕರು ಎಡಪಂಥೀಯತೆಯನ್ನು ಅನುಮೋದಿಸುತ್ತಾರೆ!

ಬಲಪಂಥೀಯತೆ ಮತ್ತು ಎಡಪಂಥೀಯತೆ ಎಂಬುದು ಅನುಕ್ರಮವಾಗಿ ಶಿಷ್ಟ ಮತ್ತು ದುಷ್ಟ ಸ್ವಭಾವ ಸೂಚಕವೆಂದರೆ ತಪ್ಪಾಗಲಾರದು. ಶಿಷ್ಟವಾದುದನ್ನು ಒಂದು ಮಟ್ಟಕ್ಕೆ ಪ್ರಶ್ನಿಸಿ, ಕುತೂಹಲದಿಂದ ಸಂದೇಹಗಳನ್ನು ನಿವಾರಿಸಿಕೊಂಡು ಅನುಸರಿಸುವುದು ಉತ್ತಮ ನಡತೆ. ಆದರೆ ತರ್ಕ ಕುತರ್ಕವಾಗುವವರೆಗೆ ಬೆಳೆದರೆ ಅದೇ ದುಷ್ಟ ನಡತೆಯೆನಿಸುತ್ತದೆ. ಸಮಷ್ಟಿ ಸಮಾಜದಲ್ಲಿ ಅಂತಹ ಕುತರ್ಕ ಮಾಡುವವರನ್ನು ಕಾಣುತ್ತೀರಿ. ಅವರಿಗೆಲ್ಲ ಇವುಗಳ ಬಗ್ಗೆ ಯಾವ ಮಾಹಿತಿಯಿದೆ ಮತ್ತು ಎಷ್ಟರಮಟ್ಟಿಗಿನ ಮಾಹಿತಿಯಿದೆ?

ಆಳಸಿ ಮಗನಿಗೆ ಅಪ್ಪ ಹೇಳಿದನಂತೆ,”ಮಗ ಸ್ಕೂಲಿಗೆ ಹೋಗು”
ಮಗ ಕೇಳಿದನಂತೆ”ಸ್ಕೂಲಿಗೆ ಯಾಕೆ ಹೋಗಬೇಕು?”
ಅಪ್ಪ,”ಸ್ಕೂಲಿಗೆ ಹೋಗಿ ವಿದ್ಯೆ ಕಲಿತು ದೊಡ್ಡವನಾಗಬೇಕು, ಪದವಿ ಪಡೆಯಬೇಕು”
ಮಗ,”ಪದವಿ ಪಡೆದು ನಂತರ ಏನು ಮಾಡಬೇಕು?”
ಅಪ್ಪ,”ಪದವಿ ಪಡೆದ ನಂತರ ದುಡಿಮೆಮಾಡಬೇಕು.”
ಮಗ,”ದುಡಿಮೆ ಮಾಡಿ ನಂತರ ಏನು ಮಾಡಬೇಕು?”
ಅಪ್ಪ,”ದುಡಿದು, ಸಂಸಾರದೊಟ್ಟಿಗೆ ನೆಮ್ಮದಿಯಿಂದ ಕಾಲ ಕಳೆಯಬೇಕು”
ಆಗ ಮಗ ಹೇಳುವ ಉತ್ತರ ನೋಡಿ,
ಮಗ,”ಅಷ್ಟೇ ತಾನೇ? ಅಷ್ಟೆಲ್ಲಾ ಕಷ್ಟಪಟ್ಟು, ಓದಿ, ಪದವಿ ಪಡೆದು, ನಂತರ ನೆಮ್ಮದಿಯಿಂದ ಕಾಲ ಕಳೆಯುವುದಷ್ಟೇ ತಾನೇ? ನಾನು ಈಗಲೇ ನೆಮ್ಮದಿಯಿಂದ ಇದ್ದೀನಿ, ನನಗಷ್ಟೇ ಸಾಕು.”

ಕುತರ್ಕ ಎಂದರೆ ಇದೇ ರೀತಿ. ಇದಕ್ಕೆ ಮತ್ತೆ ವಿವರಣೆ ಬೇಕಿಲ್ಲ ತಾನೇ? ಇಂತಹ ಕುತರ್ಕಿಗಳೆ ಇಂದು ರಾಮಾಯಣ ಮತ್ತು ಭಗವದ್ಗೀತೆಗಳ ಬಗ್ಗೆ ಮಾತನಾಡ್ತಾರೆ. ಮುನ್ನಡೆದು ವೇದಮಂತ್ರಗಳಿಗೂ, ಬ್ರಹ್ಮಸೂತ್ರಕ್ಕೂ ತಮ್ಮನೇರಕ್ಕೆ ಅರ್ಥ ಪ್ರತಿಪಾದಿಸುತ್ತ ಹೋಗ್ತಾರೆ. ನಿಜವಾದ ಪಾಂಡಿತ್ಯ ಇಲ್ಲದಾಗ ಹುಟ್ಟುವ ಅರ್ಥಗಳೆಲ್ಲ ಅನರ್ಥಕಾರಿಗಳೇ. ಅಭಿವ್ಯಕ್ತಿ ಸ್ವಾತಂತ್ರ್ಯವೆನ್ನುತ್ತ ಅದನ್ನು ಅನುಮೋದಿಸುವವರೆಲ್ಲ ಅನರ್ಥಕಾರೀ ಕಾರ್ಯಗಳಲ್ಲಿ ಭಾಗೀದಾರರೆಂದರ್ಥ.

ಅಚಿಂತ್ಯಾಃ ಖಲು ಯೇ ಭಾವಾ ನ ತಾಂಸ್ತರ್ಕೇಣ ಸಾಧಯೇತ್ |
ಪ್ರಕೃತಿಭ್ಯಃ ಪರಂ ಯಚ್ಚ ತದಚಿಂತ್ಯಂ ವಿಭಾವ್ಯತೇ||

ಈ ಶ್ಲೋಕ ಮಹಾಭಾರತದ್ದು. ಅದರರ್ಥ-ಮನಸ್ಸಿನ ಊಹೆಗೆ ನಿಲುಕದ ವಿಚಾರಗಳನ್ನು ತರ್ಕದಿಂದ ತಿಳಿಯಲು ಸಾಧ್ಯವಿಲ್ಲ; ಅದು ಅಲೌಕಿಕವಾದುದು. ತರ್ಕವನ್ನು ಬಳಸುವಾಗಲೂ ಬಹಳ ಎಚ್ಚರಿಕೆ ವಹಿಸಬೇಕು. ಪಕ್ಷಪಾತವಿಲ್ಲದೆ ಸತ್ಯವನ್ನರಿಯುವ ಪರಿಶೋಧನೆಯ ಪ್ರಕಾರ ಮಾತ್ರ ತರ್ಕವೆನಿಸುತ್ತದೆ. ಯಾವುದು ತರ್ಕವಾಗುತ್ತದೆ ಎಂದು ಅರ್ಥವಾಯ್ತಲ್ಲವೇ?

ಶಂಕರರು ಮಗುವಾಗಿದ್ದಾಗ ಹೊತ್ತುಹೊತ್ತಿಗೆ ಅಮ್ಮ ಊಟ ಹಾಕುವುದನ್ನು ನೋಡಲಿಲ್ಲ; ಅವರು ಜ್ಞಾನಸಂಪಾದನೆಗಾಗಿ ಗುರುಕುಲಕ್ಕೆ ಹೋಗಿಬಿಟ್ಟಿದ್ದರು! ನಮ್ಮಗಳ ಮನೆಯಲ್ಲಿ ಇಂದು ಆ ವಯೋಮಾನದ ಹುಡುಗರು ನೆಟ್ಟಗೆ ಗಟ್ಟಿಯಾಗಿ ಚಡ್ಡಿ ಕಟ್ಟಿಕೊಳ್ಳಲಿಕ್ಕೆ ಕಲಿಯುವುದಿಲ್ಲ. ದೊಡ್ಡವರ ಬಗ್ಗೆ ತುಮರಿ ಹೇಳಬೇಕಾಗಿಲ್ಲ ಬಿಡಿ, ಮಠಗಳಲ್ಲಿ ಪೀಠದಲ್ಲಿ ಕೂರುವ ಹೋರಿಸ್ವಾಮಿಯಂತವರಿಗೆ ಕೌಪೀನವೆಂಬ ಚಡ್ಡಿಯನ್ನು ಕಟ್ಟಿಕೊಳ್ಳುವುದೇ ಬೇಕಾಗಿಲ್ಲ. ಅದು ಬೇರೆ ಪ್ರಶ್ನೆ.

ಕೆಲವರು ಹೇಳ್ತಾರೆ “ನಮ್ಮ ಹೊಟ್ಟೆಗೆ ಆಹಾರವಿಲ್ಲ.” ತಿನ್ನುವುದಕ್ಕೆಂದೇ ಹುಟ್ಟಿದವರಿಗೆ ಆಹಾರ ಹುಡುಕುವುದೇ ಜೀವನದ ಪರಮ ಧ್ಯೇಯ. ನಿಮ್ಮಲ್ಲಿ ಹಲವರಿಗೆ ಸಿಕ್ಕ ಮಾಹಿತಿಯಂತೆ ತುಮರಿಗೂ ತಿಳಿದದ್ದು-ಸಾಧುವೊಬ್ಬ ಎಪ್ಪತ್ತೈದು ವರ್ಷಗಳಿಂದ ಆಹಾರ ಮತ್ತು ನೀರನ್ನು ಸೇವಿಸಲೇ ಇಲ್ಲವಂತೆ! ಬದುಕಿಯೇ ಇದ್ದಾನಲ್ಲ? ವಿಜ್ಞಾನಿಗಳು ಪರೀಕ್ಷಿಸಲು ಹೋಗಿ ಏನೂ ತಿಳಿಯದೆ ಕೈಚೆಲ್ಲಿದ್ದಾರೆ! ಅಂದರೆ ಆಹಾರವನ್ನೇ ಪ್ರಧಾನ ಗುರಿಯೆಂದುಕೊಂಡರೆ ದನ ತಿಂದರೂ ಹೊಟ್ಟೆತುಂಬಿತು ಎಂಬುದಿಲ್ಲ, ಮತ್ತೆ ಮತ್ತೆ ಹಸಿವಾಗುತ್ತಲೇ ಇರುತ್ತದೆ.

ಹಸಿವು-ನೀರಡಿಕೆ, ಹುಟ್ಟು-ಸಾವು, ರೋಗ-ರುಜಿನ ಎಲ್ಲವುಗಳಿಂದ ಮುಕ್ತಿ ಬಯಸುವುದಾದರೆ ಶಿಷ್ಟಮಾರ್ಗದಲ್ಲಿ ಅದಕ್ಕೆ ಉತ್ತರವಿದೆ. ಅದನ್ನು ಅರಿತುಕೊಳ್ಳುವಲ್ಲಿ ಶ್ರದ್ಧೆ, ತಾಳ್ಮೆ, ಪ್ರಯತ್ನ ಎಲ್ಲವೂ ಬೇಕಷ್ಟೆ. ವೇದ, ಉಪನಿಷತ್ತುಗಳು, ಬ್ರಹ್ಮಸೂತ್ರ, ಗೀತೆಗಳ ಬಗ್ಗೆ ಇಂದು ಯಾರೋ ಹೇಳಿದರೆ ನಾವು ಕೇಳಬೇಕಾಗಿದೆ; ಯಾಕೆಂದರೆ ಅವುಗಳನ್ನು ನಾವು ನಮ್ಮದನ್ನಾಗಿ ಇಟ್ಟುಕೊಳ್ಳುವ ಪ್ರಯತ್ನವನ್ನೇ ನಡೆಸಲಿಲ್ಲ. ಪಿತ್ರಾರ್ಜಿತವಾಗಿ ನಮಗೆ ದೊರೆತ ಬಹುದೊಡ್ಡ ಆಸ್ತಿಯೆಂದರೆ ಅವುಗಳೇ ಎಂಬುದು ನಮ್ಮವರಿಗೆ ತಿಳಿದಿಲ್ಲ.
ದುಡಿಮೆ ಮಾಡಬೇಕು ಸರಿ, ಉಪಜೀವನಕ್ಕೆ ಅದು ಪುರುಷ ಪ್ರಯತ್ನ. ಮುಖ್ಯಜೀವನಕ್ಕೆ ಯಾವ ಪುರುಷ ಪ್ರಯತ್ನವನ್ನು ನಡೆಸಿದ್ದೀರಿ? ಊಹುಂ..ಇಲ್ಲ. ಮುಖ್ಯ ಜೀವನವನ್ನು ಕಂಡುಕೊಳ್ಳುವಲ್ಲಿ ಬಡತನ ಅಡ್ಡಿಪಡಿಸುತ್ತದೆಯೇ? ಇಲ್ಲ. ನಮ್ಮ ಪ್ರಧಾನಿ ಮೋದಿ ಇದ್ದಾರಲ್ಲ, ಅವರ ಬಾಲ್ಯ ಬಹಳ ಕಠಿಣ ಪರಿಸ್ಥಿತಿಯಲ್ಲಿತ್ತು. ಅಪ್ಪನ ಕುಲಕಸುಬಿನಿಂದ ಅನ್ನ ಹುಟ್ಟುತ್ತಿರಲಿಲ್ಲ. ಒಂದೇ ಕೋಣೆಯ ಮನೆಯಲ್ಲಿ ಒಟ್ಟೂ ನಾಲ್ಕಾರು ಮಕ್ಕಳು. ನಮ್ಮಲ್ಲೆಲ್ಲ ಹಿಂದೆ ಇದ್ದಂತೆ ಹೊಗೆಯುಗುಳುವ ಒಲೆ. ಆದರೆ ಆ ಬಡತನ ಅವರ ಮುಖ್ಯಜೀವನಕ್ಕೆ ಅಡ್ಡಿಪಡಿಸುವ ಬದಲು ಅವರನ್ನು ಮುನ್ನಡೆಸಿತು.

ಶುದ್ಧಸಂಕಲ್ಪ, ಶುದ್ಧ ಹೃದಯ ಮತ್ತು ಶುದ್ಧ ಹಸ್ತವುಳ್ಳ ಮೋದಿ ವಿಶ್ವಕುಟುಂಬವನ್ನೇ ಮನದಲ್ಲಿ ಧರಿಸಿದರು. ಅವರ ಆಚರಣೆಗಳಲ್ಲಿರುವ ಬ್ರಾಹ್ಮಣ್ಯವನ್ನು ನೋಡಿ. ಶರನ್ನವರಾತ್ರಿಯಲ್ಲಿ ಒಂಬತ್ತೂ ದಿವಸ ಅಖಂಡ ಉಪವಾಸ; ಲಿಂಬು ಪಾನಕವೊಂದೇ ಆಹಾರ! ನಮ್ಮಲ್ಲಿ ಎಷ್ಟು ಜನ ಮಾಡ್ತಾರೆ? ಹಿಂದೆ ನಕ್ತ ಎಂಬ ಉಪವಾಸ ಪದ್ಧತಿ ಇತ್ತು ಎಂದು ಕೇಳಿದ್ದೇನೆ. ಆ ನಕ್ತ ಪದ್ಧತಿಯನ್ನು ಇಂದು ಎಷ್ಟು ಜನ ಆಚರಿಸುತ್ತಾರೆ?

ಅವಿದ್ಯೆಯಿಂದ ಮನುಷ್ಯನಲ್ಲಿ ಎಷ್ಟೊಂದು ವಿಕಲ್ಪಗಳು ಹುಟ್ಟಿಕೊಳ್ಳುತ್ತವೆ ನೋಡಿ- ದ್ವಾಪರಯುಗದಲ್ಲಿ ಮಥುರಾದಲ್ಲಿ ಒಮ್ಮೆ ಶ್ರೀಕೃಷ್ಣನ ಮೆರವಣಿಗೆ ಹೊರಟಿತ್ತಂತೆ. ಅದನ್ನು ಕಂಡ ಮುದುಕಿಯರು ಹಿಂದೆ ಗಜೇಂದ್ರಮೋಕ್ಷ ನಡೆಸಿದ ಪುಣ್ಯಾತ್ಮನೆಂದು ನಮಸ್ಕರಿಸಿದರಂತೆ. ಕೃಷ್ಣನನ್ನು ಗಂಡನನ್ನಾಗಿ ಪಡೆದ ಮಹಿಳೆಯರು ಸೌಭಾಗ್ಯಶಾಲಿಗಳು ಎನ್ನುತ್ತ ತರುಣಿಯರು ತಮಗೆ ಆ ಭಾಗ್ಯವಿಲ್ಲವೆಂದು ಮರುಗಿದರಂತೆ. ಸಣ್ಣ ಮಕ್ಕಳು ತಮಗೆ ಆಡಲು ಒಳ್ಳೇ ಸಂಗಾತಿ ಎನ್ನುತ್ತ ಕುಣಿದಾಡಿದರಂತೆ. ವಯೋಮಾನ ಸಹಜವಾಗಿ ಮನುಷ್ಯರಲ್ಲಿ ಮೂಡುವ ವಿಕಲ್ಪಗಳಿಗೆ ಇದು ಉದಾಹರಣೆ. ಇದೇ ಒಂದು ವಿಧದ ಅವಿದ್ಯೆ.

ನಮ್ಮಲ್ಲೆ ಕೆಲವು ಮುದುಕಿಯರು ಹೋರಿಸ್ವಾಮಿಯಲ್ಲಿ ಭಗವಂತನನ್ನೂ, ಯುವತಿಯರು ಗಂಡನನ್ನೂ ಮತ್ತು ಇನ್ನೂ ಶೈಶವಾವಸ್ಥೆಯಲ್ಲಿರುವ ಕೆಲವರು ಆಡಲು ಒಳ್ಳೇ ಸಂಗಾತಿಯನ್ನೂ ಕಂಡುಕೊಂಡಿದ್ದಾರೆ. ಅದು ವಿಕಲ್ಪ ಎಂದು ಎಷ್ಟೇ ಹೇಳಿದರೂ ಅವರಲ್ಲಿರುವ ಅವಿದ್ಯೆ ದೂರವಾಗುವುದಿಲ್ಲ. ಹೋರಿಸ್ವಾಮಿಯನ್ನು ಶ್ರೀಕೃಷ್ಣನಿಗೆ ಹೋಲಿಸುವುದೂ ಕುತರ್ಕವೇ ಬಿಡಿ.

ಯಾಕೆಂದರೆ ಹದಿನಾರು ಸಾವಿರ ಯುವತಿಯರಿಗೆ ಏಕಕಾಲದಲ್ಲಿ ಹದಿನಾರು ಸಾವಿರ ಕೃಷ್ಣರಾಗಿ ಲಭಿಸಬಲ್ಲ ತಾಕತ್ತು ಅವನಲ್ಲಿತ್ತು. ಕಿರುಬೆರಳಲ್ಲಿ ಪರ್ವತವನ್ನೇ ಎತ್ತುವ ಸಾಮರ್ಥ್ಯವಿತ್ತು. ನಮ್ಮ ಹೋರಿಗೆ ಸಾಮರ್ಥ್ಯವಿರೋದು ಇಪ್ಪತ್ತೊಂದನೇ ಬೆರಳಲ್ಲಿ ಮಾತ್ರ ಎಂಬುದು ಸಾಬೀತಾಗಿದೆಯಲ್ಲ; ಅದೂ ಗುಡ್ಡವನ್ನೆತ್ತುವುದಲ್ಲ! ಗುಡ್ಡ ಬರುವಂತೆ ಮಾಡುವುದು!

ನಮ್ಮವರು ಅಧ್ಯಯನಪರರಾದರೆ, ಮೇಲೆ ಹೇಳಿದ ಗ್ರಂಥಗಳನ್ನು ಅರಗಿಸಿಕೊಂಡಿದ್ದರೆ ಇಂದು ಹಾವಾಡಿಗ ಮಠದಲ್ಲಿ ಹೋರಿ ಇರುತ್ತಿರಲಿಲ್ಲ. ಹಾವಾಡಿಗ ಮಠವೆಂದು ಬೊಟ್ಟುಮಾಡುವ ಪ್ರಮೇಯವೇ ಬರುತ್ತಿರಲಿಲ್ಲ.

Thumari Ramachandra

https://www.facebook.com/groups/1499395003680065/permalink/1681638248789072/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s