ಹಾವಾಡಿಗ ಮಹಾಸಂಸ್ಥಾನದವರ ಜಿಂಗಿಚಕ್ಕ ವಿಡಿಯೋ ನೈಜವಾದದ್ದೆಂದು ಎಲ್ಲರೂ ಬಲ್ಲರು!

ಹಾವಾಡಿಗ ಮಹಾಸಂಸ್ಥಾನದವರ ಜಿಂಗಿಚಕ್ಕ ವಿಡಿಯೋ ನೈಜವಾದದ್ದೆಂದು ಎಲ್ಲರೂ ಬಲ್ಲರು!

ಹೋರಿಸ್ವಾಮಿಯ ಹಾರಾಟ ಇನ್ನೂ ನಿಂತಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗುತ್ತಲೇ ಇದೆ. ಅದಕ್ಕೆ ಸುತ್ತಲಿನ ಬಳಗ ಹೋರಿಗಳ ಬೆಂಗಾವಲೆ ಕಾರಣ. ದಕ್ಷಿಣದ ರಾಂಪಾಲ ಮಾವಂದಿರ ಕೈಗೆ ಸೇರುವವರೆಗೆ ಇನ್ನೆಷ್ಟು ಜನ ತೊಂದರೆಗೊಳಗಾಗಬೇಕೋ ದೇವರೇ ಬಲ್ಲ.

ಸುದ್ದಿ ಏನು ಗೊತ್ತೇ? ಹಿಂದೆ ಕೆಲವರು ಹಾವಾಡಿಗ ಹಾವಾಡಿಸುತ್ತಿರುವ ವೀಡಿಯೋ ಬಿಡುಗಡೆ ಮಾಡಿದ್ದರಲ್ಲ? ಅದು ನೈಜ ವಿಡೀಯೋವಂತೆ. ಆ ಕತೆ ಇಂದಾದರೆ ಅದರ ಸ್ವರೂಪವೇ ಬದಲಾಗುತ್ತಿತ್ತು ಅಂತಾರೆ ಅನೇಕ ಜನ. ಅಂದು ಓಹೊಹೊ ಮಹದೊಡ್ಡ ಮರ್ಯಾದಸ್ಥ ತಾನು, ತನ್ನಂತವರ ಮೇಲೆ ವಿನಾಕಾರಣ ಚಡ್ಡಿಯಂತ್ರದ ಷಡ್ಯಂತ್ರ ತಯಾರಿಸಿದ್ದಾರೆ ಎಂದು ಹೇಳಿಕೆಕೊಟ್ಟಿದ್ದ. ಒಳಗಿನಿಂದ ಎಷ್ಟು ಹೋಯಿತೋ ಗೊತ್ತಿಲ್ಲ. ತಪ್ಪಿಸಿಕೊಂಡಿದ್ದಷ್ಟೇ ಅಲ್ಲ, ಆ ವಿಡಿಯೋ ತೆಗೆದುಕೊಟ್ಟವರ ಮೇಲೆ ಕೇಸು ದಾಖಲಿಸಿ ಅವರಿಗೆಲ್ಲ ತೊಂದರೆ ಕೊಡಲಾಯಿತು.

ಹಾವಾಡಿಗನ ದಬ್ಬಾಳಿಕೆ ಇನ್ನೂ ನಿಂತಿಲ್ಲ ಎಂಬುದಕ್ಕೆ ಈಗಲೂ ಪಾಪದವರ ಮೇಲೆ ನಡೆಯುತ್ತಿರುವ ದೂರು-ದೌರ್ಜನ್ಯಗಳೇ ಸಾಕ್ಷಿಗಳಾಗಿವೆ. ಅರ್ಪಿಸಿಕೊಂಡ ಹುಡುಗಿಯರು ಹೋರಿಯನ್ನು ಬೆಂಬಲಿಸುತ್ತಿದ್ದಾರೆ; ಮಾದಕ್ಕಿ ತಿಮ್ಮಕ್ಕನಂತೆ ಎಸ್.ಟಿ.ಡಿ ಬೂತ್ ಗಳಾಗುವ ವರೆಗೆ ಹೋರಿಯ ಬಳಗದಲ್ಲೇ ಇರುತ್ತಾರೆ ಬಿಡಿ. ಸಾಗರದ ಹಳ್ಳಿಯ ಮದುವೆ ಮನೆಯೊಂದರಲ್ಲಿ ಊಟದ ನಂತರ ಸ್ವೀಕರಿಸುವ ಅಡಿಕೆಪುಡಿಯ ಜೊತೆ ಜೆರಾಕ್ಟ್ ಪ್ರತಿಗಳನ್ನು ಹಂಚಲಾಗುತ್ತಿತ್ತು. ಅದರಲ್ಲಿ ಸಾಗರದ ಖಾಸಗಿ ವಿದ್ಯಾಸಂಸ್ಥೆಯ ಮಾಲೀಕನನ್ನು ಅವಾಚ್ಯ ಬೈಗುಳಗಳಿಂದ ಇನ್ನಿಲ್ಲದಂತೆ ನಿಂದಿಸಲಾಗಿದೆ.

ಮದುವಣಗಿತ್ತಿಯ ಅಕ್ಕ ಒಬ್ಬಳು ಮಹಾನಗರ ವಾಸಿ ಎಂದು ತಿಳಿದುಬಂತು. ಅವಳು ಇಡಿಯಾಗಿ ತನ್ನನ್ನು ಹೋರಿಸ್ವಾಮಿಗೆ ಅರ್ಪಿಸಿಕೊಂಡಿದ್ದರಿಂದ ಅವಳಿಗೆ ಮದುವೆಯಿಲ್ಲ; ಅವಳ ತಂಗಿಯದೇ ಮದುವೆ ಅಂದು ನಡೆಯುತ್ತಿತ್ತು. ಹೋರಿಸ್ವಾಮಿಗೆ ಅರ್ಪಿಸಿಕೊಂಡಮೇಲೆ ಶಿಖರನಗರಕ್ಕೆ ತನ್ನ ವಾಸ್ತವ್ಯವನ್ನು ಬದಲಾಯಿಸಿಕೊಂಡ ಪುಣ್ಯಾತಗಿತ್ತಿ ನಿರಂತರವಾಗಿ ಹೋರಿಯ ಹಾರಾಟಕ್ಕೆ ತೆರೆದುಕೊಂಡಿದ್ದಾಳೆ.

ಹೋಗಲಿ, ಹಾಳಾಗೋದನ್ನು ಯಾರೂ ತಪ್ಪಿಸೋದಕ್ಕೆ ಸಾಧ್ಯವಿಲ್ಲ. ಅದು ಪ್ರಕೃತಿ ನಿಯಮಗಳಲ್ಲಿ ಒಂದು. ನೇಪಾಳದಲ್ಲಿ ಭೂಕಂಪ ಸಂಭವಿಸಿ ಅಷ್ಟೊಂದು ಅನಾಹುತ ನಡೆದುಹೋಯ್ತಲ್ಲ? ನಡೆಯುತ್ತಿರುವಾಗ ತಪ್ಪಿಸಲಾಯಿತೇ? ಇಲ್ಲ. ಕೇದಾರನಾಥದಲ್ಲಿ ಜಲಪ್ರಳಯದಲ್ಲಿ ಹದಿನೈದು ಸಾವಿರಕ್ಕೂ ಜನ ಅಳಿದು ಅಷ್ಟೆಲ್ಲ ತೊಂದರೆಯಾಯಿತಲ್ಲ, ಯಾರಾದರೂ ನಿಲ್ಲಿಸಲಾಯಿತೇ? ಇಲ್ಲ. ಇದೂ ಒಂದರ್ಥದಲ್ಲಿ ಹಾಗೇನೆ. ಸುರಿಯುವ ಮಳೆ ನಿಲ್ಲುವಂತೆ ಅಬ್ಬರ ತಣಿದಮೇಲೆ ಎಲ್ಲವೂ ಒಂದು ಹಂತಕ್ಕೆ ಬಂದೇ ಬರುತ್ತದೆ. ಆಗ ನಾವು ಹೇಳಿದ್ದು ಹಳದೀ ತಾಲಿಬಾನಿಗಳಿಗೆ ಅರ್ಥವಾಗುತ್ತದೆ. ಅಷ್ಟರಲ್ಲಿ ನಮ್ಮ ಜನಾಂಗದಲ್ಲಿ ಎಷ್ಟೆಲ್ಲ ಎಸ್.ಟಿ.ಡಿ ಬೂತ್ ಗಳು ತಯಾರಾಗುತ್ತವೋ ಗೊತಿಲ್ಲ! ಮರುಕಪಡಬೇಕಷ್ಟೆ.

’ತುಮರಿ ರಾಮಾಯಣ’ಗಳನ್ನು ಕೇಳಿ ನಿಮಗೂ ಅದರ ಗುಂಗು ಹಿಡಿದಿರಬಹುದು. ಅಜೀರ್ಣವಾಗುವಂತಹ ಪದಗಳಿಂದ ಬಣ್ಣಿಸಿ ಮನ್ನಣೆಯ ದಾಹ ನನ್ನನ್ನೂ ತಿಂದುಹಾಕುವಂತೆ ಮಾಡುವಿರೇ?ಬೇಡ. ನಿಮ್ಮ ಅನಿಸಿಕೆಗಳಿಗೆ, ಭಾವನೆಗಳಿಗೆ, ಆಕ್ಷೇಪ, ಆರೋಪಣೆಗಳಿಗೆ, ನಿಂದಕರ ನಿಂದನೆಗಳಿಗೆ ಹೆಚ್ಚಿನ ಮಟ್ಟದಲ್ಲಿ ಸ್ಪಂದಿಸುವ ಮನೋವೃತ್ತಿ ತುಮರಿಯಲ್ಲಿಲ್ಲ. ನಿಮಗೆಲ್ಲ ವಂದನೆಗಳು. ವಿಶೇಷವಾಗಿ ನಿಂದಕರಿದ್ದಾರೆ ಎಂದಿರಲ್ಲ, ಅವರಿಗೆ ನನ್ನ ನಮನಗಳನ್ನು ತಿಳಿಸಿಬಿಡಿ.

ಇಲ್ಲಿನ ಲೇಖನಗಳ ಪ್ರಮುಖ ಅಂಹಗಳು ತುಮರಿಯ ಸಂಶೋಧನಾ ಗ್ರಂಥದ ಭಾಗಗಳಾಗಿರುವುದರಿಂದ ಅದನ್ನು ಇನ್ನೆಲ್ಲೋ ಹಂಚುವುದಾದರೆ ತುಮರಿಯ ಹೆಸರಿನಲ್ಲೇ ಹಾಕಬೇಕಾಗುತ್ತದೆ ಎಂಬುದೊಂದು ವಿನಂತಿ. ಯಾಕೆಂದರೆ ತುಮರಿ ಸದ್ಯಕ್ಕೆ ಸನ್ಯಾಸಿಯಲ್ಲ; ಸಂಸಾರಿ. ತುಮರಿಯ ಪ್ರಯತ್ನಕ್ಕೊಂದು ಬೆಲೆಯಿರಬೇಕು ಅಲ್ಲವೇ?

ಬ್ರಿಟಿಷ್ ಪ್ರೇರಿತ ಭಾರತದಲ್ಲಿ ದ್ರಾವಿಡರೆಂಬ ಗುಂಪು ಸಿದ್ಧಗೊಂಡು ಆರ್ಯರೆಂಬ ತಮ್ಮದೇ ಇನ್ನೊಂದು ಗುಂಪಿನೊಂದಿಗೆ ಹೋರಾಡುವುದಕ್ಕೆ ಮೊದಲಿಟ್ಟಂತೆ, ಕಚ್ಚೆಹರುಕನ ಶಿಷ್ಯವೃಂದದಲ್ಲಿ ಇಬ್ಭಾಗವಾದ ನಂತರ ಹಳದೀ ತಾಲಿಬಾನಿಗಳ ಗುಂಪು ತಮ್ಮ ಸಮಾಜದ ಇನ್ನೊಂದು ಗುಂಪನ್ನು ಹುರಿದು ಮುಕ್ಕಲು ಸಿದ್ಧವಾಯಿತು ಎಂಬುದು ಎಷ್ಟು ಚೆನ್ನಾಗಿ ಹೋಲುತ್ತದೆ ನೋಡಿ.

ಇನ್ನು ಇವತ್ತಿನ ಕತೆಗೆ ಬರುತ್ತೇನೆ. ಕಾಶಿಗೆ ಎಷ್ಟೊಂದು ಜನ ಯಾತ್ರೆಗೆ ಹೋಗಿ ಬಂದಿದ್ದಾರೆ ನಮ್ಮವರು. ಆದರೆ ಅಲ್ಲಿನ ’ಕರವಟ್’ ಬಗ್ಗೆ ಮಾಹಿತಿ ಇದೆಯೇ? ಇಲ್ಲ. ನಮ್ಮವರು ತೀರಾ ತುರ್ತಾಗಿ ಬುರ್ರನೆ ಹೋಗಿ ಸರ್ರನೆ ಬರುತ್ತಾರೆ. ಹೀಗಾಗಿ ಅಲ್ಲಿನ ವಿಶೇಷಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ, ಆಸಕ್ತಿಯೂ ಇಲ್ಲ. ಕಾಶಿ ಎಂದರೆ ಕೇವಲ ಗಂಗಾನದಿಯ ದಡವಲ್ಲ, ವಿಶ್ವನಾಥನ ಮಂದಿರವಲ್ಲ, ಕಾಶಿ ಎಂಬ ಪದಕ್ಕೆ ಬೆಳಕು ಎಂಬರ್ಥವಿದೆ. ಅತ್ಮವೇ ಒಂದು ಬೆಳಕು. ಆತ್ಮವೆಂಬ ಬೆಳಕು ಪರಮಾತ್ಮವೆಂಬ ಹೆಬ್ಬೆಳಕಿನಲ್ಲಿ ಸಂಕಲನಗೊಳ್ಳುವ ಕೇಂದ್ರವೆಂದು ಕಾಶಿ ಹೆಸರಾಗಿದೆ.

ಅಲ್ಲದೆ ಅಲ್ಲಿರುವುದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಲಿಂಗದಿಂದ ಹೊರಡುವ ಜ್ಯೋತಿರ್ಮಯ ಪ್ರಕಾಶವನ್ನು ನೋಡಿಯೇ ಪೂರ್ವಜರು ಆ ಪ್ರದೇಶಕ್ಕೆ “ಕಾಶಿ” ಎಂದರು. ವರುಣಾ ಮತ್ತು ಅಸಿ ನದಿಗಳ ನಡುವಿನ ಆ ಪ್ರದೇಶ ವಾರಣಾಸಿ ಅಥವಾ ವಾರಾಣಸಿ. ದೊರೆಯೋರ್ವನ ಹೆಸರಿಗೆ ತಳುಕು ಹಾಕಿಕೊಂಡು ಬನಾರಸ್ ಎಂದೂ ಕರೆಸಿಕೊಂಡಿದೆ.

ವಿಶ್ವನಾಥ ಮಂದಿರದ ಪಕ್ಕದ ಗಲ್ಲಿಯಲ್ಲೇ ‘ಕಾಶಿ ಕರವಟ್ ಮಂದಿರ’ವಿದೆ. ಹಿಂದಕ್ಕೆ ಮೋಕ್ಷಾರ್ಥಿಗಳು ಆತ್ಮಾಹುತಿ ನಡೆಸುತ್ತಿದ್ದ ಜಾಗ ಇದಾಗಿದೆ. ಇದನ್ನು ನೋಡಿಕೊಳ್ಳಲು ಒಬ್ಬ ವ್ಯಕ್ತಿಯನ್ನು ನೇಮಿಸಿದ್ದಾರೆ. ಇಲ್ಲಿ ‘ಕರವಟ್’[ಕರವಟ್ ಎಂದರೆ ಗರಗಸ] ಎಂಬ ಶಸ್ತ್ರವಿತ್ತು. ಈ ಮಂದಿರಲ್ಲಿ ಕಾಣುವ ಶಿವಲಿಂಗದ ಹತ್ತಿರದಲ್ಲೇ ನೆಲಕ್ಕೆ ಅದನ್ನು ಜೋಡಿಸಿದ್ದರು.

ಮೋಕ್ಷ ಬಯಸಿ ಬರುವ ಭಕ್ತರು ನೆಲಕ್ಕೆ ಜೋಡಿಸಿದ ಹರಿತವಾದ ಆ ಗರಗಸದ ಮೇಲೆ ಹಾರಿ ಪ್ರಾಣಾರ್ಪಣೆ ಮಾಡಿಕೊಳ್ಳುತ್ತಿದ್ದರು. ಬೀಳುವ ರಭಸಕ್ಕೆ ಕತ್ತರಿಸಿಹೋಗುತ್ತಿದ್ದ ಅವರ ದೇಹ ನಂತರ ಸುರಂಗದ ಮೂಲಕ ಸಾಗಿ ಗಂಗಾನದಿಯನ್ನು ಸೇರುತ್ತಿತ್ತು. ಆದಿಶಂಕರರು ತಮ್ಮ ಕಾಲಘಟ್ಟದಲ್ಲಿ ಇಂತಹ ಕ್ರಮಗಳನ್ನೆಲ್ಲ ನಿಷೇಧಿಸಿದ್ದರೂ, ಅವರ ಕಾಲಾನಂತರದಲ್ಲಿ ಮತ್ತೆ ಈ ಕ್ರಮ ರೂಢಿಗತವಾಗಿತ್ತು.

ಬ್ರಿಟಿಷ್ ಆಡಳಿತ ಬಂದ ಮೇಲೆ, ಸತಿ ಪದ್ಧತಿಯಂತಹ ಅನಿಷ್ಟ ಪದ್ಧತಿಗಳು ಕಡ್ಡಾಯವಾಗಿ ನಿಷೇಧಿಸಲ್ಪಟ್ಟಂತೆ, ಈ ನರಬಲಿ ಕೂಡ ನಿಷೇಧಿಸಲ್ಪಟ್ಟಿತು. ಇಲ್ಲಿದ್ದ ಗರಗಸವನ್ನು ಬ್ರಿಟಿಷರು ಇಂಗ್ಲೆಂಡಿಗೆ ಒಯ್ದು ತಮ್ಮ ಸಂಗ್ರಹಾಲಯದಲ್ಲಿ ಇಟ್ಟಿದ್ದಾರೆ ಎಂದು ತಿಳಿದುಬರುತ್ತದೆ. ಕೆಲಕಾಲ ಈ ಮಂದಿರವನ್ನು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡದಂತೆ ಮುಚ್ಚಿದ್ದರು. ಆದರೆ, ಈಗ ನಿತ್ಯ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ.

ಕಾಶಿಯಲ್ಲಿ ಇಂಥಾದ್ದೊಂದು ಸ್ಥಳವಿರುವುದು ಬಹುತೇಕರಿಗೆ ಗೊತ್ತಿಲ್ಲ. ವಿಷಯ ತಿಳಿದವರು ಈಗಲೂ ಈ ಮಹತ್ವದ ಸ್ಥಳ ನೋಡಲು ಬರುತ್ತಾರೆ. ಮೇಲಿನಿಂದ ಬಗ್ಗಿ ನೋಡಿದರೆ ಕೆಳಗೆ ಸುರಂಗ ಹಾಗೂ ಶಿವಲಿಂಗ ಕಾಣಿಸುತ್ತದೆ. ಅಲ್ಲಿಂದ ಗಂಗಾನದಿಗೆ ಸುರಂಗವಿದೆ. ಆದರೆ ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ.

ದೇಶದುದ್ದಗಲ ಹಿಂಸಾತ್ಮಕ ಪೂಜಾವಿಧಾನಗಳೆ ಹೆಚ್ಚಿದ್ದಾಗ ಅವತರಿಸಿದ್ದ ಶಂಕರರು ಅಹಿಂಸೆಯನ್ನು ಪ್ರತಿಪಾದಿಸಿದರು. ಅವರ ಅನುಯಾಯಿಗಳು ಹಿಂಸೆಯನ್ನು ನಡೆಸಿದ್ದಾರೆ, ಪ್ರಾಣಿಬಲಿಗಳನ್ನು ನೀಡಿದ್ದಾರೆ ಎಂದು ಯಾರೋ ಬರೆದರೆ ಅದನ್ನು ಒಪ್ಪಬೇಕಾಗಿಲ್ಲ.

ಇತ್ತೀಚೆಗೆ ವಿಜಯನಗರದ ಅರಸರ ಬಗ್ಗೆ ಬರೆದ ಲೇಖಕನೊಬ್ಬ ಮಹಾನಮಮಿ ದಿಬ್ಬದ ಎದುರು ಒಂಬತ್ತು ಕೋಣಗಳನ್ನೂ ಜೊತೆಗೆ ಕುರಿ-ಮೇಕೆಗಳನ್ನೂ ಬಲಿಕೊಡಲಾಗುತ್ತಿತ್ತು ಎಂದು ಬರೆದು, ವಿದ್ಯಾರಣ್ಯರ ಕಾಲದಲ್ಲೇ ಹಾಗಿತ್ತು ಎಂದು ಹೇಳಿದ್ದಾನೆ. ಮಹರ್ಷಿಗಳೆನಿಸಿದ ವಿದ್ಯಾರಣ್ಯರು ಶೃಂಗೇರಿ ಆಮ್ನಾಯ ಪೀಠದವರು. ಶಂಕರರ ನಂತರ ಶಂಕರರಷ್ಟೇ ಖ್ಯಾತರಾದವರು. ಆಧ್ಯಾತ್ಮ ಮಾರ್ಗದಲ್ಲಿ ಮುನ್ನಡೆಯುತ್ತಲೇ ಧರ್ಮಗ್ಲಾನಿಯನ್ನು ತಪ್ಪಿಸಲು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಶಂಕರರ ಶಿಷ್ಯರಾದ ಅವರು ಹಿಂಸೆಯನ್ನು ಅನುಮೋದಿಸಲು ಸಾಧ್ಯವಿಲ್ಲ. ಅವರ ನಂತರ ಅಲ್ಲಿ ಹಾಗೆ ನಡೆದಿರಬಹುದಷ್ಟೆ.

ಶಂಕರರ ಕಾಲದಲ್ಲಿ ಕಾಪಾಲಿಕರಂತವರು ಬೌದ್ಧರ ಹೀನಾಯಾನ ಪಂಥ ಇವೆಲ್ಲ ಹಿಂಸಾತ್ಮಕ ಪೂಜೆಗಳಲ್ಲಿ ನಿರತರಾಗಿದ್ದವರು. ನೋಡಿ, ಬುದ್ಧ ಅಹಿಂಸೆಯನ್ನೇ ಎತ್ತಿ ಹಿಡಿದರೂ, ಅವನ ನಂತರ ಬೌದ್ಧರಲ್ಲಿ ಹೀನಾಯಾನ ಮತ್ತು ಮಹಾಯಾನ ಎಂಬ ಎರಡು ಪಂಥಗಳು ಹುಟ್ಟಿಕೊಂಡಿವೆ. ಮಹಾಯಾನ ಪಂಥದವರು ಇಂದಿಗೂ ಅಹಿಂಸಾ ತತ್ಪರರು. ಹೀನಾಯಾನ ಪಂಥದವರನ್ನು ಚೀನಾ, ತೈವಾನ್ ಮೊದಲಾದ ಕಡೆಗಳಲ್ಲಿ ಕಾಣಬಹುದು.

ಎಲ್ಲೆಲ್ಲಿ ಹಿಂಸೆಗಳು ನಡೆಯುತ್ತವೋ ಅದನ್ನೆಲ್ಲ ನಿಲ್ಲಿಸಲು ಹೇಳಿದವರು ಶಂಕರರು. “ಶಂಕರರಿಗೂ ಹೇಂಗಸರ ಸಂಪರ್ಕದಿಂದ ಬರುವ ಕಾಯಿಲೆ ಇತ್ತು” ಎಂದ ಹಾವಾಡಿಗ ಸ್ವಾಮಿಗಳು ಪೀಠ ಏರಿದ ಆರಂಭದಲ್ಲೇ ಪ್ರಾಣಿಬಲಿಯ ಹೋಮವನ್ನು ನಡೆಸುವುದನ್ನು ಅನುಮೋದಿಸಿ ’ಹೆಸರುವಾಸಿ’ಯಾಗಿದ್ದರು. ಆಗಲೇ ನಾವು “ಇದ್ಯಾಕೋ ಡೌಟು” ಎಂದುಕೊಳ್ಳಬೇಕಿತ್ತು; ವಿನಾಯತಿ ನೀಡಿದೆವು. ತನ್ನ ಗುರು ಪರಂಪರೆಯ ಮಹಾತ್ಮರೇ ತನ್ನಂತೆ ಕಚ್ಚೆಹರುಕರಾಗಿದ್ದರು, ಹೀಗಾಗಿ ತನ್ನದು ಭೋಗವರ್ಧನವಾಳ ಪರಂಪರೆ ಎಂದು ಭೋಂಗು ಬಿಟ್ಟ ಹೋರಿಸ್ವಾಮಿ ಗುರಿನಿಂದನೆ ಮಾಡಿದ ಪಾಪವನ್ನು ಅನುಭವಿಸಬೇಕಾಗಿದೆ. ಅಲ್ರೀ, ಹಾಗೆಲ್ಲ ಹೇಳುವುದಕ್ಕೆ ಅವನಿಗೆಷ್ಟು ಭಂಡ ಧೈರ್ಯ ಇರಬೇಡ?

ಶಂಕರರ ಕಾಲದಲ್ಲೇ ಅವರಿಗೆ ವಿರೋಧಿಗಳಿದ್ದರು. ಯಾಕೆಂದರೆ ಶಂಕರರು ಏರಿದ ಆಧ್ಯಾತ್ಮಿಕ ಶಿಖರ ಎಲ್ಲರಿಗೂ ಕಾಣಿಸುತ್ತಿರಲಿಲ್ಲ. ಹಾಗಾಗಿಯೇ ಅವರ ನಂತರ ಅಭಿಪ್ರಾಯ ಭೇದಗಳಿಂದ ಹಲವು ಪಂಥಗಳು ಹುಟ್ಟಿಕೊಂಡಿದ್ದು ಕಂಡುಬರುತ್ತದೆ. ಕಚ್ಚೆಹರುಕನಂತ ವ್ಯಕ್ತಿಗೆ ಶಂಕರರಲ್ಲೂ ಅವನ ರೂಪವೇ ಕಾಣುತ್ತದೆಯೇ ಹೊರತು ಶಂಕರರ ಆಧ್ಯಾತ್ಮಿಕ ಸಾಮರ್ಥ್ಯವನ್ನು ಅರಿಯುವ ಅರ್ಹತೆ ಹೋರಿಸ್ವಾಮಿಗೆಲ್ಲಿದೆ?

ಮೇಲಾಗಿ ಹಾವಾಡಿಗ ಮಠದವ ವಿರೋಧಿಗಳನ್ನು ಹಣಿಯಲು ಮಾಟ-ಮಂತ್ರಗಳ ಮಾಂತ್ರಿಕರನ್ನು ಆಶ್ರಯಿಸಿದ್ದಾನೆ. ಹಿಂದೆ ಆಪ್ತರಾಗಿದ್ದವರೆಲ್ಲ ಇಂದು ಇರೋಧಿಗಳಾಗಿದ್ದಾರಲ್ಲ, ಅವರ ಹೆಸರುಗಳನ್ನು ಸಂಕಲ್ಪಕ್ಕೆ ತೆಗೆದುಕೊಂಡು ಮಾರಣಹೋಮ ನಡೆಸಿದ್ದಾನೆ. ಅದರಲ್ಲಿ ತುಮರಿಯ ಹೆಸರೂ ಇರುತ್ತದೆ ಬಿಡಿ. ಆದರೆ ತುಮರಿಗೆ ಅವನ ಬಾಣ ನಾಟುವುದಿಲ್ಲ. ಅಂದಹಾಗೆ ರಕ್ತಾಕ್ಷಿ, ಬಗಳಾಮುಖಿ, ಪ್ರತ್ಯಂಗಿರಾ ತಂತ್ರಗಳ ನಂತರ ತನ್ನ ಸಲುವಾಗಿ ಸೌಂದರ್ಯಲಹರಿಯ ಎಂಟನೇ ಶ್ಲೋಕ, ಶ್ರೀಧರ ಪಾದುಕೆ ಪೂಜೆ, ಲಲಿತಾಸಹಸ್ರನಾಮ, ಹನುಮಾನ್ ಚಾಳೀಸು, ಅಧರ್ವಶೀರ್ಷ ಹೋಮ ಇತ್ಯಾದಿ ಹಲವಾರು ಕೃತುಗಳನ್ನು ನಡೆಸಿದ್ದಾನೆ. ಅತ್ತ ಅಪ್ಪ ಅಡವಿಯಲ್ಲಿ ಮಾಂತ್ರಿಕರ ಜೊತೆ ಇನ್ನೆಷ್ಟೋ ಹೋಮಗಳನ್ನು ಸುಟ್ಟಿದ್ದಾನೆ.

ಸುಂದರಾಂಗನಿಗೆ ಹೆಂಗಳೆಯರ ದೃಷ್ಟಿ ತಾಗಿಬಿಟ್ಟಿತ್ತಂತೆ ಗೊತ್ತೇ? ದೃಷ್ಟಿ ಅವನಿಗೇ ತಾಗಿತೋ ಅವನ ಸಾಮಾನಿನ ಮೇಲಿನ ಮಚ್ಚೆಗೆ ತಾಗಿತೋ ಗೊತ್ತಾಗಲಿಲ್ಲ! ಅಂತೂ ಮಠಕ್ಕೆ ಆಗಾಗ ಸಾಗರದ ಹಳ್ಳಿಯಿಂದ ದೃಷ್ಟಿ ತೆಗೆಯಲು ಭಕ್ತನೊಬ್ಬ ಬರುತ್ತಿದ್ದ. ಮಚ್ಚೆಯಿದ್ದರಲ್ಲವೆ ತೊಂದರೆ ಎಂದುಕೊಂಡು ಈಗ ಮಚ್ಚೆಗಳನ್ನೆ ತೆಗೆಸಲಾಗಿದೆ ಬಿಡಿ. ಅಂತೂ ಈ ಪರಮ ನೈಷ್ಠಿಕನ ಸಾಮಾನು ಹಲವು ಕಡೆ ಆಡಿದೆ ಎಂಬುದು ಗೊತ್ತಾಗುತ್ತದೆ. ಅದ್ದ್ರೂ ಅದು ಪರೀಕ್ಷೆ ಬೇಡ ಎನ್ನುತ್ತದಂತೆ. ಮಾಂತ್ರಿಕರ ಸಹವಾಸ, ದೃಷ್ಟಿತೆಗೆಸಿಕೊಳ್ಳುವಿಕೆ, ಮಠಗಳಲ್ಲಿ ಅಷ್ಟಮಂಗಲ ಪ್ರಶ್ನೆ ಇದೆಲ್ಲವೂ ಶಂಕರ ಪರಂಪರೆಗೆ ವಿರೋಧವೇ ಎನ್ನುವುದನ್ನು ಜನ ಮನಗಾಣಬೇಕು.

ತನ್ನ ಫೋಟೋಗಳನ್ನು ಅಚ್ಚುಹಾಕಿಸಿದಷ್ಟು ಶಂಕರರ ಕಲಾಚಿತ್ರಗಳನ್ನು ಅಚ್ಚು ಹಾಕಿಸಲಿಲ್ಲ. ಪುಣ್ಯಾತ್ಮ ಭಕ್ತನೊಬ್ಬ ಅದಕ್ಕೆ ಹಕ್ಕೊತ್ತಾಯ ಮಾಡಿದ ಮೇಲೆ ಶಂಕರರ ಕಲಾಚಿತ್ರವನ್ನು ಅಚ್ಚುಹಾಕಿಸುವ ಕೆಲಸ ನಡೆಯಿತು. ಶಂಕರರ ಬಗೆಗೆ ಸರಿಯಾಗಿ ಅರಿಯದ ಹಾವಾಡಿಗನನ್ನು ಇನ್ನೂ ಶೀಗಳು ಎನ್ನುವುದು ಎಷ್ಟರಮಟ್ಟಿಗೆ ಸರಿ? ಹೋರಿಯನ್ನು ಗುರುವೆಂದು ಆರಾಧಿಸುವ, ಕಣ್ಮುಚ್ಚಿ ಅನುಸರಿಸುವ ಮಂದಿಗೆ ಕಿಂಚಿತ್ತಾದರೂ ಪ್ರಜ್ಞೆ ಎಂಬುದು ಇರಬೇಕಿತ್ತಲ್ಲವೇ?

Thumari Ramachandra

source: https://www.facebook.com/groups/1499395003680065/permalink/1681023468850550/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s