“ರಾಮನಿಚ್ಛೆ” ಎನ್ನುತ್ತ ಮಠದಲ್ಲಿ ಬೌ ಬೌ ಬಿರ್ಯಾನಿ ತಯಾರಿಸಿದರೂ ಕೇಳುವವರಿಲ್ಲ!

“ರಾಮನಿಚ್ಛೆ” ಎನ್ನುತ್ತ ಮಠದಲ್ಲಿ ಬೌ ಬೌ ಬಿರ್ಯಾನಿ ತಯಾರಿಸಿದರೂ ಕೇಳುವವರಿಲ್ಲ!

ಮಠದ ಭಕ್ತ ಸಮೂಹದಲ್ಲಿರುವ ಕೆಲವೇ ಹಿರಿತಲೆಗಳ ಬಗ್ಗೆ ಹೇಳುತ್ತಿದ್ದೆ. ಹಿರಿತಲೆಗಳನ್ನು ಮನೆಗೆ ಕಳಿಸಿ ಯುವಕರಿಗೆ ಆದ್ಯತೆ ನೀಡಲಾಯಿತು ಎಂದು ಅವರೇ ಹೇಳಿಕೊಂಡಿದ್ದಾರೆ. ಬಂದ ಯುವಕ ಯುವತಿಯರಿಗೆ ಪಾಪ ಮಠಕ್ಕೆ ಯಾವ ಉಡುಗೆ ತೊಟ್ಟು ಬರಬೇಕೆಂದೂ ಸಹ ತಿಳಿದಿಲ್ಲ. ಯುವತಿಯರು ಜೀನ್ಸ್ ತೊಟ್ಟು ಬಂದರೆ ಆಸ್ಚರ್ಯವಿಲ್ಲ; ಕಡ್ಡಾಯವಾಗಿ ಜೀನ್ಸ್ ತೊಟ್ಟು ಬರುವಂತೆ ’ಮಹಿಳಾ ಸಬಲೀಕರಣ’ದ ಹೋರಿಸ್ವಾಮಿಯ ಅಪ್ಪಣೆಯಾದರೂ ವಿಶೇಷವಲ್ಲ!

ವೇದ ಏನು ಹೇಳುತ್ತದೆ ಎಂದು ಕೇಳಿದರೆ ಯಾರಿಗೂ ಗೊತ್ತಿಲ್ಲ. ಉರುಹೊಡೆದ ಕೆಲವು ಶ್ಲೋಕಗಳನ್ನು ಬಿಟ್ಟರೆ ಇನ್ನಾವುದೂ ಅಲ್ಲಿಲ್ಲ. ಹೋಮ-ಹವನವಿದ್ದಾಗ ಯಾರೋ ಕೆಲವು ಪುರೋಹಿತ ವೃತ್ತಿಗಳವರು ಅದನ್ನು ನಡೆಸಬಹುದಷ್ಟೆ. ಒಂದಷ್ಟು ವಿಧದ ಹೂವು ಹಾಕುವುದು, ಗಂಟೆ ತೂಗುತ್ತ ಆರತಿ ಎತ್ತುವುದಷ್ಟೆ ಗಿಂಡಿಗಳ ಕೆಲಸ. ಅಲ್ಲಿಗೆ ಬರುವ ಬಕರಾಗಳಿಗೂ ಅದೇ ಅಭ್ಯಾಸವಾಗಿಬಿಟ್ಟಿದೆ. ಮಠದ ಮೂಲ ರಿವಾಜುಗಳನ್ನು ಅವರೂ ಮರೆತು ಹೋಗಿದ್ದಾರೆ ಎನ್ನಬಹುದು.

ಸಂಗೀತ, ಸಾಹಿತ್ಯ, ಕಲೆಗಳಂತೆ ವೇದಾಚರಣೆ ಕೂಡ ಒಂದು ಕಲೆ. ವೇದಮಂತ್ರಗಳು ಸ್ವರ ಸಂತುಲಿತವಾಗಿರುವುದರಿಂದ ಅವುಗಳನ್ನು ಮೂಲಸ್ವರೂದಲ್ಲಿ ಉಚ್ಚರಿಸಿದಾಗ ವಾತಾವರಣದಲ್ಲಿ ಒಂದು ರೀತಿಯ ಪಾಸಿಟಿವ್ ಎನರ್ಜಿ ತುಂಬಿಕೊಳ್ಳುತ್ತದೆ. ಅದನ್ನು ಕೇಳುವವರ ಮನೋಕ್ಲೇಷಗಳು ಮತ್ತು ಕ್ಲೀಷೆಗಳು ಇನ್ನಿಲ್ಲವಾಗುತ್ತವೆ. ಮಂತ್ರಗಳನ್ನು ಕೇಳುವುದರಿಂದ ಸಿಗುವ ಮಾನಸಿಕ ನೆಮ್ಮದಿ ಈ ಪ್ರಪಂಚದ ಇನ್ನಾವುದರಿಂದಲೂ ಸಿಗುವುದಿಲ್ಲ ಎಂಬುದು ವೈಜ್ಞಾನಿಕ ವಿಷಯ. ಇಂದು ಎಷ್ಟು ಜನರಲ್ಲಿ ಈ ತಾಕತ್ತಿದೆ? ನೆನಪಿನ ಶಕ್ತಿ ಇದೆ? ಯಾಕೆ ಸಾಧ್ಯವಾಗುತ್ತಿಲ್ಲ?

ರಾಜಪ್ರಭುತ್ವದಲ್ಲಿ ಬ್ರಾಹ್ಮಣರನ್ನು ಪ್ರತ್ಯೇಕ ವ್ಯವಸ್ಥೆಯಲ್ಲಿ ಇಟ್ಟಿದ್ದು ದೊಡ್ಡ ಸವಲತ್ತು ನೀಡಿದ್ದಲ್ಲ. ಸಮಷ್ಟಿ ಸಮಾಜದ ಸಕಲರ ಕ್ಷೇಮಾಭ್ಯುದಯಗಳಿಗಾಗಿ ಬ್ರಾಹ್ಮಣರು ಸತತವಾಗಿ ವ್ರತ-ನೇಮ-ಉಪವಾಸಗಳನ್ನು ನಡೆಸುತ್ತಿದ್ದರು, ಸದಾ ಅಗ್ನಿಹೋತ್ರ ನಿರತರಾಗಿರುತ್ತಿದ್ದರು, ಅವರ ವಾಸವಿರುವ ಪ್ರದೇಶಗಳಲ್ಲಿ ವೇದಾಚರಣೆಗಳು ಸದಾ ನಡೆಯುವ ಪ್ರಕ್ರಿಯೆಗಳಾಗಿದ್ದವು. ನಿತ್ಯವೂ ಹೊಸದನ್ನು ಅಧ್ಯಯನ ಮಾಡುವುದು, ಅದು ಸ್ವಾಧ್ಯಾಯದಿಂದಲಾದರೂ ಆಗಬಹುದು ಅಥವಾ ಹಲವು ಗುರುಮುಖಗಳಿಂದಲೂ ಆಗಬಹುದು. ಅಧ್ಯಾಪನ ಮಾಡುವುದು. ಕಾಲಗಣನೆ ಮಾಡುವುದು, ಭೂತ-ಭವಿಷ್ಯತ್ ಮತ್ತು ವರ್ತಮಾನಗಳನ್ನು ಅಳೆದು ನಿಖರವಾಗಿ ಹೇಳಬಲ್ಲ ವೇದಾಂಗ ಜ್ಯೋತಿರ್ವಿಜ್ಞಾನವನ್ನು ಕರಗತಗೊಳಿಸಿಕೊಳ್ಳುವುದು, ವೈದ್ಯವಿದ್ಯೆಯನ್ನು ಕಲಿತು ನಡೆಸುವುದು ಇವೆಲ್ಲ ಅವರಲ್ಲಿದ್ದವು.

ಜಪವನ್ನು ಮಾಡುವುದರಿಂದ ನಮ್ಮಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ, ಮಾನಸಿಕ ದೌರ್ಬಲ್ಯ ಕಡಿಮೆಯಾಗುತ್ತದೆ, ನಮ್ಮಲ್ಲಿನ್ನ ಚೈತನ್ಯ ಪುನಶ್ಚೇತನಗೊಳ್ಳುತ್ತದೆ. ಬೇಡದ ವಿಷಯಗಳು ಮನಸ್ಸಿನಿಂದ ದೂರವಾಗಿ ಸಾತ್ವಿಕ ಭಾವ ನೆಲೆಸುತ್ತದೆ. ಬ್ರಹ್ಮತೇಜ[ಔರಾ]ಪ್ರಾಪ್ತವಾಗುತ್ತದೆ. ಕೆಟ್ಟಚಾಳಿಗಳು ಅಳಿಯುತ್ತವೆ. ದುಷ್ಟರು ನಮ್ಮಿಂದ ದೂರ ಹೋಗುತ್ತಾರೆ. ಜಪವನ್ನೇಕೆ ಮಾಡಬೇಕು ಎಂಬುದು ಹಲವರಿಗೆ ಗೊತ್ತಿಲ್ಲ; ಟಿವಿ ಧಾರಾವಾಹಿಗಳಿಗೆ ವ್ಯಯಿಸಲು ಸಮಯವಿದೆ, ಸಂಧ್ಯಾವಂದನೆಗೆ ಸಮಯವಿಲ್ಲ! ಆದರೆ ಇಂದು ವಿದೇಶೀಯರು ತಲೆ ಗುಂಡುಹೊಡೆಸಿಕೊಂಡು, ಸ್ನಾನ ಪವನಾದಿಗಳನ್ನು ಪೂರೈಸಿ ಜಪ ಮಾಡ್ತಾರೆ! ಜಪಗಳ ಪ್ರಭೇದಗಳನ್ನು ನೋಡಿ-

ಪ್ರಮುಖವಾಗಿ ಜಪದಲ್ಲಿ ಮೂರು ವಿಧ: ವಾಚಿಕ, ಉಪಾಂಶು ಮತ್ತು ಮಾನಸಿಕ ಜಪ. ಆಮೇಲೆ ಇವುಗಳಲ್ಲೇ ಕೆಲವು ಪ್ರಭೇದಗಳನ್ನು ಕಾಣಬಹುದಾಗಿದೆ.

ವಾಚಿಕ ಜಪ: ನಾಲಿಗೆ-ಗಂಟಲು-ಹಲ್ಲು-ತುಟಿ ಇವುಗಳನ್ನು ಬಳಸಿ, ಸುತ್ತ ಇರುವವರಿಗೆ ಸರಿಯಾಗಿ ಕೇಳಿಸುವಂತೇ ಉಚ್ಚರಿಸುವುದು. –ಇದು ಆರಂಭಿಕ ಹಂತದವರಿಗೆ ಮಾತ್ರ ಹೇಳಿದ ಕ್ರಮ.

ಉಪಾಂಶು ಜಪ: ತುಟಿಗಳನ್ನು ತುಸುವೇ ತೆರೆದು ಮುಚ್ಚುತ್ತ, ತಾನು ಹೇಳಿದ್ದು ತನಗೆ ಮಾತ್ರ ಕೇಳಿಸುವಂತೆ ಮತ್ತು ಸುತ್ತಲಿನ ಜನರಿಗೆ ಕೇಳಿಸದಂತೆ ಅತಿ ಮೆಲುದನಿಯಲ್ಲಿ ಮಂತ್ರವನ್ನು ಪುನರುಚ್ಚರಿಸುವುದು. –ಇದು ಜಪದಲ್ಲಿ ಪಳಗುವವರ ಎರಡನೇ ಹಂತ.

ಮಾನಸಿಕ ಜಪ: ಸುತ್ತಲಿರುವ ಜನರಿಗಾಗಲೀ ಸ್ವಯಂ ತನ್ನ ಕಿವಿಗಾಗಲೀ ಕೇಳಿಸದತೇ ಆದರೆ ಮನಸ್ಸಿನ ಬಾಯಿಂದ ಮನಸ್ಸಿನ ಕಿವಿಗೆ ಕೇಳುವಂತೇ ಮನದೊಳಗೇ ಮಂತ್ರವನ್ನು ಸ್ಪಷ್ಟವಾಗಿ ಪುನರುಚ್ಚರಿಸುವ ಪ್ರಕ್ರಿಯೆ. [ವಾಣಿಯ ಪಶ್ಯಂತೀ ಬಗೆಯೆಂದು ಕರೆಯಲ್ಪಟ್ಟಿದೆ] ಮೊದಲ ಎರಡು ಹಂತಗಳಲ್ಲಿ ಪಳಗಿದ ವ್ಯಕ್ತಿಗಳು ಈ ಹಂತವನ್ನು ಅನುಸರಿಸಬಹುದು.

ಕೆಲವರಿಗೆ ಜಪವನ್ನು ಬಹುಕಾಲ ಮಾಡಿ ಅಭ್ಯಾಸವಾಗಿರುತ್ತದೆ. ಅವರಿಗೆ ಜಪಮಾಡುವುದು ಬಹಳ ಸುಲಭದ ಕಾರ್ಯವೆನಿಸುತ್ತದೆ ಮತ್ತು ಬಹಳ ಶ್ರದ್ಧೆ, ಆಸ್ಥೆ ಮತ್ತು ಆಸಕ್ತಿಯಿಂದ ಅವರದನ್ನು ನಡೆಸುತ್ತಾರೆ. ಹೇಗಪ್ಪಾ ಎಂದರೆ ನಾವು ಪ್ರತೀಕ್ಷಣವೂ ನಿತ್ಯ ನಿರಂತರವಾಗಿ ಉಸಿರಾಡುತ್ತಲೇ ಇರುತ್ತೇವೆ-ಉಸಿರಾಡುತ್ತಿದ್ದೇವೆ ಎಂಬ ಬಗ್ಗೆ ನಮಗೆ ಗೊತ್ತಾಗುವುದೇ ಇಲ್ಲ-ಅದು ಅಷ್ಟು ಸಹಜವಾಗಿಬಿಟ್ಟಿರುತ್ತದೆ. ಯಾರೋ ಒಬ್ಬರು ಕನಸುಕಂಡರಂತೆ. ಕನಸಿನಲ್ಲಿ ಬೆಳಗಿನಜಾವದಲ್ಲಿ ಅವರು ಗಣಪತಿ ಉಪನಿಷತ್ತು, ವಿಷ್ಣು ಸಹಸ್ರನಾಮ ಇವುಗಳನ್ನೆಲ್ಲಾ ಪಠಿಸಿಕೊಳ್ಳುತ್ತಾ ಸ್ನಾನಮಾಡಿದ್ದಾರೆ, ಸ್ನಾನ ಮುಗಿಸಿ ಆಚೆ ಬರುವಷ್ಟರಲ್ಲಿ ಸಹಸ್ರನಾಮ ಅರ್ಧ ಮುಗಿದಿದ್ದು ಗೊತ್ತಾಗಿದೆ;ಆಮೇಲೆ ಅವರು ಸ್ವಪ್ನಾವಸ್ಥೆಯಿಂದ ಜಾಗೃತಾವಸ್ಥೆಗೆ ಬಂದುಬಿಟ್ಟಿದ್ದಾರೆ. ನೋಡುತ್ತಾರೆ-ಇನ್ನೂ ಹಾಸಿಗೆಯಲ್ಲೇ ಮಲಗಿದ್ದಾರೆ. ಆಗ ಬೆಳಗಿನ ಐದು ಗಂಟೆಯಾಗಿದ್ದರಿಂದ ಎದ್ದು ನಿಜವಾಗಿಯೂ ಆ ಕಾರ್ಯವನ್ನು ನಡೆಸಲು ತೆರಳಿದರಂತೆ. ಅವರ ಮನಸ್ಸಿನಲ್ಲಿ ಆ ಕಾರ್ಯ ಅತಿ ಸಹಜವಾಗಿಬಿಟ್ಟಿದೆ ಎಂಬುದಕ್ಕೆ ಅದೇ ಉದಾಹರಣೆ. ಜಪವನ್ನು ಸದಾ ಮಾಡುವವರಿಗೆ ಈ ಅಪ್ರಯತ್ನ ಪೂರ್ವಕ ಜಪಿಸುವ ಸ್ಥಿತಿ ಪ್ರಾಪ್ತವಾಗುತ್ತದೆ. ಇದನ್ನೇ ’ಆಜಪಾ ಜಪ’ ಎನ್ನಲಾಗುತ್ತದೆ.

ಗ್ರಹಣಕಾಲಗಳಲ್ಲಿ, ಹಬ್ಬಹರಿದಿನಗಳಲ್ಲಿ, ಹಿರಿಯರ ಪುಣ್ಯದಿನಗಳಲ್ಲಿ ಶೌಚ-ಸ್ನಾನಾದಿಗಳನ್ನು ಮುಗಿಸಿ ಮಾಡುವ ಜಪ ’ನೈಮಿತ್ತಿಕ ಜಪ’ವೆನಿಸುತ್ತದೆ. ಯಾವುದೋ ಒಂದು ವಿಶಿಷ್ಟವಾದ ಬಯಕೆಯ ಈಡೇರುವಿಕೆಗಾಗಿ ಮಾಡುವ ಜಪ ’ಕಾಮ್ಯ ಜಪ’ವೆನಿಸುತ್ತದೆ.ಸಂತಾನಪ್ರಾಪ್ತಿಗಾಗಿ ಮಾಡುವ ಸಂತಾನಗೋಪಾಲಕೃಷ್ಣ ಜಪ, ರೋಗ ನಿವಾರಣೆಗಾಗಿ ಮಾಡುವ ಮೃತ್ಯುಂಜಯ ಜಪ, ಪ್ರೇತಬಾಧೆಯ ನಿವಾರಣೆಗಾಗಿ ಮಾಡುವ ಅಘೋರಾಸ್ತ್ರ ಜಪ, ವಿವಾಹದ ಸಲುವಾಗಿ ಮಾಡುವ ಸ್ವಯಂವರ ಪಾರ್ವತೀ ಜಪ -ಇವುಗಳೆಲ್ಲಾ ’ಕಾಮ್ಯಜಪ’ಗಳಾಗಿವೆ. ಇವುಗಳನ್ನು ಇಂತಿಷ್ಟೇ ಸಂಖ್ಯೆಯಲ್ಲಿ ನಡೆಸಬೇಕು ಮತ್ತು ಇಂಥಾ ಕಾಲದಲ್ಲಿ ಇಂಥಾ ಪ್ರದೇಶಗಳಲ್ಲಿ ನಡೆಸಬೇಕೆಂಬ ನಿಯಮವಿರುತ್ತದೆ. ಜಪ ಪೂರ್ತಿಯಾದಮೇಲೆ ಕೆಲವು ಜಪಗಳ ಅಂತ್ಯದಲ್ಲಿ ಹೋಮಗಳಿರುತ್ತವೆ, ತರ್ಪಣಗಳಿರುತ್ತವೆ ಮತ್ತು ಅನ್ನದಾನ ನಡೆಸಲ್ಪಡುತ್ತದೆ. ಬಯಕೆಯೇ ಇಲ್ಲದೇ ಲೋಕಹಿತಾರ್ಥವಾಗಿ ಕೈಗೊಳ್ಳಬಹುದಾದ ಜಪವು ’ನಿಷ್ಕಾಮ್ಯ ಜಪ’ವಾಗುತ್ತದೆ.

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನ/ಸದಾಶಿವ|
ಯತ್ಪೂಜಿತಂ ಮಯಾ ದೇವ ಪರಿಪೂರ್ಣ ತದತ್ಸುಮೇ||

’ಪ್ರಾಯಶ್ಚಿತ್ತ ಜಪ’ವೆಂಬುದು ನಾವು ಪ್ರತೀ ಧಾರ್ಮಿಕ ಕೆಲಸಗಳಲ್ಲಿ ನಡೆಸಬೇಕಾದ ಜಪ.ತಪ್ಪುಮಾಡದ ಜನ ಇಲ್ಲವೇ ಇಲ್ಲ. ಅರಿತೋ ಅರಿಯದೆಯೋ ತಪ್ಪುಗಳು ಘಟಿಸುತ್ತಲೇ ಇರುತ್ತವೆ. ನಮ್ಮ ನೇರದಲ್ಲಿ ಅವು ತಪ್ಪಾಗಿ ಕಾಣದಿದ್ದರೂ ಸೃಷ್ಟಿಕರ್ತನಿಗೆ ನಾವು ನಡೆಸಿದ ಕಾರ್ಯಗಳಲ್ಲಿ ದೋಷಗಳು ಕಾಣಬಹುದು. ಅಂತಹ ದೋಷಗಳಪರಿಹಾರಾರ್ಥವಾಗಿ ಕಾರ್ಯಾಂತ್ಯದಲ್ಲಿ ಅಚ್ಯುತಾಯನಮಃ, ಅನಂತಾಯ ನಮಃ, ಗೋವಿಂದಾಯ ನಮಃ ಅಥವಾ ಹರ, ಶಿವ, ಶಂಕರ ಎಂದು ಮೂರಾವರ್ತಿ ಉಚ್ಚರಿಸಲಾಗುತ್ತದೆ.

ಮಾಡಿದ ಕೆಲಸಗಳಲ್ಲಿ ಉಚ್ಚರಿಸಿದ ಮಂತ್ರಗಳಲ್ಲಿ ಲೋಪವಿರಬಹುದು, ನಡೆಸಿದ ಕೃತುಗಳಲ್ಲಿ ದೋಷವಿರಬಹುದು, ಭಕ್ತಿಯಿಲ್ಲದೇ ಮಾಡಿರಲೂ ಬಹುದು, ಇಂತಹ ನ್ಯೂನತೆಗಳನ್ನೊಳಗೊಂಡ ಪೂಜೆಯನ್ನು ನಿನಗರ್ಪಿಸಿದ್ದೇನೆ ಎಂಬ ಮೂಲಕ ಘಟಿಸಿರಬಹುದಾದ ತಪ್ಪುಗಳಿಗೆ ಕ್ಷಮೆಬೇಡುವುದೇ ಪ್ರಾಯಶ್ಚಿತ್ತ ಜಪ.

ನಿತ್ಯ ನಿಯಮಿತವಾಗಿ, ಕಾಲ, ದೇಶಗಳನ್ನು ಗುರ್ತಿಸಿಕೊಂಡು, ನಿರ್ದಿಷ್ಟವಾದ ಆಸನದಲ್ಲಿ ಕುಳಿತು, ನಿರ್ದಿಷ್ಟ ಸಂಖ್ಯೆಯಲ್ಲಿ ಜಪ ಮಾಡುವುದು ’ಅಚಲ ಜಪ’ವೆನಿಸುತ್ತದೆ. ಕೆಲವರಿಗೆ ಕುಳಿತುಕೊಳ್ಳಲು ಸಮಯವೆಂಬುದಿರುವುದಿಲ್ಲ, ಅವರು ಬಸ್ಸು-ರೈಲುಗಳನ್ನು ಹತ್ತಿ ಇನ್ನೆಲ್ಲಿಗೋ ಪ್ರಯಾಣಿಸುತ್ತಲೇ ಇರಬೇಕಾದುದು ಅವರ ಭೌತಿಕ ಕರ್ತವ್ಯವಾಗಿರುತ್ತದೆ. ಅಂತಹ ಸಮಯದಲ್ಲಿ ಚಲನೆಯಲ್ಲಿರುವಾಗಲೇ, ನಿರ್ದಿಷ್ಟ ಸಂಖ್ಯೆ-ನಿಯಮ ಇಲ್ಲದೇ ನಡೆಸುವ ಜಪ ’ಚಲ ಜಪ’ವೆನಿಸುತ್ತದೆ. ಇದರಿಂದ ಮನಸ್ಸು ಬೇಡದ ವಿಷಯಗಳತ್ತ ಹೊರಳದಂತೇ ತಡೆಯುವುದು ಸಾಧ್ಯವಾಗುತ್ತದೆ. ಇದೇ ರೀತಿಯಲ್ಲಿ ಇನ್ನೂ ಕೆಲವರು ದಿನವೂ ನಿಶ್ಚಿತವಾದೊಂದು ಮಂತ್ರವನ್ನು ಒಂದಷ್ಟು ಸಂಖ್ಯೆಯಲ್ಲಿ ಕಾಗದದ ಮೇಲೆ ಬರೆಯುತ್ತಾರೆ: ಉದಾಹರಣೆಗೆ ಈ ಆಧ್ಯಾಯದ ಆರಂಭಿಕ ಹಂತದಲ್ಲಿ ಹೇಳಿದ ಸೆಕ್ಯೂರಿಟಿ ಗಾರ್ಡು. ಅದೂ ಸಹ ಚಲ ಜಪವೇ.

ಉನ್ನತ ಸ್ತರದ ಜಪವಾದ ಉನ್ಮನೀ ಜಪವನ್ನು ಕೈಗೊಳ್ಳುವ ಮುನ್ನ, ಅಷ್ಟಾಂಗಯೋಗದ ಮೊದಲಭಾಗಗಳನ್ನು ಕರಗತಮಾಡಿಕೊಂಡು ಬಳಸಿಕೊಂಡರೆ ಉನ್ಮನೀ ಜಪದ ಮೂಲಕ ’ನಿದಿಧ್ಯಾಸನ ಕ್ರಿಯೆ’ ನಡೆಸಬಹುದು.

ಇಂದಿಗೂ ನೈಜ ಅನಾದಿಯ ಇತಿಹಾಸದಲ್ಲಿ ಸಂಸ್ಕೃತಕ್ಕಿಂತ ಮೂಲ ಭಾಷೆ ಬೇರೆ ಇಲ್ಲ, ವೇದಗಳಿಗಿಂತ ಪ್ರಾಚೀನವಾದ ಗ್ರಂಥಗಳಿಲ್ಲ, ಆಯುರ್ವೇದಕ್ಕಿಂತ ಪ್ರಾಚೀನವಾದ ವೈದ್ಯಶಾಸ್ತ್ರವಿಲ್ಲ, ಯೋಗಕ್ಕಿಂತ ಪ್ರಾಚೀನವಾದ ಮನೋದೈಹಿಕ ವ್ಯಾಯಾಮಶಾಸ್ತ್ರವಿಲ್ಲ. ವಿದೇಶೀಯರು ಇವೆಲ್ಲವುಗಳ ಮಹತ್ವವನ್ನು ಅರಿತು ಪೇಟೆಂಟ್ ಪಡೆದುಕೊಳ್ಳಲು ಹುನಾರ ನಡೆಸುತ್ತಿದ್ದರೆ ನಮ್ಮಲ್ಲಿನ ಪ್ರಗತಿಪರರು ಈ ಮಹದ್ವಿದ್ಯೆಗಳನ್ನೂ ಮತ್ತು ಅವುಗಳನ್ನು ತಲೆತಲಾಂತರದಿಂದ ಮನೋಗರ್ಭದಲ್ಲಿ ಹೊತ್ತುಬಂದವರನ್ನೂ ಹೀಯಾಳಿಸುತ್ತ ನಿಂತ ಟೊಂಗೆಯನ್ನೇ ಕಡಿದುಕೊಳ್ಳುತ್ತಿರುವ ’ಮಹಾ ಪರಾಕ್ರಮಿಗಳಾಗಿದ್ದಾರೆ’ ಅಂತವರಿಗೆ ಅಭಿನಂದನೆಗಳು.

ಈ ನೆಲದಲ್ಲಿ ವಿದೇಶೀಯರು ಕಾಲಿಟ್ಟಿದ್ದು ವಿಪರ್ಯಾಸ. ಇಲ್ಲಿನ ವರ್ಣಾಶ್ರಮದಿಂದ ಸಮಾಜದಲ್ಲಿ ಒಡಕಿತ್ತು ಎಂಬುದು ಅಪ್ಪಟ ಸುಳ್ಳು. ಇಲ್ಲಿಮ ರಾಜರುಗಳ ನಡುವೆ ಸಾಮ್ರಾಜ್ಯ ವಿಸ್ತರಣೆಗಾಗಿ, ಅಸ್ತಿ ಹೆಚ್ಚಿಸಿಕೊಳ್ಳುವಿಕೆಗಾಗಿ, ಘರ್ಷಣೆಗಳು, ಯುದ್ಧಗಳು ನಡೆಯುತ್ತಿದ್ದವು. ಸಶಕ್ತನಾದವ ನಿಶ್ಶಕ್ತನಾದವನನ್ನು ಸೋಲಿಸುತ್ತಿದ್ದ. ತಮ್ಮ ಆಸ್ಥಾನಕ್ಕೆ ಸಹಾಯ ನೀಡುವೆವೆಂದು ಕಾಲಿಟ್ಟ ವಿದೇಶೀಯರಿಗೆ ಸೋತ ರಾಜ ಸಹಕಾರ ನೀಡಿದ. ಹಾಗೆ ಬಂದ ವಿದೇಶೀ ಮಂಗಗಳು ಬೆಣ್ಣೆತೂಗುವ ನೆಪದಲ್ಲಿ ಇಲ್ಲಿಯೇ ತಳವೂರಿದವು. ನಮ್ಮವರೊಳಗೇ ಪೆದ್ದರನ್ನು ಗುರುತಿಸಿ, ಬೋಳೆಣ್ಣೆ ಸವರಿ, ದ್ವೇಷ ಹೆಚ್ಚಿಸಿದರು.

ವಿದೇಶೀಯರ ದುಬಾರಿ ವೆಚ್ಚದ ಸಹಾಯವನ್ನು ಪಡೆದುಕೊಂಡ ನಿಶ್ಶಕ್ತ ಅರಸ, ಸೂಳೆಯರ ಸಹವಾದ ಮಾಡುವ ವಿಟಪುರುಷರಂತೆ ಸಾಲಗಾರನಾದ. ಅಟ್ ಎನಿ ಕಾಸ್ಟ್ ತನ್ನ ವಿರೋಧಿಯನ್ನು ಹಣಿಯಬೇಕೆಂಬುದಷ್ಟೆ ಅವನ ಉದ್ದೇಶವಾಗಿರುತ್ತಿತ್ತು. ಆಯಕ್ಕಿಂತ ವ್ಯಯ ಹೆಚ್ಚಿದಾಗ ತನ್ನ ಸಂಸ್ಥಾನವನ್ನೇ ವಿದೇಶೀಯರಿಗೆ ಅಡವಿಟ್ಟ ದಾಖಲೆಗಳಿವೆಯಲ್ಲ! ಭಾರತೀಯರಲ್ಲಿ ಆರ್ಯರು ಮತ್ತು ದ್ರಾವಿಡರು ಎಂಬ ಪರಿಕಲ್ಪನೆ ಹುಟ್ಟುಹಾಕಿ, “ಆರ್ಯರು ಭಾರತಕ್ಕೆ ಬಂದು ಇಲ್ಲಿನ ಮೂಲನಿವಾಸಿಗಳಾದ ದ್ರಾವಿಡರೊಡನೆ ಹೋರಾಡಿ ಅವರ ಆಸ್ತಿಪಾಸ್ತಿಗಳನ್ನು ಕಸಿದುಕೊಂಡು, ತಮ್ಮ ವಸಾಹತುಗಳನ್ನು ಸ್ಥಾಪಿಸಿಕೊಂಡರು” ಎಂದು ಅವರೇ ಸೃಷ್ಟಿಸಿದ ದ್ರಾವಿಡ ವಿಭಾಗದವರ ತಲೆಯಲ್ಲಿ ಹುಳ ಬಿಟ್ಟರು. ಮೂಲ ಇತಿಹಾಸ ಗ್ರಂಥಗಳನ್ನು ಸುಟ್ಟಿಬಿಟ್ಟರು.

ಪ್ರತಿನಿತ್ಯ ಒಡೆದಾಳುವ ನೀತಿಯನ್ನು ಹೆಚ್ಚಿಸುತ್ತ ಹೋದರು. ಹಲವು ಜಾತಿಗಳ, ಉಪಜಾತಿಗಳ ಸೃಷ್ಟಿಕರ್ತರಾದರು! ಜಾತಿ-ಜಾತಿಗಳ ನಡುವೆ ಕೊಳ್ಳಿಹಚ್ಚಿ ಸದಾ ಜಗಳಗಳು ಊರ್ಜಿತಾವಸ್ಥೆಯಲ್ಲಿರುವಂತೆ ನೋಡಿಕೊಂಡರು. ಈ ನೆಲಕ್ಕೆ ಕೆಲವರು ದಾಳಿ ಇಟ್ಟಿದ್ದು ನಿಜ, ಆವರಲ್ಲಿ ಹೂಣರು, ಮಹಮ್ಮದೀಯರು, ಪ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು ಹೀಗೆ ಇಂತವರೆಲ್ಲ ಬಂದಿದ್ದು, ನಮ್ಮ ಪೂರ್ವಜರ ಮೇಲೆ ದಬ್ಬಾಳಿಕೆ ನಡೆಸಿದ್ದು ನಿಜ. ಆರ್ಯರು ಇಲ್ಲಿಗೆ ಬಂದರು ಎಂಬುದು ಮಾತ್ರ ಶುದ್ಧ ಸುಳ್ಳು. ಯುಗಯುಗಗಳಿಂದಲೂ ಭಾರತಲ್ಲಿ ಆರ್ಯರೇ ತುಂಬಿದ್ದರು; ಅಂದರೆ ಇಲ್ಲಿರುವವರೆಲ್ಲ ಆರ್ಯರೇ, ಆರ್ಯರು ಎಂದರೆ ಉತ್ತಮರು, ಕುಲೀನರು, ಸುಸಂಸ್ಕೃತರು ಎಂದರ್ಥ.

ಭಾರತೀಯ ನೆಲದ ನೈಜ ಇತಿಹಾಸವನ್ನು ಅರಿಯಲಾರದ ಮತ್ತು ನಮ್ಮ ಗ್ರಂಥಗಳ ಅರ್ಥವನ್ನು ತಮ್ಮ ತಾಕತ್ತಿನ ನೇರಕ್ಕೆ ಅರ್ಥೈಸಿಕೊಳ್ಳುತ್ತಿರುವ ಬ್ರಿಟಿಷ್ ಪ್ರೇರಿತ ಭಾರತೀಯ ಬಂಧುಗಳು ಬ್ರಾಹ್ಮಣರನ್ನು ವಿರೋಧಿಸಹತ್ತಿದರು. ಅದು ಅವರ ಅವಜ್ಞೆಯೇ ಹೊರತು ಹೆಗ್ಗಳಿಕೆಯಲ್ಲ. ಹೆಚ್ಚೆಂದರೆ ಸನ್ಮಾನ್ಯ ಬನ್ನಂಜೆ ಗೋವಿಂದಾಚಾರ್ಯರು ಹೇಳಿದಂತೆ, ಪೆದ್ದರಲ್ಲಿ ಪೆದ್ದಶೇಷ್ಠರು ಎಂಬುದಕ್ಕೆ ನೋಬೆಲ್ ಪ್ರಶಸ್ತಿ ಕೊಡಬಹುದಾದರೆ ಅಂತವರಿಗೆ ಕೊಡಬಹುದಷ್ಟೆ.

ಅದಿರಲಿ, ಅಮೂಲ್ಯ ಮಾಹಿತಿಗಳ ಆಗರವಾದ ವೇದಮಂತ್ರಗಳನ್ನು ನಿತ್ಯಾನುಷ್ಠಾನ, ಪುರಶ್ಚರಣೆಗಳ ಮೂಲಕ ಕಂಠಸ್ಥವಾಗಿಟ್ಟುಕೊಳ್ಳುವ ಪರಿಪಾಠ ಹಿಂದಿನಿಂದ ಬಂದಿತ್ತು. ಕೆಲವರು ಚತುರ್ವೇದಗಳನ್ನೂ ಇಡಿಯಾಗಿ ಕಂಠಸ್ಥವಾಗಿರಿಸಿಕೊಳ್ಳುತ್ತಿದ್ದರು. ಅದಕ್ಕೆ ಧಾರಣ ಶಕ್ತಿ ಎನ್ನುತ್ತಾರೆ. ಗರ್ಭಿಣಿ ಸ್ತ್ರೀ ಮಗುವನ್ನು ಹೊಟ್ಟೆಯಲ್ಲಿ ಹೊತ್ತಿರುವಂತೆಯೇ ಮನದ ಗರ್ಭದಲ್ಲಿ ವೇದಗಳನ್ನು ಧರಿಸಿರುವ ಪ್ರಕ್ರಿಯೆ ಅದು. ಸಾಮಾನ್ಯವಾಗಿ ಬ್ರಾಹ್ಮಣರೆಲ್ಲ ಅದನ್ನೇ ನಡೆಸುತ್ತಿದ್ದರು.

’ಯುಗ ಪ್ರವರ್ತಕರು’ ಎಂದು ಕರೆಸಿಕೊಳ್ಳಲು ಹಾತೊರೆಯುವ ಅನೇಕರು, ಪ್ರಗತಿಪರ ಸಾಹಿತಿಗಳು “ಬ್ರಾಹ್ಮಣರು ಏನೋ ತಟ್ಟೆಕಾಸಿಗಾಗಿ, ದಕ್ಷಿಣೆಗಾಗಿ, ಹೊಟ್ಟೆಹೊರೆದುಕೊಳ್ಳುವಿಕೆಗಾಗಿ ಪೌರೋಹಿತ್ಯವನ್ನು ನಡೆಸುತ್ತಾರೆ, ಉಳಿದ ಸಮಾಜದವರನ್ನು ಶೊಷಿಸಿ ಬದುಕುತ್ತಾರೆ” ಎಂದು ಪುಂಖಾನುಪುಂಖವಾಗಿ ಭಾಷಣ ಬಿಗಿಯುತ್ತಾರೆ. ಅವರು ಹೇಳಿದರೆ ಅಭಿವ್ಯಕ್ತಿ ಸ್ವಾತಂತ್ರ್ಯ, ಅದೇ ಬ್ರಾಹ್ಮಣ ಎಂದುಕೊಳ್ಳುವವನ ಅಭಿವ್ಯಕ್ತಿಗಳಿಗೆ ಆ ರೀತಿಯ ಸ್ವಾತಂತ್ರ್ಯವಿಲ್ಲ.

ಯಾಕೆ ಹೀಗಾಗಿದೆ ಎಂಬುದನ್ನು ಗಮನಿಸಿ ನೋಡಿ. ಬ್ರಾಹ್ಮಣರಲ್ಲಿ ಕೆಲವರು ಕಚ್ಚೆಹರುಕರಾಗಿದ್ದಕ್ಕೆ ಎಲ್ಲರೂ ಹೇಳಿಸಿಕೊಳ್ಳುವ ಪ್ರಸಂಗ ಬಂತು. ಹಾಗಂತ ಉಳಿದ ಜನಾಂಗಗಳಲ್ಲಿ ಕಚ್ಚೆಹರುಕರು ಇಲ್ಲವೇ? ಇದ್ದಾರೆ. ಆದರೆ ಅದು ಇಲ್ಲಿ ಅಮುಖ್ಯ, ಬ್ರಾಹ್ಮಣರಲ್ಲಿ ಕೆಲವರು ಹಾಗಿದ್ದಾರೆ ಎಂಬುದೇ ಪ್ರಾಮುಖ್ಯ. ಅದಕ್ಕೆ ದೊಡ್ಡ ಮೇಲೋಗರದಂತೆ ಸಾಕ್ಷ್ಯಾಧಾರ ಸಹಿತ ಮಾನ ಹರಾಜು ಹಾಕಲು ಈಗ ಸಿಕ್ಕಿದ್ದು ಹಾವಾಡಿಗ ಸಂಸ್ಥಾನದ ಹೋರಿಸ್ವಾಮಿಯ ಹಗರಣಗಳು.

ಇಲ್ಲೊಂದು ಉಲ್ಲೇಖ ನೋಡಿ-

ಯಯಾ ದ್ಯೌಃ ಯಯಾ ಪೃಥಿವೀ ಯಯಾಪೋ ಗುಪಿತಾ ಇಮಾಃ |
ವಶಾಂ ಸಹಸ್ರಧಾರಾಂ ಬ್ರಹ್ಮಣಾಚ್ಛಾ ವದಾಮಸಿ || —-ಅಥರ್ವಣವೇದ ೧೦/೧೦/೪

ಗೋವಿನಿಂದ ಈ ಭೂಮಿ, ಈ ಸ್ವರ್ಗ ಮತ್ತು ನೀರಿಗೆ ಆಶ್ರಯವಾದ ಅಂತರಿಕ್ಷ –ಈ ಲೋಕಗಳು ಕಾಪಾಡಲ್ಪಟ್ಟಿವೆ. ಅವಳು ಸುಲಭವಾಗಿ ಒಡೆಯನ ವಶದಲ್ಲಿ ಇರುವಂತಹ ಸೌಮ್ಯರೂಪಳು. ಸಹಸ್ರಧಾರೆಗಳ ಹಾಲಿನಿಂದ ನಮ್ಮನ್ನು ಪೋಷಿಸುವವಳು. ನಾನು ಇಂತಹ ಗೋವನ್ನು ವೇದಮಂತ್ರಗಳಿಂದ ಚೆನ್ನಾಗಿ ಹೊಗಳುವೆನು.

ಮನುಷ್ಯನಿಗೆ ಕನಿಷ್ಠ ಕೃತಜ್ಞತೆ ಎಂಬುದಾದರೂ ಇರಬೇಕು. ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ…..ಎಂಬಿತ್ಯಾದಿ ಗೋವಿನ ಮಹತ್ವವನ್ನು ನಾವೆಲ್ಲ ಕೇಳಿದ್ದೇವೆ. ನಿತ್ಯವೂ ಗೋವಿನ ಹಾಲು ಅನಿವಾರ್ಯ; ಬಹುಶಃ ಹಾಲಿಲ್ಲದೆ ಮನುಷ್ಯ ಬದುಕಿರುವುದು ಬಹಳ ಕಷ್ಟ. ಅಂತಹ ಹಾಲನ್ನು ಕೊಡುವ ಗೋವಿನ ಮಹತ್ವವನ್ನು ಅರಿತು, ನಿರ್ವಂಶವಾಗುತ್ತಿರುವ ಅವುಗಳನ್ನು ಕಾಪಾಡಬೇಕೆಂದರೆ ಅವಜ್ಞೆಯ ಜನ ಅದನ್ನು ವಿರೋಧಿಸುತ್ತಾರೆ. ಆಳರಸರು ತಾವೂ ಗೋಮಾಂಸ ತಿನ್ನುತ್ತೇವೆ ಎನ್ನುತ್ತಾರೆ.

ಸಾಮಾಜಿಕ ದ್ರೋಹ ಎಂಬುದು ಘೋರ ಪಾತಕ. ಅದು ಬೇಹುಗಾರಿಕೆ ಅಥವಾ ಭಯೋತ್ಪಾದನೆಯಂತಹ ಸಮಾಜ ಘಾತುಕತನ. ಸಮಾಜ ತನ್ನನ್ನು ಅನುಸರಿಸುತ್ತಿದೆ ಎಂದು ಗೊತ್ತಿದ್ದೂ ಅಸ್ತೇಯ ಮತ್ತು ಅಪರಿಗ್ರಹಗಳನ್ನು ನಡೆಸದವ ಸನ್ಯಾಸಿಯಾಗಲಾರ. ಅತಿಪ್ರಜ್ಞಾವಂತರೆನಿಸಿಕೊಂಡ ಸಮಾಜವನ್ನು ಒಡೆದಾಳುವ ನೀತಿ ಅನುಸರಿಸುತ್ತಿರುವವನಿಗೆ ಈ ಪದಗಳೆಲ್ಲ ವರ್ಜ್ಯ. ಅವನ ಲೆಕ್ಕದಲ್ಲಿ ಏನು ಮಾಡಿದರೂ ರಾಮನಿಚ್ಛೆ! ಯಾಕೆಂದರೆ ವಿಗ್ರಹಗಳಲ್ಲಿದ್ದ ರಾಮ ಬಿಟ್ಟುಹೋಗಿದ್ದಾನೆ, ಅವನಂತೂ ಪ್ರತ್ಯಕ್ಷ ಬಂದು ಕೇಳಲಾರ. ಹೀಗಾಗಿ ಮಠದಲ್ಲಿ ಯಾವುದಕ್ಕೂ ಹೇಳುವವರು ಕೇಳುವವರೇ ಇಲ್ಲ.

ಜೈಕಾರ ಕೂಗುವವರು, ಸೀಲುಗುದ್ದುತ್ತ ಸ್ಪಷ್ಟೀಕರಣ ನೀಡುವವರು, ಬಸ್ಸುಗಳಲ್ಲಿ ಅಮಾಯಕರನ್ನು ಕರೆತಂದು ಸಮಾವೇಶಗಳನ್ನು ಏರ್ಪಡಿಸುವವರು ಇದ್ದರೆ ಸಾಕು. ಅದೇ ಕಚ್ಚೆಹರುಕರು, ’ವ್ಯಭಿಚಾರ ಧರ್ಮ’ದ ಉಳಿವಿಗಾಗಿ ನಡೆಸುವ ಘನಕಾರ್ಯ.

Thumari Ramachandra

https://www.facebook.com/groups/1499395003680065/permalink/1679978512288379/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s