ಮಠದ ಆರ್ಥಿಕ ವ್ಯವಹಾರಕ್ಕೆ ಕಡಿವಾಣ ಹಾಕಿ

ಮಠದ ಆರ್ಥಿಕ ವ್ಯವಹಾರಕ್ಕೆ ಕಡಿವಾಣ ಹಾಕಿ

ಹಾವಾಡಿಗ ಮಠದಲ್ಲಿ ಬಹುತೇಕ ಹಣದ ವ್ಯವಹಾರಗಳು ದಾಖಲೆಗೆ ಒಳಪಟ್ಟಿಲ್ಲ ಏಕೆಂದರೆ ಪಾರದರ್ಶಕವಾಗಿದ್ದರೆ ಮಠದ ಹೋರಿ, ಬಾವ ಹೋರಿ ಮತ್ತು ಬಳಗ ಹೋರಿಗಳು, ಏಕಾಂತ ಸೇವೆಯ ಐನಾತಿ ಮಹಿಳೆಯರಿಗೆಲ್ಲ ಬೇಕುಬೇಕಾದ ಹಾಗೆ ಮೊಗೆದು ಬಳಸುವುದಕ್ಕೆ ಆಗ ಸಾಧ್ಯವಾಗುವುದಿಲ್ಲ.

ನಂಬಲರ್ಹ ಹಲವು ಮೂಲಗಳು ತುಮರಿಗೆ ನೀಡಿದ ಸಂದೇಶಗಳ ಪ್ರಕಾರ ಮಠದ ಹೋರಿಬಳಗ ಲ್ಯಾಂಡ್ ಡೀಲಿಂಗ್ ಸಹ ನಡೆಸುತ್ತಿತ್ತು. ಭಕ್ತರು ಎನಿಸಿಕೊಂಡ ಹಳ್ಳಿಗರಿಂದ ಕೃಷಿ ಉತ್ಪನ್ನ ಸರಕುಗಳನ್ನು ಖರೀದಿಸಿ ಇನ್ನಿತರ ಪ್ರದೇಶಗಳ ಭಕ್ತರಿಗೆ ಮಾರಾಟ ಮಾಡುತ್ತಿತ್ತು. ಮಠಕ್ಕೆ ಬಂದ ದೇಣಿಗೆ ಕಾಣಿಕೆಗಳಲ್ಲಿ ನೂರಕ್ಕೆ ತೊಂಬತ್ತರಷ್ಟು ಲೆಕ್ಕ ಸರಿಯಿಲ್ಲ. ಮಠದ ಹೋರಿ ಮತ್ತು ಬಾವ ಹೋರಿಗಳು ಬೆಂಗಳೂರು ನಗರ ಕುಂಡಲಹಳ್ಳಿ ಮತ್ತು ಸರ್ಜಾಪುರ ಪ್ರದೇಶಗಳಲ್ಲಿ, ಮೈಸೂರಿನಲ್ಲಿ ಮತ್ತು ರಾಜ್ಯದ ಇನ್ನಿತರ ಹಲವು ಭಾಗಗಳಲ್ಲಿ ಬೇನಾಮಿ ಹೆಸರುಗಳಲ್ಲಿ ಜಾಗವನ್ನು[ಸೈಟುಗಳನ್ನು] ಖರೀದಿಸಿವೆ. ಹೊರಗಿನಿಂದ ಹೆಸರು ಕಾಣದ್ದರಿಂದ ಯಾರಿಗೂ ಅದು ಗೊತ್ತಾಗುತ್ತಿಲ್ಲ.

ಮಠದ ಹೋರಿ ಸನ್ಯಾಸಿ ಮಾಡಬೇಕಾದ ಕೆಲಸಗಳನ್ನು ಮಾತ್ರ ಬಿಟ್ಟು, ಮಿಕ್ಕ ಎಲ್ಲ ಕೆಲಸಗಳನ್ನೂ ಅಪರಿಮಿತವಾಗಿ ಮಾಡಿದೆ. ಸಾದಾ ಸಂಸಾರಿಗಳಿಗೆ ಒಂದು ಮಟ್ಟದ ಹೆದರಿಕೆ ಎಂಬುದು ಇರುತ್ತದೆ. ದೇವರ ಹೆಸರನ್ನು ಬಳಸಿಕೊಂಡು ಮಾಡಬಾರದ ಕೆಲಸಗಳನ್ನು ಅವರು ಮಾಡುವುದಿಲ್ಲ. ದೇವರ ಹೆಸರಿನಲ್ಲಿ ಪಂಗನಾಮ ಹಾಕುವವರಾರು? ಅವರೆಲ್ಲ ಕ್ರಿಮಿನಲ್ಲುಗಳೆ. ಬಕಾರಭಕ್ತರು ಇರುಳು ಕಂಡ ಬಾವಿಗೆ ಹಗಲಿನಲ್ಲೇ ಬೀಳುವಷ್ಟು ಅವರನ್ನು ಇನ್ನಷ್ಟು ಬಕರಾ ಮಾಡುವ ಟ್ರಿಕ್ ಮಠದ ಹೋರಿಗೆ ಗೊತ್ತಿದೆ. ಬಾಯಿ ತೆಗೆದರೆ ಭಗವಂತನ ಹೆಸರು, ಮೈಮನಗಳಲ್ಲೂ ದೇವರೇ ತುಂಬಿದ್ದಾನೆ ಎಂಬಷ್ಟು ನಾಟಕದ ಪೋಸು. ಅದು ನಟನೆ ಎಂಬುದನ್ನರಿಯದ ಬಕರಾಭಕ್ತರು ಹೇಳಿದ್ದನ್ನೆಲ್ಲ ಒಪ್ಪಿದರು.

ಎಷ್ಟರ ಮಟ್ಟಿಗೆ ತಲೆದೂಗಿದರೆಂದರೆ ರಾಮನಿಗಾಗಿ ತಮ್ಮ ಕಿವಿ, ಮೂಗು, ಕುತ್ತಿಗೆಗಳಲ್ಲಿದ್ದ ಬಂಗಾರದ ಒಡವೆವಸ್ತುಗಳನ್ನೂ ಸಹ ತೆಗೆದುಕೊಟ್ಟರು! ಇಂದು ಅಂತಹ ಒಡವೆಗಳೆಲ್ಲ ಕರಗಿ ಮಾರಾಟವಾಗಿ ಕೇಸುಗಳನ್ನು ನಡೆಸಲು ವ್ಯಯವಾಗಿವೆ. ಇನ್ನಷ್ಟು ಒಡವೆಗಳು ಚಟಕ್ಕೆ ಖರ್ಚಾಗಿವೆ. ದೇವರ ಹೆಸರು ಹೇಳುತ್ತ ಹಲ್ಲುಕಿಸಿಯುತ್ತ ತಿರುಗುವಾಗ ಬರುತ್ತಿದ್ದ ಎಲ್ಲವನ್ನೂ ಕಳ್ಳಯ್ಯ-ಕುಳ್ಳಯ್ಯ ಹೀಗೆಯೇ ಹಾಳುಮಾಡಿದ್ದಾರೆ.

ಮಠದ ವ್ಯವಹಾರಕ್ಕೊಂದು ಇತಿಮಿತಿ ಇರಬೇಕು. ಈ ಕಳ್ಳ ಜೋಡಿ ಕಂಡಿದ್ದಕ್ಕೆಲ್ಲ ಕೈ ಹಚ್ಚಿದವರು. ಸಾಗರದ ಭಕ್ತನ ಖಾಸಗಿ ಸ್ಕೂಲನ್ನು ಬಲವಂತವಾಗಿ ತೆಗೆದುಕೊಳ್ಳಲು ನೋಡಿದರು. ಹಳ್ಳಿಗಳಲ್ಲಿ ಆದಾಯವಿರುವ ದೇವಸ್ಥಾನದ ಆಡಳಿತವನ್ನು ಬಲವಂತವಾಗಿ ಕಿತ್ತುಕೊಂಡಿದ್ದರು. ಆ ಪೈಕಿ ಒಂದು ದೇವಸ್ಥಾನದ ಕತೆಯನ್ನು ಕುಂಟಿಕಾನ್ ಕುಮಾರಣ್ಣ ಸವಿವರವಾಗಿ ದಾಖಲೆಗಳ ಸಮೇತ ಹೇಳ್ತಾರೆ. ಆಗಲೇ ಈ ಕಳ್ಳಯ್ಯ ಕುಳ್ಳಯ್ಯ ಒಳಗೆ ಹೋಗ್ತಿದ್ದರು; ಕುಮಾರಣ್ಣ ಮನಸ್ಸು ಮಾಡಲಿಲ್ಲ, ಬಿಟ್ಟುಬಿಟ್ಟರು.

ಇನ್ನೊಂದು ಕಡೆ ವಿಶೇಷ ಜಾತ್ರೆ ನಡೆಯುವ ಗಣಪತಿ ದೇಗುಲವನ್ನು ತೆಗೆದುಕೊಂಡಿದ್ದರು. ಜಾತ್ರೆಯ ಸಮಯದಲ್ಲಿ ದೇಣಿಗೆ, ಕಾಣಿಕೆ ಚೀಟಿ ಹರಿಯುತ್ತ ಹಣ ಎಣಿಸಿಕೊಂಡು ಹೋಗಲು ಸೂಜಿ ಭಟ್ಟನನ್ನು ಕಳಿಸುತ್ತಿದ್ದರು. ಸ್ಥಳೀಯ ಆಡಳಿತ ಮಂಡಳಿ ಸಬಲವಾಯಿತು. ಸೂಜಿ ಭಟ್ಟನ ಮೇಲೆ ದೂರು ದಾಖಲಾಗಿ ಆತ ಅಲ್ಲಿಂದ ಕಾಲ್ಕಿತ್ತ. ಈಗ ದೇವಸ್ಥಾನದ ಆಡಳಿತ ಮೂಲ ಸಮಿತಿಯ ಕೈಗೇ ಮರಳಿದೆ. ಅಲ್ಲಿನ ಸಮಿತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕ್ರೋಡೀಕರಿಸಿದ ಹತ್ತುಲಕ್ಷವನ್ನು ಕಳ್ಳಯ್ಯ-ಕುಳ್ಳಯ್ಯ ಸೇರಿಕೊಂಡು ಗುಳುಂ ಸ್ವಾಹಾ ಮಾಡಲು ಪ್ರಯತ್ನಿಸಿದರು. ಅದು ಬ್ಯಾಂಕಿನಲ್ಲಿತ್ತು, ಜಾಯಿಂಟ್ ಅಕೌಂಟ್ ಆಗಿದ್ದರಿಂದ ನೇರವಾಗಿ ತೆಗೆಯಲು ಬರಲಿಲ್ಲ. ಈಗಲೂ ಅವರು ಹಾವಾಡಿಗ ಮಠಕ್ಕೆ ನೋಟೀಸು ನೀಡಿ ಹಕ್ಕು ಬಿಟ್ಟುಕೊಡುವಂತೆ ಕೇಳುತ್ತಿದ್ದಾರೆ.

ಹೋದಲ್ಲೆಲ್ಲ ದೇವರ ಹೆಸರಿನಲ್ಲಿ ಮೂರು ನಾಮ ತೀಡಿದ್ದೇ ನಡೆದಿದೆ. ಮಠದವರಾದರೆ ಹೋದಲ್ಲೆಲ್ಲ ಆಸ್ತಿ ಮಾಡಬೇಕೇನು? ಮಠದ ಸನ್ಯಾಸಿಗೆ ಧಾರ್ಮಿಕ ಕೆಲಸ ಮುಖ್ಯವೋ ಆಸ್ತಿಪಾಸ್ತಿ ಮುಖ್ಯವೋ? ಶೃಂಗೇರಿಯ ಚಂದ್ರಶೇಖರ ಭಾರತೀ ಸ್ವಾಮಿಗಳು ತನಗೆ ಮಠದ ವ್ಯವಹಾರಗಳ ಗೋಜಲೇ ಬೇಡವೆಂದು ಆಗಿನ ಮೈಸೂರು ಮಹಾರಾಜರಿಗೆ ತಿಳಿಸಿ, ಮಠದ ವ್ಯವಹಾರಗಳ ಮುತುವರ್ಜಿ ವಹಿಸುವಂತೆ ಕೇಳಿಕೊಂಡಿದ್ದರಂತೆ. ನವ ಭಾರತದ ಜೀವನ್ಮುಕ್ತ ಸನ್ಯಾಸಿಗಳಲ್ಲಿ ಅವರೂ ಒಬ್ಬರು. ಕಂಚಿ ಪರಮಾಚಾರ್ಯರು ಕೂಡ ಹಾಗೆಯೇ. ಅವರೆಲ್ಲ ಹೆಸರಿಗಷ್ಟೇ ಮಠದಲ್ಲಿದ್ದರು; ಅವರಿಗೆ ಯಾವ ಬಿರುದು ಬಾವಲಿ ಅಡ್ಡವೇಷಗಳು ಬೇಕೆನಿಸಲೇ ಇಲ್ಲ.

ನಮ್ಮ ಜನ ಕೆಲವರು ಒಂದು ಪದವನ್ನು ತಪ್ಪು ತಿಳಿದಿದ್ದಾರೆ. ’ಸರ್ವತಂತ್ರ ಸ್ವತಂತ್ರ’ ಎಂದರೆ ಸರ್ವಾಧಿಕಾರಿ ಎಂದರ್ಥವಲ್ಲ. ಅದು ಅಷ್ಟಾಂಗಯೋಗದಲ್ಲಿ ಪರಿಪೂರ್ಣತೆ ಪಡೆದು ಅಷ್ಟಸಿದ್ಧಿಗಳನ್ನು ಪಡೆದುಕೊಂಡ ಹಂತ. ಅದರ ಕುರಿತು ಕೆಲವು ವಿವರಗಳನ್ನು ತುಮರಿ ನಿಮಗೆ ಮೊದಲೇ ಹೇಳಿದ್ದಾನೆ. ಅಣಿಮಾದಿ ಅಷ್ಟಸಿದ್ಧಿಗಳನ್ನು ಪಡೆದವರು ಯಾವ ಲೌಕಿಕ ತಂತ್ರಮಂತ್ರಗಳಿಗೂ ಸಿಗುವವರಲ್ಲ. ಶರೀರವನ್ನು ಅಣುವಿಗಿಂತ ಚಿಕ್ಕದಾಗಿ ಮಾಡಬಲ್ಲರು ಅಥವಾ ಆಕಾಶಕ್ಕಿಂತ ಅಗಾಧವಾಗಿ ಬೆಳೆಸಬಲ್ಲರು! ಏಕ ಕಾಲಕ್ಕೆ ಅನೇಕ ಕಡೆಗಳಲ್ಲಿ ಕಾಣಿಸಿಕೊಳ್ಳಬಲ್ಲರು. ನೆನೆಸಿದಾಕ್ಷಣ ನೆನೆದ ಪ್ರದೇಶಕ್ಕೆ ತೆರಳಬಲ್ಲರು! ಇದು ಸರ್ವತಂತ್ರ ಸ್ವತಂತ್ರ ಎನಿಸಿದೆ.

ನಮ್ಮ ಪಾಪದ ಜನ ಏನು ತಿಳಿದಿದ್ದಾರೆ ಎಂದರೆ ’ಸರ್ವತಂತ್ರ ಸ್ವತಂತ್ರ’ ಎಂಬ ಪದ ಸರ್ವಾಧಿಕಾರಿ, ಅವರಿಗಿಂತ ಮೇಲೆ ಯಾವ ಅಧಿಕಾರಿಯೂ ಇಲ್ಲ; ಅವರು ಹೇಳಿದಹಾಗೆ ಎಲ್ಲವೂ ನಡೆಯುತ್ತದೆ ಮತ್ತು ನಡೆಯಬೇಕು, ಮಠದ ಆಡಳಿತಕ್ಕೆ ಅವರೇ ಪರಮೋಚ್ಚ ಅಧಿಕಾರಿ ಹೀಗೆಲ್ಲ ಅರ್ಥೈಸಿಕೊಂಡಿದ್ದಾರೆ. ಇದು ನಮ್ಮಜನರ ಬೋಳೆ ಸ್ವಭಾವ.

ಇಂದಿನ ಕಾಲದಲ್ಲಿ ಮಠದ ಆಡಳಿತವನ್ನು ಸ್ವಾಮಿಯ ಕೈಗೆ ಕೊಡುವಂತಿಲ್ಲ. ದುಡ್ಡು ಕೈಗೆ ಸಿಕ್ಕಾಗ ಸನ್ಯಾಸಿಗೆ ಸನ್ಯಾಸಮಾರ್ಗ ತಪ್ಪುತ್ತದೆ. ಈ ಲೋಕದಲ್ಲಿ ದುಡ್ಡು, ಅಧಿಕಾರ ಮತ್ತು ಯೌವ್ವನ ಇವು ಸಿಕ್ಕಾಗ ಮದವೇರದ ಜನ ಬಹಳಕಡಿಮೆ. ಅತಿ ಸುಲಭವಾಗಿ ಹಣ ಹರಿದುಬರುವಾಗ ಅತಿಕಷ್ಟದ ಪರಿತ್ಯಾಗ(ರಿನೌನ್ಸಿಂಗ್)ಮಾರ್ಗ ಯಾರಿಗೆ ಬೇಕು?

ಜನಪದ ಕತೆಗಳಲ್ಲೇ ಸನ್ಯಾಸಿ ಬೆಕ್ಕು ಸಾಕಿದ ಕತೆಯಿದೆಯಲ್ಲ? ಸನ್ಯಾಸಿಯ ಕುಟೀರದಲ್ಲಿ ಇಲಿಯಿಂದ ತೊಂದರೆ ಎಂದು ಬೆಕ್ಕುಸಾಕಿದನಂತೆ, ಬೆಕ್ಕಿಗೆ ಹಾಲುಬೇಕೆಂದು ಹಸು ಸಾಕಿದನಂತೆ. ಹಸುವಿಗೆ ಮೇವು ಬೇಕೆಂದು ಹುಲ್ಲು ಬೆಳೆದನಂತೆ, ಹಸು ಮತ್ತು ಹುಲ್ಲಿನ ದೇಖರೇಖಿ ನೋಡಿಕೊಳ್ಳಲು ಹೆಂಗಸೊಬ್ಬಳನ್ನು ನೇಮಿಸಿದನಂತೆ. ಒಟ್ಟಾರೆ ಅವನು ಮದುವೆಯಾಗಿರದಿದ್ದರೂ ಸಂಸಾರ ಬೆಳೆಯಿತು. ಸಂಸಾರ ಬೆಳೆದಮೇಲೆ ಒಂದಿಲ್ಲೊಂದು ತಾಪತ್ರಯ ಕಾಡಿ, ಸನ್ಯಾಸಿಗೆ ತಪಸ್ಸನ್ನು ಮಾಡಲು ಸಮಯವೇ ಸಿಗಲಿಲ್ಲ.
ಹಾವಾಡಿಗ ಮಠದಲ್ಲಿ ನಡೆದದ್ದೂ ಅದೇನೆ. ನೂರಾರು ವ್ಯವಹಾರಗಳು, ಹಲವಾರು ಕಾರ್ಯಕರ್ತರು. ಹಗಲಿರುಳೂ ಜನಜಂಗುಳಿ, ಆಗಾಗ ಮೀಟಿಂಗು, ಉಳಿದ ಹೊತ್ತು ಮೆರವಣಿಗೆ, ಭಾಷಣ. ಜೊತೆಗೆ ಒಳಗಿನಿಂದ ಜಾಗೃತಗೊಂಡಿದ್ದ ಕಾಮುಕತನಕ್ಕೆ ಬೇಕಾದ ಅಂತರ್ಜಾಲದ ನೀಲಿಚಿತ್ರಗಳ ವೀಕ್ಷಣೆ, ನಿಷೇಧಿತ ಆಹಾರಗಳ ಕಡ್ಡಾಯ ಸೇವನೆ, ಬುಸ್ಸಪ್ಪನ ತೀಟೆ ಬಗೆಹಿರಿಸಿಕೊಳ್ಳಲು ಏಕಾಂತ, ಅದರಲ್ಲಿ ಮಹಿಳೆಯರಿಗೆ ದೋಖಾ!

ಇಲ್ಲೆಲ್ಲ ಏನಾಗಿದೆ, ಎಲ್ಲಾ ವ್ಯವಹಾರಗಳಿಗೂ ಹೋರಿಸ್ವಾಮಿಯದೇ ಪರಮೋಚ್ಚ ಅಧಿಕಾರ. ಒಳಗೆ ಬಂದ ದುಡ್ಡು ಎಲ್ಲಿಗೆ ಹೋಗಬೇಕೆಂಬುದು ಅವನದೇ ನಿರ್ಧಾರ. ಕಾಣಿಕೆಯಾಗಿ ಬಂದ ಚಿನ್ನ-ಬೆಳ್ಳಿ ಏನು ಮಾಡಬೇಕೆಂಬುದು ಅವನಿಗೇ ಬಿಟ್ಟಿದ್ದು. ಮಠದ ಯಾವತ್ತೂ ಸ್ತಿರಾಸ್ತಿ-ಚರಾಸ್ತಿಗಳಿಗೆ ಅವನೇ ಯಜಮಾನ. ಹಾಗಾದರೆ ಅವನೇ ಎಲ್ಲವನ್ನೂ ಗಳಿಸಿದನೇ? ಇಲ್ಲ. ಅವನು ಹೇಳಿಕೇಳಿ ’ಸನ್ಯಾಸಿ’. ಸನ್ಯಾಸಿಗೆ ಕಾಣಿಕೆಯಾಗಿ ಎಲ್ಲವೂ ಭಕ್ತರಿಂದ ಹರಿದುಬಂದಿರುವುದು, ಅಲ್ಲವೇ? ಎಂದಮೇಲೆ ಅದು ಈ ಸಮಾಜದ ಸಾರ್ವಜನಿಕರಿಗೆ ಸಂಬಢಿಸಿದ್ದು. ಅದಕ್ಕೊಂದು ಆಡಳಿತಾತ್ಮಕ ಸಮಿತಿ ಇರಬೇಕು. ಆಡಳಿತಕ್ಕೆ ಸನ್ಯಾಸಿ ಸಲಹೆಗಾರನಾಗಿರಬಹುದೇ ಹೊರತು ನೇರವಾಗಿ ಭಾಗವಹಿಸಬಾರದು. ಆಡಳಿತ ಮಂಡಳಿ ಚುನಾವಣೆಯ ಮೂಲಕ ರಚಿತವಾಗಬೇಕು. ಹಾಗಾದಾಗ ಮಾತ್ರ ಮಠದಲ್ಲಿ ಸ್ವಲ್ಪಮಟ್ಟಿಗಾದರೂ ನಿಯಂತ್ರಣವಿರುತ್ತದೆ.

ಇದಕ್ಕೆ ಕೆಲವು ಮಠಗಳು ಅಪವಾದವೆನ್ನಬಹುದು; ಅಲ್ಲಿನ ಪೀಠಕ್ಕೆ ಬರುವ ಸನ್ಯಾಸಿಗಳು ಸರಿಯಾದ ಆಯ್ಕೆ ಪ್ರಕ್ರಿಯೆಯಿಂದ ಬರುತ್ತಾರೆ; ಆಮಿಷದಿಂದ, ಯಾವುದೋ ನಾಲ್ಕು ಜನರ ಹೇಳಿಕೆಯಿಂದ, ವಶೀಲಿಬಾಜಿಯಿಂದ ಆಯ್ಕೆಗೊಳ್ಳುವುದಿಲ್ಲ. ಆಯ್ಕೆಮಾಡುವಾಗ ಮಿಲಿಟರಿಗೆ ವ್ಯಕ್ತಿಯನ್ನು ಆಯ್ಕೆಮಾಡುವಂತೆ, ಯೋಗ್ಯನೋ ಅಯೋಗ್ಯನೋ ಎಂದು ಹಲವಾರು ವಿಧಿವಿಧಾನಗಳಿಂದ ಪರಿಶೀಲಿಸುತ್ತಾರೆ. ಕೇವಲ ಜಾತಕವನ್ನಷ್ಟೇ ನಂಬಿಕೊಳ್ಳುವ ಹಾಗಿಲ್ಲ; ಜಾತಕ ಬದಲಾಯಿಸಿ ಪಟ್ಟಕ್ಕೆ ಬಂದ ಕಾಮುಕ ಮಾಡಿದ್ದು ಈಗ ಕಂಡಿದೆಯಲ್ಲ!

ಸನ್ಯಾಸಿಯ ಮೇಲೆ ಭಕ್ತಿ ಗೌರವ ಇರಬೇಕು, ಆದರೆ ಅದನ್ನು ಸಲುಗೆಯಾಗಿ ಪರಿವರ್ತಿಸಿಕೊಳ್ಳಬಾರದು. ಸನ್ಯಾಸಿ ಮತ್ತು ಸಂಸಾರಿ ಎಂಬ ಅಂತರವನ್ನು ಮುಖ್ಯವಾಗಿ ಸನ್ಯಾಸಿಯೇ ಕಾದುಕೊಳ್ಳಬೇಕು; ಸಂಸಾರಿ ಭಕ್ತರು ಸನ್ಯಾಸಿಗೆ ಸಾಂಸಾರಿಕ ಮಾರ್ಗದ ದುರ್ಗಂಧಗಳನ್ನು ಹಚ್ಚಬಾರದು. ಸನ್ಯಾಸಿಗಳನ್ನು ಮದುವೆಗೆ ಆಮಂತ್ರಿಸಬಾರದು. ಮದುವೆಯ ನಂತರ ನವವಿವಾಹಿತರಿಗೆ ದೂರದಿಂದ ಆಶೀರ್ವದಿಸಬಹುದು. ಇಂತಹ ಭಯ-ಭಕ್ತಿ ಇಲ್ಲದಿದ್ದರೆ ಸನ್ಯಾಸಿಯ ಮನಸ್ಸು ಸಡಿಲವಾಗುತ್ತದೆ; ಮನಸ್ಸು ಸಡಿಲವಾದಾಗ ಕೌಪೀನವೂ ಸಡಿಲವಾಗುತ್ತದೆ.

ಇತ್ತೀಚೆಗೆ ಅಂತರ್ಜಾಲದಲ್ಲಿ ಕಾಡುಬೆಕ್ಕು ತನ್ನ ಮರಿಗೆ ಮರವೇರುವುದನ್ನು ಕಲಿಸುವ ವೀಡಿಯೋ ಒಂದನ್ನು ತುಮರಿ ನೋಡಿದ್ದಾನೆ. ಭಾರತೀಯ ಮದುವೆಗಳಲ್ಲಿ ಸುತ್ತಲ ಬಂಧುಬಳಗ ಜೋಡಿಯ ಹಾದಿತಪ್ಪದಂತೆ ಅವರನ್ನು ಟ್ರ್ಯಾಕ್ ನಲ್ಲಿ ನಡೆಸುತ್ತದೆ. ಇಬ್ಬರಲ್ಲಿ ಯಾರಾದರೂ ತಪ್ಪು ಮಾಡುತ್ತಿದ್ದರೆ ಸಂಬಂಧಪಟ್ಟವರು ಅದನ್ನು ತಿಳಿದು ಮೂಗುದಾರ ಎಳೆಯುತ್ತಾರೆ. ಅಂತಹ ಸಾಮಾಜಿಕ ಬಾಂಧವ್ಯದಿಂದ ಸಂಸಾರ ಸರಿಯಾಗಿ ನಡೆಯುತ್ತಿತ್ತು; ಕ್ಷುಲ್ಲಕ ಕಾರಣಗಳಿಗೆ ಅಥವಾ ಸ್ವೇಚ್ಛಾಚಾರಕ್ಕೆ ಬೇಕಾಗಿ ವಿವಾಹ ವಿಚ್ಛೇದನ ನಡೆಯುತ್ತಿರಲಿಲ್ಲ. ಈಗೇನಾಗಿದೆ ಹೇಳಿ? ಅಂತಹ ಹಿರಿಯರ ಮಾತನ್ನು ಕೇಳಿದ್ದರೆ ಇಂದಿನ ಖೋರಿಸ್ವಾಮಿಯ ಏಕಾಂತಕ್ಕೆ ಯಾವಾಗಲೋ ನಿಯಂತ್ರಣ ಬಿದ್ದು ಅವನನ್ನು ಓಡಿಸಲಾಗುತ್ತಿತ್ತು. ವಿಭಕ್ತ ಕುಟುಂಬ, ಜೋಡಿಯ ಮಧ್ಯೆ ಜರುಗುವ ವ್ಯವಹಾರ ಪಾಲಕರಿಗೂ ಗೊತ್ತಾಗೋದಿಲ್ಲ. ಹೀಗಾಗಿ ಸಣ್ಣಪುಟ್ಟ ಕಾರಣಗಳಿಗೂ ವಿಚ್ಛೇದನ ಘಟಿಸುತ್ತಿದೆ.
ಮಠದಲ್ಲೂ ಅಷ್ಟೆ. ಸಮಾಜದ ಮುಖಂಡರು ಎನಿಸುವ ಮಂದಿಯ ಸಮಿತಿ ಕಾಲಕಾಲಕ್ಕೆ ಸ್ವಾಮಿ ಎನಿಸಿದವನ ಮೇಲೆ ನಿಗಾ ಇರಿಸಬೇಕು. ಸಮಿತಿ ಹೇಳಿದ ಮಾತಿಗೆ ಕಿವಿಗೊಡದೆ ಅಡ್ಡಹಾದಿ ತುಳಿಯುತ್ತಿದ್ದರೆ, ಬೇಕಾಬಿಟ್ಟಿ ವ್ಯವಹಾರ ನಡೆಸುವುದು ಕಾಣುತ್ತಿದ್ದರೆ, ಸಂದೇಹಾಸ್ಪದ ನಡೆಗಳು ಕಂಡುಬಂದರೆ ಆ ಸಮಿತಿ ಸಮಾಜದ ಎಲ್ಲಾ ಭಕ್ತರಿಗೂ ವಿಷಯ ತಿಳಿಸಿ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು. ಸನ್ಯಾಸಿಯ ಕೈಗೆ ಸರ್ವಾಧಿಕಾರ ಕೊಟ್ಟು ಕೂತರೆ, ಒಂದೊಮ್ಮೆ ಅವ ಮೂರೂ ಬಿಟ್ಟ ಮಹಾಕಿರಾತಕನೇ ಆದರೆ ಈಗ ಆದಹಾಗೆ ಆಗುತ್ತದೆ. ಅವನಿಗೆ ಬೇಕಾದಂತೆ ಸಮಾಜವನ್ನು ಒಡೆಯುತ್ತಾನೆ. ಮಾಡಬಾರದ ಕೆಲಸಗಳನ್ನೇ ಮಾಡುತ್ತ ಹೊರಗಿನಿಂದ ಮಾಡಿಯೇ ಇಲ್ಲವೆಂದು ಸಮರ್ಥಿಸಿಕೊಳ್ಳುತ್ತಾನೆ.

ಯಾವುದೇ ಮಠದಲ್ಲೂ ಪೂರ್ವಾಶ್ರಮದ ಯಾವೊಂದು ಸಂಬಂಧಿಕರನ್ನೂ ಸನ್ಯಾಸಿ ಇರಿಸಿಕೊಳ್ಳಕೂಡದು ಎಂಬುದು ಒಂದು ಅಘೋಷಿತ ನಿಯಮ. ವಾಸ್ತವವಾಗಿ ಹಾಗೆ ಇರಿಸಿಕೊಳ್ಳುವುದರಿಂದ ಹಿಂದಿನ ದಿನಗಳ ಭಾವನೆ ಕೆಣಕಿ ಮನಸ್ಸಿಗೆ ವ್ಯಾಮೋಹದ ಮುಸುಕು ಬೀಳುತ್ತದೆ ಎಂಬುದು ಒಂದು ಕಾರಣ. ಎರಡನೆಯದಾಗಿ ಮಠದ ಆಸ್ತಿ-ಪಾಸ್ರಿಗಳನ್ನು ಅವರು ಸಲುಗೆಯಿಂದ ತಮ್ಮದಾಗಿಸಿಕೊಳ್ಳಬಹುದು. ಮಠದ ಹಣವನ್ನು ತಮ್ಮದೆಂದು ಬಳಸಿಕೊಳ್ಳಬಹುದು.

ಹಾವಾಡಿಗ ಮಠದಲ್ಲಿ ಈ ವಿಕೃತಕಾಮಿ ಪಟ್ಟಕ್ಕೆ ಬಂದಾಗಿನಿಂದ ಕುಳ್ಳಬಾವಯ್ಯ ಜೊತೆಗೇ ಇದ್ದಾನೆ. ಅನೇಕರು ಪ್ರತ್ಯಕ್ಷ ನೋಡಿರುವಂತೆ ಪೂರ್ವಾಶ್ರಮದ ಅಪ್ಪ, ಅಮ್ಮ, ತಂಗಿ ಎಲ್ಲರೂ ಮಠದಲ್ಲೆ ಬಹಳ ಕಾಲ ಇರುತ್ತಾರೆ. ಮಠದ ಅಧಿಕಾರ ವಹಿಸಿಕೊಂಡಾಗಿನಿಂದ ಮಾಣಿಯ ಪೂರ್ವಾಶ್ರಮದ ಮನೆಯಲ್ಲಿ ಆರ್ಥಿಕತೆ ಬಹಳ ಮೇಲ್ದರ್ಜೆಗೇರಿದೆ. ಅವರೆಲ್ಲ ಬೇನಾಮಿ ಹೆಸರುಗಳಲ್ಲಿ ಆಸ್ತಿಪಾಸ್ತಿ ಮಾಡಿಕೊಂಡಿದ್ದಾರೆ. ಯಾವುದಕ್ಕೂ ಇರಲಿ ಅಂತ ’ಸರ್ವಸಂಗ ಪರಿತ್ಯಾಗಿ’ಯ ಅಂಗಸಂಗದಲ್ಲಿ ನಂಗಾ ನಾಚ್ ನಡೆಸುತಿದ್ದವಳ ಮೂಲಕ ಎಲ್.ಐ.ಸಿ ಪಾಲಿಸಿಯನ್ನೂ ಮಾಡಿಸಿಯಾಗಿದೆ. ಅದೆಲ್ಲವೂ ಕಣ್ಣಿಗೆ ಢಾಳಾಗಿ, ಆಧಾರ ಸಹಿತವಾಗಿ ಕಾಣುತ್ತದೆ. ಹೀಗೆ ಕಾಣುವುದನ್ನೆಲ್ಲ ಅಲ್ಲಗಳೆಯುವ ತಾಲಿಬಾನಿಗಳಿಗೆ ಏನೆನ್ನಬೇಕು? ಕಂಡರೂ ಕಾಣದಂತಿರುವ ಬಕರಾಭಕ್ತರಿಗೆ ಏನೆನ್ನಬೇಕು? ಇದನ್ನೆಲ್ಲ ನೋಡಿದಾಗ ಭಕ್ತ ಗಂಡಸರೆಲ್ಲ ಗಂಡಸರೇ ಎಂಬ ಅನುಮಾನವೂ ಬರುತ್ತದೆ!
ಇಲ್ಲಿಯವರೆಗೆ ಆದದ್ದು ಆಗಿಹೋಯ್ತು. ಇನ್ನು ಮುಂದೆ ಬರುವ ಸನ್ಯಾಸಿಗೆ ಆಡಳಿತದ ಸಮಸ್ಯೆ ಬೇಡ. ಅದನ್ನು ಚುನಾಯಿತ ಸಮಿತಿಯೇ ನಡೆಸಬೇಕು. ವಾರ್ಷಿಕ ಲೆಕ್ಕಪತ್ರಗಳ ಪರಿಶೀಲನೆ, ಅಢಾವೆ ಪತ್ರಿಕೆ ಎಲ್ಲವೂ ಇರಬೇಕು. ಸದ್ಯಕ್ಕೆ ಈ ಕಳ್ಳಯ್ಯ ಕುಳ್ಳಯ್ಯ, ಮಠದ ಅಷ್ಟೂ ಆಸ್ತಿಯನ್ನು ವಿವೇವಾರಿ ಮಾಡಿ ಸ್ವಾಹಾ ಮಾಡಿಟ್ಟುಹೋಗದಂತೆ ಸಮಾಜದ ಮುಖಂಡರು ಶೀಘ್ರವಾಗಿ ನಿಗಾವಹಿಸಿ, ಕಳೆದ ಎರಡು ದಶಕಗಳ ಲೆಕ್ಕಪತ್ರಗಳನ್ನು ಪರಿಶೀಲಿಸಿ, ಹಿಂದೆ ಮಠದಲ್ಲಿದ್ದ ಆಸ್ತಿಗಳಲ್ಲಿ ಏನೇನು ಇಲ್ಲವಾಗಿದೆ ಎಂಬುದನ್ನು ಗಮನಿಸಬೇಕು. ಮಠದ ವ್ಯವಹಾರಗಳಲ್ಲಿ ಬಾವಯ್ಯನದೇ ಪ್ರಮುಖ ಪಾತ್ರ ಇರುವುದರಿಂದ ಕುಲಪತಿ ಬಾವಯ್ಯನನ್ನು ಎಲ್ಲಿಗೂ ಓಡದಂತೆ ಹಿಡಿದಿಟ್ಟುಕೊಳ್ಳಬೇಕು.

Thumari Ramachandra

https://www.facebook.com/groups/1499395003680065/permalink/1679081802378050/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s