ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬ ಧರ್ಮಲಂಡರು

ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬ ಧರ್ಮಲಂಡರು

ಮನುಷ್ಯನಿಗೊಂದು ಕನಿಷ್ಠ ಮರ್ಯಾದೆ ಎಂಬುದು ಇರಬೇಕು. ಎಲ್ಲವನ್ನೂ ಬಿಟ್ಟರೆ ಹೇಗಾಗುತ್ತಾರೆ ಎಂಬುದಕ್ಕೆ ಹೋರಿಸ್ವಾಮಿಯೇ ಸಾಕ್ಷಿ. ಹೊಳೆ ದಾಟುವವರೆಗೆ ಇವನಿಗೆ ಯಾವ ಅಂಬಿಗರ ಅಗತ್ಯತೆ ಇತ್ತೋ ಈಗ ಅದಿಲ್ಲ, ಹೀಗಾಗಿಯೇ ಮಠದಲ್ಲಿ ಹಿಂದೆ ಇದ್ದ ಹಿರಿತಲೆಗಳಿಗೆ ಇಂದು ಅವಕಾಶವಿಲ್ಲ.

ಹೋರಿಸ್ವಾಮಿ ಕಚ್ಚೆಹರುಕುತನವನ್ನು ಮುಚ್ಚಲು ಹಲವಾರು ಅಡ್ಡವೇಷಗಳನ್ನು ಕಟ್ಟಿಕೊಳ್ಳುತ್ತಿದ್ದಾನೆ. ಯಾವ್ಯಾವುದೋ ಜನಾಂಗದ ಯಾರ್ಯಾರನ್ನೆಲ್ಲ ಕರೆದು ಭಕ್ಷೀಸು ಕೊಟ್ಟು ತನ್ನ ಪರವಾಗಿ ಬ್ಯಾಟಿಂಗ್ ಮಾಡಿರೆಂದು ವಿನಂತಿಸುತ್ತಿದ್ದಾನೆ. ಇದಕ್ಕಾಗಿ ರಾಜ್ಯಾದ್ಯಂತ ಹಲವು ಕಡೆ ಧರ್ಮಜಾಗೃತಿಯ ಸೋಗಿನಲ್ಲಿ ಸಮಾವೇಶಗಳನ್ನು ನಡೆಸಲು ಹೋರಿಸ್ವಾಮಿಯ ತಾಲಿಬಾನ್ ಬಳಗ ಮುಂದಾಗಿದೆ.

ಬೇನಾಮಿ ಹೆಸರಿನಲ್ಲಿ ಹಣಹೂಡಿದ ಬಸ್ಸುಗಳ ಮಾಲೀಕರಿಗೆ ಹೇಳಿ ಹಲವಾರು ಬಸ್ಸುಗಳಲ್ಲಿ ಎಲ್ಲೆಲ್ಲಿಂದಲೋ ಪಾಪದ ಜನರನ್ನು ಕರೆತರಲಾಗಿದೆ. ಅವರಿಗೆಲ್ಲ ಮಠವೆಂದರೇನು ಮತ್ತು ಪರಂಪರೆ ಯಾವುದು ಏನೊಂದೂ ಗೊತ್ತಿಲ್ಲ. ಅಸಲಿಗೆ ಈ ಹೋರಿಸ್ವಾಮಿ ಹೇಗೆ ಪೀಠಕ್ಕೆ ಬಂದ ಎಂಬುದೂ ಸಹ ಗೊತ್ತಿಲ್ಲ. ರಮಣೀಧರ ಪರಬುಗಳು ಇವನ ಪರವಾಗಿ ವಕಾಲತ್ತು ವಹಿಸುತ್ತಾರೆ. ಆ ರಮಣೀಧರ ಪರಬುಗಳಿಗೆ ಮಠದ ಇತಿಹಾಸವೇನು ಗೊತ್ತಿದೆ? ಮಠಕ್ಕೆ ಏನಾದರೂ ಕೊಟ್ಟಿದ್ದಾರೋ? ಇಲ್ಲ. ಈ ಕಪಟ ಸನ್ಯಾಸಿಕೊಡುವ ಕಾಸಿಗೆ ಹಲ್ಲುಗಿಂಜುತ್ತ ಬೆಂಬಲ ಕೊಡುತ್ತಾರೆ; ಮುಂಡೇ ಮದ್ವೇಲಿ ಉಂಡೋನೆ ಜಾಣ ಅನ್ನೋ ಹಾಗೆ. ನಮ್ಮ ಸಮಾಜದ ಅಸಂಖ್ಯಾತ ಭಕ್ತರು ಸಹಸ್ರಾರು ವರ್ಷಗಳಿಂದ ಕಟ್ಟಿ ಬೆಳೆಸಿದ ಧಾರ್ಮಿಕ ಸಂಸ್ಥೆಯ ಅಂಗಾಕಾರವನ್ನೇ ಬುಡಮೇಲು ಮಾಡಿ ಬದುಕಿಕೊಳ್ಳುವ ಪ್ರಯತ್ನ ಹೋರಿಸ್ವಾಮಿಯದ್ದು. ಭಕ್ತರು ದೇಣಿಗೆ/ಕಾಣಿಕೆಯಾಗಿ ಸಲ್ಲಿಸಿದ ಧನ-ಕನಕಗಳೆಲ್ಲ ಇವನ ತೆವಲು ಮತ್ತು ಕೋರ್ಟುಗಳ ವ್ಯವಹಾರಕ್ಕೆ ಖರ್ಚಾಗುತ್ತಿವೆ.

ಮಠ ಮೂಲದಲ್ಲಿ ಒಂದೇ ಜನಾಂಗಕ್ಕೆ ಸಂಬಂಧಿಸಿದ್ದು. ಕಳೆದೊಂದು ಶತಮಾನದಿಂದ ಇತರ ಸಮಾಜದ ಕೆಲವರು ಭಕ್ತಿಯಿಂದ ನಡೆದುಕೊಂಡಿದ್ದು ನಿಜ. ಅಂದಮಾತ್ರಕ್ಕೆ ಅವರೆಲ್ಲ ಮಠಕ್ಕೆ ಹೆಚ್ಚಿನ ಮಟ್ಟದಲ್ಲಿ ದೇನಿಗೆ, ಕಾಣಿಕೆ ಕೊಟ್ಟವರಲ್ಲ. ಅವರ ಜೀವನವೇ ಅವರಿಗೆ ಕಷ್ಟ ಎಂಬಂತಹ ಬಡತನದಲ್ಲಿ ಅವರಿದ್ದರು.ಊರಿಗೆ ಯಾರೋ ಗುರುಗಳು ಬಂದಿದ್ದಾರಂತೆ ಎಂಬ ಸುದ್ದಿ ಕೇಳಿ ಅಷ್ಟಿಷ್ಟು ಭಯ-ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು.

ಸಾವಿರಾರು ವರ್ಷಗಳಿಂದ ಮಠವನ್ನು ಕಟ್ಟಿ ಬೆಳೆಸಿದ್ದು ಒಂದೇ ಜನಾಂಗ. ನೂರಕ್ಕೆ ತೊಂಬತ್ತರಷ್ಟು ಮಠ ಊರ್ಜಿತಾವಸ್ಥೆಯಲ್ಲಿದ್ದುದು ಮತ್ತು ಬೆಳೆದದ್ದು ಒಂದೇ ಜನಾಂಗದಿಂದ. ಮಠದ ಮೂಲ ದಾಖಲೆಪತ್ರಗಳಲ್ಲಿ ಹೇಳಿದ್ದೂ ಅದನ್ನೇ. ಮಠದ ಯತಿಯ ಆಯ್ಕೆಯ ವಿಷಯದಿಂದ ಹಿಡಿದು ಆಡಳಿತದ ವಿಷಯದಲ್ಲಿ ಕೇವಲ ಒಂದೇ ಜನಾಂಗಕ್ಕೆ ಮಾತ್ರ ಹಕ್ಕು.

ಈ ಬಿಕನಾಸಿ ಹೋರಿಸ್ವಾಮಿ ಸಮಾವೇಶಗಳನ್ನು ಆಯೋಜಿಸಿದ ನಂತರ ಮಠ ಕೇವಲ ಒಂದೇ ಜನಾಂಗಕ್ಕೆ ಸೇರಿದ್ದಲ್ಲ, ಎಲ್ಲರಿಗೂ ಸೇರಿದ್ದು ಎಂದು ಏಕಾಏಕಿ ಘೋಷಿಸುತ್ತ ಬಂದ. ಹಾಗಾದರೆ ಮಠಕ್ಕೆ ಮುಂದೆ ಯಾವುದೋ ಜನಾಂಗದ ಹುಡುಗನನ್ನು ಸ್ವಾಮಿಯನ್ನಾಗಿ ಮಾಡಬಹುದೇ? ಸನ್ಯಾಸಿಯ ಆಯ್ಕೆ ಚುನಾವಣೆಯಂತರ ರಾಜಕೀಯ ಪ್ರಕ್ರಿಯೆಯಿಂದ ನಡೆಯುತ್ತದೆಯೇ? ಇಲ್ಲ; ಹೀಗಾಗಲು ಶಂಕರರ ಅಪ್ಪಣೆಯಿಲ್ಲ. ಅದಕ್ಕಷ್ಟು ಸಬಲ ಕಾರಣಗಳಿವೆ. ಇದು ಸಮಾವೇಶಗಳ ಮತ್ತು ಹಗರಣಗಳ ಮಠ ಅಲ್ಲ.

ಮಠದ ಹಿರಿಯ ಸದ್ಭಕ್ತರೆಲ್ಲ ದಡ್ಡರಲ್ಲ; ಅವರಲ್ಲಿ ಅನೇಕರು ಮಠದ ಪೂರ್ವೇತಿಹಾಸಗಳನ್ನು ಬಲ್ಲವರು. ಅವರಿಗೆಲ್ಲ ಮಠ ಸಾಗಿಬಂದ ಹಾದಿ ಗೊತ್ತು. “ಮೊನ್ನೆಮೊನ್ನೆಯವರೆಗೂ ತಮ್ಮ ಹೆಂಡತಿ-ಮಕ್ಕಳನ್ನು ಮಠಕ್ಕೆ ಕರೆತರುತ್ತಿದ್ದರು ಈಗ ವಿರೋಧಿಸುತ್ತಿದಾರೆ” ಎಂದರೆ, ಅದು ಪೀಠದ ಮೇಲಿನ ಗೌರವದಿಂದ ಮಾತ್ರ. ಅನೇಕರಿಗೆ ಈ ಕಚ್ಚೆಹರುಕನ ಸಂಪೂರ್ಣ ಇತಿಹಾಸ ಬಯಲಾಗಿದ್ದರೂ ಅವರೇ ಹೇಳುವಂತೆ. “ಸ್ವಾಮಿಗಳೇ, ಅದು ಸರಿಯಲ್ಲ, ಸನ್ಯಾಸಿಗಳು ಹೆಂಗಸರೊಡನೆ ಏಕಾಂತ ನಡೆಸಬಾರದು, ಹೆಂಗಸರ ಮೈ ಮುಟ್ಟಬಾರದು, ಅವರಿಂದ ನರ್ತನಾದಿ ಸೇವೆಗಳನ್ನು ಮಾಡಿಸಬಾರದು” ಎಂದು ಸಾಕಷ್ಟು ಸರ್ತಿ ತಿಳುವಳಿಕೆ ಹೇಳಿದ್ದಾರೆ. ಆ ಕಳ್ಳ ಕೇಳಲಿಲ್ಲ. ಅವನಲ್ಲಿ ಅಹಂಕಾರ ಅದೆಷ್ಟಿದೆಯೆಂದರೆ ಹಾಗೆ ಬುದ್ಧಿ ಹೇಳಿದವರನ್ನೆಲ್ಲ ಬಹಿಷ್ಕರಿಸುತ್ತಲೇ ಬಂದ.

ಎಂತೆಂತಹ ಘನ ವಿದ್ವಾಂಸರು, ಘನಪಾಠಿಗಳು ಅವನ ಈ ಹಣಬಲ, ತೋಳ್ಬಲದ ಅಟಾಟೋಪದ ಮುಂದೆ ಸುಮ್ಮನಾಗಿಹೋದರು. ಹಳ್ಳಿಗಳಲ್ಲಿ ಮನೆಗಳ ಮೇಲೆ ತಾಲಿಬಾನಿಗಳು ದಾಳಿ ನಡೆಸುತ್ತಾರೆ-ಬದುಕಲಿಕ್ಕೆ ಕೊಡೋದಿಲ್ಲ ಎಂಬ ಭಯದಿಂದ ಬಹಳಜನ ಹೋರಿಸ್ವಾಮಿಯ ವಿಷಯವನ್ನು ಮಾತನಾಡುವುದನ್ನೇ ಬಿಟ್ಟರು! ಗೊತ್ತಿದ್ದರೂ ಬಾಯ್ದೆರೆದು ಸತ್ಯ ಹೇಳದೆ, “ದೇವರನ್ನು ಜಪಿಸುವ ಬದಲು ನನ್ನ ಹೆಸರನ್ನೇ ಜಪಿಸಿ” ಎಂಬ ದಾನವರಾಜರ ಆಜ್ಞೆಯಂತೆ ಮೂಕರಾಗಿ ಮೂಢರಂತೆ ಹೋರಿಸ್ವಾಮಿಗೇ ಜೈಕಾರ ಹಾಕಿದರು. ಈಗ ಆಂತವರೆಲ್ಲ ವಿರೋಧಿ ಬಣ ಇದೆ ಎಂಬುದನ್ನು ಗುರುತಿಸಿ ಧೈರ್ಯವಾಗಿದ್ದಾರೆ.

ಸದ್ಗುಣಿಗಳು, ಸತ್ಯನಿಷ್ಠರು ಎಷ್ಟುಕಾಲ ಅಧರ್ಮವನ್ನು ಧರ್ಮವೆಂದು ಒಪ್ಪಿಕೊಳ್ಳುತ್ತಾರೆ? ಅವರಿಗೆ ಇಬ್ಬಂದಿತನ ಕಾಡಿತ್ತು. ಮೊದಲನೆಯದಾಗಿ ಪೀಠದ ಘನತೆ ಗೌರವ, ಎರಡನೆಯದು ಸಮಾಜದ ಮಹಿಳೆಯರ ಶೀಲ. ಯಾವುದನ್ನು ಉಳಿಸಿಕೊಳ್ಳುವುದು. ಎರಡರಲ್ಲಿ ಮೊದಲನೆಯದಕ್ಕೆ ಪ್ರಥಮ ಪ್ರಾಶಸ್ತ್ಯ ಕೊಟ್ಟು, ಪರಂಪರೆಯ ಪೀಠದ ಸನ್ಯಾಸಿಯನ್ನು ತಿದ್ದಲು ಪ್ರಯತ್ನಿಸಿದರು. ಅದು ಸಾಧ್ಯವಾಗುತ್ತಿಲ್ಲ ಎಂದು ಖಚಿತಗೊಂಡ ನಂತರ ಸಮಾಜದ ಮಹಿಳೆಯರ ಶೀಲವನ್ನಾದರೂ ರಕ್ಷಿಸೋಣ ಎಂದು ಅವರೆಲ್ಲ ನಿರ್ಧರಿಸಿದರು.

ಇಲ್ಲಿರುವ ಯಾರಿಗೂ ಪೀಠವಾಗಲೀ ಮಠದ ಆಸ್ತಿಯಾಗಲೀ ಬೇಕಿಲ್ಲ. ವಾಸ್ತವವವಾಗಿ ಇಲ್ಲಿರುವವರೆಲ್ಲ ಮಠಕ್ಕೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ, ಸಾಕಷ್ಟು ದೇಣಿಗೆ, ಕಾಣಿಕೆಗಳನ್ನು ಕೊಟ್ಟಿದ್ದಾರೆ. ಕಳ್ಳಯ್ಯ ಕುಳ್ಳಯ್ಯ ಹಾಕಿದ ಯೋಜನೆಗಳಲ್ಲಿ ಅವರು ಹೇಳಿದಾಗಲೆಲ್ಲ ತೆತ್ತಿದ್ದಾರೆ. ಬಾವ ನೆಂಟ ಸೇರಿ ಸಮಾಜದ ಅನೇಕ ಸದ್ಗೃಹಸ್ಥರನ್ನು ಸುಲಿದುಬಿಟ್ಟಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಈಗ ಹೋರಿಸ್ವಾಮಿ ಬಳಗ, “ಆಸ್ತಿ ಹೊಡೆದುಕೊಳ್ಳುವ ಷಡ್ಯಂತ್ರ” ಎನ್ನತೊಡಗಿದೆ; ಬೇರೆ ಮಠಗಳ ಹೆಸರು ಇನ್ನೂ ಹೇಳುತ್ತಲೇ ಇದ್ದರೆ ಅಲ್ಲಿನ ಕೋಟ್ಯಧಿಕ ಭಕ್ತರು ಇಲ್ಲಿಗೆ ಬಂದು ಮಠಮಾನ್ಯಗಳನ್ನು ಒಂದೇ ದಿನದಲ್ಲಿ ನಿರ್ನಾಮ ಮಾಡಿಯಾರು. ಹೀಗಾಗಿ ಅವರ ಹೆಸರುಗಳನ್ಹು ಕೈಬಿಟ್ಟು, ಆಸ್ತಿಯ ಮೇಲೆ ಕಣ್ಣಿಟ್ಟ ಹದಿನಾಲ್ಕು ಹದಿನೈದು ಜನ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳತೊಡಗಿದ್ದಾರೆ.

ಹಾಗಾದರೆ ಅವರು ಹೇಳುವ ಷಡ್ಯಂತ್ರದಲ್ಲಿ ಸದ್ಗುಣಿಗಳು, ಸತ್ಯವಂತರೂ ಸೇರಿರುವರೇ? ಅವರಿಗೂ ಆಸ್ತಿಯ ಆಸೆಯೇ? ಇಲ್ಲವೇ ಇಲ್ಲ. ಸದ್ಗುಣಿಗಳು ಮಠಕ್ಕೆ ಇಲ್ಲಿಯವರೆಗೆ ಎರಡು ಕೋಟಿಗಿಂತ ಅಧಿಕ ದೇಣಿಗೆ ನೀಡಿದ್ದಾರೆ. ಇಂದಿನ ಕಾಮಾಶ್ರಮವಾಗಿ ಪರಿವರ್ತಿತವಾದ ಕಟ್ಟಡದ ನಿರ್ಮಾಣದ ಪ್ರಮುಖ ರೂವಾರಿಯೇ ಅವರು. 1998ರಲ್ಲಿ ಅಲ್ಲಿನ ಜಾಗ ಮತ್ತು ಮುಂದೆ ನಿರ್ಮಾಣಗೊಳ್ಳಬೇಕಾದ ಕಟ್ಟಡಗಳ ನೀಲನಕ್ಷೆ, ತಗಲುವ ಖರ್ಚಿವೆಚ್ಚ ನೋಡಿದವರು ನಮ್ಮ ಸಮಾಜದಿಂದ ಅಷ್ಟು ಬೇಗ ಅದೆಲ್ಲ ಸಾಧ್ಯವೇ ಎಂದುಕೊಂಡಿದ್ದರು. ಕೇವಲ ಮೂರ್ನಾಲ್ಕು ವರ್ಷಗಳಲ್ಲಿ ಅಭೂತಪೂರ್ವ ಕಟ್ಟಡ ತಲೆ ಎತಿ ನಿಂತಿತು!! ಅದಕ್ಕೆಲ್ಲ ಮೈನುಗ್ಗು ಮಾಡಿಕೊಂಡು, ತಮ್ಮ ಸ್ವಂತ ಖರ್ಚಿನಲ್ಲಿ ಹಲವರಿಗೆ ಫೋನ್ ಮಾಡಿ, ಕರೆದು, ತೋರಿಸಿ, ಮಠಕ್ಕಾಗಿ ಯಾಚಿಸಿ ಅದರ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಅವರಿಂದು ಬೇಕಾಗಿಲ್ಲ.

ಶಿಖರನಗರದಲ್ಲಿ ಕಾಮಾಶ್ರಮವಿರುವ ಜಾಗಕ್ಕೆ ಇಂದಿನ ಬೆಲೆ ಕನಿಷ್ಠ ಹತ್ತುಕೋಟಿ. ಅಷ್ಟುದೊಡ್ಡ ಜಾಗವನ್ನು ಮುಕ್ತಮನಸ್ಸಿನಿಂದ ದಾನಪತ್ರದ ಮೂಲಕ ಮಠಕ್ಕೆ ನೀಡಿ, ಜೊತೆಗೆ ಅಲ್ಲೊಂದು ಕಟ್ಟಡವನ್ನೂ ಕಟ್ಟಿ ಅರ್ಪಿಸಿದ ಕೃಶಕಾಯ ಭಟ್ಟರು ಇಂದು ಮಠದಿಂದ ಬಹಿಷ್ಕೃತರು.

ಉನ್ನತ ಹುದ್ದೆಯಲ್ಲಿದ್ದರೂ ತನ್ನ ಕಚೇರಿಯ ಕೆಲಸಗಳ ಧಾವಂತಗಳ ನಡುವೆ ಮಠಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದವರು ಸತ್ಯವಂತರು. ಮೊನ್ನೆಮೊನ್ನೆಯವರೆಗೆ ಹೋರಿಸ್ವಾಮಿಯ ಸಲುವಾಗಿ ತಟಸ್ಥರಾಗಿದ್ದವರಲ್ಲಿ ಅವರೂ ಒಬ್ಬರು. ಮೊನ್ನೆ ತನ್ನ ಅಂತರಂಗವನ್ನು ಬಹಿರಂಗಗೊಳಿಸಿದ ಮೇಲೆ ಅವರೂ ಷಡ್ಯಂತ್ರದಲ್ಲಿ ಭಾಗಿಗಳೆಂದು ನಮೂದಿಸಲಾಗಿದೆ!

ನಂಜಿಲ್ಲದ ಅಣ್ಣನವರು ಭಕ್ತಿಭಾವದಿಂದ ದೇವರಿಗೆ ಬೆಳ್ಳಿಯ ದೊಡ್ಡ ಮಂಟಪವನ್ನು ಮಾಡಿಸಿಕೊಟ್ಟಿದ್ದರು. ತಮ್ಮ ಹೊಸ ಕಾರನ್ನು ಹೋರಿಸ್ವಾಮಿಗೆ ವರ್ಷಗಟ್ಟಲೆ ಓಡಾಡಲು ಕೊಟ್ಟ ಜೊತೆಗೆ ಅದರ ರಿಪೇರಿ ಕೆಲಸಗಳಿಗೂ ತಾವೇ ವ್ಯಯಿಸಿದವರು. ಮಠದಲ್ಲಾಗುತ್ತಿರುವ ಅನ್ಯಾಯ, ಅತ್ಯಾಚಾರಗಳನ್ನು ದಶಕದ ಹಿಂದೆಯೇ ಗ್ರಹಿಸಿ ಮಠದಿಂದ ಹೊರಗೆ ಬಹುಕಾಲ ತಟಸ್ಥವಾಗಿ ಉಳಿದವರು. ಅವರೀಗ ವಿರೋಧಿಸುತ್ತಿದ್ದಾರೆಂಬ ಕಾರಣದಿಂದ ಷಡ್ಯಂತ್ರದಲ್ಲಿ ಅವರೂ ಭಾಗಿಗಳು!

ಈ ಯಾದಿ ಬೆಳೆಯುತ್ತಲೇ ಹೋಗುತ್ತದೆ. ಇದಕ್ಕೆಲ್ಲ ತಾಲಿಬಾನಿಗಳು ಏನೆನ್ನುತ್ತಾರೆ? ಮಠದ ಅಸ್ತಿಯನ್ನು ಹೊಡೆದುಕೊಳ್ಳುವ ಹಾಗಿದ್ದರೆ ಇವರೆಲ್ಲ ಹಾಗೆ ನಡೆದುಕೊಳ್ಳುತ್ತಿದ್ದರೇ? ತುಮರಿ ಹೇಳಿದ ಪ್ರತಿಯೊಂದು ನೈಜ ಘಟನೆಗಳ ಹಿಂದೆ ಇರುವ ವ್ಯಕ್ತಿಗಳ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಹೇಳುತ್ತಿಲ್ಲ. ಆದರೆ ತುಮರಿಗೆ ಎಲ್ಲರ ಹೆಸರುಗಳೂ ಗೊತ್ತಿವೆ. ಕಾಗದದ ಬೊಂಬೆಗಳಿಗೆ ಸಮಯದಲ್ಲಿ ಜೀವ ಬರುತ್ತದೆ!

ಮೊನ್ನೆ ಮೊನ್ನೆ ಬಂದ ಐಟಿ,ಬಿಟಿ ಬಚ್ಚಾ ಬಚ್ಚಿಯರು ಸಮಾಜದ ಹಿರಿಯರ ವಿರುದ್ಧ ಹರಿಹಾಯುವುದು ನೋಡಿದರೆ ತಮ್ಮಿಂದಲೇ ಮಠ ನಡೆಯುತ್ತಿದೆ ಎಂದುಕೊಂಡಿರುವುದು ಸ್ಪಷ್ಟವಾಗುತ್ತದೆ. ಆ ಕಚಡಾಗಳಿಗೆ ಪರಂಪರೆಯ ಸಂಪ್ರದಾಯಗಳೇನು ಗೊತ್ತು? ಮಹಿಳೆಯರು ಸ್ವಾಮಿಗಳ ಕೈ ಹಿಡಿದು ನರ್ತನ ಮಾಡಿದರೂ ಸರಿಯೆನ್ನುತ್ತಾರೆ. ಬೇಕಾದರೆ ಮ್ಯಾಂಗೋಕುಳಿಯನ್ನೇ ಕೇಳಿ.

ಮಗ ಚೆನ್ನಾಗಿರಲಿ ಎಂದು ಅಪ್ಪ ಹೊಟೆಬಟ್ಟೆ ಕಟ್ಟಿ ದುಡಿದು, ಆಸ್ತಿಪಾಸ್ತಿ ಮಾಡಿ ಮಗನನ್ನು ಬೆಳೆಸುವ ಹೊತ್ತಿಗೆ ಅಪ್ಪನಿಗೆ ಶ್ರೀಮಂತಿಕೆ ಬಂತು. ಅಪ್ಪ ಮುದುಕಾದ, ಮಗ ಮನೆಯ ಅಧಿಕಾರ ಹಿಡಿದ. ಅಪ್ಪನ ಸಂಪ್ರದಾಯಬದ್ಧ ನಡೆಯನ್ನು ವಿರೋಧಿಸಿ ಕುಡಿತ, ಹೆಣ್ಣಿನಗೀಳು ಇರಿಸಿಕೊಂಡ ಮಗನನ್ನು ಅಪ್ಪ ಗದರಿಕೊಳ್ಳುತ್ತಾನೆ, ತಿದ್ದಲು ಪ್ರಯತ್ನಿಸುತ್ತಾನೆ. ಹೇಗೂ ಅಧಿಕಾರ ಕೈಗೆ ಬಂದಿದೆ; ಅಪ್ಪ ಇದ್ದರೆಷ್ಟು ಇಲ್ಲದಿದ್ದರೆಷ್ಟು? ಅಪ್ಪನನ್ನು ಕರೆದು,”ನೀ ಯಾರೋ ದಾರಿಹೋಕ, ಎಲ್ಲಿಗೆ ಹೋಗ್ತಿಯೋ ಹೋಗು, ನಿನಗೂ ಈ ಮನೆಗೂ ಸಂಬಂಧವಿಲ್ಲ” ಎಂದರೆ ಹೇಗಿರುತ್ತದೆ. ಹಾಗಿದೆ ಹಾವಾಡಿಗ ಮಠದ ಸನ್ಯಾಸಿಯ ನಡೆ.

ಒಂದಂತೂ ಸ್ಪಷ್ಟ- ನಮಗೆ ಮಠದ ಆಸ್ತಿಪಾಸ್ತಿಗಳಲ್ಲಿ ಕಿಲುಬು ಕಾಸಿನಷ್ಟೂ ಬೇಕಾಗಿಲ್ಲ. ಮಠದಲ್ಲಿ ಕಾಮ ನೆಲೆಸಿದೆ; ರಾಮ ಬಿಟ್ಟು ಹೋಗಿದ್ದಾನೆ. ಮಠದ ಸನ್ಯಾಸಿ ಕಚ್ಚೆಹರುಕನಾಗಿ ಅದು ಕಾಮಾಶ್ರಮವಾಗಿದೆ. ಅವನನ್ನು ಓಡಿಸಿ ಅಲ್ಲಿ ನಿಜವಾಗಿಯೂ ಲೌಕಿಕ ಜೀವನದಲ್ಲಿ ಆಸಕ್ತಿ ಇರದ, ವಿರಕ್ತ ಪ್ರಾಮಾಣಿಕ ಸನ್ಯಾಸಿಯೊಬ್ಬನನ್ನು ನೇಮಿಸಿ. ಮತ್ತೆ ರಾಮನನ್ನು ಮರಳಿ ಕರೆತರಬೇಕು ಎಂಬುದು ಸದ್ಭಕ್ತರ ಆಸೆ.

ಇಲ್ಲಿ ಇನ್ನೊಂದನ್ನು ಹೇಳಬೇಕು-ಪೀಠವನ್ನೇ ಬಿಟ್ಟುಹೋಗು ಎಂದು ಪಟ್ಟು ಹಿಡಿದಿದ್ದಕ್ಕೆ ಕಾರಣವೇ ಶುದ್ಧೀಕರಣ. ಮಠದಲ್ಲಿ ಪೀಠದಲ್ಲಿ ಅನೈತಿಕ ಚಟುವಟಿಕೆ ನಡೆಯಕೂಡದು. ನೈತಿಕತೆ ಕಳೆದುಕೊಂಡ ಹೋರಿಸ್ವಾಮಿ ಪೀಠದಿಂದ ತೊಲಗಬೇಕು ಎಂಬುದೇ ಆದ್ಯತೆಯ ವಿಷಯ. ಅವನಿಗೆ ಶಿಕ್ಷೆ ಆಗಬೇಕು ಎಂಬುದು ನಂತರ ಬರುವ ವಿಷಯ. ಒಮ್ಮೆ ಪೀಠ ಬಿಟ್ಟರೆ ಬೀದಿ ನಾಯಿಯೂ ಸಹ ಮೂಸಿ ನೋಡದ ಸ್ಥಿತಿಗೆ ಹೋಗುತ್ತೇನೆಂಬ ಆಲೋಚನೆ ಬಂದಂದಿನಿಂದ ಹೋರಿ ಪಟ್ಟಭದ್ರವಾಗಿ ಕುಳಿತಿದೆ. ಮಠದ ನಿರ್ಮಾತೃಗಳನ್ನೇ ಮಠಕ್ಕೆ ಸಂಬಂಧವಿಲ್ಲದವರು ಎಂದು ಸಾರುತ್ತ, ಯಾರ್ಯಾರನ್ನೋ ಕರೆದು ಅವರನ್ನೆಲ್ಲ ಮಠದ ಭಕ್ತರು ಎಂದು ಹೇಳುತ್ತಿದೆ. ನಮ್ಮ ಜನ ಮನೆಗೊಂದರಂತೆ ಕಲ್ಲು ಮತ್ತು ಹಳೆ ಚಪ್ಪಲಿಗಳನ್ನು ಎತ್ತಿಟ್ಟು ತಯಾರಾಗುವ ಸಮಯ ಹತ್ತಿರ ಬಂದಿದೆ. ನಡೆಯುವ ’ಕಿರೀಟೋತ್ಸವ’ ವೀಕ್ಷಣೆಗಾಗಿ ನಿಮ್ಮೆಲ್ಲರ ತುಮರಿ ಕಾದು ಕುಳಿತಿದ್ದಾನೆ.

Thumari Ramachandra

source: https://www.facebook.com/groups/1499395003680065/permalink/1679403529012544/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s