ಕಿರಿಸೊಸೆ ಭಾಗೀರಥಿ ಕೆರೆಗೆ ಹಾರವಾದಳು!

ಕಿರಿಸೊಸೆ ಭಾಗೀರಥಿ ಕೆರೆಗೆ ಹಾರವಾದಳು!

ಹೋರಿಸ್ವಾಮಿಯ ಬುಸ್ಸಪ್ಪನ ಪವಾಡದಿಂದ ಎಸ್.ಟಿ.ಡಿ ಬೂತಾದ ಮಾದಕ್ಕಿ ತಿಮ್ಮಕ್ಕನ ಪಿಜಿಮ್ಯಾನೇಜಿಂಗ್ ಪಾರ್ಟ್ನರ್ ಆಗಿರುವ ನೀತಾ ಗುಂಜಪ್ಪಳ ತಂಗಿಯ ಮಗಳು ನಿವ್ಯಾ ಎಂಬಾಕೆ ತಲೆಯಿಲ್ಲದ ಜನಾಂಗದ ಯಾವುದೋ ಹುಡುಗನೊಟ್ಟಿಗೆ ಲವ್ ಅಫೇರ್ ಇರಿಸಿಕೊಂಡಿದ್ದಳು. ಇನ್ನೇನು ಅವನನ್ನೇ ಮದುವೆಯಾಗುತ್ತಾಳೆ ಅಂತಾದಾಗ ನೀತಾ ಗುಂಜಪ್ಪ ನಿವ್ಯಾಳನ್ನು ಮಠದಹೋರಿಯೊಡನೆ ಒಮ್ಮೆ ಏಕಾಂತಕ್ಕೆ ಬಿಟ್ಟಳು. ಮರುದಿನದಿಂದಲೇ ನಿವ್ಯಾ ತನ್ನ ಲವರ್ ಬಾಯ್ ಜೊತೆ ನಾಪತ್ತೆಯಾಗಿದ್ದಾಳೆ ಎಂಬ ಸುದ್ದಿ ಇದೆ. ಹಾಗಾದರೆ ಏಕಾಂತದಲ್ಲಿ ನಿವ್ಯಾ ಹೋರಿಸ್ವಾಮಿಯ ದವಡೆಗೆ ಬಾರಿಸಿದಳೇ? ಇರಬಹುದು, ಗೊತ್ತಿಲ್ಲ.

ನೀತಾ ಗುಂಜಪ್ಪಳ ಗಂಡ ಬಹುದೂರದಲ್ಲಿ ಕತ್ತೆಯಂತೆ ದುಡಿಯುತ್ತಿದ್ದಾನೆ ಪಾಪ. ಹೆಂಡತಿ ಶೀಗಳ ಸೇವೆಯಲ್ಲಿ ತೊಡಗಿಕೊಂಡಿದ್ದಾಳೆ. ಪ್ರತಿದಿನ ಮುಂಜಾವಿನಲ್ಲೆದ್ದು ಮನೆಯ ಮುಂದಿರುವ ಹೂವುಗಳನ್ನೆಲ್ಲ ಕೊಯ್ದು, ಪೂಜೆಯ ಬುಟ್ಟಿಯೊಂದಿಗೆ ಮಠಕ್ಕೆ ಪೂಜೆಗೆಂದು ಹೋದರೆ ಹೋರಿಯೊಡನೆ ’ಸುಪ್ರಭಾತ ಸೇವೆ’ ನಡೆಸಿಯೇ ಬೇರೆ ಕೆಲಸಕ್ಕೆ ತೊಡಗುವುದು. ಹೋರೀಶ್ವರನ ಪವಾಡದಿಂದ ಪಿಜಿ ಚೆನ್ನಾಗಿ ನಡೆಯುತ್ತಿದೆಯಂತೆ. ಗಂಡನ ತಕರಾರಿಲ್ಲ; ಗೊತ್ತಿಲ್ಲ, ಬೇರೆ ವ್ಯವಸ್ಥೆ ಮಾಡಿಕೊಂಡಿರಬಹುದು. ಹೋರಿಯ ಏಕಾಂತಕ್ಕೆ ಸಿಕ್ಕಿದ ಬಹುತೇಕ ಹೆಂಗಸರು ಹುಡುಗಿಯರೆಲ್ಲ ಹೀಗೆಯೇ.

ಸಾಗರದ ಕೆಲವು ಹಳ್ಳಿಗಳ ಹರೆಯದ ಹುಡುಗಿಯರು ಮದುವೆಯಾದ ತಕ್ಷಣಕ್ಕೆ ವಿನಾಕಾರಣ ಪಾಪದ ಗಂಡಂದಿರಿಗೆ ವಿಚ್ಛೇದನ ನೀಡುತ್ತಿದ್ದಾರೆ. ಅಂತಹ ಹುಡುಗಿಯರ ಪೈಕಿ ಕೆಲವರು ಹೇಳುತ್ತಾರೆ, “ನಾನು ನನ್ನನ್ನು ಸಂಪೂರ್ಣ ಗುರುಗಳಿಗೆ ಅರ್ಪಿಸಿಕೊಂಡಿದ್ದೇನೆ. ಹೀಗಾಗಿ ನಾನು ವೈವಾಹಿಕ ಜೀವನದಲ್ಲಿ ಮುಂದುವರಿಯಲು ಇಷ್ಟಪಡುವುದಿಲ್ಲ.” ಮದುವೆಯಾಗುವ ಮೊದಲೆ ಹೇಳಿದ್ದರೆ ಮದುವೆಯಾದ ಪಾಪದ ಗಂಡುಮಕ್ಕಳು ತಮ್ಮದು ಎರಡನೆಯ ಮದುವೆ ಎಂಬ ಪಟ್ಟವನ್ನು ತಪ್ಪಿಸಿಕೊಳ್ಳಬಹುದಿತ್ತಲ್ಲವೇ? ಮದುವೆಯಾದ ಮೇಲೆ ವಿಚ್ಛೇದನ ನೀಡುವುದರಿಂದ ಆ ಗಂಡುಮಕ್ಕಳಿಗೆ ಆಗುವ ನೋವು, ಅಸಹನೆ ಎಂತದ್ದಿರಬಹುದು? ಯೋಚಿಸಿ.

ಐವತ್ತರ ಸುಂದರ ಹೆಂಗಸೊಬ್ಬಳು ಹೇಳ್ತಾಳೆ,”ಹತ್ತುವರ್ಷಗಳ ಹಿಂದೆ ನಾನು ಇನ್ನೂ ಚೆನ್ನಾಗಿ ಕಾಣುತ್ತಿದ್ದಾಗ ಆ ಹೋರಿ ಸ್ವಾಮಿ ನನ್ನನ್ನು ಬಿಟ್ಟಿದ್ದೇ ಹೆಚ್ಚು. ನಾವು ತಾಯಿ-ಮಕ್ಕಳೆಲ್ಲ ಮಠಕ್ಕೆ ಹೋಗುತ್ತಿದ್ದಾಗ ನಮ್ಮೆಲ್ಲರ ಮೇಲೂ ಹೋರಿಯ ವಕ್ರಗಣ್ಣು ನೆಟ್ಟಿತ್ತು. ಯಾವಾಗ ಕಾಮಭಿಕ್ಷೆ ನೀಡು ಎಂಬ ಪ್ರಸ್ತಾಪ ಬಂತೋ ಅಂದಿನಿಂದ ನಾವು ಮಠಕ್ಕೆ ಕಾಲುಹಾಕುತ್ತಿಲ್ಲ.”

ಹೋರಿಸ್ವಾಮಿ ಏಕಾಂತಕ್ಕೆ ಹೆಣ್ಣುಗಳನ್ನು ಕರೆದು ಅಮಲುಪದಾರ್ಥವನ್ನು ಪ್ರಸಾದವೆಂದು ತಿನ್ನಿಸಿ, ಮಂಪರಿನಲ್ಲಿರುವಾಗ ಪ್ರೇಮಭಿಕ್ಷೆಯ ಪ್ರಸ್ತಾಪ ಮಾಡಿ, ಅಪ್ಪಿಕೊಂಡು ಬಟ್ಟೆ ಬಿಚ್ಚಿ ಏನಾಗ್ತಿದೆ ಎಂದು ಗೊತ್ತಾಗುವುದರೊಳಗೇ ಹಾರಿ ಮುಗಿಸುವುದು ವಾಡಿಕೆಯಂತೆ. ಅದನ್ನು ಅನುಭವಿಸಿದವರಿಗೆ ಆ ಕೃತ್ಯ ಹೇಗೆ ನಡೆಯುತ್ತದೆ ಎಂಬುದು ಅರ್ಥವಾಗುತ್ತದಷ್ಟೆ ಬಿಟ್ಟರೆ ಕೇವಲ ಹೊರಗೆ ವೇದಿಕೆಯಲ್ಲಿ ’ಪ್ರವಚನ’ ನಡೆಸುವಾಗ, ಮನಸ್ಸು ಬಂದಷ್ಟು ಹೊತ್ತಿಗೆ ಮಹಾತಪಸ್ವಿಗಳ ಪೋಸು ಕೊಡುತ್ತ ಢಾಂಬಿಕ ಪೂಜೆ ನಡೆಸುವಾಗ ಹೋರಿಯ ನೈಜ ಮುಖ ಗೊತ್ತಾಗುವುದಿಲ್ಲ.

“ಶ್ಶೀ ಗುರುಗಳು ಕೋಣೆಯೊಳಗೆ ಕರೆದಾಗ ಹುಡುಗಿಯರನ್ನು ತೊಡೆಯಮೇಲೆ ಕೂರಿಸಿಕೊಂಡು ಚುಂಬಿಸುತ್ತಾರಲ್ವೇನೆ? ನಿನಗೂ ಹಾಗೇ ಮಾಡಿದ್ರಾ? ಅವರು ಯಾಕೆ ಹಾಗೆ? ನನಗಂತೂ ವಾಂತಿ ಬಂದ ಹಾಗಾಯ್ತು, ಏನೋ ಪ್ರಸಾದ ತಿನ್ನು ಅಂತ ಕೊಟ್ಟರು, ನಾನು ತಿನ್ನಲಿಲ್ಲ. ಇನ್ನು ಮಾತ್ರ ದೇವರಾಣೆ ಕೋಣೆಗೆ ಹೋಗಲಾರೆ” ಎಂದು ಸ್ಫುರದ್ರೂಪಿಯಾದ ಹುಡುಗಿಯೋರ್ವಳು ತನ್ನ ಸ್ನೇಹಿತೆಯೋರ್ವಳಲ್ಲಿ ಎದುರಿಸಿದ ಪರಿಸ್ಥಿತಿ ಹೇಳಿಕೊಂಡಿದ್ದಾಳೆ. “ಇಲ್ಲಿ ಎಲ್ಲವೂ ರಾಮನ ಇಚ್ಛೆಯಂತೆಯೇ ನಡೆಯುತ್ತದೆ. ರಾಮನಿಗೆ ನೀನು ನಿನ್ನನ್ನು ಸಂಪೂರ್ಣ ಸಮರ್ಪಿಸಿಕೋ, ರಾಮನೇ ಆಗಿರುವ ನಾವು ಕಾಮಭಿಕ್ಷೆ ಕೇಳುತ್ತೇವೆ. ಎಲ್ಲವನ್ನೂ ಸಮರ್ಪಿಸಿಕೊಂಡು ಮುಕ್ತಿಯನ್ನು ಪಡೆಯುವ ಅರ್ಹತೆಯನ್ನು ಪಡೆದುಕೋ” ಎಂದು ಹೋರಿ ಕೋರುತ್ತದೆ. ಪ್ರಸಾದ ತಿಂದ ಮಂಪರಿನಲ್ಲಿ ಹೋರಿಯಲ್ಲ ಯಾವ ಪುರುಷ ಎದುರಿಗೆ ಇದ್ದರೂ ಅವ ಮಾಡುವುದನ್ನೆಲ್ಲ ಅನಿವಾರ್ಯವಾಗಿ ಒಪ್ಪಿಕೊಳ್ಳುವ ಸ್ಥಿತಿ ಮಹಿಳೆಯರದ್ದು.

ಹೋರಿಯ ಬಾಹ್ಯ ಮುಖವನ್ನಷ್ಟೆ ಅರಿತ ಸಮಾಜದ ಸದ್ಗುಣಿಗಳೂ ಅದಕ್ಕೆ ಮರುಳುಬಿದ್ದು ಬಹುಕಾಲ ಪೆದ್ಗುಣಿಗಳಂತೆ ವರ್ತಿಸಿದ್ದನ್ನು ಕೆಲವರು ನೆನಪುಮಾಡಿಕೊಳ್ಳುತ್ತಾರೆ. “ಶ್ರೀಗಳು ಬಹಳ ವಿದ್ವಾಂಸರು, ಅವರಿಗೆ ಸಾಕಷ್ಟು ಜ್ಞಾನವಿದೆ” ಎನ್ನುವ ಮೂಲಕ ಸದ್ಗುಣಿ, ಹೋರಿಸ್ವಾಮಿಯ ಭಾಷಣದಿಂದ ಪ್ರಭಾವಿತರಾಗಿ ಪೆದ್ಗುಣಿಯಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸದ್ಗುಣಿಗಳಿಗೆ ವ್ಯಕ್ತಿಗಿಂತ ಸಮಾಜ ದೊಡ್ಡದು ಎಂಬ ವಿವೇಕ ಜಾಗೃತವಾದಾಗ ಹೋರಿ ಮಠದಲ್ಲಿ ಹೇಗೆ ವರ್ತಿಸುತ್ತಿತ್ತು ಎಂಬ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಅದೇ ದಿನ ಹೋರಿಸ್ವಾಮಿಯ ಬಳಗದ ಕೆಲವು ಹೋರಿಗಳು ಮತ್ತು ನಡುಗಿನ ಹಳ್ಳಿಯ ಕುಸುಮಬಾಲೆ ಸಗುಣಿಯವರ ಮನೆಗೆ ಬಂದು, ಯಾವ ರಶೀದಿಯನ್ನೂ ನೀಡದೆ ಮಠಕ್ಕೆ ಸಂಬಂಧಿಸಿದ ಕೆಲವು ಪರಿಕರಗಳನ್ನು ಹಿಂಪಡೆದುಕೊಂಡುಹೋದರಂತೆ. ಪಡೆದುಕೊಂಡ ಬಗ್ಗೆ ರಶೀದಿಯನ್ನಾದರೂ ಕೇಳಬೇಕಿತ್ತಲ್ಲವೆ ಸದ್ಗುಣಿಯವರು?

ಪ್ರಕರಣ ಹುಟ್ಟಿಕೊಳ್ಳುವುದಕ್ಕೂ ಮೊದಲು ತಮ್ಮ ಮನೆಯಲ್ಲಿ ನಡೆದ ಮೀಟಿಂಗ್ ನಲ್ಲಿ ಏನೇನು ನಡೆಯಿತು ಎಂದು ಗಡ್ಡದಭಟ್ಟರು ಚೆನ್ನಾಗಿ ಪಾಯಿಂತ್ ಟು ಪಾಯಿಂಟ್ ವಿವರಿಸಿದ್ದಾರೆ. ಅವರು ಹೇಳಿದ ಪ್ರತಿಯೊಂದು ಮಾತು ಮುತ್ತಿನಂತಿದೆ ಮತ್ತು ಅದು ಅಪ್ಪಟ ಸತ್ಯ ಕೂಡ. ಅವರ ಮಾತುಗಳಿಂದ ಸಾರ್ವಜನಿಕರಿಗೆ ಇರುವ ಸಂದೇಹಗಳೆಲ್ಲ ದೂರವಾಗುತ್ತವೆ. ಆದರೆ ಒಂದೇ ಒಂದು ಬೇಸರದ ಸಂಗತಿಯೆಂದರೆ ಈಗ ಹೇಳಿದ್ದನ್ನು ವರ್ಷದ ಹಿಂದೆಯೇ ಹೇಳಿದ್ದರೆ ಸಮಾಜದಲ್ಲಿ ನಂತರ ಹೋರಿಯಿಂದ ಹಾಳಾದ ಹುಡುಗಿಯರಾದರೂ ಹಾಳಾಗದೆ ಇರುತ್ತಿದ್ದರು. ಮತ್ತು ಕಾನೂನು ಬದ್ಧವಾಗಿ ಹೋರಿ ಹಾರುವುದನ್ನು ನಿಯಂತ್ರಿಸುವುದು ಆಗಲೇ ಸಾಧ್ಯವಾಗುತ್ತಿತ್ತು. ನೇತಾಜಿ ಬದುಕು-ಸಾವುಗಳ ಕುರಿತ ದಾಖಲೆಗಳನ್ನು ಕೇಂದ್ರ ಸರ್ಕಾರಗಳು ಬಹುಕಾಲದಿಂದ ಬಚ್ಚಿಟ್ಟಂತೆ, ಹೋರಿಸ್ವಾಮಿಯ ಕಚ್ಚೆಹರುಕುತನವನ್ನು ವರ್ಷಗಳ ಕಾಲ ಬಚ್ಚಿಟ್ಟಿದ್ದು ಒಂದರ್ಥದಲ್ಲಿ ಬೇಸರವನ್ನುಂಟುಮಾಡುತ್ತದೆ. ಯಾಕೆಂದರೆ ಅವರೆಲ್ಲ ಮಠದ ಪ್ರಮುಖರು ಮತ್ತು ಮಠದಿಂದ ಪೈಸೆ ಪ್ರತಿಫಲವನ್ನೂ ಬಯಸದೆ, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತ ಮಠಕ್ಕೆ ಲಕ್ಷೋಪಲಕ್ಷ ದೇಣಿಗೆ ಕೊಟ್ಟವರು.

ನಡೆದ ಘಟನೆಗಳನ್ನು ಮಾಧ್ಯಮಗಳಿಗೆ ಹೇಳಿದ ನಂತರ ಅವರ ವಿರುದ್ಧ ಹೋರಿಸ್ವಾಮಿಯ ಪಟಾಲಮ್ಮು ತಿರುಗಿ ಬಿದ್ದಿದೆ. ಮೊದಲು ಹಾಗೆ ಹೇಳಿದ್ದರು ಈಗ ಬದಲಾಗಿ ಹೋದರು ಎಂದೆಲ್ಲ ಹೇಳುತ್ತ ಪುಂಖಾನುಪುಂಖವಾಗಿ ಬರೆಯತೊಡಗಿದ್ದಾರೆ. ಮಠಕ್ಕೂ ಅವರಿಗೂ ಸಂಬಂಧವಿಲ್ಲ ಎಂಬ ಅದೇ ಘೋಷಣೆಯಲ್ಲಿ ತೊಡಗಿದ್ದಾರೆ. “ಸಮಾಜ ಒಡೆದಿಲ್ಲ, ಇಡೀ ಸಮಾಜವೇ ಶೀಗಳ ಪರವಾಗಿ ನಿಂತಿದೆ” ಎಂಬ ಸ್ಪಷ್ಟೀಕರಣ ಬೇರೆ ಕೇಡು. ಅಂದರೆ ಇವರ ತುರಿಕೆಗೆ ಇವರಿಗೆ ಕಾಣುವ ಜನರಷ್ಟೇ ಇಡೀ ಸಮಾಜವೆ? ಇಡೀ ಸಮಾಜದ ಜನರ ಒಟ್ಟಾರೆಯ ಅಭಿಪ್ರಾಯವನ್ನು ಹೇಳದೇ ಕೇಳದೇ ಹೇಗೆ “ಶೀಗಳ ಜೊತೆಗಿದ್ದಾರೆ’ ಎಂದು ಹೇಳ್ತಾರೆ? ಅವರಿಗೆ ಆ ಅಧಿಕಾರ ಕೊಟ್ಟೋರು ಯಾರು?

ವಾಸ್ತವವಾಗಿ ಬೇರೆ ಜನಾಂಗದಲ್ಲಾಗಿದ್ದರೆ ಇಷ್ಟು ಹೊತ್ತಿಗೆ ಹೋರಿಸ್ವಾಮಿಯ ಹಲ್ಲುಗಳನ್ನೆಲ್ಲ ತೆಗೆದು, ಚಪ್ಪಲಿ ಹಾರ ಹಾಕಿ ಬೆತ್ತಲೆ ಮೆರವಣಿಗೆ ನಡಿಸಿ, ಮಾವಂದಿರಿಂದ ಪ್ಲೇನು ಹತ್ತಿಸಿ, ಕೃಷ್ಣಜನ್ಮಸ್ಥಾನಕ್ಕೆ ಬಹಳ ’ವೈಭವ’ದ ’ಕಿರೀಟೋತ್ಸವ’ದೊಂದಿಗೆ ಕಳುಹಿಸಿಕೊಡುತ್ತಿದ್ದರು. ಸಾತ್ವಿಕ ಸಮಾಜದ ಹೆಣ್ಣುಗಳನ್ನೇ ಆಯ್ಕೆಮಾಡಿಕೊಂಡು ಭೋಗಿಸಿದ ಕಿರಾತಕ ಆ ವಿಷಯದಲ್ಲಿ ಬಹಳ ಯೋಚಿಸಿಯೇ ಮುನ್ನಡೆದಿದ್ದಾನೆ. ಭಕ್ತಿಯ ಪರಾಕಾಷ್ಠೆಯಲ್ಲಿ ನಿತ್ಯವೂ ಪರಮಪಾವನವೆಂದು ಪೂಜಿಸುತ್ತಿದ್ದ ಹೋರಿಗೆ ವಿರುದ್ಧ ಹೇಳಲಾಗದೇ ಒದ್ದಾಡಿದ ಸದ್ಗುಣಿಗಳಂತವರು ಸಾವಿರಾರು ಜನ ಇದ್ದಾರೆ. ಮೊದಮೊದಲು ಅವರಿಗೆ ಹೋರೀಶನ ನಿಜ ಬಣ್ಣವನ್ನು ನಂಬಲಾಗಲಿಲ್ಲ! ಈಗ ಎಲ್ಲವೂ ಖಚಿತವೆಂಬುದು ಖಚಿತವಾಗಿದೆ. ವ್ಯಕ್ತಿಗಿಂತ ಪೀಠ ದೊಡ್ಡದು ಎಂಬ ನಿರ್ಧಾರದಲ್ಲಿ ಇರುವ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ಆರೇಳು ವರ್ಷಗಳ ಹಿಂದೆ ಹೋರಿ ದೀವಗಿಯಲ್ಲಿ ಒಮ್ಮೆ ಬೀಡುಬಿಟ್ಟಿತ್ತು. ಅಲ್ಲಿನ ಅವಧೂತರಿಗೆ ಈ ಕಚ್ಚೆಹರುಕನ ನಿಜಬಣ್ಣ ಗೊತ್ತಿರಲಿಲ್ಲ. ಅವರೂ ಸಹ ಎಲ್ಲ ಭಕ್ತರಂತೆ ಪೀಠದವರು ಎಂದುಕೊಂಡು ವಂದಿಸುತ್ತಿದ್ದರು. ದೀವಗಿಯಲ್ಲಿದ್ದ ರಾತ್ರಿ ಸದ್ಗುಣಿಗಳಿಗೆ ಹೇಳಿ ಅಶ್ವಿನಿ ನಕ್ಷತ್ರವನ್ನು ಅಲ್ಲಿಗೆ ತುರ್ತಾಗಿ ಕರೆಸಿಕೊಂಡ ಹೋರಿ, ಅಲ್ಲಿಯೇ ಮಹಡಿಯಮೇಲೆ ಎರಡು ಗಂಟೆ ಏಕಾಂತವನ್ನು ನಡೆಸಿತು ಎಂದು ಅಧಿಕೃತವಾಗಿ ಕೆಲವರು ತಿಳಿಸಿದ್ದಾರೆ. ಈ ವಿಷಯ ಸದ್ಗುಣಿಗಳಿಗೆ ಗೊತ್ತಿತ್ತಂತೆ ಎಂಬುದೂ ತಿಳಿದುಬಂದಿದೆ.ಹಾಗಿದ್ದೂ ಸದ್ಗುಣಿಗಳು ಚಕಾರವೆತ್ತಲಿಲ್ಲ ಏಕೆ?

ಇಂತಹ ಪಾಪಿಷ್ಥನ, ನೀಚನ ಕಚ್ಚೆಹರುಕು ಮನೆಮುರುಕುತನವನ್ನು ಸಮಾಜಕ್ಕೆ ತಿಳಿಸಿ, ಪೀಠದಲ್ಲಿ ಇಂತಹ ವ್ಯಕ್ತಿ ಮುನ್ನಡೆಯುವುದು ಸರಿಯಲ್ಲ, ಇವನನ್ನು ಅಲ್ಲಿಂದ ಇಳಿಸಬೇಕೆಂದು ಸಮಾಜದ ಮುಖಂಡರೂ ಮತ್ತು ಮಠದ ಅತ್ಯಂತ ಆಪ್ತ ಪ್ರಮುಖರೂ ಆದ ಜನಾಂಗದ ಕೆಲವು ಮಹನೀಯರಲ್ಲಿ ನೊಂದ ದಂಪತಿ ವಿಷಯ ನಿವೇದಿಸಿಕೊಂಡಿದ್ದಾರೆ. ಮೀಟಿಂಗಿನಲ್ಲಿ ವಿಷಯ ಬಹಿರಂಗವಾಯ್ತೆಂದು ತಿಳಿದ ನಂತರ ಹೋರಿ, “ನಾನು ಏಕಾಂತಕ್ಕೆ ಹೋಗ್ತೇನೆ. ಈ ವಿಷಯ ಇಲ್ಲಿರುವ ಕಿವಿಗಳನ್ನು ಬಿಟ್ಟು ಇನ್ನಾರ ಕಿವಿಗಳಿಗೂ ತಲುಪಬಾರದು. ದಯಮಾಡಿ ನನ್ನ ಮರ್ಯಾದೆ ಕಾಪಾಡಿ” ಎನ್ನುತ್ತ ಸರಸಂಘದ ಪ್ರಮುಖರೊಬ್ಬರ ಕಾಲಿಗೆ ಬಿದ್ದಿದೆ: ಆದರೆ ಅಲ್ಲಿಂದಾಚೆಗೆ ಬಂದು ಮಠ ಸೇರಿಕೊಂಡ ಬಳಿಕ ಬೇರೆ ಮಸಲತ್ತು ಮಾಡಿದೆ!

ಹರೆಯದ ಹೆಣ್ಣುಮಕ್ಕಳೆದುರು ತನಗಾದ ಅನ್ಯಾಯವನ್ನು ಗಂಡನಲ್ಲಿ ಹೇಗೆ ಹೇಳಿಕೊಳ್ಳಬೇಕೆಂದು ತಿಳಿಯದೆ ಬಹುಕಾಲ ಪ್ರಯಾಸಪಟ್ಟು ಹೋರಿಯ ಹಾರಾಟವನ್ನು ಸಹಿಸಿಕೊಳ್ಳುತ್ತಲೇ ಕಳೆದ ಜನಾಂಗದ ಆ ಹೆಣ್ಣುಮಗಳು, ದೇಶದ ಜನತೆಯೆದುರು ತನ್ನ ಮಾನ ಹೋದರೂ ಪರವಾಗಿಲ್ಲ, ನಮ್ಮ ಸಮಾಜದ ಉಳಿದ ಹೆಣ್ಣುಮಕ್ಕಳಿಗೆ, ಹೆಂಗಸರಿಗೆ ಅನ್ಯಾಯವಾಗುವುದು ಬೇಡ, ಅವರ ಕುಟುಂಬಗಳು ಒಡೆಯುವುದು ಬೇಡ, ಅವರ ಶೀಲಹರಣವಾಗುವುದು ಬೇಡ, ಅವರಿಗೆ ಮಾರಣಾಂತಿಕ ಕಾಯಿಲೆ ಹಬ್ಬುವುದು ಬೇಡ, ಸಮಾಜದ ಪ್ರಮುಖ ಶ್ರದ್ಧಾಕೇಂದ್ರದಲ್ಲಿ ಇಂತಹ ಘನಘೋರ ಪಾತಕದ ಕೆಲಸ ನಡೆಯುವುದು ಬೇಡ, ಸಮಾಜಕ್ಕೆ ಒಳಿತಾಗಲಿ, ಮಠ-ಪೀಠ ಶುದ್ಧವಾಗಿರಲಿ ಎಂಬ ನಿರ್ಧಾರಕ್ಕೆ ಬಂದಿದ್ದಾಳೆ.

ಸಮಾಜದಲ್ಲಿ ಯಾರೊಬ್ಬರೂ ಮಾಡದ ಮಹಾತ್ಯಾಗವನ್ನು ಆಕೆ ಮಾಡಿ ಸಮಾಜಕ್ಕೆ ಒಳಿತನ್ನು ಹಾರೈಸಿದರೆ, ಹೋರಿಸ್ವಾಮಿಯ ಪಟಾಲಮ್ಮು ಮತ್ತು ಬಕರಾಭಕ್ತರು ಸೇರಿಕೊಂಡು ಅವಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅವಕಾಶವಿದ್ದರೆ ಕೊಂದೇ ಬಿಡುತಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಹಿಂದೊಬ್ಬ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದಾಖಲೆ ಬರೆದಿದ್ದಾರೆ! ತುಮರಿ ಹಿಂದೊಮ್ಮೆಯೂ ಹೀಗೆಯೇ ಹೇಳಿದ್ದ, ಈಗಲೂ ಅದನ್ನೇ ಹೇಳುತ್ತಿದ್ದಾನೆ-
ಕಲ್ಲನಕೇರಿಯ ಮಲ್ಲನಗೌಡ ಕೆರೆಯೊಂದ ಕಟ್ಟಿಸಿದ್ದನಂತೆ, ನೀರು ಬರಲಿಲ್ಲ. ಜೋಯಿಸರನ್ನು ಕೇಳಿದಾಗ ಕೆರೆಗೊಂದು ಹೆಣ್ಣಿನ ಬಲಿ ಕೊಟ್ಟರೆ ನೀರು ತುಂಬುತ್ತದೆ ಎಂದರಂತೆ. ಮಲ್ಲನಗೌಡ ಬಹಳವಾಗಿ ಯೋಚಿಸಿದ. ಯಾವ ಹೆಂಗಸನ್ನು ಯಾವ ಮುತ್ತೈದೆಯನ್ನು ಬಲಿಕೊಡುವುದು? ಕುಟುಂಬ ವರ್ಗದಲ್ಲಿರುವ ಮುತ್ತೈದೆಯರಲ್ಲಿ ವಿಷಯ ನಿವೇದಿಸಿದಾಗ ಯಾರೊಬ್ಬರೂ ಸಿದ್ಧರಾಗಲಿಲ್ಲ. ಕೊನೆಗೆ ಗೌಡನ ಕಿರಿಸೊಸೆ ಭಾಗೀರಥಿ ತನ್ನನ್ನು ಬಲಿಗೊಡಲು ಸಿದ್ಧಳಾಗಿಬಿಡುತ್ತಾಳೆ! ಗಂಡ ದೂರದಲ್ಲಿದ್ದ ಸಮಯದಲ್ಲಿ ಅವನಿಗೆ ಕೈಮುಗಿದು ಮಾವ ಮತ್ತು ಕುಟುಂಬದ ಇನ್ನಿತರ ಸದಸ್ಯರೊಡನೆ ಕೆರೆಗೆ ತೆರಳಿ, ಪೂಜೆ ಸಲ್ಲಿಸಿದ ಬಳಿಕ ಅವಳು ಕೆರೆಯಂಗಳದಲ್ಲೇ ಉಳಿದುಬಿಡುತ್ತಾಳೆ. ಉಳಿದವರೆಲ್ಲ ಮನೆಯಕಡೆಗೆ ಹೊರಟ ನಂತರ ನೀರು ಏರುತ್ತ ಎದೆಯ ಮಟ್ಟಕ್ಕೆ, ಕುತ್ತಿಗೆಯ ಮಟ್ಟಕ್ಕೆ ಬಂದು, ನಂತರ ಮುಳುಗಿ ತನ್ನನ್ನು ಬಲಿಯಾಗಿ ಅರ್ಪಿಸುತ್ತಾಳೆ.

ಇದು ಕೇವಲ ಕಥೆಯಲ್ಲ ಐತಿಹಾಸಿಕ ಘಟನೆ ಎಂಬುದು ಇತ್ತೀಚೆಗೆ ದೊರೆತ ಮಾಹಿತಿಯೊಂದರಿಂದ ತಿಳಿಯಿತು. ಊರ ಹಿತಕ್ಕಾಗಿ ಬೆಂಗಳೂರಿನ ಕೆಂಪಾಂಬುಧಿ ಕೆರೆಯನ್ನು ಕಟ್ಟಿಸಿದ ಮಾಗಡಿ ಕೆಂಪೇಗೌಡರ ಕಾಲದಲ್ಲಿ, ಅಲ್ಲಿ ಸಾಕಷ್ಟು ನೀರು ತುಂಬಲಿಲ್ಲವಂತೆ. ನಂತರ ಮೇಲಿನ ಜನಪದ ಕತೆಯಲ್ಲಿರುವಂತೆ ಗೌಡರ ಸಮಸ್ಯೆಗೆ, ಗರ್ಭಿಣಿಯಾಗಿದ್ದ ಕಿರಿಸೊಸೆ ಕೆಂಪಮ್ಮ ತನ್ನನ್ನೇ ಒಪ್ಪಿಸಿಕೊಂಡು ಕೆರೆಗೆಹಾರವಾದಳಂತೆ. ಇದು ಇತಿಹಾಸ.

ಸಮಾಜದ ಒಳಿತಿಗಾಗಿ ತನ್ನ ಮಾನ ಹರಾಜಾದರೂ, ಕುಟುಂಬದ ಘನತೆ ಮಣ್ಣುಪಾಲಾದರೂ, ಭವಿಷ್ಯದ ತನ್ನ ಜೀವನದಲ್ಲಿ ಎಂತಹ ಅಲ್ಲೋಲಕಲ್ಲೋಲಗಳೆ ನಡೆದರೂ ಎದುರಿಸುವ ಧೈರ್ಯ ಸಾಹಸವನ್ನು ಮೈಗೂಡಿಸಿಕೊಂಡು ಈ ನಮ್ಮ ಮಹಿಳೆ ಸಮಾಜಹಿತದ ಕೆಲಸವನ್ನು ಮಾಡಿದ್ದಾಳೆ.
ಶಂಕೆಯಿಂದಲೇ ಈ ದೇಶದಲ್ಲಿ ಹಲವು ಮಹಿಳೆಯರು ಗಂಡಂದಿರಿಂದ ಕೊಲೆಗೀಡಾಗುತ್ತಾರೆ. ಅಂತದ್ದರಲ್ಲಿ, ಹೆಂಡತಿಗಾದ ನೋವನ್ನು ಅರಿತು, ಅವಳ ಸ್ಥಾನದಲ್ಲಿ ತನ್ನನ್ನು ಇರಿಸಿಕೊಂಡು ಚಿಂತಿಸಿ ನೋಡಿ, ಅವಳ ತಪ್ಪಿಲ್ಲವೆಂಬುದನ್ನು ಪಕ್ಕಾ ಮಾಡಿಕೊಂಡ ಆಕೆಯ ಗಂಡ, ಅತ್ಯಂತ ಸಹನೆಯಿಂದ, ತಾಳ್ನೆಯಿಂದ, ತಿಂಗಳಕಾಲ ಶಿಕ್ಷೆಯನ್ನೂ ಅನುಭವಿಸಿ ಅವಳಿಗೆ ಬೆಂಬಲ ನೀಡಿದ್ದಕ್ಕಾಗಿ ಈ ಸಮಾಜದ ಎಲ್ಲ ಭಂಡಗಂದರ ಎದುರು ತುಮರಿ ಎದೆತಟ್ಟಿ ಆ ಮನುಷ್ಯನಿಗೆ ವಂದನೆ-ಅಭಿನಂದನೆಗಳನ್ನು ಸಲ್ಲಿಸುತ್ತಾನೆ. ಈ ತ್ಯಾಗ ಕೆರೆಗೆಹಾರ ಕತೆಯ ಭಾಗೀರಥಿಯ ತ್ಯಾಗಕ್ಕಿಂತ ಅಥವಾ ಕೆಂಪೇಗೌಡರ ಸೊಸೆ ಕೆಂಪಮ್ಮನ ತ್ಯಾಗಕ್ಕಿಂತ ಭಿನ್ನವೇನಲ್ಲ ಎನಿಸಿ, ಅವಳನ್ನು “ಭಾಗೀರಥಿ” ಎಂದೇ ಸಂಬೋಧಿಸಿದ್ದಾನೆ.

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ
ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾಪಾತಕ ನಾಶನಂ
ಎಂಬ ಶ್ಲೋಕವನ್ನು ನಿತ್ಯ ನಾವು ಮತ್ತು ನಮ್ಮಂತಹ ಆಸ್ತಿಕರು ಹೇಳಿಕೊಳ್ಳುವುದಿದೆ.

ಶ್ಲೋಕದಲ್ಲಿರುವ ಎಲ್ಲ ಮಹಿಳೆಯರೂ ಅನಿವಾರ್ಯವಾಗಿ ಪರಸ್ಥಳದಲ್ಲಿ ಆಘಾತಕ್ಕೆ ಈಡಾದವರೇ. ಪರಪುರುಷರೊಡನೆ ಕೆಲವುಕಾಲ ಬದುಕಬೇಕಾದ ಅನಿವಾರ್ಯತೆ ಅವರಿಗಿದ್ದದ್ದರಿಂದ ಹಾಗೆ ಕಳೆದ ನಂತರ ಜನತೆ ಅವರ ಶೀಲವನ್ನೂ ಶಂಕಿಸದಿರಲಿಲ್ಲ.

ಸೀತೆಯ ಶೀಲವನ್ನು ಶಂಕಿಸಿ ಒಬ್ಬಾತ ಹೇಳಿದ ಮಾತಿಗೆ ಜರ್ಜರಿತನಾಗಿ ಹೋದ ಶ್ರೀರಾಮ ಅವಳನ್ನು ಕಾಡಿಗಟ್ಟಿದ ಕತೆಯನ್ನು ನೀವೆಲ್ಲ ಕೇಳಿದ್ದೀರಿ. ಅದು ರಾಜ್ಯದ ರಾಜನಾಗಿ ಕೈಗೊಂಡ ನಿರ್ಧಾರವೇ ಹೊರತು ಗಂದನಾಗಿ ಅವನು ಕೈಗೊಂಡ ನಿರ್ಧಾರವಲ್ಲ. ಸೀತೆಯ ಮುದಿನ ಜೀವನದ ಬಗ್ಗೆ ಪರೋಕ್ಷವಾಗಿ ಮೊದಲೇ ಅರಿಯುವ ಅಸಾಮಾನ್ಯ ಅವತಾರಿ ಅವನಾಗಿದ್ದ; ಅದರಂತೆ ಅವಳಿಗೂ ಯಾವ ತೊಂದರೆಯೂ ಆಗಲಿಲ್ಲ.

ನೈತಿಕ ನಿಷ್ಠೆಗೆ ಮತ್ತು ಏಕಪತ್ನಿ ವೃತಕ್ಕೆ ಏಕಮಾತ್ರ ಹೆಸರು ಶ್ರೀರಾಮ. ಮರ್ಯಾದೆಗೆ ಅಷ್ಟೊಂದು ಅಂಜುತ್ತಿದ್ದ ಅವನಿಗೆ “ಮರ್ಯಾದಾ ಪುರುಷೋತ್ತಮ” ಎಂದರು ಪ್ರಜೆಗಳು. ಅಂತಹ ರಾಮನ ಹೆಸರಿನಲ್ಲಿ ಹೋರಿ ನಡೆಸುತ್ತಿರುವ ಅನ್ಯಾಯವನ್ನು ಇನ್ನೂ ಅಂಧಾಭಿಮಾನದಿಂದ ಹೆಮ್ಮೆಯಿಂದ ಸಹಿಸಿಕೊಳ್ಳುತ್ತ ಹೋರಿಸ್ವಾಮಿಯನ್ನು ವಹಿಸಿಕೊಂಡು ಮಾತನಾಡುವ ಸಮಾಜದ ಒಂದು ಭಾಗಕ್ಕೆ ದೇವರು ಇನ್ನಾದರೂ ಬುದ್ಧಿ ಎಂಬುದನ್ನು ಕೊಡಲಿ. ಹೋರಿಯನ್ನು ಹೊರಗೋಡಿಸಿ, ಪರಂಪರೆಯ ಪೀಠಕ್ಕೆ ಅರ್ಹವಾದ ವ್ಯಕ್ತಿಯ ಆಯ್ಕೆ ಸಕಲ ಸೂಕ್ಷ್ಮಾಂಶಗಳ ಕಠಿಣ ಪರೀಕ್ಷೆಗಳ ಮೂಲಕ ನಡೆಯಲಿ ಎಂದು ಹಾರೈಸುತ್ತೇನೆ.

Thumari Ramachandra

source: https://www.facebook.com/groups/1499395003680065/permalink/1678227539130143/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s