ಪ್ಯಾಂಟಿ ತುಲಾಭಾರ

ಪ್ಯಾಂಟಿ ತುಲಾಭಾರ
[ಏಕಾಂಕ ನಾಟಕ]

ಕ್ಯಾತ-“ಧಣಿಯೋರಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸ್ತಾ ಇದೇನೆ?”

ಹೋರಿಸ್ವಾಮಿ-“ಒಳ್ಳೇದಾಗ್ಲಿ, ಯಾರಯ್ಯ ನೀನು? ಯಾವಾಗ ಬಂದೆ? ನಮ್ಮಿಂದ ಏನಾಗ್ಬೇಕು?”

ಕ್ಯಾತ-” ನಾನ್ ಇಲ್ಲಿಯವನೇ ಸ್ವಾಮಿ, ಉತ್ತರಕರ್ನಾಟಕದ ಕಡೆಗೆ ಕೆಲಸ, ತಮ್ಮ ಸಾಧನೆ ಬಗೆಗೆ ಬಾಳಾ ಕೇಳಿದ್ದೆ. ಊರಿಗೆ ಬಂದವನು ಒಮ್ಮೆ ದರ್ಶನ ಮಾಡೋಣ ಅಂದ್ಕೊಂಡು ಬಂದೆ.”

ಹೋರಿಸ್ವಾಮಿ-“ಒಳ್ಳೇದಾಯ್ತು. ನಿಮ್ಮ ಪರಿಚಯದಲ್ಲಿ ಯಾರಾದರೂ ಯತಿಗಳು ಇದ್ದಾರೆಯೇ? ನಾವು ಮುನ್ನೂರಕ್ಕೂ ಅಧಿಕ ಯತಿಗಳನ್ನು ಸೇರಿಸ್ಬೇಕಾಗಿದೆ. ಹಿಂದೂ ಧರ್ಮದ ವಿರೋಧಿಗಳ ವಿರುದ್ಧ ಆಂದೋಲನ ನಡೆಸ್ತಾ ಇದ್ದೇವೆ.”

ಕ್ಯಾತ-“ಏನೊ ನೋಡೋಣ ಬುದ್ಧಿ, ಅದ್ಸರಿ ಅದೇನೋ ಪ್ಯಾಂಟಿಲಿ ವೀರ್ಯ ಅಂದ್ರಲ್ಲ ಬುದ್ಧ್ಯೋರೆ?”

ಹೋರಿಸ್ವಾಮಿ-“ಪ್ರತಿತಿನಿತ್ಯ ನಮ್ಮ ಕೌಪೀನವನ್ನು ಸಹಾಯಕನೊಬ್ಬ ತೊಳೀತಾನೆ. ಅವನಿಗೊಂದಿಷ್ಟು ರೊಕ್ಕ ಕೊಟ್ಟು ನಮ್ಮ ವಿರೋಧಿಗಳು ಅದನ್ನು ಖರೀದಿಸಿಕೊಂಡು ಹೋಗಿರ್ತಾರೆ. ನಮಗೆ ಹೊಸ ಕೌಪೀನ ಕೊಟ್ಟಿರ್ತಾನೆ. ಮಠದಲ್ಲಿ ನಾವು ನಡೆಸುತ್ತಿರುವ ಹಲವು ಘನಕಾರ್ಯಗಳ ಮಧ್ಯೆ ನಮಗೆ ಅದರ ಕಡೆಗೆಲ್ಲ ಗಮನವಿಲ್ಲ. ತಡವಾಗಿ ಗೊತ್ತಾಗಿದೆ”

ಕ್ಯಾತ-“ಕೌಪೀನದಲ್ಲಿದ್ದ ವೀರ್ಯ ಲೇಡೀಸ್ ಪ್ಯಾಂಟಿ ಗೆ ಹೇಗೆ ವರ್ಗಾವಣೆಯಾಯ್ತು ಅಂತೀರಿ ಧಣಿಯಾರೆ?”

ಹೋರಿಸ್ವಾಮಿ-“ಹಸಿ ಇರುವಾಗಲೇ ತೆಗೆದುಕೊಂಡು ಹೋಗಿ ಪ್ಯಾಂಟಿಗೆ ಒರೆಸಿಕೊಂಡಿದ್ದಾರೆ. ಷಡ್ಯಂತ್ರ ಮಾಡುವವರಿಗೆ ಹೇಳಿಕೊಡಬೇಕೆ?”

ಕ್ಯಾತ-” ಹೌದಲ್ವೆ ಧಣಿಯಾರೆ, ಸಮಸ್ಯೆ ಅದಲ್ಲ, ಸನ್ಯಾಸಿಗೆ ಸ್ಖಲನ ಆಗೋದಿಲ್ವಂತೆ. ತಮ್ಮ ಕೌಪೀನದಲ್ಲಿ ವೀರ್ಯ ಹೇಗೆ ಬಂತು?”

ಹೋರಿಸ್ವಾಮಿ-“ಎಲ್ಲ ಸನ್ಯಾಸಿಗಳಿಗೂ ಕೌಪೀನದಲ್ಲಿ ವೀರ್ಯ ಬರ್ತದೆ. ಅದು ಸಹಜ ಅದು. ಅದರಲ್ಲಿ ವಿಶೇಷವೇನಿಲ್ಲ. ಶಂಕರರಿಗೂ ಬಂದಿತ್ತು, ನಮ್ಮ ಹಿಂದಿನೋರಿಗೂ ಬಂದಿತ್ತು. ಎಲ್ಲರಿಗೂ ಬರ್ತದೆ. ಆಗ ಗುರು ಎಂದರೆ ಗೌರವ ಇತ್ತು ಯಾರೂ ಷಡ್ಯಂತ್ರ ಮಾಡ್ತಿರಲಿಲ್ಲ. ಈಗ ಅಂತವರು ತಯಾರಾಗಿದಾರೆ.”

ಕ್ಯಾತ-“ಅಲ್ಲ ಧಣಿಯಾರೆ, ಹಿಂದಿನ ಎಲ್ಲ ಸನ್ಯಾಸಿಗಳ ಬಗೆಗೆ ತಮ್ಮಲ್ಲಿ ಅಪಾರ ಮಾಹಿತಿ ಇದೆ ಅಂತಾಯ್ತು. ಅವತಾರಿ ಪುರುಷರಾದ ತಾವು ಹಿಂದಿನ ಎಲ್ಲ ಸನ್ಯಾಸಿಗಳ ಕಾಲದಲ್ಲೂ ಅವತಾರ ಎತ್ತಿ ಅವರ ಪಕ್ಕಕ್ಕೆ ದೀಪ ಹಿಡಿದು ನಿಂತಿದ್ರಿ ಅಂದ್ಕೊಳ್ಳೋಣ್ವೆ? ಅಂದಹಾಗೆ, ತಮ್ಮಿಂದ ನಾರಿಯರಿಗೆಲ್ಲ ಬಹಳ ಗೌರವ, ಮಾನ್ಯತೆ ಸಿಕ್ಕಿದ್ಯಂತೆ. ಅದಕ್ಕಾಗಿ ತಮಗೆ ಈ ಸಲ ನಾರಿಯರೆಲ್ಲ ಸೇರಿ, ’ನಮ್ಮ ಗುರುಗಳಿಗೆ ಜೈಲು ಶಿಕ್ಷೆ ತಪ್ಪಲಿ” ಅಂತ ಪ್ರಾರ್ಥಿಸ್ಕೊಂಡು ಪ್ಯಾಂಟಿ ತುಲಾಭಾರ ಮಾಡೋಣ ಅಂದ್ಕಂಡಿದಾರಂತಲ್ಲ, ಕಡಿಮೆ ಬಿದ್ರೆ ಬ್ರಾಗಳನ್ನೂ ಹಾಕಬಹುದೇ? ರಾಂಗಾನುಗ್ರಹದಿಂದ ಪವಾಡ ನಡೆದು ತಾವು ಆರಾಮಾಗಿರಬಹುದು ಅಲ್ವೇ ಬುದ್ಧೀ? ”

ಹೋರಿಸ್ವಾಮಿ-“ಏ ಯಾರಲ್ಲಿ, ನಾವಿದ್ದೇವೆ? ನೋಡಿ ಪಾಪ ಇವನು ದರ್ಶನಕ್ಕಾಗಿ ಬಂದಿದ್ದಾನೆ. ಲಾಡು ಕೊಟ್ಟು ಕಳಿಸಿ.”

ಕ್ಯಾತ-“ಲಾಡು ಅಂದ್ರೆ ಯಾವ ರೀತಿ ಪ್ರಸಾದ ಬುದ್ಧಿ? ಅದೇ ನಮ್ಮ ಆ ಅಕ್ಕ ಅವರ್ಗೆ ಕೊಟ್ಟಿದ್ರಂತಲ್ಲ ಅದೇರೀತಿದೆ?”

ಹೋರಿಸ್ವಾಮಿ-“ಅಲ್ಲ, ಇದು ಅದಕ್ಕಿಂತ ಸ್ವಲ್ಪ ಸ್ವೀಟ್ ಜಾಸ್ತಿ. ಅಲ್ಲೊಬ್ಬ ಮುದುಕ ವೈದ್ಯರಿಗೆ ನಾವು ಕೊಟ್ಟಾಗ ಚೆನ್ನಾಗಿದೆ ಎಂದು ಹೇಳಿದ್ದಾರೆ. ನೀನೂ ಸ್ವಲ್ಪ ತಿಂದು ವಿಶ್ರಾಂತಿ ಮಾಡು, ಆಮೇಲೆ ನಾಲ್ಕು ಗೋಡೆ ಮಧ್ಯೆ ಕೂತು ಮಾತಾಡೋಣ.”
ಅಷ್ಟರಲ್ಲಿ ಹಳದೀ ತಾಲಿಬಾನ್ ಪಡೆಯ ಹದಿನೈದಿಪ್ಪತ್ತು ಜನ ಬಂದು ಕ್ಯಾತನನ್ನು ಹೊರಗೆ ಕರೆದುಕೊಂಡು ಹೋದರು. ಅರ್ಧ ನಿಮಿಷ ಕಳೆದ ಮೇಲೆ “ಅಯ್ಯಯ್ಯಪ್ಪೋ… ಅಯ್ಯಯಪ್ಪೋ…ಅಯ್ಯಯಪ್ಪೋ ಹೋಡೀ ಬೇಡಿ, ಅಯ್ಯೋ ನಾ ಸತ್ತೆ” ಎಂಬ ಕೂಗು ಕಿಲೋಮೀಟರ್ ದೂರದವರೆಗೂ ಹಬ್ಬಿತು.

ಕೆಲವೇ ನಿಮಿಷದಲ್ಲಿ ಹೋರಿಸ್ವಾಮಿಯ ಕಾರ್ಯದರ್ಶಿಯ ಮೊಬೈಲ್ ಗೆ ಸಂದೇಶ ಬಂತು-“ಏನ್ ಗಲಾಟೆ? ಆಗಲೇ ಬರ್ತಾ ಇದೀವಿ, ಬರೋಣ್ವೆ?”

ಹೋರಿಸ್ವಾಮಿಯ ಕಾರ್ಯದರ್ಶಿಯ ಉತ್ತರ- “ಅಂತದ್ದೇನಿಲ್ಲ ಸರ್, ಎಲ್ಲಾ ’ಮಾಮೂಲು’; ’ಮಾಮೂಲು’”

————-
ಅಂದೇ ರಾತ್ರಿ ಹೋರಿಸ್ವಾಮಿಯ ಸುವರ್ಣಮಂತ್ರಾಕ್ಷತೆ ತಲುಪಿ ಪ್ರೆಸ್ಟಿಟ್ಯೂಟುಗಳು ಪ್ರಸನ್ನವದನರಾದರು. ಮಾರನೆಯ ದಿನ ….
ಇಮ್ಮಡಿ ಪ್ರಭ, ತಿಮ್ಮನ ಕರ್ನಾಟಕ ಮತ್ತು ಕೋಣೆವಾಣಿಗಳು ಹೋರಿಸ್ವಾಮಿಯ ಯಾವುದೋ ಫೋಟೋ ಹಾಕಿ “ಜಗದ್ಗುರು ….ಮಹಾಸ್ವಾಮಿಗಳಿಂದ ವಿಶೇಷ ಮಹಾಪೂಜೆ’ ಎಂಬ ಶೀರ್ಷಿಕೆಯಡಿಯಲ್ಲಿ “ನಿನ್ನೆ ಇಡೀ ದಿನ ..ಮಹಾಸ್ವಾಮಿಗಳು ಪೂಜಾನಿರತರಾಗಿದ್ದರು. ವಿಶೇಷ ಮಹಾಪೂಜೆಯ ನಿಮಿತ್ತ ಸಾರ್ವಜನಿಕರಿಗೆ ಸಂದರ್ಶನಕ್ಕೆ ಅವಕಾಶವಿರಲಿಲ್ಲ. ಬೆಳಗಿನಿಂದ ಆರಂಭವಾದ ಪೂಜೆ ಮಧ್ಯಾಹ್ನವಾಗುತ್ತಿದ್ದಂತೆ ಬಹಳ ಅದ್ಧೂರಿಯಾಗಿ ಮಧ್ಯರಾತ್ರಿಯವರೆಗೂ ನಡೆಯಿತು. ಈ ಸಮಯದಲ್ಲಿ ಸಮಾಜದಲ್ಲಿ ಮಾತೆಯರಿಗೆ ಪ್ರಾಧಾನ್ಯತೆ ಸಿಗುವಂತೆ ಮಾತೆಯರಿಂದ ಕುಂಕುಮಾರ್ಚನೆ ನಡೆಸಲಾಯಿತು.”ಎಂದೆಲ್ಲ ಬರೆದು ಅರ್ಧಪುಟ ತುಂಬಿಸಿದ್ದರು.
ಹೋರಿಗೆ ಸಿಗದ ಯಾವುದೋ ಒಂದೆರಡು ಪತ್ರಿಕೆಗಳಲ್ಲಿ ಮಾತ್ರ, “ಹೋರಿಸ್ವಾಮಿಯ ತಾಲಿಬಾನ್ ಬಳಗದಿಂದ ಕ್ಯಾತನ ಮೇಲೆ ಮಾರಣಾಂತಿಕ ಹಲ್ಲೆ” ಶೀರ್ಷಿಕೆಯಡಿಯಲ್ಲಿ “…… ಹೊಡೆದು ಬಟ್ಟೆ ಹರಿದು, ಪ್ರಾಣವೊಂದನ್ನು ತೆಗೆಯದೆ ಬಿಟ್ಟ ಸ್ವಾಮಿಯ ಪಟಾಲಮ್. ದೂರು ಸ್ವೀಕಾರಕ್ಕೆ ನಕಾರ” ಎಂದು ಪ್ರಕಟವಾಗಿತ್ತು.

ಸೀಲು ಗುದ್ದಿದ ಲೆಟರ್ ಹೆಡ್ ನಲ್ಲಿ ಮಠದ ಸ್ಪಷ್ಟೀಕರಣ- “ಇಂದು ಪತ್ರಿಕೆಯಲ್ಲಿ ನಮ್ಮ ಮಠದ ವಿರುದ್ಧ ಪ್ರಕಟಗೊಂಡ ವರದಿ ಕೇವಲ ಸುಳ್ಳಿನಿಂದ ಕೂಡಿದೆ. ಇಲ್ಲಿಗೆ ಕ್ಯಾತನೆಂಬ ಯಾವ ವ್ಯಕ್ತಿಯೂ ಬರಲೇ ಇಲ್ಲ. ಇಂತಹ ವರದಿಗಳನ್ನು ಪ್ರಕಟಿಸುವುದು ಪತ್ರಿಕೆಗೆ ಶೋಭೆ ತರುವಂತದ್ದಲ್ಲ. ಪತ್ರಿಕೆಯ ಓದುಗರ ಸಂಖ್ಯೆ ಇದರಿಂದ ಇಳಿಮುಖವಾಗುತ್ತದೆ.”

Thumari Ramachandra

https://www.facebook.com/groups/1499395003680065/permalink/1677633675856196/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s