ಬನ್ನಿ ಬಾಬಾಗಳೆ ಬನ್ನಿ ಭಂಗಿಗಳೆ ಕರೆವೆವು ಕೈ ಬೀಸಿ

ಬನ್ನಿ ಬಾಬಾಗಳೆ ಬನ್ನಿ ಭಂಗಿಗಳೆ ಕರೆವೆವು ಕೈ ಬೀಸಿ

[ದಸರಾ ವಿಶೇಷಾಂಕ]

“ಬರೇ ಕಾಮ

ಜನರೆಲ್ಲ ಪೀಠದ ಬಗ್ಗೆ ಮಾತಾಡಿಕೊಳ್ತಾರೆ. ಪೀಠದಲ್ಲಿ ಹಿಂದೆ ಇದ್ದ ಎಲ್ಲ ಸನ್ಯಾಸಿಗಳು ಸಚ್ಚಾರಿತ್ರ್ಯರಾಗಿದ್ದರು ಎಂಬುದು ನಮಗೆ ಗೊತ್ತಿದೆ. ನಾವು ಅದನ್ನು ಹೇಳಿದರೆ ಮಹಿಳೆಯರು ನಮಗೆ ಸಿಗುವುದಿಲ್ಲ ಎಂಬ ಕಾರಣದಿಂದ ನಮ್ಮದು ಭೋಗವರ್ಧನವಾಳ ಪರಂಪರೆ ಎಂದು ಹೇಳಿದ್ದೇವೆ.
ನಮ್ಮ ಪೂರ್ವಾ(ಅಂದ್ಕೊಳಿ ಪಶ್ಚಿಮ, ಉತ್ತರ, ದಕ್ಷಿಣ ಯಾವ್ದಾದ್ರೂ ಅಂದ್ಕೊಳಿ)ಶ್ರಮದ ಮತೆತನವೇ ಖತರ್ನಾಕ್ ಕೆಚ್ಚಹರುಕ ಸಂಸ್ಕೃತಿಯದ್ದು ಎಂಬುದು ಇಡೀ ಸಮಾಜಕ್ಕೆ ಬಟಾಬಯಲಾದ ವಿಷಯವಾಗಿದೆ. ಅಷ್ಟೆ ಆಗಿದ್ದರೆ ಪರವಾಗಿರಲಿಲ್ಲ ಆರುಕೋಟಿ ಜನರಿಗೂ ಮೇಲಷ್ಟು ಕೋಟಿ ಭಾರತೀಯರಿಗೂ ವಿಷಯ ವೇದ್ಯವಾಗಿದೆ. ಹೀಗಾಗಿ ಸಂಸ್ಥಾನದವರು ತಾವು ಉತ್ತಮರೆಂದು ಮುದ್ರೆ ಒತ್ತಿ ಹೊಸದಾಗಿ ಅದನ್ನು ತಮ್ಮ ಗಿಂಡಿಗಳ ಮೂಲಕ ಶ್ರುತಪಡಿಸುವ ಅಗತ್ಯವಿಲ್ಲವೆಂದು ತುಮರಿ ಹೇಳಿದ್ದಾನೆ.

ಬರೇ ಮಠದ ಮುದ್ರೆಯನ್ನು ಒತ್ತುತ್ತ ಕೂತರೆ ಪರವಾ ಇರ್ಲಿಲ್ಲ, ನಾವು ನಮ್ಮ ಸಾಮಾನು ಮುದ್ರೆಯನ್ನೆ ಮಠದ ಮುದ್ರೆಯನ್ನಾಗಿ ಮಾಡಿಕೊಂಡು ಮಹಿಳೆಯರಿಗೆ, ಹದಿಹರೆಯದ ಹುಡುಗಿಯರಿಗೆ ಒತ್ತುತ್ತಲೇ ಇದ್ದಿದ್ದರಿಂದ ಪ್ರಸಂಗ ಇಲ್ಲಿಗೆ ಬಂದು ನಿಂತಿದೆ.

ಒಂದೊಂದ್ಸಲ ನಮಗೂ ಅನ್ಸುತ್ತೆ ಬೇಕಾಗಿತ್ತಾ ಇದೆಲ್ಲಾ ಅಂತ, ಆದರೂ ಆಗಿಹೋಗಿದ್ದನ್ನು ಆಗಿಲ್ಲ ಎಂದು ಸಾಧಿಸುವುದರಲ್ಲೇ ನಾವು ಮುಂದಾಗಿದ್ದೇವೆ. ಕೋಟಿಗಳಲ್ಲಿ ಕೊಟ್ಟಿದ್ದರಿಂದ ’ಪ್ರಸಾದ’ ತಿಂದ ಜನ ನಮ್ಮನ್ನು ಇಲ್ಲಿಯವರೆಗೆ ರಕ್ಷಣೆ ಮಾಡಿದ್ದಾರೆ. ದೇಶದಲ್ಲಿ ಅಥವಾ ರಾಜ್ಯದಲ್ಲಿ ಕೇವಲ ಒಂದು ಕ್ರಿಮಿನಲ್ ಕೇಸ್ ದಾಖಲಾದ ಯಾವ ವ್ಯಕ್ತಿಯನ್ನೂ ಬಂಧಿಸದೇ ಇರಲಿಲ್ಲ, ಆದರೆ ನಮಗೆ ಮಾತ್ರ ಎಷ್ಟು ಕೇಸು ದಾಖಲಾದರೂ ಅದರಿಂದ ಸ್ಪೆಷಲ್ ವಿನಾಯತಿ ಇದೆ. ಯಾಕೆಂದರೆ ಕಾನೂನನ್ನು ಜಾರಿಗೊಳಿಸುವವರಿಗೆ ನಾವು ಸುವರ್ಣ ಮಂತ್ರಾಕ್ಷತೆ ಕೊಟ್ಟಿದ್ದೇವೆ.

ಇಷ್ಟು ದಿನ ನಾವಾಗಲಿ ನಮ್ಮ ಬಾವನಾಗಲಿ ಮಾಡಿದ ಯಾವ ತಪ್ಪನ್ನೂ ಒಪ್ಪಕೊಳ್ಳಲಿಲ್ಲ. ಸುಳ್ಳನ್ನೇ ಸತ್ಯವೆಂದು ದಶಕದಿಂದ ಸಾಧಿಸಿ ತೋರಿಸಿದ್ದೇವೆ. ಆದರೆ ಈಗ ಪೀಠದಲ್ಲಿರುವ ಶಕ್ತಿಯೇ ನಮ್ಮನ್ನು ಬಂಧಿಸುವಂತೆ ಮಾಡುತ್ತಿದೆ. ಬಂಧನ ಎನ್ನುವ ಕನ್ನಡ ಪದವನ್ನೂ ಮತ್ತು ವಾರಂಟ್ ಎನ್ನುವ ಇಂಗ್ಲೀಷ್ ಪದವನ್ನೂ ಕೇಳಿದರೆ ನಮಗೆ ಒಳಗೊಳಗೆ ನಡುಕ ಹುಟ್ಟುತ್ತಿದೆ. ಆಗ ನಾವು ಸೇವಿಸುವ ’ತೀರ್ಥ’ವನ್ನು ಸೇವಿಸಿ ಸುಧಾರಿಸಿಕೊಳ್ಳುತ್ತೇವೆ.

ಪೀಠಕ್ಕೆ ಬಂದಾಗಿನಿಂದ ನಾವು ದೇವರನ್ನು ಸಮಯಕ್ಕೆ ಸರಿಯಾಗಿ ಪೂಜಿಸಿದ್ದು ಇಲ್ಲವೇ ಇಲ್ಲ. ಕೆಲವೊಮ್ಮೆ ಬೆಳಗಿನ ಐದು ಗಂಟೆಗೇ ಪೂಜೆ, ಇನ್ನು ಕೆಲವೊಮ್ಮೆ ಬೆಳಗಿನ ಪೂಜೆ ಸೀದಾ ಮಧ್ಯಾಹ್ನಕ್ಕೆ ಹಾರುತ್ತದೆ. ಕಾಮಕತೆ ನಡೆಸುವ ದಿನಗಳಲ್ಲಿ ಸಂಜೆಯ ಪೂಜೆ ಐದು ಗಂಟೆಗೇ ಮುಗಿಸುತ್ತಿದ್ದೆವು, ಮೀಟಿಂಗು ಇರುವಾಗ ದೇವರಿಗೆ ಅಪರಾತ್ರಿ ಒಂದುಗಂಟೆಗೂ ಪೂಜೆಯ ಶಾಸ್ತ್ರ ಸಂದಿದೆ. ಪೂಜೆಯೆಲ್ಲ ಯಾತಕ್ಕೆ? ಆದರೆ ನಮ್ಮ ಬಕರಾಭಕ್ತರಿಗೆ ತೋರಿಸಬೇಕಲ್ಲ ಅಂತ ಪೂಜೆ ಮಾಡ್ತೇವೆ ಅಷ್ಟೆ. ವಾಸ್ತವವಾಗಿ ನಾವು ಲಿಂಗವನ್ನು ಗುಹಾಂತರ್ಗತ ಮಾಡುವ ಪೂಜೆಯೇ ನಮಗೆ ಇಷ್ಟ. ಅದನ್ನು ಬಕರಾಭಕ್ತರಿಗೆ ಹೇಳುವ ಹಾಗಿಲ್ಲವಲ್ಲ?

ನಮ್ಮ ಪೂಜೆಗೆ ಹೊಸ ಅಯಾಮ ನೀಡುತ್ತೇನೆಂದ ಬಾವಯ್ಯ ಆರತಿ ಮಾಡುವ ಸಮಯದಲ್ಲಿ ಜನರನ್ನು ಭ್ರಮಾಲೋಕಕ್ಕೆ ತಳ್ಳಲು ರೊಯ್ಯ ರೊಯ್ಯ ಎನ್ನುವ ಸದ್ದು ಮಾಡುವ ಇಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆ ಅಳವಡಿಸಿದ. ಅಂದಿನಿಂದ ಆರತಿಯ ಸಮಯದಲ್ಲಿ ಬಕರಾಭಕ್ತರು ನಾದಲೋಲುಪರಾಗಿ ಭಕ್ತಿ ಭಾವದಲ್ಲಿ ಮುಳುಗಿ ಈ ಲೋಕವನ್ನೇ ಮರೀತಾರೆ; ಆಗ ನಾವು ಪೂಜಾ ರೂಮಿನಿಂದಲೇ ನಮಗೆ ಬೇಕಾದವರನ್ನು ಮಹಾತಪಸ್ವಿಯಂತೆ ನೋಡುತ್ತೇವೆ. ಅಹಹ ಎಂತಹ ದಿವ್ಯ ಪ್ರಭೆ ಎಂದುಕೊಳ್ಳಬೇಕು ಅವರು. ಇದು ನಮ್ಮ ಪ್ಲಾನು.

ಹಾಳಾಗ್ ಹೋಗ್ಲಿ ಬಿಡಿ, ನಮಗೀಗ ಕೇಸಿನಿಂದ ತಪ್ಪಿಸಿಕೊಂಡರೆ ಸಾಕಾಗಿದೆ. ನಾವು ತಪ್ಪು ಮಾಡಿಲ್ಲ ಎಂದೇ ವಾದಿಸುತ್ತ ಬಕರಾಭಕ್ತರನ್ನು ಎಷ್ಟೇ ಕನ್ವಿನ್ಸ್ ಮಾಡಿದರೂ ಬ್ರೇಕ್ ಫೇಲಾದ ಗಾಡಿ ಎಂಬ ಸುದ್ದಿ ತಿಳಿದ ತಕ್ಷಣ ಜೀವರಕ್ಷಣೆಗಾಗಿ ಅತಿಶೀಘ್ರವಾಗಿ ಹಾರಿಳಿದುಕೊಳ್ಳಲು ಹವಣಿಸುವಂತೆ ಅಲ್ಲಲ್ಲೇ ಕೊಂಡಿ ಕಳಚಿಕೊಳ್ಳುತ್ತಿದ್ದಾರೆ. ದಿನಗಳೆದಂತೆ ನಮ್ಮ ಬಕರಾಭಕ್ತರ ಸಂಖ್ಯೆ ಕಮ್ಮಿ ಆಗುತ್ತಲೆ ಇದೆ.

ನಮ್ಮ ಪಟಾಲಮ್ಮಿನವರು ಮಹಿಳೆಯರಿಗೆ ಭಕ್ಷೀಸು ಕೊಟ್ಟು ಕರೆಸುವಂತೆ ಮಾಡಿದೆವು, ಆದರೂ ಸಾಕಷ್ಟು ಜನ ಸೇರಲಿಲ್ಲ. ಕೆಲವರು ಏನಾಗುತ್ತದೆ ಎಂದು ತಿಳಿದುಕೊಳ್ಳುವುದಕ್ಕೆ ಬಂದಿದ್ದರಂತೆ. ನಮ್ಮ ಕಚ್ಚೆ ಪರಿಮಳವನ್ನು ಮುಚ್ಚಿಕೊಳ್ಳುವ ಸಲುವಾಗಿ ಹಲ್ಲಿಲ್ಲದ ಮುದುಕಿಯರನ್ನೆಲ್ಲ ಒಟ್ಟುಗೂಡಿಸಿ ಪಟ್ಟಗಟ್ಟಿದ್ದೇವೆ; ಅವರಿಗೂ ಆಗಾಗ ಕಾಂಚಾಣ ಕೊಟ್ಟರೆ ಉಂಟು, ಅದಿಲ್ಲದಿದ್ದರೆ ಅದೂ ಇಲ್ಲ. ಬಿಳಿ ಆನೆಗಳನ್ನು ಸಾಕುವುದು ಕಷ್ಟವಂತೆ, ಆದರೆ ಇಷ್ಟುದಿನ ಬಕರಾಭಕ್ತರ ಹಣ ಇದ್ದಿದ್ದರಿಂದ, ಬಂಗಾರ ಕರಗಿಸಿದ್ದರಿಂದ ಹಣಕ್ಕೆ ತೊಂದರೆಯಾಗಲಿಲ್ಲ. ಮುಂದೆ ಅದೆಷ್ಟು ದಿನ ಸಾಲುತ್ತದೆ?

ಇಷ್ಟೆಲ್ಲ ರಾದ್ಧಾಂತವಾಗಿ ಡಿ.ಎನ್.ಎ ಪರೀಕ್ಷೆ ಪಾಸಿಟಿವ್ ಅಂತಿದ್ದರೂ ಯಾಕೆ ನಮ್ಮನ್ನು ಇನ್ನೂ ಸರಿಯಾಗಿ ವಿಚಾರಿಸುತ್ತಿಲ್ಲ, ಯಾಕೆ ಬಂಧಿಸುತ್ತಿಲ್ಲ ಎಂದು ರಾಜ್ಯಾದ್ಯಂತ ಜನ ಕೇಳತೊಡಗಿದ್ದಾರಂತೆ. ಆ ವಿಷಯ ಕೇಳಿ ರಾಜ್ಯದ ಜನತೆಯ ಮೇಲೆ ನಮಗೆ ಬಂದ ಕೋಪ ಅಷ್ಟಿಷ್ಟಲ್ಲ.

ನಿರ್ಲಜ್ಜ ರಾಜಕಾರಣಿಗಳಂತೆ ಸಮಾವೇಶ ಶೂರರಾದ ನಮಗೆ ಏನೂ ಇಲ್ಲದಿದ್ದರೆ ಅದೊಂದು ಮಾರ್ಗವಿದೆ ಎಂಬುದು ಗೊತ್ತು. ಈ ಹಿಂದೆಯೂ ನಮ್ಮ ಕಚ್ಚೆಪರಿಮಳ ಮುಚ್ಚುವ ಮಹತ್ಕಾರ್ಯಕ್ಕೆ ಅತ್ತಿಬೆಲೆ, ಮಂಚನಬೆಲೆ, ಸೂಲಿಬೆಲೆಗಳಿಂದ ಜನರನ್ನು ಕರೆಸಿದ್ದೆವಲ್ಲ. ಒಮ್ಮೆ ಕವರ್ ಇಸಿದುಕೊಂಡು ಹೋದ ಅವರು ನಿಜಾಂಶ ಗೊತ್ತಾದ ಬಳಿಕ ಜನ ತಮ್ಮನ್ನು ನಿಲ್ಲಿಸಿ ಕಲ್ಲಿನಿಂದಲೋ ಚಪ್ಪಲಿಯಿಂದಲೋ ಪೂಜೆಮಾಡ್ತಾರೆ ಎಂದುಕೊಂಡು ಮತ್ತೆ ಬರಲಿಲ್ಲ; ಆಗ ಬರ್ತೇನೆ, ಈಗ ಬರ್ತೇನೆ ಎನ್ನುತ್ತಲೇ ದಿನಗಳೆದರು. ಹೀಗೆ ದುಡ್ಡು ತೆಗೆದುಕೊಂಡವರೆಲ್ಲ ಅವರವರ ಕೆಲಸ ಆದಮೇಲೆ ಕಾಲು ಕೀಳುತ್ತಾರೆ. ಯಾರನ್ನೂ ನಂಬಲು ಸಾಧ್ಯವಾಗುತ್ತಿಲ್ಲ.

ಶಬರಿ ರಾಮನನ್ನು ಕೇಳಿ ರಾಮನಿಗಾಗಿ ಕಾದಿರಲಿಲ್ಲ, ರಾಮ ಶಬರಿಗೆ ಹಾಗೆ ಕಾಯಲೂ ಹೇಳಿರಲಿಲ್ಲ. ಅದೊಂದು ಭಕ್ತಿ. ಶಬರಿಗೆ ಹಾಗೆ ದಿನವೂ ಹಣ್ಣುಗಳನ್ನೆಲ್ಲ ಅರೇಂಜ್ ಮಾಡಿಕೊಂಡು ರಾಮನಿಗಾಗಿ ಕಾಯಬೇಕು ಅನ್ನಿಸಿತ್ತು, ಕಾದಳು. ಇದನ್ನೇ ನಾವು ನಮ್ಮ ಮಾತುಗಳಲ್ಲಿ ದ್ವಂದಾರ್ಥದಲ್ಲಿ ಹೇಳಿದ್ದೇವೆ. ಅಲ್ಲಿ ನಮ್ಮನ್ನು ಕಾಯುತ್ತಿರುವ ಪಟಾಲಮ್ಮನ್ನೇ ರಾಮ ಎಂದು ನಾವು ಪರೋಕ್ಷವಾಗಿ ಹೋಲಿಸಿ, ನಮ್ಮನ್ನು ನಾವು ಶಬರಿಗೆ ಹೋಲಿಸಿಕೊಂಡಿದ್ದೇವೆ. ಅವರು ನಾವು ರಾಮ ಮತ್ತು ತಮ್ಮ ಸಂಘಟನೆ ಶಬರಿ ಎಂದುಕೊಂಡಿದ್ದಾರೆ.

ನಮ್ಮ ಕಚ್ಚೆಪರಿಮಳ ಮುಚ್ಚುವ ಅನ್ಯಾಯ ಅನೈತಿಕತೆಯ ಮಹತ್ಕಾರ್ಯಕ್ಕೆ ಕೈಜೋಡಿಸಿದವರನ್ನು ನಾವು ನಮ್ಮ ಖತರ್ನಾಕ್ ಮಾತುಗಳಿಂದಲೇ ಹೊಗಳಿದ್ದೇವೆ. ಬೆಂಬಲಿಗರ ಸಂಖ್ಯೆ ಹೆಚ್ಚಿಸುವ ಸಲುವಾಗಿ, ಅವರಿಗೆಲ್ಲ ಖುಷಿನೀಡುವ ಸಲುವಾಗಿ ಎಲ್ಲರಿಗೂ ಪ್ರೈಜ್ ಕ್ಯಾಚ್ ಎಂಬಂತೆ ಬಿಲ್ಲೆಗಳನ್ನು ನೀಡಿದ್ದೇವೆ; ಹಿಂದೆ ಮಠದ ಪರಂಪರೆಯಲ್ಲಿ ಅತ್ಯುತ್ತಮ ಕೆಲಸ/ ಸೇವೆ ಮಾಡಿದವರಿಗೆ ಮಾತ್ರ ಅದನ್ನು ನೀಡಿ ಗೌರವಿಸುವ ಪರಂಪರೆ ಇತ್ತು; ಮಠದ ಲೆಕ್ಕದಲ್ಲಿ ಅದಕ್ಕೆ ಪದ್ಮಶ್ರೀ ಪ್ರಶಸ್ತಿಯಷ್ಟೆ ಮೌಲ್ಯವಿತ್ತು. ಈಗ ಅದನ್ನೆಲ್ಲ ಅಳಿಸಿಹಾಕಿ ನಮಗೆ ಬೇಕಾದವರಿಗೆಲ್ಲ ನಾವದನ್ನು ನೀಡುತ್ತಿದ್ದೇವೆ.
ನಮ್ಮನ್ನು ಯಾರೂ ಬಂಧಿಸಿ ಒಳಗಿಡದಿರುವುದು, ನಮ್ಮ ಬುಸ್ಸಪ್ಪನ ಹಾರಾಟಕ್ಕೆ ಮಹಿಳೆಯರೂ ಸಹ ಪಿಂಪ್ ಗಳಾಗಿ ಕೆಲಸಮಾಡುವುದು, ನಮ್ಮ ಏಕಾಂತದ ಹಾರಾಟಕಾರ್ಯವನ್ನು ಸುಳ್ಳೆಂದು ಸಮರ್ಥಿಸುವ ಪಟಾಲಮ್ಮು ದೊರೆತಿದ್ದು ಎಲ್ಲವೂ ರಾಂಗಾನುಗ್ರಹ ಪವಾಡಗಳೇ. ಮುಂದೆ ಒಂದೇ ದೊಡ್ಡ ಪವಾದ ಪೆಂಡಿಂಗ್ ಇದೆ; ಅದೇ ’ಕಿರೀಟೋತ್ಸವ.’

ಕರ್ನಾಟಕದಲ್ಲಿ ನೆಟ್ಟಗಿರುವ ಯಾವ ಸನ್ಯಾಸಿಯೂ ನಮ್ಮನ್ನು ಬೆಂಬಲಿಸುವುದಿಲ್ಲ. ಕಚ್ಚೆ ಕಿತ್ತೋದವರು ಕೆಲವರಿದ್ದಾರೆ, ಅವರು ಮಾತ್ರ ನಮಗೆ ಕ್ಲೀನ್ ಚಿಟ್ ಬೆಂಬಲ ನೀಡುತ್ತಾರೆ; ಯಾಕೆಂದರೆ ಮುಂದೆ ಅವರ ಧಾರಾವಾಹಿಗಳೂ ಆರಂಭವಾಗಬಹುದು ಎಂಬ ಹೆದರಿಕೆ ಅವರಿಗೆಲ್ಲ ಇರುತ್ತದೆ, ಆಗ ಅವರ ಬೆಂಬಲಕ್ಕೆ ಬೇಕಲ್ಲ? ಇನ್ನು ಪ್ರಚಾರಪ್ರಿಯ ಕಲ್ಲುತಿಂದೇಶ ತೀರ್ಥ ಸ್ವಾಮಿಗಳು ನಮ್ಮ ಬೆಂಬಲಿಗರ ನೇತೃತ್ವ ವಹಿಸುತ್ತಾರೆ. ನಮಗೆ ಹೆಣ್ಣುಗಳ ಚಟ ಇರುವಂತೆ ಅವರಿಗೆ ಎಲ್ಲಿದ್ದರೂ ಪ್ರಚಾರದ ಚಟ. ಅಬ್ಬರದ ಪ್ರಚಾರ ಆಗುತ್ತಿರಬೇಕು, ದಿನವೂ ಪೇಪರಿನಲ್ಲಿ ಸುದ್ದಿ ಬರಬೇಕು ಎಂಬುದು ಅವರ ಬಯಕೆ!

ಸಂಖ್ಯಾ ಭರ್ತಿಗೆ ನಮಗೆ ತೊಂದರೆ ಆಗಬಾರದೆಂದು ನಾವು ನಾಗಾ ಸಾಧುಗಳು ಮತ್ತು ಇನ್ನಿತರ ಭಂಗೀ/ಗುಡಗುಡಿ ಸೇದುವ ಬಾಬಾಗಳನ್ನು ಕರೆಸಲು ತೀರ್ಮಾನಿಸಿದ್ದೇವೆ. ಅವರ ಸಂಘಕ್ಕೆ ಕರೆಕೊಟ್ಟರೆ ಸಾಕು, ಸಾವಿರದೋಪಾದಿಯಲ್ಲಿ ಬರ್ತಾರೆ. ಈಗ ಹಿಮಾಲಯದ ಕಡೆಗೆ ಇನ್ನು ಚಳಿಗಾಲದಲ್ಲಿ ಹಿಮ ಬೀಳಲು ಆರಂಭವಾಗಿ ಆರುತಿಂಗಳ ಕಾಲ ಓಡಾಟ ಕಷ್ಟ. ಹೀಗಾಗಿ ಅವರೆಲ್ಲ ಉತ್ತರಪ್ರದೇಶದಿಂದ ದೆಹಲಿಯವರೆಗೂ ಬಂದು ನೆಲೆಸುತ್ತಾರೆ.

ಹಿಂದೆ ನಾವೊಮ್ಮೆ ಅವರನ್ನು ಕರೆಸಿದ್ದೆವು. ನೂರಾರು ಮರಗಳ ಮಾರಣಹೋಮ ನಡೆಸಿ ಅವರಿಗೆಲ್ಲ ಬೈಲಕಡೆಗೆ[ಕಕ್ಕ] ಹೋಗುವುದಕ್ಕೆ, ವಸತಿಗೆ ಟೆಂಟ್ ಹಾಕಿಸಿಕೊಟ್ಟಿದ್ದೆವು. ಅವರವರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನೂ ಚಟಗಳಿಗೆ ವ್ಯವಸ್ಥೆಯನ್ನೂ ಪೂರೈಸಿದ್ದೆವು. ನಮ್ಮ ಅಂದಿನ ಬಯಕೆ ಯಾರೂ ಸಾಧಿಸದ ಕೆಲಸಗಳನ್ನು ಸಾಧಿಸಿದ ’ಮಹಾ ಜಗದ್ಗುರು’ ಎಂದು ತೋರಿಸುವುದಾಗಿತ್ತು.
ಅಂದು ನಮ್ಮಲ್ಲಿ ’ಉಂಡು’, ’ಕೊಂಡು’ ಹೋದವರಿಗೆ ನಮ್ಮ ನೆನಪು ಸದಾ ಇದ್ದೇ ಇರುತ್ತದೆ. ಹೀಗಾಗಿ ನಾವು ಕರೆದರೆ ಸಾಕು ಎಲ್ಲಿಗೇ ಬೇಕಾದರೂ ಬರುತ್ತಾರೆ ಅವರು. ಈ ಸಲ ನಾವು ಅವರನ್ನು ಕಡಲತೀರಕ್ಕೆ ಕರೆಸೋಣ ಎಂದುಕೊಂಡಿದ್ದೇವೆ. ಅಲ್ಲಿಂದ ನಮ್ಮ ಸಾಮರ್ಥ್ಯ ಇಷ್ಟು ಎಂದು ರಾಜ್ಯದ ಜನರಿಗೆ ತೋರಿಸುವ ಯೋಚನೆ ನಮ್ಮದು. ಈ ಸಂಕಲ್ಪಗಳ ಹಿಂದೆ, ತೆರೆಮರೆಯಲ್ಲಿ ನಮ್ಮ ಬಾವಯ್ಯನ ಯೋಜನೆಗಳೂ ಕೆಲಸ ಮಾಡುತ್ತಿವೆ.

ಈ ತುಮರಿ ಮೊದಲೇ ಹೇಳಿದ್ದ – “ಬಾವಯ್ಯನನ್ನು ಕಳಿಸಿಬಿಟ್ಟರೆ ಅವ ನಮ್ಮ ರಾಸಲೀಲೆಗಳ ಸಿ.ಡಿ ಬಿಡ್ತಾನಂತೆ” ಅಂತ. ತುಮರಿಗೆ ಹೇಗೆ ಅದೆಲ್ಲ ಗೊತ್ತಾಯ್ತು ಎಂದು ತಿಳಿಯುತ್ತಿಲ್ಲ. ಅದು ಮೈಸೂರಿನಲ್ಲಿ ನಡೆದ ಪಂಚಾಯತಿಯಲ್ಲಿ ಅವ ಹೇಳಿದ್ದು. ನಮ್ಮ ತಂಗಿಗೂ ಅವನಿಗೂ ಜಗಳವಾಗಿ ಬಾವಯ್ಯ ತಂಗಿಯನ್ನು ಬಿಡುತ್ತೇನೆಂದು ಹೆದರಿಸಿದಾಗ ಮೈಸೂರಿನಲ್ಲಿ ನಮ್ಮ ಆಪ್ತ ಭಕ್ತರೊಬ್ಬರ ಮೂಲಕ ನಾವು ಪಂಚಾಯತಿ ನಡೆಸಿದ್ದೆವು. ಬಾವಯ್ಯನ ಚಡ್ಡಿಯಂತ್ರದ ಮಹಾತ್ಮೆಯನ್ನು ಬಲ್ಲ ಅವರು ಬಾವಯ್ಯನನ್ನು ಮಠದಲ್ಲಿ ಇರಿಸಿಕೊಳ್ಳಬಾರದೆಂಬ ಸಲಹೆ ನೀಡಿದರು. ಅದನ್ನು ಕೇಳಿದ ಬಾವಯ್ಯ ಕೈತಪ್ಪಿ ಹೋಗಬಹುದಾದ ಹಸಿರುಹುಲ್ಲುಗಾವಲಿನ ಮೇವಿಗಾಗಿ ಹಂಬಲಿಸಿ, ಕೆಂಡಾಮಂಡಲವಾಗಿ “ನನ್ನ ಮಠದಿಂದ ಕಳ್ಸುದ್ರೆ ಸಿ.ಡಿ.ಬಿಡ್ತಿ ನೋಡ್ಕ್ಯ” ಹೇಳಿ ಹೆದರಿಸಿದ್ದಾನೆ. ಹೀಗಾಗಿಯೆ ನಾವು ಬಾವಯ್ಯನನ್ನು ಸದಾ ಮಠದಲ್ಲೆ ಇಟ್ಟುಕೊಂಡಿದ್ದೇವೆ.

ಮಠದ ಲೆಕ್ಕದಲ್ಲಿ ಬರೆದಿದ್ದೆಷ್ಟು ಬಿಟ್ಟಿದ್ದೆಷ್ಟು, ಬಕರಾಭಕ್ತರು ಎತ್ತಿಟ್ಟ ಅಕ್ಕಿ ಬಂದು ಸೇರಿದಾಗ ಮಠಕ್ಕೆ ದಕ್ಕಿದ್ದೆಷ್ಟು? ಬಾವಯ್ಯನಿಗೆ ಸಿಕ್ಕಿ ಮಾರಾಟವಾಗಿದ್ದೆಷ್ಟು? ಎಂಬುದು ಬಾವಯ್ಯನಿಗಷ್ಟೆ ಗೊತ್ತು. ಬಾವಯ್ಯನಿಗೂ ಮಡಿವಾಳರಿಗೂ ಲೆಕ್ಕಪತ್ರ ವ್ಯವಹಾರಗಳ ಕುರಿತು ಜಗಳವಾಗಿ “ನಮ್ಮ ಬಾವಯ್ಯ ಹೇಳಿದ ಹಾಗೆ ಮಾಡಿ” ಎಂದು ನಾವು ಮಡಿವಾಳರಿಗೆ ಹೇಳಿದ್ದಕ್ಕೆ ಅವರು ಬಿಟ್ಟುಹೋಗಿದ್ದರು. ಮತ್ತೆ ಹೊಸ ಮಸಲತ್ತು ಮಾಡಿ ಬೋಳೆಣ್ಣೆ ಹಚ್ಚಿ ಕರೆಸಿಕೊಂಡೆವು. ಇಷ್ಟೆಲ್ಲ ಅವಾಂತರಗಳು ನಡೆಯುತ್ತಿದ್ದರೂ ಕಣ್ಮುಚ್ಚಿ ಮಲಗಿದ ಹಸುವಿನಂತಿರುವ ಮಡಿವಾಳರ ರಹಸ್ಯವೇನು ಎಂದು ಹಲವರು ಚಿಂತಿಸುತ್ತಿದ್ದಾರಂತೆ.

ಅಂದಹಾಗೆ ನಮ್ಮ ರಾಸಲೀಲೆಯ ಸಿ.ಡಿಗಳು ಎಲ್ಲೆಲ್ಲಿವೆ ಎಂಬುದು ನಮಗೀಗ ಚಿಂತೆಗೆ ಕಾರಣವಾಗಿದೆ. ಮಾವಂದಿರು ತೆಗೆದೊಯ್ದ ಮಠದ ಹಾರ್ಡ್ ಡಿಸ್ಕ್ ಗಳಲ್ಲಿ ಲ್ಯಾಬ್ ನವರು ಹಲವು ಬೇನಾಮಿ ಸಂಗ್ತಿಗಳನ್ನು ರಿಕವರಿ ಮಾಡಿದ್ದಾರಂತೆ. ಅದರಲ್ಲೂ ಕೆಲವು ತುಣುಕುಗಳು ಇರಬಹುದು ಎಂಬುದು ನಮ್ಮ ಅನಿಸಿಕೆ. ಯಾಕೆಂದರೆ ನಾವು ಹೋರಿಯಾಗಿ ಹಾರುವುದನ್ನು ಮಠದ ಗಿಂಡಿಗಳೆಲ್ಲ ಬಲ್ಲರು. ಕಿಟಕಿಗಳಲ್ಲಿ, ಕಾಣಿಸಬಹುದಾದ ಸಂದುಗೊಂದುಗಳಲ್ಲಿ ಅವರು ಅದನ್ನೆಲ್ಲ ನೋಡಿದ್ದಾರೆ, ಕೆಲವರು ರೆಕಾರ್ಡ್ ಮಾಡಿದ್ದಾರೆ. ರೆಕಾರ್ಡ್ ಆಗಿರುವ ರಾಸಲೀಲೆಗಳನ್ನು ಸಂಕಲನ ಮಾಡಿಟ್ಟುಕೊಂಡಿರುತ್ತಾರೆ.

ಹಿಂದೆ ಇದ್ದ ಕೆಲವರು ಈಗ ಇಲ್ಲ, ಅವರನ್ನೆಲ್ಲ ನಾವೇ ಮಠದಿಂದ ಹೊರಗಟ್ಟಿದ್ದೇವೆ. ಅವರು ತಾವೇ ಬಿಟ್ಟೆವು ಎಂದು ಹೇಳಿಕೊಳ್ತಾರೆ. ಅವರೆಲ್ಲ ನಮ್ಮ ಅನುಕೂಲಕ್ಕಾಗಿ ಇರಲಿಲ್ಲ, ನಮ್ಮ ಏಕಾಂತಕ್ಕೆ ಭಂಗ ತರುತ್ತಿದ್ದರು ಎಂಬ ಕಾರಣಕ್ಕೆ ನಾವೆ ಕಳಿಸಿದ್ದೇವೆ. ಹೋದವರಲ್ಲಿ ಕೆಲವರು ತಮ್ಮಲ್ಲಿ ದಾಖಲೆ ಇದೆಯೆಂದು ಹೇಳಿದ್ದಾರಂತೆ. ಯಾರಾದರೂ ಹಣ ತೆಗೆದುಕೊಂಡು ಈ ಕಾನೂನುಗಳನ್ನೇ ಬದಲಾಯಿಸುವ ಹಾಗಿದ್ದಿದ್ದರೆ ಎಷ್ಟೊಂದು ಅನುಕೂಲವಾಗುತ್ತಿತ್ತು. ತಲೆ ಚಿಟ್ಟು ಹಿಡಿದುಹೋಗಿದೆ ನಮಗೆ.

ಓ ಬಾಬಾಗಳೇ, ಓ ಭಂಗಿ ಸೇದುವ ಗೆಳೆಯರೇ ಬನ್ನಿ, ನಿಮ್ಮ ಗೋವಳ ಇಲ್ಲಿ ಕೊಳಲೂದುತ್ತಿದ್ದಾನೆ. “ಅವನು ಮಹಿಳೆಯರಿಗೆ ಕೊಳಲೂದಿದ್ದು ಜಾಸ್ತಿಯಾಯ್ತು” ಎಂದು ಬೆರಳೆಣಿಕೆಯಷ್ಟು ಜನ ಮಠಕ್ಕೆ ಸಂಬಂಧ ಪಡದವರು ಹೇಳುತ್ತಿದ್ದಾರೆ ಎಂದು ನಾವು ಮಾಧ್ಯಮಗಳಿಗೆ ಲೆಕ್ಕಕೊಟ್ಟರೂ, ವಾಸ್ತವದಲ್ಲಿ ಸಾವಿರಾರು ಸಂಖ್ಯೆಯ ವಿರೋಧಿ ಬಣ ನಮ್ಮನ್ನು ಹಣಿಯುತ್ತಿದೆ. ಕಾನೂನಿನ ಕುಣಿಕೆ ಬಲವಾಗುತ್ತಿದೆ. ನೀವೆಲ್ಲರೂ ಪರಶಿವನ ಗಣಗಳಿಗೆ ಹುಟ್ಟಿದ ಸುಪುತ್ರರು. ನಮ್ಮಂತೆಯೆ ನೀವೂ ’ಯತಿ’ಗಳು. ನಾವೆಲ್ಲ ಸೇರಿ ’ಯತಿಗಳ’ನ್ನು ಸಂರಕ್ಷಿಸುವ ಕೆಲಸ ಮಾಡಬೇಕಾಗಿದೆ. ಬನ್ನಿ ಬನ್ನಿ, ರಾಜ್ಯದಲ್ಲಿ ಮೂರ್ನಾಲ್ಕು ಕಡೆಗಳಲ್ಲಿ ಕಚ್ಚೆಹರುಕರ ಬೃಹತ್ ಸಭೆ ನಡೆಸೋಣ. ನಮ್ಮ ಸಾಮರ್ಥ್ಯ ಪ್ರದರ್ಶಿಸೋಣ. ನಮಗೆ ನೀವು ನಿಮಗೆ ನಾವು ಪರಸ್ಪರ ಸಹಾಯ ಸಹಕಾರದ ಅಗತ್ಯವಿದೆ. ಆಪ್ ಲೋಗ್ ಯಹಾಂ ಆಕಾರ್ ರಕ್ಷಾ ಕರೆ

“ಬರೇ ಕಾಮ, ಬರೇ ಕಾಮ”

ಮಹಾಕಾಮಿಗಳ ಪ್ರವಚನ ನಡೆದಿತ್ತು. ಪ್ರವಚನದಲ್ಲಿ ಉತ್ತರದ ನಾಗಾಬಾಬಾಗಳಿಗೆ, ಭಂಗಿ ಸಾಧುಗಳಿಗೆ ಹಾವಾಡಿಗ ಮಹಾಸಂಸ್ಥಾನದವರು ರಕ್ಷಣೆಗೆ ಬರುವಂತೆ ಕರೆ ನೀಡಿದರು.
ಸಭೆಗೆ ಸ್ವಲ್ಪ ದೂರದಲ್ಲಿ ಕೇಳಿಸಿಕೊಳ್ಳುತ್ತ ಕೂತಿದ್ದ ಕ್ಯಾತ ಎದ್ದುನಿಂತು ಹೇಳಿದ “ಸಿವನೇ ಸಂಭುಲಿಂಗ”

Thumari Ramachandra

https://www.facebook.com/groups/1499395003680065/permalink/1676702639282633/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s