ಚಡ್ಡಿಯಂತ್ರ ವಿರೋಧಿ ಸಮಸ್ಯೆಯನ್ನು ತಣ್ಣಗಾಗಿಸಿಕೊಳ್ಳುವ ಹಾದಿಯಲ್ಲಿ

ಚಡ್ಡಿಯಂತ್ರ ವಿರೋಧಿ ಸಮಸ್ಯೆಯನ್ನು ತಣ್ಣಗಾಗಿಸಿಕೊಳ್ಳುವ ಹಾದಿಯಲ್ಲಿ

[ದಸರಾ ವಿಶೇಷಾಂಕದ ಉಳಿದ ಭಾಗ]

ಶೀಗಳು ನಿಧಾನಕ್ಕೆ ಬಾಯಿ ತೆರೆದು ಘನಗಂಭೀರ ವದನರಾಗಿ ಒಮ್ಮೆ ತೊನೆದು ಕಾವಿ ಎಳೆದುಕೊಂಡು ಪ್ರವಚನ ಆರಂಭಿಸಿದರು.

“ಬರೇ ಕಾಮ…. ಬರೇ ಕಾಮ

ನಾವು ಇಷ್ಟೆಲ್ಲ ಹೀಗೆ ಎಂದು ಎಲ್ಲರಿಗೂ ಗೊತ್ತಿರ್ಲಿಲ್ಲ. ತಲೆಹಿಡುಕ ತುಮರಿಯಿಂದ ಎಲ್ಲ ಹಾಳಾಗಿಹೋಯ್ತು. ನಮಗೆ ಸಿಟ್ಟು ಬಂದ್ರೆ ಕಡಿಯೋದಕ್ಕೆ ಮೂವತ್ತೆರಡು ಹಲ್ಲು ಸಾಲೋದಿಲ್ಲ. ಮಹಿಳೆಯರು, ಮಲ್ಲಿಕಾ ಶರಬತ್ತು, ಕಮಲದ ಹೂವು, ಆಂಜನೇಯ ಹುಟ್ಟಿದ ಸ್ಥಳ ಈ ಪದಗಳಿಂದ[ಮಾತ್ರ] ಈಗೀಗ ನಾವು ಬಹಳ ದೂರ ಇರಲು ಪ್ರಯತ್ನಿಸಿದ್ದೇವೆ. ಅವುಗಳಿಗೂ ನಮಗೂ ಯಾವುದೇ ಸಂಬಂಧವೂ ಇಲ್ಲ ಎಂಬಂತೆ ವರ್ತಿಸುತ್ತಿದ್ದೇವೆ. ಆದರೂ ಆ ಜನ ನಮ್ಮನ್ನು ಬಿಡ್ತಾ ಇಲ್ಲ.

ಮಾತೆತ್ತಿದರೆ ಮಲ್ಲಿಕಾ ಶರಬತ್ತಿಗೆ ಎಂಟುನೂರು ಕಮಲದ ಹೂ ಹಾಸಿ ಪೂಜಿಸಿ, ಆದರಿಸಿ, ಕೋಟಿಕೊಡುವ ಯಾವ ನಮಾಮಿಯ ಶಿಷ್ಯನಿಗೂ ತೋರದ ಅದ್ಧೂರಿ ಸ್ವಾಗತವನ್ನು ನೀಡಿದ್ದೀರಿ ಅಂತಾರೆ. ಕಾವಿ ಹಾಕಿಕೊಳ್ಳಬೇಕೆಂದು ಹಿಂದೆ ತಲೆಯಿಲ್ಲದ ಯಾರೋ ಋಷಿಗಳು ನಿಯಮ ಮಾಡಿದರು. ಕಲಿಯುಗದಲ್ಲಿ ಸನ್ಯಾಸಿಗಳು ಜೀನ್ಸ್ ಹಾಕಿಕೊಳ್ಳಬಹುದು, ಅದು ಧರ್ಮಬಾಹಿರವಲ್ಲ ಅಂತ ಶಾಸ್ತ್ರದಲ್ಲೇ ಹೇಳಿದ್ದಾರೆ,[ನೀವು ಕಿವಿಯಮೇಲೊಂದು ಹೂವು ಇಟ್ಕೊಳಿ] ಮಲ್ಲಿಕಾ ಶರಬತ್ತಿನ ಎದುರು ಕಾವಿ ಹಾಕಿಕೊಂಡಿದ್ದಿದ್ದಕ್ಕೆ ನಮಗೇ ಒಂದು ತರಾ ನಾಚಿಕೆಯಾಗಿತ್ತು. ನಮಗೆ ಜೀನ್ಸ್ ಎಂದರೆ ಬಹಳ ಪ್ರೀತಿ. ಅಂತರಂಗದಲ್ಲಿ “ಏಕಾಂತದಲ್ಲಿ ನಿನಗೆ ಬೇಕಾದಂತೆ ಜೀನ್ಸ್ ಧರಿಸುತ್ತೇವೆ”ಂದು ಹೇಳಲು ಪ್ರಯತ್ನಿಸಿದೆವು. ಇಪ್ಪತ್ತೈದು ಲಕ್ಷ ಕೊಟ್ಟರೂ ಪೈಸೆ ಪ್ರಯೋಜನವೂ ಅಗಲಿಲ್ಲ ಎಂದು ನಮಗೆ ಕೋಪ ಬಂದಿದ್ದೂ ಇದೆ.

ಸಿನಿಮಾದಲ್ಲಿ ದಂತದ ಬೊಂಬೆಯಂತೆ ಕಾಣುತ್ತ ಬಳುಕುವ ಬಳ್ಳಿ ನೇರವಾಗಿ ನೋಡಿದಾಗ ಬಣ್ಣದಲ್ಲಿ ಹಾಗಿಲ್ಲ. ನಮಗೆ ಅವಳೇ ಹೌದೋ ಅಲ್ಲವೋ ಅನುಮಾನವಾಯ್ತು. ಆದರೂ ಕೈಗೊಂಡ ಸಂಕಲ್ಪದಂತೆ ನಮ್ಮ ಖಾಸಾ ಶಿಷ್ಯರು ಸ್ವಾಗತ ಕೋರಿ ಕರೆದು ತಂದರು. ನಾವು ಮರದ ಬುಡದಲ್ಲಿ ಆಸನ ರಹಿತರಾಗಿ ನೆಲದಲ್ಲಿ ಕುಳಿತು ಆಕೆಯೊಡನೆ ಕೌ ಬಾಯ್ ತರದಲ್ಲಿ ಹರಟಿದೆವು. ನಿಜ ಹೇಳೋದಾದ್ರೆ ನಾವು ಏಕಾಂತಕ್ಕೆ ಕರೆಯೋದು ಹೇಗೆ ಎಂದು ಯೋಚಿಸುತ್ತಿದ್ದೆವು. ಸಾವಿರ ಸುತ್ತು ಹಾಕಿ ಅದನ್ನು ಪ್ರಸ್ತಾಪ ಮಾಡಬೇಕೆಂದುಕೊಂಡಿದ್ದೆವು. ನಾವು ನಮ್ಮ ಎಂದಿನ ಕೋಡ್ ವರ್ಡ್ ಬಳಸಿ ನಮ್ಮವರಿಗೆ ಹೇಳಿದ ಹಾಗೆ ಹೇಳಿದ್ದು ಶರಬತ್ತಿಗೆ ಅರ್ಥವಾಗಿರಲಿಕ್ಕಿಲ್ಲ. ಬರೇ ನಗುವಿನಲ್ಲೇ ಮುಗಿಸಿಬಿಟ್ಟಳು.

ಕೋಟಿ ಕೊಟ್ಟಿರೆ ಒಂದು ರಾತ್ರಿಯಿಡೀ ಏಕಾಂತಕ್ಕೆ ಸಿಗಬಹುದಿತ್ತೇನೋ. ನಮಗೆ ಮೊದಲು ಅದು ಹೊಳೆಯಲಿಲ್ಲ. ಒಬ್ಬಳಿಗೇ ಕೋಟಿ ಕೊಟ್ಟರೆ ಉಳಿದವರಿಗೆ ಕೊಡಬೇಕಲ್ಲ? ಬಕರಾಭಕ್ತರು ಹೇಗೂ ಕೊಡ್ತಾರೆ ಬಿಡಿ, ಆದರೂ ಫಸಲಿಗೆ ದರವಿಲ್ಲದೆ ಹೈರಾಣಾದ ಜನ ಪದೇ ಪದೇ ಪ್ರಸ್ತಾಪಿಸಿದ ಹಲವು ಯೋಜನೆಗಳ ಕುರಿತ ಎತ್ತುವಳಿ ಕಂಡು, ಮನದಲ್ಲೇ “ಹಚ..” ಅಂದಿದ್ದಾರೆ.

ರಾಮಾಯಣದ ಅಶೋಕವನವೇ ಇಲ್ಲಿತ್ತು ಎಂದು ಹೇಳಬೇಕೆಂದುಕೊಂಡಿದ್ದೆವು ನಾವು. ಅಶೋಕವನವನ್ನು ನೋಡಲಿಕ್ಕೆ ಬಹಳ ಜನ ಬರೋ ಲಕ್ಷಣ ಕಾಣಲಿಲ್ಲ. ಹೀಗಾಗಿ “ಹನುಮಂತ ಹುಟ್ಟಿದ ಸ್ಥಳ” ಎಂದು ಭೋಂಗು ಬಿಟ್ಟೆವು, “ಮಹಾತಪಸ್ವಿಗಳಾದ ಶೀಗಳ ದಿವ್ಯದೃಷ್ಟಿಗೆ ಗೋಚರವಾಗಿದ್ದು ಸತ್ಯವೇ ಆಗಿರ್ತದೆ” ಎಂದುಕೊಂಡರು ಬಕರಾಭಕ್ತರು. ಅಪ್ಪಟ ಬ್ರಹ್ಮಚಾರಿ ಎನಿಸಿದ ಹನುಮನ ಬೃಹದ್ ಗಾತ್ರದ ವಿಗ್ರಹದ ಸ್ಥಾಪನೆಗೆ ಗುರುತಿಸಿಕೊಂಡ ಸ್ಥಳದಲ್ಲಿ, ಎಲ್ಲವನ್ನೂ ಬಿಚ್ಚಿಟ್ಟು ಹಲವರ ಜೊತೆ ಬೆತ್ತಲಾದವಳಿಂದ ಶಿಲಾನ್ಯಾಸ ಮಾಡಿಸಿದೆವು. ಕೇಳಿದರೆ “ಆಕೆ ಕೋಟಿ ಕೊಡ್ತಾಳೆ ನೀವು ಕೊಡ್ತೀರಾ?” ಎಂದು ನಮ್ಮ ಖಾಸಾ ಶಿಷ್ಯರ ಮೂಲಕ ಪ್ರಶ್ನೆ ಕೇಳಿದವರಿಗೇ ಪ್ರಶ್ನೆ ಹಾಕಿಸಿದೆವು. ಆದರೆ ನಾವೆ ಇಪ್ಪತೈದು ಲಕ್ಷ ಕೊಟ್ಟರೂ ನಮಗೆ ಏಕಾಂತಕ್ಕೆ ಸಿಗದ್ದಕ್ಕೆ ಬಹಳ ಕೋಪವಿದೆ.

ಹಾಳಾದ ಮಾಧ್ಯಮದವರು ಸುದ್ದಿ ಕೇಳಿ ನಮ್ಮನ್ನು ಸುತ್ತುವರಿದುಬಿಟ್ಟರು. ಕೆಲವರು ವೀಡಿಯೋ ತೆಗೆದರು. ಇನ್ನೂ ಕೆಲವರು ವಿವರ ಕೇಳಿದರು. “ಆಕೆ ಅತ್ಯಂತ ಪವಿತ್ರಾತ್ಮ” ಎಂದು ಹೇಳಿ ನಾವು ನಮ್ಮ ಬಕರಾಭಕ್ತರನ್ನು ಇನ್ನಷ್ಟು ಬಕರಾ ಮಾಡಿದೆವು.

ನಮ್ಮ ’ವಿದ್ವಾನ್’ ಬಾವಯ್ಯ ಚಡ್ಡಿಯಂತ್ರಕ್ಕೆ ಸ್ವಲ್ಪ ಬಿಡುವು ಕೊಟ್ಟಾಗ ಕನ್ನಡಕ್ಕೆ ಅನುವಾದಗೊಂಡ ಪುರಾಣದ ಕತೆಗಳನ್ನು ತೆಗೆದುಕೊಂಡು ಓದುತ್ತಿದ್ದ. ನಾವು ಬಾವ-ನೆಂಟ ಸೇರಿ ಪ್ರತಿಯೊಂದು ಕತೆಯನ್ನೂ ನಮಗೆ ಹೇಗೆ ಬಳಸಿಕೊಳ್ಳಬೇಕು ಎಂದು ಪ್ಲಾನ್ ಮಾಡುತ್ತಿದ್ದೆವು. ವಾಸ್ತವದಲ್ಲಿ ವಾಲ್ಮೀಕಿ ರಾಮಾಯಣದ ಉಲ್ಲೇಖಗಳ ಪ್ರಕಾರ ಹನುಮ ಹುಟ್ಟಿದ್ದು ಹಂಪೆಯಲ್ಲೇ. ಅದೇ ಸುಳ್ಳು ಮತ್ತು ನಾವು ಹೇಳುವುದೇ ಸತ್ಯ ಎಂದು ಹೇಳಿದವರು ನಾವು.

ನಮ್ಮ ಜನರಿಗೆ ಪುರಾಣ ಪುಣ್ಯಕತೆಗಳನ್ನು ಸುದೀರ್ಘವಾಗಿ ಓದಿಕೊಂಡು ಅಭ್ಯಾಸವಿಲ್ಲ. ವೇದಗಳ ಬಗ್ಗೆ ಆಸಕ್ತಿಯಿಲ್ಲ. ಹೀಗಾಗಿ ನಮಗೆ ಎಲ್ಲವೂ ಗೊತ್ತು ಎಂದು ತೋರಿಸಿಕೊಳ್ಳುತ್ತ ನಮ್ಮ ಅನುಕೂಲಕ್ಕೆ ತಕ್ಕ ಕತೆಗಳನ್ನು ಹೊಸೆದುಕೊಂಡೆವು. ಭೂಕೈಲಾಸದಲ್ಲಿ ಪರಶಿವನೇ ಪ್ರಧಾನ ದೇವರು. ಅವನ ಮುಂದೆ ಅವನ ಅಂಶಾವತಾರಿಯಾದ ಹನುಮನನ್ನು ನಿಲ್ಲಿಸಿ, ಯಾತ್ರಿಕರನ್ಜು ಹೆಚ್ಚಿಸಿ ದುಡ್ಡುಪೀಕುವ ನಮ್ಮ ಯೋಜನೆ ಹೇಗೋ ಬುಡಮೇಲಾಗಿಬಿಟ್ಟಿತು. ಪರಶಿವನ ಜಾಗದಲ್ಲಿ ಕೋಟಿ ರುದ್ರರೆಲ್ಲ ಜಾಗೃತರಾಗಿದ್ದಾರೆ ಎಂದು ನಮಗೀಗ ಅನಿಸುತ್ತಿದೆ.

ಆಯುಧ ಪೂಜೆಯ ಪ್ರಯುಕ್ತ ಭಾರತದಾದ್ಯಂತ ಯಂತ್ರಗಳಿಗೆ ಒಂದು ದಿನದ ಬಿಡುವಿರುತ್ತದೆ. ಆದರೆ ನಮ್ಮಲ್ಲಿ ನಮ್ಮ ಮತ್ತು ನಮ್ಮ ಬಾವಯ್ಯನ ಚಡ್ಡಿ ಯಂತ್ರಗಳಿಗೆ ಬಿಡುವೇ ಇಲ್ಲ. ಅವುಗಳಿಗೆ ನೀವೆಲ್ಲ ನಡೆಸುವ ಬಹಿರಂಗದ ಆಡಂಬರದ ಪೂಜೆ ಬೇಕಾಗಿಲ್ಲ. ಅವು ’ಅಂತರಂಗದ ಪೂಜೆ’ಯಿಂದ ಸಂಪ್ರೀತವಾಗುತ್ತವೆ. ನೀತಾ ಗುಂಜಾಲಪ್ಪನಂತ ಹಲವರಿಗೆ ಅಂತರಂಗದ ಪೂಜೆಯ ಮಹಿಮೆ ಗೊತ್ತಿದೆ. ಹೀಗಾಗಿ ಅನಿವಾರ್ಯವಾಗಿ ಪೂಜೆಯ ಪರಿಕರಗಳಿಗೆ ಕೊರತೆ ಬಿದ್ದರೆ ಅವರಿಗೆ ಹೇಳಿದರೆ ಸಾಕು ವ್ಯವಸ್ಥೆ ಮಾಡುತ್ತಾರೆ.

ನಮ್ಮ ಬಾವಯ್ಯನ ಚಡ್ಡಿಯಂತ್ರಕ್ಕೆ ಸಿಕ್ಕಿ ತಮ್ಮತನವನ್ನು ಕಳೆದುಕೊಂಡ ಹದಿಹರೆಯದ ಹೆಣ್ಣುಮಕ್ಕಳ ಸಂಖ್ಯೆ ಇಷ್ಟೇ ಅಂತ ನಮಗೂ ಗೊತ್ತಿಲ್ಲ. ಬಕರಾಭಕ್ತರಲ್ಲಿ ಅಂದು ನಮ್ಮಲ್ಲಿಗೆ ದೂರು ತಂದವರ ಪ್ರಕಾರ ಕನಿಷ್ಠ ಇಪ್ಪತ್ತೈದು ಎಂದು ತಿಳಿದುಬಂದಿದೆ. “ಮಹಾಸಂಸ್ಥಾನದವರಿಗೆ ವಿಷಯ ತಿಳಿದಿರಲಿಕ್ಕಿಲ್ಲ, ಅವರಲ್ಲಿ ಹೇಳಿದರೆ ಪರಿಹಾರ ಸಿಗಬಹುದು, ಬಾವನಿಗೆ ತಕ್ಕ ಶಿಕ್ಷೆ ವಿಧಿಸಬಹುದು” ಎಂದುಕೊಂಡು ಮಠಕ್ಕೆ ಬಂದು ನಮ್ಮಲ್ಲಿ ಹೇಳಿದರು. ನಾವು ಅವರ ವಿರುದ್ಧವೇ ಸಡ್ಡುಹೊಡೆದು, ಪರಿಸ್ಥಿತಿ ನಮ್ಮ ಕೈಮೀರಬಾರದೆಂದು ವಲಯಾಡಳಿತಗಳ ವರೆಗಿನ ಜನರನ್ನೆಲ್ಲ ಬದಲಾಯಿಸಿಬಿಟ್ಟೆವು. ಅವರಲ್ಲಿ ಪಾನಿಪೂರಿಯವರು ಕಾನೂನಿನ ಮೊರೆ ಹೊಕ್ಕಾಗ ಬಾವಯ್ಯನನ್ನು ಆರುತಿಂಗಳು ಅಜ್ಞಾತವಾಸದಲ್ಲಿ ಇರಿಸಿದ್ದೆವು. ರಾಜಕರಣಿಗಳಿಗೆ ಸೂಟ್ ಕೇಸ್ ಕಳಿಸಿ ವ್ಯವಹಾರ ಮುಗಿಸಿ ಬಾವಯ್ಯನನ್ನು ಮತ್ತೆ ಕರೆಸಿಕೊಂಡೆವು.

ನಮ್ಮ ಬಾವಯ್ಯನೂ ಸಾಕಷ್ಟು ಚಿಂತನೆ ನಡೆಸಿದ್ದಾನೆ. ’ವಿದ್ವಾಂಸರು’ಎಂದರೆ ಸುಮ್ಮನೆ ಆಗುವುದೆ? ಸಮಾಜದಲ್ಲಿ ಆರ್ಥಿಕವಾಗಿ ತೊಂದರೆಗಳಲ್ಲಿರುವ ನಡುವಯಸ್ಸಿನ ಸಂಸಾರಿಗಳಲ್ಲಿ, ಚಿಂತೆಯಿಂದ ಗಂಡ-ಹೆಂಡಿರ ನಡುವೆ ಸಂಭೋಗ ಸರಿಯಾಗಿ ನಡೆಯೋದಿಲ್ಲ. ಅಂತವರನ್ನು ಗುರುತಿಸಲು ನಾವೀರ್ವರು ಮೊದಲು ಪ್ಲಾನ್ ಮಾಡಿದೆವು. ಅವರಿಗೇನು ಬೇಕು? ನಮ್ಮ ಲೆಕ್ಕದಲ್ಲಿ ಒಂದೆರಡು ಲಕ್ಷ ಹಣ ಬೇಕು. ನಮಗೆ ಬೇಕಾದ್ದನ್ನು ಅವರು ಕೊಟ್ಟರೆ ಅವರಿಗೆ ಬೇಕಾದ್ದನ್ನು ನಾವು ಕೊಡಬಲ್ಲೆವು ಎಂದು ಪರೋಕ್ಷವಾಗಿ ಹೇಳಿದೆವು. ಅದಕ್ಕೆ ಸಮ್ಮತಿಸಿದ ಸುಂದರ ಮಹಿಳೆ[ಆಂಟಿ]ಯರನ್ನು ಮೊದಲು ಏಕಾಂತಕ್ಕೆ ಕರೆಸಿದೆವು. ಅವರಿಗೆ ಬೇಕಾದ ತಾತ್ಕಾಲಿಕ ಪರಿಹಾರ ನೀಡಿ ಅಂತವರೊಡನೆ ಏಕಾಂತ ಮುಂದುವರಿಸಿದೆವು. ಅಂತವರಿಗೆ ನಾವು ಮಾಡಿಕೊಟ್ಟ ಬೇನಾಮಿ ಪಿಜಿಗಳು ಮತ್ತು ಇಂಡಸ್ಟ್ರಿಗಳನ್ನು ಈಗಲೂ ನೀವು ನೋಡಬಹುದು. ಅಂತವರ ಸೇವೆ ಇಂದಿಗೂ ಸುಲಲಿತಾ ಮುಂದುವರಿಯುತ್ತದೆ ಎಂದು ಅವರೆಲ್ಲ ಹೇಳಿದ್ದಾರೆ.

ನಾವು ಹೋದಲ್ಲೆಲ್ಲ ನಮಗೆ ಇಂಟರ್ನೆಟ್ಟು ಸದಾ ಇರಲೇಬೇಕು; ಯಾಕೆ ಗೊತ್ತೆ? ಅಲ್ಲಿ ಸಿಗುವ ತರಾವರಿ ನೀಲಿ ಚಿತ್ರಗಳನ್ನು ನೋಡದಿದ್ದರೆ ನಮಗೆ ಸಮಾಧಾನವೇ ಇಲ್ಲ. ಏಕಾಂತ ನಡೆಸುವಾಗ ಐಪ್ಯಾಡಿನಲ್ಲಿ ನೀಲಿ ಚಿತ್ರ ಹಾಕಿಕೊಂಡೇ ಏಕಾಂತ ನಡೆಸಿದ್ದೂ ಉಂಟು. ತಿರುಗಾಟದ ವಾಹನದಲ್ಲಿ, ಏಕಾಂತದ ರೂಮಿನಲ್ಲಿ ಅಂತ ದಿನದ ಕೆಲವುಭಾಗವನ್ನು ನಾವು ನೀಲಿ ಚಿತ್ರಗಳ ವೀಕ್ಷಣೆಯಲ್ಲೆ ಕಳೆಯುತ್ತೇವೆ. ಅಲ್ಲಿ ನೋಡಿದ್ದನ್ನು ಏಕಾಂತದಲ್ಲಿ ಅನುಷ್ಠಾನಕ್ಕೆ ತರುತ್ತೇವೆ. ಹೀಗಾಗಿಯೇ ನಮ್ಮನ್ನು ಕರೆಸುವವರು ಫೈವ್ ಸ್ಟಾರ್ ವ್ಯವಸ್ಥೆ ಕಲ್ಪಿಸಬೇಕೆಂದು ನಾವು ಮೊದಲೇ ನಿಯಮಾವಳಿಗಳನ್ನು ಕೊಟ್ಟುಬಿಡ್ತೇವೆ.

ಅಪ್ಪೆಮನೆಯ ಪುರದಲ್ಲಿ ಮನೆಯೊಂದಕ್ಕೆ ಕರೆದಾಗ ಅಲ್ಲಿ ಇಂಟರ್ನೆಟ್ಟು ಇರಲಿಲ್ಲ. ಕೇವಲ ನಮ್ಮ ಮೊಕ್ಕಾಮಿನ ಒಂದೂವರೆ ದಿವಸದ ಮಟ್ಟಿಗೆ ಆ ಮನೆಯ ಯಜಮಾನ ಇಂಟರ್ನೆಟ್ಟು ಹಾಕಿಸಬೇಕಾಯ್ತು. ತೊಂದರೆಯಿಲ್ಲ, ಗ್ರಾಮವಾಸ್ತವ್ಯ ನಾಟಕದ ನಂತರ ಹಾಕಿದ ಎಲ್ಲವನ್ನೂ ಕಿತ್ತುಕೊಂಡು ಹೋದ ಹಾಗೆ ನಾವೇನು ನೀವು ಹಾಕಿಸಿದ್ದನ್ನೆಲ್ಲ ಎತ್ಕೊಂಡು ಹೋಗೋದಿಲ್ಲವಲ್ಲ. ಅದೆಲ್ಲ ಆಮೇಲೆ ಬಳಕೆಗೆ ಬರ್ತದೆ, ಬಿಲ್ಲೊಂದನ್ನು ಕಟ್ಟಿಕೊಳ್ಳುತ್ತ ಇದ್ದರಾಯ್ತು. ನಾವು ಎತ್ಕೊಂಡು ಹೋಗುವುದು ಸುಂದರ ಮಹಿಳೆಯರು ಮತ್ತು ಹುಡುಗಿಯರನ್ನು ಮಾತ್ರ. ಮತ್ತು ಅವರೆಲ್ಲರ ಸಲಹುವ ನಮ್ಮ ಶೋಕಿಗಾಗಿ ಸಾಮ್ರಾಜ್ಯ ವಿಸ್ತರಣೆ.

ಅಶ್ವಿನಿ ನಕ್ಷತ್ರದ ನಿರಂತರ ಬೆಳಕಿನ ಸೇವೆಗೆ ಅದನ್ನು ಸೃಷ್ಟಿಸಿದವರು “ಶೀಗಳ ಪಾದಕ್ಕೆ ಅರ್ಪಿಸಿದ್ದೇವೆ, ಏನು ಮಾಡ್ತೀರಿ ನೋಡಿ” ಎಂದು ಹೇಳಿದರು. ಶೋಕರಹಿತ ಜಾಗದ ಬಕರಾಭಕ್ತನೊಬ್ಬ ಅಗ್ಗಕ್ಕೆ ಕೊಟ್ಟ ಜಮೀನಿನಲ್ಲಿ ಅಶ್ವಿನಿ ನಕ್ಷತ್ರದ ಘನತೆಗೆ ತಕ್ಕ ಸ್ಥಾವರವನ್ನು[ಮನೆ ಎನ್ನಬಾರದು] ನಿರ್ಮಾಣ ಮಾಡುತ್ತಿದ್ದೇವೆ. ಮುಂದೆ ನಾವು ಅಗ್ರಹಾರ ವಾಸ ಮುಗಿಸಿ ಮರಳಿದ ನಂತರ ಹಾರಲಿಕ್ಕೊಂದು ವ್ಯವಸ್ಥೆ ಬೇಕಲ್ಲ? ನಮ್ಮ ಖಾಸಾ ಶಿಷ್ಯಂದಿರಿಗೆ ಇವೆಲ್ಲವೂ ಗೊತ್ತು. ಅವರಿಗೆ ಇಷ್ಟೇ ಏನು ನಮ್ಮ ಚಡ್ಡಿಯಂತ್ರದ ಅಸಾಧಾರಣ ಸಾಮರ್ಥ್ಯವೂ ಗೊತ್ತು, ನಾವು ತೆಗೆದುಕೊಳ್ಳುವ ’ತೀರ್ಥ’ವೂ ಗೊತ್ತು. ಅದಕ್ಕೆಲ್ಲ ಅವರೇ ವ್ಯವಸ್ಥಾಪಕರು.

’ಅಖಿಲ ಭಾರತ ಪ್ರಸಾದ ವಿತರಕ ಹಾವಾಡಿಗ ಒಕ್ಕೂಟ ಮಹಮಂಡಲ. ಅನಿಯಮಿತ’ದ ಸಕ್ರಿಯ ಕಾರ್ಯಕರ್ತರಾದ ನಾವು ಅಂದರೆ ಶೀಗಳು ನೀಡುವ ತೀರ್ಥದಲ್ಲಿ ಅಂಥದ್ದೊಂದು ವಿಶೇಷವಿದೆ; ಎಂತಹ ವಿಶೇಷ ಅಂತೀರಾ? ಇಲ್ಲಿಗೆ ಬರುತ್ತಿರುವ ಬಕರಾಭಕ್ತರು ಬರುತ್ತಲೇ ಇರುವಂತೆ ಮಾಡುತ್ತದೆ. ಇನ್ನು ಏಕಾಂತದ ಮಹಿಳೆಯರಿಗೆ ಕೊಡುವ ವಿಶೇಷ ಪ್ರಸಾದವೂ ಹಾಗೆ. ಅದಕ್ಕೆಲ್ಲ ಬೇಕಾಗುವ ಮೂಲವಸ್ತುವನ್ನು ಸಪ್ಲೈ ಕೊಡುವವ ಒಬ್ಬನಿದ್ದಾನೆ! ಹೊರಗೆ ಯಾರಾದರೂ ಕೇಳಿದರೆ ನಾವು ಪ್ರಸಾದ ತಯಾರಿಸುವುದೇ ಸುಳ್ಳೆಂದು ವಾದಿಸುತ್ತೇವೆ.

ಹೇಗೂ ಎಲ್ಲವೂ ಮುಗಿದುಹೋಯಿತು, ಇನ್ನು ಮದುವೆ ಮಾಡಿದರೂ ಕಷ್ಟ ಎಂದುಕೊಂಡ ಕನ್ಯಾಪಿತೃಗಳು ಕೆಲವರು ಅವರ ಹೆಣ್ಣುಮಕ್ಕಳನ್ನು ನಮ್ಮ ಪಾದಕ್ಕೇ ಅರ್ಪಿಸಿದೆವೆಂದು ಹೇಳುತ್ತಾರೆ. ಪಾಪ, ಮಠದ ಆರ್ಥಿಕತೆಯ ಮುಂದೆ ಅವರೆಲ್ಲ ಹೋರಾಡಬಲ್ಲರೇ? ಶೀಗಳು ಎಂದರೆ ರಾಜ ಗುರುಗಳು. ರಾಜ ಇದ್ದಂತೆ, ರಾಜನಿಗೆ ಅಂತಃಪುರದ ತುಂಬ ಹಲವು ರಾಣಿಯರು ಮತ್ತು ಹೋದಲ್ಲೆಲ್ಲ ರಾಣಿಯರು, ಸಖಿಯರು ಇರುತ್ತಾರಲ್ಲವೆ? ನಮ್ದೂ ಒಂತರಾ ಹಾಗೇ. ನಮ್ಮನ್ನು ಪ್ರಶ್ಮಿಸುವ ಹಕ್ಕು ಯಾವ ಬಕರಾಭಕ್ತನಿಗೂ ಇಲ್ಲ. ಇದು ಧರ್ಮಪೀಠ, ಹಾಂ ….ಏನೆಂದುಕೊಂಡಿದ್ದೀರಿ? ನಾವು ಹೇಳಿದ್ದನ್ನು ಕೇಳಿಕೊಂಡು ಮುಚ್ಕೊಂಡಿರಬೇಕು, ಬಾಲ ಬಿಚ್ಚಿದರೆ ನಮ್ಮ ಪಟಾಲಮ್ಮನ್ನು ಕಳಿಸಲಾಗುತ್ತದೆ, ಗೊತ್ತಾಯ್ತೆ?

ನಿನ್ನೆಮೊನ್ನೆಯೂ ನಾವು ನಮ್ಮ ವಿರುದ್ಧ ಮಾತನಾಡಿದವರ ಮೇಲೆ ಕಂಪ್ಲೇಂಟ್ ಕೊಡಿಸುತ್ತಲೇ ಇದ್ದೇವೆ ಮಾರಾಯ್ರೆ. ನಮ್ಮ ಪಾಪದ ಕೊಡ ತುಂಬುವುದಕ್ಕೆ ಇನ್ನೂ ಸ್ವಲ್ಪ ಬಾಕಿ ಇದೆ ಎನಿಸುತ್ತದೆ. ಅಲ್ಲಿಯವರೆಗೂ ನಾವೇ ಕಿಂಗು ಎಂದು ಬಿದ್ದಷ್ಟೂ ಎದ್ದೆದ್ದು ಹಾರುತ್ತಲೇ ಇರ್ತೇವೆ.
ನಮ್ಮ ಮೇಲೆ ದೂರು ದಾಖಲಿಸಿದ ಮಹಿಳೆಯರೇ ಸರಿಯಿಲ್ಲವೆಂದು ಹೇಳಿಸಿದ್ದೂ ಹೇಳಿಸಿದ್ದೆ. ಸಾವಿರಾರು ತಾಲಿಬಾನ್ ಶಿಷ್ಯರು ತಲೆಗೊಂದರಂತೆ ಅವಾಚ್ಯ ನಿಂದನೆಯ ಕಲ್ಲುಗಳನ್ನು ಅವರತ್ತ ಎಸೆದರು, ನಮ್ಮನ್ನು ಹೊಗಳಿದರು. ಆಗ ನಮಗೆ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. ಅದಕ್ಕೆ ಅವರಿಗೆಲ್ಲ ಇತ್ತೀಚೆಗೆ ಸ್ಪೆಷಲ್ ಅನುಗ್ರಹ ನೀಡಿದ್ದೇವೆ. ಬಕರಾಭಕ್ತರು ಅನ್ನೋದು ಯಾಕೆ ಗೊತ್ತೇ? ದೂರು ನೀಡಿದ ಮಹಿಳೆಯರು, ಹೆಣ್ಣುಮಕ್ಕಳು ಏನಾದರೂ ಆಗಿರಲಿ, ಸನ್ಯಾಸಿ ಕಚ್ಚೆಹರುಕ ಎಂದು ಸಾಬೀತಾದರೂ ಇನ್ನೂ ಗುರುವೆಂದು ಹೊಗಳುತ್ತ ಕಾಲಿಗೆ ಬೀಳುವುದು ಕಾಣುತ್ತಿದೆಯಲ್ಲ. ಅಂತಹ ಬಕರಾಭಕ್ತರ ಮಕ್ಕಳಿಗೆ ನೌಕರಿ ಬೇಕಾದವರಿಗೆ ನಮ್ಮಲ್ಲಿ ನಮಗೆ ಬೇಕಾದವರಲ್ಲಿ ಹೇಳಿ ನೌಕರಿ ಕೊಡಿಸುವ ವ್ಯವಸ್ಥೆಯೂ ಉಂಟು.

“ನಾವು ಹಾಗಲ್ಲ, ನಾವು ಇಡೀ ದಿನ ಸಭೆಯಲ್ಲೇ ಕಾಲ ಕಳೀತೇವೆ. ಜನರ ಮಧ್ಯೆಯೇ ಇರ್ತೇವೆ. ನಮ್ಮದು ಸಾವಿರಾರು ವರ್ಷಗಳ ಪರಂಪರೆ. ನಮ್ಮಮೇಲೆ ಸುಳ್ಳು ಆಪಾದನೆ ಮಾಡಿದವರ ಕುಟುಂಬ ಸರ್ವನಾಶವಾಗಿಹೋಗುತ್ತದೆ. ಅದೆಲ್ಲ ನಮ್ಮ ವಿರೋಧಿಗಳು ನಡೆಸಿದ ಷಡ್ಯಂತ್ರ. ನೀವು ಯಾರೂ ಅದನ್ನೆಲ್ಲ ನಂಬಬೇಡಿ. ನಿಮಗೆ ನಮ್ಮ ಮೇಲೆ ನಂಬಿಕೆಯಿದೆ, ನಮಗೆ ನಿಮ್ಮ ಮೇಲೆ ನಂಬಿಕೆಯಿದೆ. ಇಲ್ಲಿಯವರೆಗೆ ಇಟ್ಟ ನಂಬಿಕೆ ಶಾಶ್ವತವಾಗಿರಲಿ ಎಂದು ಬಯಸುತ್ತೇವೆ ನಾವು. ಪೀಠದ ಮರ್ಯಾದೆ ಹೋಗಬಾರದು. ನಿಮ್ಮ ರಕ್ಷಣೆ ನಾವು ನೋಡಿಕೊಳ್ತೇವೆ. ಪೀಠದ ರಕ್ಷಣೆ ನೀವು ನೋಡಿಕೊಳ್ಳಿ” ಎಂದು ಭಾಷಣ ಮಾಡಿದೆವು.

“…ರೇ ..ಮ” ಎಂದು ತಾಲಿಬಾನ್ ಪಡೆಯ ಸದಸ್ಯರು ಕೂಗಿದಾಗ ಬಕರಾಗಳೆಲ್ಲ ದನಿಗೂಡಿಸಿದರು. ಅಂತಹ ಬಕರಾಗಳ ಕಿವಿಯ ಮೇಲೆ ಇನ್ನಷ್ಟು ಹೂವುಗಳನ್ನಿಡಲಿಕ್ಕೆ ನಾವೀಗ ಸಿದ್ಧರಾಗಿದ್ದೇವೆ. ಏನು ಮಾಡಬೇಕು? ಬೃಹತ್ ಸಭೆ ಸಮಾವೇಶ ಮಾಡಬೇಕು, ಅದು ನಮ್ಮ ಸಲುವಾಗಿ ನಡೆಯುವ ಸಮಾವೇಶ ಅಂತ ಉಳಿದ ಸಮಾಜದವರು ಅಂದುಕೊಳ್ಳಬಾರದು. ಹೀಗಾಗಿ “ಸಮಕಾಲೀನ ಧರ್ಮವಿರೋಧಿ ಘಟನೆಗಳ ವಿರುದ್ಧ ಆಂದೋಲನ ನಡೆಸುತ್ತೇವೆ” ಎಂಬ ಪರದೆಯ ಹಿಂದೆ ನಮ್ಮ ಚಡ್ಡಿಯಂತ್ರದ ಮಹಾತ್ಮೆಯನ್ನು ಬಚ್ಚಿಟ್ಟು ಈಡು ಹಾರಿಸಿಬಿಟ್ಟರೆ ಹೂವಿನ ಜೊತೆಗೆ ನಾರೂ ಸಾಗುವಂತೆ ನಮ್ಮ ಘಟನೆಯೂ ಸೇರಿಹೋಗುತ್ತದೆ.

ಕೇವಲ ನಮ್ಮ ಚಡ್ಡಿಯಂತ್ರದ ಮಹಾತ್ಮೆಯ ಬಗ್ಗೆ ಸಮಾವೇಶ ನಡೆಸಿದರೆ ಬೀದಿಯ ಗಂಡು ನಾಯಿಯೂ ಸಹ ನಮ್ಮಕಡೆಗೆ ತಿರುಗಿ ವಿಚಿತ್ರವಾಗಿ ಕೂಗುತ್ತ ಓಡಿಹೋದೀತು; ಯಾಕೆಂದರೆ ವರ್ಷದಲ್ಲಿ ಅದಕ್ಕೆ ಎರಡೇ ಸೀಸನ್ನು. ನಮ್ಮ ಚಡ್ಡಿಯಂತ್ರಕ್ಕೆ ಹಾಗಲ್ಲ, ಅದು ಟ್ವೆಂಟೀಫೋರ್ ಬಾರ್ ಸೆವೆನ್ನು.

ಅಂದಹಾಗೆ ಇತ್ತೀಚೆಗೆ ವೈಜ್ಞಾನಿಕ ಸಮೀಕ್ಷೆಯೊಂದು ನಡೆಯಿತೆಂದು ಆ ತುಮರಿ ಹೇಳ್ತಾನೆ. ಅದರ ಪ್ರಕಾರ, ಸರಾಸರಿ ಯಾವುದೇ ಗಂಡಸು ಸುಂದರ ಮಹಿಳೆಯನ್ನು ನೋಡಿದಾಗ ಮೊದಲು ಅವನಿಗೆ ಯೋಚನೆ ಬರುವುದು ಅವಳೊಂದಿಗೆ ಎಲ್ಲಿ ಮಲಗಲಿ ಎಂಬುದಂತೆ. ಗಂಡಸಿಗೆ ಹೊಟ್ಟೆ ಹಸಿವಿಗಿಂತ ಕಾಮದ ತೆವಲು ಅಧಿಕವಂತೆ. ಅದು ನಿಸರ್ಗ ನಿಯಮವಂತೆ. ಅಂತಹ ಭಾವನೆಗಳನ್ನು ಹತ್ತಿಕ್ಕುವ ಸಲುವಾಗಿ ಮನಸ್ಸಿಗೆ ನಿರಂತರ ಪ್ರಾಕ್ಟೀಸು ಅಗತ್ಯವಂತೆ. ಅದರ ನಿಯಂತ್ರಣಕ್ಕಾಗಿ ಅನುಭವಿಗಳು ಹೇಳಿದಂತ ಕೆಲವು ಆಹಾರಪದಾರ್ಥಗಳನ್ನು ಬಿಡಬೇಕಾಗುತ್ತದಂತೆ. ಯೋಗ, ಧ್ಯಾನಗಳ ಅನುಷ್ಠಾನ ಮತ್ತು ದೈವಭಕ್ತಿ ಇರಬೇಕಂತೆ. ಅಧ್ಯಯನಶೀಲರಾಗಿದ್ದು ಪ್ರಬೋಧ ಸಾಹಿತ್ಯಗಳನ್ನು ಓದಬೇಕಂತೆ. ಆಗ ಮನುಷ್ಯ ಅಂತರಂಗ ಶುದ್ಧಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಂತೆ.

ದೀಕ್ಷೆಯ ಮರುದಿನದಿಂದಲೇ ಈರುಳ್ಳಿ ಉಪ್ಪಿಟ್ಟಿನ ಉಪಾಹಾರ ನಿರತರಾದ ನಮಗೆ ತುಮರಿ ಹೇಳಿದ್ದರಲ್ಲಿ ಸತ್ಯವಿದೆ ಅನಿಸಲಿಲ್ಲ. ಅನುಭವಕ್ಕೂ ನಿಲುಕಲಿಲ್ಲ. ಮುಕ್ತಿ ಸಿಗದಿದ್ದರೆ ಹಾಳುಬೀಳಲಿ, ಅದರ ಅಗತ್ಯ ನಮಗಿಲ್ಲ, ಇಲ್ಲಿರುವ ಸುಂದರ ಮಹಿಳೆಯರೊಂದಿಗೆ ಭೂಮಿಯಲ್ಲಿರುವಷ್ಟು ದಿನವೂ ಚಕ್ಕಂದ ಆಡಲು ಸಿಕ್ಕರೆ ಸಾಕು.

ಕಾವಿ ಬಟ್ಟೆಯ ಬಣ್ಣದ ಬಗ್ಗೆ ತುಮರಿ ಹೇಳ್ತಾನೆ. ಅದು ಅಗ್ನಿವರ್ಣವಂತೆ. ಅಗ್ನಿಯಲ್ಲಿ “ಇದಂ ನ ಮಮ” ಎಂದು ಹಲವನ್ನು ಆಹುತಿಯಾಗಿ ಕೊಡುವಂತೆ, ಇಹ ಜೀವನದ ಸುಖೋಪಭೋಗಗಳನ್ನು ಯೋಗಾಗ್ನಿಯಲ್ಲಿ ತ್ಯಜಿಸಿ “ಇದಂ ನ ಮಮ” ಎಂದುಕೊಳ್ಳುವ ಬಗೆಯೇ ನಿಜವಾದ ಕಾವಿಧಾರಣೆಯಂತೆ. ಕಾವಿ ಬಣ್ಣಕ್ಕೆ ಅಷ್ಟೊಂದು ಬೆಲೆಯಿರುವುದರಿಂದ ಶ್ರೀಕೃಷ್ಣ ಮಹಾಭಾರತದಲ್ಲಿ ಅದನ್ನು ಧ್ವಜದಲ್ಲಿ ಬಳಸಿದ್ದನಂತೆ. ಇದೆಲ್ಲ ಮಹತ್ವದ ಕತೆಗಳನ್ನು ಕಟ್ಟಿಕೊಂಡು ನಮಗೇನಾಗಬೇಕು?
ನಾವು ರಾಮಾಯಣದ ಅಗ್ನಿವರ್ಣನ ಸ್ವಭಾವದವರು. ಹಾಂ.. ಒಂದಂತೂ ಸತ್ಯ, ಸತ್ಯ ಸಂಧರೂ, ಪ್ರಜಾರಂಜಕರೂ, ತಪಸ್ವಿಗಳೂ ಆಗಿದ್ದ ಸೂರ್ಯವಂಶದಲ್ಲಿ ಯಾವ ತಪ್ಪಿನಿಂದಲೋ ಅಗ್ನಿವರ್ಣನೆಂಬವ ಹುಟ್ಟಿ ಕೆಲವುಕಾಲ ಕಾಮಾಂಧ ರಾಜದರ್ಬಾರು ನಡೆಸಿದ್ದ. ಶ್ರೀರಾಮನ ಅವತಾರದ ಹಲವು ತಲೆಗಳಿಗಳ ನಂತರ ಬಂದ ಅವನೇ ವಂಶಕ್ಕೆ ಮುಕ್ತಾಯ ಹಾಡಿದ ಎಂದು ಮಹಾಕವಿ ಕಾಳಿದಾಸ ತನ್ನ ’ರಘುವಂಶ’ದಲ್ಲಿ ಪ್ರಸ್ತಾಪಿಸಿದ್ದಾನೆ. ಇಲ್ಲಿಯೂ ಪುಣ್ಯ ಪರಂಪರೆಗೆ ಮಹಾಪಾತಕಿಯಾದ ನಾವು ಹೇಗೆ ಬಂದೆವೆಂದು ಕೆಲವರು ಯೋಚಿಸುತ್ತಿದ್ದಾರಂತೆ; ಅವರಿಗೀಗ ಉತ್ತರ ಸಿಕ್ಕಿರಬಹುದು. ಅದಕ್ಕೆಂತಲೆ ನಮ್ಮ ಆದಿಯವರು ಸನ್ಯಾಸಿಯಲ್ಲಿ ಸನ್ಯಾಸ ಲಕ್ಷಣವನ್ನು ಗುರುತಿಸಿ ಒಪ್ಪಿಕೊಳ್ಳಿ ಎಂದು ಹೇಳಿದ್ದಾರೆ; ಪೀಠದ ಮೇಲೆ ಕೂರಿಸಿದ ಮೇಲೆ ನೀನು ಸನ್ಯಾಸಿಯಲ್ಲ ಅಂದರೆ ಪೀಠದಲ್ಲಿರುವವನ ಕೈಲಿ ಅಧಿಕಾರ ಇರುತ್ತದಲ್ಲ; ಆತ ಎದ್ದು ಹೋಗ್ತಾನ?

ನಮ್ಮ ಹೇಳಿಕೆ ಇಷ್ಟೇ, “ಚೆನ್ನಾಗಿರಿ, ಚೆನ್ನಾಗಿರಲು ಬಿಡಿ.” ನೀವೂ ತಿನ್ನಿ ನಮಗೊ ತಿನ್ನಲು ಬಿಡಿ ಎಂಬುದು ಈ ಮಾತಿನ ತಾತ್ಪರ್ಯ. ಈಗ ನಾವು ಚಡ್ಡಿಯಂತ್ರ ಚಾಲೂ ಇಟ್ಟಂತೆ ನಮ್ಮ ಸುತ್ತ ಕುಣಿಯುತ್ತಿರುವವರೂ ಸಹ ಚಡ್ಡಿಯಂತ್ರದ ಅನುಷ್ಠಾನಿಕರೇ ಆಗಿದ್ದಾರೆ. ಕೆಲವೊಮ್ಮೆ ಅವರು ಬಳಸಿದ್ದನ್ನು ನಮಗೆ ಕೊಡುತ್ತಾರೆ, ಹಲವು ಕೇಸುಗಳಲ್ಲಿ ನಾವು ಬಳಸಿದ್ದನ್ನು [ಅವರಲ್ಲಿ ಹೆಣ್ಣುಸಿಗದವರನ್ನು ಹುಡುಕಿ]ಅವರಿಗೆ ಕಟ್ಟುತ್ತೇವೆ, ಆಗಲೇ ಮದುವೆಯಾಗಿದ್ದರೆ, ಚೆನ್ನಾಗಿರಲಿ ಅಂತ ಇನ್ನಷ್ಟು ಕೊಡುತ್ತೇವೆ. ಹಾಗಾಗಿ ಅವರು ’ಧರ್ಮಮಾರ್ಗಿ’ಯಾದ ನಮ್ಮನ್ನು ಬಿಡುವುದಿಲ್ಲ. ನಾವು ಹೇಳಿದ ’ಧರ್ಮಮಾರ್ಗ’ವನ್ನು ಅವರೂ ಬಿಡುವುದಿಲ್ಲ. ಇದನ್ನು ಕಂಡ ಕೆಲವರು ನಮಗೆ “ದಕ್ಷಿಣದ ರಾಂಪಾಲ” ಎನ್ನುತ್ತಿದ್ದಾರಂತೆ. ನಾವೂ ಬೀದಿ ಬಸವಣ್ಣನೇ ಆಗಿರುವುದರಿಂದ ಬೀದಿ ಬಸವಣ್ಣಗಳಿಗೆ ನಾವು ಉತ್ತರಿಸಬೇಕಾಗಿಲ್ಲ ಬಿಡಿ.

ಬರೇ ಕಾಮ
ಬರೇ ಕಾಮ”

’ಸಿವನೇ ಸಂಭುಲಿಂಗ’ ಖ್ಯಾತಿಯ ಕ್ಯಾತ ಇದನ್ನೆಲ್ಲ ಕೇಳಿಸಿಕೊಂಡು ನೆಲದಮೇಲೆ ಉರುಳುರುಳಿ ಬಿದ್ದು ವಾರಕ್ಕೆ ಸಾಕಾಗುವಷ್ಟು ನಕ್ಕು ಹೊರಟುಹೋದ. ತಲೆಬುಡ ಅರ್ಥವಾಗದ್ದಕ್ಕೆ ಬಕರಾಭಕ್ತವೃಂದ ತಲೆಕೆರೆದುಕೊಳ್ಳುತ್ತ ಹಳದೀ ತಾಲಿಬಾನ್ ಜೈಕಾರಕ್ಕೆ ದನಿಗೂಡಿಸಿತು.

Thumari Ramachandra

source: https://www.facebook.com/groups/1499395003680065/permalink/1677053569247540/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s