ಹರಾಮಿಯ ಚಡ್ಡಿ ಯಂತ್ರದಿಂದ ಸಮಾಜದ ಮಾನ ಹರಾಜಾಯಿತು

ಹರಾಮಿಯ ಚಡ್ಡಿ ಯಂತ್ರದಿಂದ ಸಮಾಜದ ಮಾನ ಹರಾಜಾಯಿತು

ಬಾರೋ ಬಾವಯ್ಯ
ಎನ್ನ ರಕ್ಷಣೆಗೆ ಈಗ
ಬಾವಯ್ಯಾ….ಬಾರೋ ಬಾವಯ್ಯ

ಅಂದು ನೀ ಹೇಳಿದೆಯೆಂದು ನಾ ಹಾರಿದೆ
ಚಂದದ ಮಹಿಳೆಯರನು ಹಿಡಿದು
ಬಂಧನ ಆಗುತಿದೆ
ಬಾರಯ್ಯ

ಬಾರೋ ಕುಳ್ಳಯ್ಯ
ಬಾರೋ ಸೊಟ್ಟ ಮುಖ ತೋರೊ
ನಿನ್ನ ಸಮ ಯಾರೊ? ಜಗಕೇ ನೀ ಈಶನೇ
ಬಾವಯ್ಯ…..
ಬಾರೋ ಬಾವಯ್ಯ

ಎನ್ನ ರಕ್ಷಣೆಗೆ ಈಗ
ಬಾವಯ್ಯ…

ಆದಿಮಂಗಲದಲ್ಲಿ ದಾಸರ ಪದವನ್ನು ಹೋಲುವ ಪದದಿಂದ ಆರಂಭಿಸಿದ್ದಾಗಿದೆ. ತಡ ಮಾಡೋದು ಬೇಡ ಮುಂದಕ್ಕೆ ಸಾಗೋಣವಂತೆ.

ಹೆಜ್ಜೆಹೆಜ್ಜೆಗೆ ಷಡ್ಯಂತ್ರ ಎನ್ನುವ ಹರಾಮಿಯನ್ನು ರಕ್ಷಿಸಲು ಹಲವು ಹಳದೀ ಕೈಗಳು ತಮ್ಮ ದುಸ್ಸಾಹಸವನ್ನು ಮೆರೆಯುತ್ತಿವೆ ಎಂಬುದು ಪ್ರತಿನಿತ್ಯದ ಬೆಳವಣಿಗೆಗಳಲ್ಲಿ ಗೋಚರಿಸುತ್ತಿದೆ. ಇವ ಸ್ವಾಮಿಯಲ್ಲ ಹರಾಮಿ ಎಂದು ಯಾವಾಗಲೋ ತೀರ್ಮಾನಿಸಿದ ಸಜ್ಜನರು ಮಠದಿಂದ ಬಹಳ ದೂರ ತಟಸ್ಥ ಸ್ಥಿತಿಯಲ್ಲಿ ದೇವರ ಮೊರೆಹೋಗಿದ್ದಾರೆ.

ಇಲ್ಲಿ ಯಾವ ಷಡ್ಯಂತ್ರವೂ ಇಲ್ಲ. ಪ್ರಜ್ಞಾವಂತರಲ್ಲಿಯೇ ಅತಿ ಪ್ರಜ್ಞಾವಂತರೆನಿಸಿಕೊಂಡ ಜನಾಂಗದ ಮಾನಮರ್ಯಾದೆಯನ್ನು ಹರಾಜು ಹಾಕಿದ ಕುಖ್ಯಾತಿ ಈ ಹರಾಮಿಗೆ ಸಲ್ಲುತ್ತದೆಯೆಂದೂ ಮುಂದಿನ ಪೀಳಿಗೆ ಇತಿಹಾಸವನ್ನು ತೆಗೆದು ನೋಡಿದಾಗ ಈ ಹರಾಮಿಯ ಚಡ್ಡಿ ಯಂತ್ರ ಢಾಳಾಗಿ ಕಣ್ಣಿಗೆ ರಾಚುತ್ತದೆಂದೂ ಕೆಲವು ಮಹನೀಯರು ಹೇಳಿದ್ದಾರೆ.

ಅಂದಹಾಗೆ ಮೀಸೆಯಿಲ್ಲದ ಮನ್ಮಥ ಮತ್ತೆ ಸಮಾವೇಶಗಳ ಸರದಾರ. ಬೀಳುವಷ್ಟು ಪ್ರಪಾತಕ್ಕೆ ಬಿದ್ದಾಗಿ ಹೋಗಿದೆ. ಆದರೂ ಬೀಳಲಿಲ್ಲ ಎಂಬಂತೆ ತೋರಿಸುವುದು ಈ ಮನ್ಮಥನ ಲೀಲೆಗಳಲ್ಲಿ ಒಂದು.

ಕೇವಲ ಒಬ್ಬ ಮಹಿಳೆ ತನ್ನ ವಿರುದ್ಧ ದೂರು ನೀಡಿದರೆ ಅದೆಲ್ಲ ತನಗೆ ಯಕ್ಕಶ್ಚಿತವೆಂದುಕೊಂಡಿದ್ದ, ಹಣಬಲ, ಸಾಕಿದ ನಾಯಿಗಳ ಬಲ, ಬಕರಾಭಕ್ತರ ಬಲ ಎಲ್ಲವನ್ನೂ ಸೇರಿಸಿ ತಾನೆಂದೂ ಸೋಲುವುದಿಲ್ಲವೆಂದುಕೊಂಡಿದ್ದ, ಹಣವನ್ನು ಚೆಲ್ಲಿದರೆ ಬಾಯ್ದೆರೆಯುವ ರಾಜಕಾರಣಿಗಳಿಂದ ತನಗೆ ಬೇಕಾದ ಫಲಿತಾಂಶವನ್ನು ಪಡೆದುಕೊಳ್ಳಬಹುದೆಂದು ಭಾವಿಸಿದ್ದ ಚಡ್ಡಿ ಯಂತ್ರ ಧಾರಿಗೆ ಈಗ ಅಯೋಮಯವಾಗಿದೆ.

ಆಸ್ಥಾನ ’ವಿದ್ವಾನ್’ ಕುಲಪತಿ ಬಾವಯ್ಯ ಅಸ್ಥಾನದಲ್ಲಿ ’ರಾರಾಜಿಸು’ವಂತಿಲ್ಲ. ಅವನ ಸೊಟ್ಟ ಮುಖ ಈಗ ಯಾವ ಸಭೆಯಲ್ಲೂ ಯಾರಿಗೂ ರಾಚುವುದಿಲ್ಲ. ಹೀಗಾಗಿ ತುಮರಿ, ಮೊದಲಿಗೆ ಅಡಗಿ ಕುಳಿತ ಮಠದ ಬಾವಯ್ಯನನ್ನು ಕರೆದಿದ್ದಾನೆ.

ಹರಾಮಿಗೆ ತ್ರಿಕಾಲ ಸ್ನಾನ ಜಪಾನುಷ್ಠಾನದ ಬದಲು ಹದಿಹರೆಯದ ಹೆಣ್ಣುಮಕ್ಕಳನ್ನು ಮುಕ್ಕುವುದು ಅಭ್ಯಾಸವಾಗಿದೆ. ಎಷ್ಟರಮಟ್ಟಿಗಪ್ಪ ಅಂದರೆ ಯಾವ ರೀತಿಯ ವಿಚಾರಣೆ ನಡೆಯುತ್ತಿದ್ದರೂ ಸಹ ಹಾರುವುದು ಮಾತ್ರ ನಿಲ್ಲುತ್ತಿಲ್ಲ. ಕವಳದ ಗೋಪಣ್ಣನಿಗೊಂದು ಸಮಸ್ಯೆ ಹುಟ್ಟಿದೆ-“ಅಲ್ದ ರಾಮು ಜೈಲ್ಗೆ ಹೋದಮೇಲೆ ಅವಂಗೆ ನಿತ್ಯ ಯಾರು ಸಪ್ಲೈ ಮಾಡ್ತ್ವ ಮಾರಾಯ? ಅವಂಗೆ ನಿತ್ಯ ಬೇಕೇ ಬೇಕನ” ಅಂತ ಅದನ್ನು ನನ್ನಲ್ಲಿ ಕೇಳಿದ್ದಾನೆ.

ಬುಲ್ ಪೀನ ಎಂವ ಕೌಪೀನದ ಆಕಾರವನ್ನು ಎಷ್ಟು ಜನ ನೋಡಿದ್ದಾರೋ ಗೊತ್ತಿಲ್ಲ. ಅದು ಇಂಗ್ಲೀಷ್ ಟಿ ಶೇಪಿನಲ್ಲಿರುತ್ತದೆ. ಕಟ್ಟಿದಾಗ ಅದು ತ್ರಿಕೋನಾಕಾರದ ಚಡ್ಡಿಯ ರೂಪಕ್ಕೇ ಬರುತ್ತದೆ. ನಮ್ಮ ಪೂರ್ವಜರ ಕಾಲದಲ್ಲಿ ಒಳಚಡ್ಡಿ ಆಂತ ಇರಲಿಲ್ಲ ಅನಿಸುತ್ತದೆ. ಪಟ್ಟೆಪಟ್ಟೆ ಚಡ್ಡಿಯೇ ಒಳಚಡ್ಡಿಯ ಸ್ಥಾನವನ್ನು ಅಲಂಕರಿಸಿತ್ತು ಎಂಬುದು ನನ್ನ ಭಾವನೆ. ಹಳ್ಳಿಗಳಲ್ಲಿ ಹಲವರು ಲಂಗೋಟಿ ಕಟ್ಟಿಕೊಳ್ಳುತ್ತಿದ್ದರು. ಲಂಗೋಟಿ ಕಟ್ಟಿದಾಗ ಮಧ್ಯದ ಭಾಗ ಮಾತ್ರ ಮುಚ್ಚಿ ತೊಡೆಗಳ ಬುಡ ಇಕ್ಕೆಲದಲ್ಲೂ ಕಾಣುತ್ತಿತ್ತು. ಸನ್ಯಾಸಿಗೆ ಅದೂ ಬೇಡವೆಂದು ಮತ್ತು ಹಾರದಂತೆ ಸಾಮಾನನ್ನು ಬಂದೋಬಸ್ತು ಮಾಡಲು ಕೌಪೀನವನ್ನು ಜಾರಿಗೆ ತಂದರು.

ಸನಾಸಿಗಳಿಗೆ, ಚಡ್ಡಿಯನ್ನೇ ಹೋಲುವ ಕೌಪೀನದೊಳಗೆ ಆಕುಂಚನ ವಿಕಸನ ತತ್ವಕ್ಕೆ ಅತೀತವಾಗಿ ಇರಬೇಕಾದ ಚರ್ಮದ ಯಂತ್ರ ಈ ಹರಾಮಿಯಲ್ಲಿ ಸಕ್ರಿಯವಾಗಿದೆ. ಗಂಡಸರಲ್ಲಿ ಸಡ್ಳವಾದರೆ ಕತೆ ಮುಗೀತು ಎಂದು ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪನವರು ತಮ್ಮ ’ಗೃಹಭಂಗ’ ಕಾದಂಬರಿಯಲ್ಲಿ ಪಾತ್ರಧಾರಿಗಳ ಬಾಯಲ್ಲಿ ಹೇಳಿಸಿದ್ದಾರೆ; ಅದು ನೂರಕ್ಕೆ ಇನ್ನೂರರಷ್ಟು ನಿಜವೂ ಹೌದು. ಸಾಮಾನ್ಯ ಗಂಡಸರ ಕತೆಯೆ ಹಾಗಿರುವಾಗ ಸರ್ವಸಂಗ ಪರಿತ್ಯಾಗಿಯಾದವ ಹೇಗಿರಬೇಡ?
ಪರಂಪರೆಯ ಹೆಸರು ಗಟ್ಟಿ ಇರುವುದನ್ನು ಕಂಡ ಹರಾಮಿ ಅದನ್ನೆ ಗಟ್ಟಿಯಾಗಿ ಹಿಡಿದು ಕೂತುಕೊಂಡ. ನಮ್ಮದು ಅಂತಾ ಪರಂಪರೆ, ಸಾವಿರಾರು ವರ್ಷಗಳ ಇತಿಹಾಸವಿದೆ ಎಂದೆಲ್ಲ ಎಲ್ಲರ ಮುಂದೆ ಹೇಳತೊಡಗಿದ. ಸಾಕು ನಾಯಿಗಳು ಅದನ್ನೆ ಪುನರುಚ್ಚರಿಸಿದವು; ಬಕರಾಭಕ್ತರು ಅದನ್ನೆ ಫಾಲೋ ಮಾಡಿದರು.

ಚಡ್ಡಿ ಯಂತ್ರ ಹಿಡಿತದಲ್ಲಿದ್ದರೆ ಇಷ್ಟೆಲ್ಲ ರಾದ್ಧಾಂತವಾಗುತ್ತಿರಲಿಲ್ಲ. ಈಗಾದರೂ ನಮ್ಮ ಜನ ತಿಳಿದುಕೊಳ್ಳಬೇಕು-ಸನ್ಯಾಸಿಗೆ ಅಷ್ಟಾಂಗ ಯೋಗ ಮತ್ತು ಆಹಾರ ವಿಧಿಗಳು ಕಟ್ಟುನಿಟ್ಟಾಗಿ ಅನ್ವಯಿಸುತ್ತವೆ. ಯೋಗ ಪಟುಗಳಾದ ಹಲವರು ಅಷ್ಟಾಂಗ ಯೋಗದಿಂದ ಪಡೆದ ಸಿದ್ಧಿಗಳಿಂದ ಪಂಚಭೂತಗಳೂ ಯೋಗಿಯ ವಶವಾಗುತ್ತವೆ, ಆತನ ಶರೀರದಲ್ಲಿ ಮತ್ತು ಹೊರಗಡೆಯ ವಾತಾವರಣದಲ್ಲಿ ಪಂಚಭೂತಗಳು ಏಕ ಸ್ವರೂಪವನ್ನು ತೋರಿಸುವುದರಿಂದ ಅವನಿಗೆ ರಾಗದ್ವೇಷಗಳ ಬಾಧೆ ಇರುವುದಿಲ್ಲ. ಅಂತಹ ವ್ಯಕ್ತಿ ಅವಸ್ಥಾತ್ರಯವನ್ನೂ ಮೀರಿ ನಿಲ್ಲಬಲ್ಲ ಎಂದು ಹೇಳಿದ್ದಾರೆ.
ಆರಂಭದಿಂದಲೆ ಈರುಳ್ಳಿ ಉಪ್ಪಿಟ್ಟು ಮೆಲ್ಲುತ್ತಿರುವವನಿಗೆ ಯೋಗದ ಯಾವ ಗಂಧಗಾಳಿಯೂ ಇಲ್ಲ. ವೇದ ಗೊತ್ತಿಲ್ಲ, ಶಾಸ್ತ್ರಗೊತ್ತಿಲ್ಲ, ಪುರಾಣದ ಕನ್ನಡಾನುವಾದದ ಕೆಲವು ಕಥೆಗಳನ್ನು ಊರಿಗೆ ಬುದ್ಧಿ ಹೇಳಿ “ಸ್ವಾಮಿಗಳು ಘನ ವಿದ್ವಾಂಸರು” ಎನಿಸಿಕೊಳ್ಳುವ ಸಲುವಾಗಿ, ಸಾಂದರ್ಭಿಕವಾಗಿ ಆಸ್ಥಾನ ಕವಿಗಳು ತಂದುಕೊಟ್ಟ ಪುಸ್ತಕಗಳನ್ನು ಓದಿ ತಿಳಿದುಕೊಂಡಿದ್ದು ಬಿಟ್ಟರೆ ಧರ್ಮದ ಬಗೆಗಿನ ಕಾಳಜಿ ಅಷ್ಟಕ್ಕಷ್ಟೆ.

ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಬೆಂಕಿ ಸುಡುತ್ತದೆ. ಸನ್ಯಾಸಿಯ ಬಂಟರು ಸನ್ಯಾಸಿಗೆ ತಿಳಿಯದೇ ನಡೆಸಿದ ಪಾಪಕಾರ್ಯಗಳು ಸನ್ಯಾಸಿಯ ಪಾಪದ ಅಕೌಂಟಿಗೆ ಜಮಾ ಆಗುತ್ತವೆ. ನಾವು ಹೇಳಿ ಮಾಡಿದ್ದಲ್ಲ, ಅವರು ನಮಗೆ ಹೇಳಿ ಮಾಡಿದ್ದೂ ಅಲ್ಲ ಎನ್ನುತ್ತ, ತನ್ನ ಕಚ್ಚೆಹರುಕುತನವನ್ನು ಮುಚ್ಚಿಹಾಕಲು, ತನ್ನ ವಿರೋಧಿಗಳನ್ನು ಅವಾಚ್ಯ ಶಬ್ದಗಳ ಮೂಲಕ ನಿಂದಿಸುವ, ಅವರ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ದಾಳಿ ನಡೆಸುವ ಮಂದಿಗೆ ಹರಾಮಿಯ ಸ್ಪೆಶಲ್ ಅಶೀರ್ವಾದ! ಕಚ್ಚೆಹರುಕನ ಕಚ್ಚೆ ಹರುಕುತನವನ್ನು ಮುಚ್ಚಲಿಕ್ಕೆ ಮರ್ಯಾದೆಯೇ ಮೂರ್ತಿವೆತ್ತ ರಾಮನ ಬಳಕೆ. ಇದು ಹರಾಮಿಯ ತಿಟ್ಟು.

ಸಮಾಜದ ಕೆಲವು ಪ್ರಮುಖರ ಹೆಸರುಗಳನ್ನು ಯಾರೋ ಹಾಕಿದರೆಂದು ಕೇಳಿದೆ. ಅವರೆಲ್ಲ ಯಾಕೆ ಮಾತನಾಡುತ್ತಿಲ್ಲ ಎಂದರೆ, ಅವರೆಲ್ಲ ಮರ್ಯಾದಸ್ತರು. ಹರಾಮಿಯ ವಿರುದ್ಧ ನಿಂತರೆ ಅವರೆಲ್ಲರ ಮೇಲೆ ದಾಳಿಗಳಾಗುತ್ತವೆ; ಹರಾಮಿ ಆ ರೀತಿಯ ನಾಯಿಗಳನ್ನು ಸಾಕಿಕೊಂಡಿದ್ದಾನೆ. ಕೆಲವು ಕಾಲ ಅವರೆಲ್ಲ ಗೊಂದಲದಲ್ಲಿದ್ದುದು ನಿಜ. ಅಷ್ಟೊಂದು ವರ್ಷಗಳ ಕಾಲ ಅಡ್ಡಬಿದ್ದು ಆರಾಧಿಸುತ್ತಿದ್ದ ಈ ಮನುಷ್ಯ ಏಕಾಏಕಿ ವಿಕೃತ ಕಾಮಿ ಎಂಬುದು ಮೊದಲು ಗೊತ್ತಾದಾಗ ಅವರಿಗೆಲ್ಲ ಇಲೆಕ್ಟ್ರಿಕ್ ಶಾಕ್ ಹೊಡೆದಂತಾಗಿದೆ. ಮಠ ಹಾವಾಡಿಗ ಮಠ ಎನಿಸಿಕೊಳ್ಳುವುದನ್ನು ಬಯಸದ ಅವರೆಲ್ಲ ಪರಂಪರೆ ಮತ್ತು ಮಠದ ಮರ್ಯಾದೆಗಾಗಿ ಸುಮ್ಮನಾದರು. ಅದನ್ನೆ ಅಡ್ವಾಂಟೇಜ್ ಮಾಡಿಕೊಂಡ ಹರಾಮಿ ಅವರ ಹೆಸರುಗಳನ್ನೆಲ್ಲ ಬಳಸಿಕೊಂಡು ಮೆರೆಯ ಹತ್ತಿದ. ಈಗೀಗ ಅವರೆಲ್ಲ ಕೈ ಚೆಲ್ಲಿದ್ದಾರೆ; ತಮ್ಮನ್ನು ಯಾವುದಕ್ಕೂ ಎಳೆಯದಂತೆ ನೋಡಿಕೊಂಡಿದ್ದಾರೆ; ಮಠಕ್ಕೆ ಹೋಗುತ್ತಿಲ್ಲ.

ಇಮ್ಮಡಿ ವಿಶ್ವೇಶ್ವರಯ್ಯನ ಜೊತೆಗೆ ಜಾಯಿಂಟ್ ಅಕೌಂಟಿನಲ್ಲಿ ಲಂಡನ್ ಹೋಟೆಲ್ ಪಾರ್ನನರ್ ಶಿಪ್ ನಿಂದ ಹಿಡಿದು, ಚಂದುಳ್ಳಿಗಳ ಜೊತೆ ಮಲಗುವ ಸಕಲ ಪುಣ್ಯಕರ್ಮಗಳಲ್ಲೂ ಮಹಾಕಾಮಿಗಳು ಸಹಭಾಗಿಗಳು. ಸಮಾನ ಶೀಲೇಷು ವ್ಯಸನೇಷು ಸಖ್ಯಂ ಎಂದು ತುಮರಿ ಹೇಳುತ್ತಲೇ ಬಂದಿದ್ದಾನಷ್ಟೆ. ಹರಾಮಿ ಕಾಮಿಯ ಬಳಗದಲ್ಲಿರುವವರೆಲ್ಲರೂ ಸಮಾನ ಶೀಲರೆ ಆಗಿದ್ದಾರೆ. ಕೆಲವರದ್ದು ’ಹಂಚಿ ತಿನ್ನುವ’ ಸ್ವಭಾವ, ಇನ್ನು ಕೆಲವರದ್ದು ’ಪ್ರಸಾದ ಭೋಜನ’, ಮತ್ತೆ ಕೆಲವರದ್ದು ತಾವು ಬಳಸಿದ್ದನ್ನು ಹರಾಮಿಗೆ ದೊರಕಿಸಿಕೊಡುವ ಔದಾರ್ಯ, ಇನ್ನಷ್ಟು ಜನರದ್ದು ’ಸುವರ್ಣ ಮಂತ್ರಾಕ್ಷತೆ’ಯ ಬಯಕೆ. ಹೆಂಗಸರ ವಿಷಯದಲ್ಲಿ ಅಲ್ಲಿರುವ ತೊಂಬತ್ತು ಪರ್ಸೆಂಟ್ ಜನರದ್ದು ಸಮಾನ ಶೀಲತೆ. ಕೆಲವರು ಸದ್ದಾಗದಂತೆ ಹಾರುತ್ತಾರೆ, ಕೆಲವರು ಯಾರಿಗೆ ಗೊತ್ತಾದರೂ ತೊಂದರೆಯಿಲ್ಲ ಎಂಬ ಹುಂಬತನದಿಂದ ಸದ್ದುಮಾಡುತ್ತಲೆ ಹಾರುತ್ತಾರೆ.

ಹಿಂದೆಲ್ಲ ನಮ್ಮ ಜನ ಮಡಿ ಮಡಿ ಎಂದು ಮಡಿಯಲ್ಲಿಲ್ಲದ ಜನರು ಎದುರಾದಾಗ ದೂರ ಹಾರುತ್ತಿದ್ದರಂತೆ. ಕೆಲವು ಅಶುಚಿ ಮತ್ತು ಅಶುದ್ಧವೆನಿಸಿದ ಜಾಗಗಳಲ್ಲಿ ಪೂರ್ತಿ ಕಾಲನ್ನು ಊರದೇ ಹಾರುತ್ತಿದ್ದರಂತೆ ಹಾಗಾಗಿ ಜನ “ಹಾರವರು” ಎಂದು ಕರೆದರು. ಹಾರವರು ಹಾಗೆ ಹಾರುತ್ತಿದ್ದುದರಲ್ಲಿ ವೈಜ್ಞಾನಿಕತೆಯಿದೆ; ಮನುಷ್ಯನ ಶರೀರದ ಸುತ್ತ ಇರುವ ಪ್ರಭಾವಲಯದಲ್ಲಿ ಸೆಗೆಟಿವ್ ಎನರ್ಜಿ ಸೇರಬಾರದೆಂಬ ಕಾರಣ ಅಲ್ಲಿದೆ. ಅದಿರಲಿ, “ಹಾರವರು” ಎಂಬ ಆ ಪದಕ್ಕೆ ಈಗ ಹರಾಮಿಯ ಚಡ್ಡಿಯಂತ್ರದ ಬಳಕೆಯಿಂದ ಬೇರೆ ಅರ್ಥ ಬಂದಿದೆ; ಸಮಾಜದವರ ಹೆಸರು “ಹಾರವರು” ಎಂದಾದರೆ, ಕಾಮಿ ಬಳಗದ ಹೆಸರು “ಹಾರುವರು”

ಅಂದಹಾಗೆ ಹಳದೀ ಬಾವಯ್ಯಂದಿರು ಬಕರಾಭಕ್ತರ ಜೊತೆಗೆ ತಲೆಯಿಲ್ಲದ ಹಲವು ಜನಾಂಗಗಳ ಜನರಿಗೆ ಮತ್ತೆ ನೂರಾರು ಬಸ್ಸುಗಳನ್ನು ಏರ್ಪಡಿಸುತ್ತಾರಂತೆ. ಮಹಾನಗರದಲ್ಲಿ ಮೊದಲೇ ಟ್ರಾಫಿಕ್ ಸಮಸ್ಯೆ ಎಂದು ಕೇಳಿದ್ದೇನೆ. ಅದರ ಜೊತೆಗೆ ಒಂದೆರಡು ದಿನ ಇದು ಇನ್ನೊಂದಷ್ಟು ಅವಾಂತರವನ್ನು ಸೃಷ್ಟಿ ಸುತ್ತದೆ. ಜನಬಲವನ್ನು ತೋರಿಸುವುದು ಏಕೆ ಎಂಬುದು ನಿಮಗೆ ತಿಳಿಯದಿರಬಹುದು. “ಅವರಿಗೆ ಅಷ್ಟೆಲ್ಲ ಜನ ಬೆಂಬಲವಿದೆ. ದೂರುಗಳಲ್ಲಿ ಯಾವುದೇ ಹುರುಳಿಲ್ಲ. ಆಪಾದಿತರು ಹೇಳಿದಂತೆ ದೂರುಗಳ ಹಿಂದೆ ಷಡ್ಯಂತ್ರ್ಯ ಇರುವುದು ಕಾಣುತ್ತದೆ” ಎನ್ನುತ್ತ ದೂರುಗಳನ್ನೇ ಖುಲಾಸೆಗೊಳಿಸುವ ಹಕ್ಕು ಸ್ಥಳೀಯ ಆಳುವ ಜನರಿಗೆ ಇರುತ್ತದೆ.
ಐವತ್ತು ಕೋಟಿ ತೆಗೆದುಕೊಂಡಿದಕ್ಕೆ ಇಲ್ಲಿಯವರೆಗೆ ಯಾವುದೇ ತೊಂದರೆ ಆಗದಂತೆ ಕಾಲಕಾಲಕ್ಕೆ ನೋಡಿಕೊಳ್ಳುತ್ತ ಬಂದವರಿಗೆ ಈಗ ಸಾರ್ವಜನಿಕರೆದುರು ಜನಬಲವನ್ನು ತೋರಿಸಿ, ಇನ್ನಷ್ಟು ಕೋಟಿ ಕೊಟ್ಟರೆ ತಾನು ಬಚಾವಾಗಬಹುದೆಂಬ ಭ್ರಮೆಯಲ್ಲಿ ಮಹಾಕಾಮಿಗಳು ಜನಬಲವನ್ನು ತೋರಿಸಲು ತಯಾರಿ ನಡೆಸುತ್ತಿದ್ದಾರೆ.

ಹೇಗೂ ಹಳದೀ ಬಳಗದಲ್ಲಿ ಸುವರ್ಣ ಮಂತ್ರಾಕ್ಷತೆ ಪಡೆದು ಬಸ್ಸುಗಳನ್ನು ಓಡಿಸುವ ವ್ಯವಹಾರ ನಿರತರಾದವರು ಇದ್ದಾರೆ. ಅವರಿಗೆ ಹೇಳಿದರೆ ಖಾಸಗಿ ಬಸ್ಸುಗಳನ್ನು ಅರೇಂಜ್ ಮಾಡಿಕೊಡುತ್ತಾರೆ. ಬಂದ ತಲೆಯಿಲ್ಲದ ಜನಾಂಗದವರಿಗೆ ಮೊದಲಬಾರಿಗೆ ಮಹಾನಗರ ನೋಡಿ ಮಲಬದ್ಧತೆ ಅಥವಾ ಲೂಸ್ ಮೋಶನ್ ಸಮಸ್ಯೆದರೆ ನೋಡಿಕೊಳ್ಳಲಿಕ್ಕೆ ಸುವರ್ಣ ಮಂತ್ರಾಕ್ಷತೆ ಪಡೆದ’ಆಸ್ಥಾನ ವೈದ್ಯರು’ಗಳೂ ಉದ್ದಾರೆ. ಸುವರ್ಣ ಮಂತ್ರಾಕ್ಷತೆ ಪಡೆದುಕೊಂಡ ಹಲವು ರಂಗಗಳ ಜನರೊಟ್ಟಿಗೆ ಹರಾಮಿಯು ಭಾಗೀದಾರನಾಗಿರುವುದರಿಂದ ಅವರೆಲ್ಲರ ಅನೈತಿಕ ಬೆಂಬಲ ಹರಾಮಿಗೆ ಸಿಗುತ್ತದೆ.

ಹೋಗಲಿ ಬಿಡಿ, ಈಗ ನಮೇಸಣ್ಣ, ಕನಾತಣ್ಣ, ’ಅಸ್ಥಾನ ವಿದ್ವಾನ್’ ಕುಲಪತಿ ಬಾವಯ್ಯ ಯಾರೂ ಸಭೆಗಳಲ್ಲಿ ಕಾಣದಾಗಿದ್ದಾರೆ. ಮುಂದಿನ ಬೆಳವಣಿಗೆಗಳಲ್ಲಿ ಸಾರ್ವಜನಿಕರು ಚಪ್ಪಲಿ ಸೇವೆ ಹಮ್ಮಿಕೊಂಡು, ಕೋಟಿ ಪಡೆದವರು ಕೈ ತಿರುಗಿಸಿ, ಮಾವಂದಿರು ಮೆವರಣಿಗೆ ನಡೆಸುವ ಸಮಯದಲ್ಲಿ ಸುವರ್ಣ ಮಂತ್ರಾಕ್ಷತೆಯಿಂದ ಕೃಪಾಪೋಷಿತರಾದ ಯಾರೊಬ್ಬರೂ ಅಲ್ಲುಳಿಯೋದಿಲ್ಲ. ಆಗ ಹರಾಮಿಯ ರಕ್ಷಣೆಗೆ ಯಾವ ಮುದುಕಿಯರೂ ಸಹ ಬರಲಾರರು. ಹಾಗಾದರೆ ಮಠದ ಬಾವಯ್ಯನಾದರೂ ಶಕ್ತಿಯುಕ್ತಿ ಮೀರಿ ಹರಾಮಿಯ ರಕ್ಷಣೆಗೆ ಯಾವುದಾದರೂ ಯೋಜನೆ ನಿರ್ಮಿಸಬಹುದೇ? ಅದಕ್ಕಾಗಿಯೇ ನಾವೀಗ ಬಾವಯ್ಯನನ್ನು ಕರೆಯುವ ಪದ ಹಾಡಿದ್ದೇವೆ.

ಯಾರೋ ಹಳೇ ಮೈಸೂರು ಕಡೆ ಪ್ಯಾದೆ ಕೂಗಿದ -“ಏ ಯಾರಲ್ಲಿ, ಯಾಕ್ ಮಕಾ ಮಕಾ ನೋಡ್ತೀರ್ಲಾ? ಎಳೀರ್ಲಾ ಪರದೇಯ…….ಮಹಾಕಾಮಿಗಳ ಚಡ್ಡಿಯಂತ್ರದ ಯಾತ್ರೆಗೆ ಜಯವಾಗಲಿ”

slb

Thumari Ramachandra

source: https://www.facebook.com/groups/1499395003680065/permalink/1675691152717115/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s