ಸನ್ಯಾಸ ಜೀವನಕ್ಕೆ ಕೆಲವು ಉದಾಹರಣೆಗಳು

ಸನ್ಯಾಸ ಜೀವನಕ್ಕೆ ಕೆಲವು ಉದಾಹರಣೆಗಳು

ವೈದ್ಯರಾಗಿದ್ದ, ತಮಿಳುನಾಡಿನ ಪಟ್ಟಮಾದೈ ಗ್ರಾಮದ ಕುಪ್ಪುಸ್ವಾಮಿ ಜನಸೇವೆಯಲ್ಲಿ ಕೆಲವುಕಾಲ ಕಳೆದು ನಂತರ ವಿರಕ್ತರಾಗಿ ಹಿಮಾಲಯದತ್ತ ತೆರಳಿದರು. ಹಿಮಾಲಯದಲ್ಲಿ ಡಿವೈನ್ ಲೈಫ್ ಸೊಸೈಟಿ ಮತ್ತು ಬಿಹಾರ್ ಸ್ಕೂಲ್ ಆಫ್ ಯೋಗ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದರು. ಪರಮವಿರಕ್ತರಾಗಿದ್ದ ಅವರಿಗೆ ಸಮಾಧಿಸ್ಥಿತಿ ಸಹಜವಾಗಿ ಪ್ರಾಪ್ತವಾಗುತ್ತಿತ್ತು. ಈ ಹಿಂದೆ ಡಾ. ಅಬ್ದುಲ್ ಕಲಾಮ್ ಮಡಿದಾಗ ಇವರನ್ನು ಪರಿಚಯಿಸಿದ್ದು ನಿಮಗೆ ನೆನಪಿರಬಹುದು.

ಆದಿ ಶಂಕರರು ಗಿರಿ, ಪುರಿ, ಸಾಗರ, ತೀರ್ಥ, ಭಾರತಿ, ಸರಸ್ವತಿ ಮೊದಲಾದ ಸಾಂಕೇತಿಕ ನಾಮಗಳಿಂದ ಅಂತ್ಯಗೊಳ್ಳುವ ಹತ್ತು ವಿಭಿನ್ನ ಪರಂಪರೆಯನ್ನು ಆರಂಭಿಸಿದರು. ಅವು ಹತ್ತು ಮುಂದೆ ಇನ್ನಷ್ಟು ಭಿನ್ನತೆಗಳನ್ನು ಜೊತೆಗೂಡಿಸಿಕೊಂಡವು. ಉದಾಹರಣೆಗೆ ’ಸರಸ್ವತಿ’ ಎಂಬ ಪರಂಪರೆಯಲ್ಲಿ ಪ್ರಮುಖವಾಗಿ ಎರಡು ಕವಲುಗಳನ್ನು ಕಾಣಬಹುದು; ಒಂದು ಇಂದ್ರ-ಸರಸ್ವತಿ ಪರಂಪರೆ, ಇನ್ನೊಂದು ಆನಂದ ಸರಸ್ವತಿ ಪರಂಪರೆ. ಆನಂದ ಸರಸ್ವತಿ ಪರಂಪರೆಯ ಯತಿಗಳಿಂದ ದೀಕ್ಷೆ ಪಡೆದುಕೊಂಡ ಸನ್ಯಾಸಿಗೆ ಅರೇ ಪರಂಪರೆಯ ಹೆಸರು ಸನ್ಯಾಸ ನಾಮದ ಕೊನೆಯಲ್ಲಿ ಸೇರ್ಪಡೆಗೊಳ್ಳುತ್ತದೆ; ಅದೇರೀತಿ ಉಳಿದ ಪರಂಪರೆಗಳವರಿಂದ ದೀಕ್ಷೆ ಪಡೆದುಕೊಂಡವರಿಗೆ ಆಯಾಯ ಪರಂಪರೆಗಳ ಹೆಸರು ನೀಡಲ್ಪಡುತ್ತದೆ.

ವಿರಕ್ತ ಕುಪ್ಪುಸ್ವಾಮಿಗಳು ಆನಂದ-ಸರಸ್ವತಿ ಸಂಪ್ರದಾಯದ ಯತಿಗಳಿಂದ ದೀಕ್ಷೆ ಪಡೆದುಕೊಂಡಿದ್ದರಿಂದ ಅವರಿಗೆ ಶಿವಾನಂದ ಸರಸ್ವತಿ ಎಂಬ ಹೆಸರು ಬಂತು. ಹಾಗೆ ನೋಡಿದರೆ ಶಿವಾನಂದ ಸರಸ್ವತಿಗಳು ಸಹ ರಾಜಸನ್ಯಾಸವೆನ್ನುತ್ತ ಪೀಠಾಧಿಕಾರಿಯಾಗಿ ಕೂಒರಬಹುದಿತ್ತು. ಅವರಿಗೆ ಮಠ, ಆಡಳಿತ ಮೊದಲಾದ ಲೌಕಿಕ ವ್ಯವಹಾರಗಳ ಬಗ್ಗೆ ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಸ್ವತಃ ವೈದ್ಯರಾಗಿದ್ದರೂ ಸಹ ಜೊತೆಜೊತೆಗೆ ಅವರು ವೇದ-ವೇದಾಂಗಗಳಲ್ಲಿ ಪಾರಂಗತರಾಗಿದ್ದರು, ಶಾಸ್ತ್ರಗಳನ್ನು ವೈಜ್ಞಾನಿಕವಾಗಿ ತುಲನೆ ಮಾಡಿ ತಿಳಿದುಕೊಂಡಿದ್ದರು, ಪ್ರಸ್ಥಾನತ್ರಯಗಳಲ್ಲಿ ಘನಪಾಂಡಿತ್ಯವನ್ನು ಹೊಂದಿದ್ದರು.

ಪೈಲಟ್ ಪರೆಕ್ಷೆಯಲ್ಲಿ ಅನುತ್ತೀರ್ಣನಾದ ಕಲಾಂ ಅವರ ಬಳಿ ತೆರಳಿದಾಗ, ಸ್ವಾಮಿಗಳ ಮುಖಾರವಿಂದವನ್ನು ನೋಡಿಯೇ ಬೇಸರ ಮತ್ತು ಜಿಗುಪ್ಸೆಗಳನ್ನು ಕಳೆದುಕೊಂಡಿದ್ದರೆಂದು ಕಲಾಂ ಅವರೇ ಹೇಳಿಕೊಂಡಿದ್ದಾರೆ. ಧೃತಿಗೆಟ್ಟ ಕಲಾಂ ಗೆ ಮನಸ್ಸು ಚೇತರಿಕೆ ಪಡೆದುಕೊಳ್ಳಲೆಂದು ಭಗವದ್ಗೀತೆಯ ಕೆಲವು ನಿಗದಿತ ಶ್ಲೋಕಗಳನ್ನು ಓದಲು ಹೇಳಿದರು, ಅರ್ಥ ವಿವರಿಸಿದರು. ದಿನವೊಪ್ಪತ್ತಿನಲ್ಲಿ ಕಲಾಂ ಅಲ್ಲಿಂದ ಹೊರಡುವಾಗ “ಹೋಗು, ಹೆದರಬೇಡ, ನಿನಗಾಗಿಯೇ ಹುದ್ದೆಗಳು ಕಾಯುತ್ತಿವೆ” ಎಂದು ಹರಸಿದರು. ಕಲಾಂ ಅವರು ಭಾರತದ ಮೊದಲ ಪ್ರಜೆಯಾಗುತ್ತಾರೆಂದು ಶಿವಾನಂದರಿಗೆ ಅಂದೇ ತಿಳಿದಿತ್ತು! ಆದರೆ, ಅದನ್ನು ಸ್ಪಷ್ಟವಾಗಿ ಬಿಡಿಸಿ ಹೇಳಲಿಲ್ಲ ಅಷ್ಟೆ.

ಶಿವಾನಂದ ಸರಸ್ವತಿಗಳ ಮಾತುಗಳು ಜ್ಞಾನದ ಶಿಖರವನ್ನು ತೋರುತ್ತವೆ. ವಿವೇಕಾನಂದರ ಮಧುರ ಕಂಠವನ್ನೇ ಹೋಲುವ ಅವರ ಕಂಚಿನ ಕಂಠದ ಮಧುರವಾಣಿಗಳನ್ನು ಕೇಳಬೇಕು; ಈಗಲೂ ಅವರ ಮಾತುಗಳನ್ನು ಯೂಟ್ಯೂಬ್ ನಲ್ಲಿ ಕೇಳಬಹುದು. ಇಂತಹ ಶಿವಾನಂದ ಸರಸ್ವತಿಗಳ ನೇರ ಶಿಷ್ಯರಲ್ಲಿ ಚಿದಾನಂದ ಸರಸ್ವತಿಗಳೂ [ಪಾರಮಾರ್ಥ ಆಶ್ರಮದವರ ಹೆಸರಿನೊಂದಿಗೆ ಕನ್‍ಫ್ಯೂಸ್ ಮಾಡಿಕೊಳ್ಳಬೇಡಿ]ಒಬ್ಬರು.

ಸ್ವಾಮಿ ಚಿದಾನಂದ ಸರಸ್ವತಿಗಳ ಕೆಲವು ವೀಡಿಯೋ ತುಣುಕುಗಳ ಕೊಂಡಿಗಳನ್ನು ಇಲ್ಲಿ ನೀಡುತ್ತಿದ್ದೇನೆ; ಆಸಕ್ತರು ಅವರ ಮಾತುಗಳನ್ನು ಕೇಳಬಹುದು. ಹಿಮಾಲಯದಲ್ಲಿ ಹಲವು ಮಹಾತ್ಮರನ್ನು ಸಂಪರ್ಕಿಸಿದ, ಸಂದರ್ಶಿಸಿದ ಮಹಾತ್ಮರಲ್ಲಿ ಇವರೂ ಒಬ್ಬರು. ಇದನ್ನೇ ಸಂತ ಪರಂಪರೆ ಎನ್ನುವುದು. ತನ್ನ ಪ್ರವಚನಗಳಲ್ಲಿ ಅಲ್ಲಲ್ಲಿ ಭಾರತದ ಸಂತಪರಂಪರೆಯ ಎಲ್ಲ ಸಾಧು ಸಂತರನ್ನೂ ನೆನೆಯುವ ಈ ಸಂತನಲ್ಲಿ ವೈರಾಗ್ಯವನ್ನೊಮ್ಮೆ ನೋಡಿ. ಅವಸ್ಥಾತ್ರಯಾತೀತನಾಗಿ ಅನುಭಾವಿಯಾಗಿದ್ದ ಮಹಾತ್ಮರು ಇವರು.

ಇವರೆಲ್ಲರ ಮಾತುಗಳು ಅಸ್ಖಲಿತವಾಗಿರುತ್ತಿದ್ದವು. ಕೇಳುಗರ ಓಲೈಕೆಗಾಗಿ ಕರ್ಣಾನಂದಕರವಾಗಿ ಭಾಷಣ ಮಾಡುವುದು ಇವರಿಗೆಲ್ಲ ಬೇಕಾಗಿರಲಿಲ್ಲ. ತಮ್ಮ ಮಾತುಗಳಲ್ಲಿ ಹಲವು ಸಂತ ಸನ್ಯಾಸಿಗಳ ಬಗೆಗೆ ಮಾಹಿತಿ ನೀಡುತ್ತಿದ್ದ ಚಿದಾನಂದ ಸರಸ್ವತಿಗಳ ನಡೆ ನುಡಿ ಬಹಳ ಸರಳ. ಆನಂದಮಯೀ ಮಾ ಎಂಬವರ ಬಗೆಗೆ ನಾನು ಕೇಳಿದ್ದೆ, ಆದರೆ ಅವರನ್ನು ನೋಡಿದವರು ನೇರವಾಗಿ ಅವರ ಬಾಯಿಂದಲೇ ವರ್ಣಿಸುವುದನ್ನು ಕೇಳಿರಲಿಲ್ಲ. ಅನಂದಮಯೀ ಮಾ ಎಂಬ ಮಾತೆ ಯೌವ್ವನದಲ್ಲಿಯೇ ಆಧ್ಯಾತ್ಮಮಾರ್ಗದಲ್ಲಿ ಅದೆಷ್ಟು ಮುಂದಿದ್ದರು ಎಂಬುದನ್ನು ಸ್ವಾಮಿ ಚಿದಾನಂದರು ಹೇಳಿದ್ದಾರೆ. ಆ ತಾಯಿಯನ್ನು ನೋಡಿದಾಗ ಜಗನ್ಮಾತೆಯ ರೂಪ ಕಾಣುತ್ತಿತ್ತೇ ಹೊರತು ಸಾದಾ ಮಹಿಳೆಯಾಗಿ ಕಾಣಿಸುತ್ತಿರಲಿಲ್ಲ ಎಂಬುದು ಗೊತ್ತಾಗುತ್ತದೆ.

ನೀಮ್ ಕರೋಲಿ ಬಾಬಾ ಹಿಮಾಲಯದ ಇನ್ನೊಬ್ಬ ಸಂತರು. ಹನುಮಂತನ ಭಕ್ತರಾಗಿದ್ದ ಅವರು ಹೋದಲ್ಲೆಲ್ಲ ದಪ್ಪನೆಯ ರಗ್ಗೊಂದನ್ನು ಹೊದೆದುಕೊಂಡೇ ಇರುತ್ತಿದ್ದರು. ಇವರೊಡಣೆ ಓಡಾಡಿದ ಸ್ವಾಮಿ ರಾಮ ಎಂಬ ಸನ್ಯಾಸಿ ತಮ್ಮ ಅನುಭವಗಳನ್ನು ವಿಶದವಾಗಿ ವಿವರಿಸಿದ್ದಾರೆ. ಒಂದೇ ದಿನದಲ್ಲಿ ಹಲವು ಭಕ್ತರ ಮನೆಗಳಲ್ಲಿ ಅದೆಷ್ಟು ಭೋಜನ! ಅಪರಿಮಿತ ಭೋಜನ! ಜೊತೆಗಿರುವವರಿಗೆ ಊಟವೇ ಬೇಡವಾದರೆ ನೀಮ್ ಕರೋಲಿ ಬಾಬಾರಿಗೆ ಮಾತ್ರ ಹಸಿವೆಯೇ ತೀರುತ್ತಿರಲಿಲ್ಲ. ಉಪವಾಸವಿದ್ದರೂ ತಿಂಗಳುಗಟ್ಟಲೆ ಉಪವಾಸ ಇರಬಲ್ಲರು!

ಹಿಮಾಲಯ ನೈಸರ್ಗಿಕ / ಭಗವಂತ ನಿರ್ಮಿತ ಪುಷ್ಪೋದ್ಯಾನಕ್ಕೆ ಹೆಸರಾದ ಪ್ರದೇಶ. ಎತ್ತರದ ಶಿಖರಗಳ ನಡುವಿನ ವ್ಯಾಲಿಯೊಂದರಲ್ಲಿ ಪುಷ್ಪೋದ್ಯಾನವೊಂದಿದೆಯಂತೆ. ಅಲ್ಲಿಗೆ ಹೋದವರಿಗೆ ಸಾಮಾನ್ಯವಾಗಿ ಜ್ವರ ಬಾಧಿಸುತ್ತದೆ ಎಂದು ಕೇಳಿದ್ದೇನೆ. ನೀಮ್ ಕರೋಲಿ ಬಾಬಾರ ಜೊತೆಗೆ ಕೆಲವರು ಒಮ್ಮೆ ಅಲ್ಲಿಗೆ ಹೋದಾಗ ಒಬ್ಬನಿಗೆ ವಿಪರೀತ ಜ್ವರ ಸುರುವಾಯಿತು. ಎಲ್ಲಿಂದ ಯಾವ ಔಷಧ ತರಬೇಕು? ಯಾರು ಚಿಕಿತ್ಸೆ ನೀಡಬೇಕು? ಜೊತೆಗಿದ್ದ ಅವಧೂತ ನೀಮ್ ಕರೋಲಿ ಬಾಬಾ ತಮ್ಮ ಕೌದಿಯನ್ನು ತೆಗೆದು ಅವನಿಗೆ ಹೊದೆಸಿದರಂತೆ. ಅರ್ಧಘಂಟೆ ಕಳೆಯುವಷ್ಟರಲ್ಲಿ ಆತ ಸಂಪೂರ್ಣ ಬೆವತಿದ್ದ, ಹಾಗೆ ಬಂದ ಜ್ವರ ಗೊತ್ತೇ ಆಗದ ಹಾಗೆ ಹೀಗೆ ಕಾಲ್ಕಿತ್ತಿತ್ತು!

ಸಂತಪರಂಪರೆಯ ಕತೆಗಳನ್ನು ಹೇಳಲು ಒಂದೆರಡು ದಿನಗಳು ಸಾಲುವುದಿಲ್ಲ. ಬರೆದು ಮುಗಿಸುವಂತದೂ ಅಲ್ಲ. ಈಗಲೂ ಅಲ್ಲಿ ಇಂತಹ ಸಂತರಿದ್ದಾರೆ; ನಮಗೆ ಕಾಣಿಸಲೇ ಬೇಕೆಂದೇನಿಲ್ಲ. ಹಿಂದಿನಿಂದ ಇಂದಿನವರೆಗೆ ಸಹಸ್ರಾಎಉ ವರ್ಷಗಳ ಅಥವಾ ಯುಗಯುಗಗಳ ಪರಂಪರೆ ಅದಾಗಿದೆ. ಇಂತಹ ಮಹಾತ್ಮರ ಸಾಲಿನಲ್ಲಿ ಭಗವತ್ಪಾದ ಶಂಕರರೂ ನಿಲ್ಲುತ್ತಾರೆ. ಅವರ ಅನುಯಾಯಿಗಳಾಗಿ ತ್ರಿಕರಣ ಪೂರ್ವಕವಾಗಿ ಲೌಕಿಕ ಸುಖೋಪಭೋಗಗಳನ್ನು ತ್ಯಜಿಸಿ, ಶರೀರ ತ್ರಯ[ಭೌತಿಕ ಶರೀರ, ಸೂಕ್ಷ್ಮ ಶರೀರ, ಲಿಂಗ ಶರೀರ]ಗಳನ್ನು ಮಿತಿಯನ್ನು ಕಳೆದುಕೊಂಡು, ಕಾಲ-ದೇಶಗಳ ಮಿತಿಯನ್ನು ಕಳೆದುಕೊಂಡು ಆಧ್ಯಾತ್ಮಿಕ ಶಿಖರಗಳೆನಿಸಿದ ಯತಿವರೇಣ್ಯರುಗಳಿದ್ದಾರೆ.
ಭಗವಂತನಲ್ಲಿ ಐಕ್ಯವಾಗುವುದು ಏಕತೆಯನ್ನು ಸಾರುತ್ತದೆ; ಅಂದರೆ ಅ-ದ್ವೈತವಾಗುತ್ತದೆ. ಎಲ್ಲಿಯವರೆಗೆ ದ್ವೈತ ಮನೋಭಾವನೆ ಇರುವುದೋ ಅಲ್ಲಿಯವರೆಗೆ ದೇವರು ನಮ್ಮಿಂದ ಬೇರೆಯಾಗಿಯೇ ಇರುತ್ತಾನೆ. ಇಲ್ಲೊಂದು ಮಾರ್ಮಿಕತೆಯಿದೆ. ಅದ್ವೈತಿಗಳೂ ಸಹ ದ್ವೈತಿಗಳಂತೆ ವಿಗ್ರಹಾರಾಧನೆಯಲ್ಲಿ ತೊಡಗುವುದೇಕೆ? ಹುಟ್ಟಿನಿಂದ ಎಲ್ಲರೂ ದ್ವೈತಿಗಳೇ, ದ್ವೈತದಿಂದ ಅದ್ವೈತದೆಡೀಗೆ ಸಾಗಲಿಕ್ಕೆ ಏಕಾಗ್ರತೆ ಬರಬೇಕು. ಏಕಾಗ್ರತೆ ಬರುವುದಕ್ಕೆ ವಿಗ್ರಹಾರಾಧನೆ ಸಹಾಯವಾಗುತ್ತದೆ.

ಹಿಂದೂಗಳಾದ ನಾವು ವಿಗ್ರಹ, ಪ್ರತಿಮೆ[ಸಾಲಿಗ್ರಾಮ, ಶಂಖ, ನಿಗದಿತ ಆಕಾರವಿಲ್ಲದ ಕಲ್ಲು ಇತ್ಯಾದಿ], ಕಲಶ, ಮಂಡಲ, ಚಿತ್ರಪಟಗಳ ಮೂಲಕ ದೇವರನ್ನು ಆರಾಧಿಸುತ್ತೇವೆ. ಅವುಗಳಲ್ಲಿ ದೇವರೆಂಬ ಶಕ್ತಿಯನ್ನು ಆವಾಹಿಸಿ ಅಥವಾ ಆಹ್ವಾನಿಸಿ, ದೇವರು ಅವುಗಳಲ್ಲಿ ಸನ್ನಿಹಿತನಾಗಿದ್ದಾನೆ ಎಂಬ ಭಾವನೆಯಿಂದ ಪೂಜಿಸುತ್ತೇವೆ. ಎಂದಾಗ, ಅವೆಲ್ಲವೂ ಭಗವಂತನನ್ನು ಆರಾಧಿಸುವ ಕರಣೆಗಳಷ್ಟೇ ವಿನಃ ಅವುಗಳಲ್ಲಷ್ಟೇ ದೇವರೆಂದಲ್ಲ. ವಿಶ್ವವ್ಯಾಪಿಯಾದ ಆ ಶಕ್ತಿಯನ್ನು ಇಂತಹ ಕ್ಷುಲ್ಲಕ ರೂಪಗಳಲ್ಲಿ ಬಂಧಿಸುವುದು ಸಾಧ್ಯವೇ?

ಹುಟ್ಟಿನಿಂದ ಸಹಜವಾಗಿ ದ್ವೈತ ಭಾವವನ್ನೇ ತಳೆಯುವ ನಾವೆಲ್ಲ ಅದ್ವೈತಿಗಳಾಗುವುದು ಎಂದರೆ ಭಗವಂತನಲ್ಲಿ ಲೀನವಾಗುವತ್ತ ಮುನ್ನಡೆಯುವುದು ಎಂದರ್ಥ. ಬರಿದೇ ’ಅಹಂ ಬ್ರಹ್ಮಾಸ್ಮಿ’ ಎಂದರಾಗಲಿಲ್ಲ; ಅದನ್ನು ಅರಗಿಸಿಕೊಳ್ಳುವ ತಾಕತ್ತು ಇರಬೇಕು. ಯಾರು ಅಹಂ ಬ್ರಹ್ಮಾಸ್ಮಿ ಎಂದುಕೊಳ್ಳಬಹುದು ಮತ್ತು ಯಾವಾಗ ಹಾಗೆ ಹೇಳಿಕೊಳ್ಳಬಹುದು ಎಂಬುದಕ್ಕೆ ಬಹುದೊದ್ದ ವ್ಯಾಖ್ಯಾನದ ಅಗತ್ಯತೆ ಇದೆ; ಸದ್ಯಕ್ಕೆ ಅದಿಲ್ಲಿ ಬೇಕಾಗಿಲ್ಲ.

ವಿಪರ್ಯಾಸ
========

ಮೈಸೂರಿನ ಮೂಲ ಮೂಲಪುರುಷ ಮಹಿಷಾಸುರನಾಗಿದ್ದ ಎಂದು ಅವನ ವಾರಸುದಾರರು ಹೇಳುತ್ತಿರುವ ಈ ಕಾಲದಲ್ಲಿ ಹಲವು ಕಳ್ಳ ಸನ್ಯಾಸಿಗಳು ಹುಟ್ಟಿಕೊಂಡು, ಕಾವಿವೇಷ ತೊಟ್ಟುಕೊಂಡು ಭಾರತೀಯ ಸನ್ಯಾಸ ಪರಂಪರೆಗೆ ಅವಮಾನ ಮಾಡುತ್ತಿದ್ದಾರೆ. ಕಾಲದ ಮಹಿಮೆಯೇ? ಇವರನ್ನೆಲ್ಲ ಹೇಳುವವರು ಕೇಳುವವರು ಇಲ್ಲವೇ? ಇದ್ದಾರೆ, ಕಾಲವೇ ಎಲ್ಲದಕ್ಕೂ ಉತ್ತರ ಹೇಳುತ್ತದೆ. ಸನ್ಯಾಸ ಪರಂಪರೆಯಲ್ಲಿ ಯಾವ ದೋಷವೂ ಇಲ್ಲ. ಯಾರೋ ಕೆಲವರು ವಿರಕ್ತರು ಧರಿಸುವ ಕಾವಿಬಟ್ಟೆತೊಟ್ಟು ’ಗುರುಗಳು ಬಹಳ ಮಂದಸ್ಮಿತ’ ಎನಿಸಿಕೊಳ್ಳಲು ಪ್ರಯತ್ನಿಸುತ್ತ ಹೆಣ್ಣುಮಕ್ಕಳೆಡೆಗೇ ಸದಾ ನೋಡುತ್ತ ಹಲ್ಲುಗಿಂಜುತ್ತಿದ್ದರೆ, ಕಚ್ಚೆಹರುಕರಾದರೆ ಅವರಿಗೆಲ್ಲ ಆ ಪರಂಪರೆಯ ಶಾಪ ತಟ್ಟುತ್ತದೆ. ಅಂತವರು ತಂತಾನೇ ಶಿಕ್ಷೆಗೆ ಒಳಗಾಗುತ್ತಾರೆ.
ಮೊದಲನೆಯ ಪ್ರಕರಣದಲ್ಲಿ ನಿದ್ದಣ್ಣನಿಗೆ ಐವತ್ತು ಕೋಟಿ ಕೊಟ್ಟು ಬುಕ್ ಮಾಡಿಕೊಂಡಿದ್ದು ಯಾರ್ಗೂ ಗೊತ್ತಿಲ್ಲ ಎಂದುಕೊಳ್ಳಬೇಕಾಗಿಲ್ಲ. ಈಗ ಇನ್ನಷ್ಟು ಕೊಟ್ಟು ಕೇಸ್ ಖುಲಾಸೆ ಮಾಡಿಸಿಕೊಳ್ಳುವ ಭರದಲ್ಲಿದ್ದಾಗ ಇನ್ನೊಂದು ಕೂಸು ಕೇಸು ದಾಖಲಿಸಿ, ಇಂಗುತಿಂದ ಮಂಗನಂತಾಗಿದೆ ಪರಿತ್ಶಿತಿ. ನಿದ್ದಣ್ಣನಿಗೆ ಕೊಟ್ಟ ರೊಕ್ಕವೂ ಹೋಯಿತು, ಮಾನಮರ್ಯಾದೆ ಸಂಪೂರ್ಣ ಹರಾಜಾಯಿತು. ಇನ್ನು ಪೀಠಕ್ಕೇ ಅಂಟಿಕೊಂಡು ಕುಳಿತರೆ ಜನ ಸುಮ್ಮನಿರ್ತಾರೆಯೇ?

“ಋಷಿಸದೃಶ” ಎಂದು ಬಕರಾಭಕ್ತರೆದುರು ಕಳ್ಳ ಕೊರಮ ಭೋಂಗುಬಿಟ್ಟು ಹೊಗಳುತ್ತಿದ್ದ ಅಜ್ಜ ಅನ್ಯ ಜನಾಂಗದ ಮಹಿಳೆಯನ್ನು ಇಟ್ಟುಕೊಂಡಿದ್ದು ಯಾರಿಗೆ ಗೊತ್ತಿರಲಿಲ್ಲ ಎಂದುಕೊಡಿದ್ದೀರಿ? ಅಪ್ಪ ನಮ್ಮ ತುಮರಿಯಲ್ಲಿ ಐವತ್ತರ ಹರೆಯದ ಮಹಿಳೆಯೊಡನೆ ಈಗಲೂ ಚಕ್ಕಂದ ಆಡುವುದು ತಿಳಿಯದ ವಿಷಯವೆಂದುಕೊಂಡಿರೇ? ಗುಳ್ಳೆನರಿಯ ಹೊಟ್ಟೆಯಲ್ಲಿ ಗುಳ್ಳೆನರಿಯೇ ಹುಟ್ಟುತ್ತದೆ. ಅದು ವಿಜ್ಞಾನ; ಮಹಿಳೆಯ ಚಡ್ಡಿಯಲ್ಲಿ ’ಸನ್ಯಾಸಿ’ಯ ವೀರ್ಯಾಣು ಇರುವುದನ್ನು ದಾಖಲಿಸಿ, ಡಿ.ಎನ್.ಎ ಖಚಿತ ಪಡಿಸಿದ ಅದೇ ವಿಜ್ಞಾನ.

ಎಲ್ಲ ಅಂತರಂಗವೂ ಬಹಿರಂಗಗೊಳ್ಳುವ ಕಾಲ ಬಹಳ ದೂರವಿಲ್ಲ. ಹಾವಾಡಿಗ ಮಠದ ಬಾವಯ್ಯ, ನೆಂಟಯ್ಯರಿಬ್ಬರನ್ನೂ ಮಾವಂದಿರು ಹತ್ತಿಸುವ ಏರೋಪ್ಲೇನ್ ಹತ್ತಿಸಿದರೆ ಮಠದ ಮಡಿಸೆರಗಿನಲ್ಲಿ ಅವಿತಿರುವ್ ಅನೈತಿಕ ಪ್ರಕರಣಗಳ ಮಹಾಪೂರವೆ ಹೊರಬಹುತ್ತದೆ!

Thumari Ramachandra

Source: https://www.facebook.com/groups/1499395003680065/permalink/1674499956169568/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s