ನಾನು ಕೋಳಿಕೆ ರಂಗ….ಕೋಟಿ ಕೊಟ್ಟು ಸುಳ್ಳು ಸತ್ಯ ಮಾಡ ಹೊರಟವ

ನಾನು ಕೋಳಿಕೆ ರಂಗ….ಕೋಟಿ ಕೊಟ್ಟು ಸುಳ್ಳು ಸತ್ಯ ಮಾಡ ಹೊರಟವ

ಟಿಪಿ ಕೈಲಾಸಂ ಕನ್ನಡದ ಜೀವಂತ ಕಲಾವಿದರಲ್ಲಿ ಒಬ್ಬರು; ಅವರು ಗತಿಸಿಹೋದರೂ ಅವರ ಕೃತಿಗಳೇನಕ ಜನಮನದಲ್ಲಿ ಇನ್ನೂ ಜೀವಂತ, ಹೀಗಾಗಿ ಅವರು ಜೀವಂತ ಕಲಾವಿದರು. ಇನ್ನು ಹೊಟ್ಟೆಪಾಡಿನ ಕಲಾವಿದರು ಎಂದು ಒಂದು ಕೆಟೆಗರಿ ಇರುತ್ತದೆ. ಹೊಟ್ಟೆಪಾಡಿಗಾಗಿ ಯಾವ ವೇಷವನ್ನು ಬೇಕಾದರೂ ಹಾಕುತ್ತಾರವರು. ಕರಾವಳಿ ಜಿಲ್ಲೆಗಳಲ್ಲಿ ಹೊಟ್ಪೆಪಾಡಿಗಾಗಿ ಯಕ್ಷಗಾನ ವೇಷತೊಟ್ಟು ಹಗಲಲ್ಲಿ ಹಾದಿಬೀದಿಗಳಲ್ಲಿ ಕುಣಿಯುವ ಕೆಲವರಿರುತ್ತಾರೆ. ಅವರಿಗೆಲ್ಲ ಹತ್ತರ ನೋಟುಗಳನ್ನೇ ಒಂದಷ್ಟು ಕೊಟ್ಟರೆ ಎಲ್ಲಿಗೆ ಬೇಕಾದರೂ ಬರು
ತ್ತಾರೆ ಪಾಪ. ಅಂಥವರಿಗೆಲ್ಲ ಈಗ ಸುಗ್ಗಿಯ ಕಾಲ!
ಕೆಲವು ಹೆಸರೇ ಇಲ್ಲದ ಪತ್ರಿಕೆಗಳು ಅಸ್ತಿತ್ವಕ್ಕಾಗಿ ಬಡಿದಾಡುತ್ತಿವೆ. ಉಸಿರೇ ನಿಂತುಹೋಗಿದ್ದ ಅವುಗಳಿಗೂ ಮರುಜೀವ ಬಂದಂತೆ, ಸಿಕ್ಕಿದ್ದೇ ಸಿಕ್ಕಿದ್ದು, ಹಾವಾಡಿಗ ಶೀಗಳಿಂದ ಸುವರ್ಣ ಮಂತ್ರಾಕ್ಷತೆ ಪಡೆದು ಅವರಿಗೆ ಬೇಕಾದದ್ದನ್ನೆಲ್ಲ ಅಚ್ಚುಮಾಡುತ್ತಿವೆ.

ಪಾಪ, ನಮ್ಮ ’ಹಾವಾಡಿಗ ಶೀಗಳ ಸಾಮಾನು ಮಹಾತ್ಮೆ’ಯಿಂದ ಸಾಕಷ್ಟು ಜನ ತಾತ್ಕಾಲಿಕವಾಗಿ ಕೆಲವು ತಿಂಗಳು ಹೊಟ್ಟೆಹೊರೆದುಕೊಳ್ಳುವುದಕ್ಕೆ ಅನುಕೂಲವಾಯಿತು. ಇನ್ನೂ ಹಲವಾರು ರಂಗದವರಿಗೆ ಅನುಕೂಲವಾಗಬಹುದು ಬಿಡಿ, ಆದರೆ ಆಗಲಿ, ನಾವೇಕೆ ಹೊಟ್ಟೆಕಿಚ್ಚುಪಡಬೇಕು? ಪಾಪದ ದುಡ್ಡು ಹಾಗೆ ಬಂದದ್ದು ಹೀಗೆ ಹೋಗುತ್ತದೆ ಎಂದುಕೊಳ್ಳಬಹುದು. ಆದರೆ ಒತ್ತಾಯ ಒತ್ತಡಪೂರ್ವಕವಾಗಿ ಎತ್ತಿದ ಪಾಪದವರ ದೇಣಿಗೆ ದುಡ್ಡು ಕೂಡ ಸಾಮಾನು ಮಹಾತ್ಮೆಯ ಪ್ರದರ್ಶನಗಳಿಗೆ ಖಾಲಿ ಆಗುತ್ತಿರುವುದನ್ನಿ ನೋಡಿದಾಗ ಬೇಸರವಾಗುತ್ತದೆ.

ರಾವಣ ಸಾಯುವಾಗ ಸಾವಿರ ವರ್ಷಗಳಿಗೂ ಹೆಚ್ಚಿನ ಅವಧಿ ಕಳೆದಿತ್ತಂತೆ. ಅಲ್ಲಿಯವರೆಗೆ ಅವನ ಕುಣಿತ,ಮೆರೆತ,ಮೆರವಣಿಗೆಗಳಿಗೆ ಕೊರತೆಯೆ ಇರಲಿಲ್ಲ. ಕೈಲಾಸ ಪರ್ವತದ ಬುಡಕ್ಕೇ ಕೈಹಾಕಿ ಕೈಸಿಕ್ಕಾಕಿಕೊಂಡು ಒದ್ದಾಡಿದ ಕತೆಯನ್ನು ಹಾವಾಡಿಗ ಶೀಗಳೇ ಹಲವು ಕಡೆ ಹೇಳಿದ್ದಾರೆ; ಕಾಲಾಯ ತಸ್ಮೈ ನಮಃ, ಏನು ಮಾಡೋದು ಹೇಳಿದ ಕತೆಯ ರಾವಣನ ಪಾತ್ರವೇ ಅವರದ್ದು ಎಂಬುದು ಅವರಿಗೆ ಗೊತ್ತಿದ್ದರೂ ಬಕರಾಭಕ್ತರಿಗೆ ಮಾತ್ರ ಇನ್ನೂ ಗೊತ್ತಾಗದಂತೆ ಕಪಾಡಿಕೊಂಡಿದ್ದಾರೆ.

ಬರೇ ರಾವಣನೊಬ್ಬನೇ ಅಲ್ಲ ಬಿಡಿ, ಹಿರಣ್ಯಾಕ್ಷ, ಹಿರಣ್ಯಕಶಿಪು, ಕಂಸ, ಮಾಗಧ, ಧುರ್ಯೋಧನ ಹೀಗೆ ಹಲವಾರು ಜನ ಆ ಪೀಳಿಗೆಯಲ್ಲಿದ್ದಾರೆ. ಪೀಳಿಗೆಯಲ್ಲಿ ಬಹುತೇಕ ಜನ ಕಚ್ಚೆಹರುಕುತನದಿಂದ ಕುಖ್ಯಾತರಾದವರೆ; ಕಚ್ಚೆಹರುಕುತನಕ್ಕಾಗಿಯೇ ಅವರೆಲ್ಲರ ಕತೆ ಇಂದಿಗೂ ಜೀವಂತ. ಅಂತಹ ಮನೆಹಾಳ ಕಚ್ಚೆಹರುಕರನ್ನೆಲ್ಲ ಮಟ್ಟಹಾಕಲು ಭಗವಂತನೇ ಧರೆಗಿಳಿದು ಬರಬೇಕಾಯಿತು ಎಂಬುದು ಗಮನಿಸಬೇಕಾದ ಅಂಶ. ಹಾವಾಡಿಗ ಶೀಗಳೂ ರಾವಣನ ಅಪರಾವತಾರ ಎಂಬುದು ಸಾಬೀತಾಗಿರುವ ಕಾರಣ ಅವರನ್ನು ಅಗ್ರಹಾರಕ್ಕೆ ಕಳಿಸಲೂ ಸಹ ಭಗವಂತನೇ ಯಾವುದೋ ರೂಪಧರಿಸಿ ಬರಬೇಕಾಗಬಹುದು.

ತುಮರಿ ಎಂದೂ ಸುಳ್ಳು ಹೇಳುವುದಿಲ್ಲ. ಇಂದು ನಡೆಯುವುದನ್ನು ಮೊದಲೇ ತಿಳಿದು ಹೇಳುವ ಪ್ರಯತ್ನ ತುಮರಿಯದ್ದು. ಹಿಂದೆ ಮಹಿಳೆಯೋರ್ವಳನ್ನು ಎತ್ತಿಕೊಂಡೊಯ್ದು ಬೆದರಿಸಿ ಬಾಯಿ ಮುಚ್ಚಿಸಿದ ಕತೆಯನು ತುಮರಿ ಬರೆದಿದ್ದ. ಆ ಮಹಿಳೆ ಈಗ ದೂರುದಾರಳಾಗಿ ಪರಿವರ್ತಿತವಾಗಿ ನಿಮಗೆಲ್ಲ ವಿಷಯ ತಿಳಿದಿದೆ. ಅದೇರೀತಿ ಶೀಗಳ ಹಲವು ಕುತಂತ್ರ,ಪ್ರತಿತಂತ್ರ,ಮಾಟಮಂತ್ರಗಳ ಬಗೆಗೆ ತುಮರಿ ಬರೆದಿದ್ದು ಆಗಾಗ ನಿಮ್ಮೆದುರು ಅನಾವರಣಗೊಳ್ಳುತ್ತಲೇ ಇರುತ್ತದೆ.

’ಮಹಿಳಾ ಸಬಲೀಕರಣ’, ’ಮಾತಾಸಬಲೀಕರಣ’ ಮೊದಲಾದ ನಾಟಕಗಳನ್ನೆಲ್ಲ ನಡೆಸಿ ಬೇಕಾದವರನ್ನೆಲ್ಲ ಬಳಸಿಕೊಂಡು ಏಕಾಂತ ನಡೆಸಿ ಮುಗಿಸಿದ ನಂತರ ಈಗ ಮತ್ತೊಂದು ಛದ್ಮವೇಷ ಆರಂಭವಾಗಿದೆ. ಮಹಿಳೆಯರನ್ನೆ ಹುರಿದು ಮುಕ್ಕುವ ಕಾಮುಕನ ಪರವಾಗಿ ಮಹಿಳೆಯರನ್ನೆ ಎತ್ತಿಕಟ್ಟುವುದು ಹಾವಾಡಿಗ ಶೀಗಳ ಹೊಸ ಪ್ರಯತ್ನ. “ಏನೆಂದುಕೊಂಡಿದ್ದೀರಿ? ಯಾರೋ ನಾಲ್ಕು ಜನ ನಮ್ಮ ವಿರುದ್ಧ ಕುಣಿದು ಬಿಟ್ಟರು ಅಂತ ಎಲ್ಲರೂ ನಮ್ಮ ವಿರೋಧಿಗಳೆಂದು ಭಾವಿಸಬೇಕಾಗಿಲ್ಲ. ನಮ್ಮ ವಿರೀಧಿಗಳನ್ನು ಅವರೆಲ್ಲ ಖಂಡಿಸುತ್ತಾರೆ” ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಬಲಿಗೆ ಹೋಗುವ ಮೊಲಗಳ ಸಾಲಿನಲ್ಲಿ ಯಾವ ಮೊಲದ ಪಾಳಿ ಎಂದಿನದ್ದು ಎಂಬುದು ಯಾವ ಮೊಲಕ್ಕೂ ತಿಳಿದಿಲ್ಲ! ಘನವ್ಯಾಘ್ರನ ಗೋಮುಖ ನೋಡುತ್ತ, ಅಮ್ಮನಂತೆ ಮೈನೆಕ್ಕಿ ಸಂಭಾಳಿಸಬಹುದೆಂಬ ಅನಿಸಿಕೆಯಿಂದ ಮತಿಹೀನ ಮೊಲಗಳು ವ್ಯಾಘ್ರನಿಗೆ ಜೈಕಾರ ಹಾಕುತ್ತಿವೆ. ವಯಾಗ್ರ ನುಂಗಿದರೂ ನಿಮಿರು ದೌರ್ಬಲ್ಯವಿರುವ ಕೆಲವು ಗಂಡಂದಿರ ಹೆಂಡಂದಿರೂ ಸಹ ಬಳಗದಲ್ಲಿರುವುದು ಖಚಿತ. ಅವರಿಗೆಲ್ಲ ನಮ್ಮ ಹಾವಾಡಿಗ ಶೀಗಳೇ ಅಘೋಷಿತ ಅಥವಾ ಸ್ವಘೋಷಿತ ಗಂಡ. ಕೆಲವು ಮತೆಯರ ಜೊತೆಗೆ ಅವರ ಹೆಣ್ಣುಮಕ್ಕಳಿಗೂ ಸಹ ಹಾವಾಡಿಗ ಶೀಗಳೇ ಗಂಡ. ಅಮ್ಮ ಮಗಳು ಇಬ್ಬರೂ ಒಬ್ಬನೇ ಗಂಡನನ್ನು ಪಡೆಯುವುದು ಎಂತಹ ’ಸೌಭಾಗ್ಯ’ ಅಲ್ಲವೇ?
“ಯಮ್ಮನೆ ಮೊಮ್ಮಗಳು ಹುಟ್ಟಿದ್ದು ಗುರುಗಳಿಂದಲೇ ಸೈಯ, ಯಂಗಕ್ಕೆಲ್ಲ ಗುರುಗಳು ಅಂದ್ರೆ ಸಾಕು.” ಎಂದು ನಡುವಯಸ್ಸಿಗೆ ಅಜ್ಜಿಯ ಸ್ಥಾನಕ್ಕೇರಿದ ಮಹಿಳೆಯೊಬ್ಬರು ಮಹಾಕಾಮಿಯ ಸಂತಾನಭಾಗ್ಯ ಯೋಜನೆಯನ್ನು ಬಹಳ ಹೊಗಳಿದ್ದಾರೆ. ಇನ್ನು ಕೆಲವರ ವಿಚಾರದಲ್ಲಿ ಅಮ್ಮ, ಮಗಳು ಮತ್ತು ಮೊಮ್ಮಗಳಿಗೂ ಸಹ ನಮ್ಮ ಹಾವಾಡಿಗ ಶೀಗಳೇ ಗಂಡ. ಹೀಗಾಗಿ ಆ ಮನೆಯಲ್ಲಿ ಮಹಾಕಾಮಿಗಳಿಗೆ ಮೂರು ವೋಟು. ಹೀಗೆ ಸೀಲೊತ್ತಿಸಿಕೊಂಡು ಕಬ್ಜಾಕ್ಕೆ ಪಡೆದ ಐನಾತಿಗಳನ್ನೆಲ್ಲ ಒಂದೆಡೆ ಕಲೆಹಾಕಿ ಅವರಾರೂ ತಪ್ಪಿಸಿಕೊಂಡು ಹೋಗಿ ದೂರು ನೀಡದಂತೆ ನೋಡಿಕೊಳ್ಳುವುದೆ ರಕ್ಷೆಯ ಕೆಲಸ. ಅದಕ್ಕಾಗಿ ಅಲ್ಲಲ್ಲಿ ಸಮಾವೇಶಗಳು.

ಅದನ್ನೆಲ್ಲ ನಡೆಸಲಿಕ್ಕೆ ಬಹಳ ಒಗ್ಗಟ್ಟಿನಿಂದ ಹಗಲಿರುಳೂ ಪ್ರಯತ್ನಿಸುವ ಸಿವರ್ಣ ಮಂತ್ರಾಕ್ಷತೆ ಪ್ರೇರಿತ ಹಳದೀ ಬಾವಯ್ಯಂದಿರು. ಮುಂಬರುವ ದಿನಗಳಲ್ಲಿ ಬೀದಿ ಬೀದಿಗಳಲ್ಲಿ ಬೀಸು ಕಂಸಾಳೆ, ಗೀಗೀ ಪದ, ಶೀಕೃಷ್ಣ ಪಾರಿಜಾತ, ಸೋಮನ ಕುಣಿತ, ಡೊಳ್ಳುಕುಣಿತ, ಗೊರವರ ಕುಣಿತ, ಸುಗ್ಗಿ ಕುಣಿತ, ಹಲಗೆ ಹೊಡೆಯುವವರು, ಸ್ತಬ್ಧಚಿತ್ರಗಳು, ಮರಕಾಲು ಕುಣಿತ, ಹಗಣ, ಹಗಲುವೇಷದವರು, ದೊಂಬರಾಟ, ತಟ್ಟೀರಾಯ ಈ ರೀತಿಯಾಗಿ ಎಲ್ಲವಿಧದ ಆಕರ್ಷಕ ಕುಣಿತಗಳ ತಂಡಗಳನ್ನೂ ಕರೆಸಿಕೊಂಡು ಜಾಥಾ ನಡೆಸಬೇಕೆಂದು ಮಹಾಸಂಸ್ಥಾನದವರ ಅಪ್ಪಣೆಯ ಮೇರೆಗೆ ಹಳದೀ ಬಾವಯ್ಯಂದಿರೆಲ್ಲ ಸೇರಿ, ಪಿಂಪ್ ಅಕ್ಕಯ್ಯಂದಿರನ್ನೆಲ್ಲ ಮುಂದಿಟ್ಟುಕೊಂಡು ಆಯೋಜನೆ ನಡೆಸಿಕೊಂಡಿದ್ದಾರೆ.

ಏನೂ ಇರಲಿ, ಮಹಾಕಾಮಿಗಳು ಪ್ರಪಾತಕ್ಕೆ ಬೀಳುತ್ತಿದ್ದರೂ ಶಿಖರ ತುದಿಯಲ್ಲಿ ಹುಟ್ಟಿಬೆಳೆದ ಹುಲ್ಲುಕಡ್ಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ, ಅದಕ್ಕೆ ಭೇಷ್ ಎನ್ನಲೇಬೇಕು. ಹಲ್ಲಿಲ್ಲದ ಮುದುಕಿಯರು ಅವರ ಈ ಪ್ರಯತ್ನಕ್ಕೆ ಸಾಥ್ ನೀಡುತ್ತಾರೆ, ಯಾಕೆಂದರೆ ಹಿರಿತಲೆಗಳೂ ಇದ್ದಾವೆ ಎಂದಾಗಬೇಕಲ್ಲ? ಅಲ್ಲವೇ?

ಕಚ್ಚೆಹರುಕರಿ ಇತಿಹಾಸದುದ್ದಕ್ಕೂ ಕಂಡುಬಂದಿರುವುದು ದಾಖಲಾಗಿದೆ. ಎಲ್ಲಕ್ಕಿಂತ ಪ್ರಮುಖ ವಿಷಯವೆಂದರೆ ಕ್ರೈಸ್ತರ ಪೋಪ್ ಒಬ್ಬ ಸಹ ಹೀಗಿದ್ದ ಎಂಬುದನ್ನು ಇಂದಿನ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದೆ. ಗಣ್ಯರೆನಿಸಿಕೊಂಡುದನ್ನೇ ಕೆಚ್ಚೆಹರುಕುತನಕ್ಕೆ ಬಳಸಿಕೊಂಡು ಬೆತ್ತಲಾದ, ಸಾವಿನ ಸಮಯದಲ್ಲಿ ಪರಸ್ತ್ರೀ ತೆಕ್ಕೆಯಲ್ಲಿ ಮಲಗಿದ್ದ ’ಮಹನೀಯರ’ ವರದಿಗಳನ್ನು ಇದರಲ್ಲಿ ಕಾಣಬಹುದು. ಭಾರತದ ರಾಜಕಾರಣದಲ್ಲೂ ಹಿಂದಿನ ಕೆಲವು ಪ್ರಮುಖ ರಾಜಕಾರಣಿಗಳು ಕಚ್ಚೆಹರುಕರಾಗಿದ್ದರೆಂದು ತುಮರಿ ನಿಮಗೆ ಹೇಳಿದ್ದಾನೆ.

ಈ ಕೋಳಿಕೆರಂಗಗಳೆಲ್ಲರ ವಿಷಯಗಳನ್ನೂ ಮುಚ್ಚಿಡುವುದಕ್ಕೆ ಅವರ ಅಭಿಮಾನಿಗಳು, ಸಂಬಂಧಿಕರು ಎಲ್ಲ ಸೇರಿ ಬಹಳ ಪ್ರಯತ್ನ ನಡೆಸಿದ್ದರು. ಆದರೂ ಈ ಸಂಗತಿಗಳು ಕಾಡ್ಗಿಚ್ಚಿನಂತೆ ಹಬ್ಬಿ ಪ್ರಪಂಚದಾದ್ಯಂತ ವ್ಯಾಪಿಸಿಕೊಂಡಿದೆ.

ಇದೆಲ್ಲ ಒತ್ತಟ್ಟಿಗಿರಲಿ, ಒಂದುಕಡೆ ಹಸಿದ ಸಿಂಹದ ಉಗ್ರಪ್ರತಾಪ ಅರಣ್ಯರೋದನವಾಗಿ ಪರಿಣಮಿಸಿದ್ದರೆ, ಇನ್ನೊಂದೆಡೆ ಲೋಕಲ್ ವಾಹಿನಿಗಳು, ಜೀವವಿಲ್ಲದ ಕೆಲವು ಪ್ರಾದೇಶಿಕ ಪತ್ರಿಕೆಗಳು ಸುವರ್ಣ ಮಂತ್ರಾಕ್ಷತೆ ಪಡೆದುಕೊಳ್ಳುವ ಸಂಘದ ಅಜೀವ ಸದಸ್ಯರಾಗಿ, ಮಹಾಕಾಮಿಗಳ ಕಚ್ಚೆಹರುಕುತನದ ರಕ್ಷಣೆಗೆ ಬೆಂಗಾವಲಾಗಿ ನಿಂತಿದ್ದು ಕಂಡುಬರುತ್ತಿದೆ.

ಹೀಗೆಲ್ಲ ಇರುತ್ತ ಮಹಾಕಾಮಿಗಳಿಗೆ ಕೋರ್ಟು ಕಚೇರಿ, ಅಡ್ಡಗೇಟು ವ್ಯವಹಾರಗಳ ನಡುವೆ ಪೂಜೆಗೆಲ್ಲ ಸಮಯವೆಲ್ಲಿದೆ?ಆದರೂ ಹಾವಾಡಿಗ ಶೀಗಳು ಪೂಜೆಯ ನೆಪವನ್ನೂ ಆಗಾಗ ಮುಂದಿಡುತ್ತಾರೆ ಪಾಪ! ಏನಾದರೂ ಕಿರಿಕ್ ಆಗುತ್ತದೆ ಎಂದು ಗೊತ್ತಾದ ದಿವಸ ಅಸಾಧಾರಣ ಪೂಜೆಯೇನು? ಅಪರಿಮಿತ ಧ್ಯಾನವೇನು? ಎಲ್ಲ ಅಡ್ಡವೇಷಗಳಿಗೂ ತಾರ್ಕಿಕ ಅಂತ್ಯವೆಂಬುದೊಂದು ಇರಲೇಬೇಕೆಲ್ಲ? ಹಾಲುಕುಡಿದೋರೇ ಬದುಕೋದಿಲ್ಲವಂತೆ ಇನ್ನು ವಿಷ ಕುಡಿದೋರು ಬದುಕುತ್ತಾರ? ಶೀಘ್ರದಲ್ಲೆ ಅಂಕದ ಪರದೆ ಜಾರಿ ಎಲ್ಲ ನಾಟಕಗಳಿಗೆ ಅಂತ್ಯ ಹಾಡಲಿದೆ, ಕಾಯುತ್ತಿರಿ.

Thumari Ramachandra

source: https://www.facebook.com/groups/1499395003680065/permalink/1673679336251630/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s