ಒಬ್ಬ ಸಾದಾ ವ್ಯಕ್ತಿಗಾದರೂ ಕನಿಷ್ಠ ಮರ್ಯಾದೆ ಎಂಬುದಿರುತ್ತದೆ……

ಒಬ್ಬ ಸಾದಾ ವ್ಯಕ್ತಿಗಾದರೂ ಕನಿಷ್ಠ ಮರ್ಯಾದೆ ಎಂಬುದಿರುತ್ತದೆ……

ಡೆಸ್ಕಿನಲ್ಲಿ ಕೂತು ಆರಾಮಾಗಿ ಉಂಡೆದ್ದು, ಕಂಡಿದ್ದನ್ನೆಲ್ಲ ಬೆತ್ತಲೆ ಮಾಡುತ್ತಿದ್ದವರಿಗೆ ಬಹಳ ಹಸಿವಾಗಿದೆ ಎಂಬುದು ಸ್ಪಷ್ಟ. ರೈಲ್ವೇ ಸ್ಟೇಷನ್ನಿನಲ್ಲಿ ಭಿಕ್ಷೆ ಎತ್ತುವ ಮಗುವಿಗಿಂತ ಜಾಸ್ತಿ ಬೆತ್ತಲಾಗಿ ಅದನ್ನವರು ಹೇಳಿಕೊಂಡಿದ್ದಾರೆ ಕೂಡ. ಸಮಯಕ್ಕೆ ಸರಿಯಾಗಿ ತಿಂದುಂಡು ಹಾಯಾಗಿ ನಿದ್ದೆ ಮಾಡಿದವರಿಗೆ ಹಸಿವಿನ ಅನುಭವ ಆಗುವುದಿಲ್ಲ. ಹೊಟ್ಟೆತುಂಬಿದವ ಲೋಕಕ್ಕೆ ಪುರಾಣ, ಪ್ರವಚನ, ಮಾರ್ಗದರ್ಶನ ಮಾಡುವುದು ಯಾವ ದೊಡ್ಡ ಸಂಗತಿ ಅಂದುಕೊಂಡಿದ್ದೀರಿ? ಅದನ್ನು ಎಲ್ಲರೂ ಮಾಡುತ್ತಾರೆ; ಕೆಲವರಂತೂ ಅದನ್ನು ಅಗತ್ಯಕ್ಕಿಂತ ಹೆಚ್ಚಾಗಿ ಮಾಡುತ್ತಾ “ಧರ್ಮರಕ್ಷಣೆ” ಎನ್ನುತ್ತಾರೆ.
ಹಸಿವನ್ನು ಸಹಿಸಿಯೂ, ಯಾರೊಬ್ಬರಲ್ಲಿ ಅದನ್ನು ಹೇಳಿಕೊಳ್ಳದೆ ಧರ್ಮಮಾರ್ಗದಲ್ಲಿ ದುಡಿಮೆ ನಡೆಸುವುದನ್ನು ಆಚರಿಸಿ ತೋರಿಸುವುದು ಪ್ರಾಮಾಣಿಕರ ಕರ್ತವ್ಯ. ಮೊನ್ನೆಯ ಕತೆಯೊಂದರಲ್ಲಿ ನಮ್ಮ ಮಲೆನಾಡ ಹುಡುಗನೊಬ್ಬನ ಬಗ್ಗೆ ಹೇಳಿದ್ದೆನಲ್ಲ? ನಗರಕ್ಕೆ ಜಾಬು ಹುಡುಕಲು ಹೋದ ಅವನಿಗೆ ಪಿಜಿಯಲ್ಲಿರುವುದೇ ಕಷ್ಟವೆನಿಸಿತು. ಆದರೆ, ಹಿಂದೆ ಪಿಜಿ ಎಂಬ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಬಂದವರು ಜೀವನಾವಶ್ಯಕ ಸಾಮಗ್ರಿಗಳನ್ನು ತಾವೇ ಸಂಗ್ರಹಿಸಿಕೊಂಡು, ಬ್ಯಾಚುಲರ್ ರೂಮ್ ಮಾಡಿಕೊಂಡು, ಸೀಮೆ ಎಣ್ಣೆ ಸ್ಟವ್ {ಅಂದು ಇಂಡಕ್ಷನ್ ಸ್ಟವ್ ಇರಲಿಲ್ಲ, ಗ್ಯಾಸ್ ಕನೆಕ್ಷನ್ ಸುಲಭದಲ್ಲಿ ಸಿಗುತ್ತಿರಲಿಲ್ಲ.} ಉರಿಸಿಕೊಂಡು ಅಡುಗೆಯನ್ನು ತಾವೇ ಮಾಡಿಕೊಂಡು ಓದುವುದೋ, ಜಾಬ್ ಹುಡುಕುವುದೋ ನಡೆಸುತ್ತಿದ್ದರಲ್ಲ ಅಂತವರು ಯಾರೂ ತಮಗೆ ಕಷ್ಟವೆಂದು ಅಲವತ್ತುಕೊಳ್ಳುತ್ತಿರಲಿಲ್ಲ.

ಮೊಸರನ್ನ ಮೆದ್ದು, ಹಗಲಲ್ಲೂ ಹೊದ್ದು, ನಿದ್ದೆ ಹೊಡೆದು ಸುಖಿಸುತ್ತಿದ್ದ ಮಲೆನಾಡ ಮಗನಿಗೆ ಪಿಜಿ ವಾಸವೇ ದುಸ್ತರವೆನಿಸಿಬಿಟ್ಟಿತು ಪಾಪ! ಇನ್ನೊಂದು ರಂಗಕ್ಕೆ ಧುಮುಕುವಾಗ ಅಲ್ಲಿಯ ಸುಖದುಃಖಗಳ ಮಾಹಿತಿ ಕಲೆಹಾಕಿಕೊಳ್ಳಬಲ್ಲಷ್ಟು ಮೇಧಾವಿಗಳಾದವರಿಗೆ ಅಲ್ಲಿ ಪಡೆದುಕೊಳ್ಳುವುದು ಕಡಿಮೆ, ಬಹಳಜನ ಸಾರ್ವಜನಿಕರ ಹಣ ಹೊಡೆದುಕೊಂಡೆ ಬದುಕುತ್ತಾರೆ ಎಂಬುದು ಗೊತ್ತಿರಬೇಕಿತ್ತಲ್ಲವೆ? ಗೈಡನ್ಸ್ ಬೇಕಾದರೆ ಇಮ್ಮಡಿ ವಿಶ್ವೇಶ್ವರಯ್ಯನವರನ್ನು ಕೇಳಬಹುದಿತ್ತು, ಜೊತೆಗೇ ಇದ್ದರಲ್ಲ. ಒಂದು ಮಾತಂತೂ ಸತ್ಯ, ಪಡೆದುಕೊಳ್ಳುವುದು ಕಡಿಮೆ ಎನಿಸಿದರೂ ಉಳಿದೆಲ್ಲ ಸೌಕರ್ಯಗಳೂ ಅವರಿಗೆ ಶುಲ್ಕಮುಕ್ತವಾಗಿ ಸಿಗೋದರಿಂದ ಖರ್ಚೂ ಕಡಿಮೆಯೆ ಇರುತ್ತದೆ. ಮಹಾರಾಜನ ಬದುಕು ಬದುಕಲಿಕ್ಕೆ ಸಾಕಾಗುತ್ತಿಲ್ಲ ಎಂಬ ಧೋರಣೆಯಾದರೆ ಅಲ್ಲಿಗೆ ಹೋದದ್ದರ ಉದ್ದೇಶ ಎಲ್ಲರೆದುರು ಬೆತ್ತಲಾಗುತ್ತದೆ. ಸದ್ಯಕ್ಕೆ ಕೆಲವರ ವಿಷಯದಲ್ಲಿ ಅದೀಗ ಬೆತ್ತಲಾಗಿಬಿಟ್ಟಿದೆ.

ಅದೇನೇ ಇರಲಿ, ಆರ್ಥಿಕ ಹಸಿವುಳ್ಳವರಿಗೆ ಮೃಷ್ಟಾನ್ನ ಕೊಡುತ್ತೇವೆ ಎಂದು ಕರೆದುಕೊಂಡು “ತಮ್ಮ ಸೇವೆ ನಡೆಯಲಿ” ಎಂದು ಸೇವಾವೃತ್ತಿಗೆ ಇಳಿಸಿಕೊಳ್ಳುವುದರಲ್ಲಿ ಹಾವಾಡಿಗ ಮಠ ಹೆಸರು ಮಾಡಿದೆ. ಈಗ ಅಲ್ಲಿ ಕುಣಿಯುತ್ತಿರುವವರೆಲ್ಲರೂ ಆರ್ಥಿಕ ಹಸಿವೆಯನ್ನು ನೀಗಿಸಿಕೊಳ್ಳಲು ಅಲ್ಲಿ ಸೇರಿಕೊಂಡವರೇ ಆಗಿದ್ದಾರೆ; “ಯನ್ ಕಣ್ಣಿಗೆ ಜೊಂಪು ಹತ್ತಿತ್ತು ಮಾರಾಯ ಯಾವಾಗ ಎದ್ದೋದ್ರೋ ಗೊತ್ತಾಗಲ್ಯನ” ಎಂದು ಮುದುಕರು ಜೊತೆಗೆ ಕುಳಿತವರನ್ನು ಹುಡುಕುವಾಗ ಹೇಳುವಂತೆ, ಆರ್ಥಿಕ ಹಸಿವು ಇಲ್ಲದವರು ಹಾವಾಡಿಗ ಮಠದಿಂದ ಯಾವಾಗಲೋ ದೂರವಾಗಿದ್ದಾರೆ.
ತಂಗಿ ಅಣ್ಣನನ್ನು ಸಮರ್ಥಿಸುವ ಜಾಣತನವನ್ನು ನೀವೊಮ್ಮೆ ನೋಡಬೇಕು. ತಂಗಿ ಎಂದರೆ ಯಾರೆಂದುಕೊಂಡಿದ್ದೀರಿ, ಮಠದ ಗೂಬೆಮುಖದ ಬಾವಯ್ಯನ ಹೆಂಡತಿ, ಅರ್ಥಾತ್ ಮಠದ ತಂಗಿ ಅಂದಮೇಲೆ ಎಲ್ಲರಿಗೂ ತಂಗಿ. ಅಣ್ಣನ ರಾಸಲೀಲೆಗಳನ್ನು ಅಲ್ಲಗಳೆಯುವುದಕ್ಕೆ ಬಹಳ ಪರಿಶ್ರಮಿಸಿದ್ದಾಳೆ ಎಂಬುದನ್ನು ಒಪ್ಪಲೇಬೇಕು. ಅವಳಿಗೆ ಅವಳ ಬಗೆಗೇ ತಿಳಿದಿಲ್ಲ ಇನ್ನು ಅಣ್ಣನ ಕತೆ ಹೇಗೆ ತಿಳಿದೀತು?

ಜನಸಾಮಾನ್ಯರಿಗೆ ತಮ್ಮ ಮೇಲೆ ಆಪಾದನೆ ಬಂದರೆ ಬಹಳ ಬೇಸರವಾಗುತ್ತದೆ. ಯಾಕೆಂದರೆ ಅವರ ಜೀವನದಲ್ಲಿ ಮರ್ಯಾದೆ, ಘನತೆ, ಗೌರವ ಎಂಬುದಕ್ಕೆ ಅವರು ಬಹಳ ಬೆಲೆ ಕೊಡುತ್ತಾರೆ. ಹಣ ಜಾಸ್ತಿಯಾದವರಿಗೆ ಆ ಪದಗಳಲ್ಲಿ ಸೌಂಡ್ ಕಡಿಮೆಯಾಗುತ್ತ ಹೋಗುತ್ತದೆ. ಹಣ ಅತಿ ಹೆಚ್ಚಿಗೆ ದೊರೆತಾಗ, ಹಣದ ಸೌಂಡೆ ಹೆಚ್ಚಿ ಅವುಗಳಿಗೆ ಸೌಂಡೇ ಇರುವುದಿಲ್ಲ! ನೀವು ನೋಡಿ, ದೀಪದ ಬುಡದಲ್ಲಿ ಕತ್ತಲೆ ಅನ್ನುವ ಹಾಗೆ ಶ್ರೀಮಂತರ ಬುಡದಲ್ಲಿ ಮರ್ಯಾದೆಗೆಡಕು ಘಟನೆಗಳು ಮರೆಯಲ್ಲಿರುತ್ತವೆ, ಹೊರಗಿನಿಂದ ಕಾಣುವುದಿಲ್ಲ; ಇದಕ್ಕೆ ಕೆಲವು ಅಪವಾದಗಳಿರಬಹುದು.
ಎಲ್ಲರಿಗೂ ಒಂದೇ ಎಂವ ನಮ್ಮ ಕಾನೂನು ಜನಸಾಮಾನ್ಯನಿಗಾದರೆ ಒಂದು ರೀತಿ ಮತ್ತು ಪ್ರಮುಖರಿಗೆ ಇನ್ನೊಂದು ರೀತಿ ಅಪ್ಲೈ ಆಗುತ್ತಿರುವುದನ್ನು ಇಡೀ ದೇಶವೇ ಬಲ್ಲುದು. ನೀರಿನಲ್ಲಿ ಮೀನಿನ ಹೆಜ್ಜೆಗುರುತನ್ನು ಗುರುತಿಸುವುದು ಹೇಗೆ ಅಸಾಧ್ಯವೋ ಇಲ್ಲಿಯೂ ಹಾಗೆ, ಆ ತಾರತಮ್ಯಕ್ಕೆ ಕಾರಣಗಳು ಸಿಗುವುದಿಲ್ಲ. ಸಾಮಾನ್ಯವಾಗಿ ಕ್ರಿಮಿನಲ್ ಕೇಸುಗಳಲ್ಲಿ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುತ್ತಾರೆ; ಆದರೆ ಪ್ರಮುಖರು, ಪ್ರಭಾವಿಗಳು ಎನಿಸಿದರೆ ಯಾಕೆ ಬಂದಿಸದಿರುತ್ತಾರೆ ಎಂಬುದಕ್ಕೆ ಯಾವ ಪುಸ್ತಕದಲ್ಲೂ ಲಿಖಿತ ಉತ್ತರ ಸಿಗುವುದಿಲ್ಲ.
ಜನಸಾಮಾನ್ಯ ಸಾಕ್ಷ್ಯ ನಾಶ ಮಾಡುವಷ್ಟು ಜಾಣನಾಗಿರುವುದು ಕಡಿಮೆ; ಪ್ರಭಾವಿಗಳು, ಪ್ರಮುಖರು ಎನಿಸಿಕೊಂಡವರು ಅದರಲ್ಲಿ ಬಹಳ ಜಾಣರಾಗಿರ್ತಾರೆ. ಅಂತಹ ಪ್ರಭಾವಿಗಳನ್ನು ವರ್ಷಗಟ್ಟಲೆ ರಾಜಾರೋಷಾಗಿ ಅಲೆದಾಡಲು ಬಿಟ್ಟು, ಬೇಕಾದಂತೆಲ್ಲ ಭಾಷಣ ಮಾಡಲು, ಸಂಘಟನೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟು, ಬಂಧಿಸದೇ ನಿಧಾನವಾಗಿ ವಿಚಾರಿಸುವುದನ್ನು ಕಂಡ ಯಾರಿಗಾದರೂ ಈ ಅನಿಸಿಕೆಗಳು ಬರದೇ ಇರಲಾರವು.

ಜಗದ್ಗುರು ಎನಿಸಿಕೊಂಡವ ಹೇಗಿರಬೇಕು? ಇಂದಿನ ಕಾಲದಲ್ಲಿ ಇದೊಂದು ದೊಡ್ಡ ಜಿಜ್ಞಾಸೆಯ ವಿಷಯ. ಯಾಕೆಂದರೆ ಗಲ್ಲಿಗಲ್ಲಿಗೆ ಜಗದ್ಗುರು ಬೋರ್ಡು ತಗುಲಿಸಿಕೊಂಡು ಕೋಟಿಗಳಲ್ಲಿ ಎಣಿಸಿಕೊಳ್ಳುವ ಕಳ್ಳರು ಹುಟ್ಟಿಕೊಳ್ಳುತ್ತಿದ್ದಾರೆ. ಬೋಳೆಣ್ಣೆ ಸವರಿ ಎಣಿಸಿಕೊಂಡ ಹಣದಲ್ಲಿ ಕೆಲವನ್ನು ಬಿಸಾಕಿ ಸಾಕು ನಾಯಿಗಳಂತೆ ಕೆಲವು ಅನುಯಾಯಿಗಳನ್ನು ಸಾಕಿಕೊಳ್ಳುತ್ತಾರೆ. ಅವನ ಆಸ್ಥಾನದಲ್ಲಿ ಅವನು ಹೇಳಿದ್ದೇ ಧರ್ಮ, ಅದೇ ನೀತಿ, ಅದೇ ನ್ಯಾಯ. ತಾನು ಏನನ್ನೂ ಮಾಡಲಿಲ್ಲ ಎಂದುಬಿಟ್ಟರೆ ಮುಗೀತು ಮಾಡಿದ್ದೆಲ್ಲವೂ ಸುಳ್ಳು ಎಂದು ಫಲಾನುಭವಿ ಅನುಯಾಯಿಗಳು ಊಳಿಡಲು ಆರಂಭಿಸುತ್ತವೆ.

“ನಮ್ಮ ಗುರುಗಳಿಗೆ ಹಾಗೆ ಹೇಳಿದವರು ಸರ್ವನಾಶವಾಗಿ ಹೋಗ್ತಾರೆ, ಅವರ ಕುಟುಂಬ ಸರ್ವನಾಶವಾಗಿ ಹೋಗ್ತದೆ, ಅವರಿಗೆ ಗುರು ಪೀಠದ ಶಾಪ ತಟ್ಟದೆ ಇರೋದಿಲ್ಲ. ಹರ ಮುನಿದರೆ ಗುರುವಾದರೂ ಕಾಯುತ್ತಿದ್ದ, ಗುರು ಮುನಿದರೆ ಯಾರೂ ಕಾಯೋರಿಲ್ಲ.” ಎಂಬೆಲ್ಲ ಹೇಳಿಕೆಗಳನ್ನು ಹಬ್ಬಿಸುತ್ತಾರೆ. ಊರಲ್ಲಿ ಯಾರೋ ಕಳ್ಳ ಜಗದ್ಗುರುವಿನ ವಿರೋಧಿಗಳು ಯಾವುದೋ ಕಾರಣಕ್ಕೆ ಸತ್ತರೆ “ನೋಡಿದ್ರಾ? ಗುರು ಶಾಪ, ಈ ಪೀಠದ ಮಹತ್ತೇ ಅಂತದ್ದು” ಎಂದೆಲ್ಲ ಭೋಂಗು ಬಿಡ್ತಾರೆ. ತುಮರಿ ಕಲೆಹಾಕಿದ ಹಲವರ ಅನುಭವಗಳ ಆಧಾರದಲ್ಲಿ ಹೇಳುವುದಾದರೆ ಅವೆಲ್ಲವೂ ಕೇವಲ ಕಪೋಲ ಕಲ್ಪಿತವಷ್ಟೆ; ನಾವು ಸರಿಯಿಲ್ಲದಿದ್ದರೆ, ನಮ್ಮದು ತಪ್ಪಿದ್ದರೆ ಕಾಕತಾಳೀಯವಾಗಿ ಅದು ಹೌದೆನಿಸಬಹುದು, ಗುರುವೆನಿಸಿದವನೇ ಸರಿಯಿಲ್ಲದಿದ್ದರೆ ಏನೇನೂ ಆಗದು, ನೀವೆಲ್ಲ ನಿಶ್ಚಿಂತೆಯಿಂದ ಇರಬಹುದು.

ಯಾರಿಗೆಲ್ಲ ಅಶೀರ್ವಾದ ಮಾಡಬೇಕೋ, ಯಾರಿಗೆಲ್ಲ ಧರ್ಮಮಾರ್ಗದರ್ಶನ ಮಾಡಬೇಕಿತ್ತೋ ಅಂತವರ ಎದುರಲ್ಲೆ ಕಟಕಟೆಯಲ್ಲಿ ನಿಲ್ಲಬೇಕಾದ ಹೀನ ಸ್ಥಿತಿಯನ್ನು ಎದುರಿಸುವ ಪರಿಸ್ಥಿತಿ ನಿಜವಾದ ಜಗದ್ಗುರುವಿಗೆ ಬರುವುದಿಲ್ಲ. ಬಂದರೆ ಆತ ಜಗದ್ಗುರುವಲ್ಲ, ಗುರುವೂ ಸಹ ಅಲ್ಲ. ಇಷ್ಟೆಲ್ಲ ಇದ್ದೂ ಅಂತವನನ್ನೇ ಗುರುವೆಂದು ಕೊಂಡಾಡುತ್ತ ಮೆರೆಯುವ ಅನುನಾಯಿಗಳಿಗೆ ಬಕರಾಭಕ್ತರ ಹಣದ ಒಳಹರಿವು ಇರುವಷ್ಟೂ ಕಾಲ ಅವ ಆಶ್ರಯ ನೀಡುತ್ತಾನೆ.

ಅಂತಹ ಕಳ್ಳ ಕೊರಮನ ಕಾಲಿಗೆ ಬೀಳುವುದು, ಪಾದಪೂಜೆ ಮಾಡುವುದು, ಆರತಿ ಬೆಳಗುವುದು, ಅವನ ಮೃತಹಸ್ತದಿಂದ ಬಣ್ಣದ ಅಕ್ಕಿ ಪಡೆಯುವುದು ಇದೆಲ್ಲ ತೀರಾ ಹಾಸ್ಯಾಸ್ಪದ ವಿಷಯವೆನಿಸುತ್ತದೆ; ಅದರಲ್ಲೂ, ಓದಿಕೊಂಡ ನಾಗರೀಕರೇ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುತ್ತಿರುವುದನ್ನು ನೋಡಿದಾಗ ಅವರ ಅನಾಗರಿಕತೆಯ ಮುಖ ಗೋಚರಿಸುತ್ತದೆ.
ನಖಶಿಖಾಂತ ಕಾಮವನ್ನೆ ತುಂಬಿಕೊಂಡ ಕಾಮುಕನನ್ನು ಗುರುವೆಂದು ಆರಾಧಿಸುತ್ತ, ವೈಜ್ಞಾನಿಕ ಪುರಾವೆಗಳ ದೃಢೀಕರಣಗಳನ್ನು ಅಲ್ಲಗಳೆಯುತ್ತ, ಪಿಂಪ್ ಗಳಾಗಿ ಅವನ ಏಕಾಂತ ಸೇವೆಗೆ ಹೆಣ್ಣುಮಕ್ಕಳನ್ನು ಒದಗಿಸುತ್ತ ಬದುಕುವ ಅನುನಾಯಿಗಳನ್ನು ಕಂಡಾಗ ಅವರೆಲ್ಲರ ಖಾಸಗೀ ಬದುಕಿನಲ್ಲೂ ಹಲವು ಕತೆಗಳು ಕಾಣುತ್ತವೆ. ಸಂದೇಹ ಮೂಡುತ್ತದೆ.

ಒಳಗಿನ ವಿಷಯವನ್ನೆ ಎಳ್ಳಷ್ಟೂ ಅರಿಯದ ಹಸಿದ ಹಾದಿಹೋಕನಿಗೆ ಆರ್ಥಿಕ ಆಮಿಷವೊಡ್ಡಿ ತಮ್ಮ ಪರವಾಗಿ ವಾದಿಸಲು ಕರೆಯುವುದು ಕೊನೆಯ ಪ್ರಯತ್ನವೆ? ಅಂದಹಾಗೆ ಕೊಡೆ, ಬೆಳ್ಳಿ ಗೂಟ ಎಲ್ಲ ಎಲ್ಲಿ ಹೋಗಿತ್ತು ಮಾರಾಯರೆ? ಪೂರ್ಣಕುಂಭ ಹಿಡಿದವರೂ ಎಲ್ಲೆಲ್ಲೂ ಕಾಣಲಿಲ್ಲ. ಕಂಡಿದ್ದೆಲ್ಲ ಕರೀ ಕೋಟು ಬಿಳೀ ಕಾರುಗಳೆ, ಇರಲಿ ಇನ್ನೂ ಹಲವುದಿನ ಕಾಯ ಬೇಕಾಗಬಹುದು ಕಿರೀಟೋತ್ಸವಕ್ಕೆ, ನಮ್ಮ ಕವಳದ ಗೋಪಣ್ಣ ಪಟಾಕಿಯನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಬೆಚ್ಚಗೆ ಇರಿಸಿದ್ದಾನಂತೆ, ಒಂದಲ್ಲ ಒಂದು ದಿನ ಉಪಯೋಗಕ್ಕೆ ಬರುತ್ತದೆ ಎಂದು ಖಾತ್ರಿ ಪಡಿಸಿದ್ದಾನೆ.

Thumari Ramachandra

https://www.facebook.com/groups/1499395003680065/permalink/1673053189647578/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s