“ಅಯ್ಯೋ ಕೊಡೆ ಹಿಡೀರಿ ಕೊಡೆ ಕೊಡೆ………”

“ಅಯ್ಯೋ ಕೊಡೆ ಹಿಡೀರಿ ಕೊಡೆ ಕೊಡೆ………”

ಕುಂಜಾಲು ರಾಮಕೃಷ್ಣ ಯಕ್ಷಗಾನದಲ್ಲಿ ಉತ್ತಮ ಹಾಸ್ಯಗಾರರಾಗಿದ್ದರು. ನಮ್ಮ ಎಳೆಯ ವಯಸ್ಸಿನಲ್ಲಿ ನಮಗೆ ನಿಲ್ಲಲೇ ಸರಿಯಾಗಿ ನೆಲೆಯಿಲ್ಲದಂತಾಗಿದ್ದ ಕಾರಣ ಕಷ್ಟಗಳ ನಡುವೆಯೇ ನಿಟ್ಟೂರುಕಡೆಗೆ ಹೋಗಿ ಯಕ್ಷಗಾನ ನೋಡುವುದಿತ್ತು. ಶಂಭುಹೆಗಡೇರ ಮೇಳದಲ್ಲಿ ಕುಂಜಾಲು ಕಲಾವಿದರಾಗಿದ್ದರು. ಯಾವ ಪ್ರಸಂಗದಲ್ಲಿ ಅಂತ ನೆನಪಿಲ್ಲ, ಕುಂಜಾಲು ಮದುಮಗನ ವೇಷವನ್ನು ಹಾಕಿದ್ದರು. ದಡ್ಡ ಮದುಮಗನಿಗೆ ಬಾಸಿಂಗದ್ದೇ ಚಿಂತೆಯಾಗಿತ್ತು. “ಬಾಸಿಂಗ ಓ ಬಾಸಿಂಗ..”ಅಂತ ಬಾಸಿಂಗದೊಡನೆಯೇ ಸಂಭಾಷಣೆ ನಡೆಸಿದ್ದು ಎಲ್ಲರನ್ನೂ ನಗೆಗೀಡುಮಾಡಿತ್ತು.

ಹಾವಾಡಿಗ ಮಠದಲ್ಲಿ ಹಾಗಲ್ಲ. ಮಠದ ಹೋರಿಗೆ ಕೊಡೆಯದ್ದೆ ಚಿಂತೆ. ಎಲ್ಲಿಗೆ ಹೋದರೂ ಕೊಡೆ ಹಿಡಿದು ಬರುವವರು ಇರಲೇಬೇಕು. ಕೋರ್ಟ್ ಹಾಲಿಗೆ ಮಾಧ್ಯಮದವರಿಗೆ ಪ್ರವೇಶ ಇರದಂತೆ ಏಕಾಂತದ ಕೋಣೆಗೆ ಮಾತ್ರ ಅವರಿಗೆ ಪ್ರವೇಶವಿಲ್ಲ. ಕೊಡೆ ಇಲ್ಲದಿದ್ದರೆ ಶೀಗಳು ಎಲ್ಲಿಹೋದರು ಎಂದು ಗೊತ್ತಾಗುವುದಾದರೂ ಹೇಗೆ? ಇನ್ನು ಬೆಳ್ಳಿಯ ಗೂಟ ಹಿಡಿಯಲಿಕ್ಕೆ ಇರ್ತಾರೆ ಬಿಡಿ. ಅದು ಕೆಲವೊಮ್ಮೆ ಎತ್ತರಕ್ಕೆ ಕಾಣಿಸೋದಿಲ್ಲ. ಎತ್ತರಕ್ಕೆ ಕಾಣಿಸೋದು ಎಂದರೆ ಎತ್ತಿ ಹಿಡಿಯೋ ಕೊಡೆ. ಹೀಗಾಗಿ ಹೋರಿಗೆ ಕೊಡೆ ಹುಚ್ಚು.

ಕೊಡೆ ಹಿಡಿಯುವ ವಿಷಯದಲ್ಲಿ ನಮ್ಮ ಸ್ನೇಹಿತ ಬಳಗದಲ್ಲೊಂದು ಚಿಂತನೆ ನಡೆದಿತ್ತು. ಹಳದೀ ತಾಲಿಬಾನ್ ಕೃಪೆಯಿಂದ ಏಕಾಂತವೆಂಬುದು ಬರುಬರುತ್ತಾ ಸಾರ್ವತ್ರಿಕ ಸೇವೆಯಾಗಿ ಸಮರ್ಪಣೆಯಾಗತೊಡಗಿದರೆ ಆಗ ಹೋರಿ ಹಾರುತ್ತಿರುವಾಗಲೂ ಯಾರಾದರೂ ಕೊಡೆಹಿಡಿಯಬಹುದಲ್ಲ ಎಂಬುದೆ ಪ್ರಧಾನ ವಿಷಯ.

“ಅಲ್ಡಾ ರಾಮು, ಕೊಡೆ ಇರಲಿ ಕಾವಿ ಪಂಚೆ ಮೇಲೆತ್ತೋ ಸಮಯ ಬತ್ತು ನೋಡ್ತಾ ಇರು. ಕೊಡೆ ಹಿಡಿಯವೆಲ್ಲ ಅಷ್ಟೊತ್ತಿಗೆ ಜಾಗ ಖಾಲಿ ಮಾಡಿರ್ತ” ಎಂದು ಹೇಳಿದ ಕವಳದ ಗೋಪಣ್ಣ ಅಬ್ಬರದ ನಗೆಯಲ್ಲಿ ಹಿಂದಿನಂತೆ ಮೈಮೇಲೆ ಕವಳ ಬೀಳಿಸಿಕೊಂಡ.

ಅಂದಹಾಗೆ ಕಳೆದ ವರ್ಷ ಮಹಾಪಥಿಕರಾಗಿ, ಪ್ರಕಾಶನದ ವತಿಯಿಂದ ಮಾಧ್ಯಮದಲ್ಲಿ ಪೀಠಸ್ಥರಾಗಿ ಹೋರಿಯ ತೆವಲು ತೀರಿಕೆಯನ್ನು ಅಲ್ಲಗಳೆದು ಸಮರ್ಥಿಸಿಕೊಂಡ ದುಷ್ಟಬುದ್ಧಿ ಬಾವಯ್ಯನವರು ಕಳೆದೊಂದು ತಿಂಗಳಲಾಗಾಯ್ತು ನಾಪಾತ್ತೆಯಾಗಿದ್ದಾರೆ. ಷರತ್ತುಬದ್ಧ ಜಾಮೀನು ಇರುವುದರಿಂದ ಅಪ್ಪಿತಪ್ಪಿ ಷರತ್ತು ಮುರಿದುಹೋದರೆ ತಕ್ಷಣವೇ ಎತ್ತಿಕೊಂಡು ಹೋಗ್ತಾರೆ ಎಂಬ ಭಯ ಕಾಡುತ್ತಿರಬೇಕು ಪಾಪ. ಅವರಿಗೆ ಮಠದ ಬಾವಯ್ಯ ಅಂತಲೇ ಹೆಸರು; ಯಾಕೆಂದರೆ ಶೀಗಳ ಬಾವಯ್ಯ ಬಕರಾ ಭಕ್ತರೆಲ್ಲರಿಗೂ ಬಾವಯ್ಯನೇ ಸರಿ. ನಮಗಂತೂ ಮಠದ ಬಾವಯ್ಯನ ಸೊಟ್ಟ ಮುಖ ನೋಡದೆ ಬಹಳ ಬೇಸರವಾಗಿದೆ. ಕೆಲವುಕಡೆ ಎಗ್ ಅಮ್ಲೆಟ್ ಮಾಡೋ ಜಾಗದಲ್ಲಿ ಕಣ್ಣಿಟ್ಟು ಪಾರ್ಸೆಲ್ ಕಟ್ಟಿಸಿಕೊಂಡು ಹೋಗುವವರನ್ನು ವಿಚಾರಿಸಿಕೊಂಡರೆ ರಹಸ್ಯ ಸ್ಥಳದ ಜಾಡು ಸಿಗಬಹುದು.
ಕೂದಲು ಕಪ್ಪಗಿದ್ದಾಗ ನಮೇಸಣ್ಣ ಸರಿಯಾಗಿದ್ದ. ಅದು ಅನಾದಿ ಕಾಲದಲ್ಲಿ. ಯಾವಾಗ ಮಠಕ್ಕೆ ಹೋರಿಯ ಪ್ರವೇಶವಾಗಿ ಮಠದ ಬಾವಯ್ಯನ ಮುಖಾಂತರ ನಮೇಸಣ್ಣನ ಪುನರ್ನೇಮಕ ಆಯಿತೋ ಆ ಲಾಗಾಯ್ತಿನಿಂದ ಅವನ ಕೂದಲೂ ಬೆಳ್ಳಗಾಗಿ ಅವನ ಬಣ್ಣವೂ ಬಯಲಾಗಿ ಹೋಗಿದೆ. ಶೀಗಳ ಪರವಾಗಿ ಬಕರಾಭಕ್ತರಿಗೆ ಕಾಲ್ ಮಾಡುವುದು ನಮೇಸಣ್ಣನ ಕೆಲಸವಾಗಿತ್ತು. ಎಂದಿಗೂ ಕಾಣುತ್ತಿದ್ದ ಬೆಣ್ಣೆಮುದ್ದೆ ಪೆದ್ದುಗುಂಡನ ಮುಖದಲ್ಲಿ ಬದಲಾವಣೆಯಾಗಿ ಧೂರ್ತತನ ಎದ್ದುಕಾಣುತ್ತಿತ್ತು ಎಂದು ಕಂಡವರು ಹೇಳಿದ್ದಾರೆ. ಅಂದಹಾಗೆ ನಮೇಸಣ್ಣನೂ ಗಾಯಬ್!

ಕನಾತು ಕಟ್ಟುವುದಕ್ಕೆ ಒದ್ದೆ ಪಂಚೆಯಲ್ಲೆ ಸಹಕರಿಸುತ್ತಿದ್ದ ಕನಾತಣ್ಣ ಶೀಗಳಿಗೆ ಈರುಳ್ಳಿ ಉಪ್ಪಿಟ್ಟು ಮಸಾಲೆದೋಸೆ ತಯಾರಿಸಿಕೊಡುತ್ತಿದ್ದ. ಹೋರಿಯ ಹಾರುವಿಕೆಯಲ್ಲಿ ತಮಗೂ ಲಾಭವಿದೆ ಎಂಬುದನ್ನು ಅರಿತ ಕನಾತಣ್ಣ ಶೀಗಳ ಸಲುವಾಗಿ ಏಕಾಂತಕ್ಕೆ ಬಲಿಯಾದ ಹೆಣ್ಣುಮಕ್ಕಳನ್ನು ಹೆದರಿಸುವುದಕ್ಕೆ ಮುಂದಾಗಿಬಿಟ್ಟ. ಬಂತಲ್ಲ ಅವನಿಗೂ ಗ್ರಹಚಾರ, ಈಗ ಅವನೂ ಕಾಣ್ತಿಲ್ಲ.
ನರ್ತನಮಾಡುವವರು, ಮೂರ್ತಿ ಹೊರುವವರು, ಪುಸ್ತಕ ಹೊರುವವರು ಯಾರೂ ಸರಿಯಾಗಿ ಕಾಣ್ತಿಲ್ಲ. ಕಾಮಕತೆಗೆ ಬಳಸುವ ಹಾರ್ಮೋನಿಯಂ ಪದರದೊಳಗೆ ಜಿರಲೆಗಳು ಸೇರಿಕೊಂಡು ಮೊಟ್ಟೆಮರಿ ಮಾಡುತ್ತ ಆರು ತಿಂಗಳು ಸಂಸಾರ ನಡೆಸಿವೆ. ಉಳಿದ ಕಲಾವಿದರು ಅವರವರ ಸಾಮಾನುಗಳನ್ನು ಅವರವರೇ ತೆಗೆದುಕೊಂಡು ಮಹಾಸಂಸ್ಥಾನದಿಂದ ಪರಾರಿಯಾಗಿದ್ದಾರೆ. ಅಹಂಕಾರವೇ ಮೈವೆತ್ತ ಮರುಳು ಕಲಾವಿದರು ಭಂಡಧೈರ್ಯದಿಂದ ತಮ್ಮ ಸಾಮಾನುಗಳನ್ನು ಕಾಣದ ಜಾಗದಲ್ಲಿ ಬಂದೋಬಸ್ತು ಮಾಡಿಟ್ಟುಕೊಂಡು ಶೀಗಳ ಪರವಾಗಿ ಆಗಾಗ ಬ್ಯಾಟಿಂಗ್ ಮಾಡುತ್ತಾರೆ.

ಹಿಮಾಲಯ ಸಾಧುಸಂತರ ನೆಲೆವೀಡು ಎಂಬುದು ನಮಗೆಲ್ಲ ತಿಳಿದ ವಿಷಯ. ಅಲ್ಲಿನ ಎತ್ತರದ ಪ್ರದೇಶಗಳಲ್ಲಿ ತೆರೆದ ಗುಹೆಗಳಲ್ಲಿ ವಾಸಿಸುವ ಸಾಧುಸಂತ ಸನ್ಯಾಸಿಗಳ ಜೀವನ ಬಹಳ ಕಠಿಣವಾದದ್ದು. ಅವರಿಗೆ ನಿನ್ನೆಯ ನೆನಪಿಲ್ಲ, ನಾಳೆಯ ಚಿಂತೆಯಿಲ್ಲ, ಇಂದಿನದ್ದೊಂದೆ ಎದುರು ಕಾಣುವುದು. ಅವರಲ್ಲಿನ ಸಾಧಕರು ನಿಜವಾಗಿಯೂ ಭೂತ,ಭವಿಷ್ಯತ್, ವರ್ತಮಾನ ಕಾಲಾತೀತರು, ಜಾಗೃತ್, ಸುಷುಪ್ತಿ ಮತ್ತು ಸ್ವಪ್ನವೆಂಬ ಅವಸ್ಥಾತ್ರಯದಿಂದ ಆಚೆ ನಿಂತವರು. ಇದ್ದರೆ ಉಂಡರು, ಇರದಿದ್ದರೆ ವಾಯುವನ್ನೇ ಆಹಾರವಾಗಿಸಿಕೊಂಡು ಬದುಕಬಲ್ಲವರು.

ನಿತ್ಯ ಮೃಷ್ಟಾನ್ನ ಭೋಜನ, ಈರುಳ್ಳಿ ಉಪ್ಪಿಟ್ಟು, ಮಸಾಲೆದೋಸೆ, ಬೋಂಡ, ಉದ್ದಿನವಡೆ ಇತ್ಯಾದಿಗಳನ್ನು ತಿಂದುಂಡು ಗುಂಡಗೆ ಮೈಬೆಳೆಸಿಕೊಂಡು ಹಾರುತ್ತ ಸುಖಪಡುವ ನಮ್ಮ ಹಾವಾಡಿಗ ಶೀಗಳ ತಾಕತ್ತಿನ ಬಗ್ಗೆ ನಮಗೆ ಡೌಟೇ ಇಲ್ಲ; ಕೆಲವು ಎಳೆಯ ಮಕ್ಕಳನ್ನು ಸರಿಯಾಗಿ ಪರೀಕ್ಷಿಸಿದರೂ ಅದು ಸಾಬೀತಾಗುತ್ತದೆ ಎಂದು ಹಲವು ಮಂದಿ ತಿಳಿಸಿದ್ದಾರೆ. ನಮ್ಮ ಪ್ರಶ್ನೆ ಅದಲ್ಲ. ಇಂತಿಪ್ಪ ನಮ್ಮ ಶೀಗಳು ಹಿಮಾಲಯದಲ್ಲೂ ತಮ್ಮ ತಾಕತ್ತನ್ನು ತೋರಿಸಬಲ್ಲರೇ? ಅಲ್ಲಿನ ಜನ ಅದನ್ನು ಸಹಿಸಬಲ್ಲರೇ? ಅಲ್ಲಿ ಅವರನ್ನು ಉಳಿಸಿಕೊಳ್ಳಬಲ್ಲರೇ? ನಿತ್ಯ ಈರುಳ್ಳಿ ಉಪ್ಪಿಟ್ಟು, ಮಸಾಲೆ ದೋಸೆ ಮಾಡಿಕೊಡುವರೇ? ಅಥವಾ ಅದನ್ನೆಲ್ಲ ಮಾಡಿಕೊಡಲಿಕ್ಕಾಗಿಯೇ ಇರುವ ಕನಾತಣ್ಣ, ನಮೇಸಣ್ಣ ಮತ್ತು ಯೋಜನೆ ರೂಪಿಸುವ ಮಠದ ಬಾವಯ್ಯ ಇವರನ್ನೆಲ್ಲ ಜೊತೆಗೆ ಇರಿಸಿಕೊಳ್ಳಲು ಬಿಡಬಹುದೇ? ಇದೊಂದು ನಮ್ಮನ್ನು ಸತತವಾಗಿ ಕಾಡುತ್ತಿದೆ.

ನಮ್ಮ ನೆಂಟರ ಪೈಕಿ ಒಬ್ಬ ಹುಡುಗ ಮನೆಯಲ್ಲಿ ಕಾಲೇಜ್ ವರೆಗೂ ಓದಿದ್ದ. ಮಲೆನಾಡ ಮನೆ. ಸದಾ ಉರಿಯುವ ಬಚ್ಚಲು ಒಲೆ, ಸ್ನಾನಕ್ಕೆ, ಕೈಕಾಲು ತೊಳೀಲಿಕ್ಕೆ, ಲಂಡನ್ನಿಗೆ ಹೋದಾಗ ತೊಳೆದುಕೊಳ್ಳಲಿಕ್ಕೆ ಎಲ್ಲದಕ್ಕೂ ಬಿಸಿನೀರು, ಮನೆಯಲ್ಲಿ ಹಬ್ಬಮುಗಿದು ತಿಂಗಳಾದರೂ ಮುಗಿಯದ ಹೋಳಿಗೆ, ತುಪ್ಪ, ಕತ್ತರಿಸುವ ಕೆನೆಮೊಸರು, ಬೇಕಷ್ಟು ನಿದ್ರೆ, ಸಾಕಷ್ಟು ಟಿವಿ ಸೀರಿಯಲ್ಲು, ಇಂಟರ್ನೆಟ್ಟು, ಬೆಟ್ಟದ ಪಕ್ಕದ ಬಯಲಲ್ಲಿ ಕ್ರಿಕೆಟ್ಟು ಇತ್ಯಾದಿ ಅಷ್ಟಾಂಗ ಸೇವೆಗಳಿಂದ ಸಮೃದ್ಧನಾಗಿದ್ದ ಪೋರ ಏಕಾ ಏಕಿ ಜಾಬ್ ಹುಡುಕುತ್ತ ಬೆಂಗಳೂರಿಗೆ ಬಂದು ಪಿಜಿಯಲ್ಲಿ ಉಳೀಬೇಕಾಯ್ತು.
ಬಂದು ಮೂರುದಿನ ಆಗಿರ್ಲಿಲ್ಲ, ಮನೆಗೆ ನೂರು ಸಲ ಫೋನ್ ಮಾಡಿಬಿಟ್ಟಿದ್ದ. ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ವರದಿ ಒಪ್ಪಿಸಿದ್ದೇ ಒಪ್ಪಿಸಿದ್ದು. ಅಪ್ಪಿಯ ಅಪ್ಪ ಬೆಂಗಳೂರಿಗೆ ಬಂದರು. ಕಾಲ ಬದಲಾಗಿದೆ, ಅವರವರ ಕೆಲಸವೇ ಅವರವರಿಗೆ ಹೆಚ್ಚು, ಅಪ್ಪಿಯನ್ನು ಇಟ್ಟುಕೊಳ್ಳುವುದಕ್ಕೆ ಯಾವ ನೆಂಟರೂ ಸೊಪ್ಪು ಹಾಕಲಿಲ್ಲ. ಸಮಸ್ಯೆಯೇನು ಗೊತ್ತೇ? ಇಂದಿನ ಹುಡುಗರು ಹಿಂದಿನ ಮಕ್ಕಳಂತಲ್ಲ; ಇಟ್ಟುಕೊಂಡವರ ಮೇಲೆ ಹಾಗಲ್ಲ ಹೀಗಲ್ಲ ಅಂತ ವರದಿ ಹೇಳೋಕೆ ಸುರುಮಾಡಿಕೊಳ್ತಾರೆ. ಹೀಗಾಗಿ ಯಾರೊಬ್ಬರೂ ಅಪ್ಪಿಯನ್ನು ಇಟ್ಟುಕೊಳ್ಳುವ ಧೈರ್ಯ ಮಾಡಲಿಲ್ಲ.
ಮಹಾನಗರಕ್ಕೆ ಬಂದ ಹದಿನೈದು ದಿನಗಳಲ್ಲಿ ಅಪ್ಪಿಯ ಒಂದು ಹಾಸು ಚರ್ಮ ತೆಗೆದುಹೋಗಿತ್ತು. ಅಪ್ಪಿ ಸಣ್ಣಗಾಗಲು ತೊಡಗಿದ್ದ. ವಾಟ್ಸಾಪ್ ನಲ್ಲಿ ಅಪ್ಪಿಯ ತಾಜಾ ಫೋಟೋ ನೋಡಿದ ಅಪ್ಪಯ್ಯ ಊರಿಗೆ ಮರಳಿ ಕರೆಸಿಕೊಂಡು, “ತಮ್ಮ, ಸುಮ್ನೇ ಎಂತಕೆ ಜಾಬು ನಿಂಗೆ? ಈಗೇನೋ ಮನೇಲಿದ್ದವ್ಕೆ ಹುಡುಗೀರ್ ಸಿಗತ್ವಲ್ಲೆ ಅಂತ ಮುಂದೆ ಕಾಲ ಹಂಗೇ ಇರ್ತಿಲ್ಲೆ. ಆರಾಮಾಗಿ ಜಮೀನು ಮನೆ ಅಂತ ಊರಲ್ಲೆ ಇರು” ಅಂತ ಅಪ್ಪಯ್ಯ ಹೇಳಿದ. ಹುಡುಗಿ ಸಿಗೋದಿಲ್ಲ ಎಂಬ ಕಾರಣಕ್ಕಾಗಿ ಜಾಬ್ ಮಾಡಲು ನಗರಕ್ಕೆ ಬಂದಿದ್ದ ಅಪ್ಪಿ, ಏನಾದ್ರೂ ಆಗ್ಲಿ ಅಂತ ಊರಲ್ಲೆ ಉಳಿದನಂತೆ.
ಸುಖದ ಸುಪ್ಪತ್ತಿಗೆಯಲ್ಲಿರುವ ನಮ್ಮ ಶೀಗಳ ಕತೆಯೂ ಸಹ ಮಲೆನಾಡ ಅಪ್ಪಿಯ ಕತೆಯಂತೆಯೇ. ಐಹಿಕ ಸುಖಗಳೆಲ್ಲವನ್ನೂ ಯಥೇಚ್ಛ ಅನುಭವಿಸುತ್ತಿರುವ ಶೀಗಳಿಗೆ, ಮುಕ್ತಿಯೊಂದು ಸಿಗುವುದಿಲ್ಲ ಎಂಬ ಕಾರಣಕ್ಕೆ ಇಷ್ಟೆಲ್ಲ ಇರುವ ಹಾವಾಡಿಗ ಸಂಸ್ಥಾನವನ್ನು ಬಿಟ್ಟು ಹಿಮಾಲಯಕ್ಕೆ ಹೋಗುವುದು ಎಲ್ಲಾದರೂ ಉಂಟೇ? ಪಾಪ ಅಲ್ಲಿಗೆ ಹೋಗಿ, ವಾರ ಕಳೆಯೋದರೊಳಗೆ ವಾಟ್ಸಾಪಿನಲ್ಲಿ ಶೀಗಳ ಭಾವಚಿತ್ರವನ್ನು ನೋಡಿದ ಏಕಾಂತದ ಹೆಣ್ಣುಮಕ್ಕಳಿಗೆ ಎಷ್ಟು ಕನಿಕರವಾಗಬೇಡ? ಮುನ್ನೂರರುವತ್ತೈದು ದಿನಗಳೂ ಹಿಮಬೀಳುವ ಚಳಿ ಪ್ರದೇಶದಲ್ಲಿ ಬೆಚ್ಚಗಿನ ರೂಮ್ ಅಥವಾ ಏ.ಸಿ. ರೂಮ್ ಸಿಗುವುದಾದರೂ ಎಲ್ಲಿ? ಏಕಾಂತಕ್ಕೆ ಬ್ರಹ್ಮರಾಕ್ಷಸರಿಲ್ಲದ ಜಾಗ ದೊರೆಯುವುದೇ? ಅಡ್ಡಾಡುವಾಗ ಕೊಡೆಹಿಡಿಯುವವರು ಯಾರು?

ಆಣೆ ಪ್ರಮಾಣಗಳ ಬೆದರಿಕೆಯೊಡ್ಡುತ್ತ, ಇಪ್ಪತ್ತೊಂದನೆಯ ಬೆರಳಿನಲ್ಲಿ ಶೀಗಳು ತಮ್ಮೊಡನೆ ತುಂಟಾಟ/ಕೋಲಾಟ ಆಡುವುದನ್ನೇ ಅನಿವಾರ್ಯವಾಗಿ ಸಹಿಸಿ ಅಭ್ಯಾಸವಾಗಿಹೋದ ಹೆಣ್ಣುಮಕ್ಕಳು ಮತ್ತು ಹೆಂಗಸರು ಕೆಲವರು ಶೀಗಳು ಹಿಮಾಲಯಕ್ಕೆ ಹೊರಟು ಹೋಗುವುದನ್ನು ಕಲ್ಪಿಸಿಕೊಳ್ಳಲೂ ಹೆದರುತ್ತಾರೆ. ಇದನ್ನೆಲ್ಲ ಗ್ರಹಿಸಿಯೇ ಬಕರಾಭಕ್ತರ ಮಧ್ಯದಲ್ಲಿ ಕುಳಿತು, ಗಿಮಿಕ್ ಮಾಡುವುದರಲ್ಲಿ ನಂಬರ್ ಒನ್ ಎನಿಸಿಕೊಂಡ ಹಾವಾಡಿಗ ಶೀಗಳು ಹಿಮಾಲಯಕ್ಕೆ ತೆರಳುವ ಭೋಂಗು ಬಿಟ್ಟಿದ್ದು. ನಮ್ಮೂರ ಕಡೆಗೆ ಕಾವಿವೇಷದ ಭಿಕ್ಷುಕರು ಕಾಶಿಯಾತ್ರೆಗೆ ದುಡ್ಡು ಕೊಡಿ ಎಂದು ಬರುತ್ತಿದ್ದುದು ನೆನಪಾಗುತ್ತದೆ. ಕಾಶಿಯಾತ್ರೆ ಎಂಬ ಶಬ್ದಕೇಳುವುದೇ ಅಷ್ಟು ಪುಣ್ಯ ಎಂದುಕೊಳ್ಳುವವರಿದ್ದ ಕಾಲವೂ ಇತ್ತಲ್ಲ? ಅವರೆಲ್ಲ “ಓ, ಪಾಪ ಬಡವ ಕಾಶಿಗೆ ತೆರಳುತ್ತಾನೆ” ಎಂದುಕೊಂಡು ಕೈಲಾದ ಅಲ್ಪಸ್ವಲ್ಪ ಕೊಡುತ್ತಿದ್ದರು. ಇಳಿಸಂಜೆ ಎಣ್ಣೆ ಅಂಗಡಿಯಿಂದ ಬಾಟಲಿ ಹೊಯ್ದುಕೊಂಡು ಚಿಕ್ಕದಾಗಿ ಕಟ್ಟಿಕೊಳ್ಳುವ ಜೋಪಡಿಗಳಲ್ಲಿ ಬಿದ್ದುಕೊಂಡರೆ ಅದೇ ಆ ಭಿಕ್ಷುಕರ ಕಾಶಿಯಾತ್ರೆ!

ಇಷ್ಟೆಲ್ಲ ನಾವು ಹರಟುತ್ತಿರುವಂತೆಯೇ ಗೋಪಣ್ಣ ಸ್ಕೈಪ್ ಸಂದೇಶ ಕಳಿಸಿದ್ದಾನೆ. “ಹಿಮಾಲಯವೆಲ್ಲ ಭಾರೀ ದೂರ, ಹೀಂಗಾಗಿ ಸದ್ಯದಲ್ಲೇ ಅಗ್ರಹಾರದಲ್ಲಿ ಮೊಕ್ಕಾಂ ಇದ್ದೋ” ಎಂದು ಇಂಗ್ಲೀಷ್ ಅಕ್ಷರಗಳಲ್ಲಿ ಕನ್ನಡ ಪದಗಳನ್ನು ಬರೆದಿದ್ದಾನೆ. ನಾನು ನೇರವಾಗಿ ಮಾತಿಗೆ ಸಿಕ್ಕಿದ್ದರೆ ಚೆನ್ನಾಗಿರ್ತಿತ್ತು ಎಂದುಕೊಂಡೆ. ಪರವಾಗಿಲ್ಲ, ಮಾಹಿತಿ ಸಿಕ್ಕಿದೆ. ಬರಲೇ? ಅಂತೂ ಸಾಕಷ್ಟು ತಯಾರಿ ನಡೆದಿದೆ ಅಂತಾಯ್ತು. ಹಾವಾಡಿಗ ಶೀಗಳಿಗೆ ಅವಿಚ್ಛಿನ್ನವಾಗಿ ಕೊಡೆ ಹಿಡಿಯಲು ಯಾರಾದರೂ ಇರಲೇಬೇಕು, ಅದನ್ನು ಮಾತ್ರ ತಪ್ಪಿಸಬೇಡಿ. ಇಲ್ಲಾಂದ್ರೆ “ಅಯ್ಯೋ ಕೊಡೆ, ಕೊಡೆ ಹಿಡೀರಿ” ಅಂತ ಅಳಲು ಆರಂಭಿಸಿಯಾರು.

Thumari Ramachandra

https://www.facebook.com/groups/1499395003680065/permalink/1672379263048304/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s