“ನಮ್ಮ ಗುರುಗಳು ಹಾಗಲ್ಲ” ಎಂದು ಮುಚ್ಚಿಕೊಂಡಷ್ಟೂ ನಾರುವುದು ಏರುತ್ತಿದೆ.

“ನಮ್ಮ ಗುರುಗಳು ಹಾಗಲ್ಲ” ಎಂದು ಮುಚ್ಚಿಕೊಂಡಷ್ಟೂ ನಾರುವುದು ಏರುತ್ತಿದೆ.

ಇಷ್ಟೊಂದು ದಿನ ಬೆಕ್ಕು ಹೇತು ಮುಚ್ಚಿದಂತೆ ಕಂಡಿದ್ದನ್ನು ಹೇಳಿದರೆ ಅಲ್ಲಗಳೆದರು. ಯಾವ ಸಮಾಜ ಏನನ್ನೆಲ್ಲ ಕನಸಿನಲ್ಲೂ ಎಣಿಸಿರಲಿಲ್ಲವೋ ಅಷ್ಟೂ ನಡೆದು ಹೋಯಿತು. ಈಗ “ಮಠದ ಮರ್ಯಾದೆ ತೆಗೆಯಬೇಕೆಂದು ಷಡ್ಯಂತ್ರ ಮಾಡಿದ್ದಾರೆ”, “ಮಠದ ಮರ್ಯಾದೆ ತೆಗೆಯಬೇಕೆಂದು ಷಡ್ಯಂತ್ರ ಮಾಡಿದ್ದಾರೆ” ಎನ್ನುತ್ತ ಹಲುಬುವುದನ್ನು ಬಿಟ್ಟರೆ ಮಠದ ಗೌರವ ನುಚ್ಚುನೂರಾಗಿದೆ. ಮುಂದೆ ಬರಲಿರುವ ಪೀಠಾಧೀಶನಿಗೆ ಸಮಾಜದಲ್ಲಿ ಇಂತಹ ಮಠದವನು ಎಂದುಕೊಳ್ಳುವುದಕ್ಕೆ ಭಾರೀ ತೊಂದರೆ, ಯೋಚಿಸಿನೋಡಿ, ಒಮ್ಮೆ ರೇಪಿಸ್ಟ್ ಎಂಬ ಹಣೆಪಟ್ಟಿ ಕಟ್ಟಿದ ನಂತರ ಅದು ಮತ್ತೆಂದೂ ಜನರ ಮನದಿಂದ ಅಳಿಯುವುದಿಲ್ಲ. ಜನತೆಗೆ ಪ್ರತಿನಿತ್ಯ ಅದನ್ನು ಕೇಳಿ ಮತ್ತು ನೋಡಿ ಅದೇ ಪದ ಕಂಠಪಾಠವಾಗಿದೆ. ಜನ ಆ ಮಠವನ್ನು ಗುರುತಿಸುವುದೇ ಆ ಪದದಿಂದ.

ಇನ್ನು ಹೋರಿಯ ಕತೆ ಬಿಡಿ. ಸಂತ್ರಸ್ತೆಯೊಬ್ಬಳ ಪಾಲಕರು ಆಕ್ರೋಶ ವ್ಯಕ್ತಪಡಿಸಿ, ಸಂದೇಶವೊಂದನ್ನು ಕಳಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ ಹೋರಿಗೆ ಹತ್ತುವರ್ಷ ಜೈಲಾದರೆ ಸಾಲದು ಸಾರ್ವಜನಿಕರ ಸಮ್ಮುಖದಲ್ಲಿ ಕಂಬಕ್ಕೆ ಕಟ್ಟಿ ಕಿತ್ತುಹೋದ ಚಪ್ಪಲಿಗಳಿಂದ ಮತ್ತು ಕಲ್ಲುಗಳಿಂದ ಸರ್ವಸೇವೆ ನಡೆಸಬೇಕು. ಸಾಧ್ಯವಾದರೆ ಬಟ್ಟೆ ಬಿಚ್ಚಿಸಿ ಮಹಾನಗರದಲ್ಲಿ ಮೆರವಣಿಗೆ ಮಾಡಬೇಕು. ಯಸ್ ಯಸ್, ಹೀಗೆ ಹೇಳುವುದು ಸಹಜಬಿಡಿ, ಯಾಕೆಂದರೆ ಅವರು ಮಗಳ ಶೀಲಹರಣಮಾಡಿ ಜೀವನ ಹಾಳುಮಾಡಿದವನಿಗೆ ಯಾವ ರೀತಿಯ ಶಿಕ್ಷೆ ಕೊಟ್ಟರೂ ಕಡಿಮೆಯೇ.

ಇಂತಹ ಹಲವು ಪಾಲಕರು ದೂರು ನೀಡಲು ಧೈರ್ಯಮಾಡಲಿಲ್ಲ ಯಾಕೆಂದರೆ ಮನೆತನದ ಮರ್ಯಾದೆ ಪ್ರಶ್ನೆ, ಉಳಿದ ಮಕ್ಕಳ ಭವಿಷ್ಯದ ಪ್ರಶ್ನೆ. ಜೊತೆಗೆ ಈ ಕಳ್ಳ ಸನ್ಯಾಸಿ ದೂರುದಾರರನ್ನು ಸುಮ್ಮನೇ ಬಿಡುತ್ತಿರಲಿಲ್ಲ ಎಂಬುದನ್ನು ಬಹುತೇಕ ಜನ ಬಲ್ಲರು. ಹೋರಿಯಲ್ಲಿ ಭಕ್ತಜನರೇ ಭಿಕ್ಷೆನೀಡಿದ ಹಣ ಕೋಟಿಗಳಲ್ಲಿದೆ. ಆಪದ್ಧನವಾದ ಮಠದ ಬಂಗಾರವಿದೆ. ಜಮೀನಿದೆ. ಸಾಕಿಕೊಂಡ ರೌಡಿಗಳಿದ್ದಾವೆ. ಮೇಲಾಗಿ ಅಖಂಡ ಭಾರತದಲ್ಲಿ ಯಾವ ವೇಷದ ಸನ್ಯಾಸಿಯೂ ಸಾಧಿಸದ ’ಸಾಧನೆ’ಯನ್ನು ಹೋರಿ ನಡೆಸಿದೆ-ಅದೇ ಭೂಗತ ಪಾತಕಿಗಳ ಸಹವಾಸ.

ಮಠದಲ್ಲಿ ಸದ್ಭಕ್ತರಾಗಿದ್ದು ತಮ್ಮ ಮಗಳನ್ನೋ ಹೆಂಡತಿಯನ್ನೋ ಹಾಳುಮಾಡಿದ ಹೋರಿಯ ವಿರುದ್ಧ ತಿರುಗಿಬಿದ್ದವರಿಗೆ ಭೂಗತ ಪಾತಕಿಗಳಿಂದ ಕರೆಗಳು ಬರುತ್ತವೆ. ಎಂತಹ ಅಪ್ಪಟ ಮತ್ತು ಅಮೋಘ ’ಆಧ್ಯಾತ್ಮಿಕ ಸಾಧನೆ’ ಆಲ್ಲವೇ? ಈ ಮನುಷ್ಯನನ್ನು ಆರಂಭದಿಂದಲೇ ಜನ ಒಪ್ಪಿರಲಿಲ್ಲ. ಈತನನ್ನು ಜನ ಒಪ್ಪದಿದ್ದರೆ ಮಠ ಹಾಳುಬೀಳುತ್ತದೆಂಬ ಭಾವನೆಯಿಂದ ಹಿಂದಿನ ಸ್ವಾಮಿಗಳು “ಸರಿಯಾದವರನ್ನು ಗುರುತಿಸಿಯೇ ಅಧಿಕಾರ ವಹಿಸಿದ್ದೇವೆ” ಎಂದು ಕೆಲವರಲ್ಲಿ ಹೇಳಿದ್ದರಂತೆ. ಪಾಪ, ಅವರಿಗೆ ಈ ವ್ಯಕ್ತಿ ಸರಿಯಿಲ್ಲ ಎಂಬುದು ದೀಕ್ಷೆ ಕೊಟ್ಟ ಮಾರನೇ ದಿನವೇ ಗೊತ್ತಾಗಿದೆ. ಮೇಲಿಂದ ಈರುಳ್ಳಿ ಉಪ್ಪಿಟ್ಟಿನ ಸೀಲ್ ಬಿದ್ದಿದೆ. ಆದರೂ ಮುಂದೆ ಬುದ್ಧಿ ಬರಬಹುದು, ಆಡಳಿತಮಂಡಳಿ ತಿದ್ದಿ ನಡೆಸಬಹುದು ಎಂದುಕೊಂಡಿರಬಹುದು. ಎಷ್ಟೆಂದರೂ ಅವರಿಗೆ ಮಠ ಹಾಳಾಗಬಾರದೆಂದಿತ್ತಲ್ಲವೇ?

ಹೋರಿ ಹಾಗೆ ಮಾಡಲಿಲ್ಲ. ಕೈಗೆ ಬೀಗದ ಕೈಗಳು ಬಂದಾಗ ಮೊದಲು ಆರಂಭಿಸಿದ್ದೇ ಆಡಳಿತ ಮಂಡಳಿಯವರನ್ನು ಬೆದರಿಸುವುದು. ಮಠದ ಕಾರ್ಯದರ್ಶಿಗಳನ್ನು ಕೈಕಾಲು ಮುರಿಸುತ್ತೇನೆಂದು ಹೆದರಿಸಿ ಹಿಂದಿನವರು ಇಟ್ಟಿದ್ದ ಹಣವನ್ನು ಏಕಾಏಕಿ ಮೀಟಿಂಗ್ ಗೀಟಿಂಗ್ ಯಾವುದೂ ಇಲ್ಲದೆ ಕಿತ್ತುಕೊಂಡು ಹೋಗಿದ್ದು.

ಊರಿಗೆಲ್ಲ ಬುದ್ಧಿ ಹೇಳೋರು ಒಲೇಲಿ ಉಚ್ಚೆ ಹೊಯ್ತಿದ್ರಂತೆ ಎಂಬ ಮಾತೊಂದಿದೆ. ಅದರಂತೆ ಹೋರಿಗಳೆಲ್ಲ ಸೇರಿ ಧರ್ಮಬೋಧನೆ ಮಾಡುವ ಮಾಸಪತ್ರಿಕೆ ಬೇರೆ ಆರಂಭಿಸಿದವು. ಅದರಲ್ಲಿ ತಮ್ಮ ಆಡಂಬರದ ವೇಷಗಳ ಚಿತ್ರಗಳನ್ನೆಲ್ಲ ಹಾಕಿಸುವುದು, ತಮ್ಮ ಬಗೆಗೆ ಕೊಚ್ಚಿಕೊಳ್ಳುವುದು ನಡೆಯುತ್ತಲೇ ಇದೆ. ಹಲವು ವಿದ್ವಾಂಸರು ಅರಿವಿಲ್ಲದೆ ಗುರುಪೀಠವೆಂಬ ಭಾವನೆಯಿಂದ ಆ ಪತ್ರಿಕೆಗೆ ಲೇಖನಗಳನ್ನು ಬರೆದುಕೊಟ್ಟರು.

ಈಗ ಕಾಮಿಯ ಬಣ್ಣ ಸಂಪೂರ್ಣ ಬಯಲಾಗಿದೆ. ಕೇವಲ ಕಾಗದಪತ್ರಗಳ ಆಧಾರದಮೇಲೆ ಬರುವ ತೀರ್ಪನ್ನಷ್ಟೇ ಜನ ನೋಡುವುದಿಲ್ಲ, ಜನರಿಗೆ ಈ ಮನುಷ್ಯನ ಅಸಲೀಯತ್ತು ಹೀಗೇ ಇದೆ ಎಂಬುದು ಗಟ್ಟಿಯಾಗಿ ಗೊತ್ತಿದೆ. ಆದರೂ ಜನ ಹೇಳಲಿಕ್ಕೆ ಹೆದರುತ್ತಿರುವುದು ಎಲ್ಲಿ ತಮ್ಮ ವಿರುದ್ಧ ಯಾವ ರೀತಿಯಲ್ಲಿ ಹರಿಹಾಯುತ್ತಾನೋ ಎಂಬ ಭಯದಿಂದ ಮಾತ್ರ.

ಸಂಸ್ಕೃತ ಸುಭಾಷಿತವೊಂದು ದುಷ್ಟರಿಗೆ ಮೊದಲು ನಮಸ್ಕರಿಸಬೇಕು ಎಂದು ಸಾರುತ್ತದೆ. ಹಿಂದೆ ನಮ್ಮ ಪೌರಾಣಿಕ ಕತೆಗಳಲ್ಲಿ ಹಿರಣ್ಯಾಕ್ಷ-ಹಿರಣ್ಯಕಶಿಪು, ರಾವಣ-ಕುಂಭಕರ್ಣ, ಶಿಶುಪಾಲ-ದಂತವಕ್ರ, ಮಾಗಧ, ಕಂಸ ಮೊದಲಾದ ರಕ್ಕಸರ ಆಳ್ವಿಕೆಯಲ್ಲಿ ಆ ಪ್ರದೇಶದ ಜನ ಅವರಿಗೆ ಮೊದಲು ನಮಿಸುತ್ತಿದ್ದರಂತೆ.

ನಮಸ್ಕರಿಸುವುದರಲ್ಲಿ ಹಲವು ವಿಧಗಳಿವೆ. ದೇವರ ವಿಗ್ರಹಗಳನ್ನು ಕಂಡಾಗ, ಪಾರಮಾರ್ಥಿಕ ಸಾಧಕರನ್ನು ಕಂಡಾಗ, ಮನೆಯ ಹಿರಿಯರನ್ನು ಕಂಡಾಗ ನಮಸ್ಕರಿಸುವುದು ಬೇರೆ. ರಾಜಕಾರಣಿಗಳನ್ನು ಕಂಡಾಗ ನಮಸ್ಕರಿಸುವುದು ಬೇರೆ, ಅಧಿಕಾರಿಗಳನ್ನು ಕಂಡಾಗ, ಸಂಬಂಧಿಸಿದ ವ್ಯಾಪಾರ-ವ್ಯವಹಾರದವರನ್ನು ಕಂಡಾಗ ಸಲ್ಲಿಸುವ ನಮಸ್ಕಾರ ಬೇರೆ, ಕೊನೆಯದಾಗಿ ದುಷ್ಟರನ್ನು ಕಂಡಾಗ ನಮಸ್ಕರಿಸುವುದು ಬೇರೆ. ಹೊರಗಿನಿಂದ ಎಲ್ಲವೂ ಕೆಲವೊಮ್ಮೆ ಒಂದೇ ರೀತಿಯಲ್ಲಿ ಕಾಣಬಹುದು; ಆದರೆ, ಇವೆಲ್ಲವುಗಳಲ್ಲಿ ತುಂಬಿರುವ ಭಾವ, ಭಕ್ತಿ, ಶ್ರದ್ಧೆಗಳಲ್ಲಿ ಅಜಗಜಾಂತರವಿದೆ.

ಮೊದಲನೆಯ ವರ್ಗ ನಮ್ಮನ್ನು ಅಶೀರ್ವದಿಸುವುದರಿಂದ ಅವರಿಗೆ ತ್ರಿಕರಣ ಪೂರ್ವಕ ನಮಸ್ಕಾರ ಸಲ್ಲುತ್ತದೆ. ಎರಡನೆಯ ವರ್ಗ ನಮ್ಮನ್ನು ಆಳುವುದರಿಂದ [ಇಂದಿನ ಆಳರಸರಲ್ಲಿ ಬಹಳಜನ ದುಷ್ಟರೇ]ಅವರಿಗೆ ದುಷ್ಟರಿಗೆ ಸಲ್ಲುವ ನಮಸ್ಕಾರವೇ ಸಲ್ಲುತ್ತದೆ. ಅಧಿಕಾರಿಗಳು ಮತ್ತು ವ್ಯಾಪಾರ-ವ್ಯವಹಾರದವರಿಗೆ ಔಪಚಾರಿಕ ನಮಸ್ಕಾರ ಸಲ್ಲುತ್ತದೆ. ದುಷ್ಟರಿಗೆ ಮಾತ್ರ ಮನಸ್ಸಿಲ್ಲದ ಮನಸ್ಸಿನಿಂದ, ಭಯದಿಂದ, ಹಾಳಾಗಿ ಹೋಗಲಿ ಎಂಬ ಶಪಿಸುವ ಅಂತರಂಗದ ನಮಸ್ಕಾರವೇ ಸಲ್ಲುತ್ತದೆ.

ಮಹಕಾಮಿಗಳು ದುಷ್ಟಕೂಟವನ್ನು ರಚಿಸಿಕೊಂಡು ಅದಕ್ಕೆ ಒಡೆಯನಾಗಿ, ಹಿಂದೆ ಭಕ್ತರಿಂದಲೇ ಗಳಿಸಿದ ಹಣದ ಮದದಿಂದ, ಅಧಿಕಾರ ಮದದಿಂದ, ಜನಬಲ ಮದದಿಂದ ಮೆರೆಯುತ್ತ ನ್ಯಾಯ-ನೀತಿಗಳನ್ನು ಗಾಳಿಗೆ ತೂರಿ ಸ್ವೇಚ್ಛಾಚಾರ ನಿರತನಾಗಿ ಬದುಕುತ್ತಿರುವುದರಿಂದ ದುಷ್ಟರಿಗೆ ಸಲ್ಲುವ ನಮಸ್ಕಾರಗಳು ಮಹಾಕಾಮಿಗಳಿಗೆ ಸಲ್ಲುತ್ತಿವೆ. “ಈ ದುಷ್ಟನ ಬಂಧನ ಆಗುವವರೆಗೆ ನಮಗೊಂದು ತೊಂದರೆಯಾಗದಿದ್ದರೆ ಸಾಕು” ಎಂದುಕೊಂಡ ಜನ ಒಳಗೊಳಗೇ ಮಠದ ದುರವಸ್ಥೆ ಕಂಡು ಮರುಗುತ್ತಿದ್ದಾರೆ.

ಸಾರ್ವಜನಿಕರಲ್ಲಿ ಒಂದು ಸಣ್ಣ ವಿನಂತಿ ಏನೆಂದರೆ, ನೀವು ಈ ಕಾಮಿಯ ವಿರುದ್ಧ ಒಂದು ಹೇಳಿಕೆ ಕೊಡಿ, ಚೋರಸನ್ಯಾಸಿಯ ……ಶಿಷ್ಯರು ನಿಮ್ಮನ್ನು ಎಷ್ಟು ಅವಾಚ್ಯ ಪದಗಳಿಂದ ಆಡಿಕೊಳ್ಳುತ್ತಾರೆ ಎಂದು ನಾವು ತೋರಿಸುತ್ತೇವೆ. ಹಿಂದೆ ಗುರು ತಪ್ಪುದಾರಿ ತುಳಿದರೆ ಯಾರೂ ಸುಮ್ಮನಿರುತ್ತಿರಲಿಲ್ಲ. ಯಾಕೆಂದರೆ ಸಮಾಜದಲ್ಲಿ ಧರ್ಮ ಮತ್ತು ಅಧರ್ಮಗಳನ್ನು ಇದಮಿತ್ಥಂ ಎಂದು ವಿಂಗಡಿಸಬಲ್ಲ ವಿದ್ವಾಂಸರಿದ್ದರು. ಅಂತವರು ಬಹಳ ಜನ ಮಠದ ಸಂಪರ್ಕದಲ್ಲಿರುತ್ತಿದ್ದರು. ಗುರು ಎನಿಸಿದವ ಯವಡಾಸಿನಂತೆ ವರ್ತಿಸಿದರೆ ಸಭೆ ಸೇರುತ್ತಿದ್ದರು. ಅಂತಹ ಗುರುವನ್ನು ಸಮಿತಿ ನಿಯಂತ್ರಿಸುತ್ತಿತ್ತು. ಇಂದು ವಿದ್ವಾಂಸರೆಲ್ಲ ಹಳಬರಾಗಿದ್ದಾರೆ, ಮುದುಕರಾಗಿದ್ದಾರೆ. ಅವರ ಮಾತುಗಳಿಗೆ ಮಠದಲ್ಲಿ ಬೆಲೆಯೇ ಇಲ್ಲ. ನಿಶಾಚರಿಗಳಾದ ಐಟಿ-ಬಿಟಿ ಉದ್ಯೋಗಿಗಳಂತವರು ಮಠದ ಹೋರಿ ಹೇಳಿದ್ದೇ ಧರ್ಮವೆಂದುಕೊಂಡಿದ್ದಾರೆ, ಯಾಕೆಂದರೆ ಈ ಯಂಗಸ್ಟರ್ಸ್ ಯಾರೂ ಪ್ರಸ್ಥಾನತ್ರಯಗಳನ್ನಾಗಲೀ, ಯತಿಧರ್ಮವನ್ನಾಗಲೀ, ಮಹಾನುಶಾಸನವನ್ನಾಗಲೀ ಓದಿಕೊಂಡವರಲ್ಲ.

ಯುವಪೀಳಿಗೆಯ ಸಮಾಧಾನಕ್ಕೆ ಏನು ಹೇಳಬೇಕೆಂಬುದು ಕಳ್ಳಕೊರಮ ಕಾಮಿಗೆ ಗೊತ್ತು. ನಟನೆಯಲ್ಲಿ ಮಹಾನಿಪುಣನಾದ ಕಾಮಿ ಯಾವ ಸಮಯದಲ್ಲಿ ಯಾರಿಗೆ ಯಾವ ಪೋಸುಕೊಟ್ಟು ಕಳಿಸಬೇಕೆಂಬುದರಲ್ಲಿ ಪ್ರಾವೀಣ್ಯನಾಗಿದ್ದಾನೆ. ಹಿಂದೆ ರಾಕ್ಷಸರೂ ಹೀಗೇ ಇದ್ದರೆಂದು ಗೊತ್ತಾಗುತ್ತದೆ. ರಾಕ್ಷಸರು ಮಾಯಾವಿಗಳಾಗಿದ್ದು ಇಂದ್ರಜಾಲ ಮಹೇಂದ್ರಜಾಲದ ಹಲವು ಮಾಯಾವಿದ್ಯೆಗಳನ್ನು ಕಲಿತಿರುತ್ತಿದ್ದರಂತೆ. ಬೇಕಾದಾಗ ಬೇಕಾದ ರೂಪವನ್ನು ಮಾಯಾವಿದ್ಯೆಯಿಂದ ಧರಿಸುತ್ತಿದ್ದರಂತೆ.

ಮಾಯ-ಮಾಟ ಬಲ್ಲವರಿಗೆ ದೇವರನ್ನು ಉಚ್ಚಿಷ್ಟ ರೂಪದಲ್ಲಿ ವಶಗೊಳಿಸಿಕೊಳ್ಳುವುದು ಸಾಧ್ಯವಂತೆ. ಉದಾಹರಣೆಗೆ ಗಣಪತಿ ಬೇರೆ, ಉಚ್ಚಿಷ್ಟ ಗಣಪತಿ ಬೇರೆ. ಉಚ್ಚಿಷ್ಟ ಗಣಪತಿಯನ್ನು ಆರಾಧಿಸುವ ಅಘೋರಿಗಳಂತಹ ಜನರೂ ಇರುತ್ತಾರೆ. ಮಾನವ ಕಪಾಲದಲ್ಲಿ ಹೆಂಡಬಸಿದುಕೊಂಡು ಸತ್ತವ್ಯಕ್ತಿಯ ಅರೆಬೆಂದ ಮಾಂಸವನ್ನುಹರಿದು ತಿನ್ನುತ್ತ ಹೆಂಡಕುಡಿಯುತ್ತಾರಂತೆ. ಅವರಲ್ಲೂ ಒಂದಷ್ಟು ಶಕ್ತಿ ಆವರಿಸಿಕೊಳ್ಳುತ್ತದೆ. ಅದು ಉಚ್ಚಿಷ್ಟ ಶಕ್ತಿ. ಉಚ್ಚಿಷ್ಟ ಶಕ್ತಿಯ ಆರಾಧಕರಿಗೆ ಮುಕ್ತಿ ಎಂಬುದಿಲ್ಲ. ಅವರು ಮತ್ತಷ್ಟುಸಾವಿರ ಜನ್ಮಗಳನ್ನು ಎತ್ತಲೇಬೇಕಾಗುತ್ತದೆ ಎನ್ನುತ್ತದೆ ಧರ್ಮ. ಸುಲಭವೆಂಬ ಕಾರಣಕ್ಕೆ ಉಚ್ಚಿಷ್ಟ ದೇವತೆಗಳ ಆರಾಧನೆಯೂ ನಡೆಯುವುದುಂಟು. ಆದರೆ ನಾವು ನಂಬಿದ ಪರಂಪರೆ ಅದನ್ನು ಪುರಸ್ಕರಿಸುವುದಿಲ್ಲ. ಅದು ಉತ್ತಮ ಮಾರ್ಗವಲ್ಲ ಎಂದೇ ಹೇಳುತ್ತದೆ.

ವಾಮಾಚಾರ ನಡೆಸುವವರು ಕೆಲವೊಮ್ಮೆ ಉಚ್ಚಿಷ್ಟ ದೇವತೆಗಳನ್ನು ಒಲೊಸಿಕೊಂಡಿರುತ್ತಾರೆ. ಕೆಲವು ಕಾಲ ಅವರಿಗೆ ಹೋದಲೆಲ್ಲ ಮೇಲುಗೈ. ಯಾವುದೋ ಒಂದು ಘಟ್ಟದಲ್ಲಿ ಅದೇ ಶಕ್ತಿ ಅವರನ್ನು ಹುರಿದು ಮುಕ್ಕುತ್ತದೆ. ಆದರೂ ಕಾಮುಕರು ಹೆಣ್ಣಿನಲ್ಲಿ ಕಾಣುವ ಕ್ಷಣಿಕ ಸುಖದಂತೆ ವಾಮಾಚಾರಿಗಳಿಗೂ ಅದೇನೋ ಒಂದು ವಿಧದ ಖುಷಿ, ಕೈತುಂಬ ರೊಕ್ಕ.

ಯಾವಾಗ ಸನ್ಯಾಸಿ ವಾಮಾಚಾರಿಗಳ ಸಂಗವನ್ನು ಬಯಸುತ್ತಾನೋ ಆಗಲೂ ಸಹ ಸಹಜವಾಗಿ ಸನ್ಯಾಸ ಧರ್ಮದ ಉಲ್ಲಂಘನೆಯಾಗುತ್ತದೆ. ಸನ್ಯಾಸಿಯ ಆರಾಧ್ಯ ದೇವರುಗಳಲ್ಲಿ ಪಾಸಿಟಿವ್ ಎನರ್ಜಿ ಹೊರಟುಹೋಗಿ ಕ್ಷುದ್ರ ದೇವತೆಗಳು ಅಲ್ಲಿ ಸೇರಿಕೊಳ್ಳುತ್ತವೆ. ಇಲ್ಲಿ ನಡೆದಿದ್ದೂ ಹಾಗೇ. ಇಂದು ಯಾವೆಲ್ಲ ವಿಗ್ರಹಗಳಿವೆಯೋ ಆ ವಿಗ್ರಹಗಳೆಲ್ಲ ಮೂಲ ಆಯಾಯ ದೇವರ ಅಂಶಗಳಿಲ್ಲ. ಅವುಗಳಲ್ಲೆಲ್ಲ ನೆಗೆಟಿವ್ ಎನರ್ಜಿ ಸೇರಿಕೊಂಡಿದೆ. ಕೋಟಿಗಳ ದಾಸ್ತಾನು ಕರಗುವವರೆಗೆ ಮಠ ನಡೆಯುತ್ತದೆ. ಚಟದವನೇ ಮಠದಲ್ಲಿ ಮುಂದರಿದರೆ ಚಟಕ್ಕೆ ಮಠವನ್ನು ಅಡವಿಡಬೇಕಾದ ಪರಿಸ್ಥಿತಿಯೂ ಬರಬಹುದು. ಹಾಗೆ ಬಂದಾಗ ತಾಲೀಬಾನಿಗಳು ಜಾಗ ಖಾಲಿಮಾಡುತ್ತಾರೆ. ಸದ್ಗೃಸ್ಥರು ಮಠದ ಕಡೆ ಮುಖ ಹಾಕೋದು ಬಿಟ್ಟು ಬಹಳಕಾಲ ಆಗಿರುತ್ತದೆ. ಮಠ ಉಳಿಯಬಹುದೇ? ಗೊತ್ತಿಲ್ಲ.

ಇತ್ತೀಚೆಗೆ ಮೇಲ್ವರ್ಗದ ಮಠವೊಂದರ ಭಕ್ತಗಣದಲ್ಲಿ ಆರ್ಥಿಕ ವ್ಯವಹಾರದ ಸಲುವಾಗಿ ಎರಡು ಬಣಗಳಾದವು. ಕಚ್ಹಾಟ ಜೋರಾದಾಗ ಮುಜರಾಯಿ ಇಲಾಖೆ ಅದನ್ನೀಗ ತನ್ನ ವಶಕ್ಕೆ ತೆಗೆದುಕೊಂಡಿದೆ. ಮುಜರಾಯಿ ಇಲಾಖೆಗೆ ಮಠ ಸೇರಿದರೆ ಏನಾಗಬಹುದೆಂಬುದನ್ನು ನೀವೆಲ್ಲ ಊಹಿಸಿಕೊಳ್ಳಬೇಕು. ಒಂದು ಮಾತನ್ನು ನೆನಪಿಸಿ, ಅಲ್ಲಿ ಕೇವಲ ಆರ್ಥಿಕ ವ್ಯವಹಾರಕ್ಕೆ, ಅಧಿಕಾರಕ್ಕೆ ಸಂಬಂಧಿಸಿ ಜಗಳವಾಗಿತ್ತು; ಇಲ್ಲಿ ಹಾಗಲ್ಲ, ಇದು ಕಚ್ಚೆಹರುಕನ ಕಾಮಾಚಾರ ಮತ್ತು ವಾಮಾಚಾರಗಳಿಗೆ ಸಂಬಂಧಿಸಿದಂತೆಯೂ ತನ್ನಿಮಘ್ನ ಕಳ್ಳ ಕಾಮುಕನಿಂದ ನಡೆಸಲ್ಪಟ್ಟ ಆರ್ಥಿಕ, ಆಸ್ತಿಪಾಸ್ತಿ ಅವ್ಯವಹಾರಗಳ ಸಲುವಾಗಿಯೂ ನಡೆಯುತ್ತಿರುವ ಜಗಳ.

ಎಷ್ಟೇ ಬೂದಿ ಮುಚ್ಚಿದ್ದರೂ ಒಳಗಿನ ಕೆಂಡ ಸ್ಪರ್ಶಿಸಿದಾಗ ಸುಡದೇ ಇರದು. ಕೊಳೆತ ಶವವನ್ನು ಒಳಗಿಟ್ಟು ಹೊರಗಿನಿಂದ ಏನೂ ನಡೆದಿಲ್ಲವೆನ್ನುವುದು ಕೆಲವುದಿನಗಳವರೆಗೆ ನಡೆದೀತು; ವಾರವಾಗುವಷ್ಟರಲ್ಲಿ ಆ ಪ್ರದೇಶದ ಜನರೆಲ್ಲ ಎದ್ದುಬಿಡುತ್ತಾರೆ. ದೂರು ಹೋದಾಗ ಸಂಬಂಧಿಸಿದ ಮಾವಂದಿರು ಬರುತ್ತಾರೆ. ನಂತರ ಏನಾಗುತ್ತದೆಂಬುದು ನಿಮಗೆಲ್ಲ ಗೊತ್ತೇ ಇದೆ. ಮಾಮುಕನನ್ನು ಸಮರ್ಥಿಸುವವರಿಗೆ ಇದೊಂದು ಸೂಚನೆಯಷ್ಟೆ.

ಮುಗಿಸುವ ಮುನ್ನ ಒಂದು ಮಾತನ್ನು ಹೇಳಬೇಕು. ಸಜ್ಜನರೊಬ್ಬರು ಸಂದೇಶವನ್ನು ಕಳಿಸಿದರು, ಮಠವನ್ನು ಬಹಿಷ್ಕರಿಸಬೇಕೆಂದು ಹೇಳಬೇಡಿ, ಅಲ್ಲಿ ಹಲವು ಯತಿಗಳು ತಪಸ್ಸು ನಡೆಸಿದ್ದಾರೆ, ಅವರೆಲ್ಲರಿಗೆ ನಾವು ಅಗೌರವ ಸಲ್ಲಿಸಿದಂತಾಗುತ್ತದೆ. ಹೀಗಾಗಿ ಅಂತಹ ಬರಹಗಳನ್ನು ಬರೆಯಬೇಡಿ ಎಂದು ಹೇಳಿದರು. ಅವರ ಮಾತಿನಿಂದ ಅವರೆಷ್ಟು ನೊಂದಿದ್ದಾರೆ ಎಂಬುದು ತಿಳಿಯಿತು, ನೋವುಂಟು ಮಾಡಿದ್ದಕ್ಕೆ ಅವರಲ್ಲಿ ಮತ್ತು ಓದಿವರಲ್ಲೂ ಸಹ ಕ್ಷಮೆಯಾಚಿಸುತ್ತೇನೆ. ಅದು ಉದ್ದೇಶಪೂರ್ವಕವಾಗಿ ಬರೆದದ್ದಲ್ಲ, ಯಾತನೆ ತಾಳಲಾರದೆ ಸಹಜವಾಗಿ ಬಂದದ್ದು.

ನೋಡೋಣ, ಅಚ್ಚೇ ದಿನ್ ಆತಾ ಹೈ ಎಂಬ ಆಶಾಭಾವನೆಯಿಂದ ದುಷ್ಟಕೂಟ ಮಠ ತೊರೆದುಹೋಗಿ ಶಿಷ್ಟರು ಬಂದು ಸುರಕ್ಷಿತವಾಗುವ ಕಾಲವನ್ನು ನಿರೀಕ್ಷಿಸೋಣ..

Thumari Ramachandra

source: https://www.facebook.com/groups/1499395003680065/permalink/1670670623219168/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s