ಅಮೇಧ್ಯ ಭಕ್ಷಣೆ ಹೇರಿಕೆಯಾದಾಗ ಹೇವರಿಕೆ ಹುಟ್ಟಿಕೊಳ್ಳುತ್ತದೆ

ಅಮೇಧ್ಯ ಭಕ್ಷಣೆ ಹೇರಿಕೆಯಾದಾಗ ಹೇವರಿಕೆ ಹುಟ್ಟಿಕೊಳ್ಳುತ್ತದೆ

ಘಟ್ಟದ ಕೆಳಗಿನದೊಂದು ಊರಿನ ಕತೆ. ಸಂಪ್ರದಾಯದ ಹೆಸರಿನಲ್ಲಿ ಮೌಢ್ಯವನ್ನೂ ಮೈಗೆ ಮೆತ್ತಿಕೊಂಡು ಬದುಕುತ್ತಿರುವ ಒಂದು ಕುಟುಂಬದಲ್ಲಿ ಮೃದು ಮನಸ್ಸಿನ ಒಬ್ಬ ಗೃಹಿಣಿಯಿದ್ದಳು. ಗಂಡ ಉಂಡಾಡಿಗುಂಡನೆಂಬುದು ಮದುವೆಯ ನಂತರವೇ ಆಕೆಗೆ ತಿಳಿದದ್ದು. ಗಂಡನೆಂಬ ಪ್ರಾಣಿ ಹಾಸಿಗೆ ಬಿಚ್ಚಿಕೊಂಡು ರೇಡಿಯೋ ಹಚ್ಚಿಕೊಂಡರೆ ಅವನದೇ ಜಗತ್ತು. ಸಮಯಕ್ಕೆ ಸರಿಯಾಗಿ ಊಟಕ್ಕೆ ಮತ್ತು ತಿಂಡಿಗೆ ಮಾತ್ರ ಇಂತದೇ ಬೇಕೆಂಬ ಅಪ್ಪಣೆ. ಆತ್ತೆ ನಾದಿನಿಯರಿಗೆ ಸೊಸೆ ದುಡ್ಡು-ಬಂಗಾರ ತರಲಿ ಎಂಬ ಹೆಬ್ಬಯಕೆ.

[ಆ ಕಾಲದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿತ್ತು, ನಡೆಯಿತು. ಈಗ ಗಂಡುಮಕ್ಕಳು ಅಂತಹ ಸ್ಥಿತಿಯನ್ನು ಅನುಭವಿಸುವ ಪರಿಸ್ಥಿತಿ ಎದುರಾಗಿದೆ.] ದಿನೇ ದಿನೇ ವಿನಾಕಾರಣ ಜಗಳ, ದೊಂಬಿ, ಗಲಾಟೆ. ನೊಂದ ಗೃಹಿಣಿ ಬೆಳಗಿನಜಾವ ನಾಲ್ಕು ಗಂಟೆಗೆ ಮನೆಯ ಹಿಂಭಾಗದ ತೋಟಕ್ಕೆ ಬುಡ್ಡಿ ದೀಪ ಹಿಡಿದು ಸಾಗಿದಳು. ಮುಂದಿನ ಹದಿನೈದಿಪ್ಪತ್ತು ನಿಮಿಷದಲ್ಲಿ ತೋಟದ ತೆರೆದ ಕೆರೆಯ ದಡದಲ್ಲಿ ಬುಡ್ಡಿ ಮಾತ್ರ ಉರಿಯುತ್ತಿತ್ತು. ಆ ಬುಡ್ಡಿ ಬೆಳಗಿನವರೆಗೂ ಉರಿಯುತ್ತಲೇ ಇತ್ತು.

ಮನೆಯವರು ಬೆಳಿಗ್ಗೆ ಯಥಾವತ್ ಎದ್ದು ಸೊಸೆಯೊಡನೆ ಕ್ಯಾತೆ ತೆಗೆಯಬೇಕೆಂದು ಹುಡುಕಿದರು. ಕುಡಿಯುವ ನೀರು ತರಲು ಬಾವಿಗೆ ಹೋಗಿರಬಹುದೆಂದುಕೊಂಡರು; ಇಲ್ಲ. ಕೊಟ್ಟಿಗೆಗೆ ಹೋಗಿರಬಹುದೆಂದುಕೊಂಡರು; ಇಲ್ಲ. ಮನೆಯ ಸಂದುಮೂಲೆಯಲ್ಲೆಲ್ಲ ಹುಡುಕಿದರೂ ಸಿಗಲಿಲ್ಲ. ಅಕ್ಕಪಕ್ಕದ ಮನೆಗಳವರನ್ನು ಕೇಳಿದರು, ಅಲ್ಲಿಗೆ ಹೋಗಿರಲಿಲ್ಲ. ತೋಟದ ಕೆರೆಯಂಚಿನಲ್ಲಿ ಬುಡ್ಡಿಯ ದೀಪ ಉರಿಯುತ್ತಿತ್ತು. ಅದರೆ ಅವಳ ಸುಳಿವಿರಲಿಲ್ಲ. ಮನೆಯಲ್ಲೊಂದು ಕಡೆ ಚೀಟಿಯೊಂದು ಸಿಕ್ಕಿತು. ಅದರಲ್ಲಾಕೆ ಅತ್ತೆ, ನಾದಿನಿ ಮತ್ತು ಗಂಡನನ್ನು ಶಪಿಸಿದ್ದಳು. ತಾನು ಸತ್ತಿರುವುದಕ್ಕೆ ಕಾರಣ ಅವರೇ ಎಂದು ತಿಳಿಸಿದ್ದಳು, ಅಷ್ಟೆ. ಕೆರೆಯ ಆಳದ ಕೆಸರಿನಲ್ಲಿ ಆಕೆ ಶವವಾಗಿ ಹೂತುಹೋಗಿದ್ದಳು!

ಆ ಕಾಲದಲ್ಲಿ ಮಾಧ್ಯಮಗಳು ಸಬಲವಾಗಿರಲಿಲ್ಲ. ಹಳ್ಳಿಗಳಲ್ಲಿ ಬೆಳಗಿನ ದಿನಪತ್ರಿಕೆ ಸಿಗುವಾಗ ಸಂಜೆಯಾಗುತ್ತಿತ್ತು. ಪ್ರಾದೇಶಿಕ ಚಿಕ್ಕ ಪತ್ರಿಕೆಯೊಂದು ಲೇಖನ ಬರೆಯಿತು. ಅಷ್ಟರಲ್ಲೇ ಆ ಮನೆಯವರು ಘಟನೆಯನ್ನು ಮುಚ್ಚಿ ತಿಪ್ಪೆಸಾರಿಸಿದ್ದರು. ಅವಳ ತವರಿನಲ್ಲಿ ಹಲವು ಹೆಣ್ಣುಮಕ್ಕಳು, ಯಾರಿಗೆ ಏನೂ ಅಂತ ಕೊಡುವಷ್ಟು ಸಾಮರ್ಥ್ಯ ಅವರಿಗಿರಲಿಲ್ಲ. ಮಗಳು ಆತ್ಮಹತ್ಯೆ ಮಾಡಿಕೊಂಡಳು ಎಂದು ವಾದಿಸಿ ನ್ಯಾಯಕೇಳುವ ತಾಕತ್ತೂ ಅವರಲ್ಲಿರಲಿಲ್ಲ.

ಕತೆಯಾದಳು ಅವಳು
ಮತ್ತೆ ಬರಲಿಲ್ಲ..ಮತ್ತೆಂದೂ ಬರಲಿಲ್ಲ
ಇನ್ನೆಂದೂ ಆ ಮನೆಗೆ ಮರಳಲಿಲ್ಲ

ಸಾಗಿಹೋದಳವಳು
ಸೀಗೆಯ ಮುಳ್ಳಿಗೆ ಎದೆ ಸಿಕ್ಕಿಸಿ ಬದುಕುತ ಏಗಲಾರದವಳು
ಮನದಲಿ ಎಂದೋ ಮುಗಿದವಳು

ಬಾಗಿ ನಡೆಯುತವಳು
ದೂರದ ದಾರಿ ಸವೆಸಿದವಳು
ಕಾದಳವಳು ಸಹಿಸಿ ಬಹುದಿನ ಒಲವಿಗೆ ಹಗಲಿರುಳು

ಗಾಳಿ ಬೀಸಲಿಲ್ಲ
ಬೇರಿಗೆ ನೀರು ಸೋಕಲಿಲ್ಲ
ಬಿಗಿದ ಭೂಮಿಯವಳ ಬಸಿರ ಉಸಿರ ಹಿಂಡಿತಲ್ಲ

ಗೆಜ್ಜೆಯ ದನಿಯಿಲ್ಲ
ಹೆಜ್ಜೆಯ ಗುರುತು ಉಳಿಯಲಿಲ್ಲ
ಲಜ್ಜೆಗೆಟ್ಟವರ ಮನೆಯನು ಸೇರಿ ಜಜ್ಜಿಕೊಂಡಳಲ್ಲ
ಜಗವನು ಬಿಟ್ಟು ಹೋದಳಲ್ಲ.

ಉಳ್ಳವರು ಇಲ್ಲದವರನ್ನು ಶೋಷಿಸುವ ಪರಿಯಲ್ಲಿ ಇದೂ ಒಂದು; ಇಂತದ್ದು ಹಲವು. ಉಳ್ಳವರನ್ನು ಎದುರುಹಾಕಿಕೊಳ್ಳಲಾರದ ಸ್ಥಿತಿಯಲ್ಲಿ ಇಲ್ಲದವರ ಮನೋಗತ ಏನಿರಬಹುದೆಂದು ನಾವು ಆಲೋಚಿಸಬೇಕು. ಇತಿಹಾಸದ ಪುಟಗಳಲ್ಲಿ ಇಂತಹ ಹಲವು ಕಾಣದ ಕರಾಳ ಘಟನೆಗಳಿವೆ. ತಮ್ಮದಲ್ಲದ ತಪ್ಪಿಗೆ ತಮ್ಮ ಜೀವವನ್ನೇ ಅರ್ಪಿಸಿ ಹೊರಟುಹೋದ ಮಹಾತಾಯಿಯರಿಗೆ ಒಮ್ಮೆ ನಮಿಸುವುದಷ್ಟೆ ತುಮರಿಗೆ ಸಾಧ್ಯ.

ಇಂತಹ ಅದೆಷ್ಟೋ ಘಟನೆಗಳು ಯಾರದೋ ಮೂಲಕ ಸುದ್ದಿಯಾದಾಗ ನಮ್ಮಂತವರಿಗೆ ಎದೆ ಭಾರವಾಗುತ್ತದೆ. ಪಾಪದ ಜೀವಗಳ ನಲುಗುವಿಕೆಯಲ್ಲಿ ನಲಿವನುಭವಿಸಿದ ಸ್ಥಾಪಿತ ಶಕ್ತಿಗಳನ್ನು, ಜನರನ್ನು ಕಂಡಾಗ ಆಕ್ರೋಶ ಭುಗಿಲೇಳುತ್ತಡೆ.

ಇಂದು ಹಾವಾಡಿಗ ಮಠದ ಕತೆಯೂ ಸ್ಥಾಪಿತ ಶಕ್ತಿಯಾಗಿ, ಇಲ್ಲದವರನ್ನು ಹೊಸಕಿಹಾಕಲು ಯತ್ನಿಸುತ್ತಿದೆ. ಯಾರಿಗೂ ಮಠಮಾನ್ಯಗಳನ್ನು ಬೈಯುವ ಅಥವಾ ಗುರುವೆನಿಸಿಕೊಂಡ ವ್ಯಕ್ತಿಯನ್ನು ದೂರುವ ಇಚ್ಛೆ ತಂತಾನೇ ಹುಟ್ಟಿಕೊಳ್ಳುವುದಿಲ್ಲ. ಸಬಲವಾದ ಕಾರಣವಿದ್ದಾಗ ಮಾತ್ರ ಅದು ನಡೆಯಲು ಸಾಧ್ಯ. ತಾನೇ ದೇವರು, ತಾನು ಹೇಳಿದ್ದೇ ಧರ್ಮ ಎನ್ನುವವರು ’ಅವತರಿಸಿ’ದಾಗ ಅಧರ್ಮವನ್ನು ಮಟ್ಟಹಾಕಲು ಅದು ಅಗತ್ಯ.

’ಮಠವನ್ನು ಬಹಿಷ್ಕರಿಸುವ ಪದ್ಧತಿ ಆರಂಭವಾಗಲಿ’ ಎಂಬ ನನ್ನ ಲೇಖನವನ್ನೋದಿದ ಕೆಲವು ಮಹನೀಯರು ನೊಂದ ಮನಸ್ಸಿನಿಂದ ಸಂದೇಶ ಕಳಿಸಿದರು. ಎಲ್ಲ ಮಠವನ್ನೂ ಬಹಿಷ್ಕರಿಸಬೇಕೆಂಬುದು ಈ ಮಾತಿನಲ್ಲಿಲ್ಲ; ಯಾವ ಮಠ ಅಧರ್ಮವನ್ನೇ ಧರ್ಮವೆಂದು ಸಾರಲು ಹೊರಟಿದೆಯೋ ಅದನ್ನು ತಾತ್ಕಾಲಿಕವಾಗಿ ಹಾಗೆ ಮಾಡಿ ಎಂದು ನಾನು ಹೇಳಿದ್ದೆ.

ಸಮಾಜದಲ್ಲಿ ಅನೇಕ ಮಠಗಳಿವೆ. ಅಲ್ಲಿರುವ ಸನ್ಯಾಸಿಗಳೆಲ್ಲ ಹೀಗೇ ಎಂದು ಹೇಳಿಲ್ಲ, ಮಠಗಳ ವಿಷಯ ಬಂದಾಗ ರಾಜಸ್ಸ್ನಯಾಸಿಯಾಗಿದ್ದೂ ಸಾಧಕರಾದವರ ಕೆಲವು ವಿವರಣೆಗಳು ಅಗತ್ಯ, ಅದನ್ನು ಮುಂದೊಂದು ಲೇಖನದಲ್ಲಿ ಕೊಡುವ ಪ್ರಯತ್ನ ಮಾಡುತ್ತೇನೆ.
ಆಯಿತು, ಮಠ ನಹಿಷ್ಕರಿಸಿ ಎಂದಿದ್ದಕ್ಕೆ ನೀವೆಲ್ಲ ನೊಂದಿದ್ದೀರಿ, ಒಬ್ಬ ಎಳೆಯ ಮಕ್ಕಳ ತಂದೆ ತನ್ನದಲ್ಲದ ತಪ್ಪಿಗೆ ಬೆದರಿಕೆ, ಬಹಿಷ್ಕಾರಗಳಿಗೆ ಹೆದರಿ ಜೀವ ತೆತ್ತಾಗ ನಿಮಗೆಲ್ಲ ನೋವಾಗಲಿಲ್ಲವೇ? ಯಾಕೆ ಆಗ ನೀವೆಲ್ಲ ಅದಕ್ಕೆ ಕಾರಣನಾದವನನ್ನು ಬಹಿಷ್ಕರಿಸಲಿಲ್ಲ? -ಇದು ನನ್ನ ಪ್ರಶ್ನೆ.

ಅದಿರಲಿ, ಹಾವಾಡಿಗ ಮಠದಲ್ಲಿ ಲಿಖಿತ ಬಹಿಷ್ಕಾರ ಪದ್ಧತಿಯಿಲ್ಲ, ಲಿಖಿತ ಸಮಯದ ಏಕಾಂತ ನಡೆಯುವುದಿಲ್ಲ. ಅಲ್ಲಿ ಎಲ್ಲವೂ ಅಲಿಖಿತವೇ. ಬಹುತೇಕ ವ್ಯವಹಾರಗಳೂ ಅಲಿಖಿತವೇ. ಎಲ್ಲೋ ಕೆಲವು ಮಾತ್ರ ಲಿಖಿತ. ಹೀಗಾಗಿ ಅವರು ಯಾರ ಕೈಗೂ ಸಿಗುವುದಿಲ್ಲ, ತಾವು ಹೇಳಿದ್ದೇ ಸತ್ಯವೆನ್ನುತ್ತಾರೆ.

ಕೌರವ ಸತ್ತಾಗ ಆತನ ತಲೆಯನ್ನು ತುಳಿಯಲು ಹೊರಟ ಭೀಮನನ್ನು ಕೃಷ್ಣ ತಡೆದು ಹಾಗೆ ಮಾಡಬಾರದೆಂದು ಉಪದೇಶಿಸಿದ್ದ. ರಾವಣ ಸತ್ತ ನಂತರ ಮತೆ ಅವನನ್ನು ಟೀಕಿಸುವುದು, ಜರಿಯುವುದು ಮಾಡಬಾರದೆಂದು ಹೇಳುತ್ತ, ದುಷ್ಟನೇ ಆಗಿದ್ದರೂ ಅಂತಹ ವ್ಯಕ್ತಿಯ ಸಾವಿನಲ್ಲಿ ದ್ವೇಷ ಪರ್ಯವಸಾನವಾಗಬೇಕು, ಮತ್ತೆ ಅದನ್ನು ಇಟ್ಟುಕೊಳ್ಳಬಾರದು ಎಂದು ರಾಮ ತಿಳಿಸಿದ್ದ. ಇದನ್ನೆಲ್ಲ ಸಮಾಜಕ್ಕೆ ಬೋಧಿಸಬೇಕಾದ ಮಠದಿಂದ ಸತ್ತವ್ಯಕ್ತಿಯ ಮನೆಗೆ ಅಘೋಷಿತ ಬಹಿಷ್ಕಾರ, ಪುರೋಹಿತರು ಹೋಗದಂತೆ ನಿರ್ಬಂಧ, ಹಾಲು ಕೊಡದಂತೆ ನಿರ್ಬಂಧ ಇದೆಲ್ಲ ನಡೆದಿಲ್ಲವೆಂದುಕೊಂಡಿರೇನು?
ಅದಿರಲಿ ಮೊನ್ನೆ ಚೌತಿಹಬ್ಬದಲ್ಲಿ ಕವನವೊಂದನ್ನು ಬರೆದು ಸಾಮಾಜಿಕ ತಾಣದಲ್ಲಿ ಹಾಕಿದ ತಪ್ಪಿಗೆ ಶಿಕ್ಷಣಸಂಸ್ಥೆಯ ಸ್ಥಾಪಕ ಕವಿಯ ಕಾರನ್ನು ಉಡೀಸ್ ಮಾಡಿದ ಘಟನೆಗೆ ಏನೆನ್ನುತ್ತೀರಿ? ಇದಕ್ಕೆಲ್ಲ ಯಾವುದಾದರೂ ಲಿಖಿತ ದಾಖಲೆಗಳು ಸಿಗುತ್ತವೆಯೇ? ಇಲ್ಲ.

ಸಮಾಜದ ಕೆಲವು ಜನ ಎಷ್ಟೆಲ್ಲ ಮೂಢರು ಎಂದರೆ ವೈಜ್ಞಾನಿಕವಾಗಿ ಋಜುವಾತಾದ ಫಲಿತಾಂಶವನ್ನೂ ಅಲ್ಲಗಳೆಯುವಷ್ಟು ಮುಂದುವರಿದಿದ್ದಾರೆ! ಮಠದ ಏಜೆಂಟರು ದೂರುದಾರ ಮಹಿಳೆಯರ ವಿದುದ್ಧ ಉಪಯೋಗಿಸಿದ ಪದಗಳನ್ನು ನೋಡಿ, ಮಠದ ದೊಡ್ಡ ವ್ಯಕ್ತಿಗಳು ಯಾರಾದರೂ ಕ್ಷಮೆ ಕೇಳಿದರೋ? ಇಲ್ಲ. ಅಲ್ಲಿ ಅಂತದ್ದೇ ಸಂಸ್ಕೃತಿ ತಾಂಡವವಾಡುತ್ತಿದೆ ಎಂಬುದಕ್ಕೆ ಇದೊಂದೆ ಉದಾಹರಣೆ ಸಾಕು.

ಹಾವಾಡಿಗ ಮಠಕ್ಕೂ ದೂರುದಾರರಿಗೂ ಹೋಲಿಸಿದರೆ ಮಠದ ಆರ್ಥಿಕ ಶ್ರೀಮಂತಿಕೆಯ ಮುಂದೆ ಅವರು ಲೆಕ್ಕಕ್ಕೇ ಇಲ್ಲ. ಹೀಗಿದ್ದೂ, ಅಸಹನೀಯ ಸ್ಥಿತಿಯನ್ನು ಸಹಿಸಲಾರದೆ ಧೈರ್ಯದಿಂದ, ಸಮಾಜದ ಸಕಲರ ಹಿತಾರ್ಥವಾಗಿ, ಸ್ಥಾಪಿತ ಶಕ್ತಿಯ ವಿರುದ್ಧ ಸೆಣಸುವುದಕ್ಕೆ ಮುಂದಾದ ಮಹಿಳೆಯರಿಗೆ ಮತ್ತೆ ಮತ್ತೆ ನನ್ನ ನಮಸ್ಕಾರ.

ಇಷ್ಟನ್ನು ಮಾತ್ರ ಸ್ಪಷ್ಟಪಡಿಸುತ್ತೇನೆ-ಹಾವಡಿಗ ಮಠದಲ್ಲಿ ಶುದ್ಧೀಕಾರ್ಯ ನಡೆಯದಿದ್ದರೆ ಮಠದ ಹೋರಿಯ ಚಟಕ್ಕೆ ಮಠ ತನ್ನ ಅಸ್ಥಿತ್ವವನ್ನೆ ಕಳೆದುಕೊಳ್ಳಬಹುದು. ಸುಳ್ಳು ಹೇಳುವುದರಲ್ಲಿ, ನಡೆದಿದ್ದನ್ನು ಅಲ್ಲಗಳೆಯುವುದರಲ್ಲಿ ಮತ್ತು ಸಾಕ್ಷಿಗಳು ಸಿಗದಂತೆ ನಾಶಪಡಿಸುವುದರಲ್ಲಿ ಹೋರಿಯಿಂದ ಮಠದ ಹಳದೀತಾಲಿಬಾನ್ ತರಬೇತಿ ಪಡೆದಿದೆ. ಮಠದ ವಿರುದ್ಧ ಸೊಲ್ಲೆತ್ತಿದರೆ ಮೂಲ ಜಾಲಾಡಿ, ಹೊಡೆದುಬಡಿದು, ಕೇಸು ದಾಖಲಿಸುತ್ತಿದ್ದ ತಾಲಿಬಾನ್ ಈಗೀಗ ಸ್ವಲ್ಪ ಬಸವಳಿದಿರುವುದು ಸತ್ಯ. ಎದುರಿಗಿರುವ ತೊಂದರೆಗಳನ್ನು ನಿವಾರಿಸಿಕೊಳ್ಳುವ ಭರದಲ್ಲಿರುವ ಮಹಾಕಾಮಿಗಳಿಗೆ ಬಿಸಿಹತ್ತಿ ಬಹಳದಿವಸ ಕಳೆದಿದೆ. ಭಕ್ತರ ಹಣ ಕೋಟಿಗಳಲ್ಲಿ ಹರಿದುಹೋಗಿದ್ದು ಎಲ್ಲರಿಗೂ ಗೊತ್ತಾಗಿದೆ.

ಸಾಮಾನ್ಯರ ಮನೆಯ ಉಂಡಾಡಿ ಗುಂಡನಿಗಿರುವ ಮರ್ಯಾದೆ ಮಠದ ಮಾಣಿಗಿಲ್ಲ. ಅಂತರ್ರಾಷ್ಟೀಯ ಮಟ್ಟದ ಪತ್ರಿಕೆಗಳು, ಮಾಧ್ಯಮಗಳು ಇದೀಗ ಬೆರಗುಗಣ್ಣುಗಳಿಂದ ವಿಷಯ ಸಂಗ್ರಹ ನಡೆಸುತ್ತಿವೆಯಂತೆ; ಹೀಗಾಗಿ ಇದು ಅಂತಾರಾಷ್ಟ್ರೀಯ ಮಟ್ಟದ ಲಜ್ಜೆಗೆಟ್ಟ ವ್ಯವಹಾರವಾದರೂ ಸಮಾಜದ ಜನ ಇನ್ನೂ ಸುಮ್ಮನಿದ್ದಾರೆ ಯಾಕೆ? ಮಠದ ಗೂಂಡಾಗಳ ಬೆದರಿಕೆಯಿಂದಷ್ಟೆ ಸುಮ್ಮನಿದ್ದಾರೆಯೇ ವಿನಹ ಎಲ್ಲರಿಗೂ ವಿಷಯ ಮನದಟ್ಟಾಗಿದೆ.

“ನಮ್ಮ ಗುರುಗಳಿಗೆ ಯತಿಧರ್ಮ ಹೇಳಿಕೊಡಲು ನೀವು ಯಾರು?” ಎಂದು ತಾಲೀಬಾನಿಗಳು ಪ್ರಶ್ನಿಸುತ್ತಿದ್ದಾರೆ. ಅಂದರೆ ಅವರಿಗೆ ಯತಿಧರ್ಮ ಪಾಲನೆ ಮುಖ್ಯವಲ್ಲ; ಸಿಗುವ ಸುವರ್ಣಮಂತ್ರಾಕ್ಷತೆಯಷ್ಟೆ ಮುಖ್ಯ ಎಂಬುದು ಸ್ಪಷ್ಟವಾಗುತ್ತದೆ. ಸಮಾಜದ ಭಕ್ತರನ್ನು ಒತ್ತಾಯಪೂರ್ವಕವಾಗಿ ಅಥವಾ ಇರುವ ವಿಷಯ ಮುಚ್ಚಿಟ್ಟು, ಬಚ್ಚಿಟ್ಟು ಮಠಕ್ಕೆ ಹಿಂದಿನಂತೆಯೇ ನಡೆದುಕೊಳ್ಳಿ ಎಂದು ಹೇಳಲಾಗುತ್ತಿದೆ. ಒಂದುಕಡೆ ಮಹಾಕಾಮಿಗಳನ್ನು ಮಾವಂದಿರು ಎಳೆದೊಯ್ಯುತ್ತಿದ್ದರೆ, ಇನ್ನೊಂದುಕಡೆ ಮಹಾಕಾಮಿಗಳ ’ಪ್ರವಚನ’ಗಳು ಹಗಲಿರುಳೆನ್ನದೆ ಲೋಕಲ್ ಕೇಬಲ್ ಗಳಲ್ಲಿ ಬಿತ್ತರಗೊಳ್ಳುತ್ತಿರುತ್ತವೆ; ಇಂತಹ ಮೋಸ ಇನ್ನೆಲ್ಲಿ ನಡೆಯಲು ಸಾಧ್ಯ?

ತಲೆಯುಳ್ಳ ಜನರಿಗೆ, ಭಕ್ತರಿಗೆ ಹಾವಾಡಿಗ ಮಠದವರು ನಡೆಸುತ್ತಿರುವುದೆಲ್ಲ ಅಮೇಧ್ಯ ಭಕ್ಷಣೆ ಮಾಡುವಂತೆ ಒತ್ತಾಯಿಸುವಂತಿದೆ. ಹೀಗಾಗಿ ಜನ ಒಳಗೊಳಗೆ ರೊಚ್ಚಿಗೆದ್ದಿದ್ದಾರೆ. ಮಠ, ಗುರು, ಪೀಠ ಇದೆಲ್ಲ ಸರಿಯಾಗಿದ್ದರೆ ಅರ್ಥವುಂಟು. ಎಲ್ಲವೂ ಮನುಷ್ಯ ಮಾಡಿಕೊಂಡ ವ್ಯವಸ್ಥೆಯೇ. ಯಾವಾಗ ಇವೆಲ್ಲ ಸರುಯಾಗಿಲ್ಲವೋ ಆಗ ಅವುಗಳ ಬಗ್ಗೆ ಅಸಡ್ಡೆ, ಅಸಹನೆ ಉಂಟಾಗುತ್ತದೆ.

Thumari Ramachandra

https://www.facebook.com/groups/1499395003680065/permalink/1670999279852969/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s