ಶ್ರಾದ್ಧದ ಭಟ್ಟನ ಕತೆ

ಶ್ರಾದ್ಧದ ಭಟ್ಟನ ಕತೆ

ಒಂದೂರಿನಲ್ಲಿ ಅಪ್ಪ, ಅಮ್ಮ, ಮಕ್ಕಳಿದ್ದರು. ಅಜ್ಜನ ಅಜ್ಜನ ಕಾಲದಿಂದಲೂ ಆ ಮನೆ ಕಚ್ಚೆಹರುಕರದ್ದೆಂದು ಫೇಮಸ್ಸು. ಆ ಮನೆಯಲ್ಲಿ ಹಾಗೂ ಹೀಗೂ ಕನ್ನಡ ಏಳನೇ ಕ್ಲಾಸಿನ ವರೆಗೆ ಓದಿದ ಒಬ್ಬ ಹುಡುಗನಿದ್ದ. ತೋರಿಕೆಗೆ ಕೆಲವು ವರ್ಷ ವೇದಪಾಠಗಳನ್ನು ಓದುತ್ತೇನೆಂತ ತೆರಳಿದ್ದರೂ ಆಗಲೇ ಹುಡಿಗೀರು ಅಂದ್ರೆ ಅವನಿಗೆ ಮಹಾಪ್ರೀತಿ. ಮಿತ್ಯಾನಂದನಂತೆ, ತುಂಬಿದ ಮೈಯ ಹುಡುಗಿಯರನ್ನು ಕಂಡಾಗಲೆಲ್ಲ ಪುಳಕಗೊಳ್ಳುತ್ತಿದ್ದ. ಎಲ್ಲಿ ಹಿಡಿಯಲಿ ಹೇಗೆ ಹಿಡಿಯಲಿ ಎಂದು ತವಕಿಸುತ್ತಿದ್ದ. ಪಾಠಶಾಲೆಗೆ ಹೋಗುತ್ತಿರುವಾಗಲೇ ಅಲ್ಲಿನ ಜನರಿಂದ ಒದೆ ತಿಂದ ಘಟನೆಯೂ ನಡೆಯಿತು. ಇಂತಹ ಮಾಣಿಯನ್ನು ಮುಂದೆ ಶ್ರಾದ್ಧದ ಮನೆಗಳಿಗೆ ಕಳಿಸುವ ಬದಲು ದೊಡ್ಡ ಹುದ್ದೆಯಲ್ಲಿ ಕೂರಿಸಿಬಿಟ್ಟರೆ ಇಡೀ ಕುಟುಂಬವೇ ಹಾಯಾಗಿ ಕಾಲ ಕಳೆಯಬಹುದು ಎಂದು ಮಾಣಿಯ ಅಪ್ಪ ಲೆಕ್ಕ ಹಾಕುತ್ತಲೇ ಇದ್ದ. ಮಠದ ಸ್ವಾಮಿಗಳು ಮುದುಕರೆಂಬುದೂ ಅವನಿಗೆ ಗೊತ್ತಿತ್ತು. ತನ್ನ ಮಾಣಿಯ ಜಾತಕವನ್ನು ಬಹಳ ಅದ್ಭುತವಾಗಿ ತಯಾರಿಸಿ ಮುದುಕಾಗಿದ್ದ ಸ್ವಾಮಿಗಳಲ್ಲಿಗೆ ತೆಗೆದುಕೊಂಡು ಹೋಗಿ ಅಡ್ಡಬಿದ್ದ.

ಮಾಣಿ ಅಪ್ಪಯ್ಯನಲ್ಲಿ ಎಷ್ಟೇ ಗೋಗರೆದರೂ ಅಪ್ಪಯ್ಯ ಕೇಳಲಿಲ್ಲ. ನೀನು ಒಮ್ಮೆ ಮಠ ಸೇರಿಕೋ. ನಿನಗೆ ಬೇಕಾದ್ದೆಲ್ಲ ಸಿಗುತ್ತದೆ. ಹಣ, ಹೆಣ್ಣು, ಎಣ್ಣೆ ಏನೇ ಬೇಕಾದರೂ ಒಳಗಿನಿಂದ ಬಳಸಲು ಅವಕಾಶ ಇರುತ್ತದೆ. ಹೊರಗೆ ಹೋಗುವಾಗ ಮಾತ್ರ ಸ್ವಾಮಿ ವೇಷದಲ್ಲಿ ಇದ್ದರಾಯ್ತು ಎಂದು ಉಪದೇಶಿಸಿದ. ಉಮೇಶ್ ರೆಡ್ಡಿಯಂತೆ ವಿಕೃತ ಕಾಮಿಯಾದ ಮಾಣಿಗೆ ಒಂದೇ ಹೆಣ್ಣು ಸಾಕಾಗೋದಿಲ್ಲ ಅಂತ ಅವನನ್ನು ಹುಟ್ಟಿಸಿದ ಅಪ್ಪನಿಗೆ ಗೊತ್ತಾಗಿಬಿಟ್ಟಿತ್ತು. ಹೀಗಾಗಿ ಮಾಣಿಗೆ ಮಠವೇ ಸರಿಯಾದ ಜಾಗ ಎಂದು ನಿರ್ಧರಿಸಿದ್ದ.

ಮಠ ಸೇರಿಕೊಂಡ ಮಾಣಿಯಿಂದ ಚೀಲಗಳಲ್ಲಿ ಹಣ ಕಳಿಸಲ್ಪಡುತ್ತದೆ ಎಂಬುದೂ ಸಹ ಅಪ್ಪನಿಗೆ ಗೊತ್ತಿತ್ತು. ಮಾಣಿಯ ರಕ್ಷಣೆಗಾಗಿ ಮಾಣಿಯ ಬಾವಯ್ಯನನ್ನು ಮಠದಲ್ಲೇ ಬಿಟ್ಟ. ಇಡೀ ಕುಟುಂಬವೇ ಮಠವನ್ನು ತಮ್ಮ ಮನೆಯ ಆಸ್ತಿಯನ್ನಾಗಿ ಮಾಡಿಕೊಂಡಿತು.

ಮಠ ಸೇರಿಕೊಂಡ ಮಾಣಿ ದಿನೇ ದಿನೇ ಜಗದ್ಗುರುವೆಂದು ಪ್ರದರ್ಶನ ನಡೆಸತೊಡಗಿದ. ಕಂಡಕಂಡಲ್ಲಿ ಹೆಣ್ಣುಮಕ್ಕಳನ್ನೂ ಹೆಂಗಸರನ್ನೂ ಇಚ್ಛಾನುಸಾರ ಬರಗತೊಡಗಿದ. ಕೆಲವರು ಬಿದ್ದರು, ಕೆಲವರು ಓಡಿ ತಪ್ಪಿಸಿಕೊಂಡರು. ಅಪ್ಪಯ್ಯ “ಮಾಣೀ ಸಾಕು ಮಾರಾಯ, ಇನ್ನೂ ಹೀಂಗೇ ಮಾಡಿರೆ ಸಿಕ್ಕಾಕ್ಕೆತ್ತಿ ನೋಡು. ಇಡೀ ಮನೆತನದ ಹೆಸರೇ ಹಾಳಾಗ್ತು” [ಮನಗೆ ಕಚ್ಚೆಹರುಕರ ಮನೆ ಎಂಬ ’ಖ್ಯಾತಿ’ ಮೊದಲೇ ಇತ್ತು ಬಿಡಿ.]ಎಂದರೂ ವಿಕೃತ ಕಾಮಿಯಾಗಿ ಬೆಳೆಯುತ್ತಿದ್ದ ಮಾಣಿ ಬಿಡಲಿಲ್ಲ.

ತಾನು ಹಾರಾಡಿ ಹಾಳುಗರೆದ ಹೆಣ್ಣುಮಕ್ಕಳು ಮತ್ತು ಹೆಂಗಸರು ದೂರು ಕೊಟ್ಟಾಗ ತಪ್ಪಿಸಿಕೊಳ್ಳಲಿಕ್ಕೆ ಹಲವು ವಿಧಾನಗಳನ್ನು ಅನುಸರಿಸಿ ಮಠದ ಆಪದ್ಧನವನ್ನೂ ಬಳಸಿಕೊಂಡ. ಭಕ್ತರ ಹಣ ಕೋಟಿ ಕೋಟಿಗಳಲ್ಲಿ ನೀರಾಗಿ ಹೋಯಿತು. ಸಮಾಜದ ಸಂತ್ರಸ್ತ ಹೆಣ್ಣುಮಕ್ಕಳ ಅಳಲನ್ನು ಕೇಳುವವರೇ ಇರಲಿಲ್ಲ.

ಕತೆ ಕೇಳುತ್ತಿದ್ದವ “ಮುಂದೆ…?” ಎಂದ.

“ಮುಂದೆ ಅಂದ್ರೆ…? ಅದರ ಫಲವನ್ನೇ ನಾವೆಲ್ಲ ಈಗ ಉಣ್ಣುತ್ತಿದ್ದೇವೆ ” ಎನ್ನುತ್ತ ಕತೆ ಹೇಳುತ್ತಿದ್ದವ ಫೋನ್ ಕಟ್ ಮಾಡಿದ.

Thumari Ramachandra

https://www.facebook.com/groups/1499395003680065/permalink/1670115826607981/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s