ಮಠಕ್ಕೆ ಬಹಿಷ್ಕಾರ ಹಾಕುವ ಪದ್ಧತಿ ಆರಂಭವಾಗಲಿ

ಮಠಕ್ಕೆ ಬಹಿಷ್ಕಾರ ಹಾಕುವ ಪದ್ಧತಿ ಆರಂಭವಾಗಲಿ

ಇಂದಿನ ದಿನಮಾನದಲ್ಲಿ ಜನರಿಗೆ ಮಠಮಾನ್ಯಗಳ ಅಗತ್ಯತೆ ಎಷ್ಟು ಎಂಬುದನ್ನು ವಿವೇಚಿಸಬೇಕು. ಅದರಲ್ಲಂತೂ ಶಂಕರ ಪರಂಪರೆ ಹೇಳುವುದು ಸ್ವಾತ್ಮಾರಾಮ ಆರಾಧನೆ ಅಂದರೆ ನಮ್ಮೊಳಗೇ ಇರುವ ದೇವರನ್ನು ಕಂಡುಕೊಳ್ಳುವುದು. ನಮ್ಮೊಳಗಿರುವ ದೇವರನ್ನು ಕಂಡುಕೊಳ್ಳಲು ಸಾಧ್ಯವಾದರೆ ಆಗ ಮಠಮಾನ್ಯಗಳ ಹಂಗಿರುವುದಿಲ್ಲ.

ನಮ್ಮೊಳಗಿನ ದೇವರನ್ನು ಕಂಡುಕೊಳ್ಳುವ ಪದ್ಧತಿಗೆ ಪ್ರಮುಖವಾಗಿ ಬೇಕಾದುದು ಅಧ್ಯಯನಶೀಲತೆ. ಮುಕ್ತ ಮನಸ್ಸಿನಿಂದ ಆಚಾರ್ಯರು ಹೇಳಿದ ಪ್ರಸ್ಥಾನತ್ರಯಗಳು ಅಂದರೆ ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಇವಿಷ್ಟನ್ನು ನಾವು ಸರಿಯಾಗಿ ಓದಿ ಅರ್ಥಮಾಡಿಕೊಂಡರೆ ಆಗ ನಮಗೇ ನಾವೇ ಗುರುವಾಗಬಹುದು. ಹಾಗೊಮ್ಮೆ ಮಾಡಿದಲ್ಲಿ ನೋಡುತ್ತಿರುವಂತಹ ಕಚ್ಚೆಹರುಕರ ಸಹವಾಸದ ಅಗತ್ಯವೇ ಇರುವುದಿಲ್ಲ, ಮಾತ್ರವಲ್ಲ ಇಂತಹ ಮಠಗಳಿಗೆ ಪೈಸೆ ಕಾಣಿಕೆಯನ್ನೂ ಕೊಡಬೇಕಾಗಿಲ್ಲ.

ದಕ್ಷಿಣ ಕನ್ನಡದದ ಕೋಟ ಬ್ರಾಹ್ಮಣರಿಗೆ ಮಠವೆಂಬುದೇ ಇಲ್ಲ. ಯಾವುದೋ ಕಾಲದಲ್ಲಿ ಅವರಿಗೆ ಮಠ ಬೇಡವೆನ್ನಿಸಿತು, ಅದನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದ್ದಾರೆ. ಅವರಿಗೆ ಗುರುವೂ ನರಸಿಂಹನೇ ದೇವರೂ ನರಸಿಂಹನೇ. ಇಂದಿನ ದಿನದಲ್ಲಿ ಅದು ಯೋಗ್ಯ ವ್ಯವಹಾರ.

ಹಾಗೊಮ್ಮೆ ನೋಡಿದರೆ ಆಮ್ನಾಯ ಮಠಗಳನ್ನು ಬಿಟ್ಟು ಉಳಿದೆಲ್ಲವೂ ರಾಜಕೀಯ ಪ್ರೇರಿತವಾಗಿ ಕಾಲಾನುಕಾಲಗಳಲ್ಲಿ ಹುಟ್ಟಿಕೊಂಡಿದ್ದಾವೆ. ಅವುಗಳ ಒಂದೊಂದರ ಹಿಂದೆಯೂ ಹಲವು ರಹಸ್ಯಗಳಿವೆ. ಅಂತಹ ರಹಸ್ಯಗಳನ್ನು ಯಾರೂ ಕೆದಕುವುದಿಲ್ಲ. ಧರ್ಮಸ್ಥಾಪನೆಗೆ, ಧರ್ಮ ಬೋಧನೆಗೆ ಆಮ್ನಾಯ ಮಠಗಳು ಸಾಕು. ಅದಕ್ಕಿಂತ ಹೆಚ್ಚಿನ ಮಠಗಳ ಅಗತ್ಯತೆ ಎಲ್ಲೂ ಕಾಣುವುದಿಲ್ಲ.

ನಮ್ಮ ಆಚಾರ್ಯರು ಅವರ ಅನುಭವದ ಪಾಕ ಎರೆದು ಆಗಲೇ ಹೇಳಿದ್ದಾರೆ. ಮುಂದೊಂದು ದಿನ ಇಂತಹ ಬಿಕನಾಸಿಗಳು ಬಂದರೆ ಏನು ಮಾಡಬೇಕು ಎಂಬುದನ್ನು. ಯಾರು ಸನ್ಯಾಸಿ ಮತ್ತು ಯಾರು ಬಿಕನಾಸಿ ಎಂದು ಗುರುತಿಸಲು ಕೆಲವು ಕುರುಹುಗಳನ್ನೂ ಹೇಳಿದ್ದಾರೆ. ಅವುಗಳನ್ನೆಲ್ಲ ಧಿಕ್ಕರಿಸಿ ತಾನು ಹೇಳುತ್ತಿರುವುದಷ್ಟೇ ಸತ್ಯ ಎಂಬ ಯಾವನನ್ನೂ ಸನ್ಯಾಸಿ ಎಂದು ನಂಬಬಾರದು.

ಯಾವ ಅರ್ಹತೆಯೂ ಇಲ್ಲದ, ಏಳನೇ ತರಗತಿ ಓದಿದ ಲಂಪಟನೊಬ್ಬ ಇಡೀ ಸಮಾಜವನ್ನು ತನ್ನ ಕಬಂಧ ಬಾಹುಗಳಿಂದ ಬಂಧಿಸಿ ತಾನು ಹೇಳಿದ್ದನ್ನಷ್ಟೆ ಕೇಳಿಕೊಂಡಿರುವಂತೆ ಮಾಡಿರುವುದು ಬಹುದೊಡ್ಡ ವಿಪರ್ಯಾಸ. ಮತ್ತು ಅವನು ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತ ಕೋಲೆ ಬಸವಗಳಾಗಿರುವವರನ್ನು ಕಂಡು ಏನೆನ್ನಬೇಕೋ ತಿಳಿಯುತ್ತಿಲ್ಲ. ಸಮಾಜ ತಿಳಿದುಕೊಳ್ಳಬೇಕು-ಶ್ರಾದ್ಧದ ಭಟ್ಟನಾಗುವ ಅರ್ಹತೆಯೂ ಇಲ್ಲದ ವ್ಯಕ್ತಿಗೆ ನಾವೆಲ್ಲ ಅಡ್ಡಬೀಳುತ್ತಿದ್ದೇವೆ ಎಂದರೆ ಯಾವರೀತಿಯ ಗುರುವನ್ನು ನಾವು ಆಯ್ಕೆಮಾಡಿಕೊಂಡಿದ್ದೇವೆ?

ಕಾಮಕಥೆಯಲ್ಲಿ ಕಲಾವಿದರು ಕೆಲವರು ಹಣ ಪೀಕುವುದನ್ನು ಕಂಡುಕೊಂಡಿದ್ದರು. ಅಂತವರೆಲ್ಲ ಈಗ ಉಪವಾಸ ಇದ್ದಾರೆ. ಹಾಗಾಗಿ ಮತ್ತೆ ಅವನನ್ನೇ ಮುಂದುವರಿಸಿಕೊಂಡರೆ ಇನ್ನಷ್ಟು ಪೀಕುತ್ತಲೇ ಇರಬಹುದು ಎಂಬುದು ಅಂತಹ ಪ್ರಾಯೋಜಕರ/ಫಲಾನುಭವಿಗಳ ಅಂತರಂಗ. ಅದಕ್ಕಾಗಿಯೇ ಬಹಿರಂಗದಲ್ಲಿ ಅವರೆಲ್ಲ ಷಡ್ಯಂತ್ರವೆಂಬ ಪದವನ್ನು ಗಟ್ಟುಹೊಡೆದುಕೊಂಡುಬಿಟ್ಟಿದ್ದಾರೆ. ಕಾಮಿಯ ವಿರುದ್ಧ ಯಾರಾದರೂ ಕಂಡಿದ್ದನ್ನು ಹೇಳಿದರೆ ಸಾಕು “ಅದು ಷಡ್ಯಂತ್ರ” ಎನ್ನುತ್ತಾರೆ.

ಹಾರುವಾಗ ಅನ್ವಯವಾಗದ ಯತಿನಿಯಮಗಳು ಹಾಜರಾಗುವಾಗ ಇಂತವರಿಗೆ ತಟ್ಟನೆ ಕಂಡುಬಿಡುತ್ತವೆ. ತುಮರಿಗೆ ಬಂದ ಸಂದೇಶದ ಪ್ರಕಾರ ಈ ವ್ಯಕ್ತಿಗಿರುವ ಕೆಲವು ಮಕ್ಕಳ ತಾಯಂದಿರಿಂದ ಪ್ಯಾಟರ್ನಿಟಿ ಕೇಸ್ ಗಳು ದಾಖಲಾದರೆ ಆಗಲಾದರೂ ಕುರುಡು ಭಕ್ತರು ಒಪ್ಪಿಯಾರು.

ಕೆಲವು ಶಿಷ್ಯರಿಗೆ ಹಲವು ವಿಷಯಗಳು ಗೊತ್ತೇ ಆಗುವುದಿಲ್ಲ ಪಾಪ. ಘಟ್ಟದ ಕೆಳಗಿನ ಉತ್ತರ ಪ್ರಾಂತದ ಹಲವು ಭಾಗಗಳಲ್ಲಿ ಕಳೆದೆರಡು ತಿಂಗಳುಗಳಲ್ಲಿ ಖಾಸಗಿ ಕೇಬಲ್ ಚಾನೆಲ್ ನವರಿಗೆ ಶುಕ್ರದೆಸೆ ಬಂದುಬಿಟ್ಟಿದೆಯಂತೆ. ಅವರಿಗೆ ಸಲ್ಲುತ್ತಿರುವ ಸುವರ್ಣಮಂತ್ರಾಕ್ಷತೆಯಿಂದ ಕಾಮಿಗೆ ಬೇಕಾಗಿದ್ದನ್ನು ಅವರು ಇಡೀದಿನ ಪ್ರಸಾರ ಮಾಡುತ್ತಿದ್ದಾರಂತೆ ಎಂಬ ಸಂದೇಶ ಬಂದಿದೆ. ಇತ್ಲಕಡೆಗೆ ನೋಟೀಸು ಕೋರ್ಟು ಏನೇ ನಡೆದು ಬಿಸಿಹತ್ತಿದ್ದರೂ ಆ ಹಳ್ಳಿಗಳಲ್ಲಿ ’ಮಹಾಕಾಮಿ’ಗಳು ನಗುತ್ತಿರುವ ಸುದ್ದಿ ಬಿತ್ತರಗೊಳ್ಳುತ್ತದೆಯಂತೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬೇನಾಮಿ ಹೆಸರುಗಳಲ್ಲಿ ಕಾಮಿಯೇ ಖುದ್ದಾಗಿ ವ್ಯವಹರಿಸುತ್ತಾನೆ ಎಂದು ಕೆಲವರು ಸಂದೇಶ ನೀಡಿದ್ದಾರೆ. ಹಳದೀ ಶಿಷ್ಯರಿಗೆ ಹೇಳಿ ಮಾಡಿಸುವ ಬದಲು ತಾನೇ ಖುದ್ದಾಗಿ ಬರೆದರೆ ಬೇಕಾದ ಪದ ಪ್ರಯೋಗ ನಡೆಸಬಹುದು ಎಂಬ ಆಲೋಚನೆಯಿಂದ ಅದು ಕಾರ್ಯಗತವಾಗಿದೆಯಂತೆ.

ದಕ್ಷಿಣದ ಈ ರಾಂಪಾಲ್ ನನ್ನು ಸೆರೆಹಿಡಿಯುವುದು ಉತ್ತರದ ರಾಂಪಾಲ್ ಸೆರೆಹಿಡಿದದ್ದಕ್ಕಿಂತ ಕಠಿಣ ಕೆಲಸ ಎಂಬ ಸಂದೇಶವೂ ಲಭ್ಯವಾಗಿದೆ. ಕ್ರಿಮಿನಲ್ ಮೈಂಡ್ ಹೇಗಿರುತ್ತದೆ ಎಂಬುದಕ್ಕೆ ಪರಮೋಚ್ಚ ಉದಾಹರಣೆಯಾದ ವ್ಯಕ್ತಿಯನ್ನು ಆರಾಧಿಸುವ ತಾಲೀಬಾನಿಗಳೂ ಕ್ರಿಮಿನಸ್ ಮೈಂಡ್ ಸೆಟ್ ಹೊಂದಿರುತ್ತಾರೆ.

ಇಂತಹವರನ್ನೆಲ್ಲ ಮಠದಲ್ಲಿ ಬಿಟ್ಟುಕೊಂಡು ಸಮಾಜ ಉದ್ಧಾರವಾಗುತ್ತದೆ ಎಂದು ಕನಸು ಕಾಣುತ್ತಿರುವವರು ಬಹಳ ಓದಿಕೊಂಡ ಕೆಲವು ಬುದ್ಧುಗಳಾದರೆ, ಸುವರ್ಣ ಮಂತ್ರಾಕ್ಷತೆ ತೆಗೆದುಕೊಂಡು ಬೆಂಬಲಿಸುತ್ತಿರುವವರು ಹಲವರಿದ್ದಾರೆ. ಹೀಗಾಗಿ ಸಜ್ಜನರಿಗೆ ಅವಕಾಶವೇ ಇಲ್ಲದ ಮಠಕ್ಕೆ ಯಾತಕ್ಕಾಗಿ ಹೋಗಬೇಕು? ಕಳೆದ ನೀರು ಕಟ್ಟಿಗೆ ಬರುವುದಿಲ್ಲ ಎಂಬಂತೆ ಹೋದದ್ದು ಹೋಯಿತು, ಇನ್ನುಮುಂದೆ ಇಂತಹ ಮಠಗಳನ್ನೇ ಬಹಿಷ್ಕರಿಸುವ ಸಂಘಟನೆಗಳು ತಯಾರಾಗಬೇಕು.

ಪರಂಪರೆಯಿಂದ ಬಂದ ಪೀಠ ಎಂದು ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕುಕೊಳ್ಳುವ ಅಗತ್ಯ ಕಾಣುತ್ತಿಲ್ಲ. ಆದರೆ ಇಲ್ಲಿಯವರೆಗೆ ಸಮಾಜದ ಹಣದಿಂದ ಅದು ಬೆಳೆದಿರುವುದರಿಂದ ಕಾಮಿಯನ್ನು ಸುಮ್ಮನೆ ಬಿಡಬಾರದು. ಅವನಿಗೊಂದು ಶಾಸ್ತಿ ಮಾಡಿಸಿ ನಂತರ ಮಠದ ಲೆಕ್ಕಾಚಾರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬುದು ಇನ್ನೊಂದು ಸಂದೇಶ.

ಸಮಾಜದಲ್ಲಿ ಬೇಕಷ್ಟು ಉತ್ತಮ ಆರಾಧನೆಯ ಕ್ಷೇತ್ರಗಳಿವೆ, ತಾಣಗಳಿವೆ. ಬೇಕಾದರೆ ಮಾನಸಿಕ ನೆಮ್ಮದಿಗೆ ಅವುಗಳನ್ನು ಆಯ್ದುಕೊಂಡು ಭೇಟಿ ನೀಡಬಹುದು. ಅದಕ್ಕೆ ಮಠಗಳೇ ಬೇಕೆಂದಿಲ್ಲ. ಇನ್ನು ಕೆಲವು ಕ್ಷೇತ್ರಗಳ ಆಡಳಿತಾಧಿಕಾರಿಗಳು ಸರಿಯಿಲ್ಲದಿದ್ದರೆ ಅಲ್ಲಿಗೂ ಹೋಗಬೇಕಾಗಿಲ್ಲ.

ಮಠದ ಮಾಣಿ ಎಲ್ಲೆಲ್ಲಿಂದ ತನ್ನಂತಹ ಕಳ್ಳ ಸನ್ಯಾಸಿಗಳು ಯಾರ್ಯಾರು ತನ್ನನ್ನು ಬೆಂಬಲಿಸಬಹುದೋ ಎಂದು ಹುಡುಕಿಸಿ ಅವರೆಲ್ಲರನ್ನು ಸಂಪರ್ಕಿಸಿ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಅನ್ನೋ ರೀತಿಯ ಬೆಂಬಲ ಭಿತ್ತಿಗಳನ್ನು ಪ್ರದರ್ಶಿಸುತ್ತಿದ್ದಾನೆ ಎನ್ನುತ್ತದೆ ಮತ್ತೊಂದು ಸಂದೇಶ. ಮಠದಮಾಣಿ ಹೇಳ್ತಿದಾನೆ-“ಹೋಯ್ ಕೆಳವರ್ಗಗಳವರನ್ನ, ಹೆಸರೇ ಕೇಳಿರದ ಅಶ್ರಮ-ಮಠಗಳ ಯಜಮಾನರನ್ನ ಸಂಪರ್ಕಿಸರಪ್ಪಾ ಗಿಂಡಿಮಾಣಿಗಳೇ, ಅವರೆಲ್ಲರ ನೆರವು ಕೇಳೋಣ, ಮುಂದೆ ಎಂದಾದರೂ ಅವರಿಗೂ ನಮ್ಮ ಸಹಾಯ ಬೇಕಾಗಬಹುದು ಎಂದು ಹೇಳಿ. ಯಾರೆಲ್ಲಾ ಬೆಂಬಲ ಕೊಡ್ತಾರೆ ಅವರೆಲ್ಲರ ಸಹಿ ಸಂಗ್ರಹಿಸಿ ನಮ್ಮ ಬಲಾಬಲ ತೋರಿಸಿ. ಈ ಕೆಲಸ ಅತಿ ಶೀಘ್ರವಾಗಿ ಆಗಬೇಕು.”

ಯಾರಿಗೆ ಗೊತ್ತಿಲ್ಲ ಮಾಣಿ ಏಕಾಂತ ನಡೆಸಿದ ಕಟ್ಟಡಗಳನ್ನೇ ರೂಪಾಂತರಗೊಳಿಸಿದ್ದು? ಇನ್ನೊಮ್ಮೆ ವೀಕ್ಷಣೆಗೆ ಬಂದರೆ ಇಲ್ಲೇ ನಡೆದಿತ್ತು ಎಂದು ತೋರಿಸಲು ಏನೂ ಗುರುತು ಚಹರೆ ಸಿಗದಂತೆ ಮಾಡಿ ಹೊಸ ಕಟ್ಟಡ ಆರಂಭಿಸಿರುವುದು. ಕಾನ್ಕುಳಿಯಲ್ಲಿ ನಡೆದಿಲ್ಲವೇ? ಅವನ ಕ್ರಿಮಿನಲ್ ಬುದ್ಧಿಯ ಐಡಿಯಾಗಳಿಗೆ ತಾಲಿಬಾನ್ ಕುಣಿಯುತ್ತಿದೆಯಲ್ಲ ಅದು ಗೊತ್ತಿಲ್ಲ ಅಂದುಕೊಂಡಿದ್ದಾನೋ? -ಇದು ಮತ್ತೊಂದು ಸಂದೇಶ.

ತಾನು ಕಳ್ಳ ಕಾಮುಕ ಅಲ್ಲ ಎಂಬುದನ್ನು ಮಠದಮಾಣಿ ಹೊಸದಾಗಿ ಪರೀಕ್ಷೆ ಮತ್ತು ನ್ಯಾಯಾಲಯಗಳ ಮೂಲಕ ನಿರೂಪಿಸಬೇಕಾಗಿಲ್ಲ. ವರ್ಷದ ಹಿಂದೆಯೇ ಇವ ಕಳ್ಳ ಮತ್ತು ಕಾಮುಕ ಎಂಬುದು ಎಲ್ಲರಿಗೂ ಅರಿವಾಗಿದೆ, ಅದು ಈಗೀಗ ಇನ್ನಷ್ಟು ಪಕ್ಕಾ ಆಗಿಬಿಟ್ಟಿದೆ. ಚಾತುರ್ಮಾಸದಲ್ಲಿ ಎಷ್ಟು ಜನರಿಗೆ ಹೋರಿ ಹಾರಿದೆ ಎಂಬುದೂ ಜನರಿಗೆ ಗೊತ್ತಾಗಿದೆ. ಹೋರಿಗೆ ಮಣಕವನ್ನು ತೋರಿಸಿ, ಆಯಾಸವೆಲ್ಲ ತಕ್ಷಣ ನಿವಾರಣೆಯಾಗಿ ಹೋರಿ ಹಾರದಿದ್ದರೆ ಕೇಳಿ ಎಂಬುದು ಇನ್ನೊಬ್ಬರ ಸಂದೇಶ.

Thumari Ramachandra

https://www.facebook.com/groups/1499395003680065/permalink/1670074073278823/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s