ಮಾಧ್ಯಮಗಳು ಮಠದ ಪೇಯ್ಡ್ ಏಜೆಂಟರನ್ನು ಮಾತನಾಡಿಸುವುದನ್ನು ಬಿಟ್ಟು ಜನಸಾಮಾನ್ಯರ ಅಭಿಪ್ರಾಯ ಪ್ರಕಟಿಸಲಿ

ಮಾಧ್ಯಮಗಳು ಮಠದ ಪೇಯ್ಡ್ ಏಜೆಂಟರನ್ನು ಮಾತನಾಡಿಸುವುದನ್ನು ಬಿಟ್ಟು ಜನಸಾಮಾನ್ಯರ ಅಭಿಪ್ರಾಯ ಪ್ರಕಟಿಸಲಿ

ಒಬ್ಬ ಸೋ ಕಾಲ್ಡ್ ವೈದ್ಯ ಕಳೆದವರ್ಷ ಆರಂಭದಲ್ಲಿ ಕೇವಲ ಲ್ಯಾಬ್ ನ ಸಾಧ್ಯತೆಗಳ ಬಗೆಗೆ ಮಾತ್ರ ಮಾತನಾಡುತ್ತ, ಡಿ.ಎನ್.ಎ ಪ್ರೂವ್ ಆದರೆ ಕಾಮಿಯನ್ನು ಅಂದರ್ ಮಾಡಲು ಅದೊಂದೇ ಸಾಕು ಎಂದು ಹೇಳಿದ್ದ. ವಿಚಿತ್ರವೆಂದರೆ ಅದೇ ವ್ಯಕ್ತಿ ಈಗ ಕಾಮಿಯ ಪರ ಬ್ಯಾಟಿಂಗ್ ಶುರು ಹಚ್ಚಿಕೊಂಡಿದ್ದಾನೆ; ಜನಸಾಮಾನ್ಯರಿಗೆ ತಿಳಿಯದ್ದು ತನಗೆ ಮಾತ್ರ ತಿಳಿದಿದೆ ಎನ್ನೋ ಹಾಗೆ ತನ್ನದೇ ಪುಂಗಿಯಿಂದ ಮನಸ್ಸಿಗೆ ಬಂದದ್ದನ್ನೆಲ್ಲ ಊದಲಿಕ್ಕೆ ಆರಂಭಿಸಿದ್ದಾನೆ. ಜೊತೆಗೆ ಕುರಿಗಡ್ಡದ ಕೆಲವರು ಗಡ್ಡ ತುರಿಸಿಕೊಳ್ಳುತ್ತ ಕಾಮಿಯಿಂದ ಸಿಗುತ್ತಿರುವ ’ಸುವರ್ಣ ಮಂತ್ರಾಕ್ಷತೆ’ಗಾಗಿ ಹಾತೊರೆಯುತ್ತ ಅಮಾಯಕರ ಮನಸ್ಸಿನಲ್ಲಿ ಇಲ್ಲದ ಸಂದೇಹಗಳನ್ನು ಹುಟ್ಟುಹಾಕಲು ಯತ್ನಿಸುತ್ತ, ಕನ್ವಿನ್ಸ್ ಮಾಡಲಾಗದ ಸನ್ನಿವೇಶದಲ್ಲಿ ಕನ್ ಫ್ಯೂಸ್ ಮಾಡುವ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದಾರೆ. ಈ ಸಮಯದಲ್ಲಿ ಮಾಧ್ಯಮಗಳವರಿಗೆ ಸಲಹೆ ಇಷ್ಟೆ: ವಂಶಪಾರಂಪರ್ಯವಾಗಿ ಮಠದ ಭಕ್ತರಲ್ಲದ ಜನಸಾಮಾನ್ಯರ ಅಭಿಪ್ರಾಯಗಳನ್ನು ಕಲೆಹಾಕಿ, ಅಂತವರನ್ನು ಮಾತನಾಡಿಸಿ. ನಮಗೆ ಇಂತಹ ಪೇಯ್ಡ್ ತಜ್ಞರ ಅಗತ್ಯತೆ ಇರುವುದಿಲ್ಲ, ಆಗ ಮಾತ್ರ ಮಠದ ಇತರ ಕೆಲವು ಹಗರಣಗಳ ಹೂರಣಗಳೂ ಬಯಲಾಗುತ್ತ ಬರುತ್ತವೆ.

ಜನತೆಗೆ ಒಂದು ಸ್ಪಷ್ಟ ಪಡಿಸುವುದೇನೆಂದರೆ; ಸದ್ಯ ಬೆರಳೆಣಿಕೆಯ ಪ್ರಸಂಗಗಳನ್ನು ನೋಡುತ್ತಿದ್ದೀರಿ, ಚೋರಗುರುವಿನ ಮೇಲೆ ಇನ್ನೂ ನೂರಾರು ಆಪಾದನೆಗಳಿವೆ. ಕಾಲಕ್ಕಾಗಿ ಜನ ಕಾಯುತ್ತಿದ್ದಾರೆ; ಯಾಕೆಂದರೆ ಚೋರಗುರುವಿನಲ್ಲಿ ಹಣದ ಥೈಲಿ ಬಹಳ ಅಗಾಧವಾಗಿದೆ, ಅದು ಕರಗುವವರೆಗೆ ಅದನ್ನೇ ಚೆಲ್ಲುತ್ತ ಆತ ಬದುಕುತ್ತಾನೆ. ಇಷ್ಟೊಂದು ಸಾಕ್ಷ್ಯಗಳಿದ್ದೂ ತಪ್ಪಿಸಿಕೊಳ್ಳಲು ಸಕಲ ವಿಧದಲ್ಲಿ ಪ್ರಯತ್ನ ನಡೆಸುತ್ತಿರುವ ಚೋರಗುರುವಿಗೆ ಸಮರ್ಥನೆ ಮಾಡುವವರ ಅಗತ್ಯ ತುಂಬಾ ಇದೆ. ಯಾರಾದರೂ ಆತನ ನಡತೆ ಸರಿಯಿದೆಯೆಂದು ಸಮರ್ಥಿಸಲು ಹೋದರೆ ನಿಮ್ಮ ನಿಮ್ಮ ಅರ್ಹತೆಗೆ ತಕ್ಕಂತೆ ಕೋಟಿಗಳಲ್ಲಿ ಅಥವಾ ಲಕ್ಷಗಳಲ್ಲಿ ಎಣಿಸಿಕೊಳ್ಳಲು ಇದೊಂದು ಸದವಕಾಶ.

ತುಮರಿಗೆ ಬಂದ ಒಂದು ಸಂದೇಶ-
ಇದೊಂದು ನೈಜ ಘಟನೆ. ಒಬ್ಬ ಸರಿಯಾಗಿರುವ ಮಠಾಧೀಶರೆದುರು ಕಾಮಿಯ ದಕ್ಷಿಣ ಪ್ರಾಂತದ ಶಿಷ್ಯರ ಗುಂಪೊಂದು ತೆರಳಿತು.
ಗುಂಪು-“ಸ್ವಾಮೀ, ನಾವೊಂದು ಕಟ್ಟಡ ಕಟ್ಟಿದ್ದೇವೆ. ಅದರ ಉದ್ಘಾಟನೆಗೆ ತಾವು ಅಗತ್ಯವಾಗಿ ಬರಬೇಕೆಂದು ಕರೆಯಲು ಬಂದಿದ್ದೇವೆ”
ಸ್ವಾಮಿಗಳು ಕೇಳಿದರು,”ಹೌದಾ? ನೀವು ಆ ಮಠದ ಶಿಷ್ಯರಲ್ಲವೇ? ನಾವು ನಿಮ್ಮ ಕಾರ್ಯಕ್ರಮಕ್ಕೆ ಬಂದರೆ ನಿಮ್ಮನ್ನು ಬಹಿಷ್ಕರಿಸಬಹುದಲ್ಲ?”
ಗುಂಪು-“ಇಲ್ಲ ಇಲ್ಲ, ಹಾಗೆಲ್ಲ ಇಲ್ಲ, ನಮ್ಮ ಗುರುಗಳು ಯಾರನ್ನೂ ಬಹಿಷ್ಕರಿಸುವುದಿಲ್ಲ. ಅದೆಲ್ಲ ಕಟ್ಟುಕತೆ.”

ಸ್ವಾಮಿಗಳು-“ಹೌದೇ? ಹಾಗಾದರೆ ಅವರ ವಿರುದ್ಧ ಹಲವಾರು ಆಪಾದನೆಗಳು ಕೇಳಿ ಬರ್ತಿವೆಯಲ್ಲ?”
ಗುಂಪು-“ಛೆ ಛೆ, ಅದೆಲ್ಲ ಷಡ್ಯಂತ್ರ್ಯ, ಯಾವುದೂ ನಿಜವಲ್ಲ. ಎಲ್ಲಾ ಕಟ್ಟುಕತೆಗಳೇ.”
ಸ್ವಾಮಿಗಳು-“ನಿಮ್ಮ ಮಠದಲ್ಲಿ ಹಲವಾರು ಉತ್ಪನ್ನಗಳು ಮಾರಾಟಕ್ಕೆ ಸಿಗುತ್ತವಂತಲ್ಲ, ಹಾಗಾದರೆ ಅದೇ ರೀತಿಯಲ್ಲಿ ವೀರ್ಯಾಣುವಿನ ಮಾರಾಟವೂ ಇದೆಯೋ?”
ಸ್ವಾಮಿಗಳ ಈ ಪ್ರಶ್ನೆಗೆ ಚೋರಗುರು ಭಕ್ತರ ಆ ಗುಂಪಿನಲ್ಲಿ ಉತ್ತರವಿರಲಿಲ್ಲ. ಅಂತಹ ತೀಕ್ಷ್ಣ ಪ್ರಶ್ನೆಯನ್ನು ನಿರೀಕ್ಷಿಸಿರದಿದ್ದ ಅವರೆಲ್ಲ ಬಂದಹಾದಿಗೆ ಸುಂಕವಿಲ್ಲ ಎಂಬಂತೆ ಜಾಗ ಖಾಲಿಮಾಡಿದರಂತೆ.

ಇನ್ನೊಂದು ಸಂದೇಶ-
ಕಾಮಿಗೆ ಜಯವಾಗಲಿ ಎಂಬ ಸಂಕಲ್ಪದಿಂದ, ಕಾಮಿಯ ಇಚ್ಛೆಯಂತೆ, ಕೋಟಿಗಟ್ಟಲೆ ಹಣ ವ್ಯಯಿಸಿ ರಾಜ್ಯದ ಮತ್ತು ಕೇರಳದ ಹಲವೆಡೆಗಳಲ್ಲಿ ಹಲವಾರು ವಿಧದ ವಾಮಾಚಾರಗಳ ಹೋಮಗಳು ನಡೆಯುತ್ತಿವೆಯಂತೆ. ಅದರ ಚಿತ್ರಗಳನ್ನೂ ಕಳಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

Thumari Ramachandra

https://www.facebook.com/groups/1499395003680065/permalink/1669514203334810/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s