ನಾಳೆ ಮಂಗಳವಾರ ಮಾರನೆಯ ದಿನ ದಶಮಿ ಆಮೇಲೆ ಇರುವೆವೇ ನಾವು ಇಲ್ಲಿ?

ನಾಳೆ ಮಂಗಳವಾರ ಮಾರನೆಯ ದಿನ ದಶಮಿ ಆಮೇಲೆ ಇರುವೆವೇ ನಾವು ಇಲ್ಲಿ?
[ಲಕ್ಷ್ಮೀರಮಣ ಗೋವಿಂದ…….ಗೋವಿಂದ]

“ಅಂಜನಾ ನಂದನಂ ವೀರಂ ಜಾನಕೀ ಶೋಕ ನಾಶನಂ|
ಕಪೀಶಂ ಅಕ್ಷ ಹಂತಾರಂ ವಂದೇ ಲಂಕಾ ಭಯಂಕರಮ್ ||

ಹೀಗೆ ಆಗಾಗ ಹೇಳುತ್ತಲೇ ಇರಬೇಕೆಂದು ನಮ್ಮ ಕೃತ್ರಿಮ ಮಾರ್ಗೋಪಾಯ ಮಂಡಳಿಯ ಅಧ್ವರ್ಯುಗಳು ಸೂಚಿಸಿದ್ದಾರೆ. ಅಲ್ಲಿಂದೀಚೆಗೆ ನಾವು ಏನನ್ನೇ ಮಾತನಾಡಿದರೂ ಆರಂಭದಲ್ಲಿ ಅಥವಾ ಆಗಾಗ ಹನುಮತ್ ಸ್ಮರಣೆಯನ್ನು ಮಾಡುತ್ತಿರುತ್ತೇವೆ. ಕತೆಗಳ ದಿನಗಳಲ್ಲಿ ಆಡಂಬರಕ್ಕೆ ಪುಷ್ಪಾಂಜಲಿ ಎರಚುತ್ತಿದ್ದ ನಮ್ಮ ಮೇಲೆ ಹನುಮನೇ ಕೋಪಗೊಂಡುಬಿಟ್ಟನೇ? “ಈಗೆ ನಿಮ್ಮ ರಕ್ಷಣೆ ಆದರೆ ಅವನಿಂದಲೇ ಆಗಬೇಕು, ಯಾವುದಕ್ಕೂ ಧ್ಯಾನ ಮಾಡ್ತಾ ಇರಿ” ಎಂದು ಅವರು ಹೇಳಿದ್ದಾರೆ.

ಈ ಧ್ಯಾನ ಪೀನ ಎಲ್ಲ ಇದೆಯಲ್ಲ ಅದರ ಬಗ್ಗೆ ನಮ್ಮ ಗಮನವಿಲ್ಲ, ಇಲ್ಲಿಯವರೆಗೆ ಅದು ನಮಗೆ ಬೇಕಾಗಿಯೂ ಇರಲಿಲ್ಲ. ನಮ್ಮದೇನಿದ್ದರೂ ಬುಲ್ ಪೀನ ಎತ್ತುವುದು ಮತ್ತು ಹಾರೋದು ಇಷ್ಟೇ ಕೆಲಸವಾಗಿತ್ತು. ಆದರೆ ಈಗ ಅದರ ಜೊತೆಗೆ ಧ್ಯಾನ ಎಂಬುದನ್ನೂ ಮಾಡಿ ಬೇಡಿಕೊಳ್ಳಿ ಎಂದು ಕೃತ್ರಿಮ ಮಾರ್ಗೋಪಾಯ ಮಂಡಳಿಯ ಮುಖ್ಯಸ್ಥರೇ ಹೇಳಿದ್ದರಿಂದ ಈರುಳ್ಳಿ ಉಪ್ಪಿಟ್ಟನ್ನೂ ನಿಲ್ಲಿಸಿ, ಕೈಮುಗಿದು ಬರುವ ಎಲ್ಲ ಚಿಲ್ಲರೆ ಶ್ಲೋಕಗಳನ್ನೂ ಹೇಳುತ್ತಿದ್ದೇವೆ.

ಸಂಸ್ಕೃತ ಭಾಷೆಯಲ್ಲಿ ನಮಗೆ ಪಾಂಡಿತ್ಯವಿಲ್ಲ. ಕಾಳೀದಾಸನ ಕೃತಿಗಳ ಮೇಲೆ ಒಂದೇ ಪ್ರಶ್ನೆಯನ್ನು ಕೇಳಿದರೂ ನಾವು ಜಾಗ ಬಿಟ್ಟು ಓಡಬೇಕಾಗುತ್ತದೆ ಅಥವಾ ಯಾವುದೋ ಸಬೂಬು ಕೊಟ್ಟು ತಪ್ಪಿಸಿಕೊಳ್ಳಬೇಕಾಗುತ್ತದೆ. ಸಬೂಬು ಕೊಡುವುದಕ್ಕೆ, ಸುಳ್ಳು ಹೇಳುವುದಕ್ಕೆ ನಮಗೆ ಬೇರೆಯವರು ಕಲಿಸಿಕೊಡಬೇಕೇ? ನಮಗೆ ನಿಜವಾದ ಪಾಂಡಿತ್ಯ ಇರೋದು ಅಂತಹ ವಿಷಯಗಳಲ್ಲೇ[ಎಲ್ಲಾ ಕ್ರಿಮಿನಲ್ಸ್ ಗಳಿಗೂ ಹಾಗೇ ತಾನೇ?]ಸಂಸ್ಕೃತ ಶ್ಲೋಕಗಳ ಕೆಲವು ಪದಗಳ ಸಂಧಿ ಸಮಾಸಗಳನ್ನು ಒಡೆದು ಹಾಕಿದರೆ ಪುನಾರಚಿಸಲು ನಮಗೆ ಸಾಧ್ಯವಿಲ್ಲ; ಆದರೆ ಘನಪಾಠಿಗಿಂತ ಘನಪಾಠಿಯೋ ಎಂಬಂತೆ ಪೋಸು ಕೊಡುವುದಕ್ಕೆ ಮಾತ್ರ ನಾವು ಕಮ್ಮಿ ಇಲ್ಲ.

ಚಿಲ್ಲರೆ ಶ್ಲೋಕಗಳನ್ನೂ ನೆಟ್ಟಗೆ ಇದುವರೆಗೆ ಕೇಳದಿದ್ದ ನಮ್ಮ ತಾಲಿಬಾನ್ ಮಂದಿಗೆ ನಮ್ಮ ’ಮಹಾಪಾಂಡಿತ್ಯ’ದ ಅರಿವಾಗಿ, “ನವನವೀನ”. “ನಿತ್ಯನೂತನ”, “ನಿತ್ಯಾನ್ವೇಷಣ” ಎಂಬಂತಹ ಕೆಲವು ಪದಗಳನ್ನು ಸೇರಿಸಿ ನಮಗೆ ಬಿರುದನ್ನು ದಯಪಾಲಿಸಲು ಹೊರಟಿದ್ದಾರೆ. ಅದೆಲ್ಲ ಹೌದು, ಆದರೆ ಯಾವುದೇ ವಿದ್ವಾಂಸ ಸರಿಯಾಗಿ ಒಂದೇ ಒಂದು ಪ್ರಶ್ನೆಯನ್ನು ಕೇಳಿದರೂ ಉತ್ತರಿಸಲಾಗದ ನಾವು, “ಈಗ ನಮಗೆ ಸಮಯವಿಲ್ಲ, ಇಪ್ಪತ್ನಾಲ್ಕು ಗಂಟೆಗಳ ಸಮಯದಲ್ಲಿ ಹೇಳ್ತೇವೆ” ಎಂದು ನುಣ್ಣಗೆ ಜಾರಿಕೊಳ್ಳುತ್ತೇವೆ. ಈಗಲೂ ನಮಗೆ ಅದೇ ದಾರಿಬಿಟ್ಟರೆ ವಿದ್ವಾಂಸರನ್ನು ಎದುರಿಸುವ ಯಾವ ಸಾಮರ್ಥ್ಯವೂ ಇಲ್ಲ. ಆ ವಿಷಯದಲ್ಲಿ ನಮ್ಮ ಪವಾಡ ನಡೆಯೋದಿಲ್ಲ ಎಂಬುದೂ ನಮಗೆ ಗೊತ್ತು. ಹೀಗಾಗಿ ಸುಮ್ಮನಾಗಿದ್ದೇವೆ.

ನಮ್ಮ ಬಾವಯ್ಯ ಮತ್ತಿತರ ಕೆಲವರಿಗೆ ಜಾಮೀನು ಸಿಗದ ಕಾರಣ ತಲೆಮರೆಸಿಕೊಂಡಿದ್ದಾರಲ್ಲ, ದಕ್ಷಿಣ ಕರಾವಳಿ, ಮಲೆನಾಡು ಇಂತಲ್ಲೆಲ್ಲ ಕೆಲವು ಹಳ್ಳಿಗಳ ಕಡೆಗೆ ಎಲ್ಲೆಲ್ಲೂ ಅದೇ ಸುದ್ದಿ ಹಬ್ಬಿದೆಯಂತೆ. ಬಾವಯ್ಯ ಅಡಗಿಕೊಂಡಿಲ್ಲ ಎಂದು ನಾವು ಹೇಳಿದರೂ ಅವರೆಲ್ಲ ಒಪ್ಪುತ್ತಿಲ್ಲ ಯಾಕೆಂದರೆ ಶಾಲು ಹಿಡಿದು ಪ್ರಸಾದಕ್ಕಾಗಿ ಅಂಗಲಾಚುವ ಪೋಸು ಕೊಡುತ್ತಿದ್ದ ಮಠದ ಮಹಾಮಂತ್ರಿ ಬಾವಯ್ಯನವರು ಆ ಜಾಗದಲ್ಲಿ ಸಮಯದಲ್ಲಿ ಕಾಣುತ್ತಿಲ್ಲ. ಪ್ರತಿನಿತ್ಯ ಕೆಲಸಕ್ಕೆ ಬಾರದ ಪುಸ್ತಕದ ಲೋಕಾರ್ಪಣೆಯ ಸಮಯದಲ್ಲಿ ವೇದಿಕೆಯ ಮೇಲೆ ಮಂಡಿಸುತ್ತಿದ್ದ ’ವಿದ್ವಾನ್’ ಬಾವಯ್ಯ ಈಗ ಕಾಣುತ್ತಿಲ್ಲ. ಬಾವಯ್ಯ ಅಡಗಿಕೊಂಡ ಕಡೆ ಉಳಿದವರಿಲ್ಲ. ಬಾವಯ್ಯನಿಗೆ ಹೈಟೆಕ್ ಅಡಗುದಾಣದ ವ್ಯವಸ್ಥೆ ಮಾಡಿದ್ದೇವೆ ನಾವು. ಉಳಿದವರು ಅಲ್ಲಿ ಇಲ್ಲಿ ನಮಗೆ ಬೇಕಾದವರ ಹಳ್ಳಿಮನೆಗಳಲ್ಲಿ ಅಡಗಿದ್ದಾರೆ. ಎಲ್ಲರ ಜೊತೆಗೂ ನಮ್ಮ ಸಂಪರ್ಕವಿದೆ ಮತ್ತು ಯಾರೂ ಅವರನ್ನು ಎಳೆದುಕೊಂಡು ಹೋಗದಂತೆ ವ್ಯವಸ್ಥೆ ಮಾಡಿದ್ದೇವೆ ನಾವು.

ಉದ್ದಾನುದ್ದಕ್ಕೂ ಜನ ಹೇಗೆ ಏಳುತ್ತಿದ್ದಾರಂತೆ ಎಂದರೆ ಕೇವಲ ಸೀಮಿತ ಜನಾಂಗವೊಂದೇ ಅಲ್ಲದೇ ಈಗೀಗ ಎಲ್ಲರೂ ಸ್ಪಂದಿಸಲು ಆರಂಭಿಸಿದ್ದಾರಂತೆ, ತಿರುಗಿ ಬೀಳುತ್ತಿದ್ದಾರಂತೆ. ನಾಯಿ ಭಟ್ಟ ವೈದ್ಯರನ್ನು ಹೊಡೆದಾಗಿನಿಂದ ಆರಂಭಗೊಂಡ ನೀಚ ಇತಿಹಾಸಕ್ಕೆ ಹಲವು ಸಾವಿರ ಅಧ್ಯಾಯಗಳು ಸೇರ್ಪಡೆಗೊಂಡು ನೂರಾರು ಜನ ದೂರು ಜಮಾವಣೆಗಾಗಿ ತುದಿಗಾಲಲ್ಲಿ ನಿಂತಿದ್ದಾರಂತೆ.

ಮಂತ್ರಾಕ್ಷತೆ ಕೊಡುವಾಗ ಸುಂದರ ಮಡದಿಯರ ಜೊತೆ ಬರುತ್ತಿದ್ದ ಕುರುಡುಭಕ್ತರ ಮಡದಿಯರ ಕಡೆಗೆ ಸಂಪೂರ್ಣ ಗಮನ ಹರಿಸಿ, ಕಣ್ತುಂಬ ತುಂಬಿಕೊಂಡು ಜೊಲ್ಲು ಸುರಿಸುತ್ತಿದ್ದ ನಮ್ಮ ಗಮನ ಸದ್ಯ ಮಂಗಳವಾರದಮೇಲಿದೆ. ಮಂಗಳವಾರ ನಮಗೇ ಜಾಮೀನು ತಿರಸ್ಕೃತವಾದರೆ ಏನು ಮಾಡೋದು? “ಹಾಗಾಗುದಿಲ್ಲ” ಅಂತ ಪಾಂಡೆರಾಯ ಹಲುಬಿದ್ದಾನೆ ನಿಕ, ಒಂದೊಮ್ಮೆ ಆ ಕಡೆಯ ಪ್ರಬಲರಿಂದ ಒತ್ತಡ ಹೆಚ್ಚಿ, ಅರ್ಜಿ ತಿರಸ್ಕೃತವಾಗಿಬಿಟ್ಟರೆ ಆಗೇನು ಮಾಡೋದು? ಎಂಬುದರ ಬಗ್ಗೆ ನಮ್ಮ ಗಮನ ಹರಿದಿದೆ.

ಇನ್ನೊಬ್ಬ ದೂರುದಾರೆ ಮಗುವಿನೊಟ್ಟಿಗೆ, ಅದೇ ನಮಗೆ ಹುಟ್ಟಿದ ಮಗುವಿನೊಟ್ಟಿಗೆ ಬರುತ್ತಾಳೆ, ದೂರು ದಾಖಲಿಸಿ, ಮಾಧ್ಯಮಗಳೆದುರು ಬರುತ್ತಾಳೆ ಎಂಬ ಸೂಟು ಸಿಕ್ಕಿದ ತಕ್ಷಣ ನಮ್ಮ ತಾಲೀಬಾನ್ ಅಲ್ಲಿ ಕಾರ್ಯನಿರತವಾಗಿ, ಅವಳನ್ನು ಎತ್ತಾಕಿಕೊಂಡು ಹೋಗಿ ಸದ್ಯ ಗೋಪ್ಯವಾಗಿ ಗೃಹಬಂಧನದಲ್ಲಿರಿಸಿದೆ. ಅವಳೂ ಬಂದುಬಿಟ್ಟಿದ್ದರೆ ನಾವು ಕುಳಿತಲ್ಲೇ ಬುಲ್ ಪೀನ ಒದ್ದೆಮಾಡಿಕೊಳ್ಳುವ ಪ್ರಮೇಯವಿತ್ತು. ನಮ್ಮ ಇನ್ನೊಂದು ಸಖಿಗೆ ಹುಟ್ಟಿದ ಮಾಣಿಗೆ ನಾವೇ ಹೋಗಿ ನಿಂತು ಮುಂಜಿ ಮಾಡಿಸಿದ್ದೇವೆ. ಅಡ್ಡಡ್ಡ ಬೆಳೆದ ಅವಳು ದೂರು ಕೊಟ್ಟರೆ ಮನೆತನದ ಹೆಸರು ಹಾಳಾಗುತ್ತದೆಂದು ಕೊಡದಿರಲು ನಿರ್ಧರಿಸಿ ನಮ್ಮ ಬಳಗದಲ್ಲೇ ಇದ್ದಾಳೆ.

ಯಾವ ಸನ್ಯಾಸಿಗೂ ಸಿಗದಂತ ಶಿಷ್ಯರು ನಮಗೆ ಸಿಕ್ಕಿದ್ದಾರೆಂದು ನಾವು ಹೇಳಿದ್ದು ಸುಮ್ಮನೆ ಅಲ್ಲ; ನಾವು ಮತ್ತು ನಮ್ಮ ಬಾವಯ್ಯ “ಈ ಪ್ರಸಾದವನ್ನು ಎಲ್ಲರೂ ಸ್ವೀಕರಿಸಿ, ಜನ್ಮಾಂತರಗಳ ಪಾಪಗಳಿಂದ ಮುಕ್ತಿ ಪಡೆದು ಸೀದಾ ಸ್ವರ್ಗಕ್ಕೆ ಹಾದಿ ಕ್ಲೀಯರ್ ಮಾಡಿಕೊಳ್ಳಿ” ಎಂದರೆ ಸಾಕು. ನಿಂತಲ್ಲೇ ಮೂರು ಸುತ್ತು ಹೊಡೆದು, ಅಡ್ಡಬಿದ್ದು, ಭಕ್ತಿಯಿಂದ, ನಾವು ನಮ್ಮ ಬಾವಯ್ಯ ಕೊಡುವ ಕಕ್ಕವನ್ನೂ ವಿಶೇಷ ಪ್ರಸಾದವೆಂದು ಸ್ವೀಕರಿಸುವ ಮಂದಿ ಇನ್ನೂ ಇದ್ದಾರೆ. ಹಳದೀ ತಾಲಿಬಾನ್ ಸೇವಕರು ಅವರ ಮತ್ತು ನಮ್ಮ ನಡುವೆ ’ಧರ್ಮ ಸೇತು’ವಾಗಿದ್ದಾರೆ. ಹಳದೀ ಸೇವಕರು ಸ್ವೀಕರಿಸುವ ’ಪ್ರಸಾದ’ವೇ ಬೇರೆ. ಹೇಗೂ ನಮಗೆ ಹಲವಾರು ವಿಧದ ಪ್ರಸಾದ ತಯಾರಿಸಿ ಗೊತ್ತಲ್ಲ? ಅದಕ್ಕೆ ನಾವು ಸಪರೇಟಾಗಿ ವ್ಯವಸ್ಥೆ ಮಾಡುತ್ತೇವೆ.

ಆದರೆ, ಆ ಸಮಾನರಿಂದ ಕೆಲವು ಜನರಿಗೆ ನಮ್ಮ ಮುಖವಾಡವೆಲ್ಲ ಗೊತ್ತಾಗಿಬಿಟ್ಟಿದೆ. ನಾವು ಯಾವುದೇ ಯೋಜನೆ ಹಾಕಿದರೂ ಮೂವರು ಮತ್ತೊಬ್ಬ ಬರುತ್ತಾರೆ ಬಿಟ್ಟರೆ ಮೊದಲಿನ ಹಾಗೆ ಜನ ಸೇರುವುದಿಲ್ಲ. ಹಣ ಬರುವುದಿಲ್ಲ. “ಸಮರ್ಪಣೆಗೆ ಸದವಕಾಶ” ಎಂದು ನಾವು ಹಾಕಿಸುತ್ತಲೇ ಇರುತ್ತೇವೆ. ಆದರೆ ಸಮರ್ಪಣೆ ಮಾಡಿದ್ದೆಲ್ಲ ಅಡ್ಡಕಸುಬಿಯಾದ ನಮ್ಮ ಕಚ್ಚೆಹರುಕು ವ್ಯವಹಾರದ ಸಮಸ್ಯೆಗಳನ್ನು ಮುಚ್ಚುವ ಸಲುವಾಗಿ ಸೂಟ್ ಕೇಸ್‍ಗೆ ಹೋಗುತ್ತಿರುವುದರಿಂದ, ಇದು ದೇವರ ಕೆಲಸಕ್ಕೆ ಹೋಗುವ ಹಣವಲ್ಲ ಎಂಬುದು ಅವರಿಗೆಲ್ಲ ಖಾತ್ರಿಯಾಗಿಬಿಟ್ಟಿದೆ.

ಒಂದು ಕಡೆ ಮೇರು, ಇನ್ನೊಂದು ಕಡೆ ಪ್ರಪಾತದಂತ ಇಳಿಜಾರು, ಎರಡರ ನಡುವಿನ ಅತಿಕಿರಿದಾದ ಕಾಲುದಾರಿಯಲ್ಲಿ ತಲೆಗೆ ಕಾವಿ ಎಳೆದುಕೊಳ್ಳುತ್ತ ಮುಂದಕ್ಕೆ ಸಾಗಲೆತ್ನಿಸುತ್ತಿರುವ ನಮ್ಮ ಸನ್ಯಾಸದಂಡಕ್ಕೆ ಯಾವ ಮರ್ಯಾದೆಯೂ ಉಳಿದಿಲ್ಲ; ಬದಲಿಗೆ “ಅವನನ್ನು ಕೂರಿಸಿದ್ದೇ ದುರ್ದಂಡ” ಅಂತ ಎಲ್ಲರೂ ಆಡಿಕೊಳ್ಳುತ್ತಿದ್ದಾರಂತೆ.

ಇಷ್ಟೆಲ್ಲ ಇದ್ದರೂ, ಸೀಟಿನ ಪ್ರಭಾವ ಜನರ ಮೇಲೆ ಎಷ್ಟಿದೆಯೆಂದರೆ ಸೀಟಿಗಾಗಿ ವೋಟು ಎಂಬ ರೀತಿಯಲ್ಲಿ ಸೀಟಿಗೆ ಮರ್ಯಾದೆಕೊಡುವುದಕ್ಕಾಗಿ ಇನ್ನೂ ಮೇಲಿಂದಮೇಲೆ ನಮಗೆ ಜೈ ಅನ್ನುವವರಿದ್ದಾರೆ; ಅವರ ಮನದಾಳದಲ್ಲೂ ಸಹ ನಮ್ಮ ವಿರುದ್ಧದ ದನಿಯೇ ಇದೆಯೆಂಬುದು ಬರುತ್ತಿರುವ ಧಗೆಯಿಂದ ಗೊತ್ತಾಗುತ್ತಿದೆ.

ನಮ್ಮ ಬಾವಯ್ಯ ಮುಂತಾದವರು ಹಿಂದೆ ಮಾಧ್ಯಮಗಳಲ್ಲಿ ಮಾತುಕತೆಗೆ ಕುಳಿತು, ಗಂಟಲು ಹರಿದುಹೋಗುವಷ್ಟು ಗಂಟಾಘೋಷವಾಗಿ ಸುಳ್ಳನ್ನೇ ಸತ್ಯವೆಂದು ಮಹಾಸಮರ್ಥನೆಗಳನ್ನು ಮಾಡಿದ್ದರು. ಬಾವಯ್ಯನ ಮೇಲೆ ದೂರು ದಾಖಲಾಗಿ ಅವುಗಳಲ್ಲೆಲ್ಲ ಬಾವಯ್ಯನಿಗೇ ಜಯವಾದ ಸಂಗತಿಯನ್ನು ವಿಶದ ಪಡಿಸಿ ಭುಜ ತಟ್ಟಿಕೊಂಡಿದ್ದರು. “ಕೆಲವರು ತಿಳಿದುಕೊಂಡ ಹಾಗೆ ನಾವಿಲ್ಲ. ನಾವೇನೆಂಬುದು ಸಮಾಜಕ್ಕೆ ಗೊತ್ತಿದೆ. ನಮ್ಮನ್ನು ಅರಿಯದವರು ಏನನ್ನೋ ಹೇಳಬಹುದು. ಆದರೆ ನಾವು ಹಾಗಲ್ಲ.” ಎಂದೆಲ್ಲ ಅಪ್ಪಣೆ ಕೊಡಿಸಿದ್ದರು. ಇಂದು ಅದೇ ಬಾವಯ್ಯ ಸದ್ಯ ಅಜ್ಞಾತವಾಸದಲ್ಲಿದ್ದಾರೆ. ಅಷ್ಟೇ ಅಲ್ಲ, ಮಾಧ್ಯಮಗಳಿಗೆ ಮಾತುಕತೆಗೆ ಕರೆದರೆ ಯಾರೂ ಬರುವ ಸ್ಥಿತಿಯಲ್ಲಿಲ್ಲ. ಹಾವಾಡಿಗ ಮಹಾಸಂಸ್ಥಾನದ ಹಲವು ಮಸಲತ್ತುಗಳು ಜಗಜ್ಜಾಹೀರುಗೊಂಡ ಬಳಿಕವೂ, ಎಂಜಲು ಕಾಸಿಗೆ ಕೈಯೊಡ್ಡುವ ಚಿಲ್ಲರೆ ಸಂಪಾದಕರನ್ನು ಹಿಡಿದು ಸ್ಪಷ್ಟೀಕರಣ ನೀಡುವ ವ್ಯರ್ಥ ಪ್ರಯತ್ನದಲ್ಲಿ ನಾವು ನಿರತರಾಗಿದ್ದೇವೆ.

ಈ ನಡುವೆ ನಮ್ಮ ಗುಪ್ತಚರರು ಇನ್ನೂ ಹಲವು ದೂರುಗಳು ದಾಖಲುಗೊಳ್ಳುವ ಸಂಭವನೀಯತೆಯ ಬಗ್ಗೆ ಮಾಹಿತಿ ತಂದಿದ್ದಾರೆ. ಯಾರ್‍ಯಾರು ಎಲ್ಲೆಲ್ಲಿ ದೂರು ದಾಖಲಿಸುತ್ತಾರೆ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಈಗೀಗ ದೂರು ಕೊಡುವವರೂ ಸಹಿತ ತಮ್ಮ ರಕ್ಷಣೆಯ ಜವಾಬ್ದಾರಿಯನ್ನು ತಾವೇ ನಡೆಸಿಕೊಂಡ ನಂತರವೇ ದೂರು ದಾಖಲಿಸುತ್ತಾರೆ. ನಮ್ಮ ನೆಟ್ ವರ್ಕ್ ಹೇಗಿದೆಯೆಂದರೆ, ಎಲ್ಲೇ ಯಾರೇ ದೂರು ಕೊಟ್ಟರೂ ಅರ್ಧಗಂಟೆಯೊಳಗೆ ನಮಗೆ ಮಾಹಿತಿ ಸಿಕ್ಕು ನಮ್ಮ ಹಳದೀ ಸೇವಕರು ಸಾವಿರ ಸಂಖ್ಯೆಯಲ್ಲಿ ಅಲ್ಲಿ ಮುತ್ತಿಗೆ ಹಾಕುತ್ತಾರೆ. ದೂರುದಾರರು ಅಲ್ಲೇ ಇದ್ದರೆ ಎತ್ತೊಯ್ಯಲೂ ಮುಗಿಸಲೂ ಹೇಸುವುದಿಲ್ಲ.

ಎಲ್ಲದರ ಮುಂದಾಳತ್ವ ನಮ್ಮದೇ ಅಂತ ನಾವೇ ಹೇಳಿದ್ದೇವಲ್ಲ. ಆದರೂ ಯಾವುದೂ ನಮಗೆ ತಿಳಿದಿಲ್ಲ ಅಂತಲೇ ಹೇಳುತ್ತಿರುತ್ತೇವೆ ನಾವು. ಈ ಕಾರಣದಿಂದ ದೂರುದಾರರು ಅನಿರೀಕ್ಷಿತವಾಗಿ ತಮ್ಮ ಗುರುತು ಪರಿಚಯ ಬಹಿರಂಗ ಪಡಿಸದೇ, ಎಲ್ಲೆಲ್ಲೋ ದೂರು ನೀಡಬಹುದು; ಇದೇ ನಮಗೊದಗಿದ ಇನ್ನೊಂದು ತೊಡಕು. ಯಾರೆಂದು ಗೊತ್ತಾಗಿಬಿಟ್ಟರೆ ಅವರ ಬಂಧು-ಬಳಗಕ್ಕೆಲ್ಲ ಫೋನ್ ಮೂಲಕ ಬೆದರಿಸಿ ಬಂದೋಬಸ್ತು ಮಾಡಿಸಿ, ದೂರು ಮರಳಿ ಪಡೆಯುವಂತೆ ಮಾಡುವ ಸಾಮರ್ಥ್ಯ ನಮಲ್ಲಿ ಈಗಲೂ ಇದೆ. ನಮ್ಮಲ್ಲಿ ಸಾಮರ್ಥ್ಯ ಕಮ್ಮಿ ಆಗಿದೆಯೆಂದು ತಿಳಿದುಕೊಳ್ಳೋದು ಬೇಡ.

ನಮಗೆ ಬಂದ ಇನ್ನೊಂದು ಮಾಹಿತಿಯ ಪ್ರಕಾರ. 2016ರ ಜನವರಿ 17ರಂದು ನಾವು ಸೀಟನ್ನು ತ್ಯಾಗಮಾಡಲೇಬೇಕಾಗಿ ಬರುತ್ತದೆ ಎಂದು ಯಾವನೋ ಜ್ಯೋತಿಷಿ ಬಹಳ ಮೊದಲೇ ಹೇಳಿದ್ದಾನಂತೆ. ಅವನ ಮಾತಿಗೆಲ್ಲ ನಾವು ಬೆಲೆಕೊಡಬೇಕಾಗಿಲ್ಲ ಬಿಡಿ. ಕೇರಳದ ಜನರಿಗೆ ಹೇಳಿ ಕೋಗಾರ್ ಘಾಟಿಯ ಕಾಡಿನಲ್ಲಿ ಏನೇನು ಮಾಡಬೇಕೋ ಮಾಡಿಬಿಡಿ, ಹಣ ಕೊಡುತ್ತೇವೆ ಎಂದಿದ್ದೇವೆ ನಾವು. ಹಳ್ಳಿ ಜನರಿಗೆ ನಮ್ಮ ಪೂರ್ಣ ಮಾಹಿತಿ ಸಿಕ್ಕಿಲ್ಲ. “ಅಮೆರಿಕದಿಂದ ದುಡ್ಡು ಬರ್ತದಂತೆ”, “ಉತ್ತರದ ಕಡೆಯಿಂದ ದುಡ್ಡು ಬರ್ತದಂತೆ” ಅಂತ ಮಾತಾಡಿಕೊಳ್ತಾರಂತೆ. ಆದರೆ ನಮಗೆ ಇಂದು ಅಲ್ಲಿ ಪೈಸೆಯೂ ಹುಟ್ಟುತ್ತಿಲ್ಲ. ಇಲ್ಲೇ ಹಲವು ಯೋಜನೆಗಳನ್ನು ಹಾಕಿ ಒಟ್ಟುಮಾಡುತ್ತಿದ್ದೇವೆ ನಾವು.

ಹಾಂ…..ಈಗ ಮಾವಂದಿರು ಗಸ್ತಿನಲ್ಲಿ ಬರುವ ಹೊತ್ತಾಯಿತು. ಮತ್ತೊಮ್ಮೆ ಹನುಮತ್ ಸ್ಮರಣೆಯೊಂದಿಗೆ ನಮ್ಮ ಪ್ರವಚನವನ್ನು ಮುಗಿಸ್ತಾ ಇದೇವೆ.

ಉಲ್ಲಂಘ್ಯ ಸಿಂಧೋ ಸಲಿಲಂ ಸಲೀಲಂ ಯಃ ಶೋಕವಹ್ನಿಂ ಜನಕಾತ್ಮಜಾಯಾಃ |
ಆದಾಯ ತೇನೈವ ದದಾಹ ಲಂಕಾಂ ನಮಾಮಿ ತಂ ಪ್ರಾಂಜಲಿರಾಂಜನೇಯಂ || ”

Thumari Ramachandra

Source: https://www.facebook.com/groups/1499395003680065/permalink/1666427226976841/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s