ಬಾವಯ್ಯಾ ಓಡು, ಜನ ಎಲ್ಲ ಎದ್ದಿದಾರೆ, ಕಲ್ ಹೊಡ್ದು ಸಾಯಿಸಿದ್ರೆ ಕಷ್ಟ

ಬಾವಯ್ಯಾ ಓಡು, ಜನ ಎಲ್ಲ ಎದ್ದಿದಾರೆ, ಕಲ್ ಹೊಡ್ದು ಸಾಯಿಸಿದ್ರೆ ಕಷ್ಟ

ಹುಬ್ಬಳ್ಳಿಕಡೆಗೆ ನಿನ್ನೆ ಒಂದು ಘಟನೆ ಆಗಿದ್ದು ಕೇಳಿಬಂತಲ್ಲ. ಅದೇ ಅವನ್ಯಾವನೋ ಪ್ರಿನ್ಸಿಪಾಲ, ಅವನ ಮೋಜು, ಮಸ್ತಿ, ಮಜಾ, ಲಡಕೀ ಖಯಾಲಿ, ಅದನ್ನೆಲ್ಲ ಕಂಡ ವಿದ್ಯಾರ್ಥಿಗಳು ದೂರು ಕೊಟ್ರೆ ಪ್ರಯೋಜನ ಇಲ್ಲ ಎಂಬ ತೀರ್ಮಾನಕ್ಕೆ ಬಂದ ಹಾಗಿತ್ತು.

ದಕ್ಷ ಅಧಿಕಾರಿ ಡಿ.ಕೆ.ರವಿಯವರ ಅನುಮಾನಾಸ್ಪದ ಅಂತ್ಯದ ನಂತರ ಇಡೀ ಕರ್ನಾಟಕದ ಜನತೆಯೇ ಎದ್ದು ನಿಂತರೂ ಸಿದ್ದಣ್ಣನ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಸಿ.ಬಿ.ಐ ತನಿಖೆಗೆ ಕೊಡುವುದೇ ಬೇಡವೆಂದು ಪಟ್ಟು ಹಿಡಿದು ಕುಳಿತಿತ್ತು. ನಂತರ ಸಾರ್ವಜನಿಕರ ಗಲಾಟೆ ತಾಳಲಾರದೆ ಬಹಳ ತಡವಾಗಿ ಸಿ.ಬಿ.ಐಗೆ ವಹಿಸಿದರು. ಅಲ್ಲಿಂದೀಚೆಗೆ ಜನತೆಗೆ ಸಿದ್ದಣ್ಣನ ಸರ್ಕಾರದ ಮೇಲೆ ನಂಬಿಕೆಯೇ ಹೊರಟು ಹೋಗಿದೆ ಎಂಬ ಸಂದೇಶಗಳು ತುಮರಿಗೆ ಲಭಿಸಿವೆ.

ಅದಕ್ಕೆ ಪುರಸ್ಕಾರವೋ ಎಂಬಂತಿದೆ ನಿನ್ನೆಯ ಹುಬ್ಬಳ್ಳಿ ಘಟನೆ. ಮದವೇರಿದ್ದ ಮನ್ಮಥ ಕುಮಾರನಿಗೆ ಸರಿಯಾಗಿ ಮದವಿಳಿಸುವುದರ ಜೊತೆಗೆ ಆತನ ಹೊಚ್ಚ ಹೊಸ ಕಾರಿಗೂ ಗತಿ ಕಾಣಿಸಿ ಮತ್ತೆ ಜೀವನದಲ್ಲಿ ಇಂತಹ ಕೆಲಸಕ್ಕೆ ಕೈಹಾಕದಷ್ಟು ವ್ಯವಸ್ಥೆ ಮಾಡಿದ್ದಾರೆ ಹುಬ್ಬಳ್ಳಿ ಮಂದಿ ಎಂದು ಆ ಕಡೆಯ ಸ್ನೇಹಿತರೊಬ್ಬರು ಸಂದೇಶ ಕೊಟ್ಟಿದ್ದಾರೆ.

ಈಗ ಇಲ್ಲಿಯೂ ಸಹ ಅಂತದ್ದೊಂದು ಸನ್ನಿವೇಶ ಎದುರಾಗಬಹುದೇ ಎಂದು ತುಮರಿ ಚಿಂತೆಗೀಡಾಗಿದ್ದಾನೆ. ಯಾಕೆಂದ್ರೆ ನಮ್ಮ ಶೀಗಳಿಗೆ ಈಗ ಪುಕುಪುಕು ಹತ್ತಿದೆ. ನಮ್ಮ ಹಾವಾಡಿಗ ಶೀಗಳು ಮೊನ್ನೆಯವರೆಗೂ ತಾವು ಶ್ರೀರಾಮನ ಅಪರಾವತಾರ ಎಂದು ಬೀಗುತ್ತ ಪ್ರೊವೊಕೇಟಿವ್ ಭಾಷಣ ಬಿಗಿಯುತ್ತಿದ್ದರು, ಬರುಬರುತ್ತ ಎದುರಿಗೆ ಕುಳಿತುಕೊಳ್ಳುವ ಜನರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ.

ಕೃಷ್ಣ ಜನ್ಮಾಷ್ಟಮಿಯ ಮರುಸೃಷ್ಟಿಯನ್ನೇ ಮಾಡುತ್ತೇವೆ ಬನ್ನಿ, ಇನ್ನೇನನ್ನೋ ಮಾಡ್ತೇವೆ ಬನ್ನಿ, ಮತ್ತೇನನ್ನೋ ಮಾಡ್ತೇವೆ ಬನ್ನಿ ಎಂದು ಫೋನ್ ಮಾಡಿಸಿ ವಿನಂತಿಸಿ, ಬಸ್ ವ್ಯವಸ್ಥೆ ಮಾಡಿಕೊಟ್ಟು, ಬಂದುಹೋಗುವುದಕ್ಕೆ ಭಕ್ಷೀಸು ಕೊಟ್ಟರೂ ಜನ ಬರಲೊಪ್ಪುತ್ತಿಲ್ಲ. ಕೌರವನ ಅಸ್ಥಾನದಲ್ಲಿ ಕಡೇ ಪಕ್ಷ ಕೊನೆವರೆಗೂ ಒಂದಷ್ಟು ಜನ ಇದ್ದರು; ಇಲ್ಲಿ ಅದೂ ಇರೋ ಹಾಗೆ ಕಾಣಿಸ್ತಿಲ್ಲ. ಕುಳ್ಳ ಬಾವಯ್ಯ ಯಾವ ಗಳಿಗೆಯಲ್ಲಿ ಯಾವ ಬಾಗಿಲಿನಿಂದ ಎಲ್ಲಿ ಮಾಯವಾಗುತ್ತಾನೋ ಗೊತ್ತಿಲ್ಲ!

[ಕವಿ ಕುವೆಂಪು ಅವರ ಕ್ಷಮೆಕೋರಿ]

ಇಂತಿಪ್ಪ ದಿನಂಗಳ ನಡುವೆ ಕುಳ್ಳಯ್ಯ ಕೇಳಿದ-

ಆನಂದಮಯ ಕೂಸಿನ ಹೃದಯ, ಏತಕೆ ಭಯ ಮಾಣೀ..?
ಸೂರ್ಯೋದಯ ಚಂದ್ರೋದಯ, ಏಕಾಂತದಲೇ ಕಾಣೀ…
ಆನಂದಮಯ ಕೂಸಿನ ಹೃದಯ…

ಕಳ್ಳಯ್ಯ ಉತ್ತರಿಸಿದ- ಬಾವಯ್ಯಾ…

ಬಿಸಿಲಿದು ಬರಿ ಬಿಸಿಲಲ್ಲವೋ, ಒಳಗಿನ ಧಗೆ ಕಾಣೋ…
ಹೊಸಿಲಿನ ಹೊರಗಿಳಿದರೆ ಕಲ್ ಹೊಡೆವರೋ ಜಾಣೋ…..
ಆನಂದಮಯ ಕೂಸಿನ ಹೃದಯ…

ರವಿವದನವೇ ಯಮಸದನವೋ, ಬರಿ ಕಣ್ಣಿಗೆ ಮಣ್ಣೋ.
ಮಾವಂದಿರ ಯೂನಿಫಾರ್ಮೇ ಶವಮುಖದಾ ಕಣ್ಣೋ.
ಆನಂದಮಯ ಕೂಸಿನ ಹೃದಯ…

ಉದಯದೊಳೇ ಅಡ್ ಗೇಟ ಕಾಣ್, ಅದೇ ಅಮೃತದ ಹಣ್ಣೋ.
ಸ್ತ್ರೀ ಇಲ್ಲದೆ ಗುರು ಕುರುಡನೋ, ಸ್ತ್ರೀ ಕಾವ್ಯದ ಕಣ್ಣೋ.
ಆನಂದಮಯ ಕೂಸಿನ ಹೃದಯ…

ಅಂಗು-ಟಿಂಗ, ಠಕ್ಕ-ಟಿಕ್ಕ, ಕಳ್ಳ-ಕುಳ್ಳ ಎಂಬ ಹಲವು ಬಿರುದುಗಳನ್ನು ಜನ ಈಗಾಗಲೇ ನೀಡಿ, ಕಳ್ಳನನ್ನು ಅಭಿಷಿಕ್ತ ಕ್ರಿಮಿನಿಲ್ ಗುರುಸಾರ್ವಭೌಮ ಎಂದು ಘೋಷಿಸಿದ್ದಾರೆ. ಮಾರುಕೇರಿ ಕಡೆಯ ಹೆಬ್ಬಾರರು ಸಂದೇಶ ಕೊಡ್ತಾರೆ-

“ಹೋಯ್ ನಾವೆಲ್ಲ ಚಪ್ಪಲ್ ಹಾರ ತಯಾರ್ಮಾಡಿತ್ತಂಬ್ರ. ಬದಿಂದ ಸುಮ್ನೆ ನೋಡ್ತಿತ್ ಕಾಣಿ. ಇಳ್ದ್ ಹೋತಲ್ಯೆ ಅಂವ. ನಾನು ಗಣಪಯ್ಯ ಮಾಸ್ತರು ಎಲ್ಲ ಸೇರಿ ಊರ್ ಜನಿಗೆಲ್ಲ ಹೇಳಾತ್ತ್. ಅಂವ ಇದ್ರೆ ಸಮಾಜ ಇನ್ನೂ ಹಾಳಾತ್ತಂಬ್ರ. ಮುಂಚೆ ನಾವೆಲ್ಲ ಪೆದ್ ಬಿದ್ದಿತ್ ಮಾರ್ರೆ. ಈಗ ನಮ್ಗೆಲ್ಲ ವಿಷಯ ಪೂರಾ ಗೊತ್ತಾಗಿತ್ತ್, ಇನ್ನು ಜಾಸ್ತಿ ದಿನ ಆ ಜಾಗದಲ್ಲಿ ಉಳ್ಸೂಕಾಗ.”

ಜನ ಎದ್ದಿದ್ದಾರೆ ಎಂಬುದು ಮನಸ್ಸಿಗೆ ಅರ್ಥವಾದರೂ ಕೌರವ ಕೊನೆಯವರೆಗೂ ಸೋಲೊಪ್ಪದ ದುರಭಿಮಾನದ ನಡೆ ಕಳ್ಳಯ್ಯನದು. ಗ್ಯಾಸ್ ಲೀಕಾಗುವ ಸೀಮೆ ಎಣ್ಣೆ ಗ್ಯಾಸ್ ಲೈಟಿಗೆ ಆಗಾಗ ಪಂಪು ಹೊಡೆದಂತೆ, ಇರುವ ಮರಿಸೈನ್ಯಕ್ಕೆ ಆಗಾಗ ಪಂಪು ಹೊಡೆಯುವ ಕಸರತ್ತು ನಡೆಸುತ್ತಿದ್ದಾನೆ.

ಮೊದಲು ಕಳ್ಳಯನ ಜೊತೆ ನಿಂತು ಫೋಟೋಗೆ ಪೋಸುಕೊಟ್ಟು, ಅವನನ್ನು ಬೆಂಬಲಿಸುತ್ತಿದ್ದ ಎಷ್ಟೋ ಜನ ಇಂದು ತುಮರಿ ಬರೆದದ್ದನ್ನು ಒಪ್ಪಿದ್ದಾರೆ, ಓದಿ, ನೋವಿನಲ್ಲೂ ನಲಿವನ್ನು ಉಂಡಿದ್ದಾರೆ. ಕೆಲವರು ಲೈಕು ಮಾಡುವಷ್ಟು ಧೈರ್ಯವನ್ನೂ ತೋರಿದ್ದಾರೆ; ಅಂದರೆ ನಮ್ಮ ಜನ ಇನ್ನೂ ಪೂರ್ತಿ ಗುಲಾಮರಾಗಿರಲು ತಯಾರಿಲ್ಲ ಎಂಬುದು ಸ್ಪಷ್ಟ. ತಾಲೀಬಾನಿಗಳ ಜೀವ ಬೆದರಿಕೆ ಮತ್ತು ಸಾಮಾಜಿಕ ಬಹಿಷ್ಕಾರಗಳೆಂಬ ಭಯಕ್ಕೆ ಒಳಪಟ್ಟು ತಮ್ಮೊಳಗನ್ನು ಹೊರಗೆ ತೋರಿಸದೇ ಜೈಕಾರ ಕೂಗುತ್ತಿದ್ದರು, ಈಗೀಗ ಜೈಕಾರ ನಿಲ್ಲಿಸಿ ತೆರೆಮರೆಗೆ ಸರಿದುಬಿಟ್ಟಿದ್ದಾರೆ.

ಹತ್ತಿಕೊಂಡ ದೋಸೆಗೆ ಕಾಲೀ ಸಟ್ಟುಗದ ಅಲಗು ತಾಗಿದಾಗ ನಿಧಾನವಾಗಿ ಮೇಲೇಳುವಂತೆ ಸಮಾಜದ ಸಮಸ್ತ ಜನ ಸುತ್ತ ಗ್ರಾಮಾಂತರ ಗಡಿಗುತ್ತುಗಳಲ್ಲಿ ಜಾಗ್ರತರಾಗುತ್ತಿದ್ದಾರೆ. ಕಾವಲಿಯನ್ನು ಬಿಟ್ಟೆದ್ದ ದೋಸೆಯಂತೆ ಮೇಲೆದ್ದಮೇಲೆ ತೊಂದರೆಯಿಲ್ಲ, ಇನ್ನೇನು ಕೆಲವೇ ದಿನಗಳಷ್ಟೆ ಬಾಕಿ ಉಳಿಯುತ್ತವೆ.

ತಮಗೆ ನ್ಯಾಯ ಸಿಗುತ್ತದೆ, ಸಮಾಜಕ್ಕೆ ಒಳಿತಾಗುತ್ತದೆ, ಅತ್ಯಾಚಾರಿಗಳು ಶಿಕ್ಷೆಗೊಳಗಾಗುತ್ತಾರೆ ಎಂದು ಕಾದು ಕುಳಿತಿರುವರಾದರೂ ಭ್ರಮನಿಸರನಗೊಂಡ ಜನ, ’ಕಡೇ ಮಂಗಳಾರತಿ’ಗೆ ರೆಡಿಯಾಗುವ ದಿನ ದೂರವಿಲ್ಲ. ಕಡೇ ಮಂಗಳಾರತಿಗೆ ಎಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಹೇಳೋದೂ ಕಷ್ಟ. ಆದರೆ ಕಡೇ ಮಂಗಳಾರತಿಗೆ ಬಹಳ ಜನ ಸೇರ್ತಾರೆ, ಬಹಳ ಅಮೋಘವಾಗಿ ನಡೀತದೆ ಎಂಬುದರಲ್ಲಿ ತುಮರಿಗೆ ಯಾವ ಅನುಮಾನವೂ ಇಲ್ಲ.

ಕಳ್ಳಯ್ಯ ಕುಳ್ಳಯ್ಯ ತಲೆಮರೆಸಿಕೊಳ್ಳಲು ಜೀನ್ಸ್ ತೊಟ್ಟು, ನಕಲೀ ಪಾಸ್ ಪೋರ್ಟ್ ಮೂಲಕ ವಿದೇಶಗಳಿಗೆ ಹಾರುವ ಪ್ಲಾನ್ ಮಡಿಕೊಂಡರೂ ಇಂಟರ್ ಪೋಲ್ ಗೆ ಸಿಕ್ಕಿಬೀಳುವ ಸಾಧ್ಯತೆ ಇದ್ದೇ ಇರುತ್ತದೆ. ಇವರೀರ್ವರಿಗೆ ಅತ್ಯಂತ ಸಮಂಜಸ ಜಾಗವೆಂದರೆ ಪಾಕಿಸ್ತಾನ ಎಂಬುದು ಸಮಾಜದ ಹಲವರ ಅಭಿಪ್ರಾಯ. ಹೀಗಾಗಿ ಇನ್ನುಮೇಲೆ ರಾಮ್ ಪಾಲನ ರೀತಿಯಲ್ಲಿ ಸೈನ್ಯ ಕಟ್ಟಿಕೊಂಡಿದ್ದರೂ ಅದು ಲೆಕ್ಕಕ್ಕೆ ಬರೋದಿಲ್ಲ. ದೂರು ಕೊಡಲು ಇನ್ನಷ್ಟು ಮಹಿಳೆಯರು ತುದಿಗಾಲಲ್ಲಿ ನಿಂತಿದ್ದಾರೆ; ಅವರ ಒಡಲಾಳದ ತಾಪದ ಧಗೆ ಹೊರಹೊಮ್ಮಿ ಪಾಪಿಯ ಪಾಪದ ಕೊಡ ತುಂಬುತ್ತಿದೆ.

ಇಷ್ಟಾದರೂ, ತಾವೇ ಪ್ರವೀಣರು ಎಂದುಕೊಳ್ಳುವ ಜನ ಕಾಮಿಯ ಪರ ವಕಾಲತ್ತು ಹಾಕುತ್ತಿರುವುದು ಮತ್ತು ಮಾಧ್ಯಮ ವಾಹಿನಿಯೊಂದನ್ನು ಬೈಯುತ್ತಿರುವುದನ್ನು ಗಮನಿಸಿದರೆ ಅವರ ಮನೆಯಲ್ಲಿ ಹೆಂಡತಿ ಅಥವಾ ಅಕ್ಕ-ತಂಗಿಯರು ಒಂದೋ ಕಾಮಿಯ ತೃಷೆಗೆ ಬಲಿಯಾಗಿಲ್ಲ ಅಥವಾ ಕಾಮಿಯಿಂದ ’ಸುವರ್ಣ ಮಂತ್ರಾಕ್ಷತೆ’ ಪಡೆದಿದ್ದಾರೆ ಎಂಬುದು ಖಾತ್ರಿಯಾಗುತ್ತದೆ. ವಿಪರ್ಯಾಸದಲ್ಲಿ ವಿಪರ್ಯಾಸವೆಂದರೆ ವೈಜ್ಞಾನಿಕವಾಗಿ ಪಾಸಿಟಿವ್ ಎಂದು ಪ್ರೂವ್ ಆದರೂ ಅದನ್ನು ಕೆಲವರು ಅಲ್ಲಗಳೆಯುತ್ತಿರುವುದು.

tb

Thumari Ramachandra

Source: https://www.facebook.com/groups/1499395003680065/permalink/1662003724085858/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s