“ಮಾತೆಯರೇ” ನಮ್ಮನ್ನು ರಕ್ಷಣೆ ಮಾಡಿ ಬನ್ನಿ

“ಮಾತೆಯರೇ” ನಮ್ಮನ್ನು ರಕ್ಷಣೆ ಮಾಡಿ ಬನ್ನಿ

“ನಮ್ಮ ಪರಿತ್ಶಿತಿ ಎಲ್ಲಿವರೆಗೆ ಬಂತಪ್ಪಾ ಅಂದರೆ ಊರಕಡೆ ಹೆಂಗಸ್ರಿಗೆಲ್ಲ ಪ್ರತಿಯೊಬ್ಬರಿಗೂ ನಮ್ಮ ಹಳದೀ ಭಕ್ತರು ಫೋನ್ ಮಾಡಿ “ಮಾತೆಯರೇ ನಮ್ಮ ಗುರುಗಳನ್ನು ರಕ್ಷಣೆ ಮಾಡಲು ಸಹಾಯ ಮಾಡಿ, ಬನ್ನಿ” ಎಂದು ಆಹ್ವಾನಿಸಿದರು. ಹೇಗೂ ಕೃಷ್ಣ ಜನ್ಮಾಷ್ಟಮಿ ಇತ್ತಲ್ಲ ಅದರ ನೆಪವೊಡ್ಡಿ ಎಲ್ಲರನ್ನೂ ಬಸ್ ಗಳಲ್ಲಿ ಕರೆಸಿದೆವು.

ಒಂದೊಮ್ಮೆ ನಮಗೆ ಜಾಮೀನು ಸಿಗದಿದ್ದರೆ ಅಡ್ಡಡ್ಡ ಮಲಗಲು ಬೇಕಾಗುತ್ತದೆ ಎಂಬ ಕಾರಣ ಒಂದು ಕಡೆಗಾದರೆ ನಮ್ಮ ಪರಮ ಭಕ್ತೆಯೊಬ್ಬಳು ಇಟ್ಟುಕೊಂಡಿದ್ದ ಸಭೆಯೊಂದರಲ್ಲಿ ಅವರನ್ನೆಲ್ಲ ಕೂರಿಸಿ ಕೋರಂ ಹೆಚ್ಚಿಸಬೇಕಾಗಿತ್ತು. ಆದರೆ ಸಾರ್ವಜನಿಕರಿಗೆ ಹಾಗೆಲ್ಲ ಹೇಳಲಿಕ್ಕೆ ಬರುತ್ತದೆಯೇ? ಹೀಗಾಗಿ, ಕೃಷ್ಣ ಜನ್ಮೋತ್ಸವದ ವಿಶೇಷ ಆಚರಣೆಗಳ ಸಂಭ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದೆವು.

ಪಾಪ ಊರುಮನೆಗಳಲ್ಲಿ ಉಂಡೆ, ಚಕ್ಕುಲಿಗಳನ್ನು ಮಾಡಿ ಹಬ್ಬ ಆಚರಿಸುತ್ತಿದ್ದರು. ಅದನ್ನೆಲ್ಲ ಬಿಟ್ಟು ನಾವು ಕರೆಮಾಡಿಸಿದ್ದಕ್ಕೆ ಮಹಾನಗರಕ್ಕೆ ಬಂದರು. ಆದರೆ ಕೆಲವರು ಮಾತ್ರ ಫೋನ್ ಮಾಡಿದ ಹಳದೀ ಬಾವಯ್ಯಂದಿರಿಗೆ ಚೆನ್ನಾಗಿ ಉಗಿದ್ದಾರೆ ಎಂದು ತಿಳಿದುಬಂದಿದೆ. ಸಾಗರ ಪ್ರಾಂತದ ಮಹಿಳೆಯೊಬ್ಬರು “ಏ ಯಂತದ ಮಾರಾಯ? ಏನಾರೂ ಹೋಮಗೀಮ ಜಪತಪದ ವಿಶೇಷ ಕಾರ್ಯಕ್ರಮ ಇದ್ರೆ ಕರೀಲಾಗಿತ್ತು. ಯಾವ್ದೂ ಇಲ್ದೆ ಹೀಂಗೆ ರಕ್ಷಣೆ ಕೆಲಸಕ್ಕಾಗಿ ಬರವು ಹೇಳದು ನಾಚಿಕೆಗೇಡಿನ ವಿಷಯ. ಆನಂತೂ ಬರದಿಲ್ಲೆ. ಎನ್ನ ಫ್ರೆಂಡ್ಸೂ ಯಾರೂ ಬರವಿಲ್ಲೆ” ಹೇಳಿ ಫೋನ್ ಮಾಡಿದವನ ಮುಖಕ್ಕೆ ಮಂಗಳಾರತಿ ಎತ್ತಿದ್ದಾಳಂತೆ.

ಇಲ್ನೋಡಿದರೆ ಒಬ್ಬೊಬ್ಬರು ಒಂದೊಂಥರಾ ಹೇಳ್ತಿದ್ದಾರಪ್ಪ. ಇನ್ನೂ ಯಾ‌ರ್ಯಾರೋ ದೂರು ನೀಡ್ತಾರೆ ಅಂತ ಸುದ್ದಿ ಹಾಕಿದ್ದಾರೆ. ದೂರು ನೀಡದಂತೆ ಸಾಕಷ್ಟು ಬಂದೋಬಸ್ತ್ ಮಾಡಿದ್ದೇವೆ ನಾವು. ಆದರೂ ಹಗ್ಗ ಹರಿದುಕೊಂಡು ಹೋಗೋ ಮಣಕಗಳು ಮೊನ್ನೆ ಒಬ್ಬಳು ಕೊಟ್ಟರೀತೀಲೆ ಕೊಡೋದಿಲ್ಲ ಅನ್ನೋ ಗ್ಯಾರಂಟಿ ನಮಗಿಲ್ಲ. ನಮ್ಮ ಚತುರ್ಮೋಸಕ್ಕೆ ನಮ್ಮ ಕತೆಯ ಕವಿಗಳು ತಲೆಕೆಳಗಾಗಿ ನಿಂತು ತಪಸ್ಸು ಮಾಡಿದವರಂತೆ ಪುಂಖಾನುಪುಂಖವಾದ ವಿಷಯಗಳನ್ನು ಸೇರಿಸಿ ದ್ವೇಷಬಿತ್ತುವ ಭಾಷಣಗಳನ್ನೇ ಬರೆದುಕೊಡುತ್ತಿದ್ದಾರೆ.

ನಮ್ಮ ಮಾತುಗಳನ್ನು ಕೇಳಿದವರಿಗೆ ನಾವು ಹರಿಶ್ಚಂದ್ರನ ತುಂಡು ಎಂಬ ಭಾವನೆ ಬರುವಂತೆ ಮಾಡಲು ಎಲ್ಲಾ ದಿಕ್ಕುದಿಸೆಯಿಂದಲೂ ಪ್ರಯತ್ನಗಳು ನಡೀತಾನೇ ಇವೆ. ಸಾಮಾನ್ಯವಾಗಿ ಸನ್ಯಾಸಿಗಳು ಕೆಟ್ಟ ಭಾವನೆ ಉಕ್ಕುವ ಒಂದೇ ಒಂದು ಮಾತನ್ನೂ ಆಡೋದಿಲ್ಲ; ಅದರಲ್ಲಂತೂ ಚಾತುರ್ಮಾಸದಲ್ಲಂತೂ ಸಮಾಜಕ್ಕೆ ಯಾವುದೇ ಅಪಸವ್ಯಗಳು ಹೋಗದಂತೆ ಜಾಗರೂಕರಾಗಿರುತ್ತಾರೆ. ಯಾಕೆಂದರೆ ಸನ್ಯಾಸಿ ಹೇಳುವುದನ್ನು ಅನುಯಾಯಿಗಳು ಅನುಸರಿಸುತ್ತಾರೆ. ಆದರೆ ನಾವು ನಡೆಸೋದು ಚತುರ್ಮೋಸವಾಗಿರೋದರಿಂದ ನಮ್ಮ ಅನುಯಾಯಿಗಳಿಗೆ ಉಪ್ಪು-ಖಾರದ ಮಸಾಲೆ ಊಟವನ್ನು ಉಂಡು ಅಭ್ಯಾಸವಾಗಿಬಿಟ್ಟಿದೆ. ಹೀಗಾಗಿ ಸಪ್ಪೆ ಭಾಷಣವನ್ನು ಅವರು ಇಷ್ಟ ಪಡೋದಿಲ್ಲ. ದೂರುದಾರರನ್ನು ಹೀನಾಯವಾಗಿ ಆಡಿಕೊಂಡರೇ ಅವರಿಗೆ ಸಮಾಧಾನ.

ಇಷ್ಟು ದಿನ ನಾವು ಯಾರೋ ನಾಲ್ಕು ಜನ ಮಠಕ್ಕೆ ಸಂಬಂಧ ಪಡದವರು ನಮ್ಮ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಅವರ ಸಂಖ್ಯೆ ಇರೋದೇ ನಾಲ್ಕು ಎಂದು ಹೇಳುತ್ತಾ ಬಂದೆವು. ಆದರೆ ನೋಡುವ ಸಮಾಜ ಕಿವಿಯಮೇಲೆ ನಾವು ಇಡುವ ಹೂಗಳನ್ನು ಹಾಗೇ ಇಟ್ಟುಕೊಳ್ಳೋದಿಲ್ಲವಲ್ಲ. ಈಗೀಗ ವಿರೋಧಿಗಳ ಸಂಖ್ಯೆ ಒಟ್ಟೂ ಭಕ್ತಸಮಾಜದ ಮುಕ್ಕಾಲು ಭಾಗವಾಗಿ ಬೆಳೆದಿದೆ. ನಿಜವಾಗಿ ಹೇಳಬೇಕೆಂದರೆ ಪ್ರಮುಖ ರಾಜಕಾರಣಿಯೊಬ್ಬರು ತಮ್ಮ ಸಭೆಗಳಿಗೆ ಲಾರಿಗಳಲ್ಲಿ ಜನರನ್ನು ಕರೆತರುವಂತೆ ನಾವು ಹಳ್ಳಿಗಳಿಂದ ಜನರನ್ನು ಒತ್ತಾಯಪೂರ್ವಜವಾಗಿ ಕರೆಸಿಕೊಂಡು ಚತುರ್ಮೋಸ ನಡೆಸುತ್ತಿದ್ದೇವೆ.

ಮೊದಮೊದಲು ಯಾವುದೋ ಪತ್ರಿಕೆಯಲ್ಲಿ ಅಪರೂಪಕ್ಕೆ ಒಂದು ನಮ್ಮ ವಿರೋಧೀ ಲೇಖನ ಬಂತೆಂದರೆ ನಾವು ಸಾಕಷ್ಟು ತಲೆಕೆಡಿಸಿಕೊಳ್ಳುತ್ತಿದ್ದೆವು. ನಮ್ಮ ನಿಜವಾದ ಸಂಗತಿಗಳು ಕೆಲವರಿಗಾದರೂ ಗೊತ್ತಾಗಿಬಿಡುತ್ತದಲ್ಲ ಎಂದು ಯೋಚಿಸುತ್ತಿದ್ದೆವು. ಅಂತಹ ಪತ್ರಿಕೆಗಳ ವಿರುದ್ಧ ಸಂಚು ನಡೆಸುತ್ತಿದ್ದೆವು. ಬರಹಗಾರರಿಗೇ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದೆವು. ಈಗೀಗ ಹಲವಾರು ಪತ್ರಿಕೆಗಳು ನಿತ್ಯವೂ ಒಂದಿಲ್ಲೊಂದು ವರದಿಯನ್ನು ಪ್ರಕಟಿಸುತ್ತಲೇ ಇವೆ. ಪ್ಕಾಕೇಜು ವ್ಯವಹಾರದ ಇಮ್ಮಡಿ ಖುರ್ಚಿ ಮುರಿದುಕೊಂಡು ಕೆಳಗೆ ಬಿದ್ದಮೇಲೆ ಅವನ ಮಾತನ್ನೂ ಯಾರೂ ಕೇಳುತ್ತಿಲ್ಲ. ತಿರುಪತಿ ತಿಮ್ಮಪ್ಪನೂ ಈಗೀಗ ನೈಜ ವರದಿಗಳನ್ನು ಹಾಕಲು ಹಿಡಿದಿದ್ದಾನೆ.

ಕುರಿವಾಡೆಯಲ್ಲಿ ಕಳೆದಸಲ ನಾವಿದ್ದಾಗ ಆ ಪ್ರದೇಶದ ಸುತ್ತಮುತ್ತಲ ತಾಲೂಕುಗಳಲ್ಲಿ ಕನ್ನಡದ ಕೆಲವು ಚಾನೆಲ್ ‌ಗಳೇ ಬರದಂತೆ ವ್ಯವಸ್ಥೆ ಮಾಡಿದ್ದೆವು. ಈಗ ಅಲ್ಲಿನ ವ್ಯವಹಾರ ನೋಡಿಕೊಳ್ಳುವ ಹಳದೀ ಭಕ್ತರು ನಮ್ಮ ಪ್ರವಚನಗಳನ್ನೇ ಮತ್ತೆ ಮತ್ತೆ ಬಿತ್ತರಿಸುತ್ತ ನಾವು ಅಂತವರಲ್ಲ ಎಂಬಂತೆ ಸೀನ್ ಕ್ರಿಯೇಟ್ ಮಾಡಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಬೇಕೆಂದೇ ಚಾತುರ್ಮಾಸದ ಸಮಯದಲ್ಲೇ ದೂರು ನೀಡುತ್ತಾರೆ ಎಂದೂ ಹೇಳಿಸಿದ್ದೇವೆ. ಆದರೆ ಅಲ್ಲಿನ ಕುರಿಗಳಲ್ಲೂ ಬುದ್ಧಿ ತಿಳಿದ ಕೆಲವು ಕುರಿಗಳು ನಮ್ಮ ಬಣದಿಂದ ಜಾಗ ಖಾಲಿಮಾಡಿವೆ ಎಂದು ನಮ್ಮ ಬೇಹುಗಾರಿಕೆಯ ಭಾತ್ಮೀದಾರರು ತಿಳಿಸಿದ್ದಾರೆ.

ಇಲ್ಲೀವರೆಗೆ ಕೇವಲ ಯುವಕರನ್ನು ಮಾತ್ರ ಬೆಳೆಸಿದ್ದೆವು, ಈಗ ನಮಗೆ ಬೇಕಾದ ಕೆಲವು ಮಹಿಳಾಮಣಿಗಳನ್ನು ಮುಂದಕ್ಕೆ ಬಿಟ್ಟು ಮಹಿಳಾ ತಾಲೀಬಾನ್ ತಯಾರಿಸುವ ಪ್ರಯತ್ನಕ್ಕೂ ಮೊನ್ನೆ ನಾಂದಿ ಹಾಡಿದ್ದೇವೆ. ಊರಿದ್ದಲ್ಲಿ ಹೊಲಗೇಡು ಇದ್ದೇ ಇರ್ತದೆ ಎಂದು ನಮ್ಮ ಹಿರಿಯರು ಹೇಳ್ತಿದ್ರಲ್ಲ? ಅದೇರೀತಿ, ನಮಗೂ ಒಂದಷ್ಟು ಕುರಿಭಕ್ತರು ಯಾವ ಕಾಲಕ್ಕೂ ಇದ್ದೇ ಇರ್ತಾರೆ. ನಾವು ಮಾಡಿದ್ದೆಲ್ಲವನ್ನೂ ಸರಿಯೆಂದೇ ಸಮರ್ಥಿಸುತ್ತಾರೆ.

ಹನುಂತ ಹುಟ್ಟಿದ ಊರು ಯಾವುದು ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಅದನ್ನೇ ಬದಲಾಯಿಸಿ, ನಿಜವಾದ ಸ್ಥಳ ಇದೆಂದು ಹೊಸ ಕಥೆಯನ್ನು ಕಟ್ಟಿದೆವು. ಆ ವ್ಯವಸ್ಥೆಯ ಶಿಲಾನ್ಯಾಸದ ನೆಪದಿಂದ ಎಲ್ಲವನ್ನೂ ಬಿಟ್ಟ ಬೀದಿ ಹೆಣ್ಣುನಾಯಿಯಂತವಳನ್ನು ಎಂಟು ನೊರು ಕಮಲದ ಹೂ ಹಾಸಿ ಸ್ವಾಗತಿದೆವು. ನಾವು ಕಟ್ಟೆಯಮೇಲೆ ಕುಳಿತೆವು, ಅವಳು ಅತ್ಯಂತ ಹತ್ತಿರದಲ್ಲಿ ಕಟ್ಟೆಯ ಕೆಳಗೆ ಕುಳಿತು ಬಹಳ ಆಪ್ತ ಸಂಭಾಷಣೆಯಲ್ಲಿ ತೊಡಗಿದ್ದೆವು. ಅದು ಅವಳೊಟ್ಟಿಗೆ ನಾವು ಕಳೆದ ಬಂಗಾರದಂತ ಸಮಯ. ಆ ಸಮಯದಲ್ಲಿ ತೆಗೆದ ಕೆಲವು ಫೋಟೋಗಳು ಒಂದೆರಡು ವೆಬ್ ಸೈಟುಗಳಲ್ಲಿ ಕಾಣುತ್ತಿದ್ದವು. ಆ ಜಾಲತಾಣಗಳ ಒಡೆಯರನ್ನು ಸಂಪರ್ಕಿಸಿ, ಅವರನ್ನು ಬೆದರಿಸಿ, ಆಮಿಷವೊಡ್ಡಿ ಆ ಪುಣ್ಯಕತೆಯ ಫೋಟೋಗಳನ್ನು ತೆರೆವುಗೊಳಿಸಿಬಿಟ್ಟೆವು!

ನಮ್ಮ ಕುರಿಗಳನ್ನು ಕೇಳಿ, “ಅವಳು ಮಠಕ್ಕೆ ಕೋಟಿಗಟ್ಟಲೆ ದೇಣಿಗೆ ಕೊಡುವುದಾಗಿ ಹೇಳಿದ್ದರಿಂದ ಕರೆಸಿದ್ದರು. ಮಠದ ವ್ಯವಹಾರಗಳಿಗೆ ಕೋಟಿಗಟ್ಟಲೆ ಹಣ ಬೇಕು. ಯಾರು ಕೊಡ್ತಾರೆ? ನೀವು ಕೊಡ್ತೀರಾ? ಇಲ್ಲ. ಹಾಗಾಗಿ ಅಂತಂತವರನ್ನೇ ಹುಡುಕಿ ಕರೆಸ್ತಾರೆ ನಮ್ಮ ಸಂಸ್ಥಾನ, ಬಹಳ ಬುದ್ಧಿವಂತರು: ಎನ್ನುತ್ತವೆ. ವಾಸ್ತವದಲ್ಲಿ ಅವಳು ಬರುವುದಕ್ಕಾಗಿ ನಾವೇ ಅವಳಿಗೆ 25ಲಕ್ಷ ಕೊಟ್ಟಿದ್ದೇವೆ. ಮಠ ನಡೆಸೋದಕ್ಕೆ ಹಣಬೇಕು, ಅದು ಸೂಳೆಗಾರಿಕೆಯಿಂದ ಬಂದರೇನು? ಸ್ಮಗ್ಲಿಂಗ್ ಮೂಲಕ ಬಂದ್ರೇನು? ಹಣ ಕೊಡುವ ಸಾಮರ್ಥ್ಯವಿರುವ ಮತ್ತು ಹಣ ಕೊಟ್ಟು ಪ್ರಚಾರ ಪಡೆದುಕೊಳ್ಳುವ ಕೆಲವರನ್ನು ಹುಡುಕುತ್ತೇವೆ ನಾವು.

ಹಾಗೆ ನಮ್ಮ ಹಣದ ತೆವಲಿಗೆ ಬಲಿಬಿದ್ದವರು ಮಹಾನಗರದ ಮಹಾ ವೀರಾಧಿವೀರರು, ಅವರ ಮೂಲಕ ಉತ್ತರದ ಕಡೆಯ ಕೆಲವು ಸೌಂಡ್ ಪಾರ್ಟಿಗಳು. ಪಾಪ, ಅವರಿಗೆಲ್ಲ ವ್ಯವಸ್ಥಿತವಾದ ಪೂಜೆ ನೋಡೇ ಗೊತ್ತಿಲ್ಲ. ನಮ್ಮಲ್ಲಿ ನಾವು ಬೆರಳು ಮಾಡಿದರೆ ಕುಣಿಯುವ ಕುರಿಗಳಿವೆ, ವ್ಯವಸ್ಥೆ ಮಾಡಲಿಕ್ಕೆ ಯವ ತೊಂದರೆಯೂ ಇಲ್ಲ. ಅವರು ಕೊಡುವ ಹಣದ ಒಂದಂಶದಲ್ಲೇ ಅವರಿಗೆ ಬೇಕಾದ ಸಕಲ ಸೌಲಭ್ಯಗಳನ್ನೂ ಕಲ್ಪಿಸಿ ಫೈವ್ ಸ್ಟಾರ್ ಪೂಜೆಯನ್ನು ಮಾಡಿತೋರಿಸಿಬಿಟ್ಟರೆ ಅವರು ಫುಲ್ ಖುಷ್. ನಮಗೆ ಸೂತ್ರ ಅರ್ಥವಾಯಿತು. ಅವರಿಗೆ ನಮ್ಮ ಪಾತ್ರ ಬಹಳ ದೊಡ್ಡದೆನಿಸಿತು.

ಎಂತೆಂತಹ ಪವಾಡಗಳೇ ಘಟಿಸಿದವು ಗೊತ್ತೇ? ಅಗರಬತ್ತಿಯವರ ಆಸ್ಪತ್ರೆ ಸುಟ್ಟು ಹೋಯ್ತು. ಅದರಲ್ಲಿದ್ದ ಹಲವು ರೋಗಿಗಳು ಮೃತರಾದರು. ವ್ಯವಹಾರದಲ್ಲಿ ಅವರ ಅನ್ಯಾಯಗಳ ದಾಖಲೆ ಸಿಕ್ಕು ಅವರು ಕೃಷ್ಣಜನ್ಮಸ್ಥಾನವನ್ನು ದರ್ಶನಮಾಡಿ ಬಂದರು. ರಾಂಗಾನುಗ್ರಹದಲ್ಲಿ ಈ ಘಟನೆ ಬಿಟ್ಟುಹೋಗಿದೆ, ಮುಂದಿನ ಸಲ ಮರುಮುದ್ರಣದಲ್ಲಿ ಇದನ್ನೆಲ್ಲ ಸೇರಿಸಲು ಹೇಳಿದ್ದೇವೆ. ರಾಟೆ ಸುತ್ತುತ್ತಿರುವವರ ಮಗನ ಅವ್ಯವಹಾರ ಜಾಲತಾಣದಲ್ಲೂ ದಾಖಲಾಗಿದೆ. ನಮಾಮಿಯವರದ್ದು ಇನ್ನೊಂದು ರೀತಿಯ ಕತೆ. ಅವರೆಲ್ಲರ ’ಪುಣ್ಯದ’ ಗಳಿಕೆಯಲ್ಲಿ ನಮಗಷ್ಟು ಪಾಲು ಕೊಟ್ಟರು.

ನಮ್ಮ ಹಳದೀ ಭಕ್ತರು ಅವರನ್ನೆಲ್ಲ ಹೊತ್ತು ಕುಣಿಯುತ್ತ, ಮಠಕ್ಕೆ ಬಂದಾಗ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಟ್ಟರು. ಹಣವಂತರನ್ನು ಟಿವಿಗಳಲ್ಲಷ್ಟೆ ನೋಡುತ್ತಿದ್ದ ಕುರಿಗಳು ಮಠದಲ್ಲಿ ಅವರನ್ನೆಲ್ಲ ಕಂಡು ಪುಳಕಿತರಾದರು. ದೂರದಿಂದಲೇ ಅವರಿಗೆಲ್ಲ ಕೈಮುಗಿದವರೂ ಇದ್ದಾರೆ. ಹಾಗಾಗಿಯೇ ನಾವು ಹೇಳಿದ್ದು-“ಬಹುಶಃ ಬೇರೆ ಯಾವ ಸನ್ಯಾಸಿಗಳಿಗೂ ಸಿಗದ ವಿಶಿಷ್ಟ ಶಿಷ್ಯರು ನಮಗೆ ಸಿಕ್ಕಿದ್ದಾರೆ” ಅಂತ. ಆ ಮಾತಿನಿಂದ ಕುರಿಗಳಿಗೆ ನೂರಾನೆಯ ಬಲ ಬಂದಿದೆಯಂತೆ. ಮತ್ತೆ ನಮ್ಮ ಸಲುವಾಗಿ “ಮೇ… ಮೇ…” ಎಂದು ಅರಚಲು ಆರಂಭಿಸಿವೆ.

ಹೀಗೇ ನಮ್ಮ ದೂರದರ್ಶಿತ್ವದ ಬಗೆಗೆ ನೀವು ಕೇಳಲೇ ಬಾರದು. ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂಬುದು ನಮಗೂ ಮತ್ತು ನಮ್ಮ ಬಾವಯ್ಯನಿಗೂ ಬಿಟ್ಟರೆ ಮತ್ತಾರಿಗೂ ಪೂರ್ಣ ಮಾಹಿತಿ ಇಲ್ಲ. ಮಾಹಿತಿ ಸಿಗಲಿಕ್ಕೂ ಬಿಡೋದಿಲ್ಲ ನಾವು. ಹಿಂದೆ ಏಕಾಂತ ನಡೆಸಿದ ಅನೇಕ ಜಾಗಗಳನ್ನು ರೂಪಾಂತರ ಮಾಡಿಸಿಬಿಟ್ಟಿದ್ದೇವೆ ನಾವು; ಒಂದೆರಡು ಕಡೆಗಳಲ್ಲಂತೂ ಏಕಾಂತ ನಡೆಸಿದ ಕಟ್ಟಡವನ್ನೆ ಕೆಡವಿಸಿ ಹೊಸದಾಗಿ ನಿರ್ಮಿಸಲು ಆರಂಭಿಸಿದ್ದೇವೆ. ಯಾವ ಪರೀಕ್ಷಕ ಬಂದರೂ ಏನನ್ನೊ ಮಾಡಲಾರದ ಪರಿಸ್ಥಿತಿ ನಿರ್ಮಾಣ ಮಾಡಿದ್ದೇವೆ.

ಈಗ ನಮ್ಮ ವಿರುದ್ಧ ಕೇಳಿ ಬರುತ್ತಿರುವ ಜನರ ಹೇಳಿಕೆಗಳಿಗೆ ವಿರುದ್ಧವಾಗಿ ಮಹಿಳೆಯರನ್ನೇ ಎತ್ತಿಕಟ್ಟುವ ವ್ಯವಸ್ಥೆಗೆ ಕೆಲವರನ್ನು ಬಿಟ್ಟಿದ್ದೇವೆ ನಾವು. ಅಲ್ಲಿ ಕೆಲವರು ನಮ್ಮ ’ಸುವರ್ಣ ಮಂತ್ರಾಕ್ಷತೆ’ ಪಡೆದು ಕೆಲಸಮಾಡ್ತಾರೆ, ಇನ್ನೂ ಕೆಲವರು ನಮ್ಮ ಏಕಾಂತದ ಫಲಾನುಭವಿಗಳಾಗಿದ್ದು, ನಮ್ಮೊಡನೆ ಲೈಫ್ ಲಾಂಗ್ ವ್ಯವಹಾರ ಇಟ್ಟುಕೊಳ್ಳಬಯಸುವವರು. ಅವರೆಲ್ಲ ಸೇರಿಕೊಂಡು, ನೈಜಘಟನೆಗಳ ಅರಿವಿಲ್ಲದ ಮುದುಕಿಯರನ್ನು ಜೊತೆಮಾಡಿಕೊಂಡು ಹೊಸದೊಂದು ಪರಿಕ್ರಮಕ್ಕೆ ಚಾಲನೆ ನೀಡಿದ್ದಾರೆ. ಅದು ನಮ್ಮನ್ನು ರಕ್ಷಿಸುವ ಪರಿಕ್ರಮ.

ಹೀಗೆ, ಇದೆಲ್ಲ ಮೂಲದಲ್ಲಿ ನಮ್ಮದೇ ಹಲ್ಕಟ್ ಗಿರಿ. ಈಗಲೂ ಹೇಳ್ತೇವೆ ನಾವು. ನಮ್ಮನ್ನು ವಿರೋಧಿಸುವವರು ಗೆಲ್ಲಲು ಸಾಧ್ಯವೇ ಇಲ್ಲ. ಯಾಕೆಂದರೆ ನಾವು ಮಾಡ್ತಿರೋದೆಲ್ಲ ’ಸಮಾಜ ಸೇವೆ’ ಕೆಲಸ. ಹೀಗಾಗಿಯೇ “ಸತ್ಯ ಗೆಲ್ತದೆ ಅಂತಾದರೆ, ನ್ಯಾಯ ಗೆಲ್ತದೆ ಅಂತಾದರೆ, ಧರ್ಮ ಗೆಲ್ತದೆ ಅಂತಾದರೆ ನಾವು ಗೆಲ್ತೇವೆ” ಎಂಬ ಹೇಳಿಕೆಯನ್ನು ಕೊಟ್ಟುಬಿಟ್ಟಿದ್ದೇವೆ. ಧರ್ಮ ಸೋಲಬಾರದು ಎಂಬ ಭಾವನೆ ಬರುವ ಹಾಗೆ ನಾವು ಹೇಳಿದ್ದರಿಂದ ಧರ್ಮವನ್ನು ಗೆಲ್ಲಿಸುವುದಕ್ಕಾಗಿ ಧರ್ಮಯಾವುದು ಅಧರ್ಮಯಾವುದು ಎಂದು ತಿಳಿಯದ ಕುರಿಗಳು ಹೋರಾಡುತ್ತವೆ.

“ಒಬ್ಬ ಸಾಮಾನ್ಯನಿಗೆ ಇಷ್ಟೆಲ್ಲ ತಲೆ ಇರಲು ಸಾಧ್ಯವೇ? ಗುರುಗಳು ಬಹಳ ಬುದ್ಧಿವಂತರು, ಪ್ರಕಾಂಡ ಪಂಡಿತರು, ದೂರದರ್ಶಿತ್ವವುಳ್ಳವರು, ಮಗುವಿನ ಮನಸ್ಸುಳ್ಳವರು” ಎಂಬಿತ್ಯಾದಿ ಹೊಗಳಿಕೆಗಳನ್ನು ನಾವೇ ಹರಿಬಿಟ್ಟಿದ್ದೇವೆ. ಹಾಲುಹಲ್ಲು ಉದುರದ ಚಿರಂಜೀವಿ ಬಾಲಕರು ನಮ್ಮ ಸಲುವಾಗಿ ತಮ್ಮದೇ ಆದ ಬಾಲಭಾಷೆಯಲ್ಲಿ ವ್ಯಾಖ್ಯಾನ ನಡೆಸಿದ್ದಾರೆ. ಈಗ ಎಲ್ಲೆಲ್ಲೂ ನಮ್ಮ ಜೈಕಾರಗಳು ಮೊಳಗುತ್ತಿರುವಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ. “ನೋಡಾ, ಇಂತದೆಷ್ಟ್ ಕೇಸ್ ಬೇಕಾರೂ ಬರ್ಲಿ, ಮಠದ ದಿನನಿತ್ಯದ ಕಾರ್ಯಕ್ರಮಕ್ಕೆಲ್ಲ ಏನೂ ತೊಂದರೆ ಇಲ್ಲೆ. ಇದರಿಂದಲೇ ಕಾಣ್ತು ಗುರುಗಳಲ್ಲಿ ಬಾಳ ಶಕ್ತಿ ಇದ್ದು” ಎಂದು ಕುರಿಗಳು ಪರಸ್ಪರ ಮಾತನಾಡಿಕೊಳ್ಳುವುದಕ್ಕೆ ಬೇಕಾಗಿ ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಕೇಬಲ್ ಟಿವಿಗಳಲ್ಲಿ ನಮ್ಮ ಪ್ರವಚನ ಸದಾ ನಡೆಯುತ್ತಿರುವಂತೆ ವ್ಯವಸ್ಥೆ ಮಾಡಿದ್ದೇವೆ.”

ಇಲ್ಲಿಗೆ ಹಾವಾಡಿಗ ಸಂಸ್ಥಾನದವರ ಇಂದಿನ ಪ್ರವಚನ ಮುಗಿಯಿತು. ಜೈಕಾರ ಕೂಗುವವರು ಕೂಗಬಹುದು.

Thumari Ramachandra

source: https://www.facebook.com/groups/1499395003680065/permalink/1660887884197442/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s