ನಾವು ಇಡೀ ಸಮಾಜವನ್ನೇ ರಕ್ಷಣೆ ಮಾಡ್ತೇವೆ; ನೀವು ನಮ್ಮ ಸೀಟನ್ನು ರಕ್ಷಣೆಮಾಡಿ

ನಾವು ಇಡೀ ಸಮಾಜವನ್ನೇ ರಕ್ಷಣೆ ಮಾಡ್ತೇವೆ; ನೀವು ನಮ್ಮ ಸೀಟನ್ನು ರಕ್ಷಣೆಮಾಡಿ
(ಕಳ್ಳ, ಕಾಮುಕ ಸನ್ಯಾಸಿಯೊಡನೆ ಸಂವಾದ-ಒಂದು ಪ್ರಹಸನ)

” ನಾವು ಅಂದ್ರೆ ಯಾರು? ನಾವು ಯಾರ್‍ಯಾರಿಗೋ ಉತ್ತರ ಕೊಡಬೇಕಾಗಿಲ್ಲ. ಬೀದಿ ಬಸವಣ್ಣ ಅನ್ನೋದು ಜಗಜ್ಜಾಹೀರಾಗಿದ್ರೂ ಉಳಿದ ಬೀದಿ ಬಸವಣ್ಣಗಳಿಗೆ ಉತ್ತರಿಸಬೇಕಾಗಿಲ್ಲ. ಅವರಿಗೆ ಕಾಂಪಿಟಿಶನ್ ಕೊಟ್ರೆ ನಾವೇ ಗೆಲ್ತೇವೆ ಅನ್ನೋದು ನಮಗೆ ಖಾತ್ರಿಯಿದೆ. ನಾವು ಇಲ್ಲಲ್ಲ, ಎಲ್ಲೇ ಹೋದ್ರೂ ಬದುಕ್ತೇವೆ. ಬೇನಾಮಿ ಖಾತೆಗಳಲ್ಲಿ ಸಾಕಷ್ಟು ಮಾಡಿಟ್ಕೊಂಡಿದೇವೆ, ನಮಗೇನೂ ಅದರ ಬಗ್ಗೆ ಚಿಂತೆಯಿಲ್ಲ.

ನಾವು ಉತ್ತರದ ಕಡೆಗೆ ಬೇಕಾದ್ರೂ ಹೋಗಿ ಮಠ ಕಟ್ತೇವೆ. ಅಲ್ಲಿ ನಮ್ಮಂತವರೇ ಸ್ನೇಹಿತರು ಬಹಳ ಜನ ಸಿಗ್ತಾರೆ. “ಸಂಘೌ ಶಕ್ತಿಃ ಕಲೌ ಯುಗೇ” ಅಂದ ಹಾಗೆ ಅಲ್ಲಿ ನಮಗೆ ದೊಡ್ಡ ಸಂಘಟನೆಯೇ ಸಿಗ್ತದೆ. ರಾಂಪಾಲ್, ಅಸರಾಮ್, ಸಾರಥಿ ದೇವ್ ಮೊದಲಾದವರೆಲ್ಲ ಇದ್ದಾರೆ. ಅವರನ್ನೆಲ್ಲ ಬಳಗಕ್ಕೆ ಸೇರಿಸಿಕೊಂಡ್ರೆ ಆಮೇಲೆ ನಮ್ಮದೇ ಕಾರುಬಾರು; ನಾವು ತೀಡಿದ್ದೇ ನಾಮ. ಇಲ್ಲಿಗಿಂತ ದೊಡ್ಡ ಸಾಮ್ರಾಜ್ಯವನ್ನು ಕಟ್ತೇವೆ ನಾವು. ಅದಕ್ಕೇನೋ ತೊಂದ್ರೆ ಇಲ್ಲ. ಇಲ್ಲಿಗಿಂತ ಹೆಚ್ಚಿಗೆ ಜೈಕಾರದ ಕುರಿಗಳು ಅಲ್ಲಿದ್ದಾವೆ ನಮಗೆ. ಹಾಳೂರಲ್ಲಿ ಸೂಳೆಯೇ ಮುತ್ತೈದೆ ಅನ್ನೋ ಹಾಗೆ ಅಲ್ಲಿ ನಾವು ಹೇಳಿದ್ದೇ ವೇದವಾಕ್ಯ. ಯಾಕೆಂದರೆ ಆ ಕಡೆಯವರಿಗೆ ವೇದೋಚ್ಚಾರಣೆ ಸಹಿತ ಸರಿಯಾಗಿ ಬರೋದಿಲ್ಲ.

ಇನ್ನು ನಮ್ಮ ತಾಕತ್ತಿನ ಪ್ರಶ್ನೆಗೆ ಬಂದ್ರೆ ಅದನ್ನು ನಾವು ಹೊಸದಾಗಿ ಪ್ರೂವ್ ಮಾಡಬೇಕಾದ ಅಗತ್ಯವೇನಿಲ್ಲ. ನಮ್ಮ ರೋಮರೋಮಗಳಲ್ಲೂ ಕಾಮವೇ ಅಡಗಿದೆ; ನಮ್ಮ ಸಾಮಾನಿಗೆ ಇರುವ ತಾಕತ್ತು ಕೆಲವರ ತೋಳಿಗಿಲ್ಲ! ಹೀಗಾಗಿ, ಯಾರೋ ನಮ್ಮ ಸುದ್ದಿ ಬೀದಿ ಬೀದಿಲಿ ಆಡ್ಕೋತಾರೆ ಅಂದ್ರೆ, ಆಗ ನೀವೆಲ್ಲ ಎಲ್ಲಿದ್ರಿ? ನಾವು ಅದನ್ನೆಲ್ಲ ಉತ್ತರಿಸಬೇಕಾಗಿಲ್ಲ. ಸೀಟಿನ ಗೌರವ ಕಾಪಾಡ್ಬೇಕಾದ್ದು ನೀವು. ಯಾಯ್ವಾದೋ ಪತ್ರಿಕೆಯವರು ಬೇಕಾಬಿಟ್ಟಿ ಬರೀತಾರೆ ಅಂತ ಹೇಳಿ ಹೇಳಿ ಅದೇ ಅಭ್ಯಾಸ ಆಗ್ಬಿಟ್ಟಿದೆ ನಿಮಗೆ. ಹೇಳ್ತೇನೆ ತುಮರಿ ರಾಮಚಂದ್ರ, ಸೀಟಿನ ಗೌರವ ನೀವೆಲ್ಲ ಸೇರಿ ಕಾಪಾಡ್ಬೇಕು. ಅವರೆಲ್ಲ ಬರೀತಾರೆ ಅಂದ್ರೆ ನೀವೆಲ್ಲ ಎಲ್ಲಿದ್ರಿ? [ಮಚ್ಚು, ಲಾಂಗು ತೆಗೆದುಕೊಂಡು ಹೋಗ್ ಹೊಡೀರಿ ಎಂದರ್ಥವಲ್ಲವೇ?]

ನಮ್ಮ ವಿರುದ್ಧ ತಿರುಗಿ ಬೀಳೋರ ಮೇಲೆ ದೂರು ದಾಖಲಿಸುವುದಕ್ಕೆ ಅಂತ್ಲೇ ಒಂದಷ್ಟು ಜನರ ಸಮಿತಿಯನ್ನು ಮಾಡ್ಕೊಂಡಿದೇವೆ ನಾವು. ಹೇಳ್ತೇವೆ ಕೇಳು ತುಮರಿ ರಾಮಚಂದ್ರ…ನಿನ್ನ ಮೂಲ ಹುಡುಕಿಸಿ ಬೆದರಿಕೆ ಕರೆಗಳನ್ನು ಮಾಡಿಸಬೇಕೆಂದು ನೋಡಿದ್ದೆವು, ಆದರೆ ನಿನ್ನ ಮೂಲ ಸಿಗಲೇ ಇಲ್ಲ. ನೀನು ಬರೆದದ್ದನ್ನೆಲ್ಲ ನೂರಾರು ಕಾಪಿ ಪ್ರಿಂಟ್ ತೆಗೆಸಿ ಕಣ್ಣಲ್ಲಿ ಎಣ್ಣೆ ಹಾಕ್ಕೊಂಡು ಏನಾದ್ರೂ ಲಿಂಕ್ ಸಿಗಬಹುದಾ ಅಂತ ಹುಡುಕಿದೆವು, ದೂರು ನೀಡುವಂತ ಯಾವುದೇ ಲಿಂಕೂ ಸಿಗಲಿಲ್ಲ. ಈಗ ಮಾತ್ರ ನಮಗೆ ಬಿಸಿ ಹತ್ತಿದ್ದು ನಿಜ.

ಅಷ್ಟೆಲ್ಲಾ ದಿನ ನಮ್ಮ ತೆಕ್ಕೆಯಲ್ಲೇ ಮಲಗಿ ಚಕ್ಕಂದ ಅನುಭವಿಸಿದವಳು ಈಗ ಇದ್ದಕ್ಕಿದ್ದ ಹಾಗೆ ದೂರು ಕೊಡ್ತಾಳೆ ನಮ್ಮ ವಿರುದ್ಧ, ನಮ್ಮ ಬಾವಯ್ಯನ ವಿರುದ್ಧ ಅಂದ್ರೆ ಅವಳನ್ನು ಹೇಗೆ ನೋಡಿಕೊಳ್ಳಬೇಕು ಎಂದು ಗೊತ್ತಾಗ್ತಿಲ್ಲ. ಈಗ ಅವಳ ಜುಟ್ಟು ನಮ್ಮ ಕೈಲೂ ಇಲ್ಲ, ಅವಳೂ ನಮ್ಮ ಜೊತೆಗಿಲ್ಲ, ಅವಳ ಗಂಡನೂ ಸಿಗ್ತಾ ಇಲ್ಲ. ಈಗ ಹಿಡಿಯೋದು ಹೇಗೆ ಅವಳನ್ನ? ಹೇಗಾದ್ರೂ ಮಾಡಿ ಅವಳಿಗೆ ಬುದ್ಧಿ ಕಲಿಸಬೇಕು. ಎಲ್ಲೆಲ್ಲಿ ಯಾರ್‍ಯಾರನ್ನು ಒಳಗೆ ಹಾಕಿಕೊಂಡರೆ ಈ ಕೆಲಸ ಸಾಧ್ಯವೋ ಪರಿಶೀಲನೆ ಮಾಡಿ. ಧರ್ಮೋ ರಕ್ಷತಿ ರಕ್ಷಿತಃ ಗೊತ್ತಲ್ಲ ತುಮರಿ ರಾಮಚಂದ್ರ?”

“ಧಣಿಯೋರೆ ನನಗರ್ಥ ಆಗ್ತಿದೆ. ತಾವು ಶಾಂತರಾಗಬೇಕು”

“ಅಲ್ವೋ ತುಮರಿ ರಾಮಚಂದ್ರ, ನಾವು ಇಡೀ ಜೀವನದಲ್ಲೂ ಹೋರಾಟ ಮಾಡ್ತೇವೆ ಬೇಕಾದ್ರೆ. ಗೊತ್ತಾಯ್ತಲ್ಲ? ಆದರೆ ಯಾರಿಗಾಗಿ ಮಾಡ್ಬೇಕು? ನಮಗೆ ಒಂದೇ ಹೆಣ್ಣಿನ ಸಂಸಾರ ನಡೆಸುವುದಂತೂ ಬೇಕಾಗಿಲ್ಲ. ಇನ್ನು ಕಾವಿ ತೆಗೆದು ಜೀನ್ಸ್ ಹಾಕ್ಕೊಳ್ಳೋಕೂ ನಾವು ತಯಾರಿಲ್ಲ. ಯಾಕೆಂದರೆ ಇಲ್ಲಿ ಸಿಗೋ ಗೌರವ, ಕೋಟ್ಯಾವಧಿ ಬಿಟ್ಟಿ ಕಾಸು ಮತ್ತೆಲ್ಲಿ ಸಿಗ್ತದೆ ಹೇಳು? ನಾವು ಸಮಾಜವನ್ನು ರಕ್ಷಣೆ ಮಾಡ್ತೇವೆ. ಸಮಾಜದ ಕೊಟ್ಟಕೊನೆಯ ಹೆಣ್ಣುಮಗುವಿಗೂ ಕನ್ಯಾಸಂಸ್ಕಾರ ಕೊಡೋ ಜವಾಬ್ದಾರಿ ನಮಗಿದೆ. ಆದರೆ ಸೀಟಿನ ಘನತೆ ಗೌರವವನ್ನು ನೀವೆಲ್ಲ ಸೇರಿ ಕಾಪಾಡ್ಬೇಕು. ಧರ್ಮೋ ರಕ್ಷತಿ ರಕ್ಷಿತಃ ಗೊತ್ತಲ್ಲ ತುಮರಿ ರಾಮಚಂದ್ರ?”

“ಅಲ್ಲ ಧಣಿಗಳು ಪಕ್ಕ ಕಚ್ಚೆಹರುಕರು ಹೌದೆಂಬುದು ಸಮಸ್ತ ಸಮಾಜಕ್ಕೂ ಜಗಜ್ಜಾಹೀರಾಗಿಬಿಟ್ಟಿದೆ. ಏನೋ ತಾವು ದೊಡ್ಡ ಮನಸ್ಸು ಮಾಡಿ ಕಾವಿ ಬಿಚ್ಚಿಟ್ಟು ಜೀನ್ಸ್ ಹಾಕ್ಕೆಂಡು ಎಲ್ಲಿಗಾದರೂ ಹೋಗಬಹುದು. “ಸಮಾಜದ ಸೀಟಿನ ರಕ್ಷಣೆಯನ್ನು ಸಮಾಜದವರೇ ಮಾಡಿಕೊಳ್ತೇವೆ, ಅದಕ್ಕಾಗಿ ಈ ರಾಂಗ್ ವೇಷವನ್ನು ಉಳಿಸಿಕೊಳ್ಳಬೇಕಾಗಿಲ್ಲ” ಅಂತ ಸಮಾಜದ ಮುಕ್ಕಾಲುಪಾಲು ಜನ ಖಡಕ್ ಆಗಿ ಹೇಳಿಬಿಟ್ಟಿದ್ದಾರೆ. ಜಾಲತಾಣದ ನಾವಿದ್ದೇವೆಗಳಲ್ಲಿ ತೋರಿಸುವ ಸಂಖ್ಯೆಯಲ್ಲಿ ಬಹಳ ಜನ ಅತ್ಲಕಡೆಗೇ ಇದ್ದಾರೆ ಸ್ವಾಮಿ. ಇಲ್ಲಿ ಏನು ನಡೀತಿದೆ ಎಂದು ನೋಡೋದಕ್ಕೆ ಬರ್ತಾರೆ ಅಷ್ಟೆ.”

“ಎಲವೆಲವೋ ತುಮರಿ ರಾಮಚಂದ್ರ, ನಮ್ಮ ಕೈಯಲ್ಲಿ ಕಾಂಡೋಮ್ ಬದಲಿಗೆ ಖಡ್ಗ ಇದ್ದಿದ್ದರೆ ಇಷ್ಟೊತ್ತಿಗೆ ನಿನ್ನನ್ನು ಪರಂಧಾಮಕ್ಕೆ ಅಟ್ಟುಬಿಡುತ್ತಿದ್ದೆವು. ನಮ್ಮದು ಪಕ್ಕಾ ವೀರ್ಯಸನ್ಯಾಸ. ನಮ್ಮ ತಾಕತ್ತಿನ ಪ್ರಶ್ನೆ ಬಂದರೆ ಹೇಳ್ತೇವೆ ಕೇಳು-ಊರ ತುಂಬೆಲ್ಲ ಹಲವು ಬೀಜ ಬಿತ್ತಿಟ್ಟು ಕೆಲವು ಮಕ್ಕಳನ್ನು ಮಾಡಿದ್ದೇವೆ. ಒಬ್ಬನಿಗೆ ಮುಂಜಿಯನ್ನೂ ಮಾಡಿದ್ದೇವೆ. ಅವರೆಲ್ಲರಲ್ಲೂ ಅಪ್ಪನ ಅನುವಂಶೀಯತೆ ಹರಿಯದಿರುತ್ತದೆಯೇ? ಸದ್ಯ ತಪ್ಪಿಸಿಕೊಂಡ್ರೆ ಮುಂದಿನ ದಶಕದಲ್ಲಿ ಅವರೆಲ್ಲ ನಮ್ಮ ಸಂಖ್ಯಾಬಲವನ್ನು ಹೆಚ್ಚಿಸುತ್ತಾರೆ.

ನಾವೇನು ಬಳೆತೊಟ್ಟುಕೊಂಡಿಲ್ಲ. ಗೊತ್ತಾಯ್ತಲ್ಲ. ವೇದಿಕೆಗಳಲ್ಲಿ ಇಲ್ಲಿವರೆಗೆ ನಮ್ಮ ಸಾಚಾ ಮುಖವನ್ನೇ ತೋರಿಸುತ್ತಿದ್ದೆವು; ಯಾಕೆಂದ್ರೆ…ಯಾಕೆಂದ್ರೆ….ಯಾಕೆಂದ್ರೆ ಅಲ್ಲಿ ಫೋಟೋ ವೀಡಿಯೋ ಮಾಡ್ತಿರ್ತಾರಲ್ಲ? ಅದಕ್ಕೆ. ನಮ್ಮ ನಿಜವಾದ ಮುಖ ಹೇಗಿದೆ ಎಂಬುದು ನಿಮ್ಮಂತವರಿಗೆ ಕೆಲವರಿಗೆ ಮಾತ್ರ ಗೊತ್ತು. ಅಂದಹಾಗೆ ಗಿಂಡಿಗಳು ಯಾರೂ ಕೆನ್ನೆಯ ಮೇಲೆ ತಿಂದಿದ್ದನ್ನು ಹೇಳದಂತೆ ವ್ಯವಸ್ಥೆ ಮಾಡಿ. ಎಲ್ಲೆಲ್ಲಿ ಯಾರ್‍ಯಾರು ದೂರು ಕೊಡ್ತಾರೆ ಅಂತ ಸುದ್ದಿ ಸಿಕ್ತದೆಯೋ ಅವರನ್ನೆಲ್ಲ ಮಠಕ್ಕೆ ಎತ್ತಾಕ್ಕೊಂಡು ಬನ್ನಿ. ಮುಂದೆ ಏನು ಮಾಡ್ವೇಕೋ ಹೇಳ್ತೇವೆ ನಾವು. ದೂರು ಕೊಡುತ್ತೇವೆ ಎಂದು ಹೆದರಿಸುತ್ತಿರುವವರ ಮನೆಗಳವರಿಗೆ, ಹತ್ತಿರದ ಬಂಧುಬಳಗದ ಜನರಿಗೆ ಫೋನ್ ಮಾಡಿ ದಬಾಯಿಸಿ.

ಹಾಂ ಹೇಳ್ತೇವೆ ಕೇಳು..ರಾಮನ ಹೆಸರಿನಲ್ಲೇ ಎಲ್ಲಾ ಕೆಲಸಗಳೂ ಜರುಗಬೇಕು. ನಾವು ರಾವಣ ಎಂದು ಯಾವ ಕುರಿಗೂ ಗೊತ್ತಾಗಬಾರದು. ಕಡೀತಾರೆ ಅಂತ ಗೊತ್ತಾದ್ರೆ ಯಾವ ಕುರಿಯೂ ಸಲೀಸಾಗಿ ಕರೆದಲ್ಲಿಗೆ ಬರೋದಿಲ್ಲ. ಸೊಪ್ಪು ತೋರಿಸುತ್ತಲೇ ಎಳೆದುಕೊಂಡು ಬರಬೇಕಾಗ್ತದೆ. ನಿಮಗೆಲ್ಲ ಅದನ್ನು ಹೊಸದಾಗಿ ಹೇಳ್ಕೊಡುವ ಅಗತ್ಯವೇನಿಲ್ಲ ಬಿಡು, ನೀವೆಲ್ಲಾ ನಮ್ಮ ಆಸ್ಥಾನದಲ್ಲೇ ಬಿದ್ದು ಬೆಳೆದವರಲ್ಲವೇ? ಹೀಗಾಗಿ, ಧರ್ಮೋ ರಕ್ಷತಿ ರಕ್ಷಿತಃ ಗೊತ್ತಲ್ಲ ತುಮರಿ ರಾಮಚಂದ್ರ?

ಹೋಗಿ ನಿಮ್ಮ ನಿಮ್ಮ ಕೆಲಸದಲ್ಲಿ ಜಾಗ್ರತೆ ವಹಿಸಿ. ಮಠದ ಶ್ರೀರಕ್ಷೆಯ ಹೊಣೆಹೊತ್ತವರು ರಾತ್ರಿ ಪಾಳಿಯವರು ಎಲ್ಲಾ ಬಂದಿದ್ದಾರಾ? ಕತ್ತಿ ಕಂಬ್ಳಿ ಎಲ್ಲ ಆ ಕಾಲಕ್ಕಾಯ್ತು, ಈಗ ರೈಫಲ್ಲು , ಗ್ರೆನೇಡು ಇಂಥದ್ನೆಲ್ಲ ಇಟ್ಕಂಡಿರಬೇಕು. ನಮ್ಮ ಸ್ನೇಹಿತ ರಾಂಪಾಲರ ಸೈನ್ಯದಂತೆ ನೀವೂ ಸಹ. ಸಾಕೇತ ಅಂದ್ರೇನು ಕಡಿಮೆಯೇ? ಎಲ್ಲವೂ ಬಾಲ ಇಲ್ಲದ ಭಯಂಕರ ಕೋತಿಗಳೇ. ಭಸ್ಮಾಸುರನ ಆಸ್ಥಾನದಲ್ಲಿ ಇನ್ನಾರಿರಲು ಸಾಧ್ಯ?

ನಮಗೆ ಸಿಕ್ಕಂತ ಶಿಷ್ಯರು ಯಾವ ಸನ್ಯಾಸಿಗೂ ಸಿಗಲ್ಲಿಲ್ಲ ಎಂದು ಹೇಳಿದ್ದೇವೆ ನಾವು. ಹಾಗೆ ಹೇಳೋದ್ರಿಂದ ಕುರಿಗಳಿಗೆ ಬಹಳ ಖುಷಿ ಆಗ್ತದೆ. ಅವು ಕರೆದಲ್ಲಿಗೆ ಬರ್ತವೆ, ಹಾಕಿದ ಹುಲ್ಲು ತಿಂದು, ಹೇಳಿದ ಕೆಲಸ ಮಾಡ್ತವೆ. ಇದನ್ನೆಲ್ಲ ದಶಕಗಳಿಂದ ನೋಡ್ತಿದ್ದೇವೆ ನಾವು.

ಮಾವಂದಿರು ಬರದಂತೆ ವ್ಯವಹಾರ ಮಾಡಿರ್ತೇವೆ ನಾವು, ಆದರೂ ಆ ಸಮಾನರು, ಪಬ್ಲಿಕ್ಕು ಎಲ್ಲಾ ಕೂಗ್ವಾರ್ದು ಅಂತ ಕಣ್ಣೊರೆಸೋ ತಂತ್ರಕ್ಕಾಗಿ ಅವರು ಬಂದ ಹಾಗೆ ನಟಿಸ್ತಾರೆ, ಬಂದು ಕಾಪಿ ಕುಡ್ಕೊಂಡು ಹೋಗ್ತಾರೆ. ಮಾಧ್ಯಮಗಳು ಜೋರಾಗಿ “ಬಂದಿದ್ರು, ಬಂದಿದ್ರು” ಅಂತ ಬಿತ್ತರಿಸುತ್ತವೆ. ಆಗ ವಿರುದ್ಧ ಕೂಗುವವರಿಗೆಲ್ಲ ಸ್ವಲ್ಪ ಸಮಾಧಾನ ಆಗ್ತದೆ. ನಂತರ ಹಾಗೂಹೀಗೂ ಹದಿನೈದು ದಿನ ತಳ್ಳಬಹುದು.

ಒಂದೊಮ್ಮೆ ಮಾವಂದಿರು ಬಂದರೆ ಅಕ್ಷೋಹಿಣಿ ಸೈನ್ಯದ ಸಪೋರ್ಟ್ ಇದೆ ಎಂಬಂತೆ ಭಾಸವಾಗಬೇಕು. ಮತ್ತು ಮಾಧ್ಯಮಗಳಲ್ಲೂ ಅದು ಕಾಣಿಸಬೇಕು. “ಅಪಾರ ಜನಬೆಂಬಲವಿದೆ” ಎಂಬ ಅಭಿಪ್ರಾಯ ಮೂಡುವಂತಾಗಬೇಕು. ಆಮೇಲೆ ನಾವು ರಾತ್ರೋರಾತ್ರಿ ಪವಾಡ ನಡೆದುಹೋಯಿತು ಎಂದು ವೇದಿಕೆಯಲ್ಲಿ ಕುಳಿತು ಭೋಂಗು ಬಿಡ್ತೇವೆ, ಹಾಗೆ ಮಾಡಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿ. ಅದಕ್ಕಾಗಿ ರಚಿಸಿದ ಸಮಿತಿಯ ಅಧ್ಯಕ್ಷ ಎಲ್ಲಿ ಹೋದ? ಧರ್ಮೋ ರಕ್ಷತಿ ರಕ್ಷಿತಃ ಗೊತ್ತಲ್ಲ ತುಮರಿ ರಾಮಚಂದ್ರ?

Thumari Ramachandra

source: https://www.facebook.com/groups/1499395003680065/permalink/1659324754353755/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s