ಕ್ರಿಮಿನಲ್‍ಗಳಿಗೆ ಮಾಡಿದ್ದನ್ನು ಅನುಭವಿಸುವ ಕಾಲ ಬಂದೇ ಬರುತ್ತದೆ

ಕ್ರಿಮಿನಲ್‍ಗಳಿಗೆ ಮಾಡಿದ್ದನ್ನು ಅನುಭವಿಸುವ ಕಾಲ ಬಂದೇ ಬರುತ್ತದೆ

ನನ್ನ ಇಪ್ಪತ್ತೈದನೇ ವಯಸ್ಸಿನಲ್ಲಿ ಅತ್ಯಂತ ಸುಂದರ ತರುಣನಾಗಿದ್ದ ಶ್ರೀಪಡ್ರೆಯವರನ್ನು ಒಮ್ಮೆ ಕಂಡಿದ್ದೆ. ನಿರಂತರ ಓಡಾಟ, ಸದಾ ಯಾವುದೋ ಕೆಲಸಕಾರ್ಯ ಮಾಡುವಂತಹ ಮನೋಭಾವನೆ ಆ ವ್ಯಕ್ತಿಯಲ್ಲಿರುವುದು ಎದ್ದು ಕಾಣುತ್ತಿತ್ತು. ಈ ಮನುಷ್ಯ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿರಬಹುದೇ ಎನಿಸಿತು; ಹಾಗಿರಲಿಲ್ಲ. ಶ್ರೀಪಡ್ರೆಯವರ ಅಂತರಂಗ ಮತ್ತು ಬಹಿರಂಗ ಒಂದಾಗಿ ಅವರು ’ಅಡಿಕೆ ಪತ್ರಿಕೆ’ಗೆ ತೊಡಗಿಕೊಂಡಿದ್ದರು.

ದೇಶದಲ್ಲಿ ಅದರಲ್ಲೂ ಕನ್ನಡ ನಾಡಿನಲ್ಲಿ ಉಳಿದೆಲ್ಲ ಬೆಳೆಗಾರರಿಗೆ, ರೈತರಿಗೆ ಯಾವ್ಯಾವುದೋ ಪತ್ರಿಕೆಗಳಿದ್ದವು. ವರ್ಷಕ್ಕೆ ಒಂದೇ ಬೆಳೆಯಾದ ಮತ್ತು ಯೋಚಿಸಿದರೆ ಕಷ್ಟದಿಂದ ಬೆಳೆಯುವ ಬೆಳೆಯಾದ ಅಡಿಕೆ ಕೃಷಿಗೆ ಕುರಿತ ಆಗು-ಹೋಗುಗಳ ಬಗೆಗೆ ಬೆಳೆಗಾರರು, ಮೊದಲ ಹಂತದ ವ್ಯಾಪಾರಿಗಳು ಹೇಳಿಕೇಳಿ ಮಾಡಿಕೊಳ್ಳುವುದಕ್ಕೆ ಯಾವುದೇ ಪತ್ರಿಕೆ ಇರಲಿಲ್ಲ. ಅಡಿಕೆ ಕೃಷಿಗೆ ಇರುವ ಹಲವು ವಿಧದ ತೊಡಕುಗಳನ್ನು, ಬಾಧ್ಯತೆಗಳನ್ನು ಚರ್ಚಿಸಲು, ಪರಿಹಾರ ಕಂಡುಕೊಳ್ಳಲು ’ಅಡಿಕೆ ಪತ್ರಿಕೆ’ಯನ್ನು ಆರಂಭಿಸಿ, ಅದಕ್ಕೆ ಅಡಿಕೆ ಕೃಷಿಕರನ್ನು ಚಂದಾದಾರರನ್ನಾಗಿ ಮಾಡಿಕೊಳ್ಳಲು ಅವರು ಓಡಾಡುತ್ತಿದ್ದರು.

ವಯಸ್ಸು ಸರಿದು ಶ್ರೀಪಡ್ರೆಯವರ ಹಣ್ಣುಗೂದಲಿನ ಸ್ವರೂಪವನ್ನು ದೃಶ್ಯ ಮಾಧ್ಯಮದಲ್ಲಿ ಕಂಡೆ. ನನಗೊಂದು ಕುತೂಹಲವಿತ್ತು; ಶ್ರೀಪಡ್ರೆಯವರಂತಹ ಚಿಂತಕರು, ಹೊಸತನದ ಹರಿಕಾರರು ಹಳದೀ ಭಕ್ತರಾಗಿದ್ದಾರೋ ಅಥವಾ ಚಿಂತಕರಾಗಿ ಸತ್ಯಕ್ಕಾಗಿ ಕೆಲಸಮಾಡುತ್ತಿದ್ದಾರೋ ಎಂಬುದು. ಇಂದು ಅದು ಬಗೆ ಹರಿದಿದೆ. ಅಷ್ಟೇ ಅಲ್ಲ, ಇನ್ನೂ ಹಲವರು ಚಿಂತನೆಗೆ ತೊಡಗಿದ್ದಾರೆ ಎಂಬುದು ಖಾತ್ರಿಯಾಗಿದೆ.

ಶ್ಯಾಮಾ ಶಾಸ್ತ್ರಿಯವರ ಪರಿಚಯ ನನಗಷ್ಟು ಇರಲಿಲ್ಲ; ಆದರೆ ಅವರ ಬಗ್ಗೆ ಕೇಳಿ ಗೊತ್ತಿತ್ತು. ಅವರ ವ್ಯಕ್ತಿತ್ವ ಸಾಮಾನ್ಯವಾಗಿ ಹೀಗಿತ್ತು ಎಂಬುದನ್ನು ಕಲ್ಪಿಸಿಕೊಳ್ಳಲಾಗದ ನಿರ್ಭಾವುಕ ವ್ಯಕ್ತಿ ನಾನಲ್ಲ. ಪ್ರಾಯಶಃ ಅವರ ಪ್ರಾಮಾಣಿಕತೆ, ಸ್ನೇಹಪರತೆ, ಅತಿಸಾತ್ವಿಕತೆ ಮತ್ತು ಭಕ್ತಿ-ಶ್ರದ್ಧೆಗಳೇ ಅವರನ್ನು ಒಂದು ಹಂತದಲ್ಲಿ ಮಾನಸಿಕವಾಗಿ ಯಾತನೆಯನ್ನು ಅನುಭವಿಸುವಂತೆ ಮಾಡಿದವು ಎನಿಸುತ್ತದೆ.

ನಂಬಿದ ಮೌಲ್ಯಗಳ ರಕ್ಷಣೆಗೆ ಕಟಿಬದ್ಧವಾಗಿದ್ದ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ ಸಾಯುವ ಮುನ್ನ ಕೆಲವುದಿನ ಮಾನಸಿಕ ಚಿತ್ರಹಿಂಸೆಯನ್ನು ಅನುಭವಿಸಿದ್ದು ಅಂದಾಜಿಗೆ ಬರುತ್ತದೆ. ಅದನ್ನು ಕೆಲವರು ಹೇಳಿದ್ದನ್ನೂ ಕೇಳಿದ್ದೇನೆ. ಅತ್ಯಂತ ಬಡ ಕುಟುಂಬದಲ್ಲಿ ಹುಟ್ಟಿ ಐ.ಎ.ಎಸ್ ಅಧಿಕಾರಿಯಾಗಿ, ದೇಶಕ್ಕೆ ದೇಶವೇ ಹೆಮ್ಮೆಪಡಬಹುದಾದ ಕೆಲಸ ಮಾಡುತ್ತಿದ್ದ ಡಿ.ಕೆ.ರವಿಯವರ ಕೊನೆ ಹೇಗಾಯ್ತೋ ಹಾಗೆಯೇ ಶ್ಯಾಮಾ ಶಾಸ್ತ್ರಿಯವರ ಕೊನೆಯೂ, ಅದನ್ನು ಆತ್ಮಹತ್ಯೆಯೆಂಡು ಕೆಲವರು ಹೇಳಿದರೂ, ಅದು ಅತ್ಯಂತ ನಿಗೂಢ.

ಯಾರದೋ ಹಾದರಕ್ಕೆ ಯಾರೋ ಸಾಯಬೇಕಾಗಿ ಬಂದದ್ದು ಮಾತ್ರ ವಿಧಿಲಿಖಿತವೆನ್ನಬೇಕೋ ಅಥವಾ ಬುದ್ಧಿವಂತ ಸಮಾಜದ ದೌರ್ಬಲ್ಯದ ಘಳಿಗೆ ಎನ್ನಬೇಕೋ ತಿಳಿಯುತ್ತಿಲ್ಲ. ಸಾಮಾನ್ಯವಾಗಿ ಹಾದರದ ಘಟನೆಗಳ ಹಿಂದೆಲ್ಲ ಒಂದಲ್ಲ ಒಂದು ಸಾವಿನ ಕತೆ ಕೇಳಿಬರುವುದು ಸಹಜ; ಹಾದರಕ್ಕೆ ಇಳಿದವರು ಕಾವಿಯೇ ಆಗಿರಲಿ, ಖಾಕಿಯೇ ಆಗಿರಲಿ, ಖಾದಿಯೇ ಆಗಿರಲಿ, ಅವರು ಎಲ್ಲವನ್ನೂ ಬಿಟ್ಟಿರುತ್ತಾರೆ ಎಂಬುದು ಪ್ರಾಜ್ಞರ ಅಭಿಪ್ರಾಯ. “ಕಾಮಾತುರಾಣಾಂ ನ ಭಯಂ ನ ಲಜ್ಜಾ” ಎಂದು ಆದಿಶಂಕರರು ಅಷ್ಟು ಹಿಂದೆಯೇ ತಮ್ಮ ಹರೆಯದಲ್ಲೇ ಹೇಳಿದ್ದಾರೆ. ಕಾಮವೆಂಬುದೇ ಹಾಗೆ. ಅದರಲ್ಲೂ ಹೆಣ್ಣು, ಹೊನ್ನು ಮತ್ತು ಮಣ್ಣು ಈ ಮೂರರ ಅಪೇಕ್ಷೆಯ ಕಾಮ ಇರುವವರಿಗೆ ಭಯವೂ ಇಲ್ಲ, ನಾಚಿಕೆಯೂ ಇಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಅತ್ಯಂತ ಖೇದದ ಸಂಗತಿಯೆಂದರೆ ಶಂಕರರ ಹೆಸರನ್ನು ಬಳಸಿಕೊಳ್ಳುವ ಧಾರ್ಮಿಕ ಮುಖಂಡರೇ ಇಂದು ಕಚ್ಚೆಹರುಕರಾಗಿ ನಿರ್ಲಜ್ಜರೂ, ಭಯರಹಿತರೂ ಆಗಿದ್ದಾರೆ.

ಸಮಾಜದಲ್ಲಿ ಯಾರೋ ಒಬ್ಬೊಬ್ಬರು ಏನೋ ಗೊಣಗಿದರೆ ಅದು ತೀರಾ ವೈಯಕ್ತಿಕವೆನಿಸಬಹುದು. ಆದರೆ ಸಮಾಜದ ಬಹುಪಾಲು ಜನ “ಆ ವ್ಯಕ್ತಿ ಸರಿಯಿಲ್ಲ” ಎಂಬುದನ್ನು ಹೇಳತೊಡಗಿದರೂ ಇನ್ನೂ ಕೆಲವರು ಮಾತ್ರ ಯಾಕಾಗಿ ಜೈಕಾರ ಹಾಕುತ್ತಾರೆ ಎಂಬುದಕ್ಕೆ ಕಾರಣಗಳನ್ನು ನೀವು ಈಗಾಗಲೇ ತಿಳಿದಿದ್ದೀರಿ. ನನ್ನನ್ನೂ ಸೇರಿದಂತೆ ಸಮಾಜದ ಹಳಬರಲ್ಲಿ ಅನೇಕರು ಶ್ರೀಧರ ಸ್ವಾಮಿಗಳಿಂದ ಹಿಡಿದು ಹಲವು ಸ್ವಾಮಿಗಳನ್ನು ಬಲ್ಲವರು. ಆದರೆ ಯಾವೊಬ್ಬ ಸ್ವಾಮಿಗಳ ವಿರುದ್ಧ ಏನನ್ನೂ ಹೇಳುವ ಪ್ರಶ್ನೆ ಬರಲಿಲ್ಲ ಏಕೆಂದರೆ ಅವರ ನಡತೆ ಯತಿಧರ್ಮದಿಂದ ವಿಮುಖವಾಗಿರಲಿಲ್ಲ. ಯತಿಧರ್ಮಯಾವುದೆಂದು ಗೊತ್ತಿರದ ಭಕ್ತರಿಗೆ ಯತಿವೇಷದವ ಹೇಳಿದ್ದೇ ಸತ್ಯವೆಂಬ ಭಾವನೆ ಇರುತ್ತದೆ. ಅಂತವರಲ್ಲಿ ಕೆಲವರಿಗೆ ಸಾಕ್ಷಾತ್ ಆದಿಶಂಕರರೇ ಬಂದು “ಆ ವ್ಯಕ್ತಿ ಸರಿಯಿಲ್ಲ”ಎಂದು ಹೇಳಿದರೂ, ಶಂಕರರನ್ನೇ ಹೊಡೆದು ಮುಗಿಸಲು ಸಿದ್ಧವಾಗಿಬಿಡಬಹುದು.

ಹಲವಾರು ಕ್ರಿಮಿನಲ್‍ಗಳ ಕತೆಗಳನ್ನು ಓದಿ, ಕೇಳಿ ಬಲ್ಲ ನನಗೆ ಕ್ರಿಮಿನಲ್‍ಗಳಿಗೆ ಎನಾಗುತ್ತದೆ ಎಂಬುದರಲ್ಲಿ ಸಂದೇಹವೇನಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಹೇಳುತ್ತದೆ. ಆಗ ಹೊಸಮಾದರಿಯ ಕಿರೀಟೋತ್ಸವಕ್ಕೆ ನೀವೆಲ್ಲ ಸಾಕ್ಷೀಭೂತರಾಗುತ್ತೀರಿ ಎಂಬಲ್ಲಿ ಎರಡು ಮಾತಿಲ್ಲ.

ಸಂಸಾರದ ಬಂಡಿಗೆ ಗಂಡಹೆಂಡಿರು ಎರಡು ಚಕ್ರಗಳಂತೆ. ಅವುಗಳಲ್ಲಿ ಒಂದು ಚಕ್ರ ಹಾಳಾದರೂ ಬಂಡಿ ನಡೆಯೋದು ಕಷ್ಟ. ಅನುರೂಪ ದಾಂಪತ್ಯ ಸುಖವನ್ನು ಅನುಭವಿಸುತ್ತ ಬದುಕಿದ್ದ ವ್ಯಕ್ತಿಗೆ ಸಂಗಾತಿಯ ವಿಯೋಗ ಹೇಳಲಾರದ ದುಃಖವನ್ನು ಉಂಟುಮಾಡುತ್ತದೆ. ಭಾಷಣದಲ್ಲೋ ಪ್ರವಚನದಲ್ಲೋ ಯಾರದೋ ಮನೆಯನ್ನು ಉದ್ಧಾರ ಮಾಡಿದಷ್ಟು ಸಸಾರ ಸಂಸಾರವನ್ನು ಕೃತಿಯಿಂದ ಉದ್ಧಾರಮಾಡುವುದಲ್ಲ. ಸಸಾರದ ಮಧ್ಯೆ ಸೊನ್ನೆ ಸೇರಿಕೊಂಡೇ ಸಂಸಾರವಾಗಿದ್ದರಿಂದ ಸಂಸಾರ ಬಲುಕಠಿಣ ಎಂದು ದಾಸರಾದಿಯಾಗಿ ಹಲವು ಬೌದ್ಧಿಕರು ಹೇಳಿದ್ದಾರೆ.

ನಮ್ಮ ಜನರಲ್ಲಿ ಮೊದಲಿನಿಂದ ನಾನು ನೋಡಿದ ಒಂದು ದೌರ್ಬಲ್ಯವೆಂದರೆ ತಮ್ಮ ಕಾಲ ಬುಡಕ್ಕೆ ಬರುವವರೆಗೂ ಪರಿಸ್ಥಿತಿಯ ಅರಿವಾಗದೇ ಇರುವುದು. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನೂ ಆಗಾಗ ಕೊಟ್ಟಿದ್ದೇನೆ. “ಕಳ್ಳರು ಬಂದು ಪಕ್ಕದ ಮನೆಯನ್ನು ಕದ್ದು ಹೋದರೆ ಒಳ್ಳೇದಾಯ್ತು ಬಿಡು” ಎಂಬ ಹುಳುಕಿನಲ್ಲಿ ತಮ್ಮ ಮನೆಬಾಗಿಲು ಭದ್ರ ಪಡಿಸಿಕೊಳ್ಳುವ ಮನೋಭಾವ. ಬಂದದ್ದು ದರೋಡೆಕೋರರ ಗ್ಯಾಂಗು, ಅದು ಬಾಗಿಲನ್ನು ತೆರೆಸಿ ಅಥವಾ ಒಡೆದು ಒಳಗೆ ನುಗ್ಗುತ್ತದೆ ಎಂಬ ನೈಜ ಯೋಚನೆ ಅನೇಕರಲ್ಲಿ ಇಲ್ಲದಿರುವುದರಿಂದ ಶ್ಯಾಮಾಶಾಸ್ತ್ರಿಯಂತಹ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ.

ಇಂದು ಹಿಂದಿನ ಕಾಲದಂತಲ್ಲ, ಅವಿಭಕ್ತ ಕುಟುಂಬಗಳೂ ಇಲ್ಲ. “ಗಂಡ ಹೆಂಡತಿ ಒಟ್ಟಿಗೆ ಇದ್ದರೇ ಅದು ಜಾಯಿಂಟ್ ಫ್ಯಾಮಿಲಿ” ಎಂದು ನಮ್ಮ ಕವಳದ ಗೋಪಣ್ಣ ತಮಾಷೆ ಮಾಡುತ್ತಿದ್ದ.

ಚಿಕ್ಕ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿ ಸಿಕ್ಕಿದರೆ ಅವರು ತೃಪ್ತರಾಗುತ್ತಾರೆ ಮತ್ತು ಸರಿಯಾಗಿ ಬೆಳೆಯುತ್ತಾರೆ. ಇದರರ್ಥ ಅಪ್ಪನೋ ಅಮ್ಮನೋ ಯಾರೋ ಒಬ್ಬರು ತೀರಿಹೋಗಿರುವ ಮಕ್ಕಳು ಸರಿಯಾಗಿ ಬೆಳೆಯುವುದಿಲ್ಲವೆಂದಲ್ಲ. ಒಂಟಿ ಪಾಲಕರಿಂದ ಅದು ಕಷ್ಟಸಾಧ್ಯದ ಕೆಲಸ. ಕುಟುಂಬದಲ್ಲಿ ಅಮ್ಮನ ಪಾತ್ರ ಅಮ್ಮನೇ ನಿರ್ವಹಿಸಿದರೆ ಮತ್ತು ಅಪ್ಪನ ಪಾತ್ರ ಅಪ್ಪನೇ ನಿರ್ವಹಿಸಿದರೆ ಆಗ ಮಕ್ಕಳಿಗೂ ನೆಮ್ಮದಿಯಿರುತ್ತದೆ. ನನ್ನ ಅನುಭವವನ್ನೇ ಹೇಳುವುದಾದರೆ, ನನ್ನ ಮಕ್ಕಳು ರಾತ್ರಿ ನಮ್ಮಿಬ್ಬರ ನಡುವೆ ಮಲಗಿ ಕತೆ ಕೇಳುತ್ತ ನಿದ್ದೆಗೆ ಜಾರುತ್ತಿದ್ದವು. ಅಪ್ಪ ಮತ್ತು ಅಮ್ಮ ಇಬ್ಬರಲ್ಲಿ ಯಾರು ಬೇಕೆಂದು ಕೇಳಿದರೆ ಇಬ್ಬರೂ ಬೇಕೆಂದು ಹೇಳುತ್ತಿದ್ದವು.

ಹಾಗಂತ ಅಪ್ಪನಿಂದ ಏಟುತಿಂದು ಸಿಟ್ಟು ಬಂದಾಗ “ಈ ಅಪ್ಪನೇ ಬೇಡ, ಎಲ್ಲಾದರೂ ಹೋಗಲಿ” ಎಂದು ಬುಸುಗುಡುವುದೂ ಕೆಲವು ಕ್ಷಣಗಳಕಾಲ ನಡೆಯುತ್ತಿತ್ತು. ಅಮ್ಮ ಹೊಡೆದ ದಿನ ಮತ್ತೆ ಅಪ್ಪನ ಸಾಂತ್ವನದ ಹೆಗಲೇ ಮಕ್ಕಳಿಗೆ ಗೆಲುವು ನೀಡುತ್ತಿತ್ತು. ಮಕ್ಕಳಿಗೆ, ಅದರಲ್ಲೂ ಪುಟ್ಟ ಮಕ್ಕಳಿಗೆ ಏನು ಗೊತ್ತಾಗುತ್ತದೆ? ಪಾಪ.

ಹೊಸದಾದ ಕಾರಿನ ಮೇಲೆ ಕಲ್ಲಿನಿಂದ ಗೀಚಿದ ಸಣ್ಣ ಹುಡುಗ ಹಸ್ತಗಳನ್ನು ಅವನಪ್ಪ ಕೋಪದಲ್ಲಿ, ಸುತ್ತಿಗೆಯಿಂದ ಹೊಡೆದೂ ಹೊಡೆದೂ ಜಜ್ಜಿ ಸಮಾಧಾನ ಪಟ್ಟುಕೊಂಡನಂತೆ. ಅಪ್ಪನ ಕೋಪ ಇಳಿಯುವ ಮೊದಲೇ ಅಮ್ಮ ಅವನನ್ನು ಆಸ್ಪತ್ರೆಗೆ ಸೇರಿಸಿಯಾಗಿತ್ತು. ವಿಷಯ ತಿಳಿದ ಅಪ್ಪ ಆಸ್ಪತ್ರೆಗೆ ಧಾವಿಸಿದರೆ ಮಗುವಿನ ಹಸ್ತಗಳು ಪೂರ್ತಿ ಚಿತ್ರಾನ್ನವಾಗಿರುವ ಕಾರಣ ಬೆರಳುಗಳನ್ನೆಲ್ಲ ಕತ್ತರಿಸಿ ಬ್ಯಾಂಡೇಜು ಹಾಕಲಾಗಿತ್ತು. ಅಪ್ಪ ಸಮೀಪಿಸಿದಾಗ ಮಗ ಕೇಳಿದ “ಅಪ್ಪಾ, ಅಪ್ಪಾ, ನನಗೆ ಹೊಸ ಕೈಬೆರಳುಗಳು ಯಾವಾಗ ಹುಟ್ಟುತ್ತವೆ?” ಅಪ್ಪ ಮಾತನಾಡಲಿಲ್ಲ. ಮಗುವನ್ನು ಮನೆಗೆ ಕರೆತಂದ ಮೇಲೆ ಆ ಅಪ್ಪ ಕಾರನ್ನು ನೋಡಲು ಹೋದರೆ ಕಲ್ಲಿನಲ್ಲಿ ಮಗು ಹೀಗೆ ಗೀಚಿತ್ತು-“ಐ ಲಯ್ ಯೂ ಡ್ಯಾಡಿ.” ಅಪ್ಪನ ಕ್ಷಣಾರ್ಧದ ಶೀಘ್ರಕೋಪಕ್ಕೆ ಮಗನ ಹಸ್ತಗಳು “ಗತಂ ಗತಃ” ಆಗಿಬಿಟ್ಟಿದ್ದವು. ಪಶ್ಚಾತ್ತಾಪಪಟ್ಟುಕೊಂಡ ಅಪ್ಪ ಅತ್ತನಂತೆ; ಅತ್ತರೆ ಹೋದ ಹಸ್ತ ಮರಳುವುದೇ? ಕೋಪಕ್ಕೊಂದು ಮಿತಿಯಿರಬೇಕಿತ್ತು, ವಿವೇಚನೆ ಇರಬೇಕಿತ್ತು, ಅಲ್ಲವೇ?

ಬಹುಕಾಲ ಸಮಾಜ ಸೇವೆ ಮಾಡಿದ್ದೇವೆ ಎನ್ನುತ್ತ ಹೆಗಲ ಸುತ್ತು ಶಾಲುಹೊದೆದುಕೊಂಡು ತಿರುಗುವ ಕೆಲವರು ಅನಾಚಾರವನ್ನ ಬೆಂಬಲಿಸುತ್ತ ಶ್ಯಾಮಾ ಶಾಸ್ತ್ರಿಗೆ ಹಗಲಿರುಳೂ ಕರೆಗಳನ್ನು ಮಾಡುತ್ತ ಹಿಂಸೆ ಕೊಡುವಾಗ ಅವರಿಗಷ್ಟು ವಿವೇಚನೆ ಬೇಕಾಗಿತ್ತು. ಶ್ಯಾಮಾ ಶಾಸ್ತ್ರಿಗೆ ಒತ್ತಡ ಹೆಚ್ಚುತ್ತಿದೆ ಎಂದು ತಿಳಿದಾಗ ಇಡೀ ಸಮಾಜ ಅದನ್ನರಿತು ವಿವೇಚನೆಗೆ ತೊಡಗಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಬೇಕಿತ್ತು. ಹೋಗಲಿ ಬಿಡಿ ಇದೂ ಕೂಡ “ಗತಂ ಗತಃ” ಸತ್ತಮೇಲೆ ತಲೆಗೊಂದರಂತೆ ಆಡುವ ಸಾವಿರ ಮಾತುಗಳಲ್ಲಿ ನನ್ನ ಮಾತೂ ಒಂದು ಎಂದುಕೊಳ್ಳಿ. ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನೂ ಬರೆಯಲಾರೆ.

ಅವರ ಮಡದಿ, ಮಕ್ಕಳಿಗೆ, ಕುಟುಂಬವರ್ಗದವರಿಗೆ ದೇವರು ದೀರ್ಘಾಯುಷ್ಯ, ಆರೋಗ್ಯ, ಐಶ್ವರ್ಯ ಎಲ್ಲವನ್ನೂ ನೀಡಿ ಸಮೃದ್ಧಗೊಳಿಸಲೆಂಬ ನಿಮ್ಮೆಲ್ಲರ ಪ್ರಾರ್ಥನೆಯ ಜೊತೆಗೆ ತುಮರಿಯ ದನಿಯೂ ಸೇರಿದೆ. ಸತ್ಯಕ್ಕಾಗಿ ಹೋರಾಡುವ ಸಮಸ್ತರಿಗೂ ತುಮರಿ ಕೃತಜ್ಞನಾಗಿದ್ದಾನೆ.

Thumari Ramachandra

source: https://www.facebook.com/groups/1499395003680065/permalink/1654197728199791/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s