ಮಠದ ಹೋರಿ ಮೈಸೂರಿನ ಮಣಕಗಳಿಗೆ ಹಾರಿದ ’ಪುಣ್ಯ’ ಕತೆ

ಮಠದ ಹೋರಿ ಮೈಸೂರಿನ ಮಣಕಗಳಿಗೆ ಹಾರಿದ ’ಪುಣ್ಯ’ ಕತೆ

(ವಿ.ಸೂ.- ಹಾವಾಡಿಗನ ಮಠಕ್ಕೆ ಕಣ್ಮುಚ್ಚಿ ತೆರಳುವ ಶ್ರದ್ಧಾಳುಗಳು ಕೈಕಾಲು ಮುಖ ತೊಳೆದುಕೊಂಡು, ಹಾವಾಡಿಗ ಸಂಸ್ಥಾನಾಧೀಶ್ವರರ ಭಾವ ಚಿತ್ರ ಮತ್ತು ಅವರ ಬಾವಯ್ಯನ ಚಿತ್ರಗಳೆದುರು ದೀಪ ಧೂಪ ಹಚ್ಚಿಟ್ಟು ಕೈಮುಗಿದು ಮಣೆಯ ಮೇಲೆ ಕುಳಿತು ಈ ಕತೆಯನ್ನು ಓದುವುದು.)

ತುಮರಿ ಬರೆಯುತ್ತಿರುವ ಲೇಖನಗಳನ್ನೆಲ್ಲ ಗ್ರಂಥ ರೂಪದಲ್ಲಿ ಪ್ರಕಟಿಸುತ್ತೇವೆಂದು ’ಮಠದ ಹೋರಿ ಮತ್ತು ಇತರ ಕತೆಗಳು’ಪುಸ್ತಕವನ್ನು ಪ್ರಕಟಿಸುವ ಸಮಿತಿ ತಿಳಿಸಿದೆ. ಮಹಾಭಾರತದ ಹೋಲಿಕೆಗಾಗಿ ಅದರಲ್ಲಿ ಈ ಕೆಳಗಿನ ಹದಿನೆಂಟು ಕಾಂಡಗಳನ್ನು ಸೇರಿಸಲು ತೀರ್ಮಾನಿಸಿದೆ-

೧. ಬಾಲ್ಯ ಮತ್ತು ಬೀಚ್ ಕಾಂಡ
೨. ಜಾತಕ ಬದಲಾವಣೆ ವಶೀಲಿ ಕಾಂಡ
೩. ವೀರ್ಯಸನ್ಯಾಸ ಪದಗ್ರಹಣ ಸೀಟಾರೋಹಣ ಕಾಂಡ
೪. ಈರುಳ್ಳಿ ಉಪ್ಪಿಟ್ಟು ಮತ್ತು ಬಜೆ ಕಾಂಡ
೫. ಬಾವಯ್ಯ,ಗುರುಕುಲ, ಬಾಲಬಸುರಿ ಕಾಂಡ
೬. ಐಫೋನ್, ಐಪ್ಯಾಡ್ ಮತ್ತು ಇಂಟರ್ನೆಟ್ ಕಾಂಡ
೭. ಕತಾ ಕಾಂಡ
೮. ಏಕಾಂತ ಕಾಂಡ
೯. ಮಿಥುನ ಕಾಂಡ
೧೦.ಅತ್ಯಾಚಾರ ಕಾಂಡ
೧೧.ಮಾಟಮಂತ್ರ ಕಾಂಡ [ಪ್ರತ್ಯಂಗಿರಾ, ರಕ್ತಾಕ್ಷಿ, ಬಗಳಾಮುಖಿ, ಮಾರಣಹೋಮ, ಇನ್ನೂ ಬಹುವಿಧ ಯಂತ್ರ-ಮಂತ್ರ-ತಂತ್ರ ಸಹಿತ ಕೋಗಾರ್‍ ಘಾಟಿಯ ಕಾಡಿನೊಳಗೆ ನಡೆಸಿದ ಕ್ರತ್ರಿಮದ ಹೋಮವನ್ನೂ ಒಳಗೊಂಡು]
೧೨.ಸೂಟ್ ಕೇಸ್ ಮತ್ತು ಇಮ್ಮಡಿ ಇಂದ್ರಜಾಲ ಕಾಂಡ
೧೩.ಪರೀಕ್ಷಾ ಕಾಂಡ
೧೪.ದೊಣ್ಣೆನಾಯಕರ ಕಾಂಡ
೧೫.ಪೂಜಾ ಕಾಂಡ [ಬಾವಯ್ಯ ಪೂಜೆ, ಅಕ್ಕಯ್ಯ ಪೂಜೆ, ಹನುಮಾನ್ ಚಾಳೀಸು, ಲಲಿತಾ ಸಹಸ್ರನಾಮ, ಸೌಂದರ್ಯಲಹರಿ ಎಂಟನೇ ಶ್ಲೋಕ, ಆದಿತ್ಯ ಹೃದಯ ಇವೆಲ್ಲವೂ ಸೇರಿದಂತೆ]
೧೬.’ಪ್ರವಚನ’ ಕಾಂಡ
೧೭ ಸೀಟಾವರೋಹಣ ಕಾಂಡ
೧೮.ಪರಪ್ಪವನ ಮುದ್ದೆ ಕಾಂಡ

ವಾಸ್ತವವಾಗಿ ರಾಂಗಾನುಗ್ರಹದ ಜೊತೆಗೆ ’ಮಠದ ಹೋರಿ ಮತ್ತು ಇತರ ಕತೆಗಳು’ ಪುಸ್ತಕವೂ ಬಿಡುಗಡೆಗೊಳ್ಳಬೇಕಿತ್ತು. ಕಾರಣಾಂತರಗಳಿಂದ ಅದು ತಡವಾಗಿದೆ ಅನಿಸುತ್ತದೆ. ಪರವಾಗಿಲ್ಲ. ಅಲ್ಲಿನ ಕತೆಗಳ ಸಾಲಿಗೆ ಇನ್ನೊಂದಷ್ಟು ಕತೆಗಳು ಸೇರುತ್ತಲೇ ಇರುತ್ತವೆ.

ಮಂಗಳಗ್ರಹದಲ್ಲಿರಬಹುದಾದ ಜೀವಿಯನ್ನಾದರೂ ಹುಡುಕಲು ಉಪಕರಣಗಳಿವೆ; ಆದರೆ ಮಠದ ಹೋರಿ ಹಾರುವುದನ್ನು ಸೆರೆಹಿಡಿಯುವ ಉಪಕರಣಗಳು ಈ ಭೂಮಿಯಲ್ಲಿ ಇನ್ನೂ ತಯಾರಾದ ಹಾಗಿಲ್ಲ….!! ಬಾಗಿಲಲ್ಲಿ ಬ್ರಹ್ಮರಾಕ್ಷಸನಿರುವ ಅನುಮಾನ ಬಂದರೆ ಏಕಾಂತ ನಡೆಯೋದಿಲ್ಲ. ಅಷ್ಟೇ ಅಲ್ಲ, ಮಿಥ್ಯಾನಂದನ ಏಕಾಂತಕ್ಕೆ ಒಂದೇ ಕೋಣೆ ಕಾಯಂ ಆಗಿತ್ತು. ಹಾವಾಡಿಗನದ್ದು ಹಾಗಲ್ಲ, ಹೋದಲ್ಲೆಲ್ಲ ಅನಿರೀಕ್ಷಿತವಾಗಿ ಏಕಾಂತ ಕೊಠಡಿ ನಿರ್ಮಿಸಿಕೊಳ್ಳುವುದರಿಂದ ಯಾವುದೇ ಡೌಟು ಬಾರದ ರೀತಿಯಲ್ಲಿ ನಡೆದುಕೊಳ್ಳುವುದು ಗಿಂಡಿಗಳ ಸೇವೆಯಾಗಿರುವುದು.

2013ರಲ್ಲಿ ಸೊಂಪಾಜೆ ಊರಲ್ಲಿ ಸೊಂಪಾಗಿರುವ ಹಸಿರು ಮೇವನ್ನುಂಡ ಮಠದ ಹೋರಿ, ಅಲ್ಲಿ ಹಾಗೆ ಮೆಂದಿದೆ ಎಂಬ ಸಂಶಯ ಕೂಡ ಉಂಟಾಗದಂತೆ ನಡೆದುಕೊಂಡಿದೆ. ಊರಲ್ಲೆಲ್ಲ ಸಾಮಾನ್ಯವಾಗಿ ನಾವು ನೋಡುವುದು ಕೋಣ ಹೋರಿ (ಅಥವಾ ಹೋರಿ ಕೋಣ). ಆದರೆ ಮಠದ್ದು ಮಾತ್ರ ಜಾಣ ಹೋರಿ!

ತಪ್ಪು ಮಾಡಿದ್ದಕ್ಕೆ ಸಾಕ್ಷಿ ಸಿಕ್ಕಿದರೂ ಅಲ್ಲಗಳೆಯುವಷ್ಟು ಕುರುಡರ ಬೆಂಬಲ ಪಡೆದಿದೆ ಹೋರಿ. ಮಾಡುವ ಎಲ್ಲಾ ಕೆಲಸಗಳಲ್ಲೂ ಕುರಿಗಳಿಗೆ ಓನಾಮ ತೀಡುವ ಹೋರಿ ಕೆಸರಿನ ಹೊಂಡದಲ್ಲಿ ಮುಳುಗೆದ್ದ ಹೆಜ್ಜೆ ಗುರುತು ಸಿಗದಂತೆ ಅದರಮೇಲೆ ಉಚ್ಚೆ ಹೊಯ್ದುಬಿಡುತ್ತದೆ. ಹೋರಿಯ ಮೂತ್ರ ಪಾವನ ತೀರ್ಥವೆಂದು ಕುರಿಪಡೆಯೆಲ್ಲ ಸ್ವೀಕರಿಸುತ್ತದೆ. ಅಲ್ಯಾರೋ ಒಬ್ಬ ಸಾರಥ್ ದೇವ್ ಎಂಬವ ಕಾಲಿನಿಂದ ಜೇನುತುಪ್ಪ ಸುರಿಸುತ್ತಿದ್ದನಂತಲ್ಲ. ಪಾಪ ಆ ದೇವಮಾನವನ ಕಜ್ಜಿ ಕಾಲಿನಿಂದ ಸುರಿದ ಜೇನುತುಪ್ಪವನ್ನು ಅವನ ಭಕ್ತರು ಪ್ರಸಾದವೆಂದು ಮುಗಿಬಿದ್ದು ತೆಗೆದುಕೊಂಡು ನೆಕ್ಕುತ್ತಿದ್ದರಂತೆ. ಇಲ್ಲಿಯೂ ಒಂಥರಾ ಹಾಗೆಯೇ.

ದೂರು ಕೊಟ್ಟವರ ಮೇಲೆ ಪ್ರತಿದೂರು ಕೊಟ್ಟು ಅವರನ್ನು ಬಗ್ಗು ಬಡಿಯುವುದು ಹೋರಿಗೆ ಗೊತ್ತು. ಆದರೂ ಏನೂ ಗೊತ್ತಿಲ್ಲ ಎನ್ನುತ್ತದೆ. ಮಾಡಿದ ಅಪರಾಧಗಳೆಲ್ಲ ಮನಸ್ಸಿನಲ್ಲಿ ರೆಕಾರ್ಡ್ ಆಗಿವೆಯಾದರೂ ಮಾಡೇ ಇಲ್ಲ ಎನ್ನುತ್ತದೆ. ತಿರುಗಿ ಬೀಳುವ ಕನ್ಯಾಪಿತೃಗಳಿಗೆ ಅಥವಾ ಮಹಿಳೆಯರ ಯಜಮಾನರಿಗೆ ವಿವಿಧ ದಿಸೆ ದಿಕ್ಕುಗಳಿಂದ ಸತತವಾಗಿ ಬೆದರಿಕೆಯ ಫೋನ್ ಕರೆಗಳನ್ನು ಮಾಡಿಸುತ್ತದೆ; ದಾಖಲೆ ಸಿಗದಂತೆ ನೋಡಿಕೊಳ್ಳುತ್ತದೆ. ಸಾಕಿಕೊಂಡ ನಾಯಿಗಳನ್ನು ಅಂತರ್ಜಾಲದಲ್ಲಿ ಛೂ ಬಿಡುತ್ತದೆ; ತನಗೂ ಅಂತರ್ಜಾಲದಲ್ಲಿ ಬರುವ ವಿಷಯಗಳಿಗೂ ಸಂಬಂಧವೇ ಇಲ್ಲವೆನ್ನುತ್ತದೆ. ಹೀಗೆ ಮಾಡಿದ್ದನ್ನೆಲ್ಲ ಅಲ್ಲಗಳೆಯುವುದು ಮತ್ತು ಸಿಗಬಹುದಾದ ಸಾಕ್ಷಿಗಳನ್ನು ನಾಶಪಡಿಸುವುದು ಮಠದ ಹೋರಿಯ ವೈಶಿಷ್ಟ್ಯ.

ಸೊಂಪಾಜೆಯ ಭಟ್ಟರು ಮಠಕ್ಕೆ ಬರುವುದನ್ನು ಯಾಕೆ ಬಿಟ್ಟರು? ಎಂದು ಹಲವರು ತಲೆಕೆರೆದುಕೊಂಡರು. ಯಾಕೋ ಅವರಿಗೆ ಸಮಯವಿಲ್ಲವೋ ಏನೋ ಅಥವಾ ಬರುಬರುತ್ತ ನಾಸ್ತಿಕರಾಗಿರಬಹುದು ಎಂದುಕೊಂಡರು. ಹಾಗಂದುಕೊಂಡವರ ಗುಣಾಕಾರ ಭಾಗಾಕಾರಗಳೆಲ್ಲ ತಲೆಕೆಳಗಾದದ್ದು ಮಠದ ಹೋರಿ ಮಣಕಗಳಿಗೆ ಹಾರಿದ ಕತೆ ತಿಳಿದುಬಂದಾಗ..!

’ಮಣಕ’ ಎಂಬುದು ಹೆಚ್ಚಾಗಿ ಉತ್ತರಕನ್ನಡದ ಜನ ಬಳಸುವ ಗ್ರಾಮ್ಯ ಪದ. ಮಣಕಕ್ಕೆ ’ತೊಡಮಣಕ’ ಎಬವರೂ ಅಲ್ಲಿದ್ದಾರೆ. ದಕ್ಷಿಣ ಕನ್ನಡಲ್ಲಿ ಎಂತ ಹೇಳುತ್ತವೋ ಎನಗೆ ಗೊಂತಿಲ್ಲೆ. ಹರೆಯಕ್ಕೆ ಬಂದು ಇನ್ನೇನು ಪ್ರಥಮವಾಗಿ ಗರ್ಭಧರಿಸಲು ಅನುಕೂಲತೆಗಳನ್ನು ಹೊಂದಿದ ಹೆಣ್ಣು ಆಕಳಿಗೆ ’ಮಣಕ’ ಅಂತಾರೆ.

ಸೊಂಪಾಜೆಯಲ್ಲಿ ಕ್ಯಾಂಪು ಮಾಡಿದ ಹೋರಿ ಭಟ್ಟರ ಮನೆಯ ಸುತ್ತೆಲ್ಲ ನೋಡಿತು. ಎಲ್ಲವೂ ಕ್ಷೇಮ, ಹಾಯಾಗಿದೆ, ಏಕಾಂತಕ್ಕೆ ಅನುಕೂಲವಿದೆ ಎನಿಸಿದಾಗ ಮೈಸೂರಿನಿಂದ ಎರಡು ಮಣಕಗಳನ್ನು ಅಲ್ಲಿಗೆ ಕರೆಸಿಕೊಂಡಿತು. ಯೌವ್ವನದ ಹೊಳೆಯಲ್ಲಿ ಈಗಿನ್ನೂ ತೇಲುತ್ತಿದ್ದ ಆ ತರುಣಿಯರಿಗೆ ದಿವ್ಯ, ಭವ್ಯ ’ದರ್ಶನ’ ನೀಡುವುದು ಹೋರಿಯ ಉದ್ದೇಶ. ಆಗ ಈ ನಮೂನೆಯ ಸುದ್ದಿಗಳೆಲ್ಲ ಎಲ್ಲೂ ಇರಲಿಲ್ಲ. ನೂರಕ್ಕೆ ತೊಂಬತ್ತೆಂಟು ಕುರುಡು ಕರಿಗಳೇ ಆಗಿದ್ದವು. ಹೀಗಾಗಿ, ಹೋರಿ ಏನನ್ನೇ ಹೇಳಿದರೂ ಅದರಲ್ಲಿ ತಪ್ಪು ಹುಡುಕುವುದಾಗಲೀ ಸಂದೇಹಿಸುವುದಾಗಲೀ ಇರಲಿಲ್ಲ.

ಹೋರಿ ಬಯಸಿದಂತೆ ಈರ್ವರು ಸುಂದರ ತರುಣಿಯರು ಸೊಂಪಾಜೆಗೆ ಬಂದಿಳಿದರು. ತಗೊಳ್ರಪ್ಪಾ ಹೋರಿಯ ಬುಲ್ ಪೀನ್ ಹರಿದು ಹೋಗುವುದೊಂದು ಬಾಕಿ…..! ಅಲ್ಲಿದ್ದ ಯಾರಿಗೂ ಈ ವಿಹಯ ಗೊತ್ತೇ ಆಗಲಿಲ್ಲ. ಆದರೆ “ಹೋರಿ ಕನಿಷ್ಠ ಎರಡೆರಡು ಗಂಟೆ ರೂಮಿನೊಳಗೆ ಒಬ್ಬೊಬ್ಬಳೇ ಹುಡುಗಿಯನ್ನು ಮಡಗಿಕೊಂಡು ಇಪ್ಪದು ಎಂತಕೆ?” ಎಂದು ಭಟ್ಟರ ಅಡಿಗೆಯವ ತಲೆಕೆರೆದುಕೊಂಡ. ಸೂಕ್ಷ್ಮವಾಗಿ ಏನು ನಡೆಯುತ್ತಿದೆ ಎಂಬುದರ ಬಗೆಗೆ ನಿಗಾ ಇರಿಸಿದ. “ಹೆರಗೆ ಆನೊಬ್ಬನೇ ಇಂತಾ ವಿಚಾರಕ್ಕೆ ತಲೆಕೆಡಿಸಿಕೊಳ್ಳತ್ತಾ ಇದ್ದಿದ್ದು. ಒಳಗೆ ಏನಾವುತಾ ಇದ್ದೊ ಎನಗೆ ಗೊಂತಿಲ್ಲೆ. ಎರಡು ತಾಸು ಕಳೆದು ಕೂಸು ಹೆರಂಗೆ ಬಪ್ಪಾಗ ಅದರ ಮೊಕ, ಮಂಡೆಯನ್ನು ಕಂಡಾಗ ಎನಗೆ ಡೌಟು ಪಕ್ಕಾ ಆತು. ಸೊಂಟ ನೋವಿಪ್ಪ ಹಾಂಗೆ ನಡೆದಿಪ್ಪಗ ಯನಗೆ ಅದು ಖಾತ್ರಿಯಾತು. ಮತ್ತೆ ನಾನು ವಿಷಯ ಕೊಂಡೊಯ್ದು ಭಟ್ಟರಲ್ಲಿ ಹೇಳಿದ್ದು. ಗೊಂತಾತೊ ನಿಂಗೊಗೆ? ಭಟ್ಟರು ನಂಬದೆ, “ಹಾಂಗಪ್ಪುಲಡಿಯ” ಎಂದು ಮೊದಲು ಹೇಳಿ, ಮಾರನೇದಿನ ಉದಿಯಪ್ಪಗ ಇನ್ನೊಂದು ರೌಂಡು ನಡೆದಾಗ ಭಟ್ಟರಿಗೂ ಖಾತ್ರಿಯಾತು.”

ಅಡುಗೆಯವ ಹೇಳಿ ಮುಗಿಸಿ ಮಂಗಲಪದ ಹಾಡಿದ. ಭಟ್ಟರು ಮಾತ್ರ ತಲೆಯಲ್ಲಿ ಹುಳಬಿಟ್ಟುಕೊಂಡಂತಾಗಿ ಹಾಗೇ ಉಳಿದರು. ಕಾಲಾನಂತರದಲ್ಲಿ ಅಲ್ಲಲ್ಲಿ ಗುಲ್ಲೆದ್ದಾಗ ವಿಷಯ ಹೌದೆಂದು ಪಕ್ಕಾ ಆಯಿತು. ಅಲ್ಲಿಂದ ಮುಂದೆ ಭಟ್ಟರು ಮಠದ ಹೋರಿಯ ದರ್ಶನ-ಮಂತ್ರಾಕ್ಷತೆಗೆ ತೆರಳುವುದನ್ನು ನಿಲ್ಲಿಸಿದರು.

ಕೇಳಿದಿರಲ್ಲ ’ಪುಣ್ಯ’ಕತೆಯನ್ನು? ಭಕ್ತಕುರಿಗಳು ’ಏಕಾಂತ ಸೇವಾ ಕಾಣಿಕೆ’ ಎಂಬ ಸೇವೆಗೆ ರೂ. ಒಂದುಲಕ್ಷವನ್ನು ಪಾವತಿಸುವ ಮೂಲಕ, ತಮ್ಮ ಮಗಳನ್ನೋ, ಹೆಂಡತಿಯನ್ನೋ, ಸೊಸೆಯನ್ನೋ ಕಳುಹಿಸಿ ಮಠದ ಹೋರಿ ಹಾರಿಸಿ, ಹಾದರಪಾದ ವೀರ್ಯಗಂಧವನ್ನು ಶಿರದಲ್ಲಿ ಧರಿಸಿ, ಭೂಯಃ ಶ್ರೇಯೋಭಾಜನರಾಗಬೇಕೆಂಬ ಬಾವಯ್ಯನ ಆಯೋಜನೆಯ ಪ್ರಕಾರ ಹಾವಾಡಿಗ ಮಹಾಸಂಸ್ಥಾನಾಧೀಶ್ವರರ ಅಪ್ಪಣೆಯಾಗಿದೆ ಎಂಬುದನ್ನು ಈ ಮೂಲಕ ಶ್ರುತಪಡಿಸಿದೆ.

mh

Thumari Ramachandra

source: https://www.facebook.com/groups/1499395003680065/permalink/1653444528275111/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s