ಹಳದೀ ತಾಲಿಬಾನಿಗೆ ಚೋರಗುರು ಕಲಿಸಿದ ಸಂಸ್ಕಾರದಿಂದಲೇ ಅವನನ್ನು ಅಳೆಯಬಹುದು

ಹಳದೀ ತಾಲಿಬಾನಿಗೆ ಚೋರಗುರು ಕಲಿಸಿದ ಸಂಸ್ಕಾರದಿಂದಲೇ ಅವನನ್ನು ಅಳೆಯಬಹುದು

ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಅವಾಚ್ಯವಾಗಿ ಮಹಿಳಾ ನಿಂದನೆ ಇದ್ದರೆ ಅವುಗಳನ್ನೆಲ್ಲ ಹಳದೀ ತಾಲಿಬಾನಿಗರು ಬರೆದಿರುವ, ಬರೆಯುತ್ತಿರುವ ಮತ್ತು ಬರೆಯುವ ಪೋಸ್ಟ್ ಗಳಲ್ಲಿ ಕಾಣಬಹುದು. ತನ್ನ ಅಪರಾಧಗಳನ್ನು ಮುಚ್ಚಿಹಾಕುವ ಸಲುವಾಗಿ ಬೇಟೆ ನಾಯಿಗಳಂತೆ ಅವುಗಳನ್ನು ಸಾಕಿಕೊಂಡಿದ್ದಾನೆ ರಾಂಗ್ ವೇಷ್ ವರ. ಮತ್ತೆ ವೇದಿಕೆಯಲ್ಲಿ ಅವುಗಳ ಬಗ್ಗೆ ಹೊಗಳಿಕೆ ಬೇರೆ. ಅಂತವರಂತೆ ಇಂತವರಂತೆ, ಮಠದ ಉಳಿವಿಗಾಗಿ ಮಹತ್ಕಾರ್ಯ ಮಾಡುತ್ತಿರುವರಂತೆ, ಹಾಗೆಲ್ಲ ಹೇಳಿದ್ದಾನೆ.

ಒಬ್ಬ ಗುರುವನ್ನು ಅಳೆಯಲು ಅವನ ನಡತೆಗಳನ್ನೇ ಅವಲೋಕಿಸಬೇಕಿಲ್ಲ; ಅವನ ಹತ್ತಿರದ ಶಿಷ್ಯರ ನಡವಳಿಕೆಗಳನ್ನು ಗಮನಿಸಿದರೂ ಸಾಕಾಗುತ್ತದೆ. ಮತ್ತದೇ ಹಳೆಯ ಗಿಳಿಮರಿಗಳ ಕತೆಯನ್ನು ನೆನಪಿಸಿಕೊಳ್ಳಿ-ಒಂದು “ರಾಮಾ ರಾಮಾ, ಯಾರೋ ಬಂದರು, ಬನ್ನಿ, ಸ್ವಾಗತ” ಎಂದು ಮೆಲುದನಿಯಲ್ಲಿ ಉಲಿಯುತ್ತಿದ್ದರೆ, ಅದರ ಸೋದರ ಗಿಳಿ, “ನೋಡೋ ಬಂದರು, ಕೊಚ್ಚು, ಕಡಿ, ಬೋಟಿ ಎತ್ತು” ತಾರಕ ಸ್ವರದಲ್ಲಿ ಒದರುತ್ತಿತ್ತಂತೆ. ಎರಡಕ್ಕೂ ಅವುಗಳ ಆಶ್ರಯದಾತರು ನೀಡಿದ ಸಂಸ್ಕಾರ ಬಲ ಹಾಗಿತ್ತು.

ಸ್ವಸ್ಥ ವ್ಯವಸ್ಥೆಯ ವಿರುದ್ಧ ಯಾರೋ ಒಬ್ಬರು ತಿರುಗಿ ಬಿದ್ದರೆ ಹೇಳುವುದಕ್ಕೂ ಕೇಳುವುದಕ್ಕೂ ಒಂದು ರೀತಿ-ರಿವಾಜಿದೆ. ತನ್ನ ಮೇಲೆ ಆಪಾದನೆ ಬಂದಾಗ ಗುರುವೆನಿಸಿದವ ಮೊದಲು ಆಪಾದನೆ ಮಾಡಿದವರನ್ನು ಕರೆಸಿ “ಯಾಕೆ ಹಾಗೆ ಹೇಳಿದಿರಿ?” ಎಂದು ಇತರ ಶಿಷ್ಯರ ಎದುರಲ್ಲಿ ಕೇಳಬೇಕು. ತನ್ನ ತಪ್ಪಿಲ್ಲದಿದ್ದರೆ ಅವರಿಗೆ ಬುದ್ಧಿ ಹೇಳಿ, ಉತ್ತಮರನ್ನು ದೂಷಿಸುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಹೇಳಬೇಕು. ಇಲ್ಲಿ ಗುರು ಪಕ್ಕಾ 420 ಆಗಿರೋದರಿಂದ ಅದಕ್ಕೆಲ್ಲ ಅವಕಾಶವೇ ಇಲ್ಲ ಬಿಡಿ. ತನ್ನ 420 ಕೆಲಸಗಳನ್ನು ಸಾಮಾಜಿಕ ಸೇವಾಕಾರ್ಯಗಳಂತೆ ಪ್ರಚಾರಮಾಡುವ ಹಳದೀ ತಾಲಿಬಾನಿಗಳನ್ನು ಬಾಯ್ತುಂಬ ಹೊಗಳುತ್ತಾನೆ.

ಅವನಿಗಿರುವುದು ನಾವಿದ್ದೇವೆ ಎಂಬ ಮಂತ್ರ ಮಾತ್ರವಂತೆ. ಅದು ನಮಗೆ ಎಂದೋ ಗೊತ್ತಾಗಿಬಿಟ್ಟಿದೆ. ಅದನ್ನು ಹೊಸದಾಗಿ ಅವನ ಬಾಯಲ್ಲೇ ಮತ್ತೆ ಕೇಳಬೇಕೆ? ಕಾವಿವೇಷ ಹಾಕಿಕೊಂಡು ಯತಿನಿಯಮಗಳನ್ನೆಲ್ಲ ಉಡಾಯಿಸಿ ಸ್ವೇಚ್ಛಾಚಾರಿಯಾಗಿ ಮೆರೆದವ ಆ ಪದಕ್ಕೆ ಅರ್ಥವಿವರಣೆ ನೀಡುವುದು ಹಾಸ್ಯಾಸ್ಪದವಾಗಿದೆ. ಭಗವದ್ಗೀತೆಯನ್ನು ಹೇಳುವುದಕ್ಕೂ ಕೇಳುವುದಕ್ಕೂ ಒಂದು ಸಂಸ್ಕಾರಬೇಕು. ಭೂತದಬಾಯಲ್ಲಿ ಭಗವದ್ಗೀತೆಯನ್ನು ಕೇಳುವುದು ಎಂಬ ಮಾತೊಂದಿದೆಯಲ್ಲ; ಇದು ಹಾಗಾಯ್ತಷ್ಟೆ.

ಹಳದೀ ತಾಲಿಬಾನಿಗರು ಒಂದನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಒಬ್ಬ ವ್ಯಕ್ತಿಯಿಂದ ಸಾಧನೆಯಾಗಲು ಇವನೇನು ಸಮರ್ಥ ರಾಮದಾಸರಲ್ಲ ಅಥವಾ ಶ್ರೀಧರ ಸ್ವಾಮಿಗಳಲ್ಲ; ಇವನ ಯೋಜನೆಗಳಲ್ಲಿ ಪ್ರಮುಖವಾಗಿ ಮಠಕ್ಕೆ ಬೇಕಾದ ಕಟ್ಟಡಗಳು ನಿರ್ಮಾಣವಾಗಿದ್ದು ಸಮಸ್ತ ಭಕ್ತಗಣದ ಉದಾರ ದೇಣಿಗೆಗಳಿಂದ ಮತ್ತು ನೇರವಾದ ಸಹಾಯದಿಂದ. ಅದಿಲ್ಲದಿದ್ದರೆ ಇವನ ಪ್ರತಿಯೊಂದು ಯೋಜನೆಗಳೂ ಹಳ್ಳ ಹಿಡಿಯುತ್ತಿದ್ದವು. ಬೆರಳು ತೋರಿಸಿದರೆ ಕುಣಿಯುವ ಭಕ್ತ ಬಳಗವನ್ನು ಉಡುದಾರ ಹರಿದುಹೋಗುವಷ್ಟು ಕುಣಿಸಿ ಕೆಲಸ ತೆಗೆದುಕೊಂಡಿದ್ದಾನೆ.

ಇವತ್ತು ಮಠದಲ್ಲಿ ಕುಣಿಯುತ್ತಿರುವವರ ದೇಣಿಗೆಗಳಿಂದ ಮಾತ್ರ ಮಠ ಬೆಳೆಯಲಿಲ್ಲ; ಹಿಂದಿನಿಂದಲೂ ದೇಣಿಗೆ ಕೊಟ್ಟ ಭಕ್ತರ ಪಾತ್ರವೂ ಅದರಲ್ಲಿದೆ. ಮಠ ಕೇವಲ ಕಳ್ಳಬಾವಯ್ಯ ಮತ್ತು ಕುಳ್ಳಬಾವಯ್ಯನ ಆಸ್ತಿಯಲ್ಲ. ಹಾಗಂದುಕೊಂಡು ಮಠದಲ್ಲಿ ಸ್ವೇಚ್ಛಾಚಾರಿಗಳಾಗಿ ಬದುಕುತ್ತಿರುವ ಅವರೀರ್ವರನ್ನು ಮಠದಿಂದ ದೂರ ಕಳಿಸಬೇಕೆಂಬುದು ಹಲವರ ಅಭಿಪ್ರಾಯ.

ಸಮಾನ ಮನಸ್ಕರು ಇಂದು ಕೇವಲ ಸಾವಿರ ಸಂಖ್ಯೆಯಲ್ಲ; ನಿರೀಕ್ಷೆಗೊ ಮೀರಿ ಅವರ ಬಳಗ ಬೆಳೆಯುತ್ತಿದೆ; ಇದಕ್ಕೆ ಯಾರದೇ ಒತ್ತಡವಾಗಲೀ ಒತ್ತಾಯವಾಗಲೀ ಇಲ್ಲ. ತಾವಾಗಿಯೇ ಮಠದಲ್ಲಿ ನಡೆಯುತ್ತಿರುವ ಅಧರ್ಮವನ್ನು ಕಂಡು, ಎಲ್ಲವನ್ನೂ ಅರ್ಥಮಾಡಿಕೊಂಡು ಅದರ ವಿರುದ್ಧ ಹೋರಾಡಲು ಒಂದಾಗಿದ್ದಾರೆ. ಇಂದಲ್ಲ ನಾಳೆ ಕಳ್ಳ-ಕುಳ್ಳರನ್ನು ಒದ್ದೋಡಿಸುವುದರಲ್ಲಿ ತುಮರಿಗಂತೂ ಯಾವುದೇ ಅನುಮಾನವೂ ಇಲ್ಲ.

ಕಾಮಿಯ ಮಾತನ್ನು ಗಮನಿಸಿ. ಇತ್ತೀಚೆಗೆ ಕೆಲವೊಮ್ಮೆ ನಡುಗುತ್ತಿದೆ. ಯಾಕೆ ಗೊತ್ತೇ? ಆ ದಿನ ಹತ್ತಿರ ಬಂತೆಂದು ತಿಳಿಯಹತ್ತಿದೆ. ಕುಲಜರು ಎಂದರೆ ಸಂಸ್ಕಾರವಂತರು ಎಂಬರ್ಥವೂ ಇದೆ. ಸಂಸ್ಕಾರವಂತರಾದ ಸಮಾಜದ ಬಹುಜನ ಇಲ್ಲಿಯವರೆಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಂತೆ ಎಲ್ಲಾ ಮಾಧ್ಯಮಗಳ ಮೇಲೆ ಹತೋಟಿ ಸಾಧಿಸಿದ ರಾಂಗ್ ವೇಷದ ಗೂಢಚರ್ಯೆ ಬೆಳಕಿಗೆ ಬರಲು ಇಷ್ಟು ಸಮಯ ತೆಗೆದುಕೊಂಡಿತು. ಈಗ ಯಾರಿಗೂ ಏನನ್ನೂ ಹೇಳುವುದು ಬೇಕಾಗಿಲ್ಲ.

ಪಂಡರಾಪುರದ ಸ್ಥಳ ಪುರಾಣದಲ್ಲಿ ಪುಂಡಲೀಕನ ಕತೆಯೂ ಬರುತ್ತದೆ, ಕತೆ ಬಹಳ ದೀರ್ಘವಾಗಿದೆ, ಅದರ ಒಂದು ಭಾಗವನ್ನು ಮಾತ್ರ ಇಲ್ಲಿ ತೆಗೆದುಕೊಳ್ಳುತ್ತೇನೆ. ವಾರಣಾಸಿಯನ್ನು ಸೇರಿದ ಪುಂಡಲೀಕ ಮತ್ತು ಅವನ ತಂದೆ ತಾಯಿಗಳು ಕುಕ್ಕುಟ ಸ್ವಾಮಿಯ ಆಶ್ರಮದಲ್ಲಿ ತಂಗಿದರು. ಅನಿರೀಕ್ಷಿತವಾಗಿ ಅಲ್ಲಿದ್ದ ದಿನಗಳಲ್ಲಿ ಒಂದು ರಾತ್ರಿ ಪುಂಡಲೀಕನಿಗೆ ನಿದ್ದೆಯಿಂದ ಎಚ್ಚರವಾಗಿತ್ತು. ಆ ರಾತ್ರಿಯಲ್ಲಿ ಹೊರಗಿನಿಂದ ಕೊಳೆಕೊಳೆ ಸೀರೆ ಧರಿಸಿದ ಸುಂದರ ತರುಣಿಯರು ಕುಕ್ಕುಟಸ್ವಾಮಿಯ ಆಶ್ರಮವನ್ನು ಪ್ರವೇಶಿಸುತ್ತಿದ್ದರು.

ಆಶ್ರಮದೊಳಕ್ಕೆ ಅವರು ಬಂದದ್ದು ಏಕಾಂತ ಮಾಡಲಿಕ್ಕಲ್ಲ! ಬಂದವರು ಸ್ವಾಮಿಯ ಮನೆಯನ್ನು ಗುಡಿಸಿ, ಸ್ವಾಮಿಗೆ ಬೇಕಾದ ನಿತ್ಯದ ಸಾಮಗ್ರಿಗಳನ್ನು ಅಣಿಗೊಳಿಸಿದ ಮೇಲೆ ಆಶ್ರಮದ ಪ್ರಾರ್ಥನಾ ಕೊಠಡಿಗೆ ತೆರಳಿದರು. ಸ್ವಲ್ಪ ಹೊತ್ತಾದ ಬಳಿಕ ಮರಳಿ ಹೊರಹೊರಟ ಅವರ ಸೀರೆಗಳು ಆಗ ತಂತಾನೇ ಪರಿಶುಭ್ರವಾಗಿದ್ದವು! ಏನಿದು ವಿಚಿತ್ರ ಎಂದು ತನ್ನ ಕಣ್ಣುಗಳನ್ನೇ ಉಜ್ಜಿಕೊಳ್ಳುತ್ತ ಪುಂಡಲೀಕ, ನಿಜವಾಗಿ ನಡೆದದ್ದೋ ಕಲ್ಪನೆಯ ಕನಸೋ ಎಂಬ ಯೋಚನಗೆ ಬಿದ್ದ.

ಮರುದಿನದ ರಾತ್ರಿಯೂ ಎದ್ದುಕುಳಿತು ತರುಣಿಯರ ಬರುವಿಗಾಗಿ ಕಾದಿದ್ದು, ಬಂದಾಗ ಅವರ ಹತ್ತಿರ,”ನೀವೆಲ್ಲ ಯಾರು? ಇಲ್ಲಿಗೇಕೆ ಹೀಗೆ ರಾತ್ರಿಯಲ್ಲಿ ಬರುತ್ತೀರಿ? ನಿಮ್ಮ ಕೊಳೆಬಟ್ಟೆಗಳು ಕ್ಷಣಾರ್ಧದಲ್ಲಿ ಹೇಗೆ ಶುಭ್ರಗೊಳ್ಳುತ್ತವೆ?” ಎಂಬ ಪ್ರಶ್ನೆಗಳನ್ನು ಹಾಕಿದ. ಪುಣ್ಯನದಿಗಳಾದ ಗಂಗಾ, ಯಮುನಾ, ಸರಸ್ವತಿಯರು ತಾವೆಂದೂ ಜನರು ಪ್ರತಿನಿತ್ಯ ತಮ್ಮ ಪಾಪಗಳನ್ನು ತೊಳೆಯಲು ತಮ್ಮಲ್ಲಿ ಸ್ನಾನಮಾಡುವುದರಿಂದ ತಮ್ಮ ಸೀರೆಗಳು ಮಲಿನವಾಗುತ್ತವೆ ಎಂದೂ, ತಪಸ್ವಿಗಳ ಸೇವೆಯಿಂದ ಮತ್ತು ಅವರು ತಮ್ಮಲ್ಲಿ ಸ್ನಾನ ಮಾಡುವಿದರಿಂದ ತಮ್ಮ ಕೊಳೆ ತೊಳೆದುಹೋಗುವುದೆಂದೂ ತಿಳಿಸಿದರು.

ಅಲ್ಲಿಯವರೆಗೆ ಪುಂಡಲೀಕ ಬಹಳ ಮಾತಾಪಿತೃ ಪೀಡಕನಾಗಿದ್ದವ ಅಲ್ಲಿಂದಾಚೆಗೆ ಬದಲಾಗಿಬಿಟ್ಟ. ಅದಕ್ಕೆ ನದಿಗಳು ಅವನನ್ನು ದೂರಿದ್ದೇ ಕಾರಣವಾಯ್ತು. ಗುರು ಉತ್ತಮನಾಗಿದ್ದರೆ ನದಿಗಳೂ ಕೂಡ ಅವನನ್ನು ಆರಾಧಿಸುತ್ತವೆ ಎಂಬುದು ಇಲ್ಲಿ ಸ್ಪಷ್ಟ. ಗುರು ಸ್ವೇಚ್ಛಾಚಾರಿಯಾಗಿ ಕಚ್ಚೆಯಲ್ಲಿ ವೀರ್ಯಾಣು ವಿಸರ್ಜಿಸಿಕೊಂಡರೆ ಅವನು ಕಾಲಿಡುವ ಪುಣ್ಯಕ್ಷೇತ್ರಗಳೆಲ್ಲ ಪಾಪ ಕ್ಷೇತ್ರಗಳಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಇದರರ್ಥ ರಾಂಗ್ ವೇಷ್ ವರ ಇಲ್ಲಿಯವರೆಗೆ ಪ್ರತಿಷ್ಠಾಪಿಸಿದ ದೇವಸ್ಥಾನಗಳಲ್ಲಿ ಶುದ್ಧೀಕರಣ ಮಾಡಬೇಕಾಗುತ್ತದೆ.

ತಪಸ್ವಿಗಳಲ್ಲಿ ಎಷ್ಟು ಪಾಸಿಟಿವ್ ಎನರ್ಜಿ ಇರುತ್ತದೋ ಕಚ್ಚೆಹರುಕರಲ್ಲಿ ಅಷ್ಟೇ ನೆಗೆಟಿವ್ ಎನರ್ಜಿ ಇರುತ್ತದೆ. ಹೋದಲ್ಲೆಲ್ಲ ಹೊರನೋಟಕ್ಕೆ ಚೆನ್ನಾಗಿ ಕಂಡರೂ ನೆಗೆಟಿವ್ ಎನರ್ಜಿ ತುಂಬಿಕೊಳ್ಳುವುದಂತೂ ಅಪ್ಪಟ ಸತ್ಯ. ಹಾಗಾಗಿಯೇ ಅವನು ಪ್ರತಿಷ್ಠಾಪಿಸಿದ ದೇವಾನುದೇವತೆಗಳ ವಿಗ್ರಹಗಳಲ್ಲಿ ಯಾವುದೇ ತಾಕತ್ತೂ ಇಲ್ಲ. ಇದನ್ನರಿಯದ ಹಳದೀ ಗುಂಪಿನವರು ಆ ಚೋರನಿಂದಲೇ ಇನ್ನಷ್ಟು ಇಂತಹ ’ಘನಕಾರ್ಯ’ಗಳನ್ನು ನಡೆಸಿದ್ದಾರೆ.

ಯೋಗ ಸಿದ್ಧಿಯನ್ನು ಪಡೆದವರು ವಾಸಿಸುವ ಪ್ರದೇಶದ ಬಗೆಗೆ ಹೇಳುವಾಗ ಪರಸ್ಪರ ವಿರೋಧಿಗಳಾದ, ಒಂದಕ್ಕೊಂದು ಆಹಾರವಾದ ಪ್ರಾಣಿಗಳೂ ಸಹ ಅಂತವರ ಸನ್ನಿಧಿಯಲ್ಲಿ ಶಾಂತಿಯನ್ನೂ ಸೌಹಾರ್ದವನ್ನೂ ಅನುಭವಿಸುತ್ತವೆ ಎಂದು ಕೇಳಿದ್ದೀರಷ್ಟೇ? ಹಾಗಾದರೆ ಮಾಂಸಾಹಾರಿಯಾದ ಹುಲಿ ಆಹಾರವಿಲ್ಲದೇ ಸಾಯಬಹುದೇ? ಇಲ್ಲ. ಅದರ ಆಯುಷ್ಯ ಇರುವಷ್ಟು ಕಾಲ ಅದು ಖುಷಿಯಿಂದಲೇ ಬದುಕುತ್ತದೆ. ಹೇಗೆ? ಉತ್ತರ ನೋಡಿ-

ಹಿಮಾಲಯದ ಸಂತರ ಬಗೆಗೆ, ವಿಶಿಷ್ಟ ಅನುಭವಗಳ ಬಗೆಗೆ ತನ್ನ’ ಲಿವಿಂಗ್ ವಿತ್ ಹಿಮಾಲಯನ್ ಮಾಸ್ಟರ್ಸ್’ ಎಂಬ ಪುಸ್ತಕದಲ್ಲಿ ಸ್ವಾಮಿ ರಾಮ ತನ್ನ ಎಳೆಯ ಜೀವನದ ಬಗೆಗೆ ವಿಸ್ತಾರವಾಗಿ ಹೇಳಿದ್ದಾರೆ. ಅವರ ಗುರುವೊಮ್ಮೆ ಗುಹೆಯಿಂದ ದೂರ ಹೋಗಿದ್ದರು. ಇರುವ ಆಹಾರ ಪರಿಕರಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೊಟ್ಟಿ ಮತ್ತು ಪಲ್ಯವನ್ನು ಸ್ವಾಮಿ ರಾಮ ತಯಾರಿಸಿದರು. ಅದೇ ಇಡೀ ದಿನದ ಆಹಾರ. ಮತ್ತೆ ರಾತ್ರಿ ಊಟವಿಲ್ಲ, ತಿಂಡಿಯಿಲ್ಲ, ಕಾಫಿ-ಟೀ-ಗಾಂಜಾ-ಆಫೀಮು ಯಾವುದೂ ಇಲ್ಲ. ಅದೊಂದು ಉತ್ತಮೋತ್ತಮ ಸಾಧಕನ ಪರಿಸರ.

ತಡವಾಗಿ ಗುಹೆಗೆ ಮರಳಿದ ಗುರುಗಳು ಹರೆಯದ ವಯಸ್ಸಿನಲ್ಲಿ ಅತಿ ಹಸಿವನ್ನು ಅನುಭವಿಸುತ್ತಿದ್ದ ಸ್ವಾಮಿ ರಾಮರನ್ನುದ್ದೇಶಿಸಿ ಹೇಳುತ್ತಾರೆ,”ಅಯ್ಯಾ, ಮಗೂ, ಅತ್ಯಂತ ವಯೋವೃದ್ಧ ಸನ್ಯಾಸಿಯೊಬ್ಬರು ನಾಲ್ಕಾರು ದಿನಗಳಿಂದ ಏನೂ ಆಹಾರವಿಲ್ಲದೇ ಇದ್ದಾರೆ. ನಿತ್ರಾಣರಾದ ಅವರೀಗ ಇಲ್ಲಿಗೆ ಬರುತ್ತಾರೆ. ನಿನ್ನ ಆಹಾರವನ್ನು ಅವರಿಗೆ ಕೊಟ್ಟು ನಮಸ್ಕರಿಸು. ಅದರಿಂದ ಅವರು ಬಹಳ ಪ್ರಸನ್ನರಾಗುತ್ತಾರೆ. ಅತಿಥಿ ಸತ್ಕಾರ ನಮ್ಮ ಆದ್ಯ ಕರ್ತವ್ಯ.”

ಸ್ವಾಮಿರಾಮರಿಗೋ ತೀವ್ರ ಸ್ವರೂದ ಹಸಿವು. ಹೊಟ್ಟೆತಾಳಹಾಕುತ್ತ ಜಠರಾಗ್ನಿ ಉರಿಯೆಬ್ಬಿಸಿತ್ತು. ಕಷ್ಟಪಟ್ಟು ತಾನೇ ತಯಾರಿಸಿದ ಒಂದೇ ಒಂದು ಪಾಲಿನ ರೊಟ್ಟಿಯನ್ನೂ ಸಹ ಬೇರೆಯವರಿಗೆ ಕೊಟ್ಟುಬಿಡೆಂದರೆ ತಾನು ಬದುಕುವುದು ಹೇಗೆ? ಹಸಿವನ್ನು ಹೇಗೆ ತಡೆಯಲಿ? ಇದನ್ನೇ ಕೋಪದಿಂದ ಹೇಳುತ್ತ ಗುರುಗಳೊಡನೆ ಜಗಳವಾಡಿದರವರು.

ಅಷ್ಟರಲ್ಲಿ ವೃದ್ಧ ಸನ್ಯಾಸಿ ನಡುಗುತ್ತ ಗುಹೆಯನ್ನು ಪ್ರವೇಶಿಸಿದರು. ಗುರುಗಳ ಆದೇಶವನ್ನು ಮೀರಲಾರದೆ ಮನಸ್ಸಿಲ್ಲದ ಮನಸ್ಸಿನಿಂದ ತನಗಾಗಿ ಇಟ್ಟುಕೊಂಡಿದ್ದ ಒಂದೇ ಒಂದು ರೊಟ್ಟಿಯನ್ನೂ ಪಲ್ಯವನ್ನೂ ಬಂದ ಅತಿಥಿಗೆ ನೀಡಿ ನಮಸ್ಕರಿಸಿದರು ಸ್ವಾಮಿ ರಾಮ. ವಯೋವೃದ್ಧ ಸನ್ಯಾಸಿಗಳು ಆಹಾರವನ್ನು ಸ್ವೀಕರಿಸುವ ಮೊದಲೇ, ಸ್ವಾಮಿರಾಮನ ಮನದಿಂಗಿತವನ್ನರಿತು, “ಮಗೂ, ನಿನ್ನ ಅತಿಥಿ ಸತ್ಕಾರದಿಂದ ನಾನು ಸಂತುಷ್ಟನಾಗಿದ್ದೇನೆ. ನಿನಗಿನ್ನೆಂದೂ ಹಸಿವೆಯೆಂಬುದು ಬಾಧಿಸದಿರಲಿ. ನೀನಿಷ್ಟಪಟ್ಟಾಗ ಆಹಾರವನ್ನು ಸ್ವೀಕರಿಸಬಹುದು. ಅದಿಲ್ಲದಿದ್ದಲ್ಲಿ ನಿನಗೆ ಹಸಿವೆಯೇ ಕಾಡದು” ಎಂದು ಎರಡೂ ಕೈಯೆತ್ತಿ ಆಶೀರ್ವದಿಸಿದರು. ಅರೆಕ್ಷಣದಲ್ಲಿ ಹರೆಯದ ಸ್ವಾಮಿರಾಮರ ಹಸಿವೆ ಮಾಯವಾಗಿ ಹೋಯ್ತು; ಅಷ್ಟೇ ಅಲ್ಲ, ಮುಂದೆಂದೂ ಅವರಿಗೆ ಹಸಿವೆ ಎಂಬುದು ಬಾಧಿಸಲೇ ಇಲ್ಲ!

ಈ ಕತೆಯನ್ನು ಬರೆಯುವಾಗ ತುಮರಿಯ ಕಣ್ಣಲ್ಲಿ ಆನಂದಬಾಷ್ಪ ಉಕ್ಕಿ ಹರಿಯಿತು. ಯೋಗಸಿದ್ಧಿಗಳನ್ನು ಪಡೆದವರು ಇಂತಹ ಮಹಾತ್ಮರಾಗಿರುತ್ತಾರೆ. ಅವರು ಯಾವುದೇ ಬಳಗವನ್ನೂ ಕಟ್ಟಿಕೊಳ್ಳಲು ಹೋಗುವುದಿಲ್ಲ. ಅಂತರ್ಜಾಲ, ದೂರವಾಣಿ, ಮಾಧ್ಯಮಗಳಿಂದ ಅವರು ಸಾಧ್ಯವಾದಷ್ಟೂ ದೂರವಿರುತ್ತಾರೆ. ಯಾರು ಚೋರಗುರುವೋ ಅಂತವನಿಗೆ ಮಾತ್ರ ಲೌಕಿಕವಾದ ಈ ಮಾಧ್ಯಮ ’ಪರಾಕ್ರಮ’ಗಳು ಬೇಕಾಗುತ್ತವೆ.

ಸಮಾಜಿಕ ಸ್ವಾಸ್ಥ್ಯವಿರಬೇಕೆಂದರೆ ಧಾರ್ಮಿಕ ಹುದ್ದೆಗಳಲ್ಲಿ ಯೋಗ್ಯರಾದವರು ಇರಬೇಕು. ಯೋಗ್ಯತೆ ಕಳೆದುಕೊಂಡವರು ತಾವಾಗಿ ಜಾಗ ತೆರವುಗೊಳಿಸಬೇಕು. ಉಡುಪಿಯ ಸುಬ್ರಹ್ಮಣ್ಯ ಮಠಾಧೀಶರಾಗಿದ್ದ ವಿದ್ಯಾಭೂಷಣರು ಹುಡುಗಿಯೋರ್ವಳಿಗೆ ಮನಸೋತರು; ಅವಳೊಡನೆ ಸಂಬಂಧ ಬೆಳೆದ ತಕ್ಷಣ ಆತ್ಮವಂಚನೆ ಮಾಡಿಕೊಳ್ಳದೆ ಸನ್ಯಾಸವನ್ನು ತೊರೆದರು. ಹಾಗಂತ ಆತ್ಮವಂಚನೆ ಮಾಡಿಕೊಂಡು ಕಾಲೇಜಿಗೆ ಹೋಗುತ್ತಿರುವ ತಮ್ಮ ಮಕ್ಕಳ್ಳನ್ನು ಮಾತನಾಡಿಸುತ್ತ ಖುಷಿಪಡುವ ’ಸನ್ಯಾಸಿ’ವೇಷಧಾರಿಗಳು ಇಲ್ಲವೆಂದಲ್ಲ; ಆದರೆ ನಮ್ಮ ಸಮಾಜಕ್ಕೆ ಅಂತವರು ವಿಹಿತವಲ್ಲ. ಹೀಗೆ ಹೇಳುವುದನ್ನು ಅರ್ಥಮಾಡಿಕೊಳ್ಳಲಾರದ ಹಳದೀ ತಾಲಿಬಾನಿಗರು ಅಂಧಾನುಯಾಯಿಗಳಾಗಿ ಸಮಾಜವನ್ನು ಹಾಳುಮಾಡಬಾರದಲ್ಲ?

ಕಾಮಿಗಂತೂ ಮರ್ಯಾದೆ-ಮಾನ ಎಂಬುದಿಲ್ಲ. “ಹಾಕು ನಮಸ್ಕಾರ, ತಗೋ ಮಂತ್ರಾಕ್ಷತೆ” ಎಂದು ಅಧಿಕಾರವಾಣಿಯಲ್ಲಿ ಹೇಳುವ ಹುಂಬ ಸ್ವಭಾವ. ಆತ ತಂತಾನೇ ಹೋಗಿದ್ದರೆ ಇಷ್ಟೆಲ್ಲ ಗೌಜು, ಗದ್ದಲ ಆಗುತ್ತಿರಲಿಲ್ಲ. ಹೋಗುವುದಿಲ್ಲ ಎಂದು ಪಟ್ಟುಹಿಡಿದು ಕುಳಿತಾಗ ಸಮಾಜದ ಹಿತಚಿಂತಕರು ಮುಂದಿನ ನಡೆ ಹೇಗೆ ಎಂಬುದನ್ನು ಚರ್ಚಿಸಬೇಕಾಯ್ತು. ಒಬ್ಬ ಮಹಿಳೆಯನ್ನು ಅತ್ಯಂತ ಹೀನಾಯ ಪದಗಳಿಂದ ದೂರಿರುವ ಹಳದೀ ತಾಲಿಬಾನಿಗರಿಗೆ ಮತ್ತು ಅದನ್ನು ಮರೆಯಲ್ಲಿ ಅನುಮೋದಿರಸಿ ಆನಂದಿಸಿರುವ ಚೋರಗುರುವಿಗೆ ತುಮರಿಯ ಧಿಕ್ಕಾರ.

Thumari Ramachanra

source: https://www.facebook.com/groups/1499395003680065/permalink/1652209165065314/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s