ರೋಮ ರೋಮದಲ್ಲೂ ಕಾಮ; ಸುಳ್ಳು ಹೇಳಿ ನಂಬಿಸುವುದರಲ್ಲಿ ನಿಸ್ಸೀಮ

ರೋಮ ರೋಮದಲ್ಲೂ ಕಾಮ; ಸುಳ್ಳು ಹೇಳಿ ನಂಬಿಸುವುದರಲ್ಲಿ ನಿಸ್ಸೀಮ

ಇಬ್ಬರು ಕಾವಲಿ[ಬಂಡಿ]ಟೋಪಿ ಬುಡ್ನಾಗಳು ಸಿಂಗಾಪುರ್ ನೋಡಲಿಕ್ಕೆ ಹೋದರು. ಹೈಪ್ರೊಫೈಲ್ ಸಿಂಗಾಪೂರ್ ಸಿಟಿಯಲ್ಲಿ ಇಳಿದುಕೊಂಡ ಅವರು ಮಹಾನಗರದ ವೀಕ್ಷಣೆಗೆ ತೊಡಗಿದ್ದರು. ಅಷ್ಟರಲ್ಲಿ ಒಬ್ಬನಿಗೆ ಕಕ್ಕಕ್ಕೆ ಅವಸರವಾಯ್ತು. ಹೇಳಿಕೇಳಿ ಅವನು ಪ್ರತಿನಿತ್ಯ ಬಲಯಲಲ್ಲೇ ಮಾಡುತ್ತಿದ್ದ ಅಂತ. ಐಶಾರಾಮಿ ಹೋಟೆಲ್ ನಲ್ಲಿರುವ ಕಮೋಡ್ ವ್ಯವಸ್ಥೆಗಳೆಲ್ಲ ಅವನಿಗೆ ಹಿಡಿಸುತ್ತಿರಲಿಲ್ಲ ಅಂತ.

ಅವನು ತಡಮಾಡಲಿಲ್ಲ. ಜನ ವಿರಳವಾದ ರಸ್ತೆಯ ಪಕ್ಕದ ಹಸುರಿನ ಜಾಗದಲ್ಲಿ ಬಿಚ್ಚಿಕೊಂಡು ಕೂತುಬಿಟ್ಟ. ಎಲ್ಲವನ್ನೂ ಮಾನಿಟರ್ ಮಾಡುವ ಪೋಲೀಸರು ಅಲ್ಲಿಗೆ ಬಂದುಬಿಟ್ಟರು. ದೂರದಲ್ಲಿ ಪೋಲೀಸ್ ವಾಹನ ಕಂಡ ಅವ ತಕ್ಷಣವೇ ಎದ್ದು ನಿಂತು ಪೈಜಾಮು ಕಟ್ಟಿಕೊಂಡ. ಕೆಳಗೆ ಬಿದ್ದಿತ್ತಲ್ಲ, ಕೇಳಿದರೆ ಅದಕ್ಕೇನು ಮಾಡಬೇಕು? ಟೋಪಿಯನ್ನು ಮೆಲ್ಲಗೆ ತೆಗೆದು ಅದಕ್ಕೆ ಮುಚ್ಚಿ ಹಿಡಿದ.

ಪೋಲೀಸರು ಹತ್ತಿರ ಬರುವುದರೊಳಗೇ ಕಕ್ಕಕ್ಕೆ ಕೂತವನ ಜೊತೆಗಾರ ಅಲ್ಲಿಂದ ಮರೆಯಾಗಿದ್ದ. ಪೋಲೀಸರು ಬಂದೇ ಬಂದರು. ಕೇಳಿದರು,”ಏನಪ್ಪಾ ಯಾತಕ್ಕಾಗಿ ಹೀಗೆ ನಿಂತಿದ್ದೀಯ?’ ಅವ ಹೇಳಿದ, “ಸಾರ್, ಅಪರೂಪದ ಎರಡು ಗಿಳಿಮರಿಗಳು ಸಿಕ್ಕಿವೆ, ಬಿಟ್ಟರೆ ಹಾರಿಹೋಗುತ್ತವೆ. ನನಗೊಂದು ಗಿಳಿಯ ಪಂಜರ ಬೇಕಾಗಿತ್ತು, ಅದನ್ನು ತರುವುದಕ್ಕೆ ಹೇಗೆ ಹೋಗಿಬರಲೆಂದು ಯೋಚಿಸುತ್ತಿದ್ದೆ. ನೀವು ಬಂದಿರಿ, ಬಹಳ ಉಪಕಾರವಾಯ್ತು. ತಾವು ಐದು ನಿಮಿಷ ಇದನ್ನು ಹೀಗೇ ಹಿಡಿದುಕೊಂಡಿರಿ, ನಾನು ಬೇಗನೆ ಹೋಗಿ ಗಿಳಿಯ ಪಂಜರ ತಂದುಬಿಡುತ್ತೇನೆ.”

ಸಿಂಗಾಪುರದ ಪೋಲೀಸರು ಅವನನ್ನು ನಂಬಿದರು. ಒಬ್ಬ ಪೇದೆ ಆ ಟೋಪಿಯನ್ನು ಹಾಗೆ ನೆಲದಮೇಲೆ ಮುಚ್ಚಿ ಹಿಡಿದುಕೊಂಡಿದ್ದ. ಪಂಜರ ತರಲಿಕ್ಕೆ ಹೋದವ ಅರ್ಧಗಂಟೆಯಾದರೂ ಬರಲಿಲ್ಲ, ಕಾದರು ಕಾದರು ಇನ್ನೂ ಕಾದರು ಅಂತ, ಒಂದು ಗಂಟೆಯಾದರೂ ಬರಲಿಲ್ಲ ಅಂತ. ತಾಳ್ಮೆ ಮೀರಿ ತೋಪಿಯ ಕೆಳಗಿರುವ ಅಪರೊಪದ ಗಿಳಿಮರಿಗಳನ್ನು ನೋಡಲೆಂದು ತೆರೆದು ನೋಡಿದರು. ಅಲ್ಲೇನಿದೆ? ಅದು ನಿಮಗೀಗ ಗೊತ್ತಾಗಿದೆ. ಠಕ್ಕರು ಮೋಸಮಾಡುವುದು ಹೇಗೆ ಎಂಬುದಕ್ಕೆ ಇದೊಂದು ಸಾಂಕೇತಿಕ ಉದಾಹರಣೆ.

ಮಠದ ಅನಾದಿಯ ಪರಂಪರೆಯ ರೀತಿರಿವಾಜುಗಳನ್ನು ಬಲ್ಲ, ವೇದ-ಶಾಸ್ತ್ರಾರ್ಥ ಗ್ರಂಥಗಳನ್ನು ಓದಿಕೊಂಡ ವಿದ್ವಾಂಸನಿಗೆ ಸನ್ಯಾಸಿಯೊಬ್ಬ ಕೆಟ್ಟಿರುವ ಕುರುಹುಗಳು ಸಿಕ್ಕವು. ಆತ ಸಮಾಜದ ಕೆಲವರ ಕಿವಿಯಲ್ಲಿ ಪಿಸುಗುಟ್ಟಿದ. ಅದು ಸುಮಾರು ಜನರನ್ನು ತಲ್ಪಿತು. “ಓ ಅವನಿಗೋ ಅರಳುಮರುಳು” ಎಂದು ದೂರಿದರು ಎಲ್ಲರೂ. ಅವನು ಮಾತ್ರ ಆ ಮಠಕ್ಕೆ ಬರುವುದನ್ನು ನಿಲ್ಲಿಸಿಬಿಟ್ಟ. ಮಠದ ಮೂಲಪುರುಷರಿಗೆಲ್ಲ ದೂರದಿಂದಲೇ ವಂದಿಸಿದ. ಆಗ ನಡೆದ ಅಲ್ಪಮಟ್ಟದ ಭಕ್ತರ ರಾಂಗಾನುಗ್ರಹದಿಂದ ಕಳ್ಳ ಸನ್ಯಾಸಿ ಪಟ್ಟಭದ್ರನಾಗೇ ಮುಂದುವರಿದ.

ಒಂದೂರಿನಲ್ಲಿ ವೈದ್ಯನೊಬ್ಬನಿದ್ದ. ನಿವೃತ್ತ ಜೀವನದ ಅವನಿಗೆ ಮಠದ ಸನ್ಯಾಸಿಯೋರ್ವನ ಧರ್ಮಬಾಹಿರ ನಡತೆಗಳು ಗೋಚರವಾದವು. ಕಳ್ಳ ಸನ್ಯಾಸಿಯ ವಿರುದ್ಧ ಆತ ಸಮಾಜದ ಮುಂದೆ ವಿಷಯ ಮಂಡನೆ ಮಾಡಿದ. ಇಡೀ ಸಮಾಜ ವೈದ್ಯನೇ ಸರಿಯಿಲ್ಲವೆಂದು ಭಾವಿಸಿತು. ’ಸನ್ಯಾಸಿ ಕಡೆಯ ರೌಡಿಗಳು ವೈದ್ಯನನ್ನು ಮೀಟಿಂಗಿಗೆ ಬರಹೇಳಿ ಕರೆಸಿಕೊಂಡು ಅಂಗಿ ಹರಿದುಹಾಕಿ ಥಳಿಸಿ ಅವಮಾನ ಮಾಡಿದರು. ಆಗ ಸಮಾಜದೆದುರು ಅ ವೈದ್ಯ ಅಪರಾಧಿಯೆಂಬಂತೆ ಬಿಂಬಿಸಿದರು ಅಂತ. ಆಗ ವೈದ್ಯನ ಸಹಾಯಕ್ಕೆ ಯಾರೂ ಬರಲಿಲ್ಲ ಅಂತ. ಬೇಕಾದು ಮಾಡಿಕೊಂಡು ಹಾಳಾಗಿ ಹೋಗಲಿ ಎಂದು ವೈದ್ಯ ಸುಮ್ಮನಾದ ಅಂತ.

ವರ್ಷವೊಂದು ಕಳೆಯಿತು. ಕಳ್ಳ ಸನ್ಯಾಸಿಯ ಹಾದರದ ಏಕಾಂತ ಹೆಚ್ಚುತ್ತಲೇ ಇತ್ತು. ಯಾರೂ ಹೇಳುವವರು ಕೇಳುವವರು ಇರಲೇ ಇಲ್ಲ. ಯಾರಾದರೂ ಬಾಯಿಬಿಡಲು ಯತ್ನಿಸಿದರೆ ಅವರನ್ನು ಹೊಡೆದು ಮುಗಿಸುವ ರೌಡೀ ಗ್ಯಾಂಗನ್ನು ಕಳ್ಳ ಸನ್ಯಾಸಿ ತಯಾರುಮಾಡಿಕೊಂಡಿದ್ದ ಅಂತ. ಆ ರೌಡೀ ಗ್ಯಾಂಗಿಗೆ ಸಿಗುವ ನಾಯಿ ಬಿಸ್ಕೀಟಿಗಾಗಿ ಅವರೆಲ್ಲ ಅವನ ಪರವಾಗೇ ಇದ್ದರು. ಆ ರೌಡೀ ಗ್ಯಾಂಗಿನಲ್ಲಿ ಇರುವವರೂ ಸಹ ಕಳ್ಳ ಸನ್ಯಾಸಿಯಂತೆಯೇ ಕಚ್ಚೆಹರುಕರಾಗಿದ್ದರು ಅಂತ.

ಒಂದೂರಿನಲ್ಲಿ ವ್ಯಕ್ತಿಯೊಬ್ಬನಿದ್ದ. ಅವ ಪರಮ ಧಾರ್ಮಿಕ. ತನ್ನ ಇಡೀ ಸಂಸಾರವನ್ನೇ ಕಟ್ಟಿಕೊಂಡು ಈ ಕಳ್ಳ ಸನ್ಯಾಸಿಯ ದರ್ಶನಕ್ಕೆ ತೆರಳುತ್ತಿದ್ದ. ಎಲ್ಲೋ ’ಗುರುಗಳು’ ಹಾದುಹೋಗುತ್ತಾರೆ ಎಂಬ ಸುದ್ದಿ ಸಿಕ್ಕರೂ ಸಾಕು, ಹಣ್ಣುಕಾಯಿ ಹಿಡಿದು ಅಲ್ಲಿಗೆ ಹೋಗಿ ನಿಂತುಬಿಡುತ್ತಿದ್ದ. ಒಂದು ಚತುರ್ಮೋಸದಲ್ಲಿ ’ಸನ್ಯಾಸಿ’ ಅವನ ಮಗಳಿಗೆ ಗಾಳ ಹಾಕಿದ. ಮುಗ್ಧೆಯಾಗಿದ್ದ ಅವಳನ್ನು ಆಮೂಲಾಗ್ರವಾಗಿ ಬಳಸಿಕೊಂಡು, ಬಾಯ್ಬಿಡದಂತೆ ಬೆದರಿಕೆ ಹಾಕಿ, ಆಣೆ ಪ್ರಮಾಣ ಮಾಡಿಸಿ, ತನ್ನ ಅನುಗಾಲದ ’ಅನುಕೂಲ’ಕ್ಕಾಗಿ ಗಿಂಡಿಯೊಬ್ಬನಿಗೆ ಕಟ್ಟಿದ ಅಂತ. ವೈದ್ಯರ ವಿರುದ್ಧ ಜೈಕಾರ ಕೂಗುತ್ತಿದ್ದ ಬಳಗದ ನಡುವೆ ಸುಮ್ಮನಿದ್ದ ಪರಮಧಾರ್ಮಿಕ ವ್ಯಕ್ತಿಗೆ ತನ್ನ ಕಾಲುಬುಡಕ್ಕೆ ಬಂದಾಗ ’ಸನ್ಯಾಸಿ’ಯ ನಿಜ ಬಣ್ಣ ಅನಾವರಣವಾಯ್ತು ಅಂತ.

ಕತೆಗಳು ಒಂದೆರಡಲ್ಲ, ಇಂತಹ ಕತೆಗಳು ಹೇರಳವಾಗಿವೆ. ಆದರೆ ಇವೆಲ್ಲ ’ಕಥೆಯಲ್ಲ ಜೀವನ’ದ ನೈಜ ಕತೆಗಳು. ಕಾಲ ಉರುಳುತ್ತಿತ್ತು. ಆನ್ಯಾಯ ಹೆಚ್ಚುತ್ತಲೇ ಇತ್ತು. ಅಧರ್ಮ ಧರ್ಮದ ಹೆಸರಿನಲ್ಲಿ ಭಕ್ತರಮೇಲೆ ಸವಾರಿ ನಡೆಸುತ್ತಿತ್ತು. ಪರಮಧಾರ್ಮಿಕನಾಗಿದ್ದ ವ್ಯಕ್ತಿ ಅಸಹಾಯನಾಗಿದ್ದ. “ಬಾಯಿ-ಮುಕಳಿ ಬಂದ್ ಮಾಡಿಕೊಂಡಿರು ಇಲ್ಲದಿದ್ದರೆ ಮುಗಿಸಿಬಿಡುತ್ತೇವೆ. ನಿನಗೆ ನೂರು ಜನರ ಬೆಂಬಲವಿದ್ದರೆ ನಮಗೆ ಸಾವಿರಾರು ಜನರ ಬೆಂಬಲವಿದೆ” ಎಂದು ’ಸನ್ಯಾಸಿ’ ಬಹಳ ಭೀಕರವಾಗಿ ಕೆಂಗಣ್ಣು ತೆರೆದು ಘರ್ಜಿಸಿದ್ದರಿಂದ ಪರಮಧಾರ್ಮಿಕ ಬಹಳ ಕುಗ್ಗಿಹೋದ. ಅವನ ಮನದ ಬೇಗುದಿಮಾತ್ರ ರಾಂಗಾನುಗ್ರಹವಾಗಿ ’ಸನ್ಯಾಸಿ’ಯನ್ನು ಕಾಡಿಬಿಟ್ಟಿತು.

ಎರಡೇ ವರ್ಷವೂ ಪೂರ್ತಿಯಾಗಿರಲಿಲ್ಲ. ಅಷ್ಟರಲ್ಲಿಯೇ ಕಳ್ಳ ಸನ್ಯಾಸಿಯ ಮೇಲೆ ದೂರು ದಾಖಲಾಯ್ತು. ಹಿಂದೆಂದೂ ಯಾವ ಸನ್ಯಾಸಿಯೂ ಅನುಭವಿಸಿರದ ದೂರು ಅದು ಅಂತ. ಅತ್ಯಾಚಾರದ ದೂರು. ಯತಿಯಾದವನು ಅತ್ಯಾಚಾರ ನಡೆಸುತ್ತಾನೆಯೇ? ಸಮಾಜ ನಂಬಲಿಲ್ಲ. ಇಡೀ ಸಮಾಜ ದೂರುದಾರರನ್ನು ಹೊಡೆದು ಮುಗಿಸಲು ಅನುಮೋದನೆಗೆ ನಿಂತುಬಿಟ್ಟಿತ್ತು. ಆದರೆ ಕೆಲವರಿಗೆ ಮಾತ್ರ ಈ ಸ್ವಾಮಿ ಅತಿ ಕಾಮಿ ಎಂಬ ಘಾಟು ಮೂಗನ್ನು ಒಡೆದು ನೆತ್ತಿಯನ್ನು ಹೊಕ್ಕಿತ್ತು. ಅವರೆಲ್ಲ ನಿಧಾನವಾಗಿ ’ಗುರುಗಳ’ ಚಲನವಲನ ಮತ್ತು ಚರ್ಯೆಗಳನ್ನು ಆಗ ಗಮನಿಸತೊಡಗಿದರು. ಆಲ್ಲಿಯವರೆಗೆ ಅವರಿಗೂ ಒಂದು ವಿಧದ ಮಂಪರು ಕವಿದಿತ್ತು ಅಂತ.

ನಂತರ ಆ ಕಳ್ಳ ’ಸನ್ಯಾಸಿ’ ನಡೆಸಿದ್ದೆಲ್ಲ ಅಧರ್ಮದ ಕೆಲಸಗಳೇ. ದೂರು ದಾಖಲಾಗುತ್ತದೆ ಎಂದು ಯಾರೋ ಸೂಟುಕೊಟ್ಟಾಗ ದೂರು ದಾಖಲಿಸುವವರ ವಿರುದ್ಧ ತಾನೇ ಒಂದು ಮಸಲತ್ತು ಹೂಡಿ ಅವರನ್ನೇ ಬಂಧಿಸುವಂತೆ ಮಾಡಿದ. ದೂರು ದಾಖಲಾದಾಗ “ಸಾವಿರಾರು ವರ್ಷಗಳ ಇತಿಹಾಸವಿರುವ ಪರಂಪರೆಗೆ ಭಂಗತರುವ ಷಡ್ಯಂತ್ರ’ ಎಂದು ಭೋಂಗು ಬಿಟ್ಟ. ಕಳ್ಳ ಸನ್ಯಾಸಿಯ ಹಾವಾಡಿಗ ಮಹಾಸಂಸ್ಥಾನದ ವಂದಿಮಾಗಧರು ಸಾಕಷ್ಟು ಅಡ್ಡಗೇಟುಗಳನ್ನು ಹಾಕಿಕೊಂಡು ಕಾನೂನು ರೀತಿಯಲ್ಲಿ ಎಲ್ಲೆಲ್ಲ ತಪ್ಪಿಸಿಕೊಳ್ಳಲು ಸಾಧ್ಯವೋ ಅದಕ್ಕೆಲ್ಲದಕ್ಕೂ ವ್ಯವಸ್ಥೆ ಮಾಡಿದರು. ಈ ಕೆಲಸಕ್ಕೆ ಭಕ್ತರ ಕಾಣಿಕೆ ಮತ್ತು ದೇಣಿಗೆಯಿಂದ ಬಂದ ಹಣವನ್ನು ನೀರಿನಂತೆ ಪೋಲು ಮಾಡಿದರು.

ಯಾವಾಗ ಏನು ಸಂಭವಿಸುತ್ತದೆ, ಮುಂದೆ ಚೆಸ್ ಆಟದಲ್ಲಿ ಯಾವ ಕಾಯಿಯನ್ನು ಹೇಗೆ ಚಲಿಸಬೇಕೆಂಬುದಕ್ಕೆ ಜೊತೆಗೇ ನೆಲೆನಿಂತ ಅಡ್ಡಗೇಟುಗಳು ಸಹಕಾರಿಯಾದವು. ಯಾವ ಘಳಿಗೆಯಲ್ಲಿ ಮಾವ ಬಂದರೂ ಮೈಮುಟ್ಟದಂತೆ, ಕೈ ಹಿಡಿದು ಎಳೆದೊಯ್ಯದಂತೆ ನೋಡಿಕೊಳ್ಳಲು ಹಳದೀ ಸೇನೆ ತಯಾರಾಯ್ತು! ಅಷ್ಟೇ ಅಲ್ಲ, ತಲೆಯಿಲ್ಲದ ಜನಾಂಗದವರನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ತರಹೇವಾರಿ ಪ್ಲಾನುಗಳನ್ನು ತಯಾರಿಸಿ ಹಾಗೆಲ್ಲ ಬಳಸಿಕೊಂಡರು ಅಂತ. ಮಾವಂದಿರು ಬಂದಾಗ ತಲೆಯಿಲ್ಲದ ಜನಾಂಗದ ಮಹಿಳೆಯರು ಮಠದೊಳಕ್ಕೆ ಹೋಗದಂತೆ ದಾರಿಯಲ್ಲಿ ಅಡ್ಡಡ್ಡ ಮಲಗಿಬಿಟ್ಟಿದ್ದರು! ಇದೆಲ್ಲ ರಾಂಗಾನುಗ್ರಹವಲ್ಲದೇ ಇನ್ನೇನು ಅಂತ? ಹೀಗಾಗಿ ಆ ರಾತ್ರಿಯಲ್ಲಿ ಜನ ಎಲ್ಲಿಂದ ಬಂದರು? ಎಂಬ ಪವಾಡದ ಮಹಾತ್ಮೆ ನಿಮಗೀಗ ಅರ್ಥವಾಗಿರಬಹುದು.

ಚುತುರ್ಮೋಸ ಮುಗಿದು ಮಹಾನಗರಕ್ಕೆ ಹೊರಡಬೇಕಾಗಿತ್ತು. ಹೊರಡಲಿಕ್ಕೆ ಮೀನಮೇಷ ಎಣಿಸಿ, ಎಲ್ಲಾ ಆಡ್ಡಗೇಟುಗಳೂ ದಾರಿ ಮುಕ್ತವಾಗಿ ತೆರೆದ ನಂತರ ಹೊರಟು, ಬಂಧಿಸಿಬಿಡುವ ಸಾಧ್ಯತೆ ಇರೋದರಿಂದ ತುಮಕೂರಿನಲ್ಲಿ ಸಂಬಂಧವೇ ಇಲ್ಲದ ಮನೆಗೆ ತೆರಳಿ ವಿಶ್ರಾಂತಿ ಮಾಡಿಕೊಂಡು ಅಂತೂ ಸವಾರಿ ನಡುರಾತ್ರಿಯ ಹೊತ್ತಿಗೆ ಮಹಾನಗರ ತಲುಪಿತ್ತು. ನಂತರ ಹಾಗೂ ಹೀಗೂ ದುಡ್ಡು ಚೆಲ್ಲುತ್ತ ಕಾಲ ತಳ್ಳುತ್ತಿದ್ದ ಕಳ್ಳ ಹೇಗೆ ದಿನದೂಡಬಹುದು ಎಂಬುದನ್ನು ಅಧ್ಯಯನ ಮಾಡಿ ಕಾರ್ಯಗತಗೊಳಿಸುವುದಕ್ಕೆಂತಲೇ ಒಂದು ಟೀಮ್ ರೆಡಿಮಾಡಿದ್ದ. ಹೊರಗೆ ಹಳದೀ ಸೇನೆ ದೊಣ್ಣೆ ಹಿಡಿದು ತಿರುಗುತ್ತ ಪಾಳಿಯಲ್ಲಿ ಪಹರೆ ನಡೆಸುತ್ತಿತ್ತು. ಪಾಳಿಯ ಪಹರೆ ಮತ್ತು ಅಡ್ಡಗೇಟುಗಳ ರಕ್ಷಣೆಯಲ್ಲಿ ಕಾಲ ಕಳೆಯಬೇಕಾಗಿ ಬಂದದ್ದು ಮಠದ ಮೇಲಾದ ದೊಡ್ಡ ರಾಂಗಾನುಗ್ರಹ ಅಂತ.

ನಿನ್ನೆಮೊನ್ನೆ ಸಾರಥಿ ದೇವ್ ಎಂಬ ’ಅವತಾರಿ’ಯನ್ನೂ, ಅದಕ್ಕೂ ಹಿಂದೆ ರಾಂಪಾಲನೆಂಬ ’ದೇವಮಾನವ’ನನ್ನೂ, ಅದಕ್ಕೂ ಮುಂಚಿತವಾಗಿ ಅಸರಾಂ ಬಾಪು ಎಂಬ ’ಮಹಾನ್ ಸಂತ’ನನ್ನೂ ಬಂಧಿಸಿದ್ದನ್ನು ನೀವೆಲ್ಲ ನೋಡಿದ್ದೀರಿ. ಅವರೆಲ್ಲರಿಗೂ ಅಂಧ ಭಕ್ತರ ಸಂಖ್ಯೆ ಕಮ್ಮಿಯಿತ್ತೇ? ಒಂದೊಂದು ಸಭೆಯಲ್ಲೂ ಲಕ್ಷ ಲಕ್ಷ ಜನ. ಅದೆಲ್ಲಿಂದ ಬರ್ತಾರೆ? ಯಾಕಾಗಿ ಬರ್ತಾರೆ? ಇದಕ್ಕೇ ಹೇಳೋದು ಜನಮರುಳೋ ಜಾತ್ರೆ ಮರುಳೋ ಅಂತ. ಅವರನ್ನೆಲ್ಲ ಬಂಧಿಸಿದ ಕಾನೂನಿಗೆ ಅತ್ಯಾಚಾರದ ಆರೋಪಕ್ಕೆ ಅಧಿಕೃತ ಪುರಾರೆ ಸಿಕ್ಕಿರುವ ’ಹಾವಾಡಿಗ’ನನ್ನು ಬಂಧಿಸಲು ಸಾಧ್ಯವಾಗಲಿಲ್ಲವೇ? ಇಲ್ಲೂ ತಪ್ಪಿಸಿಕೊಂಡಿದ್ದು ರಾಂಗಾನುಗ್ರಹವೇ ಅಂತ. ಬಂಧಿಸುವ ಜನರಿಗೆ ಸೀಟಿನ ಬಗೆಗೊಂದು ಕಾಳಜಿಯಿದೆ. ಆ ಸೀಟಿನಲ್ಲಿ ಇಲ್ಲಿಯವರೆಗೆ ಇಂತವರು ಹಿಂದೆಲೂ ಇಂತಹ ದಾಖಲೆಗಳನ್ನು ಮಾಡಿದ್ದಿಲ್ಲ. ಮುಂದೆಯೂ ಮಾಡಲಾರರು. ಈಗ ಕಳ್ಳ ಸನ್ಯಾಸಿಯಿಂದ ನಡೆದ ಅಪಚಾರದ ಆಘಾತದಿಂದ ಸಮಷ್ಟಿ ಸಮಾಜವೇ ಚೇತರಿಸಿಕೊಂಡಿರಲಿಲ್ಲ.

ಇದು ವೈಜ್ಞಾನಿಕ ಯುಗ. ವಿಜ್ಞಾನದ ಪರೀಕ್ಷೆಗಳಿಲ್ಲದಿದ್ದರೆ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದ ಹಲವು ಕಳ್ಳರು ಇಂದು ಅಂತಹ ಪರೀಕ್ಷೆಗಳಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಮಹಿಳೆಯ ಚಡ್ಡಿಯಲ್ಲಿ ಸನ್ಯಾಸಿಯ ವೀರ್ಯಾಣು ಸಿಗುವುದಾದರೂ ಹೇಗೆ? ಅದನ್ನು ಅಲ್ಲಗಳೆಯಲಾದೀತೇ? ಪರೀಕ್ಷೆಯಲ್ಲಿ ಋಜುವಾತಾದ ಅದನ್ನೂ ಕಣ್ಮುಚ್ಚಿ ಅಲ್ಲಗಳೆಯುವ ಹಳದೀ ಸೇನೆಗೆ ಮಂಕು ಬೂದಿ ಎರಚಿದ್ದೂ ಒಂದು ರಾಂಗಾನುಗ್ರಹವೇ.

ವರದಿಗಳು ರೆಡಿಯಾದಾಗ ತಪ್ಪಿಸಿಕೊಳ್ಳುವ ಇನ್ನೊಂದು ಮಾರ್ಗದಲ್ಲಿ ಮಂಗನಕಟ್ಟೆ ಕ್ಷೌರಿಕನಿಂದ ಕತೆ ಹೇಳಿಸುವ ಪ್ಲಾನು ಮಾಡಿದ್ದೂ ಸಹ ಒಂದು ರಾಂಗಾನುಗ್ರಹವೇ. (ಆ ಕತೆಯನ್ನು ನಿಮಗೆ ತಿಂಗಳುಗಳ ಹಿಂದೆಯೇ ಹೇಳಿದ್ದೇನೆ.)’ಆಪರೇಶನ್ ಕ್ಷೌರಿಕ’ ಸಕ್ಸಸ್ ಆಗದಿದ್ದಾಗ ಮುಂದಿನ ಕೆಲವು ಪ್ಲಾನುಗಳನ್ನು ನಿಗೂಢವಾಗಿ ನಡೆಸಲಾಗಿದೆ. ಅದು ಸನ್ಯಾಸಿ, ಕುಲಪತಿ ಬಾವಯ್ಯ ಮತ್ತು ಅತ್ಯಂತ ಉನ್ನತಮಟ್ಟದ ಹಳದೀ ಭಕ್ತರಿಗೆ ಮಾತ್ರ ಗೊತ್ತು. ಹಾಗಾಗಿಯೇ ಈಗಲೂ ಹೇಳುತ್ತಿರುವುದು “ಸತ್ಯಕ್ಕೇ ಜಯ” ಅಂತ. ಮತ್ತೆ ಮತ್ತೆ ಕಳ್ಳ ಸನ್ಯಾಸಿ ಹೇಳಿಕೊಳ್ಳುವುದು “ಜಯ ನಮ್ಮದೇ” ಅಂತ.

ಇಂತವನನ್ನು ಕಟ್ಟಿಕೊಂಡು ಯಾವ ಪರಂಪರೆಯ ಆದರ್ಶಗಳನ್ನು ಕಾಪಿಡುತ್ತೀರಿ? ಯಾವುದು ಧರ್ಮಾಚರಣೆ ಎಂದು ನಂಬಿಕೊಳ್ಳುತ್ತೀರಿ? ಆಧ್ಯಾತ್ಮ ಮಾರ್ಗದಲ್ಲಿ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ತೀರಿ? ಇದಕ್ಕೆಲ್ಲ ಪರಿಹಾರ-ಕಳ್ಳ ಸನ್ಯಾಸಿಗೆ ಪರಪ್ಪನ ಅಗ್ರಹಾರ. ಈಗಲಾದರೂ ಸಮಷ್ಟಿ ಸಮಾಜ ಎಚ್ಚೆತ್ತುಕೊಳ್ಳಬೇಕು. ಎಲ್ಲ ರಾಂಗ್ರಾನುಗ್ರಹಗಳನ್ನು ಮೀರಿ ದೊಡ್ಡದಾದ ರಾಂಗಾನುಗ್ರಹವಾಗಿ, ಹಾವಾಡಿಗ, ಪೀಠಬಿಟ್ಟು ಕೃಷ್ಣಜನ್ಮಸ್ಥಾನವನ್ನು ಸೇರಿ, ಮೇಲೆ ಹೇಳಿದ ಬಂಧಿತ ’ಮಾಹಾನ್ ದೇವಮಾನವರ’ ಸಾಲಿನಲ್ಲಿ ಒಬ್ಬನಾಗಿ ರಾರಾಜಿಸಬೇಕು. ಬೇಕಾದರೆ ’ವಿದ್ವಾನ್’ ಕುಲಪತಿ ಬಾವಯ್ಯ ಅಲ್ಲಿಯೂ ಕೊಡೆಹಿಡಿದು ಗಂಟಲು ಬಿಗಿದುಕೊಂಡು, “ನಮ್ಮನ್ನು ಹೊರಗೆ ಬಿಡಬೇಕೆಂದು ಮಹಾಸಂಸ್ಥಾನದವರ ಅಪ್ಪಣೆಯಾಗಿದೆ” ಎಂದು ಕೂಗುತ್ತಲೇ ಇರಲಿ. ಆಗ ’ಧರ್ಮೋ ರಕ್ಷತಿ ರಕ್ಷಿತಃ’ಎಂಬುದಕ್ಕೊಂದು ಅರ್ಥ ಬರುತ್ತದೆ.

Thumari Ramachandra

source: https://www.facebook.com/groups/1499395003680065/permalink/1650119311940966/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s