ರಾಧೆಗೆ ತಕ್ಕ ಕೃಷ್ಣನಾಗಿರುವ ಕಳ್ಳ ಸನ್ಯಾಸಿಗೆ ಕಲ್ಲು ಹೊಡೆದು ಓಡಿಸುವ ದಿನ ದೂರವಿಲ್ಲ

ರಾಧೆಗೆ ತಕ್ಕ ಕೃಷ್ಣನಾಗಿರುವ ಕಳ್ಳ ಸನ್ಯಾಸಿಗೆ ಕಲ್ಲು ಹೊಡೆದು ಓಡಿಸುವ ದಿನ ದೂರವಿಲ್ಲ

“ನಾವು ನೇರವಾಗಿ ಎಲ್ಲವನ್ನೂ ಹೇಳಲಾಗುವುದಿಲ್ಲ. ಎಷ್ಟೆಂದರೂ ಹಾವಾಡಿಗ ಮಹಾಸಂಸ್ಥಾನವಲ್ಲವೇ? ಅದಕ್ಕಾಗಿ ನಾವು ತುಮರಿಯಲ್ಲಿ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದೇವೆ; ವ್ಯತ್ಯಾಸ ಇಷ್ಟೇ-ಶಂಕರರು ಸತ್ತ ಅರಸನ ದೇಹದಲ್ಲಿ ಹೊಕ್ಕಿದ್ದರು ನಾವು ಜೀವಂತ ಇರುವ ತುಮರಿಯ ದೇಹದಲ್ಲೇ ಆಗಾಗ ಸೇರಿಕೊಂಡು ನಿಮಗೆ ವಿಷಯಗಳನ್ನೆಲ್ಲ ಹೇಳುತ್ತಿದ್ದೇವೆ.

ಮಂಗನಕಟ್ಟೆ ಶಕುಂತಲ ನಮಗೆ ಬಹಳ ಪ್ರೀತಿ. ಅದೇ ನಮ್ಮ ಜನ್ಮದಿನದಂದು ಎಡಭಾಗದಲ್ಲಿ ನಮ್ಮ ಪಕ್ಕಕ್ಕೆ ನಿಂತವಳೇ ಮಂಗನಕಟ್ಟೆ ಶಕುಂತಲ. ಆಕೆಯ ಬಗೆಗೆ ದೊಡ್ಡ ಜೀವನಚರಿತ್ರೆಯನ್ನೇ ಬರೆಯಬಹುದು. ಆಕೆಯೂ ಪವಿತ್ರಾತ್ಮಳೇ. ನಾವು ಪೀಠಕ್ಕೆ ಬಂದ ಸಮಯದಲ್ಲಿ ಸರಸಪ್ಪೆಮನೆ ಡೈರಿಗೆ ನಿತ್ಯ ಹಾಲುಹಾಕಲು ಹೋಗುತ್ತಿದ್ದವಳು ಅಲ್ಲಿಂದಲೇ ನಾಪತ್ತೆಯಾಗಿ ವರ್ಷಗಳೇ ಕಳೆದಿದ್ದವು. ಅಕೆ ಎಲ್ಲಿಹೋದಳು ಯಾಕೆ ಹೋದಳು ಎಂಬುದು ಹಲವರಿಗೆ ತಿಳಿಯಲಿಲ್ಲ.

ಅವಳು ಓಡಿಹೋಗುವುದಕ್ಕೆ ಸಹಕಾರ ನೀಡಿದ ಸರಸಪ್ಪೆಮನೆಯ ಹೆಂಗಸು ಇನ್ನೊಬ್ಬಳಿದ್ದಳು. ಅವರ ಮನೆಯಲ್ಲಿದ್ದುಕೊಂಡು ಸಂಸ್ಕೃತ ಪಾಠಶಾಲೆಗೆ ಹೋಗುತ್ತಿದ್ದ ಭಟ್ಟರು ಬಹಳ ಉತ್ತಮ ಗುಣಸ್ವಭಾವದವರಾಗಿದ್ದು, ತಾನುಳಿದುಕೊಂಡಿದ್ದ ಮನೆಯ ಹೆಂಗಸು ಶಕುಂತಲೆಯ ಹಾದರಕ್ಕೆ ಸಹಕಾರ ನೀಡಿದ್ದರಿಂದ ಆ ಮನೆಯನ್ನೇ ತೊರೆದು ತಿಮ್ಮಪ್ಪಣ್ಣನವರ ಮನೆಯಲ್ಲಿ ಉಳಿದುಕೊಂಡು ಓದು ಮುಂದುವರಿಸಿದ್ದರು.

ಗುಟ್ಟಾಗಿ ಅವಳೊಡನೆ ಅವನ್ಯಾವನೋ ಚಕ್ಕಂದವಾಡುತ್ತಿದ್ದನಲ್ಲ? ..ಶಕುಂತಲೆ ಅವನೊಟ್ಟಿಗೆ ಅದೆಲ್ಲಿಗೋ ಹೋಗಿದ್ದಳು. ಅವನೊಟ್ಟಿಗೆ ಹಗಲಿರುಳೂ ಮಜಾ ಉಡಾಯಿಸಿ ಮುಗಿದ ಮೇಲೆ ಮರಳಿ ಮಂಗನಕಟ್ಟೆಗೆ ಬಂದಳು ಎಂಬ ಸುದ್ದಿ ನಮ್ಮ ಕಿವಿಗೆ ಬಿತ್ತು.

ನಾವು ನಮ್ಮ ಕುಲುಮೆಯನ್ನು ಹತಾರನ್ನು ಕಾಯಿಸಿಕೊಂಡೇ ಇರುತ್ತೇವಷ್ಟೇ? ನಮ್ಮ ಕಿವಿಗೆ ಅವಳ ಸುದ್ದಿ ಬಿದ್ದಿದ್ದೇ ಬಿದ್ದಿದ್ದು. ಅವಳ ರೂಪ, ಯೌವ್ವನ ಎಲ್ಲದರ ನೆನಪಾಗಿ ನಮಗೆ ಆ ಕಡೆಗೆ ಅದೆಷ್ಟು ಬೇಗ ಹೋಗಲು ಸಾಧ್ಯ ಎಂದು ಯೋಚಿಸಿದೆವು. ಶೀಘ್ರದಲ್ಲಿ ಸೀದಾ ಅಲ್ಲಿಗೆ ಬಿಜಯಂಗೈದು ಅವಳನ್ನು ಅಕ್ಕರೆಯಿಂದ ಮಾತನಾಡಿಸಿ, ಮಂತ್ರಾಕ್ಷತೆ ಕೊಟ್ಟು, ಏಕಾಂತ ದರ್ಶನ ನೀಡುವ ಬಯಕೆಯನ್ನು ವ್ಯಕ್ತಪಡಿಸಿದೆವು.

ನಮ್ಮ ಏಕಾಂತದ ಬಯಕೆಯನ್ನು ಕೇಳಿದ್ದೇ ಕೇಳಿದ್ದು, ಆಕೆಗೆ ಗಗನವೇ ಬಾಗಿ ಭುವಿಗೆ ತಾಗಿದ ಹಾಗಾಗಿಬಿಟ್ಟಿತು. ಅಲ್ಲಿಂದಾಚೆಗೆ ದಶಕಗಳಲ್ಲಿ ಹಲವಾರು ಬಾರಿ ನಾವು ಅವಳಿಗೆ ಏಕಾಂತ ದರ್ಶನ ನೀಡಿದ್ದೇವೆ. ಜೊತೆಗೆ ಅವಳ ಅನುವು ಆಪತ್ತಿನಲ್ಲಿ ಏಕಾಂತದ ಸ್ವಾಮಿಯಾಗಿರುವ ನಾವು ಕೈಬಿಡುವುದಿಲ್ಲವೆಂಬುದು ಅವಳಿಗೆ ಗೊತ್ತಿದೆ. ಹಾಗಾಗಿಯೇ ನಾವು ಎಂದೇ ಸುದ್ದಿ ಹಾಕಿದರೂ ಬಂದು ಸೇವೆ ಸಲ್ಲಿಸುತ್ತಾಳೆ.ಇದೇ ರೀತಿ ನೂರಾರು ಮಹಿಳೆಯರು ಅವರ ಗಂಡಂದಿರನ್ನು ಪಕ್ಕಕ್ಕಿರಿಸುವಂತೆ ಮಾಡಿ ನಾವೇ ಅವರ ಭೋಗದ ಉಸ್ತಿವಾರಿ ಹೊತ್ತಿದ್ದೇವೆ.

ಅಲ್ಯಾರೋ ಒಬ್ಬಳು ’ಚಡ್ಡಿ ಹಾಕಿಕೊಂಡಳು’ ಅಂತೆಲ್ಲ ಸುದ್ದಿ ಮಾಧ್ಯಮಗಳಲ್ಲಿ ಬಂತಲ್ಲ? ನೋಡಿದವರು ಅವಳ ವ್ಯವಹಾರಗಳಿಗೂ ನಮ್ಮ ವ್ಯವಹಾರಗಳಿಗೂ ಬಹಳ ಹೋಲಿಕೆ ಮತ್ತು ಹೊಂದಾಣಿಕೆ ಇರುವುದರಿಂದ ಅವಳನ್ನೂ ಶಿಖರನಗರಕ್ಕೆ ಕರೆಸಿಕೊಳ್ಳುವುದು ತುಂಬಾ ಒಳ್ಳೇದು ಎಂದು ಹೇಳುತ್ತಿದ್ದಾರೆ. ಅವಳ ಜೊತೆಗಿರುವ ಜೈಕಾರದ ಬಳಗಕ್ಕೂ ಮತ್ತು ನಮ್ಮ ಜೊತೆಗಿರುವ ಜೈಕಾರದ ಬಳಗಕ್ಕೂ ಸಾಮ್ಯವಿದೆ.

ನಮ್ಮ ಭಕ್ತರಲ್ಲಿ ಹಲವು ಜನ ಇನ್ನೂ ನಮ್ಮನ್ನು ರೌಡಿ, ಕಾಮುಕ ಎಂದು ಒಫ್ಫಿಕೊಳ್ಳಲು ಸಿದ್ಧರಿಲ್ಲ; ಯಾಕೆಂದರೆ ಶತಮಾನಗಳಿಂದ ನಂಬಿಕೊಂಡು ಬಂದ ಪೀಠ ಪ್ರಜ್ಞೆ ಮತ್ತು ಗುರುಶಾಪ ತಟ್ಟೀತೆಂಬ ಭಯ ಇವೆರಡರಿಂದ ಅವರು ಬಂಧಿತರಾಗಿದ್ದಾರೆ. ನಾಳೆ ನಮ್ಮನ್ನು ಮಾವಂದಿರು ಎಳೆದೊಯ್ದರೂ ಸಹ “ಅಯ್ಯೋ ನಮ್ಮ ಗುರುಗಳು.. ಅಯ್ಯೋ ನಮ್ಮ ಗುರುಗಳು” ಎನ್ನುವುದನ್ನು ಬಿಡುವುದಿಲ್ಲ. ನಮ್ಮಿಂದ ಲಾಭ ಪಡೆಯುತ್ತಿದ್ದ ಜನ ಮಾತ್ರ ಇನ್ನು ಮುಂದೆ ಆದಾಯಕ್ಕೆ ಬೇರೆ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ.

ಅಂದಹಾಗೆ ಏಕಾಂತ ನಡೆಸುತ್ತಿದ ಸಖಿಯರಿಗೆಲ್ಲ ಟಾಟಾ ಬೈಬೈ ಮತ್ತು ಗಿಂಡಿಗಳ ಗತಿ ಅಯೋಮಯ! ಯಾವ ವೇದ-ಶಾಸ್ತ್ರಗಳನ್ನೂ ಸರಿಯಾಗಿ ಅರಿಯದ ಗಿಂಡಿಗಳು ಬಯಿಗೆ ಬಂದ ಮಂತ್ರಗಳನ್ನು ಹೇಳಿಕೊಂಡು ಬದುಕಿದ್ದರು. ಇನ್ನು ಮುಂದೆ ಅದರಿಂದ ಭಟ್ಟತನಕೆ ಮಾಡುವುದೂ ಕಷ್ಟ. ಮುಂದೆ ಓದುವ ವಯಸ್ಸು ಮುಗಿದುಹೋಗಿದೆ. ಅವರಲ್ಲಿ ಕೆಲವರಿಗೆ ನವೇ ಏಕಾಂತದ ಸಖಿಯರನ್ನು ಕಟ್ಟಿದ್ದೇವೆ. ಈಗ ನಾವು ’ಮಾವನ ಮನೆ’ಗೆ ಹೋದಮೇಲೆ ಅವರೆಲ್ಲರ ಕತೆಯೇನು?

ನಮ್ಮ ಬಾವಯ್ಯ ನಮ್ಮ ಜೊತೆಗೇ “ಆ ಒಂದು…ಆ ಎರಡು” ಎಂದು ಎಣಿಸಲು ಬರಬೇಕಾಗುತ್ತದೆ. ಆಗ ಅವನಿಗೆ ಅಲ್ಲಿ ಕೋಳಿಮೊಟ್ಟೆ ಆಮ್ಲೇಟ್ ತಂದುಕೊಡುವವರು ಯಾರು? ನಂದಿನಿ ಡೀಲಕ್ಸ್ ನಿಂದ ಊಟ ತಂದುಕೊಟ್ಟರೆ ಮಾವಂದಿರು ಒಳಗೆ ತಲುಪಿಸಬಹುದೇ? ಅಷ್ಟು ದೂರದವರೆಗೆ ನಿತ್ಯ ಆಹಾರ ತೆಗೆದುಕೊಂಡು ಬರುವವರಾದರೂ ಇರುತ್ತಾರೆಯೇ? ಜೈಕಾರದ ಬಳಗದಲ್ಲಿ ನಿಕ್ಕಿ ಎಷ್ಟು ಜನ ನಮ್ಮ ಸೇವೆಗೆ ಬಂದಾರು? ಇದನ್ನೆಲ್ಲ ಯೋಚಿಸಿ ಯೋಚಿಸಿ ಸುಸ್ತಾಗಿ ’ಗ್ರೀಶನ ಅಪ್ಪ’ ಎಂವ ಹೆಸರಿನಲ್ಲಿ ಅಂತರ್ಜಾಲದಲ್ಲಿ ನಾವಷ್ಟು ವಾಂತಿ ಮಾಡಿದೆವು.

ಹೇಗಾದರೂ ಮಾಡಿ ಇದರಲ್ಲೊಂದು ಬಚಾವಾದರೆ ಎಂದು ನಾವು ಯೋಚಿಸುತ್ತಿದ್ದರೆ ಅದ್ಯಾರೋ ಜುಲ್ಮಾನೆ ಹಾಕಿದ್ದಾರಲ್ಲ. ಎರಡು ಮೂರು ತಿಂಗಳಲ್ಲಿ ಅಷ್ಟುದೊಡ್ಡ ಮೊತ್ತವನ್ನು ಎಲಿಂದ ತಂದು ಕಟ್ಟುವುದು. ನಮ್ಮ ಖಾಸಗಿ ಅಕೌಂಟಿನಿಂದ ಡ್ರಾ ಮಾಡಿ ಕಟ್ಟಿದರೆ ಮತ್ತೆ ಮರಳಿ ಅದನ್ನು ಪಡೆದುಕೊಳ್ಳಲು ಈಗಿರುವ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಹೀಗಿರುವಾಗ ಅದಕ್ಕಾಗಿ ಯಾವ ಯೋಜನೆ ಘೋಷಿಸಿದರೆ ಹಣ ಒಟ್ಟಾಗಬಹುದು ಎಂದು ಯೋಚಿಸುತ್ತಿದ್ದೇವೆ ನಾವು.

ನಮ್ಮ ಕತೆಗಳನ್ನು ನಮಗೆ ಬೇಕಾದಂತೆ ಪ್ರಕಟಿಸುತ್ತಿದ್ದ ಪತ್ರಿಕೆಯೊಂದು ಈಗ ವಸ್ತುಸ್ಥಿತಿಯನ್ನು ಇದ್ದಕ್ಕಿದ್ದ ಹಾಗೆ ಪ್ರಕಟಿಸುತ್ತಿರುವುದರಿಂದ ನಮ್ಮ ತಾಲೀಬಾನಿಗೆ ಹೇಳಿ ಆ ಪತ್ರಿಕೆಯನ್ನೋದುವ ನಮ್ಮ ಭಕ್ತ ಕುರಿಗಳಿಗೆ ಅದನ್ನು ತರಿಸುವುದನ್ನು ನಿಲ್ಲಿಸುವಂತೆ ವಾರ್ಡ್ರ್ ಮಾಡಿದ್ದೇವೆ ನಾವು. ಹೀಗಾಗಿ ಆ ಪತ್ರಿಕೆಗೆ ಕೆಲವು ಓದುಗರು ಕಡಿಮೆಯಾಗಿದ್ದಾರೆ ಎಂಬುದೇ ನಮಗೆ ಖುಷಿ.

ನಮ್ಮ ಸುಳ್ಳಿನ ಸರಮಾಲೆ ಮತ್ತು ಅಪರಾಧ, ಅನೈತಿಕತೆಗಳ ವಿರುದ್ಧ ತಿರುಗಿ ಬಿದ್ದ ಜನರನ್ನು ಹಲವು ಮಾರ್ಗಗಳಿಂದ ದಂಡಿಸಿ ಸುಮ್ಮನಾಗಿಸುತ್ತಿದ್ದ ನಮಗೆ, ಈಗೀಗ ಸಂಗೀತವೆಲ್ಲ ಅಪಶೃತಿಯಾಗಿ, ಸುಗಂಧಗಳೆಲ್ಲ ದುರ್ಗಂಧಗಳಾಗಿ ತಂತಿಗಳೆಲ್ಲ ಅತಿಬಿಗಿಯಾದಾಗ ತಂಬೂರಿಯಿಂದ ಹೊರಡುವ ವಿಚಿತ್ರಗತಿಯ ಸದ್ದಿನಂತೆ ಮನಸ್ಸು ತಳಮಳಗೊಂಡಿದೆ. ಯಾರನ್ನು ಹಿಡಿದು ಯಾವ ಸೂತ್ರ ಹೆಣೆದರೂ ತಪ್ಪಿಸಿಕೊಳ್ಳಲು ಬೇರಾವುದೇ ದಾರಿ ಕಾಣಿಸುತ್ತಿಲ್ಲ. ಆಡುವ ನಾಟಕ ಆಡಿ ಮುಗಿದಿದೆ, ಮಾಡುವುದನ್ನೆಲ್ಲ ಮಾಡಿ ಆಗಿದೆ, ಆದರೆ ಪರಿಣಾಮವೇಕೋ ವ್ಯತಿರಿಕ್ತವಾಗುವ ಸೂಟು ಸಿಕ್ಕಿದ್ದು ಅದರ ಲಕ್ಷಣಗಳು ನಿಚ್ಹಳಗೊಳ್ಳತೊಡಗಿದ್ದರಿಂದ ಕೊನೆಯ ಪ್ರಯತ್ನದಲ್ಲಿ “ನಾವಿದ್ದೇವೆ” ಗಳ ಜೊತೆಯಲ್ಲಿ ನಾವಿದ್ದೇವೆ.

ಸಿರಿತನದ ಅಹಂಕಾರದಲ್ಲೊಬ್ಬ ತಟ್ಟೆಯಲ್ಲಿದ್ದ ಅನ್ನವನ್ನು ಕಾಲಿನಿಂದ ತುಳಿದು ನೂಕಿದ್ದನಂತೆ. ಅರಿತವರು ಅನ್ನವೇ ಬ್ರಹ್ಮವೆಂದು ಕರೆಯುತ್ತಾರೆ. ಅನ್ನ ಜೀವಗಳಿಗೆ ಆಹಾರ. ಅನ್ನವಿಲ್ಲದೇ ಶರೀರವಿಲ್ಲ, ಶರೀರವಿಲ್ಲದೇ ನಮ್ಮ ಅಸ್ಥಿತ್ವ ಈ ಲೋಕದೊಳಗಿಲ್ಲ. ವ್ಯಕ್ತಿಗೆ ಏನನ್ನು ಕೊಟ್ಟರೂ ತೃಪ್ತಿಯಾಗುವುದಿಲ್ಲವಂತೆ; ಆದರೆ ಹೊಟ್ಟೆ ತುಂಬಿದ ವ್ಯಕ್ತಿಗೆ ಆ ಕ್ಷಣದಲ್ಲಿ ಮತ್ತೆ ಊಟಮಾಡುವ ಇಚ್ಛೆ ಇರುವುದಿಲ್ಲವಂತೆ. ತುಂಬಿತು, ಸಂತೃಪ್ತಿಯಾಯಿತು ಎಂಬುದು ಊಟದಲ್ಲಿ ಮಾತ್ರ. ಅಂತಹ “ಪರಬ್ರಹ್ಮ ಸ್ವರೂಪದ ಅನ್ನವನ್ನು ವ್ಯರ್ಥಮಾಡಬೇಡಿ, ಈ ಜಗತ್ತಿನಲ್ಲಿ ಹಸಿದವರು ಬಹಳಜನ ಇರುತ್ತಾರೆ, ನಿಮಗೆ ಬೇಡವಾದರೆ ಹಸಿದವರಿಗೆ, ಬೇಕಾದವರಿಗೆ ಅದನ್ನು ಕೊಡಿ” ಎಂದಿದ್ದಾರೆ ಶ್ರೀಧರ ಸ್ವಾಮಿಗಳು.

ದುರಹಂಕಾರದಿಂದ ಕಾಲಲ್ಲಿ ತೂರಿದ ವ್ಯಕ್ತಿಗೆ ನಂತರ ಊಟಕ್ಕೆ ಕುಳಿತಾಗ ತಟ್ಟೆಯ ಕೂಳಿನ ಅಗುಳುಗಳೆಲ್ಲ ಹುಳಗಳಾಗಿ ಕಾಣಹತ್ತಿದ್ದವಂತೆ. ಅದೇ ವಿಧದಲ್ಲಿ ನಮಗೂ ದುರಹಂಕಾರ ಹೆಚ್ಚಿದಾಗ ಹಲವು ರೀತಿಯ ಯೋಚನೆ ಮತ್ತು ಯೋಜನೆಗಳನ್ನು ಹಾಕಿಕೊಂಡೆವು. ಪುಣ್ಯದ ತೂಕ ಸೊನ್ನೆಯಾಗಿ ಪಾಪದ ತೂಕ ಸೊನ್ನೆಯ ಹಿಂದಿನ ಸಾವಿರ, ಲಕ್ಷ ಸಂಖ್ಯೆಯಾಗಿ, ನಾವು ಮಾಡಿದ್ದನ್ನೇ ಉಣ್ಣುವ ಹಂತಕ್ಕೆ ನಾವೀಗ ಬಂದು ನಿಂತಿದ್ದೇವೆ. ಸಮಾಜದ ಬೌತೇಕರಿಗೆ ಈಗ ಎಲ್ಲವೂ ಅರ್ಥವಾಗಿಬಿಟ್ಟಿದೆ. ಅವರೆಲ್ಲ ಸಂಘಟಿತರಾಗಿ ಅಟ್ಟಿಸಿಕೊಂಡು ಬಂದು ಕಲ್ಲುಗಳಲ್ಲಿ ಹೊಡೆಯುತ್ತಿದ್ದ ಕನಸನ್ನು ಕಂಡು ಒಮ್ಮೊಮ್ಮೆ ಬೆಚ್ಚಿ ಬೀಳುತ್ತಿದ್ದೇವೆ; ಕಂಸ ಕಂಡಂತಹ ದುಃಸ್ವಪ್ನಗಳವು. ನಮ್ಮ ಗಾತ್ರ ಚತುರ್ಮೋಸ ಮುಗಿಯೋದರೊಳಗೆ ಮಂಗನ ಕಟ್ಟೆಯ ಶಕುಂತಲೆಯಾದರೂ ಏಕಾಂತಕ್ಕೆ ಬಂದು ಸ್ವಲ್ಪ ಟೆನ್ಶನ್ ಕಮ್ಮಿ ಮಾಡುತ್ತಾಳಾ ಎಂದು ನೋಡುತ್ತಿದ್ದೇವೆ.

Thumari Ramachandra

source: https://www.facebook.com/groups/1499395003680065/permalink/1649531518666412/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s