ನಾನೇ ದೇವರೆಂದು ಹೇಳಿಕೊಳ್ಳುವ ಯಾವ ಸನ್ಯಾಸಿಯನ್ನೂ ನಂಬಬೇಡಿ.

ನಾನೇ ದೇವರೆಂದು ಹೇಳಿಕೊಳ್ಳುವ ಯಾವ ಸನ್ಯಾಸಿಯನ್ನೂ ನಂಬಬೇಡಿ.

ಯುಗಧರ್ಮದಂತೆ ತಮ್ಮ ಕಾಲಾನಂತರ ಮುಂದೆ ಕಳ್ಳರೂ ಸುಳ್ಳರೂ ಕಾಮುಕರೂ ಸನ್ಯಾಸಿಗಳಾಗುತ್ತಾರೆ ಎಂದು ಶಂಕರರಿಗೆ ಮೊದಲೇ ತಿಳಿದಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಯಾಕೆಂದರೆ ಹಿಂದಿನ ಲೇಖನವೊಂದರಲ್ಲಿ ಹೇಳಿದಂತೆ ಅವರು ಕಾಲಾತೀತರು, ಅವಸ್ಥಾತೀತರು, ದೇಶಾತೀತರು.

ಪ್ರಸಕ್ತ ದಿನಮಾನದಲ್ಲಿ ಮಠದ ಸನ್ಯಾಸಿಗಳಿಗೆ ಯಾವುದೇ ಕಷ್ಟವೂ ಇಲ್ಲ. ಅವರ ಹಾದಿ ಮುಳ್ಳಿನ ಹಾದಿ ಎಂದು ಅವರಂದು ಕೊಂಡರೆ ಜನಸಾಮಾನ್ಯನಿಗಿಂತ ಅವರು ಕಡೆ ಎಂದೇ ಅರ್ಥ. ಯಾವ ಸನ್ಯಾಸಿ ತನ್ನ ಅಂಧಾಭಿಮಾನಿ ಭಕ್ತರಿಂದ ರಕ್ಷಣೆಗೆ ಒಳಪಡಬೇಕಾದ ಪರಿಸ್ಥಿತಿ ತಂದುಕೊಳ್ಳುತ್ತಾನೋ ಅವನು ಸನ್ಯಾಸಿಯ ವೇಷದ ಕಳ್ಳ ಎಂಬುದು ನಿರ್ವಿವಾದ; ಯಾಕೆಂದರೆ ಈ ಹಿಂದೆ ತುಮರಿ ಸ್ಥೂಲವಾಗಿ ಬಣ್ಣಿಸಿದ ಸಮರ್ಥ ರಾಮದಾಸರಾಗಲೀ, ಭಗವಾನ್ ಶ್ರೀಧರ ಸ್ವಾಮಿಗಳಾಗಲೀ, ಭಗವತ್ಪಾದ ಶಂಕರರೇ ಆಗಲೀ ಯಾವ ಶಿಷ್ಯರಿಂದಲೂ ಎಂದೂ “ನಾವಿದ್ದೇವೆ” ಎಂದು ಅಭಯ ಪಡೆಯಬೇಕಾದ ಪ್ರಮೇಯವೇ ಬರಲಿಲ್ಲ. ಆಧ್ಯಾತ್ಮಿಕ ಶಕ್ತಿ ಇಲ್ಲದ ವೇಷದ ಸನ್ಯಾಸಿಗೆ ಮಾತ್ರ ಅದು ಅನಿವಾರ್ಯ.

ಯಾವುದೇ ಗುರುಪರಂಪರೆಯೂ ಅವಿಚ್ಛಿನ್ನವಾಗಿರುವುದು ಅದರ ದೈವಿಕ ಶಕ್ತಿಯ ವರ್ಗಾವಣೆಯಿಂದ ಮಾತ್ರ. ಭೌತಿಕವಾಗಿ ಯಾವುದೋ ಸನ್ಯಾಸಿ ಯಾರಿಗೋ ದೀಕ್ಷೆ ಕೊಟ್ಟರೆ ಮಾತ್ರ ಅದು ವರ್ಗಾವಣೆ ಆಯ್ತು ಎಂಬರ್ಥವಲ್ಲ; ಹಾಗಿರುವುದು ಸರಕಾರೀ ಕಚೇರಿಗಳಲ್ಲಿ ಮಾತ್ರ. ಯಾವ ಸನ್ಯಾಸಿ ಆಧ್ಯಾತ್ಮಿಕತೆಯನ್ನು ತೊರೆದು ಕೇವಲ ಪುಂಖಾನುಪುಂಖವಾಗಿ ಭಾಷಣ ಬಿಗಿಯುವುದರಲ್ಲೇ ಆಸಕ್ತನಾಗಿರುತ್ತಾನೋ ಅವನಿಂದ ಆಧ್ಯಾತ್ಮಿಕ ಸಾಧನೆ ನಡೆಯುವುದಿಲ್ಲ ಎಂದೇ ತಿಳಿಯಬೇಕು. ಯಾಕೆಂದರೆ ಸನ್ಯಾಸಿಗಳು ಹರಕು ಬಾಯಿಯವರಲ್ಲ; ಅದರಲ್ಲಂತೂ ಸಾಧಕರು ಮಾತನಾಡುವುದೇ ಹಿತಮಿತವಾಗಿ. ಅದಕ್ಕೆ ಸಂಧ್ಯಾ ಭಾಷೆಯೆನ್ನುತ್ತಾರೆ ಎಂದು ಹಿಂದೊಮ್ಮೆ ವಿವರಿಸಿದ್ದೇನೆ. ಈಗ ಕೆಲವರದ್ದು ಸಂಧ್ಯಾ ಭಾಷೆಯಲ್ಲ, ಅನುಕೂಲ ಸಿಂಧು ಭಾಷೆ ಮತ್ತು ಅದೇ ಅವರ ಧರ್ಮ.

ಸಾವಿರಾರು ವರ್ಷಗಳ ಪರಂಪರೆ ವಿಷಯ. ಅರೆಕ್ಷಣದಲ್ಲಿ ತನ್ನಿಂದ ಎಲ್ಲವನ್ನೂ ಕಸಿದುಕೊಂಡು ಏನೂ ಇಲ್ಲದ ಭಿಕಾರಿಯನ್ನಾಗಿ ಮಾಡುತ್ತಿದ್ದರು. ಸಂಪತ್ತು ಮತ್ತೆ ತನಗೇ ದಕ್ಕಿತು, ಸಂಪತ್ತು ಕೈತಪ್ಪಿ ಹೋಗಲಿಲ್ಲ ಎಂದು ಓಪನ್ನಾಗಿ ಹೇಳುವ ಯಾವುದೇ ಸನ್ಯಾಸಿಯೂ ಲೌಕಿಕ ಸಂಪತ್ತು, ಆಸ್ತಿ, ಮನೆ, ಮಠ ಇಂತಹ ಸ್ಥಾವರಗಳಿಗೆ ಸಾಯುವವರೆಗೂ ಅಂಟಿಕೊಂಡಿರುವ ಪರಮ ಲೌಕಿಕ ಎಂದು ಅರ್ಥಮಾಡಿಕೊಳ್ಳದ ಮೂರ್ಖರಿಗೆ ಏನೆನ್ನೋಣ? ಸನ್ಯಾಸಿ ಸದಾ ಭಿಕಾರಿಯೇ, ಅವನಿಗೆ ಯಾವುದೂ ಬೇಕಿಲ್ಲ, ಇದ್ದರೂ ಇಲ್ಲದಿದ್ದರೂ ಅವನ ಸ್ಥಿತಿಯೊಂದೇ. ಮಳೆ, ಚಳಿ ಮತ್ತು ಬಿಸಿಲುಗಳಿಗೆ ಹೆದರದ ಬದುಕು ಅವನದ್ದು. “ಮಳೆಯಲ್ಲಿ, ಬಿಸಿಲಲ್ಲಿ ನಮಗೆ ಯಾರು ಕೊಡೆ ಹಿಡೀತಾರೆ? [ಕೊಡೆ ಸದ್ಯ ಹಿಡೀತಾನೇ ಇದ್ದಾರೆ ಬಿಡಿ, ಆ ಕೊಡೆಯೋ ಅದರ ಕೆಳಗೆ ತೊನೆಯುತ್ತ ತೂಗುತ್ತ ಬರುವ ವ್ಯಕ್ತಿಯೋ…ಛೆ. ಕೇರಳದ ಛದ್ಮ ವೇಷಕ್ಕೂ ಈ ವೇಷಕ್ಕೂ ವ್ಯತ್ಯಾಸ ಬಹಳಿಲ್ಲ.] ಏಕಾಂತದ ಕೋಣೆಯಲ್ಲಿ ನಮಗೆ ಯಾವ ಮಹಿಳೆ ಜೊತೆಯಾಗುತ್ತಾಳೆ ಎಂಬೆಲ್ಲ ಹೀನ ಯೋಚನೆಗಳನ್ನು ಇರಿಸಿಕೊಂಡ ವ್ಯಕ್ತಿಯನ್ನು ಯಾವ ಬಾಯಲ್ಲಿ ಗುರುವೆನ್ನುತ್ತೀರಿ?

ಕಚ್ಚೆಹರುಕನಾದ ಸನ್ಯಾಸಿಯಿಂದ ಯಾವ ಪರಂಪರೆ ಮುಂದುವರಿದರೂ ಮುಂದೆ ಕಚ್ಚೆ ಹರುಕರೇ ತಯಾರಾಗುತ್ತಾರೆ; ನೆಗೆಟಿವ್ ಎನರ್ಜಿ ವರ್ಗಾವಣೆಗೊಳ್ಳುತ್ತದೆ. ಹೀಗಾಗಿ ಕಚ್ಚೆಹರುಕರಿಂದ ಯಾರಿಗೂ ದೀಕ್ಷೆ ಕೊಡಿಸಬಾರದು. ವೇಶ್ಯೆಯ ಗರಡಿಯಲ್ಲಿ ಸುಮಂಗಲಿಯಾಗುವುದು ನಂಬಿಕೆಗೆ ದೂರವಾದ ಸಂಗತಿ. ಅಪವಾದಕ್ಕೆಲ್ಲೋ ಇರಬಹುದು. ಆಧ್ಯಾತ್ಮಿಕ ಗುರುವಿನ ಆಯ್ಕೆ ಮತ್ತು ದೀಕ್ಷೆಯ ಸಂದರ್ಭದಲ್ಲಿ ಮತ್ತೆ ಮುಂದೆಯೂ ಅವನ ದಿನಚರ್ಯೆಯ ಸಂದರ್ಭಗಳಲ್ಲಿ ಕಣ್ಣಲ್ಲಿ ಎಣ್ಣೆಹಾಕಿ ಅವನನ್ನು ನೋಡಬೇಕು; ಯಾವ ಸನ್ಯಾಸಿಗೂ ಗುರುವೆಂದು ಕಣ್ಮುಚ್ಚಿ ಅಡ್ಡಬೀಳುವ ಕೆಲಸ ಮಾಡಬಾರದು. ಹಾಗೆ ಮಾಡಿದರೆ ಅದು ಶತಮೂರ್ಖತನವಾಗುತ್ತದೆ.

ಸನ್ಯಾಸಿ ಮತ್ತು ಯೋಧರು ಇಬ್ಬರೂ ಹೋಗುವುದು ಭಗವಂತನೆಡೆಗೆ ಎಂಬ ವಿಷಯವನ್ನು ಹೇಳಿ ಹೇಳಿ ಹೇಳಿ ಹೇಳಿ ಮತ್ತು ಅದನ್ನೇ ಅನೇಕರು ಕೇಳಿ ಕೇಳಿ ಕೇಳಿ ಕೇಳಿ ಅದೇ ಮನದಲ್ಲಿ ಅಚ್ಚು ಹೊಡೆದಹಾಗೆ ನಿಂತುಬಿಡುತ್ತದೆ. ನಂಬಿದವರಿಗೆ ಬೋಳೆಣ್ಣೆಯಾಗಿ ಇಂತದ್ದೇ ಹೇಳಿಕೆ ಕೆಲಸ ಮಾಡುತ್ತದೆ. ಹೀಗಾಗಿ ಅದೆಲ್ಲ ಕತೆ ನಮಗೆ ಬೇಕಾಗಿಲ್ಲ. ಸನ್ಯಾಸಿ ಏಲ್ಲಿಗೇ ಹೋದರೂ ಅವನ ಹಿಂದೆ ಹೋಗುವವರು ಹೋಗಲಿ. ನಮ್ಮಲ್ಲಿನ ಸನ್ಯಾಸಿಯೊಬ್ಬ ಸದ್ಯದಲ್ಲೇ ಕೃಷ್ಣಜನ್ಮಸ್ಥಾನಕ್ಕೆ ಹೋಗುವವವಿದ್ದಾನೆ; ಅವನನ್ನು ನಂಬಿದವರು ಅವನ ಹಿಂದೆ ಅಲ್ಲಿಗೇ ಹೋಗಲಿ, ಬೇಡವೆಂದವರಾರು?

ಅಡ್ಡಕಸುಬಿ ಸನ್ಯಾಸಿ ವೇಷಧಾರಿಗಳು ತಮ್ಮ ಮಾತುಗಳಲ್ಲೇ ತುಮರಿ ಹೇಳಬೇಕಾದ ಒಂದಂಶವನ್ನು ಹೇಳಿದ್ದಾರೆ. ಹಾಳೂರಿಗೆ ಸೂಳೆಯೇ ಮುತ್ತೈದೆ ಎಂದ ಹಾಗೆ ತಾನು ಹೇಳಿದ್ದೇ ಪರಮಸತ್ಯ, ಅದೇ ಶಾಸ್ತ್ರ ಎಂಬ ಧೋರಣೆ ಯಾರು ತಾಳುತ್ತಾರೆ ಎಂದರೆ, ಯಾರಿಗೆ ತಮ್ಮ ಭಕ್ತಗಣದಲ್ಲಿ ವಿದ್ವಾಂಸರು ಇಲ್ಲ ಎಂಬ ಭಾವನೆ ಬರುತ್ತದೋ ಅಂತವರು ಮಾತ್ರ. ಅಂತಹ ’ವಿದ್ವತ್ ಸನ್ಯಾಸಿಗಳು’ ಅನೇಕ ಪ್ರಶ್ನೆಗಳಿಗೆ ಇಪ್ಪತ್ನಾಲ್ಕು ಗಂಟೆಯೊಳಗೆ ಉತ್ತರ ಕೊಡುವುದಾಗಿ ಜಾರಿಕೊಳ್ಳುತ್ತಾರೆ. ಹೀಗಾಗಿ ಪಂಡಿತರು ಅವರಲ್ಲ; ಬರೆದುಕೊಡುವ ’ಸೂರ್ಯ’ ಬೇರೆಲ್ಲೋ ಇರುತ್ತಾನೆ, ಒದರುವ ’ಚಂದ್ರ’ ಅದು ತನ್ನದೇ ಬೆಳಕೆಂಬಂತೆ ಬೊಗಳೆ ಬಿಡುತ್ತಾನೆ.

ಸನಾತನ ವೈದಿಕ ನೀತಿ ನಿಯಮಗಳಿಗೆ ಭಂಗತರುವ ಅನ್ಯ ಮತಗಳ ಜನ ಸನಾತನಧರ್ಮದ ಜನರ ಮೇಲೆ ದಾಳಿಮಾಡಿದರೆ ಆಗ ಧರ್ಮ ಸ್ಥಾಪನೆಗೆ ಜನ ಹೋರಾಡ ಬೇಕಾಗಬಹುದು. ಆದರೆ ಶಿಷ್ಯಗಣದಲ್ಲೇ ಹಲವರು ತಿರುಗಿಬಿದ್ದರೆ ಅವರ ವಿರುದ್ಧ ಹಲ್ಲುಮಸೆಯುವುದು ಸನ್ಯಾಸಿಯ ಮನೋಧರ್ಮಕ್ಕೆ ಓಪನ್ನಾಗಿ ಹಿಡಿದ ಕನ್ನಡಿ. ಇಲ್ಲಿ ಯಾರೂ ಅಧರ್ಮವನ್ನು ಹೊತ್ತು ಕುಣಿಯಲಿಲ್ಲ; ಮಠಮಾನ್ಯಗಳಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಧರ್ಮಗಳನ್ನು ಎತ್ತಿ ತೋರಿಸಿದ್ದಾರೆ. ಬಿಸಿಯಾದಾಗಲೇ ಬೆಣ್ಣೆ ಕರಗುವುದು; ಈಗೀಗ ಕಳ್ಳ ಸನ್ಯಾಸಿಗಳಿಗೆ ಬಿಸಿ ಜಾಸ್ತಿ ತಾಗತೊಡಗಿದೆ.

ಕಳ್ಳ ಸನ್ಯಾಸಿಗಳು ಜೀವಮಾನ ಪರ್ಯಂತ ಮಾನಸಿಕವಾಗಿ ಚಿತ್ರಹಿಂಸೆ ಅನುಭವಿಸಬೇಕು. ಯಾಕೆಂದರೆ ಅವರು ಮಾಡುವುದು ಸಮಾಜ ದ್ರೋಹ, ಧರ್ಮದ್ರೋಹ, ಪರಂಪರೆಗೆ ಎಸಗುವ ದ್ರೋಹ, ಮಹಾನ್ ಯತಿಗಳಿಗೆ ಎಸಗುವ ದ್ರೋಹ..ಹೀಗೇ ಇನ್ನೂ ಹಲವಾರು ವಿಧದ ದ್ರೋಹ. ಅಂತಹ ದ್ರೋಹಿಗಳನ್ನು ಇನ್ನೂ ನಂಬುತ್ತ ಜೈಕಾರ ಹಾಕುವವರೂ ಧರ್ಮದ್ರೋಹಿಗಳೇ. ಗುರು ಶಾಪ ಎಂಬುದು ಇದ್ದರೆ ಅದು ನಿಜವಾಗಿ ಅವರಿಗೆ ತಟ್ಟುತ್ತದೆ;ಯಾಕೆಂದರೆ ಅವರು ಅರಿತೂ ತಪ್ಪು ಮಾಡುತ್ತಿದ್ದಾರೆ.

ನನ್ನಜ್ಜ ಅಥವಾ ನನ್ನಪ್ಪ ವೈದ್ಯನಾದ ಮಾತ್ರಕ್ಕೆ ನಾನು ವೈದ್ಯನಲ್ಲ, ನನ್ನಜ್ಜ ಅಥವಾ ನನ್ನಪ್ಪ ಋಷಿಯಾಗಿದ್ದರೆ ನಾನು ಋಷಿಯಲ್ಲ; ’ನಾನು ಋಷಿ’, ’ನಾನೇ ದೇವರು’, ’ನಾನೇ ರಾಮ’ ಎಂದು ಬೋರ್ಡು ಹಾಕಿಕೊಳ್ಳುವ ಹುಂಬರನ್ನು ವೇಷಧಾರಿಗಳೆಂದು ಗುರುತಿಸುವಲ್ಲಿ ವಿಳಂಬ ಮಾಡಿದ ಸಮಾಜ, ತೆತ್ತ ಬೆಲೆ ಬಹಳ ದೊಡ್ಡದು. ಸನ್ಯಾಸ ದೀಕ್ಷೆ ಪಡೆದ ಮಾತ್ರಕ್ಕೆ ಅವ ಸನ್ಯಾಸಿಯಾಗಲಾರ, ಸನ್ಯಾಸೀ ವೇಷಧಾರಿಯಾಗುತ್ತಾನಷ್ಟೆ; ಮುಂದೆ ಯತಿಧರ್ಮಕ್ಕೆ ಚ್ಯುತಿ ತಂದುಕೊಳ್ಳದೇ ಜಿತೇಂದ್ರಿಯನಾಗಿ ಸಿದ್ಧಿಗಳನ್ನು ಪಡೆದು ನಿಗ್ರಹಾನುಗ್ರಹ ಶಕ್ತಿಯನ್ನು ಪಡೆದುಕೊಂಡರೆ ಆಗ ಮಾತ್ರ ಆ ವ್ಯಕ್ತಿ ಸನ್ಯಾಸಿಯಾಗುತ್ತಾನೆ. ನಿಗುರಿಸಿಕೊಂಡು ಹಾರುವ ಕಚ್ಚೆಹರುಕರನ್ನೆಲ್ಲ ಸನ್ಯಾಸಿಗಳೆಂದು ಹೇಳುವುದೇ ಬಹುದೊಡ್ಡ ಅಪರಾಧ ಮತ್ತು ಪಾಪ.

ಟೋಪಿಹಾಕುವ ’ಪ್ರವಚನ’ಕ್ಕೆ ಬೇಕಾದ ವಿಷಯಗಳನ್ನು ಮಾತ್ರ ಕಲೆಹಾಕಿ ಮತನಾಡುವ ಕಲೆಯನ್ನು ಕಲಿತ ಢೋಂಗಿ ಬಾಬಾಗಳು, ಢೋಂಗಿ ಸಂತರು, ಢೋಂಗಿ ಸನ್ಯಾಸಿಗಳು ಇಂದು ದೇಶಾದ್ಯಂತ ನಮಗೆಲ್ಲ ಕಾಣುತ್ತಾರೆ. ಅಂತಹ ಸಾಲಿಗೆ ನಮ್ಮ ಸಮಾಜವೂ ಒಂದು ’ಕೊಡುಗೆ’ ಕೊಟ್ಟೆವಲ್ಲ ಎಂಬುದು ಬಹಳ ಸಖೇದಾಶ್ಚರ್ಯ, ವಿಪರ್ಯಾಸ ಮತ್ತು ವಿಷಾದನೀಯ. ಯಾವುದೇ ಸಂಸ್ಥಾನವನ್ನಾಗಲೀ ಮಠವನ್ನಾಗಲೀ ಸನ್ಯಾಸಿ ತಂತಾನೇ ಕಟ್ಟಿ ಬೆಳೆಸುವುದು ಸಾಧ್ಯವಿಲ್ಲ; ಅದು ಭಕ್ತರ ದೇಣಿಗೆ, ಕಾಣಿಕೆಯಿಂದಾದದ್ದು ಮತ್ತು ಅವರಿಗೆ ಸೇರಿದ ಸ್ವತ್ತು. ಯಾವುದೇ ಸನ್ಯಾಸಿ ಒಂದೆರಡು ದಶಕಗಳಲ್ಲಿ ತಾನು ದುಡಿದು ಮಠ ಕಟ್ಟಿದೆ, ಮಠಕ್ಕೆ ಇಷ್ಟೆಲ್ಲ ಸೇವೆ ಮಾಡಿದೆ ಎಂದು ಹೇಳಿದರೆ ಅದು ಮತ್ತೆ ಭಕ್ತರನ್ನು ಮೂರ್ಖರನ್ನಾಗಿಸುವ ಕೆಲಸ.

ಮುಂದಿನ ಚತುರ್ಮೋಸ-’ಕೃಷ್ಣ ಚತುರ್ಮೋಸ’[ಕೃಷ್ಣ ಜನ್ಮ ಸ್ಥಾನದಲ್ಲಿ ಕಳ್ಳ ಸನ್ಯಾಸಿ ಮತ್ತು ಕುಲಪತಿ ಬಾವಯ್ಯ ಸೇರಿ ಅತ್ಯಂತ ಖಾಸಗಿಯಾಗಿ ಮುದ್ದೆ ಮುರಿಯುತ್ತ ಆಚರಿಸುವ ಚತುರ್ಮೋಸ.] ಟ್ಯಾಗ್ ಲೈನು-’ಹುದ್ದೆಯಿಂದ ಮುದ್ದೆಯೆಡೆಗೆ’! ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟಿತ್ತದೆ; ಕಚ್ಚೆಹರುಕರ ವಂಶದಲ್ಲಿ ಕಚ್ಚೆಹರುಕರೇ ಹುಟ್ಟುತ್ತಾರೆ.

ಇನ್ನೊಮ್ಮೆ ತುಮರಿ ನಿಮಗೊಂದಷ್ಟು ಸಂಗತಿಗಳನ್ನು ನೆನಪಿಸುತ್ತಾನೆ-

೧. ಹಾವಾಡಿಗ ಸಂಸ್ಥಾನದ ಭಕ್ತರಲ್ಲೇ ವಿರೋಧಿಗಳು ಯಾಕೆ ಹುಟ್ಟುತ್ತಾರೆ? ಹುಟ್ಟಿದರು?

ಗುರುವೆನಿಸಿದವ ಧರ್ಮಬಾಹಿರನಾದಾಗ, ಹಾದಿತಪ್ಪಿದಾಗ.

೨. ಹಾವಾಡಿಗ ಸಂಸ್ಥಾನದ ವಿರೋಧಿಗಳಿಗೆ ನಿಜವಾಗಿಯೂ ಹಣದ ಕೊರತೆಯಿತ್ತೇ?

ಪರಮಾತ್ಮನಾಣೆ ವಿರೋಧಿಗಳಿಗೆ ಹಣದ ಅವಶ್ಯಕತೆ ಇರಲಿಲ್ಲ. ಅವರೇ ಕೊಟ್ಟು ಬೆಳಿಸಿದ್ದಾರೆ.

೩. ವಿರೋಧಿಗಳಲ್ಲಿ ಯಾರಾದರೂ ಸ್ವಹಿತಾಸಕ್ತಿ ಇರುವವರೇ?

ಖಂಡಿತವಾಗಿಯೂ ಇಲ್ಲ. ಎಲ್ಲರೂ ಉಂಡುಟ್ಟು ಕ್ಷೇಮವಾಗಿದ್ದಾರೆ. ಯಾರಿಗೂ ರಾಂಗಾನುಗ್ರಹದ ಮಾಟಮೋಡಿಗಳಿಂದ ತೊಂದರೆಯಾಗಿಲ್ಲ, ಯಾವ ಶಾಪವೂ ತಟ್ಟಲಿಲ್ಲ.

೪. ವಿರೋಧಿ ಬಳಗ ಹೇಗೆ ಅಸಂಖ್ಯವಾಗಿ ಬೆಳೆಯಿತು?

ಹೇಳುತ್ತಿರುವ ವಿಷಯದಲ್ಲಿ ಸತ್ಯವಿದೆ ಎಂಬುದನ್ನರಿತ ಜನ ತಾವಾಗಿಯೇ ಬಂದು ಸೇರಿಕೊಂಡರು. ಇಂದು ಕಾಣುವ ಸದಸ್ಯ ಸಂಖ್ಯೆ ಇಷ್ಟಾದರೆ, ಸದ್ಯಕ್ಕೆ ಇಲ್ಲಿ ಕಾಣದ ಸದಸ್ಯ ಬಲ ಒಟ್ಟೂ ಭಕ್ತಗಣದ ಮುಕ್ಕಾಲುಭಾಗ!

೫. ಹೇಳುತ್ತಿರುವುದಕ್ಕೆ ಸಾಕಷ್ಟು ಆಧಾರ, ಪುರಾವೆಗಳಿವೆಯೇ?

ಎಲ್ಲವೂ ಇವೆ, ಒಂದೊಂದಾಗಿ ಒಂದೊಂದಾಗಿ ಅನಾವರಣಗೊಳ್ಳುತ್ತವೆ. ಕಾಲದ ಗತಿಯಲ್ಲಿ ಎಲ್ಲರೂ ಅದನ್ನು ನೋಡುತ್ತಾರೆ. ಈಗ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುವವರು ಆಗ ಚಪ್ಪಲಿ ಹಾರಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಅದು ಸನ್ಯಾಸ ಧರ್ಮದ ಉಲ್ಲಂಘನೆಗೆ ಸಿಗುವ ನಿಜವಾದ ಪ್ರತಿಫಲ.

ಇಂದು ತುಮರಿ ನಿಮಗೆ ಉಪವಾಸದ ವಿವರಣೆ ನೀಡುತ್ತಾನೆ-

ನಿರಾಕಾರ, ಅನಂತ, ನಿರ್ಗುಣ ಪರಮಾತ್ಮನನ್ನು ’ಆಕಾಶ’ವೆಂದೂ ಹೇಳಬಹುದು. ಆಕಾಶವೆಂದರೆ ಅವಕಾಶವೆಂದು ಮೊದಲೇ ಹೇಳಿದ್ದೇನೆ. ನಮ್ಮ ಶರೀರದೊಳಗೆ ಆಕಾಶ ಅಥವಾ ಅವಕಾಶ ಇದ್ದೇ ಇದೆ. ಅಂತಹ ಖಾಲಿಜಾಗವು ಪ್ರಾಣಶಕ್ತಿಯ ಚಲನೆ, ದಿಕ್ಕು, ಗತಿ, ವೇಗ, ಪ್ರಮಾಣ ಹಾಗೂ ಬಲವನ್ನು ನಿರ್ಧರಿಸುತ್ತದೆ. ಆಕಾಶತತ್ವ ಸಬಲವಾಗಿದ್ದರೆ ಪ್ರಾಣಶಕ್ತಿಯು ಉತ್ತಮಗತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದಿಲ್ಲದಿದ್ದರೆ ನಿಧಾನವಾಗಿ ಆರೋಗ್ಯದಲ್ಲಿ ಏರುಪೇರುಗಳು ಕಾಣಿಸಿಕೊಳ್ಳುವುದಕ್ಕೆ ಆರಂಭವಾಗುತ್ತದೆ.

’ಲಂಘನಂ ಪರಮೌಷಧಂ’ ಎಂಬ ಮಾತಿದೆ. ಉಪವಾಸವೇ ಶ್ರೇಷ್ಠ ಔಷಧ ರೂಪ. ಪ್ರಾಣಿಗಳನ್ನು ಗಮನಿಸಿ, ಬೆಕ್ಕು-ನಾಯಿಗಳು ಹೊಟ್ಟೆಯಲ್ಲಿ ತೊಂದರೆಯಿರುವಾಗ ಯಾವುದೋ ಹುಲ್ಲನ್ನು ತಿಂದು, ಎಲ್ಲವನ್ನೂ ವಾಂತಿಮಾಡಿ, ಹೊಟ್ಟೆ ಖಾಲಿಮಾಡಿಕೊಳ್ಳುತ್ತವೆ. ಉಪವಾಸದಿಂದ ಬಹಳ ಪ್ರಯೋಜನಗಳಿವೆ. ಮುಖ್ಯವಾಗಿ ಮನಸ್ಸಿಗೆ ಸಂಬಂಧಪಟ್ಟ ಹಲವಾರು ದೋಷಗಳು ಉಪವಾಸದಿಂದಲೇ ನಿವಾರಣೆಯಾಗುತ್ತವೆ. ಉಪವಾಸದಿಂದ ಸ್ವಲ್ಪ ಸುಸ್ತು-ಆಯಾಸವೆನಿಸಿದರೂ, ನಂತರ ದೇಹ ದ್ವಿಗುಣ ಶಕ್ತಿಯನ್ನು ಪಡೆದುಕೊಳ್ಳುತ್ತದೆ.

ಉಪವಾಸವನ್ನು ಒಂದು ವ್ರತವನ್ನಾಗಿ ಆಚರಿಸುವುದು ಮನಸ್ಸಿಗೆ ಮುದವನ್ನು ಕೊಡುತ್ತದೆ. ಉಪವಾಸವು ದೈಹಿಕ ವಿಷವನ್ನು ಮಟ್ಟಹಾಕುತ್ತದೆ. ಉಪವಾಸವು ಸನಾತನ ಪರಂಪರೆಯ ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ಅನುಷ್ಠಾನದಲ್ಲಿರುವುದು ಸತ್ಯ. ಉಪವಾಸವೆಂಬುದು ದೇವರ ಹೆಸರಲ್ಲಿ ಬಂದಿದ್ದರೂ, ಆರೋಗ್ಯದ ದೃಷ್ಟಿಯಲ್ಲಿಯೂ ಬಹಳ ಮಹತ್ವ ಪಡೆದಿರುವುದು. ’ಉಪ’ ಎಂದರೆ ಹತ್ತಿರ ಎಂದರ್ಥ. ವಾಸವೆಂದರೆ ವಾಸಿಸುವುದು ಅಥವಾ ಇರುವುದು. ನಿರಾಕಾರ ಬ್ರಹ್ಮನೆನಿಸಿಕೊಳ್ಳುವ ದೇವರಿಗೆ ನಮ್ಮ ಕೃತಜ್ಞತೆಯನ್ನು ತೋರಿಸುವುದೇ ಆತನ ಹತ್ತಿರ ಇರುವುದು ಅಂದರೆ ಉಪವಾಸ. ನಮ್ಮೊಳಗೆ ಇರುವ ಬ್ರಹ್ಮನೆಂದರೆ ಆಕಾಶ ತತ್ವ=ಅವಕಾಶ=ಖಾಲಿ ಜಾಗ, ಅಂದರೆ ಹೊಟ್ಟೆಯಲ್ಲಿ ಖಾಲಿ ಜಾಗ ಇರುವಂತೆ ಮಾಡುವುದು.

ಉಪವಾಸದ ಫಲಗಳು:

೧. ಸಹನೆ, ತಾಳ್ಮೆ ಹೆಚ್ಚುವುದು, ಮನಸ್ಸಿನ ವೇಗ ಸ್ಥಿಮಿತಕ್ಕೆ ಬರುವುದು.
೨. ಒತ್ತಡ ನಿವಾರಣೆಯಾಗುವುದು.
೩. ತಾಮಸಗುಣ ನಾಶವಾಗಿ ಸಾತ್ವಿಕ ಗುಣ ನೆಲೆಸುವುದು.
೪. ಕೋಪ-ತಾಪಗಳು ಬಹಳ ಕಮ್ಮಿಯಾಗುತ್ತವೆ.
೫. ಅಂಗಾಂಗಗಳಲ್ಲಿ ನವ ಚೈತನ್ಯ ಹೊಮ್ಮಿ, ಏಕಾಗ್ರತೆ ಹೆಚ್ಚುತ್ತದೆ,
೬. ನೆನಪಿನ ಶಕ್ತಿವರ್ಧಿಸುತ್ತದೆ.
೭. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
೮. ದೇಹದಲ್ಲಿನ ವಿಷಪೂರಿತ ವಸ್ತುಗಳೆಲ್ಲವೂ ಹೊರದೂಡಲ್ಪಡುತ್ತವೆ.
೯. ಅಧಿಕ ರಕ್ತದೊತ್ತಡ ಕಡಿಮೆಯಾಗಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಸಹಜಸ್ಥಿತಿಗೆ ಬರುತ್ತದೆ.
೧೦. ನೋವು ಮಾಯವಾಗಿ ನಲಿವು ಆಗಮಿಸುವುದು.
೧೧. ಚರ್ಮ ಕಾಂತಿಯುಕ್ತವಾಗಿ, ಮಾಂಸಖಂಡಗಳು ಬಲಶಾಲಿಯಾಗುವುವು.
೧೨. ಇಂದ್ರಿಯ ನಿಗ್ರಹವಾಗುತ್ತದೆ.
೧೩. ಮೂತ್ರಪಿಂಡ, ದೊಡ್ಡಕರುಳು, ಚರ್ಮ, ಶ್ವಾಸಕೋಶ ಇತ್ಯಾದಿಗಳ ಕಾರ್ಯ ಬಲಗೊಳ್ಳುತ್ತದೆ.
೧೪. ರಕ್ತ ಶುದ್ಧವಾಗುವುದು.
೧೫. ಧನಾತ್ಮಕವಾದ ಬೆಳವಣಿಗೆ, ಬದಲಾವಣೆ ನಮಗರಿಯದೇ ದೇಹ ಹಾಗೂ ಮನಸ್ಸಿನಲ್ಲುಂಟಾಗುವುದು.
೧೬. ಜಾಗೃತಭಾವ ಸ್ಪುರಿಸುತ್ತದೆ.
೧೭. ಹೃದಯದಲ್ಲಿ-ಮನಸ್ಸಿನಲ್ಲಿ ಒಲುಮೆಯ ಚಿಲುಮೆ ಉರಿಯುತ್ತದೆ.

ಉಪವಾಸದ ಅರ್ಥ ಗೊತ್ತಿದೆಯಾ? ಎಂದು ಕಳ್ಳ ಸನ್ಯಾಸಿಯನ್ನು ಕೇಳಿ; ಇಲ್ಲೇ, ಇದನ್ನೇ ಓದಿಕೊಂಡು ಹೇಳಬೇಕಾಗಬಹುದು. ಚಾತುರ್ಮಾಸದ ಸಮಯದಲ್ಲಿ ಧರ್ಮಬೋಧನೆ ಎಂದರೆ, ಇಂತಹ ವಿಷಯಗಳನ್ನು ಜಿಜ್ಞಾಸೆಯ ಮೂಲಕ ವಿವರಿಸಬೇಕು. ಅದನ್ನು ಬಿಟ್ಟು ಕೆಲಸಕ್ಕೆ ಬಾರದ ಸ್ವಕುಚಮರ್ದನ ವಿಷಯಗಳನ್ನು ಹೇಳಬಾರದು. ಚಾತುರ್ಮಾಸಕ್ಕೆ ಕೂತುಕೊಳ್ಳದ [ಸಂಸಾರಿಗಳಿಗೂ ಚಾತುರ್ಮಾಸ ಎಂಬ ವಿಧಿಯಿದೆ!]ತುಮರಿಯು ಚತುರ್ಮೋಸಕ್ಕೆ ತೊಡಗಿದ ಕಳ್ಳ ಸನ್ಯಾಸಿಗಳು ಹೇಳದ ಧಾರ್ಮಿಕ ವಿಷಯಗಳನ್ನು ತಮಗೆಲ್ಲ ಹೇಳಿದ್ದಾನೆ ಎಂದುಕೊಳ್ಳುತ್ತೇನೆ.

Thumari Ramachandra

source: https://www.facebook.com/groups/1499395003680065/permalink/1649802845305946/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s