ಗುರುವಿನ ಮೇಲೆ ಹರ ಮುನಿದಾಗ ಅವನ ಸೇನೆಗಳು ಕಾಯಬಲ್ಲವೇ?

ಗುರುವಿನ ಮೇಲೆ ಹರ ಮುನಿದಾಗ ಅವನ ಸೇನೆಗಳು ಕಾಯಬಲ್ಲವೇ?

ಇದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಪ್ರಾಯಶಃ ಹಿಂದೆ ಇಂತಹ ಸಮಸ್ಯೆ ಸಮಾಜದಲ್ಲಿ ಎದುರಾಗಿರಲಿಲ್ಲ. ಅನೇಕ ಮುನಿಗಳು ಮದುವೆಯಾಗಿದ್ದರೂ ರಾಮಕೃಷ್ಣರಂತೆ ಬ್ರಹ್ಮಚರ್ಯವನ್ನು ನಡೆಸಿದರು. ಕೆಲವರು ಮಾತ್ರ ಲೋಕೋಪಕಾರಾರ್ಥವಾಗಿ ಮಕ್ಕಳನ್ನು ಹೆತ್ತರು; ಮುಂದೆ ಆ ಮಕ್ಕಳೂ ಋಷಿಗಳಾಗಿಯೇ ಬಾಳು ಸಾಗಿಸಿದರು.

ಪ್ರಪಂಚದಲ್ಲಿ ನಾವಿಂದು ’ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬುದಕ್ಕೆ ಹಲವು ಉದಾಹರಣೆಗಳನ್ನು ಕಾಣುತ್ತಿದ್ದೇವೆ. ಉತ್ತಮ ಜೀವನ ವಿಧಾನವೆನಿಸಿದ್ದ ವೈದಿಕ ಸನಾತನ ಧರ್ಮದಲ್ಲಿ ಯತಿವೇಷಧಾರಿಗಳು ತಯಾರಾಗಿ ಅನ್ಯ ಮತಗಳವರು ಆಡಿಕೊಳ್ಳುವುದಕ್ಕೆ ಆಸ್ಪದವಾಗಿದೆ. ನ್ಯಾಯ ಯಾವುದು ಅನ್ಯಾಯ ಯಾವುದು ತೀರ್ಮಾನ ತೆಗೆದುಕೊಳ್ಳುವುದಾದರೆ ತೀರ್ಮಾನಿಸಿದ ನ್ಯಾಯಾಧೀಶರಿಗೇ ಬೆದರಿಕೆಯ ಪತ್ರಗಳು ಬರುತ್ತಿವೆ!ಇಂದು ಜಗತ್ತಿನಾದ್ಯಂತ ಮೌಢ್ಯವನ್ನೇ ಧರ್ಮವೆಂದು ನಂಬಿ ಎಂಬ ಒಂದು ಕೋಮಿನ ಮೂಲಭೂತವಾದಿಗಳು ಭಯೋತ್ಪಾದಕರಾಗಿ ಎಲ್ಲೆಲ್ಲೂ ಆಶಾಂತಿಗೆ ಕಾರಣರಾಗಿದ್ದಾರೆ.

ಅಮ್ಮ ಮಗುವನ್ನು ಹೊತ್ತು, ಹೆತ್ತು, ಬೆಳೆಸುವುದು ಕೆಟ್ಟವನನ್ನಾಗಿ ಮಾಡಲಿಕ್ಕಲ್ಲ ಎಂಬುದು ಆಚಾರ್ಯರ ಹೇಳಿಕೆ. ಅದರಲ್ಲೊಂದು ಸ್ವಲ್ಪ ವಿಶಿಷ್ಟ ಅರ್ಥವನ್ನೀಗ ನಾವು ಗ್ರಹಿಸಬೇಕು-“ಕುಪುತ್ರೋ ಜಾಯೇತ ಕ್ವಚಿತಪಿ ಕುಮಾತಾ ನ ಭವತಿ” ಎಂದರೆ ಹಡೆದ ತಾಯಿ ತನ್ನ ಮಗುವಿಗೆಂದೂ ಕೆಟ್ಟ ತಾಯಿಯಾಗಲಾರಳು; ಆದರೆ ಮಗ (ತಾಯಿಗೂ ಸಹ) ಕೆಟ್ಟದಾಗಿ ನಡೆದುಕೊಳ್ಳಬಹುದು.

ಭಾರತದ ಅನ್ನ ಬೇಕು, ಭಾರತದ ನೀರು ಬೇಕು, ಭಾರತದ ಗಾಳಿಬೇಕು, ಭಾರತದ ಬಟ್ಟೆ ಬೇಕು, ಭಾರತೀಯ ಸರ್ಕಾರ ಬಿಟ್ಟಿಯಲ್ಲಿ ಕೊಡುವ ಎಲ್ಲಾ ಸವಲತ್ತುಗಳೂ ಬೇಕು, ಆದರೆ ಭಾರತೀಯತೆಯ ದ್ಯೋತಕವಾದ ’ವಂದೇ ಮಾತರಮ್’ ಹಾಡುವುದಿಲ್ಲ, ’ಜನಗಣಮನ ..’ ಮನಸ್ಸಿಲ್ಲದ ಮನಸ್ಸಿನಿಂದ ಬಾಯಲ್ಲಾಡಿಸುತ್ತೇವೆ, ಯೋಗ ಆಚರಿಸುವುದಿಲ್ಲ, ಎಲ್ಲಾ ರಾಜ್ಯಗಳಲ್ಲೂ ನಾವು ಹೇಳಿದಂತೆ ನಡೆದುಕೊಳ್ಳಿ, ನಾವು ಹೇಳುವುದೇ ಸತ್ಯ, ನಾವು ಹೇಳುತ್ತಿರುವುದೇ ನೀತಿ, ಅದೇ ಮಾನವ ಧರ್ಮ, ಅದನ್ನೇ ಫಾಲೋ ಮಾಡಿ ಎನ್ನುವ ಮನೆಗಳ್ಳರಿಗೆ ಯಾವ ಮದ್ದು ಅರೆಯಬೇಕೆಂದು ಹಲವರಿಗೆ ಚಿಂತೆಯಾಗಿದೆ.

ಇತ್ತ ಯತಿ ವೇಷದ ಕಳ್ಳರು ತಮ್ಮ ತೀಟೆ ತೀರಿಸಿಕೊಳ್ಳುವ ಸಲುವಾಗಿ ತಕ್ಕ ಜಾಗವನ್ನು ಹುಡುಕಿಕೊಳ್ಳುತ್ತಾರೆ. ಭಕ್ತರು ಎಂಬ ಹೆಸರಿನಲ್ಲಿ ಗೂಂಡಾಗಳನ್ನು ಕಟ್ಟಿಕೊಳ್ಳುತ್ತಾರೆ. ಅವರಿಗೆ ಸ್ವೇಚ್ಛೆಗೆ ಅನುಕೂಲ ಮಾಡಿಕೊಟ್ಟು ಅವರ ಬೆಂಬಲದಲ್ಲಿ ತಾನೂ ಸ್ವೇಚ್ಛಾಚಾರಕ್ಕೆ ಇಳಿಯುತ್ತಾರೆ. ಇದಕ್ಕೆ ನಿತ್ಯವೂ ಅಲ್ಲಲ್ಲಿ ಉದಾಹರಣೆಗಳು ಸಿಗುತ್ತಲೇ ಇರುತ್ತವೆ.

ಇತ್ತೀಚೆಗೆ ಅಸರಾಂ ಬಾಪು ಮತ್ತು ರಾಂಪಾಲರ ಕತೆಗಳನ್ನು ನೀವೆಲ್ಲ ಕೇಳಿದ್ದೀರಿ. ಅಸರಾಂ ಬಾಪುವಿನ ವಿರುದ್ಧ ಸಾಕ್ಷ್ಯ ಹೇಳುತ್ತಾರೆಂದು ಸುದ್ದಿ ತಿಳಿದರೆ ಸಾಕು ಅಂತಹ ಸಾಕ್ಷಿಗಳನ್ನು ಕೊಂದು ಮುಗಿಸುವ ಪ್ರಯತ್ನಗಳು ನಡೆದು ಏಳು ಸಾಕ್ಷಿಗಳನ್ನು ಈಗಾಗಲೇ ಕೊಲ್ಲಲಾಗಿದೆ ಎಂದು ಮಾಧ್ಯಮಗಳೇ ಹೇಳಿವೆ. ಹಾಗಾದರೆ ಆ ’ದೇವಮಾನವ’ ಕಚ್ಚೆಹರುಕನಲ್ಲದಿದ್ದಲ್ಲಿ ಇಂತದ್ದನ್ನೇಕೆ ನಡೆಸುತ್ತಿದ್ದ? ಹಾಗೆ ನೋಡಿದರೆ ಅವನ ಮೇಲೆ ಈಗ ಮತ್ತೆ ಏಳು ಹೊಸ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿ ಅವನ್ನು ಏರೋಪ್ಲೇನ್ ಹತ್ತಿಸುತ್ತಲೇ ಇರಬೇಕಾಗುತ್ತದೆ.

ರಾಂಪಾಲನ ಕತೆಯೂ ಬಹಳ ಭಿನ್ನವಾಗಿಲ್ಲ. ಅವ ಕೋಟೆಯನ್ನೇ ಕಟ್ಟಿಕೊಂಡಿದ್ದ ದೊಡ್ಡ ’ಋಷಿವರ್ಯ’ ಆತನದ್ದೂ ಸೇನೆ ಇತ್ತು. ಭಾರತೀಯ ಸೇನೆಗೇ ಸಡ್ಡುಹೊಡೆಯಬಲ್ಲಷ್ಟು ಶಸ್ತ್ರಾಸ್ತ್ರಗಳನ್ನೂ ಶೇಖರಿಸುವುದಕ್ಕೆ ಮುಂದಾಗಿದ್ದ. ಮಹಿಳೆಯರೊಂದಿಗೆ ಹಾಲಿನಲ್ಲೇ ಸ್ನಾನಮಾಡುತ್ತಿದ್ದ. ವಿಪರೀತ ಭೋಗಾಸಕ್ತನಾಗಿದ್ದ. ಅವನ ಭಕ್ತರು ಮಾತ್ರ ಅವನನ್ನು ಜೈಲಿಗೆ ಎಳೆದೊಯ್ಯುವ ಕ್ಷಣದವರೆಗೂ “ನಮ್ಮ ಗುರುಗಳು”, “ನಮ್ಮ ಸಂಸ್ಥಾನ”, “ನಾವಿದ್ದೇವೆ ಗುರುಗಳ ಜೊತೆಗೆ ನಾವಿದ್ದೇವೆ”ಎನ್ನುತ್ತಲೇ ಇದ್ದರು. ಅವನೊಬ್ಬನನ್ನು ಸೆರೆಹಿಡಿಯುವ ಸಮಯದಲ್ಲಿ ಹದಿನೈದು ಜನ ಬಲಿಯಾಗಿಹೋದರು.

ಮಾಡಬಾರದ್ದನ್ನೆಲ್ಲ ಮಾಡಿಕೊಂಡು ಮೇಲೆ ಶ್ರೀರಾಮನೆಂದು ತೋರಿಸಿಕೊಳ್ಳಲು ಯತ್ನಿಸಿದರೆ ಕೆಂಬೂತ ಗರಿ ಸುಟ್ಟುಕೊಂಡು ನವಿಲಾಗಲು ಯತ್ನಿಸಿದ ಕತೆ ನೆನಪಿಗೆ ಬರುತ್ತದೆ; ಕೆಂಬೂತಕ್ಕಾದರೂ ಆದರದ್ದೇ ಆದ ಘನತೆಯ ಸ್ವರೂಪ ಇದೆ ಬಿಡಿ. ಈಗ ನಮ್ಮಲ್ಲಿಯೂ ಸೇನೆಗಳು ತಯಾರಾಗಿವೆ. ಭರ್ಚಿ, ಈಟಿ, ಖಡ್ಗ ಇನ್ನೂ ಮೊದಲಾದ ಆಯುಧಗಳನ್ನು ಸಾಂಕೇತಿಕವಾಗಿ ಹಿಡಿದು “ನಾವು ಸಿದ್ಧರಾಗಿದ್ದೇವೆ” ಎಂದು ಸೂಚನೆ ನೀಡಿದ್ದಾವೆ. ಚತುರ್ಮೋಸದ ’ಘನ’ಕಾರ್ಯಗಳಲ್ಲಿ ಇದೂ ಒಂದು. ಹೀಗಾಗಿ ಉತ್ತರದ ರಾಂಪಾಲನಿಗೂ ದಕ್ಷಿಣದ ರಾಂಪಾಲನಿಗೂ ವ್ಯತ್ಯಾಸವೇನೂ ಇಲ್ಲ ಎಂಬುದು ಜನತೆಗೆ ಸ್ಪಷ್ಟವಾಗಿದೆ.

ಹರಮುನಿದರೆ ಗುರು ಕಾಯುತ್ತಾನೆ ಎಂಬುದೊಂದು ಮಾತಿತ್ತು. ಆ ಮಾತು ಶ್ರೀಧರ ಸ್ವಾಮಿಗಳಿಗೋ ಸಮರ್ಥರಿಗೋ ಹೊಂದಾಣಿಕೆಯಾಗಬಹುದು. ರಾಂಪಾಲನಂತ ಗುರುವಿನ ಮೇಲೆಯೇ ಹರ ಮುನಿಸಿಕೊಂಡಿರೋದರಿಂದ ಈಗ (ಕಳ್ಳ)ಗುರುವನ್ನು ಕಾಪಾಡಲು ಅಡ್ಡಡ್ಡ ಮಲಗುವ ಜನಾಂಗದವರನ್ನು ಕರೆಸಿಕೊಳ್ಳಬೇಕಾಗಬಹುದು. ಅದ್ಯಾರೋ ಅತ್ತಿಬೆಲೆ, ಸೂಲಿಬೆಲೆ, ಮಂಚನಬೆಲೆ ಕಡೆಗಿಂದ ಬಂದು ಭಾಷಣ ಬಿಗಿದವರು ಹತ್ತಿಸಾವಿರ ಜನರನ್ನು ಕರೆತರುವುದಾಗಿ ಘೋಷಿಸಿ ಭಕ್ಷೀಸು ಪಾಕೀಟು ಇಸ್ಕೊಂಡು ಹೋದರಲ್ಲ, ಅವರನ್ನೀಗ ಅಗತ್ಯ ಕರೆಸಬೇಕಾಗಿದೆ.

ಯಾಕೆಂದರೆ ಹತ್ತುಸಾವಿರ ಜನರನ್ನು ಕರೆತಂದರೆ ಅವರಿಗೆಲ್ಲ ದಿನವೋ ಎರಡುದಿನವೋ ಉಳಕೊಳ್ಳೋದಕ್ಕೆ ಹಂಗಾಮಿ ವ್ಯವಸ್ಥೆ ಆಗಬೇಕಲ್ಲ? ಅವರಿಗೆ ಇರುವಷ್ಟು ಸಮಯ ಊಟ-ತಿಂಡಿ ಇದೆಲ್ಲ ವ್ಯವಸ್ಥೆಯಾಗಬೇಕಲ್ಲ? ಅದಕ್ಕೆಲ್ಲ ಶಾಮಿಯಾನ ಹಾಕಿದರೂ ಬೈಲಕಡೆಗೆ ಹೋಗೋದಕ್ಕೆ ಬೈಲಿಲ್ಲದ ಕಾರಣ ಅದಕ್ಕಷ್ಟು ವ್ಯವಸ್ಥೆಯಾಗಬೇಕಲ್ಲ? ಇಲ್ಲದಿದ್ದರೆ ಮಠದ ಸುತ್ತ ಹೇತುಬಿಟ್ಟಾರು! ಹಾಗೂ ಎಷ್ಟು ದಿವಸಗಳವರೆಗೆ ಆ ಸೈನ್ಯವನ್ನು ಇಲ್ಲಿರಿಸಿಕೊಳ್ಳಬಹುದು? ಅಬ್ಬಬ್ಬ ಎಂದರೆ ಒಂದು ವಾರ? ಹದಿನೈದು ದಿನ? ಆಮೇಲಾದರೂ ಬರುವ ಮಾವಂದಿರಿಗೆ ಸಿಗಲೇಬೇಕಾಗುತ್ತದೆ, ಅಲ್ಲವೇ?

ನಾಮಾಮಿ ಸೋಪು, ಚಾಬೀರಾಯ ಮೊದಲಾದವರು ಕಿವಿಮೇಲೆ ಫ್ಲವರ್ ಇರಿಸಿಕೊಂಡಿದ್ದರಿಂದ ಒಂದು ಲೆವೆಲ್ಲಿಗೆ ಸಪೋರ್ಟ್ ಮಾಡಬಹುದು; ಕಾಯ್ದೆಗೆ ವಿರುದ್ಧವಾಗುತ್ತದೆ ಎಂದು ಗೊತ್ತಾದಾಗ ಅವರೂ ಕೈಚೆಲ್ಲುವುದರಿಂದ ಇನ್ನಾರು ನಮಗೆ ಸಿಕ್ಕಾರು? ಊಹುಂ. ಇನ್ನು ಲೋಕಲ್ ಸದ್ಗುಣಿ ಪದ್ಗುಣಿ ಎಲ್ಲ ಯಾವಾಗಲೋ ಕೈತಿರುಗಿಸುವುದಕ್ಕೆ ಸಿದ್ಧವಾಗಿದ್ದಾರೆ. ಏನೋ ನಾಲ್ಕು ಓಟಿನಾಸೆಗೆ ಬೇಕಾಗಿ, ಹೂತ ಚಕ್ರವನ್ನು ಮೇಲೆತ್ತಲು ಪ್ರಯತ್ನಿಸುತ್ತಿರುವ ಸೋನಿಯಕ್ಕ ಮಡಿವಾಳರ ಮಾತುಗಳನ್ನು ಕೇಳಿ ಇನ್ನೊಂದು ಸ್ವಲ್ಪ ಸಮಯ ಮುಂದೂಡಬಹುದು; ಆದರೆ ಸಮಸ್ಯೆಯ ನಿವಾರಣೆ ಆಕೆಯಿಂದ ಸಾಧ್ಯವಾಗದು. ಮತ್ಯಾರಿದಾರೆ? ಇಮ್ಮಡಿಯೆಲ್ಲ ಆಗ ದಮ್ಮಡಿಯನ್ನೂ ಹಡೆಯೋದಿಲ್ಲ, ನಿದ್ದಯ್ಯ, ಕಂತ್ರಿಕಾಂಡೆ ಮೊದಲಾದವರೆಲ್ಲ ಉಳಿದ ಸಮಾಜಕ್ಕೆ ಮುಖ ತೋರಿಸಬೇಕಾಗುತ್ತದಲ್ಲ?

ಮಾಮಂದಿರು ಬಂದ ಸುದ್ದಿ ಕೇಳಿದರೆ ದಕ್ಷಿಣದ ರಾಂಪಾಲನ ಸೇನೆ ನಿಂತಲ್ಲೇ ಹಳದಿ ಪಂಚೆ ಒದ್ದೆ ಮಾಡಿಕೊಳ್ಳುತ್ತದೆ ಎಂಬುದು ಕಂಡವರಿಂದ ಬಂದ ಮಾಹಿತಿ. ಸೈನಿಕರಿಗೆಲ್ಲ ಮಾಮಿ ಪೋಕೋ ಪ್ಯಾಂಟ್ ಕಂಪನಿಯಿಂದ ಹೋಲ್ ಸೇಲಾಗಿ ಡೈಪರ್ ವ್ಯವಸ್ಥೆಮಾಡಿಕೊಳ್ಳಲು ಸೂಚಿಸಬಹುದು. ಕಾವಿ ಒಳಗಿರೋದು ಬುಲ್ ಪೀನ. ಅದರಲ್ಲಿ ಈಗಾಗಲೇ ಒಂದೆರಡು ಸಲ ಕೆಲವು ಹನಿಗಳು ಅಸರಿ ಒದ್ದೆಯಾಗಿದ್ದಿದೆ. ಇನ್ನು ಮುಂದೆ ಮಾತ್ರ ಹನಿ ಲೆಕ್ಕಾಚಾರ ಇಲ್ಲ, ಜಲಲ ಧಾರೆಯೇ. ಹೀಗಾಗಿ ಊರುಗಳಿಂದ ಲಾರಿಗಳಲ್ಲಿ ಕರೆತರಲ್ಪಡುವ ಗ್ರಾಮೀಣ ಸೈನಿಕರು ಮರಳಿದ ಮೇಲೆ, ಸ್ಥಳೀಯ ದೊಣ್ಣೆನಾಯಕರಿಬ್ಬರ ಕತೆ ಹೇಗಿರಬಹುದು ಎಂದು ನೆನಪಾಗಿ ನಗು ಬಂತು. ಅಂದಹಾಗೆ. ಕುವೆಂಪು ಅವರ ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ನಾಟಕ-ರೂಪಕವನ್ನಾಗಿಸಿ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶಿಸಿದ್ದರಲ್ಲ? ಅದರಲ್ಲಿ ಸುಬ್ಬಣ್ಣ ಹೆಗಡೆರ ಮಗನನ್ನು ವರ್ಣಿಸುವ ಹಾಡೊಂದಿದೆ, ನೀವೂ ನೋಡಿ, ಆ ಹಾಡಿನಲ್ಲಿ ಬಿಂಬಿಸಿರುವ ಪಾತ್ರದಂತೆಯೇ ಇದ್ದಾರಲ್ಲವೇ ನಮ್ಮ ದೊಣ್ಣೆ ನಾಯಕರೀರ್ವರು?

ಸಮಾಜದಲ್ಲಿ ಯಾವುದೋ ಜನತೆಗೆ ನ್ಯಾಯ ಸಿಗದಾಗ ನೋವು ಬೇಗುದಿಗಳಲ್ಲಿ ಕೆಲವೊಮ್ಮೆ ಸಾಹಿತ್ಯಗಳು ಹುಟ್ಟುವುದುಂಟು. ಅಂತಹ ಸಾಹಿತ್ಯಗಳು ಯಾಕೆ ಹುಟ್ಟಿದವು ಎಂದರೆ, ಅವರ ಅಳಲನ್ನು ಕೇಳಲು ಯಾರೂ ಇಲ್ಲದ ಕಾರಣ, ತಮಗಾದ ನೋವನ್ನು ಅವರು ಸಾಹಿತ್ಯದ ರೂಪದಲ್ಲಿ ಗೇಯ ಗೀತೆಗಳಂತೆ ಹಾದಿದರು. ಜಾನಪದ ಗೀತೆಗಳಲ್ಲಿ ಭಾಗಶಃ ಅಂತಹ ಹಾಡುಗಳೂ ಇವೆ.

ಕಲ್ಲನಕೇರಿ ಮಲ್ಲನಗೌಡ ಊರೊಳಿತಿಗಾಗಿ ಕೆರೆ ಕಟ್ಟಿಸಿದನಂತೆ. ಕೆರೆಯಲ್ಲಿ ನೀರು ಬರಲೇ ಇಲ್ಲ. ಅಂದಿನ ಪರಿಸ್ಥಿತಿಯಲ್ಲಿ ಕೆರೆ ಬಲಿಯನ್ನು ಕೇಳುತ್ತಿದೆ, ಕೊಟ್ಟರೆ ನೀರು ಬರುತ್ತದೆ ಎಂದು ತೀರ್ಮಾನವಾಯ್ತು. ಯಾವ ಸೊಸೆಯರೂ ಬಲಿಯಾಗಲು ಸಿದ್ಧರಾಗದಿದ್ದಾಗ ಕಿರಿಯ ಸೊಸೆ ಬಾಗೀರಥಿ ಅದಕ್ಕೆ ಸಿದ್ಧವಾದಳು; ತನ್ನನ್ನೇ ಬಲಿದಾನವಾಗಿ ಅರ್ಪಿಸಿಕೊಳ್ಳುವುದರ ಮೂಲಕ ಕೆರೆಯಲ್ಲಿ ನೀರು ತುಂಬಿ ಊರಿಗೆ ಕ್ಷೇಮವಾಗುವಂತೆ ನೋಡಿಕೊಂಡಳು. ಆ ಸಮಯದಲ್ಲಿ ಅವಳ ಮನದಿಂಗಿತವೇನಿತ್ತು, ಅವಳು ಬಲಿಯಾಗಿ ಹೋದ ನಂತರ ಅವಳ ಗಂಡನಾದವನಿಗೆ ಏನನ್ನಿಸಿತು ಎಂಬುದನ್ನು ’ಕೆರೆಗೆ ಹಾರ’ವೆಂವ ಜಾನಪದ ಸಾಹಿತ್ಯ ತೋರಿಸುತ್ತದೆ.

ಪ್ರತಿಷ್ಠಾಪಿತ ಪಟ್ಟಬದ್ಧ ವ್ಯವಸ್ಥೆಯ ವಿರುದ್ಧ ಸಿಡಿದೇಳುವುದು ಸಾಮಾನ್ಯದ ಮನೋಧರ್ಮದ ಮಹಿಳೆಯಿಂದ ಸಾಧ್ಯಾವಗುವ ಕೆಲಸವಲ್ಲ; ಆ ಮಹಿಳೆ ಒನಕೆ ಓಬವ್ವನಂತೆ ಅಷ್ಟೊಂದು ರೋಷವನ್ನು ತಾಳಿರಬೇಕು, ಬಹಳ ದಿನಗಳ, ವಾರಗಳ, ತಿಂಗಳುಗಳ, ವರ್ಷಗಳ ಕಾಲ ಹೇಳಲಾಗದ ಹೆಪ್ಪುಗಟ್ಟಿದ ರೋಷವನ್ನು ಏನಾದರಾಗಲಿ ಎಂದು ಅಪ್ರತಿಮ ಧೈರ್ಯದಿಂದ ಹೊರಹಾಕಿದ್ದು ಸಮಾಜ ಮೆಚ್ಚಬೇಕಾದ ಕಾರ್ಯ; ಒಂದರ್ಥದಲ್ಲಿ ಈ ಕೆಲಸವನ್ನು ಭಾಗೀರಥಿಯ ಕತೆಗೆ ಹೋಲಿಸಬಹುದು. ಅಲ್ಲಿ ಕಥಾನಾಯಕಿ ಸತ್ತಳು; ಇಲ್ಲಿ ಕಥಾನಾಯಕಿ ತನ್ನನ್ನು ಮನದಲ್ಲೇ ಕೊಂದುಕೊಂಡು ಸಮಾಜಮುಖಿಯಾದಳು. ಹೀಗೆ ಸಮಾಹಮುಖಿಯಾದ ಮಹಿಳೆಗೆ ಸಮಷ್ಟಿ ಸಮಾಜದ ಸಮಸ್ತರ ಪರವಾಗಿ ನನ್ನದೊಂದು ದೊಡ್ಡ ಸಲಾಮು.

ಕಾಲ ಯಾರಿಗೂ ಕಾಯುವುದಿಲ್ಲ. ಇನ್ನೇನು ಕಳ್ಳ ಸನ್ಯಸಿಗೂ ಒದ್ದಾಡುವ ಕಾಲ ಬಂದೇಬರುತ್ತದೆ. ಈಗಾಗಲೇ ಆರಂಭವಾಗಿದೆ. ಮುಂದೆ ಅದರ ಬಿಸಿ ಹೆಚ್ಚಲಿದೆ. ಈಗ ಮೇಲಿನ ಪ್ರಶ್ನೆ ಮತ್ತೊಮ್ಮೆ ನಮಗೆ ಎದುರಾಗುತ್ತದೆ-ಗುರುವಿನ ಮೇಲೆ ಹರ ಮುನಿದಾಗ ಅವನ ಸೇನೆಗಳು ಕಾಯಬಲ್ಲವೇ?

Thumari Ramachandra

source: https://www.facebook.com/groups/1499395003680065/permalink/1648717265414504/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s