ವೇಣಿಗಳತ್ತ ಮಾಣಿಯ ಚಿತ್ತ

ವೇಣಿಗಳತ್ತ ಮಾಣಿಯ ಚಿತ್ತ

ಮಾಣಿಯೊಬ್ಬ ಭಟ್ಟತನಕೆ ಕಲಿಯುತ್ತಿದ್ದ. ಅಂದರೆ ವೇದ ಓದುತ್ತಿದ್ದ. ಕಾಲೋಚಿತ ಪಾಠಗಳೆಲ್ಲ ಮುಗಿಯುವಷ್ಟರಲ್ಲಿ ಮಠದಲ್ಲಿ ಸೀಟಿಗೆ ಕಾಲ್ ಫಾರ್ ಮಾಡಿದ್ದು ಗೊತ್ತಾಯಿತು. ನೇರವಾಗಿ ಕಾಂಪಿಟಿಶನ್ ಕೊಟ್ಟರೆ ತನಗೇ ಸಿಗುತ್ತದೆಂಬ ಖಾತ್ರಿ ಇರಲಿಲ್ಲ. ಹೀಗಾಗಿ ಆಯ್ಕೆ ಸಮಿತಿಯಲ್ಲಿ ಯಾರ್ಯಾರಿದ್ದಾರೆ ಎಂಬೋದನ್ನೆಲ್ಲ ತಿಳಿದುಕೊಂಡ. ಅವರ ಬೋಳಿಗೆ ಯಾವ ಎಣ್ಣೆ ಸವರಿದರೆ ಅದರಲ್ಲಿ ತನ್ನದೇ ಪ್ರತಿಬಿಂಬ ಹೊಳೆಬಹುದು ಎಂಬುದನ್ನು ಗುಣಾಕಾರ ಭಾಗಾಕಾರಗಳಿಂದ ತಿಳಿದುಕೊಂಡ. ಎಂಟಕ್ಕೆ ಎಂಟರಿಂದ ಗುಣಿಸಿದರೆ ಸರಿಗೋಹುತ್ತದೆ ಎಂಬ ಸೂತ್ರ ಬಳಸಿ ಆಯ್ಕೆ ಸಮಿತಿಯ ಸದಸ್ಯರಲ್ಲಿಯೇ ಪ್ರಮುಖರಾದವರ ಕಾಲು ಹಿಡಿದ.

ಆತ್ಲಕಡೆಗೆ ಮಾಣಿ ಅಪ್ಪಯ್ಯ, “ತಮಾ, ಮಠ ಸೇರ್ಕೆಂಡ್ ಬುಡು, ನಿತ್ಯ ವೈದಿಕದ ಮನಿಗೆ ಅಲೆಯೋ ಸಮಸ್ಯೆ ಇರ್ತಲ್ಲೆ. ಬೇಕಾದಷ್ಟ್ ಬಂದ್ ಬಂದ ಬೀಳ್ತಿರ್ತು. ಆನೇ ಜಾತಕ ಹೊಸದಾಗಿ ಒಳ್ಳೊಳ್ಳೆ ಯೋಗಾವಳಿ ಹಾಕ್ಸಿ ಬರ್ಸಿ ಕೊಡ್ತಿ. ನೋಡು …..ಇದ್ವಲ ಅವರನ್ನೆಲ್ಲ ಕಂಡು ಕಾಲ್ ಹಿಡ್ಕ, ನಿನ್ನ ಕೆಲ್ಸ ಆದಾಂಗೇಯ ಹೇಳಿ ತಿಳ್ಕ” ಎಂದ.

“ಅಪ್ಪಯ್ಯ, ಅದೆಲ್ಲ ಹೌದು ಎನಗೆ ಈರುಳ್ಳಿ ಉಪ್ಪಿಟ್ಟು ಬಜೆ ಸಖತ್ ತಿನ್ನಲೆಲ್ಲ ಸಿಗ್ತನೋ ಕಡಿಗೆ?” ಎಂಬ ಪ್ರಶ್ನೆ ಮಾಣಿಯಿಂದ ಬಂತು.

“ಅದ್ಕೆಲ್ಲ ತಲೆಬಿಸಿ ಮಾಡ್ಕೆಳಡ. ಎಲ್ಲ ಈಗಿಂದ್ದಗೆ ಇರ್ತು. ವೇಷ ಮಾತ್ರ ಕಾವಿ ಹಾಕ್ಕೆಂಡ್ರಾತು. ಅದೂ ನೀನು ನಿನ್ನ ಕೋಣೆ ಸೇರ್ಕಂಡಾಗ ಜೀನ್ಸಾರು ಹಾಕ್ಯ ಪ್ಯಾಂಟಾರು ಹಾಕ್ಯ, ಹೊರಗಡೆ ಬೇರೆಯವ್ರಿಗೆ ಕಾಣ್ಸ್ಕಂಬಾಗ ಮಾತ್ರ ಕಾವಿ ಅಷ್ಟೇಯ”

“ಅಪ್ಪಯ್ಯ, ಯನಗೆ ಸಿನಿಮಾ-ಗಿನಿಮಾ ನೋಡಲೆಲ್ಲ ಆಗ್ತಲ್ಲೆ ಅದಾ?”

“ತೋ ಮಳ್ ಮಾಣಿ, ಯಾರಂದ್ವ ನಿಂಗೆ? ಸಿನಿಮಾ-ಗಿನಿಮಾ ಎಲ್ಲ ಒಳಗೊಳಗೇ ಸಿಡಿ ಹಾಕ್ಕೆಂಡು ಎಷ್ಟ್ ಬೇಕಾರೂ ನೋಡ್ಲಕ್ಕು. ನಿಂದೇ ಕೈಯಿ ನಿಂದೇ ಬಾಯಿ, ಬೇಕಾದ್ದೆಲ್ಲ ತಿನ್ಲಕ್ಕು ಬೇಕಾದ್ಲೆಲ್ಲ ನೋಡ್ಲಕ್ಕು. ನೀನೇ ಎಲ್ಲದಕ್ಕೂ ಸರ್ವಾಧಿಕಾರಿ, ನಿನಗೆ ಹೇಳವು ಕೇಳವು ಯಾರೂ ಇರದಿಲ್ಲೆ. ದುಡ್ಡಂತೂ ಹಾಸಿ ಹೊಚ್ಚಕಳಕೂ ಸಾಕು. ಬಂಗಾರ ಬೇರೆ ಬತ್ತು. ಇತ್ಲಗೆ ಮನಿಗೊಂದಷ್ಟು ಕಳ್ಸಗೋತಾ ಆರಾಮಾಗಿರ್ಲಕ್ಕು.”

“ಅಲ್ದ ಅಪ್ಪಯ್ಯ, ಎನ್ನ ವಯಸ್ನೋರೆಲ್ಲ ಮದ್ವೆ ಗಿದ್ವೆ ಮಾಡ್ಕೆಂಡು ಆರಾಮಾಗಿ ಇರ್ತ್ವಲ. ಯನಗೆ ಮಾತ್ರ ಮದ್ವೆ ಗಿದ್ವೆ ಮಾಡ್ಕಳಕಾಗದಿಲ್ಲೆ”

“ಅಯ್ಯೋ ಇಂವೊಬ್ಬ ಮಳ್ಳ್ ಮಾಣಿ, ಅಲ್ದ ತಮಾ, ಅಲ್ಲಿಗೆ ಬಪ್ಪ ಹುಡುಗೀರು ಹೆಂಗಸರು ಎಲ್ಲರೂ ನಿನ್ನ ಭಕ್ತರೆ ಆಗಿರ್ತ. ಅವರನ್ನೆಲ್ಲ ಮಾತಾಡಸ್ಕಂಡಿದ್ರೆ ಅವರಲ್ಲೇ ಕೆಲವರನ್ನ ಬುಟ್ಟಿಗೆ ಹಾಕ್ಕೆಳ್ಳಕ್ಕು. ನಂತ್ರ ಎಂತ ಮಾಡವು ಹೇಳಿ ಆನ್ ಹೇಳ್ಕೊಡವನ ನಿಂಗೆ?”

“ಅಪ್ಪಯ್ಯ ನೀ ಹೀಂಗೇಳಿದ್ ಕೂಡಲೆ ಯನಗೊಂದ್ ಕತೆ ನೆನಪಾಗೊತು ಮಾರಾಯ. ನೀನು ಫ್ರೆಂಡ್ ಇದ್ದಾಂಗೇ ಇದ್ಯನ. ಹೇಳ್ಬುಡ್ತಿ ಕೇಳು…..

ಒಂದಪ್ಪಂಗೆ ಒಬ್ಬ ಮಗ ಇದ್ನಡ. ಅವಂಗೊಳ್ಳೆ ಪ್ರಾಯ. ಆದರೆ ಅಂವ ಪೆದ್ದ. ಏನೇನೂ ಬತ್ತಿರಲೆ. ಅಪ್ಪ ಹೇಗೋ ಮಾಡಿ ಮಗನ ಮದ್ವೆ ಮಾಡ್ದ. ಮಗ-ಸೊಸೆಗೆ ಶೋಭನ ಮಾಡಕನ? ರ್‍ಊಮೊಳಗೆ ಕಳಿಸಿ ಹೀಂಗೆ ಹೇಳಿದ್ನಡ. “ತಮಾ ನಿನಗೆ ಹೇಳ್ಕೊಟ್ಟಿದ್ನಲ? ಹಾಂಗೇ ಬಿಲ ಹುಡುಕು. ಆನು ಹೊರಗೆ ಜಾಗಟೆ ಮೇಲೆ ಡಣ್ ಅಂತ ಒಂದ್ ಹೊಡಿತಿ.. ನೀನು ಜೋರಾಗಿ ……ಆತ ಹಂಗೇಯ ಆನು ಡಣ್ ಡಣ್ ಅಂತ ಎರ್‍ಅಡ್ಸಲ ಹೊಡಿತಿ ಆಗ ಸರಕ್ಕನೆ ತೆಗೆದ್ಬುಡು. ಪೆದ್ದ ಮಗ ಅಪ್ಪ ಹೇಳಿದ ಹಂಗೆ ಮಾಡಿದ್ನಡ. ಅಪ್ಪ ಡಣ್ ಮತ್ತು ಡಣ್ ಡಣ್ ಹೇಳಿ ಎರಡ್ ರೌಂಡು ಹೊಡಿವಷ್ಟೊತ್ತಿಗೆ, “ಅಪ್ಪಯ್ಯ ನೀ ತುಂಬ ಸ್ಲೋ ಜಾಂಗಟೆ ಜೋರಾಗಿ ಬಾರ್ಸು” ಅಂತ ಒಳಗಿನಿಂದ ಪೆದ್ದ ಮಗ ಕೂಗಿದ್ದು ಅಪ್ಪಂಗೆ ಕೇಳಿಸ್ತಡ.

ಅಲ್ದ ಅಪ್ಪಯ್ಯ, ಯನಗಂತೂ ಅಂತ ಸಮಸ್ಯೆ ಎಲ್ಲ ಇಲ್ಲೆ. ಆನು ಈ ಮೊದಲೇ ಅದ್ನೆಲ್ಲ ಸ್ವಲ್ಪ ನೋಡಿರದ್ರಿಂದ ಯನಗೆ ಏಕಾಂತಕ್ಕೆ ಜಾಗ ಸಿಕ್ರೆ ಸಾಕು. ಏಕಾಂತಕ್ಕೆ ಜಾಗ ಸಿಗ್ತು ಹೌದ ಅಲ್ದ?”

ಮಾಣಿ ಅಪ್ಪಯ್ಯ ಮಾಣಿ ಅಮ್ಮನ ಕಡೆಗೆ ತಿರುಗಿ, “ನೋಡೆ, ಹೇಳಲ್ಯನೆ. ಮಾಣಿ ಪೆದ್ದ ಹೇಳಿ ಹೇಳ್ತಿದ್ಯಲೆ. ನೋಡು. ಮಾಣಿ ಯನಗಿಂತ ಮುಂದಿದ್ದ. ಇನ್ನು ಆನು ಹೇಳದೆಲ್ಲ ಏನೂ ಇಲ್ಲೆ. ಮಠಕ್ಕೆ ಕರ್ಕಂಡೋಗಿ ಪರಿಚಯ ಮಾಡ್ಸಿಕ್ಕೆ ಬಂದ್ರೆ ಸೈ. ಮುಂದೆಲ್ಲ ಅವನೇ ನೋಡ್ಕೆತ್ನ ಆತಾ?”

“ಅಪ್ಪಯ್ಯ, ಆನೊಂದ್ ಕತೆ ಕೇಳಿದ್ದಿ ಮಾರಾಯ. ಇಡಗುಂಜಿ ಗಣಪತಿಗೆ ಭೂಮಿಗೆ ಬಂದ್ರೆ ಪ್ರತಿನಿತ್ಯ ಪಂಚಗೆಜ್ಜ ಕೊಡುಸ್ತಿ ಹೇಳಿ ನಾರದ ಹೇಳಿದ್ನಡಲ. ಅದ್ಕೇಯ ಅಲ್ಲಿ ನೈವೇದ್ಯಕ್ಕೆ ದಿನವೂ ಪಂಚಗೆಜ್ಜ ಆಯಕಡ. ಯನಗಂತೂ ಈರುಳ್ಳಿ ಉಪ್ಪಿಟ್ಟು, ಈರುಳ್ಳಿ ಬಜೆ, ಮಸಾಲೆ ದೋಸೆ ಇವೆಲ್ಲ ಬೇಕಾಗ್ತು ನೋಡು. ಯಾವದೇ ತಪ್ಪದ್ರೂ ಏಕಾಂತಕ್ಕಂತೂ ಭಂಗ ಆಪ್ಲೇ ಇಲ್ಲೆ. ಒಂದೊಮ್ಮೆ ತಪ್ಪಿರೆ ಕಡಿಗೆ ಮಾಣಿ ಮಠ ಬಿಟ್ಟಿಕಿ ಬಂದ ಹೇಳಿ ತಕರಾರ್ ಮಾಡಲಿಲ್ಲೆ ನೋಡ್ಕ್ಯ. ಅಡ್ಡಿಲ್ಲೆ ಹೇಳಾದ್ರೆ ಆನು ರೆಡಿ ಆಗ್ತಿ.”

“ತಮಾ, ನೀ ಹೇಳದ್ದೆಲ್ಲ ಅಲ್ಲಿ ಸಿಕ್ಕೇ ಸಿಗ್ತು. ಅದ್ಕೆಲ್ಲ ಹ್ಯಾಂಗೆ ವ್ಯವಸ್ಥೆ ಮಾಡ್ಕೆಳವು ಹೇಳಿ ಆನು ಹೇಳ್ಕೊಡ್ತಿ ಮಾರಾಯ, ನೀ ಏನ್ ಬೇಜರ್ ಮಾಡ್ಕೆಳಡ. ನಿನ್ನ ಆಹಾರಕ್ಕೆ ವಿಹಾರಕ್ಕೆ ಏಕಾಂತಕ್ಕೆ ಎಲ್ಲಾ ಯೋಗ್ಯ ವ್ಯವಸ್ಥೆ ಮಾಡ್ಸನ. ಜೊತಿಗೆ ಜಗ್ಗು ಇದ್ನಲ ನಿಂಗೆ ಕಾಂಪಿಟಿಶನ್ ಕೊಡ್ತ ಕಾಣ್ತು. ಹ್ಯಾಂಗಾರೂ ಮಾಡಿ ಯಮ್ಮನೆ ತಂಗಿನ ಅವಂಗೆ ಕೊಟ್ಗೆಂಡು ನಿನಗೆ ಬಾವಯ್ಯ ಜೊತಿಗೇ ಇಪ್ಪಂಗೆ ಮಾಡ್ಕೊಡತಿ, ನೀ ಏನ್ ಚಿಂತೆ ಮಾಡಡ. ಹೊರಡನ ಹಂಗರೆ ಹೊತ್ತಾತು….ಜೋಯ್ಸರ ಮನಿಗೆ ಬೇರೆ ಹೋಗಿ ಹೋಯಕನ….”

“ಅಮ್ಮ, ಹೋಗ್ ಬತ್ಯ ಹಂಗರೆ. ಆನು ಇಲ್ಲಿಪ್ದಕ್ಕಿಂತ ಆರಾಮಾಗಿರ್ತಿ ಬಿಡು. ಇಲ್ಲಿಗೂ ಬೇಕ್ ಬೇಕಾದ್ದ್ ಕಳಸ್ತಿ. ನೀನು ಬೇಜಾರ್ ಮಾಡ್ಕೆಳಡ. ಹೋಗ್ ಬತ್ಯ ..”

“ತಮಾ, ಹುಷಾರು. ಎಲ್ಲಾರೂ ಬಜೆಗಿಜೆ ತಿನ್ನಕರೆ, ಏಕಾಂತದಲ್ಲಿ ಸಿಕ್ಕಾಕ್ಕೆಳಡ ಮತೆ. ಜನ ಎಲ್ಲ ಸಮ ಇಲ್ಲೆ. ಸಿಕ್ಕಾಕ್ಕೆಂಡ್ರೆ ಸಿಗದು ಊರ ಬಾಗಲಿಗೆ ತೋರಣಾಪವರಿಗೂ ಬಿಡ್ತ್‍ವಿಲ್ಲೆ. ನೀ ಆರಾಮಿರದು ಮುಖ್ಯ. ಎಲ್ಲಾರೂ ಇರು. ಆತು ಹೋಗ್ ಬಾ..”

(ಸೀಟನ್ನೇರಲು ಮಠ ಸೇರಿದ ಮಾಣಿ ಸ್ವಗತದಲ್ಲಿ…)

ಅಬಬಬಬ…ಮಠಕ್ಕೆ ಎಷ್ಟೆಲ್ಲ ಚಂದ ಚಂದದ ಹುಡುಗಿರು ಹೆಂಗಸ್ರು ಬೈಂದ್ವಪ.. ಅವಳ ಜಡೆ ನೋಡವು ಈಷ್ಟುದ್ದ..ನಾಗವೇಣಿ….ಇವಳದ್ ನೋಡದ್ರೆ ಸುಂದರ ಜಡೆ….ಸುಂದರವೇಣಿ..ಓಹೊ, ಸುಂದರವೇಣಿ ಸುಚರಿತ್ರಾಣಿ ಹಾಡಿದ್ದನ ಅದನ್ನ ಬರ್ದವು ಇವಳ ಜಡೆ ನೋಡೇ ಬರ್ದಿದ್ದಿರವು. ಓ ಅಲ್ಲೊಬ್ಳಳು ದೇವರಿಗೆ ನಮಸ್ಕಾರ ಮಾಡಿಕಿ ಹೋರಡ್ತಾ ಇದ್ಲಲ ಅವಳ ಸೊಂಟ ನೋಡಿರೆ ಈಗಲೇ ಅಪ್ಪಗೆಂಡಬುಡನ ಹೇಳಿ ಕಾಣ್ತು. ……..

ಅಷ್ಟರಲ್ಲಿ ಮಾಣಿಯನ್ನು ಅಪ್ಪಯ್ಯ ಗದರಿಕೊಂಡ, “ತಮಾ, ಅಲ್ಲೆಲ್ಲೋ ಮಂಗನಾಂಗೆ ನೋಡ್ತಿದ್ಯಲ್ಲ. ನೋಡು ಅಲ್ಲಿ ಕುಳ್ತವೆಲ್ಲ ಆಯ್ಕೆ ಸಮಿತಿಯ ಸದಸ್ಯರು. ಹೋಗಿ ನಮಸ್ಕಾರ ಮಾಡಿ ಅಶೀರ್ವಾದ ತಕ. ಎಲ್ಲೆಲ್ಲೋ ನೋಡ್ತಾ ಇರಡ. ಗುರಗಳಿಗೆ ಆರಾಮ್ ಇಲ್ಲೆ. ಜಲ್ದಿ ಈ ಕೆಲ್ಸ ಆಗವಡ.”

(ನಮ್ಮ ನಾಳೆಯ ಆಟ: “ಸನ್ಯಾಸವಲ್ಲ ಸನ್ನಿಲಿಯಾನಾಸ”, ಓದಲು ಮರೆಯದಿರಿ, ಮರೆತು ಮರುಗದಿರಿ, ಸತ್ಯಸಾಹಿತ್ಯಾಭಿಮಾನಿಗಳೆ!”)

Thumari Ramachandra

source: https://www.facebook.com/groups/1499395003680065/permalink/1647947342158163/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s