ಕಾಗದದ ಹುಲಿ ಕೂಗಿದ ಹೊತ್ತು ಕೆಲವು ಮಾತು

ಕಾಗದದ ಹುಲಿ ಕೂಗಿದ ಹೊತ್ತು ಕೆಲವು ಮಾತು

ಯಾವುದೇ ಶಾಸ್ತ್ರ, ಸಂಪ್ರದಾಯ ಇವುಗಳನ್ನೆಲ್ಲ ಅರ್ಥವಿಲ್ಲದೇ ಆಚರಿಸಬಾರದು. ವೇದ ಮಂತ್ರಗಳೇ ಹೇಳುತ್ತವೆ-ಅರ್ಥ ಗೊತ್ತಿರದೇ ಯಾವುದೇ ಮಂತ್ರವನ್ನೂ ಬಳಸಬಾರದು ಎಂದು. ಆದರೆ ಇಂದು ನಮ್ಮಲ್ಲಿನ ಬಹುತೇಕ ವೈದಿಕರಿಗೆ ಹೇಳುವ ಮಂತ್ರಗಳ ಅರ್ಥವೇ ಗೊತ್ತಿಲ್ಲ!

ಮಂತ್ರ ಪುಷ್ಪ ಹೇಳು ಅಂದರೆ ಹೇಳ್ತಾರೆ; ಆದರೆ ಮಂತ್ರ ಪುಷ್ಪದ ಅರ್ಥವೇನೆಂದು ಕೇಳಿದರೆ ಗೊತ್ತಿಲ್ಲ.

ಸಂಸ್ಕೃತ ಮೂಲ: ಕೃಷ್ಣ ಯಜುರ್ವೇದ-ತೈತ್ತೀರಿಯ ಅರಣ್ಯಕ [೧.೧೨]

ಯೋಪಾಂ ಪುಷ್ಪಂ ವೇದ | ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ ||
ಚಂದ್ರಮಾ ವಾ ಅಪಾಂ ಪುಷ್ಪಮ್ | ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ ||
ಯ ಏವಂ ವೇದ | ಯೋಪಾಂ ಆಯತನಂ ವೇದ | ಆಯತನವಾನ್ ಭವತಿ || ೧ ||

ಕವನ:
ಜಲದ ಪುಷ್ಪವದೇನು ಬಲ್ಲೆಯೇನು? ಚಂದ್ರಮನೆ ನಭಕುಹರ ಜಲದ ಹೂವು
ಹೂವೊಳಗಣಾ ರಸದ ಸೆಲೆಯರಿಯೆ ನಲಿವಿಹುದು; ಪಶು-ಪುತ್ರ ಸಂಪದವ ಪಡೆವೆ ನೀನು;
ಇದನರಿತು ನೀರ ಸಾರವನೆಲ್ಲ ನೀ ಗ್ರಹಿಸೆ, ಗೆಲ್ಲಲವವಕಾಶವಿದೆ ಸತತ ನಿನ್ನಲ್ಲೆ!

ಸೂಚ್ಯಾರ್ಥ:
ಜಗತ್ತು ಪಂಚ ಭೂತಾತ್ಮಕವಾಗಿದೆ: ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿಗಳೇ ಪಂಚಭೂತಗಳು. ಇದರಲ್ಲಿ ಒಂದರೊಳಗೇ ಇನ್ನೊಂದು ಅಡಗಿದೆ; ಆದರೆ, ನಮ್ಮರಿವಿಗೆ ಇದು ನಿಲುಕದಾಗಿದೆ! ಆಕಾಶವನ್ನೇ ಸರೋವರದ ನೀರೆಂದುಕೊಂಡರೆ ಅಲ್ಲಿ ಚಂದ್ರಮನೇ ಆ ನೀರಿನಲ್ಲಿ ಅರಳಿದ ಹೂವು; ಚಂದ್ರಮನೆಂಬ ಹೂವೊಳಗಿನ ರಸವನ್ನು ಅಂದರೆ ಶಕ್ತಿಯನ್ನು ಅರಿತರೆ, ಮನುಷ್ಯನಿಗೆ ಹೆಂಡತಿ-ಮಕ್ಕಳು-ಬೇಕಾದ ಪಶು ಸಂಪತ್ತು ಎಲ್ಲವೂ ಒದಗಿಬರುವುದು; ಇದನ್ನರಿತರೆ ಜೀವನದಲ್ಲಿ ಅತ್ಯುನ್ನತಿಯನ್ನು ಸಾಧಿಸಲು ಅವಕಾಶವಿದೆ.

ಅಗ್ನಿರ್ ವಾ ಅಪಾಂ ಆಯತನಮ್ | ಆಯತನವಾನ್ ಭವತಿ ||
ಯೋ ಅಗ್ನೇರ್ ಆಯತನಂ ವೇದ | ಆಯತನವಾನ್ ಭವತಿ ||
ಆಪೋ ವಾ ಅಗ್ನೇರ್ ಆಯತನಮ್ | ಆಯತನವಾನ್ ಭವತಿ ||
ಯ ಏವಂ ವೇದ | ಯೋಪಾಂ ಆಯತನಂ ವೇದ | ಆಯತನವಾನ್ ಭವತಿ ||೨||

ಅಗ್ನಿಯಲಿ ನೀರಿಹುದು ನೀರೊಳಗು ಬೆಂಕಿ; ನೀರು-ಬೆಂಕಿಗಳಿರುವ ನೆಲೆಯು ಬೇರಿಹುದು.
ಇದನರಿತು ನೀರ ಸಾರವನೆಲ್ಲ ನೀ ಗ್ರಹಿಸೆ, ಗೆಲ್ಲಲವವಕಾಶವಿದೆ ಸತತ ನಿನ್ನಲ್ಲೆ!

ಸೂಚ್ಯಾರ್ಥ:
ಪಂಚಭೂತಗಳಲ್ಲಿ ಒಂದಾದ ಅಗ್ನಿಯಲ್ಲೇ ನೀರಿದೆ, ಹಾಗಾದರೆ ನೀರು ಬೆಂಕಿಗೆ ವೈರಿಯಲ್ಲವೆಂದಾಯ್ತಲ್ಲ? ಆದರೆ ನೀರಿನಿಂದಲೇ ನಾವು ಕೆಲವೊಮ್ಮೆ ಉರಿವ ಅಗ್ನಿಯನ್ನು ಶಮನ ಮಾಡುತ್ತೇವೆ. ವಿರೋಧಾಭಾಸ ಎನಿಸುವುದಿಲ್ಲವೇ? ಆದರೂ ಅಗ್ನಿಯೊಳಗೇ ನೀರಿರುವುದು ಸತ್ಯ-ಅದು ನಮಗೆ ತಿಳಿದಿಲ್ಲವಷ್ಟೆ. ಅಷ್ಟೇ ಅಲ್ಲ, ನೀರೊಳಗೂ ಅಗ್ನಿಯಿದೆ! ಆದರೆ ನಮಗದು ಕಾಣಿಸುತ್ತಿಲ್ಲ. ನೀರು-ಬೆಂಕಿಗಳ ಮೂಲ ನೆಲೆಯನ್ನು ಅರಿತಾಗ ಈ ಜಗದ ವಿಭಿನ್ನ ಮುಖದ ಅರಿವು ನಿನಗಾಗುವುದು; ಇದನ್ನರಿತರೆ ಜೀವನದಲ್ಲಿ ಅತ್ಯುನ್ನತಿಯನ್ನು ಸಾಧಿಸಲು ಅವಕಾಶವಿದೆ.

ಹೀಗೆ ಸಾಗುವ ಮಂತ್ರಪುಷ್ಪದಲ್ಲಿ ಗಾಳಿಯೊಳಗೆ, ಸೂರ್ಯನೊಳಗೆ, ಚಂದ್ರ-ತಾರೆಗಳೊಳಗೆ, ಮುಗಿಲೊಳಗೆ, ಮಳೆಯೊಳಗೆ, ಮೇಘಗಳೊಳಗೆ ಮತ್ತು ಅಂತ್ಯದಲ್ಲಿ ಕಾಲದೊಳಗೆ ಸಹ ನೀರಿದೆ ಎನ್ನುತ್ತದೆ ವೇದ. ಕಾಲವನ್ನು ಅಳೆಯುವ ಕೆಲಸವನ್ನೂ ನೀರೇ ನಿರ್ವಹಿಸಬಲ್ಲದು ಅಲ್ಲವೇ? [ಹಿಂದಕ್ಕೆ ಘಳಿಗೆ ಬಟ್ಟಲೆಂಬ ಕಾಲಮಾಪಕದಲ್ಲಿ ನೀರನ್ನೇ ಕಾಲಮಾಪನಕ್ಕೆ ಬಳಸುತ್ತಿದ್ದರಲ್ಲ?] ಅಷ್ಟೇ ಅಲ್ಲ, ಭೂಮಿಯ ಮೇಲ್ಮೈಯಲ್ಲಿ ಎರಡು ಪಾಲು ನೀರೇ ತುಂಬಿದೆ, ತೆರೆದುಕೊಂಡಿರುವ ಭೂಮಿಯ ಇನ್ನೊಂದು ಪಾಲನ್ನು ಆವರಿಸುವಷ್ಟು ನೀರು ಘನೀಭವಿಸಿ ಸಮಯಕ್ಕಾಗಿ ಕಾದಿದೆ! ಒಂದೊಮ್ಮೆ ಅ ಘನೀಕೃತ ನೀರು ಸಂಪೂರ್ಣ ಕರಗಿದರೆ ಅಖಂಡ ಭೂಮಂಡಲ ಜಲಾಧಿವಾಸವನ್ನು ಅನುಭವಿಸುತ್ತದೆ!

ಅದನ್ನೇ ಪ್ರಳಯವೆನ್ನಲೂ ಬಹುದು. ಗುರುತಿಸಲ್ಪಟ್ಟ ಏಳು ಭೂಖಂಡಗಳೇ ಆಗಾಗ ಸ್ಥಾನ ಹೊಂದಾಣಿಕೆಗಾಗಿ ಹೊಯ್ದಾಡುತ್ತವೆ; ಇದರಿಂದಲೇ ಸುನಾಮಿ ಉಂಟಾಗುತ್ತದೆ ಎಂಬುದನ್ನು ನಾವು ಬಲ್ಲೆವಷ್ಟೇ? ಚಿಕ್ಕದೊಂದು ಬದಲಾವಣೆಯೇ ಸುನಾಮಿ ಎಬ್ಬಿಸಿ ಪಾರ್ಶ್ವಾಘಾತವನ್ನು ನೀಡುವುದಾದರೆ ಬೃಹತ್ ಬದಲಾವಣೆ ಇನ್ನೆಷ್ಟು ಘೋರ ಪರಿಣಾಮಗಳನ್ನು ಉಂಟುಮಾಡಬಲ್ಲದು ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕು. ಇದೆಲ್ಲದರ ನಿಭಾವಣೆಯ ಹಿಂದೊಂದು ಶಕ್ತಿಯಿದೆ. ಅಂತಹ ಶಕ್ತಿಗೆ ಅದರದೇ ನಿಯಾಮಕ ಅಧಿಕಾರಿಗಳಾದ ಆಕಾಶ-ವಾಯು-ಅಗ್ನಿ-ಭೂಮಿ-ನೀರುಗಳೆಂಬ ಪಂಚಭೂತಗಳ ಜೊತೆಗೆ ಸೂರ್ಯ-ಚಂದ್ರ-ಗ್ರಹ-ತಾರೆಗಳೆಂಬ ಪುಷ್ಪಗಳನ್ನು ಮನಸಾ ಅರ್ಪಿಸುವ ಭಾವವನ್ನು ತಳೆಯುವುದು ವೇದೋಕ್ತ ಮಂತ್ರಪುಷ್ಪದ ಧ್ವನ್ಯರ್ಥ. ಗೀತೆಯಲ್ಲಿ ಭಗವಂತ ಹೇಳುತ್ತಾನೆ:

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |
ತದಹಂ ಭಕ್ತ್ವುಪಹೃತಮಶ್ನಾಮಿ ಪ್ರಿಯತಾತ್ಮನಃ ||

[ಅರ್ಥ: ಭಕ್ತಿಯಿಂದ ಕೊಡಲ್ಪಟ್ಟ ಪತ್ರೆ, ಪುಷ್ಪ, ಹಣ್ಣು-ಕಾಯಿ, ನೀರು ಯಾವುದನ್ನಾದರೂ ನಾನು ಪ್ರತಿಗ್ರಹಿಸುತ್ತೇನೆ. ಕೊಡುವ ವ್ಯಕ್ತಿವ ಭಕ್ತಿಭಾವ, ಸಮರ್ಪಣಾ ಭಾವ ಮುಖ್ಯವೇ ಹೊರತು ಕೊಡುವ ವಸ್ತು ಮುಖ್ಯವಲ್ಲ.]

ಜಗವನ್ನಾಳುವ ಶಕ್ತಿ ಹೀಗೆ ಹೇಳಿದ್ದರಿಂದ ಏನೂ ಇಲ್ಲದ ಬಡವ ಕೇವಲ ಶುದ್ಧ ನೀರಿನಿಂದಲೇ ದೇವರನ್ನು ಆರಾಧಿಸಬಹುದು ಎಂಬುದು ಗೊತ್ತಾಗುತ್ತದೆ.

ಸಂಧ್ಯಾವಂದನೆ, ದೇವಪೂಜಾದಿ ಉತ್ತಮ ಕೆಲಸಗಳನ್ನು ನಡೆಸುವಾಗ ಅಂಡಿನ ಕೆಳಗೆ ಆಸನವನ್ನು ಹಾಕಿಕೊಳ್ಳಬೇಕು ಎಂದು ಹೇಳುತ್ತಾರೆ. ಅಂಡಿಗೆ ಕೊಳೆ ತಾಗಬಾರದೆಂಬುದು ಅಲ್ಲಿ ನಗಣ್ಯ. ಶರೀರದ ಸಪ್ತ ಚಕ್ರಗಳಿಂದ ನಮಗೆ ಗೋಚರಿಸದ ಒಂದು ವಿದ್ಯುತ್ತು ಹರಿಯುತ್ತದೆ. ಪೂಜಾದಿಗಳಿಗೆ ನೆಟ್ಟಗೆ ಕುಳಿತಾಗ ಆ ಶಕ್ತಿ ಅಧೋಮುಖವಾಗಿ ಭೂಮಿಯ ಸಂಪರ್ಕ ಪಡೆಯಬಾರದು ಎಂಬುದೇ ಗಣ್ಯ. ಇಂದಿನ ಕಾವಿವೇಷದ ಕೆಲವು ’ಸನ್ಯಾಸಿ’ಗಳಿಗೇ ಶಾಸ್ತ್ರಗಳು ಗೊತ್ತಿಲ್ಲ. ಹೀಗಿರುವಾಗ ವ್ರಥಾ ಸಮಾಜದಲ್ಲೇ ಸತ್ವವನ್ನು ಆದರಿಸುವ ಜನರನ್ನು ದೂಷಿಸುತ್ತ ತಿರುಗುವ ಕುರಿಮೆಂದೆಯ ನಾಯಕರಿಗೆ ಏನು ಗೊತ್ತಿರಲು ಸಾಧ್ಯ?

ಅಂತಹ ಕಳ್ಳ ಸನ್ಯಾಸಿಗಳು, “ಸಂಧ್ಯಾವಂದನೆಯನ್ನು ಮಲಗಿಯೇ ನಡೆಸಬಹುದು, ಅದಕ್ಯಾಕೆ ಕುಳಿತುಕೊಂಡು ಪರಿಶ್ರಮ ಪಡಬೇಕು? ನಾವು ಹೇಳ್ತೇವೆ, ನಮ್ಮ ಶಿಷ್ಯರೆಲ್ಲ ಮಲಗಿಯೇ ಸಂಧ್ಯಾವಂದನೆ ಮಾಡಿ” ಎನ್ನಬಹುದು. ಯಾಕೆಂದರೆ ಅವರಿಗೆ ಮಲಗಿದಲ್ಲಿ ಈಜು ಹೊಡೆದಷ್ಟು ಕುಳಿತಲ್ಲಿ ಸಾಧ್ಯವಾಗುವುದಿಲ್ಲ; ಮಲಗಿ ಡೈವ್ ಹೊಡೆದದ್ದಕ್ಕೆ ಹೊಸ ಪುರಾವೆ ಏನೂ ಬೇಕಿಲ್ಲವಲ್ಲ?

“ಅಯೋ ನಮ್ಮ ಗುರುಗಳು”, “ಅಯ್ಯೋ ನಮ್ಮ ಗುರುಗಳು”, “ನಾವಿದ್ದೇವೆ” ಇದಷ್ಟೇ ಅವರ ಕೂಗು. ಕುರುಡು ವ್ಯಾಮೋಹದಿಂದ ಹುಟ್ಟಿದ ಅಭಿಮಾನಕ್ಕಿಂತ ಅಲೌಕಿಕ ಸಾಧನೆಯನ್ನು ಗುರುತಿಸಿ ಹುಟ್ಟಿದ ನಿರ್ವ್ಯಾಜ ಪ್ರೀತಿ ಶ್ರೇಷ್ಠ. ಆದರೆ ಇಲ್ಲಿ ಹಾಗಿಲ್ಲ.

ವಿರೋಧಿಸುವ ಬಳಗ ಯಾಕೆ ವಿರೋಧಿಸುತ್ತಿದೆ ಎಂದು ವಿವೇಚಿಸುವವರು ಎಷ್ಟು ಜನ? ಮತ್ತು ಹೀಗೂ ಇರಬಹುದೇ ಎಂದು ಒರೆಗೆ ಹಚ್ಚಿ ಚಿಂತನೆ ನಡೆಸಿದವರೆಷ್ಟು ಜನ? ಇಲ್ಲ, ಅವರಲ್ಲಿ ಅದಿಲ್ಲ. ವಿನಾಕಾರಣ ತಮ್ಮದೇ ಸಮಾಜದ ಭಾಗವನ್ನು ದೂಷಿಸುತ್ತಾರೆ. ಸನ್ಮಾನ್ಯ ರಾಮಕೃಷ್ಣ ಹೆಗಡೆಯವರು ತಮ್ಮ ಮೇಲೆ ಆಪಾದನೆ ಬಂದಾಗ ತಕ್ಷಣವೇ ಇರುವ ಮಂತ್ರಿಗಿರಿಗೆ ರಾಜೀನಾಮೆ ಬಿಸಾಕಿ ಜನರ ಮುಂದೆ ಹೋಗುತ್ತಿದ್ದರು. ಆದರೆ ಇಲ್ಲಿನ ಪಟ್ಟಭದ್ರ ಹಿತಾಸಕ್ತಿಗಳು ಹಾಗಲ್ಲ. ಇಲ್ಲಿನ ರಾಜಕೀಯವೇ ಬೇರೆ. ಸಮಾಜೋದ್ಧಾರದ ಸೋಗಿನಲ್ಲಿ ಖಾಸಗೀ ಬದುಕನ್ನು ಶ್ರೀಮಂತವಾಗಿಸಿಕೊಳ್ಳುವುದು ಇಲ್ಲಿನ ಕೆಲವು ’ಸನ್ಯಾಸಿ’ಗಳ ಉದ್ದೇಶ.

ತಾವು ’ದೊಡ್ಡ ಸಮಾಜಸೇವಕರು’ ಎಂಬಂತೆ ಪೋಸು ಕೊಡುತ್ತ ಪೇಪರುಗಳಲ್ಲಿ ಹಾಕಿಸಿಕೊಳ್ಳುವುದು, ಜನತೆಯಲ್ಲಿ ಅಂತದ್ದೊಂದು ಭ್ರಮೆ ಹುಟ್ಟಿಸಲು ಯತ್ನಿಸುವುದು ಕೆಲವರ ಅಭ್ಯಾಸ. ಇದು ಸನ್ಯಾಸಿ ವೇಷದವರಿಗಷ್ಟೇ ಅಲ್ಲ ಇನ್ನೂ ಕೆಲವರಿಗೆ ಈ ಹೇಳಿಕೆ ಸಲ್ಲುತ್ತದೆ. ಲಲಿತಕಲೆಗಳನ್ನು ಕಲಿಸುವುದರಿಂದ, ಭಾಷೆಗಳನ್ನು ಕಲಿಸುವುದರಿಂದ ಸಾಕಷ್ಟು ಹಣಗಳಿಸುವ ಕೆಲವರು ನಮ್ಮಲ್ಲಿ ಇದ್ದಾರೆ. ಯಾವ ಪತ್ರಿಕೆಗಳಲ್ಲಿ ನೋಡಿದರೂ ಅವರದೇ ಸುದ್ದಿ, ಯಾವ ಚಾನೆಲ್ ತಿರುಗಿಸಿದರೂ ಅವರ ಸಾಧನೆಯದ್ದೇ ಹಬ್ಬ! ಅಷ್ಟೆಲ್ಲ ಬಡಾಯಿಕೊಚ್ಚುವ ಅದೆಷ್ಟೋ ಜನರ ನಿಜವಾದ ಮುಖವಾಡ ಬೇರೇನೇ ಇರುತ್ತದೆ. ಅಲ್ಲೆಲ್ಲ ಇರುವುದು ಪರಮ ಸ್ವಾರ್ಥವೇ ಹೊರತು ಸಮಾಜ ಸೇವೆಯಲ್ಲ.

ಸಮಾಜ ಸೇವೆ ಮಾಡುವ ಎಷ್ಟೋ ಜನ ಸುದ್ದಿಗೇ ಬರುವುದಿಲ್ಲ. ತ್ರಾತಂತ್ರ್ಯೋತ್ತರ ಭಾರತದಲ್ಲಿ ಜನಸಂಖ್ಯೆ ಜಾಸ್ತಿಯಾಗುತ್ತಿದೆಯೆಂದೂ ಕೆಲವು ಕೋಮುಗಳಲ್ಲಿ ಜನಸಂಖ್ಯೆಗೆ ಮಿತಿಯೇ ಇಲ್ಲವೆಂದೂ ಮಿತಿ ಹೇರಬೇಕೆಂದೂ ಹೇಳಿದವರು ಟಾಟಾ ಕುಟುಂಬದವರು. ಪಾರ್ಸಿಗಳು ಅತಿ ಬುದ್ದಿವಂತರು, ವಿಚಾರವಂತರು ಮತ್ತು ನಿಯತ್ತಿಗೆ ಹೆಸರಾದವರು. ಆದರೆ ಅವರು ಹೇಳಿದ ಸಲಹೆಯನ್ನು ಆಳುತ್ತಿದ್ದ ರಾಜಕೀಯ ಮುಖಂಡರು ಗಮನಿಸಲೇ ಇಲ್ಲ. ಹೀಗಾಗಿ ಮೂವತ್ತು ಕೋಟಿ ಇದ್ದ ಜನಸಂಖ್ಯೆ ಇಂದು ನೂರಾಮೂವತ್ತು ಕೋಟಿಗೆ ಹತ್ತಿರವಾಗಿದೆ! ಇದು ಭಾರತೀಯರಲ್ಲಿ ಕೆಲವರ ಅರ್ಧಶತಕದ ಸಾಧನೆ.

ಒಂದೇ ಸಮಾಜ ಇಬ್ಭಾಗವಾಗಬೇಕಾದರೆ ಸಬಲವಾದೊಂದು ಕಾರಣ ಇರಲೇ ಬೇಕಲ್ಲ? ಯಾಕೆಂದರೆ ಎಲ್ಲರೂ ದುಡ್ಡಿನಾಸೆಗೆ ಕೆಲಸ ಮಾಡುವ ತಾಲೀಬಾನಿಗಳಲ್ಲ. ಹೀಗಾಗಿ ವಿರೋಧಿಗಳೆನಿಸಿದವರು ಯಾಕೆ ವಿರೋಧಿಗಳಾದರು? ಅವರ ಸಮಸ್ಯೆಗಳೇನು? ಅವರಲ್ಲಿನ ಪ್ರಶ್ನೆಗಳಿಗೆ ತಾವು ಉತ್ತರ ಹೇಳಬಲ್ಲೆವೆ? ಅವರಂತೆ ಆಧಾರ ಸಹಿತವಾಗಿ ನಾವು ಮಾತನಾಡುತ್ತಿದ್ದೇವೋ ಅಥವಾ ಅಧಿಕಾರ ಮದದಿಂದ ಮಾತನಾಡುತ್ತಿದ್ದೇವೋ ಎಂಬುದನ್ನೆಲ್ಲ ಚಿಂತಿಸಲಾಗದವರು ತಾಲೀಬಾನಿಗಳೆನಿಸುತ್ತಾರೆ.

ತಾಲೀಬಾನಿಗಳ ಸಂಖ್ಯೆ ಯಾವಾಗಲೂ ಜಾಸ್ತಿಯೇ. ಈ ಜಗತ್ತಿನಲ್ಲಿಯೇ ನೋಡಿ, ಅವರಷ್ಟು ಹೆಚ್ಚಿಗೆ ಬೇರೆ ಯಾರಿದ್ದಾರೆ? ಪಾಪ ಸೃಷ್ಟಿಕರ್ತ ಅವರಿಗೆ ಮೈಯಲ್ಲಿ ಕಸುವು ಕೊಟ್ಟಷ್ಟು ತಲೆಯಲ್ಲಿ ಇಡಲಿಲ್ಲ. ಹೀಗಾಗಿ ತಲೆಗೆ ಹೊಳೆದಿದ್ದೇ ಸತ್ಯ ಎನ್ನುತ್ತಾರೆ; ತಾವು ಹೇಳಿದ್ದನ್ನು ಅನುಸರಿಸದಿದ್ದರೆ ತಲೆ ತೆಗೆಯುವುದಾಗಿ ಬೆದರಿಕೆ ಹಾಕುತ್ತಾರೆ. ಅಂತಹ ಬೆದರಿಕೆಗಳನ್ನು ಹಾಕುವ ಜನರಿಗೂ ಸಹ ನಿರ್ನಾಮವಾಗುವ ಕಾಲವೊಂದು ಬರಲೇ ಬೇಕಲ್ಲ? ಆಂಗ್ಲ ಭಾಷೆಯಲ್ಲಿ Every Dog Has A Day ಅಂತಾರೆ. ಹೀಗಾಗಿ ಅವರನ್ನು ವಿರೋಧಿಸುವವರಿಗೂ ಒಂದು ದಿನ ಬರಲೇಬೇಕು.
ಹೀಗಾಗಿ, ಯಾವನೋ ಒಬ್ಬನ ಸೀಟಿನ ಸಲುವಾಗಿ ವ್ರಥಾ ಪರಸ್ಪರ ದೂಷಿಸಿಕೊಳ್ಳುವುದಕ್ಕಿಂತ ಸಮಗ್ರ ಸಮಾಜದ ಒಳಿತನ್ನು ಗಮನಿಸಬೇಕಾದದ್ದು ನ್ಯಾಯ. ನಮಗೆ ತಾಲೀಬಾನಿ ಮುಖಂಡರ ಕಳ್ಳ ಗುರುವಿನಲ್ಲಿ ನಂಬಿಗೆಯಿಲ್ಲ. ಜನ್ಮ ಹೋದರೂ ಮತ್ತೆಂದೂ ಅವನನ್ನು ಗುರುವೆಂದು ಒಪ್ಪಲು ನಾವ್ಯಾರೂ ಸಿದ್ಧರಿಲ್ಲ. ಮಾತುಕತೆಗೆ ಸಿದ್ಧವಾಗಿ ನಿಮಗಿರುವ ಸಂದೇಶ ಪರಿಹಸಿರಿಕೊಳ್ಳಿ ಎಂಬುದು ನಮ್ಮ ವಾದ. ತಾಕತ್ತಿದ್ದರೆ ಮಾಣಿ ಅದಕ್ಕೆ ರೆಡಿಯಾಗಬೇಕು. ಆಮೇಲೆ ಕೂಸಿಗೂ ಮತ್ತು ತನ್ನನ್ನು ವರ್ಷಗಳಿಂದ ಕಂಡಲ್ಲೆಲ್ಲ ಭಜಿಸುತ್ತಿರುವ ಕೂಸಿನ ಅಪ್ಪನಿಗೂ ಸನ್ಮಾನ ಮಾಡಬಹುದು.

Thumari Ramachandra

source: https://www.facebook.com/groups/1499395003680065/permalink/1647274225558808/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s