ನಮ್ ಜಾತಕವೇ ಬೋಗಸ್ಸು; ಸ್ವಾಮಿಯಾಗೋದು ಬಿಜನೆಸ್ಸು

ನಮ್ ಜಾತಕವೇ ಬೋಗಸ್ಸು; ಸ್ವಾಮಿಯಾಗೋದು ಬಿಜನೆಸ್ಸು

ದಾರ್ಶನಿಕರು ಎಂದರೆ ಧ್ಯಾನದ ಸಮಯದಲ್ಲಿ ದೃಷ್ಟಾಂತಗಳ ಮೂಲಕ, ವಿಶಿಷ್ಟ ಅನುಭವಗಳ ಮೂಲಕ ಅತಿಮಹತ್ವದ ಪಾರಲೌಕಿಕ ವಿಷಯಗಳನ್ನು ಅರಿತುಕೊಂಡವರು ಎಂದರ್ಥ. ಕನ್ನಡದಲ್ಲಿ ಇಬ್ಬರು ದಾರ್ಶನಿಕ ಕವಿಗಳನ್ನು ನಾವು ಕಾಣಬಹುದು. ಒಬ್ಬದು ಡಿವಿಜಿ ಮತ್ತು ಇನ್ನೊಬ್ಬರು ಬೇಂದ್ರೆ. ಇವರಿಬ್ಬರ ಗದ್ಯ-ಪದ್ಯಗಳಲ್ಲಿ ಅನುಭವಗಳ ಸರಮಾಲೆಯೇ ಇದೆ. ಡಿವಿಜಿ ತನ್ನ ಜೀವನಾನುಭವದಲ್ಲಿ ಕಂಡುಕೊಂಡ ಸತ್ಯ ಸಾಮಾನ್ಯದ ಸನ್ಯಾಸಿಗೂ ನಿಲುಕಲಾದದ್ದು.

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? |
ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ ||
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ |
ಸಹನೆ ವಜ್ರದ ಕವಚ – ಮಂಕುತಿಮ್ಮ ||

Will an astrologer rearrange placement of planets in a horoscope?
Planet movement is governed by destiny of nature.
Irrespective of change in astrological time cycles, nothing is completed without forbearance…Patience is the only impregnable [diamond] armor – Mankutimma

ತನ್ನ ಲೌಕಿಕ ಜೀವನ ಆರ್ಥಿಕ ಉಚ್ಛ್ರಾಯ ಸ್ಥಿತಿಗೆ ಹೋಗಲಾರದ್ದಕ್ಕೆ ಡಿವಿಜಿಗೆ ಬೇಸರವಿರಲಿಲ್ಲ. ಅಂದಂದಿನ ದಿನ ಪರಿಸ್ಥಿತಿ ಹೇಗಿದೆಯೋ ಅದಕ್ಕೆ ಹೊಂದಿಕೊಂಡು ಬದುಕುತ್ತಿದ್ದರವರು; ಅದಕ್ಕೆ ತಕ್ಕನಾಗಿ ಅವರಿಗೊಬ್ಬ ಅನುರೂಪದ ಮಡದಿಯಿದ್ದಳು. ಆ ಸಾಧ್ವಿ ಎಂದಿಗೂ ಪತಿಯಲ್ಲಿ ಇಂಥದ್ದನ್ನೇ ಕೊಡಿಸೆಂದು ಕೇಳಲಿಲ್ಲ, ಇಲ್ಲದ್ದಕ್ಕೆ ಕೊರಗಲಿಲ್ಲ. ಬದುಕಿನ ಬಂಡಿ ಎಳೆಯಲು ಡಿವಿಜಿ ಹಿಡಿದ ವೃತ್ತಿಗಳು ಹಲವು. ಅದರರ್ಥ ಅವರಿಗೆ ಗುರಿಯಿರಲಿಲ್ಲವೆಂದಲ್ಲ. ಕೆಲವೊಮ್ಮೆ ಮನುಷ್ಯ ಬಯಸುವುದೊಂದು; ವಿಧಿ ನೀಡುವುದೇ ಇನ್ನೊಂದು.

ಕಲಾಂ ಅವರು ಪೈಲಟ್ ಆಗಲು ಬಯಸಿದ್ದರು. ಪೈಲಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗದ್ದಕ್ಕೆ ಬೇಸರಗೊಂಡು ಹೃಷಿಕೇಶಕ್ಕೆ ತೆರಳಿದ್ದರು. ಸ್ವಾಮಿ ಶಿವಾನಂದರ ಮಾತಿನಲ್ಲಿ ವಿಶ್ವಾಸವಿರಿಸಿ ಊರಿಗೆ ಮರಳಿದರು. ನಂತರ ನಡೆದದ್ದನ್ನೆಲ್ಲ ನೀವೂ ನಾವೂ ಹಲವನ್ನು ಕೇಳಿ, ಕೆಲವನ್ನು ನೋಡಿ ತಿಳಿದುಕೊಂಡಿದ್ದೇವೆ.

ನಮ್ಮ ಹಾವಾಡಿಗ ರಾಂಗ್ ವೇಷ್ ವರನ ವಿಷಯದಲ್ಲಿ ಮಾತ್ರ ಹಾಗಿಲ್ಲ. ಕಾಮಿಯ ಜಾತಕವನ್ನು ಯಾವುದೋ ಜ್ಯೋತಿಷಿ ತಿದ್ದುಕೊಟ್ಟಿದ್ದಾನೆ. ಜಾತಕವನ್ನೇನೋ ತಿದ್ದುಕೊಟ್ಟು ಇಷ್ಟರವರೆಗೆ ಕುಣಿಯಲು ಆಸ್ಪದ ಮಾಡಿಕೊಟ್ಟ ಆ ಜ್ಯೋತಿಷಿ, ಮಾಣಿಯ ಗ್ರಹಗತಿಯನ್ನೇನಾದರೂ ತಿದ್ದಲು ಸಾಧ್ಯವಾಯಿತೇ? ಇಲ್ಲ. ಅದು ಹುಟ್ಟಿದಾಗಲೇ ನಿರ್ಧರಿತವಾಗಿದ್ದು. ಬಣ್ಣ ಹೊಡೆದ ಮಾತ್ರಕ್ಕೆ ಕಾಗೆ ಬೆಳ್ಳಗಾದರೂ ಹೊಡೆದ ಬಣ್ಣ ಶಾಶ್ವತವಲ್ಲ, ಕರಿನಾಯಿಯನ್ನು ತೊಳೆದು ಬಿಳಿನಾಯಿ ಮಾಡಲಾಗದು ಎಂದು ತೆನಾಲಿ ಹೇಳಿದ್ದಾನೆ.

ಜಾತಕದಲ್ಲಿ ಕಾಮಕೇಳಿಯೇ ಬರೆದಿದ್ದರೆ ಅದನು ಯಾರೂ ತಪ್ಪಿಸಲಾರರು. ಇನ್ನೊಂದು ಮಾತನ್ನು ಹೇಳಬೇಕಿಲ್ಲಿ-ಸ್ಥಾನಬಲದಿಂದ ಕೆಲವು ಕಾಲ ಯಾರೇ ಅಂತಹ ಸೀಟಿನಲ್ಲಿದ್ದರೂ ಕೆಲಸಗಳನ್ನು ಸಲೀಸಾಗಿ ನಡೆಸಬಹುದು. ಮುಂಬೈ ಲೋಕಲ್ ರೈಲ್ವೆಯಲ್ಲಿ ಹತ್ತು ನಿಂತರೆ ಸಾಕು, ನೀವೇ ಮುಂದಕ್ಕೆ ಹೋಗಬೇಕೆಂದಿಲ್ಲ, ಜನಸಂದಣಿಯೇ ನಿಮ್ಮನ್ನು ಡಬ್ಬದೊಳಗೆ ಮುಂದಕ್ಕೆ ಕರೆದೊಯ್ಯುತ್ತದೆ. ಅದೇ ರೀತಿಯಲ್ಲಿ ಮಾಣಿ ಸೀಟಿನಲ್ಲಿ ಕೂತಾಗಲೂ ಆಗಿದ್ದು. ಅದು ಭಕ್ತಶಕ್ತಿಯೇ ಹೊರತು ಯಾವುದೇ ರಾಂಗಾನುಗ್ರಹವಲ್ಲ.

ಇನ್ನೊಂದು ವಿಚಿತ್ರವನ್ನಿಲ್ಲಿ ಗಮನಿಸಬೇಕು. ಇಬ್ಬರ ಜಾತಕಗಳು ಆಯ್ಕೆಗೊಂಡಿದ್ದರಲ್ಲಿ ಇಬ್ಬರಿಗೂ ಸನ್ಯಾಸ ಯೋಗವಿರಬೇಕಾಯ್ತಲ್ಲವೇ?ಹಾಗಾದರೆ ಸನ್ಯಾಸ ಯೋಗವಿದ್ದ ಕುಲಪತಿ ಬಾವಯ್ಯ ಸಾಮಾನ್ಯ ಸಂಸಾರಿಗಿಂತ ದೊಡ್ಡ ಸಂಸಾರಿಯಾಗಿ (ಅಂದರೆ ಹೋದಲ್ಲೆಲ್ಲ ಹೆಂಗಸರ ಸಂಬಂಧ-ಮಕ್ಕಳು) ಮತ್ತೂ ಸರಿಯಾಗಿ ಹೇಳಬಹುದಾದರೆ ’ವಿಶ್ವ ಕುಟುಂಬಿ’ಯಾಗಿ ಕಚ್ಚೆಹರಿದುಕೊಂಡು ಬದುಕುತ್ತಿರುವುದೇಕೆ? ಹೋಗಲಿ ಆಯ್ಕೆಗೊಂಡು ’ಜಗದ್ವಿಖ್ಯಾತ ಸೀಟೆ’ಂದು ತಾವೇ ಕೊಚ್ಚಿಕೊಳ್ಳುವ ಸೀಟನ್ನೇರಿದ ಮಾಣಿಯ ಕತೆಯಾದರೂ ಎಂಥದು? ಸನ್ಯಾಸ ಯೋಗ ಇರುವ ಲಕ್ಷಣದ ಜಾತಕ ಇವರದ್ದೇ? ಬಾವಯ್ಯ ಕೋಳಿಮೊಟ್ಟೆ ಆಮ್ಲೆಟ್ ಪ್ರಿಯನಾಗಿ ಹೆಣ್ಣುಬಾಕನಾಗಿರುವುದು ಸನ್ಯಾಸದ ಇನ್ನೊಂದು ರೂಪವೇ?

ಇದರಿಂದಲಾದರೂ ಕುರಿಭಕ್ತರು ಅರ್ಥಮಾಡಿಕೊಳ್ಳಬೇಕಿತ್ತು. ಜಾತಕ ಮೂಲ ಸ್ವರೂಪದ್ದಲ್ಲ, ಬದಲಾಯಿಸಿದ್ದು. ಸ್ವಾಮಿ ಹುದ್ದೆಗೆ ಸ್ಕೆಚ್ ಹಾಕಿಯೇ ಅದನ್ನು ನಡೆಸಿದ್ದು. ಅಪ್ಪನ ಆಶೀರ್ವಾದದಿಂದ ಮಾಣಿ ಕೆಲವರ ಕಾಲು ಹಿಡಿದ. ಆಯ್ಕೆಗೊಂಡು ಮಜಾ ಉಡಾಯಿಸುತ್ತ ಈಗ ಆಯ್ಕೆ ಮಾಡಿದವರ ತಲೆಯ ಮೇಲೆ ಮೊಟಕಿದ. ಹೊತ್ತು ಬಂದಾಗ ಕತ್ತೆಯ ಕಾಲನ್ನಾದರೂ ಹಿಡಿಯಲು ಸಿದ್ದನಿರುವ ಮಾಣಿ ಸಮಾಜಕ್ಕೆ ಗುರು. ರಾಂಪಾಲನಿಗಿದ್ದಂತೆ ಅವನಿಗೊಂದಷ್ಟು ಭಕ್ತರು.

ರಾಂಪಾಲನ ಸೇನೆ ತಯಾರಾದಂತೆ ಈಗ ಮಾಣಿಯ ಸೇನೆಯೂ ಸಿದ್ಧಗೊಂಡಿದೆ! ಅದು ’ಸಾಕೇತ ಸೇನೆ’ಯಂತೆ. ರಾಮನ ಹೆಸರನ್ನೂ ಅವನಿಗೆ ಸಂಬಂಧಿಸಿದ ವ್ಯಕ್ತಿಗಳ, ವಸ್ತುಗಳ, ಪ್ರದೇಶಗಳ ಹೆಸರುಗಳನ್ನೂ ಎಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಾಳುಮಾಡಲು ಸಾಧ್ಯವೋ ಅಷ್ಟನ್ನೂ ಮಾಡಿ ಮುಗಿಸಿದ್ದಾರೆ ಮಾಣಿ ಮತ್ತವನ ಬಳಗದವರು. ಹಾಗಾದರೆ ರಾಮನಲ್ಲಿ ಶಕ್ತಿಯೇ ಇಲ್ಲವೇ ಎಂಬಷ್ಟು ಬೇಸರಗೊಂಡಿದ್ದಾರೆ ಅನೇಕರು.

ರಾಮನ ಶಕ್ತಿಯೇ ಈಗೀಗ ಮಾಣಿಯನ್ನು ಕಾಡಲು ಆರಂಭಿಸಿದೆ. ನೀವೆಲ್ಲ ನೋಡಬೇಕು, ಮಾಣಿ ಒಂದಲ್ಲಾ ಒಂದು ದಿನ ಎಷ್ಟು ಏರಿದ್ದನೋ ಅಷ್ಟೇ ಅಧೋಗತಿಯ ಪಾತಾಳಕ್ಕೆ ಇಳಿಯುತ್ತಾನೆ. ಆಗ ಹಳದೀ ತಾಲಿಬಾನಿಗರು ಠುಸ್ ಪಟಾಕಿ ಹಚ್ಚುತ್ತಾರೆ.

ತುಮರಿಯ ಜೀವನದಲ್ಲಿ ಒಬ್ಬ ವ್ಯಕ್ತಿಯನ್ನು ಕಂಡಿದ್ದಾನೆ. ಆ ವ್ಯಕ್ತಿ ಊರೆಲ್ಲ ಮೆರೆದ ಶ್ರೀಮಂತನೆನಿಸಿಕೊಂಡವ. ಅವನೂ ಕಚ್ಹೆಹರುಕನೇ. ಒಳ್ಳೆ ಸಶಕ್ತ ಆಳು. ಈಗಿನ್ನೂ ಎಪ್ಪತ್ತೇಳೆಂಟಿರಬಹುದು. ಬಹಳ ಗಟ್ಟಿಯಾಗಿದ್ದ. ರಾಜಕೀಯ ಮಾಡುತ್ತಿದ್ದ. ಊರಿನ ಎಷ್ಟೋ ಮನೆಗಳನ್ನು ತೊಳೆದಿದ್ದ. ಕೆಲವರ ಜಾಗಗಳನ್ನೆಲ್ಲ ಕಬ್ಜಾಕ್ಕೆ ಪಡೆದು ತನ್ನದೆಂದು ಘೋಷಿಸಿದ್ದ. ಇದ್ದಕ್ಕಿದ್ದಲ್ಲೇ ಅವನಿಗೆ ವಾತ ಶುರುವಾಯಿತು. ಈಗ ಮಲಗಿದಲ್ಲೇ ವ್ಯವಹಾರ. ಬರ-ಹೋಗುವವರು ಹೇಳಿದ್ದೆಲ್ಲ ಅರ್ಥವಾಗುತ್ತದೆ, ತಾನು ಹರೆಯದಲ್ಲಿ ಮಾಡಿದ ಎಲ್ಲಾ ಘನಂದಾರಿ ಕೆಲಸಗಳು ನೆನಪಿಗೆ ಬರುತ್ತವೆ. ಆದರೆ ಓಡಾಡಲು ಸಾಧ್ಯವಾಗದು, ಮಾತನಾಡಲು ಬಾಯಿ ಬಾರದು. ಏನೇನೋ ನೆನಪಾಗಿ ಅಳುತ್ತಾನೆ. ಮಲಗಿದಲ್ಲಿಯೇ ಎಲ್ಲವೂ; ಯಾರೋ ಕೊಟ್ಟರೆ ಊಟ-ಇಲ್ಲದಿದ್ದರೆ ಅಲ್ಲಿಂದಲೇ ದೀನ ನೋಟ. ಮೈಯೆಲ್ಲ ವ್ರಣವಾಗಿದೆ. ಅದರಲ್ಲಿ ಹುಳ(ಕಚ್ಚಿ) ಆಗೋದೊಂದು ಬಾಕಿ ಇದೆ.

ಅವನ ಹರೆಯದ ಅಂಧಾದುಂದಿ ಅಟಾಟೋಪದಲ್ಲಿ ರಾವಣೇಶ್ವರನಂತೆ ಅವನು ನಡೆದುಕೊಂಡು ಕೊಟ್ಟ ತೊಂದರೆಗಳನ್ನು ಅನುಭವಿಸಿದ ದಾರ್ಶನಿಕರಂತಹ ಓರ್ವ ವ್ಯಕ್ತಿ ಇದನ್ನು ಹಿಂದೆಯೇ ಹೇಳಿದ್ದರು. “ನಾನಿರೋದಿಲ್ಲ, ಮುಂದೆ ನೀವೆಲ್ಲ ಅದನ್ನು ನೋಡುತ್ತೀರಿ”ಎಂದು ಹೇಳಿದ್ದರು. ಈಗ ನಾವದನ್ನು (ನಾನು, ಕವಳದ ಗೋಪಣ್ಣ ಇತ್ಯಾದಿಗಳು) ನೋಡಿದ್ದೇವೆ.

ಇಂದಿನ ಕಾನೂನುಗಳ ಮರ್ಮ ಎಲ್ಲರಿಗೂ ತಿಳಿದಿದೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡರೂ ನಿರ್ಣಾಯಕನ ಕೋರ್ಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾಣಿಗೆ ಮುಂದೆ ಮೇಲೆ ಉದಹರಿಸಿದ ಸ್ಥಿತಿಯೇ ಬರಬಹುದು. ಮಾಡಿದ್ದನ್ನು ಮಹರಾಯ ಉಣ್ಣಲೇಬೇಕು, ಅದು ಖಚಿತ. ಮಾಡಿದ್ದು ಒಂದೆರಡು ದ್ರೋಹವಲ್ಲ. ಪರಂಪರೆ ಎಂದುಕೊಂಡರೆ ಅದಕ್ಕೆ ರಿಪೇರಿ ಮಾಡಲಾಗದ ದ್ರೋಹ. ಮರ್ಯಾದಾ ಪುರುಷೋತ್ತಮನ ಹೆಸರನ್ನು ಬಳಸಿಕೊಂಡು ಅವನಿಗೆ ಮಾಡಿದ ದ್ರೋಹ. ನಂಬಿದ ಭಕ್ತರಿಗೆ ಎಸಗಿದ ದ್ರೋಹ. ದೇವರೆಂದು ಹೇಳುತ್ತ ಮಹಿಳೆಯರನ್ನು ಕೂಡಿ ಎಸಗಿದ ದ್ರೋಹ. ಸನ್ಯಾಸ ಧರ್ಮಕ್ಕೆ ಎಸಗಿದ ದ್ರೋಹ. ಶಂಕರರಿಗೆ ಎಸಗಿದ ವಿದ್ರೋಹ.

ಸರಿಯಾಗಿದ್ದರೆ ಸರ್ಕಸ್ ನಡೆಸುವ ಪ್ರಶ್ನೆಯೇ ಬರುತ್ತಿರಲಿಲ್ಲ. ಕುಡಿದವನೇ ಬಾಯಿಯ ’ಘಮ’ ಹೊರಹೊಮ್ಮಬಾರದೆಂದು ಬೀಡಾ ತಿನ್ನುತ್ತಾನಂತೆ. ಅದೇ ವಿಧದಲ್ಲಿ ಮಾಡಿದ್ದನ್ನೆಲ್ಲ ಮುಚ್ಚಿಕೊಳ್ಳಲು ಲೋಕೋಪಕಾರದ ಮುಖವಾಡ. ಅವರ ಉದ್ದಾರ, ಇವರಿಗೆ ಮಾರ್ಗದರ್ಶನ, ಮಹಿಳಾ ಸಬಲೀಕರಣ. ಇದು ವೈಜ್ಞಾನಿಕವಾಗಿ ಡಿಜಿಟಲ್ ಯುಗ. ಒಬ್ಬ ಸ್ವಾಮಿ ವೇಷದವನೇ ಅಷ್ಟೆಲ್ಲ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುತ್ತಾನೆಂತಾದರೆ ಜನರು ಬಳಸುವುದಿಲ್ಲವೇ? ಸಮಾಜದಲ್ಲಿ ಎಲ್ಲರಿಗೂ ತಾವು ಹೇಗೆ ಬದುಕಬೇಕೆಂಬುದು ಗೊತ್ತು. ಮಾಣಿಯ ಪಾಠಶಾಲೆಯಲ್ಲಿ ಅದನ್ನವರು ಹೊಸದಾಗಿ ಕಲಿಯಬೇಕಿಲ್ಲ. ಮಾಣಿ ತನಗೇ ತಾನು ಮಾರ್ಗದರ್ಶನ ಮಾಡಿಕೊಂಡರೆ ಸಾಕು.

ನಾನು ವೇದಿಕೆಗೆ ಬಂದಿರಲಿಲ್ಲ. ಆದರೆ ಬಹಳ ಹಿಂದೆ ರಾಂಪಾಲ್ ನನ್ನು ಹಿಡಿದಾಗಲೇ ಹೇಳಿದ್ದೆ. ಇದೂ ಸಹ ಅಂತದ್ದೇ ಪಾರ್ಟಿ ಅಂತ. ಕೊನೆಗೊಮ್ಮೆ ಎಳೆದೊಯ್ಯುವಾಗ ಕೆಲವರಾದರೂ ಹತರಾಗಬಹುದು. ಆದರೆ ಎಳೆದೊಯ್ಯುವುದು ಗ್ಯಾರಂಟಿ. ಹಳದೀ ತಾಲಿಬಾನಿಗರು ಹೊಸ ಪಂಚೆಗಳನ್ನು ಖರೀದಿಸಿ ಬಿಗಿಯಾಗಿ ಧರಿಸಿ ಮೇಲಿಂದ ಹಳದೀ ಬೆಲ್ಟು ಹಾಕಿಕೊಂಡಿರುವುದು ಒಳ್ಳೇದು. ಯಾಕೆಂದರೆ ಮಾಮಂದಿರು ಯಾವಾಗ ಬರ್ತಾರೆ ಅನ್ನೋದು ಯಾರಿಗೂ ಗೊತ್ತಿರೋದಿಲ್ಲ.

ಅಲ್ಲೀವರೆಗೆ ಮಾಣಿ ಪೂರಿ ಸಾಗು, ಈರುಳ್ಳಿ ಬಜೆ, ಮಸಾಲೆ ದೋಸೆ ಎಲ್ಲದರ ಆಸೆಯನ್ನೂ ತೀರಿಸಿಕೊಳ್ಳಲಿ. ಆಮೇಲೆ ಎಂಟತ್ತು ವರ್ಷ ತಡವಾಗುತ್ತದೆ. ಹೊರಬರುವಾಗ ತಾನೇ ಬೆಳೆಸಿದ ಹಳದೀ ತಾಲಿಬಾನಿಗರು ತಿರುಗಿಬಿದ್ದು ಕಲ್ಲುಹೊಡೆಯಲು ಸಿದ್ಧವಾಗಿರ್ತಾರೆ. ಆಗ ಬಜೆಯೂ ಸಿಗೋದಿಲ್ಲ, ಸೀಟೂ ಸಿಗೋದಿಲ್ಲ. ಏಕಾಂತದ ಹುಡುಗೀರು ಹಾಳಾದೋರನ್ಯಾರನ್ನೋ ಕಟ್ಟುಕೊಂಡು ಹೋಗಿರ್ತಾರೆ. ಖಾಸಗೀ ಅಕೌಂಟೇ ಗತಿ; ಹೀಗಾಗಿ ಈಗಾಗಲೇ ಇರೋದನ್ನೆಲ್ಲ ಕಾಣಸಿಗದ ಖಾಸಗೀ ಅಕೌಂಟಿಗೆ ಜಮಾ ಮಾಡಿಡಲಾಗಿದೆ.

Thumari Ramachandra

source: https://www.facebook.com/groups/1499395003680065/permalink/1646342955651935/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s