ಚೋಲಿ ಕೇ ಪೀಚೆ ಕ್ಯಾಹೈ ಚೋಲಿ ಕೇ ಪೀಚೆ

ಚೋಲಿ ಕೇ ಪೀಚೆ ಕ್ಯಾಹೈ ಚೋಲಿ ಕೇ ಪೀಚೆ

[ಕ್ಷಮಿಸಿ ನಾವ್ ಮಾಡೋದೆಲ್ಲ ತಮಾಷೆಗಾಗಿ]

“ಜಗದ್ಗುರು ಹಾದರೇಶ್ವರ ಹಾರುತಿ ಸ್ವಾಮೀ ಮಹಾರಾಜ್ ಕೀ ಜೇಏಏಏಏಏಏಏಏಏಏಏಏಏಏಏಏಏಏಏಏಏಈ”

“ಏನದು ಪ್ರಿಯೆ?….ಮನೋರಮೆ, ಯಾರೋ ನರರು ಕೂಗಿದಹಾಗಿದೆಯಲ್ಲಾ? ನೇಪಾಳದಂತೆ ಭೂಕಂಪವಾಯಿತೇ?”

“ಎನ್ನ ಪ್ರೀತಿಯ ಮುದ್ದಣ ನಿನ್ನ ಬಿನ್ನಹಕ್ಕೆ ಒಡಂಬಟ್ಟು ಗಡಾ ನಿನ್ನ ಮನೋರಮೆಯೊಡನೆ ಸಲ್ಲಾಪ ನಡೆಸಲಾರೆಯಾಂ ಗುರುವೇ? ಇಂದು ಹಾವಾಡಿಗ ಹಾದರೇಶ್ವರರದ್ದು ಗುರುಪೂರ್ಣಿಮೆಯ ವಿಶೇಷವಪ್ಪುದು ಅರಿವಿಹುದೇ?”

“ಅಪ್ಪುದಪ್ಪುದು ಪ್ರಿಯೇ, ಚಾರು ಶೀಲೆ….ಎನ್ನ ಶಕ್ತ್ಯಾನುಸಾರ ಅವರ ಮಹಿಮೆಯಂ ಪಾಡಿ ಪೊಗಳಲ್ಕೆ ಗುರುದೇವ ಹಾದರೇಶ್ವರ ಕೃಪೆಯಿರಲಿ ಎಮಗಿಂದು. ಚತುರ್ಮೋಸದ ಸಮಯಂ ನಿನ್ನ ಮನದ ಬೇಗುದಿ ಕಳೆಯಲ್ಕೆ ಇದೋಂ ಬರೆದೆ ಜಗದ್ಗುರು ಹಾದರೇಶ್ವರ ಹಾರುತಿ ಗಾತ್ರ ಚತುರ್ಮೋಸ ಚರಿತೆಯಂ.. ಮನವಿಟ್ಟು ಕೇಳುವಂತವಳಾಗು ಪ್ರಿಯೆ”

ಅಲ್ಲಾಡಿಸುತ್ತ ಹಾದರೇಶ್ವರರು ಪೀಠ ಏರಿದರು. ಕೊಡೆ ಹೋ ಯ್ ಕೊಡೆ, ಕೊಡೆ ಯಾವಾಗಲೂ ಅಲ್ಲಾಡುತ್ತಲೇ ಇರಬೇಕು. ಯಾಕೆಂದರೆ ನಮ್ಮ ಹಾದರೇಶ್ವರ ಹಾರುತಿ ಎಲ್ಲರಿಗಿಂತ ದೊಡ್ಡ ಸ್ವಾಮಿ ಮತ್ತು ಎಲ್ಲರಿಗಿಂತ ಎತ್ತರಕ್ಕೆ ಕುಳಿತುಕೊಳ್ಳುವ ಸ್ವಾಮಿ. ಕಲಾಂ ರಂತೆ ಸರಳ ಜೀವನ ನಡೆಸುತ್ತ ಜನಪ್ರಿಯರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಹಾಕಿಸುತ್ತ ಸರಳನ್ನು ಎಣಿಸಲು ಸಿದ್ಧಗೊಳ್ಳುತ್ತಿರುವ ’ರಾಂಗ್ ರಾಧೆಯರ’ ಮುರಳಿ(ಮೊಬೈಲ್)ಲೋಲ ರಾಂಗ್ ವೇಷ ವರ. ಲೋಲ ಎಂದು ಯಾರಾದರೂ ಹುಡುಗಿಯರಿದ್ದರೆ ಹೆಗಲು ಒರೆಸಿಕೊಳ್ಳಬಹುದಾದಷ್ಟು ಮಹಿಳಾ ಜನಪ್ರಿಯ.

ಹಾದರದ ಏಕಾಂತಕ್ಕೆ ತಕ್ಕಂತದೇ ಎಲ್ಲಾ ವ್ಯವಸ್ಥೆ. ಬಟನ್ ಒತ್ತಿರಿ, ಬುಕ್ ಮಾಡಿಕೊಳ್ಳಿರಿ. ನಮ್ಮ ಸ್ವಾಮಿಗಳ ಜೊತೆ ಚತುರ್ಮೋಸದ ಸಮಯದಲ್ಲಿ ಒಂದು ದಿನ ಕಳೆಯಲಿಕ್ಕೆ ಕೇವಲ ಎರಡು ಲಕ್ಷ.(ಇದು ಗಂಡು ಕುರಿಗಳಿಗೆ). ಹೆಣ್ಣು ಕುರಿಗಳಿಗಾದರೆ ನಮ್ಮ ಹಾದರೇಶ್ವರರೇ ಕೊಡುತ್ತಾರೆ ಎರಡೂ ಕೈಯಲ್ಲಿ ಎರಡೆರಡು ಲಕ್ಷ. ಬನ್ನಿ ಬನ್ನಿ…..’ಮಾತೆ’ಯರಿಗೆ ಮುಂದೆ ಬರಬೇಕು.

ಯಾರಲ್ಲಿ ಸೈಲೆನ್ಸ್, ಎಲ್ಲರೂ ಶಾಂತವಾಗಿ ಕೂತುಕೊಳ್ಳಿ. ಓ ಅದ್ಯಾರ್ರೀ ನಿಂತವರು ಓ ನಮ್ಮ ಎಲ್.ಐ.ಸಿ ಯಲ್ಲವೇ ಆಲ್ ರೈಟ್ ಇದ್ಯಾರು ಶರಚ್ಚಂದ್ರರು…..ಓ ಅವರೂ ಇದ್ದಾರೋ?ಹಾಂ …ಹಾಂ…. ಊರಿಗೆ ಬುದ್ಧಿ ಹೇಳುವ ಅವರೂ ಜೈಕಾರದ ಬಳಗದಲ್ಲಿದ್ದಾರೆ. ಏನಿದು ದ್ಯಾವೇಗೌಡರ ಚುನಾವಣಾ ಪ್ರಚಾರಕ್ಕೆ ಜನ ಸೇರಿದ ಹಾಗಿದೆಯಲ್ಲ. ಬಸ್ಸು ಗಿಸ್ಸು ಮಾಡಿರಬಹುದೇ? ಛೆ ಛೆ… ಅದನ್ನೆಲ್ಲ ಕೇಳಬಾರದು. ನಮ್ಮ ತೊನೆಯುವ ಸಂಸ್ಥಾನ ಕೈಮುಗೀಬೇಕ್ ಅಡ್ಡ ಬೀಳಬೇಕ್ ಹಳದಿ ಅಕ್ಕಿ ಹಿಡಿದುಕೊಂಡು ಹೋಗುತ್ತಿರಬೇಕು. ಶ್ಶ್ ……….

“ಮಂತ್ರಮೂಲೆ ಮಾವಿನಕಾಯಿ
ತಂತ್ರ ಮೂಲೆ ಅಥರ್ವಣ
ಧ್ಯಾನಮೂಲೆ ಪಾನ ಮೂಲಂ
ಸರ್ವಮೂಲೆ ಸಗಣಿಮುದ್ದೆ

ಬರೇ ಕಾಮ
.
.
.

ನಾವು ಸಗಣಿಮುದ್ದೆಯನ್ನೇಕೆ ಬಳಸುತ್ತೇವೆ ಎಂಬುದನ್ನು ನೀವೆಲ್ಲ ತಿಳಿದುಕೊಳ್ಳಬೇಕು. ಗಾತ್ರ ಚತುರ್ಮೋಸದಲ್ಲಿ ನಮಗೆ ನಮ್ಮದೇ ಸಂತಾನಗಳನ್ನು ನೋಡುವ ಸೌಭಾಗ್ಯ. ಮಕ್ಕಳ ಸಗಣಿಗೂ ದನದ ಸಗಣಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ನಮ್ಮ ಬಾವಯ್ಯ ಹೇಳಿದ್ದರಿಂದ ನಮ್ಮ ಮಕ್ಕಳ ಸಗಣಿಯನ್ನೇ ನಮ್ಮ ಭಕ್ತರೆಲ್ಲ ಅತಿಪವಿತ್ರವೆಂದು ಬಳಸಬೇಕು.

ಮಕ್ಕಳ ಸಗಣಿಯ ಘಮದಲ್ಲೂ ಒಂದು ವಿಧವಾದ ವೈಶಿಷ್ಟ್ಯವಿದೆ; ಆಮೋದವಿದೆ, ಪ್ರಮೋದವಿದೆ; ’ಪ್ರಮೋದಾ’ವೂ ಇರಬಹುದು. ನಮ್ಮ ಸಮಾಜದವರಿಗೆ ಮಕ್ಕಳನ್ನು ಮಾಡೋದು ಹೇಗೆ ಮತ್ತು ಅವರನ್ನು ಸಾಕೋದು, ಬೆಳೆಸೋದು, ದೊಡ್ಡಮಾಡೋದು ಹೇಗೆ ಎಂದು ತಿಳಿಸುವ ವಿವಿಧ ’ಕಾಮ’ಗಾರಿ ತರಬೇತಿ ಶಿಬಿರಗಳನ್ನು ನಾವು ಗಾತ್ರ ಚತುರ್ಮೋಸದಲ್ಲಿ ಏರ್ಪಡಿಸಿದ್ದೇವೆ.

ನಮ್ಮ ಶಿಷ್ಯ ಸಮೂಹದವರು ಅತಿ ಬುದ್ಧಿವಂತರು. ’ಬುದ್ಧಿವಂತರಿಗೆ ಮೂರುಕಡೆ’ ಎಂಬ ಮಾತಿದೆಯಲ್ಲ? ಅದೊಂದು ದಿವ್ಯ ಭವ್ಯ ಕತೆ- ಒಂದಾನೊಂದು ಕಾಲದಲ್ಲಿ ಅತಿ ಬುದ್ಧಿವಂತ ಬ್ರಾಹ್ಮಣನೊಬ್ಬ ಬೀದಿಯಲ್ಲಿ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ನೋಡಿ, ನಮಗೆ ಪಾಪ ಅನ್ನಿಸ್ತದೆ. ನಾವೆಲ್ಲ ಸದಾ ಅಂತವರ ಕಾಸಿನಲ್ಲೇ ಐಶಾರಾಮೀ ಕಾರು ಖರೀದಿಸಿ ಅಥವಾ ಬೇರೆಯವರ ಕಾರನ್ನು ಬಳಸಿಕೊಂಡು ಹಾಯಾಗಿ ಓಡಾಡುತ್ತೇವೆ.

ಕತೆ ಮುಂದುವರಿಸೋಣ. ಬೀದಿಯಲ್ಲಿ ಬರಿಗಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ. ನಮಗಾದರೆ ಮರದಿಂದ ಹಿಡಿದು ಬೆಳ್ಳಿ ಚಪ್ಪಲಿ …ಬಂಗಾರದ ಚಪ್ಪಲಿಗಳ ವರೆಗಿನ ವ್ಯವಸ್ಥೆಯಿದೆ. ಇರಲಿ. ಹಾಗೆ ಅವಸರದಲ್ಲಿ ಹೋಗುವಾಗ ಎಲ್ಲೋ ನೋಡುತ್ತ ಮುಂದೆ ಸಾಗುತ್ತಿದ್ದ. ಹಾದಿಯಲ್ಲಿ ನೆಟ್ಟಗಿನ ವಸ್ತುವೊಂದನ್ನು ತುಳಿದುಬಿಟ್ಟ.

ತುಳಿಯುವಾಗ ಗೊತ್ತಾಗಲಿಲ್ಲ. ತುಳಿದಮೇಲೆ ಗೊತ್ತಾಯ್ತು ಏನೋ ಮೆತ್ತಗಿನ ವಸ್ತು ಕಾಲಿಗೆ ಅಂಟಿಕೊಂಡಿದೆ ಎಂದು. ಏನೆಂದು ನೋಡುವ ಸಲುವಾಗಿ ಆ ವಸ್ತುವನ್ನು ಕೈಯಲ್ಲಿ ತಿಕ್ಕಿ ನೋಡಿದ. ಸ್ಪಷ್ಟವಾಗಿ ಗೊತ್ತಾಗಲಿಲ್ಲ. ತಡಮಾಡದೆ ಏನಿರಬಹುದು ಎಂಬ ಕಾತರದಲ್ಲಿ, ಕೈಗೆ ತಗುಲಿದ ವಸ್ತುವನ್ನು ಮೂಗಿಗೆ ಹಿಡಿದು ನೋಡಿದ. ಅದು ಮೂಗಿಗೂ ಸ್ವಲ್ಪ ಅಂಟಿಕೊಂಡಿತು. ಮತ್ತೇನಿಲ್ಲ…..ತುಳಿದದ್ದು ನಾಯಿ ಸಗಣಿಯನ್ನು. ಅದರ ’ಘಮ’ ಮೂಗಿಗೆ ಬಡಿಯುವವರೆಗೂ ಬುದ್ಧಿವಂತನಿಗೆ ಅದು ನಾಯಿ ಸಗಣಿ ಎಂದು ಗೊತ್ತಾಗಲಿಲ್ಲ.

ಹೀಗಾಗಿ ನಮ್ಮ ಸಮಾಜ ಮೊದಲಿನಿಂದಲೂ ಅತಿ ಬುದ್ಧಿವಂತರ ಸಮಾಜ ಎಂದು ಪ್ರಸಿದ್ಧವಾಗಿದೆ. ಎಲ್ಲರೂ ನಾಯಕರೇ, ಎಲ್ಲರೂ ಹೆಗಡೆಗಳೇ. ಎಲ್ಲರೂ “ನಾವಿದ್ದೇವೆ”, “ನಾವಿದ್ದೇವೆ “ಎಂದು ನಮ್ಮವರನ್ನೇ ಕೆಲವರನ್ನು ವಿರೋಧಿಸುವ ಛಾತಿಯನ್ನು ತೋರಿಸುತ್ತಾರೆ. ನಮ್ಮ ಸಮಾಜವನ್ನು ಒಡೆದಾಳುವುದು ಬಹಳ ಸುಲಭ. ಯಂಕ ಭಟ್ಟನಿಗೂ ಮಂಕಭಟ್ಟನಿಗೂ ದೋಸ್ತಿ ಇದ್ದರೆ, ಯಂಕ ಭಟ್ಟ ಸರಿಯಿಲ್ಲ ಎಂದು ಮಂಕಭಟ್ಟನಿಗೆ ಹೇಳಿಬಿಡೋದು, ಹಾಗೇ ಮಂಕ ಭಟ್ಟ ಸರಿಯಿಲ್ಲ ಅಂತ ಯಂಕ ಭಟ್ಟನಿಗೆ ಹೇಳಿಬಿಡೋದು. ಬಿತ್ತು ಬೆಂಕಿ ಅತಾನೇ ಲೆಕ್ಕ…ತಗೊಳಿ. ನಮ್ಮ ಬಾವಯ್ಯ ಇಂತ ಬೆಂಕಿ ಹಚ್ಚುವ ಕೆಲಸದಲ್ಲಿ ಪರಮಗುರು.

ಗುರು ಎಂದ ತಕ್ಷಣ ನೆನಪಾಯ್ತು. ಬದುಕೋದಕ್ಕೆ ಹಿಂದೆ ಅರವತ್ನಾಲ್ಕು ವಿದ್ಯೆಗಳನ್ನು ಹೇಳುತ್ತಿದ್ದರು. ಅವುಗಳಲ್ಲೆ ಕೆಲವು ಸ್ವಭಾವದಿಂದ ಉಚ್ಛವಾದವು, ಇನ್ನೂ ಕೆಲವು ನೀಚವಾದವು. ನೀಚವಿದ್ಯೆಗಳನ್ನೆಲ್ಲ ಕಲಿಯೋದು ಬಹಳ ಸುಲಭ ಮತ್ತು ಅವುಗಳಿಂದ ಆಮಿಷವೊಡ್ಡಿ ಭಕ್ತಕುರಿಗಳನ್ನು ಮರುಳುಮಾಡೋದು ಇನ್ನೂ ಸುಲಭ. ಹೀಗಾಗಿ ನಮ್ಮ ಕುಲಪತಿ ಬಾವಯ್ಯ ಅಂತಹ ನೀಚ ವಿದ್ಯೆಗಳಲ್ಲೆಲ್ಲ ನಿಷ್ಣಾತನಾಗಿರುವುದರಿಂದ ಅವನನ್ನು ಸದಾ ಹತ್ತಿರಕ್ಕೇ ಇರಿಸಿಕೊಂಡಿದ್ದೇವೆ ನಾವು. ಯಾರಾದರೂ ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆಂದರೆ ಅವರ ಮನೆಯೊಳಗೇ ಒಡೆದಾಳುವ ಸೂತ್ರವನ್ನು ಪ್ರಯೋಗಿಸಬಲ್ಲ ’ಆಸ್ಥಾನ ವಿದ್ವಾನ್’ ಅವನಾಗಿರೋದರಿಂದ ಯಾರನ್ನು ಎಲ್ಲಿ ಹೇಗೆ ಹಣಿಯಬೇಕು ಎಂದು ಸಲಹೆ ನೀಡೋದು ಸಹ ಅವನೇ ಆಗಿದ್ದಾನೆ.

ಎರಡು ದಶಕಗಳಿಂದ ನಿತ್ಯ ಭಕ್ತರ ದಾಸೋಹದಲ್ಲೇ ಬದುಕುತ್ತ, ಅವರು ಕೊಟ್ಟಿದ್ದರಲ್ಲಿ ಬಹುತೇಕ ಭಾಗವನ್ನು ಸ್ವಾಹಾ ಮಾಡಿರುವ ಬಾವಯ್ಯನಿಗೆ ಗಾತ್ರ ಚತುರ್ಮೋಸದಲ್ಲಿ ’ಗುರುಸೇವಾ ಕಲಂಧರ’ ಎಂದು ಬಿರುದು ಕೊಡುವವರಿದ್ದೇವೆ ನಾವು. ಪ್ರಶಸ್ತಿ ಬಂಗಾರದ ಫಲಕ, ಶಾಲು, ಪೇಟ ಜೊತೆಗೆ ಒಂದಷ್ಟು ಕೋಟಿ ನಗದನ್ನು ಒಳಗೊಳ್ಳಲಿದೆ. ಪಾಪ ಎರಡು ದಶಕದಿಂದ ನಮ್ಮ ಜೊತೆ ಹಲವು ಹುಡುಗಿಯರನ್ನೂ ಹೆಂಗಸರನ್ನೂ ಹಂಚಿಕೊಂಡು ಹಗಲಿರುಳು ಹಾರಿ ಹಾರಿ ಅತ್ಯಂತ ಅಮೋಘವಾಗಿ ಶ್ರಮದಾನ ಮಾಡಿದ್ದರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.

ನಮ್ಮ ವಂದಿಮಾಗಧರು ಈಗ ಸಂಖ್ಯಾಬಲದ ಪ್ರಶ್ನೆ ಎತ್ತಿದ್ದಾರೆ. ಧೈರ್ಯವಿದ್ದರೆ ಮುಂದೆಬರಲಿ. ಸಮಾಜದಲ್ಲಿ ನಾಲ್ಕರಲ್ಲಿ ಮೂರು ಭಾಗ ತಮ್ಮ ಕಡೆಗೇ ಇದೆ. ಯಾರೋ ನಾಲ್ಕುಜನ ಸೇರಿ ಕೂಗಿದರೆ ಊರು ಹಾಳುಬೀಳೋದಿಲ್ಲ. ಆನೆ ಬೀದಿಲಿ ಹೋಗುವಾಗ ನಾಯಿ ಬೊಗಳಿದರೆ ಆನೆಗೇನೂ ನಷ್ಟವಾಗೋದಿಲ್ಲ ಎಂದು ತರಾತುರಿಯಲ್ಲಿ ತರಹೇವಾರಿ ಹೇಳಿಕೆಗಳನ್ನು ಕೊಟ್ಟಿದ್ದಾರೆ.

ನಮ್ಮನ್ನು ಸೀಟಿಗೆ ಆಯ್ಕೆ ಮಾಡುವಾಗ ಸಂಖ್ಯಾಬಲ ಹೇಳುವುದನ್ನು ಗಮನಕ್ಕೆ ತೆಗೆದುಕೊಂಡಿರಲಿಲ್ಲ ಎಂಬುದು ನಮಗೆ ನೆನಪಿದೆ; ಅದನ್ನು ಬಹಿರಂಗಪಡಿಸಬಾರದು. ನಮ್ಮ ಆಯ್ಕೆ ನಡೆದಿದ್ದು ಕೇವಲ ಕೆಲವೇ ತಲೆಗಳ ಇಚ್ಛೆಯಂತೆ. ಆ ತಲೆಗಳಲ್ಲಿ ಹಲವು ಈಗಿಲ್ಲ; ಇರುವ ತಲೆಗಳಿಗೆ ತಲೆಯೇ ಸರಿಯಿಲ್ಲ ಎಂದು ನಾವು ಭೋಂಗು ಬಿಟ್ಟಿದ್ದೇವೆ. ನಮ್ಮನ್ನು ಆಯ್ಕೆ ಮಾಡಿದ ತಲೆಗಳಿಗೆ ಸ್ವಲ್ಪ ತಲೆಯಿದ್ದರೆ ಈ ರೀತಿ ಆಗುತ್ತಿರಲಿಲ್ಲ.

ಇನ್ನೊಂದು ಅನಿಸಿಕೆ ನಮಗಿದೆ. ಮೂಲ ಪರಂಪರೆಯನ್ನು ಮರೆತು ಸ್ಥಾಪಿಸಿದ ಮಠವಿದು. ಮೂಲ ಹುಡುಕಿದರೆ ಅಲ್ಲಿಗೇ ಹೋಗುತ್ತದೆ. ಹೀಗಾಗಿ ಆ ಕಾಲದಿಂದ ಅಲ್ಲಿನ ಕ್ಷೋಭೆ ಇರಬಹುದು. ನಮ್ಮಂತೆಯೇ ಹಲವು ಪಂಗಡಗಳಿದ್ದು ಎಲ್ಲವೂ ತಮ್ಮದೇ ಬೇರೆ ತಮ್ಮದೇ ಬೇರೆ ಎಂದುಕೊಂಡರೆ ಆಗ ಮೂಲಮಠಕ್ಕೆ ತೊಂದರೆಯಾಗದೇ? ಹಾಗೆ ಮಾಡುವುದು ಸರಿಯೇ? ನಮ್ಮ ಘಾಸೀ ರಾಮನೇನೋ ಹೇಳ್ತಾನೆ “ಪೂರ್ವಜರಿಗೆ ಅಪಚಾರ ಮಾಡಿದಂತಾಗುತ್ತದೆ” ಎಂದು. ಒಂದಾನೊಂದು ಕಾಲದಲ್ಲಿ ಪೂರ್ವಜರು ಮಾಡಿದ ಅಪಚಾರದ ಫಲವನ್ನೇ ನೀವೀಗ ಉಣ್ಣುತ್ತಿದ್ದೀರಿ ಎಂದು ಅವನಿಗೆ ಹೇಳುತ್ತಿದ್ದೇವೆ ನಾವು.

ಸುದ್ದಿ ಬಿತ್ತರಿಸುವ ನಮ್ಮ ಸಮಾಜದ ನೆಗಡೆಗಳು ನಮ್ಮ ಪ್ರಸಾದ ತೆಗೆದುಕೊಂಡು ನಮ್ಮ ಪ್ರಚಾರಕ್ಕೆ ಇಳಿಯುತ್ತವೆ. ನಮಗೆ ಬೇಕಾದ್ದನ್ನು ನಮಗೆ ಬೇಕಾದಂತೆ ಬಣ್ಣಿಸುತ್ತವೆ. ಅದು ಜಾಹೀರಾತಿನ ರೂಪದ ಲೇಖನವಾಗಿರಬಹುದು ಅಥವಾ ನಮ್ಮ ಘನಂದಾರಿ ಯೋಜನೆಗಳನ್ನು ಬಣ್ಣಿಸುವ ದೃಶ್ಯ ಮಾಧ್ಯಮವೇ ಆಗಿರಬಹುದು. ಎಲ್ಲೆಲ್ಲೂ ಇಮ್ಮಡಿ, ತಿರುಪತಿ ತಿಮ್ಮಪ್ಪ ಮತ್ತು ’ಮಿತ್ರ’ಬಳಗದ ಕೈವಾಡವೇ. ರಾಂಗಾನುಗ್ರಹದಿಂದ ಒಬ್ಬ ಸೀಟು ಕಳೆದುಕೊಂಡ, ಇನ್ನೊಬ್ಬ ಸೀಟು ಬಿಟ್ಟು ಬೇರೆ ಸೀಟಿಗೆ ಹೋಗಬೇಕಾಯ್ತು, ಇನ್ನೊಬ್ಬ ಹುಟ್ಟಿಕೊಂಡಿದ್ದಾನೆ-ಅವನಿಗೆ ಈಗಷ್ಟೇ ಪ್ರಸಾದ ಸಿಕ್ಕಿದೆ; ಇನ್ನು ಮೇಲೆ ರಾಂಗಾನುಗ್ರಹದ ಪರಿಣಾಮವಾಗಬೇಕಷ್ಟೆ.

ಇಂದು ನಮ್ಮ ಗಂಟಲು ಸರಿಯಿಲ್ಲ. ಬೆಳಗಿನಿಂದ ಢೋಂಗೀ ಪೂಜೆಯಲ್ಲಿ ವ್ಯಸ್ತರಾಗಿದ್ದೆವು. ಬಾವಯ್ಯ ಕಂಠ ಬಿಗಿದುಕೊಂಡು “ಜಗದ್ಗುರು ಮಹಾಸಂಸ್ಥಾನದವರು”, “ಜಗದ್ಗುರು ಮಹಾಸಂಸ್ಥಾನದವರು” ಎಂದು ಕೂಗುತ್ತಲೇ ಇದ್ದಾನೆ. ಹೆಚ್ಚಿಗೆ ಮಾತಾಡಲಿಕ್ಕೆ ಹೋಗಿ ಸಿಕ್ಕಾಕಿಕೊಂಡರೆ ಒಳಗೆ ಹೋದಮೇಲೆ ಚೆನ್ನಾಗಿ ಒದೆಯುತ್ತಾನೆ. ನಾಳೆಯಿಂದ ನಮ್ಮ ಸಂತಾನಗಳು ಬರುತ್ತವೆ. ಬಂವರು ಆಡಿಸಲು ತ್ರಾಣ ಬೇಕಲ್ಲ? ಹೀಗಾಗಿ ಈಗ ಕತೆಗೆ ಇಲ್ಲಿಯೇ ಅಂತ್ಯ ಮಂಗಲ ಹಾಡೋಣ.

ಬರೇ ಕಾಮ”

“ಎನ್ನ ಕಸುವನ್ನೆಲ್ಲ ಧಾರೆಯೆರೆರ್ದು ಮುನ್ನಂ ಬಸಿದಿಟ್ಟ ಮಾಹಿತಿಗಳಂ ಮುದದೊಳ್ ತಂದೊಟ್ಟಿ ಬಿನ್ನಾಣದೀ ಹೊಸೆದೆನೀ ಕತೆಯಂ ಪ್ರಿಯೇ…ಮನೋರಮೆ…ನಿನಗೊಪ್ಪಿತವೇ?”

“ಅಯ್ಯಾ ಮುದ್ದಣ….ನೀನು ಅದೇ ನಿನ್ನ ಹಳಗನ್ನಡದಲ್ಲಿ ಗದ್ಯಂ ಪದ್ಯಂ ಎನ್ನುತ್ತಿದ್ದರೆ ನನಗೆ ಕೇಳಲು ಬೇಸರ ಕಣಾ… ನಾಮೀಗ ಪುನರ್ಜನ್ಮದಲ್ಲಿರುತ್ತ ಜಗದ್ಗುರು ಹಾದರೇಶ್ವರ ಹಾರುತಿ ಚರಿತೆಯಂ ಪಾಡುತ್ತ ಪೊಸದೇನಾದರೂ
ಹೊಸೆಯಲಪ್ಪಿದೇ?”

“ಆಗಾದಾಗದು ಅದು ಎನಗೆ ವರ್ಜ್ಯಂ ಎನ್ನ ಮೂಲ ಗದ್ಯಕಾವ್ಯಕ್ಕೆ ಭಂಗ ಬಪ್ಪುದೆಲೆ ಮರುಳೇ ಮನೋರಮೆ…..ನಿನಗಾಗಿ ನಾನೇನಂ ಬರೆವೆ ಪೊಸತನಬೇಕಾದರೆ ಪಿಂದಿಯ ರಿಕಾರ್ಡು ಕೇಳುಮಿದೋ ನಿನಗಾಗಿ ಪ್ಲೇ ಮಾಳ್ಫೆಂ”

ಚೋಲೀ ಕೇ ಪೆಚೇ ಕ್ಯಾ ಹೈ ಚೋಲೀ ಕೇ ಪೀಚೇ ………………

Thumari Ramachandra

source: https://www.facebook.com/groups/1499395003680065/permalink/1646099569009607/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s