ಹಳಿ ತಪ್ಪಿದ ರೈಲಿಗೆ ಬೆಲೆತೆರಬೇಕಾಗಿದೆ.

ಹಳಿ ತಪ್ಪಿದ ರೈಲಿಗೆ ಬೆಲೆತೆರಬೇಕಾಗಿದೆ.

ನಿಮಗೆ ವಿಚಿತ್ರವೆನಿಸಬಹುದು. ಅಷ್ಟಾಂಗಯೋಗದ ಸಿದ್ಧಿ ಮನುಷ್ಯನನ್ನು ದೈವತ್ವದೆಡೆಗೆ ಕರೆದೊಯ್ಯುತ್ತದೆ ಎಂಬುದು ಸುಳ್ಳಲ್ಲ. ಸಮರ್ಥರ ಕಾಲದಲ್ಲಿ ಖಾನ್ ಒಬ್ಬ ಮಹಾರಾಷ್ಟ್ರದ ಪ್ರಜೆಯೊಬ್ಬನನ್ನು ಪೀಡಿಸತೊಡಗಿದ್ದ. “ನಿನ್ನ ಹಿಂದೂ ಧರ್ಮಕ್ಕೆ ತಾಕತ್ತು ಇರುವುದು ಹೌದಾದರೆ ಕೋಟೆಯ ಗೋಡೆಯಲ್ಲಿರುವ ಚಿಕ್ಕ ತೂತಿನಲ್ಲಿ ತೂರಿ ಒಳಗೆ ಹೋಗಬೇಕು. ಅದು ಸಾಧ್ಯವಾಗದಿದ್ದರೆ ತಲೆ ಕೊಡಲು ಸಿದ್ಧವಾಗಬೇಕು” ಎಂದು ಷರತ್ತು ವಿಧಿಸಿದ.

ಆ ಪ್ರಜೆ ಸದ್ಗುರು ಸಮರ್ಥರ ಭಕ್ತನಾಗಿದ್ದ. ಜೀವಭಯದಿಂದ ತತ್ತರಿಸಿಹೋದ ಆ ವ್ಯಕ್ತಿ ಸೀದಾ ರಾಮದಾಸರಲ್ಲಿಗೆ ಓಡಿದ. ತನ್ನನ್ನು ಹುಡುಕಿಕೊಂಡು ಬಂದ ವ್ಯಕ್ತಿಯ ಸಮಸ್ಯೆಯನ್ನು ಗುರುಗಳು ಆಲಿಸಿದರು. ಅವರನ್ನೆಲ್ಲ ನಿಭಾಯಿಸುವಾಗ ಆದಷ್ಟೂ ಇಂತಹ ಷರತ್ತುಗಳು ಬರದಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಮರುದಿನ ನಡೆಯಲಿದ್ದ ಪರೀಕ್ಷೆಗೆ ಹೆದರದೆ, ಏಕೋಭಾವದಲ್ಲಿ ಭಜರಂಗ ಬಲಿಯನ್ನು ಧ್ಯಾನಿಸುತ್ತ ಹೋಗಲು ತಿಳಿಸಿದರು.

ಹಲವು ಜನರೆದುರು ಖಾನ್ ಖಡ್ಗ ಹಿಡಿದು ನಿಂತಿದ್ದ. ಪರೀಕ್ಷೆಯ ಸಮಯ ಹತ್ತಿರ ಬಂತು. ಖಾನ್ ಆಜ್ಞಾಪಿಸಿದಾಗ ಆ ಪ್ರಜೆ ಸಮರ್ಥರನ್ನೂ ಭಜರಂಗ ಬಲಿಯನ್ನೂ ನೆನೆಯುತ್ತ ಕೋಟೆಯ ತೂತಿನತ್ತ ಧಾವಿಸಿದ. ಸಹಜ ಸ್ಥಿತಿಯಲ್ಲಿ ದೇಹ ತೂತಿನೊಳಗೆ ಹಾದುಹೋಗಲು ಸಾಧ್ಯವಿರಲಿಲ್ಲ. ನೋಡುತ್ತಿರುವಂತೆ ತನ್ನ ಶರೀರ ಅತಿ ಸಣ್ಣಗಾಗಿದ್ದನ್ನು ಅನುಭವಿಸುತ್ತ ಸಲೀಸಾಗಿ ತೂತು ಹೊಕ್ಕು ಕೋಟೆಯೊಳಗೆ ಹೋದ. ಹಿಂಬಾಲಿಸಿ ಬರುತ್ತಿದ್ದ ಖಾನ್ ದೇಹ ಅದರಲ್ಲಿ ತೂರಿ ಸಾಗಲಿಲ್ಲ! ಸಮರ್ಥರ ಆಶೀರ್ವಾದದಿಂದ ಭಕ್ತನ ಶರೀರ ಕುಗ್ಗಿ ಮತ್ತೆ ಹಿಗ್ಗಿತು.

ಶಿವಾಜಿ ’ಹಿಂದವೀ ಸಾಮ್ರಾಜ್ಯ’ ಅಥವಾ ಮರಾಠಾ ಸಾಮ್ರಾಜ್ಯವನ್ನು ಕಟ್ಟುವ ಮೊದಲು ಅವನಿಗೆ ವಿದ್ಯಾಗುರು ದಾದಾಜಿ ಕೊಂಡದೇವ ಮತ್ತು ತಾಯಿ ಜೀಜಾಬಾಯಿ ಕೆಲವು ನಿಯಮಗಳನ್ನು ವಿಧಿಸಿದ್ದರು-

1. ಬ್ರಾಹ್ಮಣರು ದೇವರ ಸಮನಾದವರು, ಅವರನ್ನು ಕೊಲ್ಲುವುದು ಘೋರ ಪಾಪ. ನಿನ್ನ ಧರ್ಮ ಯುದ್ಧದಲ್ಲಿ ಅವರು ವಿರುದ್ಧ ಬ೦ದರೆ ಎಚ್ಚರಿಸು, ಕೇಳಲಿಲ್ಲವಾದರೆ ಶಿಕ್ಷಿಸು ಅದು ನಿನ್ನ ಧರ್ಮಕ್ಕಾಗಿಯೆ ಆಗಿರಲಿ.

2. ನಿನ್ನ ಧರ್ಮ ಯುದ್ಧದಲ್ಲಿ ಇನ್ನೊಂದು ಧರ್ಮದ ಮಸೀದಿಗಳನ್ನು ಭಗ್ನಗೊಳಿಸಬೇಡ

3. ನಿನ್ನ ಪ್ರಾಣ-ನಿನ್ನ ಧರ್ಮ ಇವೆರಡೂ ಆಯ್ಕೆಗಳಲ್ಲಿ ಮೊದಲು ನಿನ್ನ ಧರ್ಮವಾಗಿರಲಿ

4. ಹಿ೦ದೂ ಸ್ತ್ರೀಯರ ಮಾನಹರಣ ಮಾಡುತ್ತಿರುವ ದುರುಳರನ್ನು ಸದೆಬಡಿಯುವವರೆಗೆ ನಿನ್ನ ಧರ್ಮಯುದ್ಧ ನಿಲ್ಲಿಸಬೇಡ

5. ನೀನ್ನ ಯುದ್ಧ ಬರೀ ಮತಾ೦ಧರ ಜೊತೆ ನಡೆಯಲಿ. ಯಾವುದೇ ಹಿ೦ದೂ ರಾಜರೊ೦ದಿಗೆ ಬೇಡ.

….ಇನ್ನೂ ಏಳೆಂಟು ನಿಯಮಗಳಿವೆ. ಇಲ್ಲಿ ಗಮನಿಸಬೇಕಾದುದು ಮೊದಲ ನಿಯಮ. “ಬ್ರಾಹ್ಮಣರು ದೇವರ ಸಮಾನರು”-ಇದು ಹಿಂದೆ ಜನತೆಯಲ್ಲಿದ್ದ ಅನುಭೂತಿ. ಯಾಕೆಂದರೆ ಬ್ರಾಹ್ಮಣರು ತೀರಾ ಶುದ್ಧ-ಸಾತ್ವಿಕ ಆಹಾರವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದರು. ವೇದ-ಶಾಸ್ತ್ರಾಧ್ಯಯನ, ಅಧ್ಯಾಪನ (ಬೋಧಿಸುವಿಕೆ) ಹೋಮ-ಹವನ ಮತ್ತು ಪೂಜೆ, ಜಪ-ತಪ, ವೈದ್ಯ ಮತ್ತು ಜ್ಯೋತಿಷ್ಯ ಇದಿಷ್ಟೇ ಕಾರ್ಯಗಳಲ್ಲಿ ಆಸಕ್ತರಾಗಿದ್ದರು.

ತಮ್ಮ ಶಿಷ್ಟಾಚಾರ, ನೀತಿ ನಿಯಮಗಳು ಗಾಳಿಗೆ ತೂರಲ್ಪಡುತ್ತವೆ, ಮನಸ್ಸು ಚಂಚಲವಾಗಿ ಧಾರಣಶಕ್ತಿ ಹೋಗಿಬಿಡುತ್ತದೆ, ಶರೀರ ಇಲ್ಲದ ಕಾಯಿಲೆಗಳ ಗೂಡಾಗಿ ಪರಾವಿದ್ಯೆಯೆಂಬ ಆಸ್ತಿಯನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಅದನ್ನು ವರ್ಗಾಯಿಸುವುದು ಕಷ್ಟವಾಗುತ್ತದೆ ಎಂಬೆಲ್ಲ ಕಾರಣಕ್ಕೆ ಹೊರಗಡೆ ಸಮಾಜದಲ್ಲಿ ಬೆರೆಯುತ್ತಿರಲಿಲ್ಲ. (ಧಾರಣ ಶಕ್ತಿ ಎಂದರೆ ಬರಹಗಳಿಲ್ಲದ ಕಾಲದಿಂದ ವೇದ, ಶಾಸ್ತ್ರಾದಿಗಳನ್ನು ಹೃದ್ಗತವಾಗಿ, ಕಂಠಸ್ಥವಾಗಿಸಿಕೊಂಡು, ಮನಸ್ಸಿನಲ್ಲಿ ಕಾಪಿಟ್ಟುಕೊಂಡು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುವ ಶಕ್ತಿ.)

ಕಟ್ಟುನಿಟ್ಟಿನ ಉಪವಾಸ ವ್ರತಾಚರಣೆಗಳನ್ನು ನಡೆಸುತ್ತಿದ್ದ ಬ್ರಾಹ್ಮಣರಲ್ಲಿ ಕೆಲಮಟ್ಟಿನ ಯೋಗ ಸಿದ್ಧಿಯೂ ಇರುತ್ತಿತ್ತು. ಬ್ರಾಹ್ಮಣನಾದವ ಬಾಯಲ್ಲಿ ಕೆಟ್ಟ ಮಾತನ್ನೂ ಸಹ ಆಡುತ್ತಿರಲಿಲ್ಲ. ತ್ರಿಕರಣ ಶುದ್ಧಿ-ಅಂದರೆ ದೇಹ, ಮನಸ್ಸು ಮತ್ತು ಮಾತು ಇವುಗಳಲ್ಲಿ ಶುದ್ಧವಾಗಿರುತ್ತಿದ್ದರು. ಕರ್ಮಠ ಬ್ರಾಹ್ಮಣನೊಬ್ಬ ನೊಂದುಕೊಂಡರೆ ತಮಗೆ ಒಳಿತಾಗುವುದಿಲ್ಲ ಎಂಬುದು ಅನುಭವದಿಂದ ಇತರರಿಗೆ ಗೊತ್ತಾಗಿತ್ತು. ಹೀಗಾಗಿ ಸಮಾಜದಲ್ಲಿ ಬ್ರಾಹ್ಮಣರು ಎಂದರೆ ದೇವರ ಸಮಾನ ಎಂಬ ಭಾವನೆಯೂ ಇತ್ತು.

ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಮೇಲೆ ಬ್ರಾಹ್ಮಣರು ಅನ್ನಕ್ಕಾಗಿ ಹೊರಬಂದರು; ಅನ್ಯವೃತ್ತಿಗಳಲ್ಲಿ ವ್ಯಸ್ತರಾದರು; ಚಿತ್ತ ಚಾಂಚಲ್ಯಕ್ಕೆ ಒಳಗಾದರು. ತಮ್ಮತನದಲ್ಲೇ ಮುಂದುವರಿದಿದ್ದರೆ ಇಂದಿಗೂ ಬ್ರಾಹ್ಮಣರು ಅದೇ ಮಾನ್ಯತೆಯನ್ನು ಇರಿಸಿಕೊಳ್ಳುತ್ತಿದ್ದರು. ಅದೇ ಮಾನ್ಯತೆಯನ್ನು ಇರಿಸಿಕೊಳ್ಳಬೇಕೆಂಬುದು ನನ್ನ ಆಸೆಯೆಂದುಕೊಳ್ಳಬೇಡಿ; ಸಮಾಜದಲ್ಲಿ ಯಾರು ಹೇಗಿರಬೇಕೋ ಹಾಗಿದ್ದರೇ ಚೆನ್ನ. ನಿಯಮ ಪಾಲಕರೇ ನಿಯಮ ಭಂಜಕರಾದರೆ ನಿಯಮಗಳಾದರೂ ಉಳಿಯಬೇಕು ಹೇಗೆ? ಹಲವು ನಿಯಮಗಳನ್ನು ಪಾಲಿಸುತ್ತ ಆಡಂಬರದ ಜೀವನವನ್ನು ತ್ಯಜಿಸಿ ಸರಳ ಜೀವನವನ್ನು ನಡೆಸುತ್ತಿದ್ದರಿಂದ ಬ್ರಾಹ್ಮಣರ ಮೇಲೆ ಉಳಿದವರಿಗೆ ಆ ಭಾವನೆ ಇತ್ತು.

ಈಗ ಅದೆಲ್ಲ ಹಾಗಿರಲಿ. ಅಲ್ಲಲ್ಲಿ ಕೆಲವರು ತಾವು ಹೊಲಸು ತಿನ್ನುವುದರಿಂದ, ಲಂಚ ತಿನ್ನುವುದರಿಂದ, ಪೀಠವೇರಿ ಬೃಹತ್ ಕಾಮಿಗಳಾಗಿ ಅವ್ಯಾಹತವಾಗಿ ಏಕಾಂತ ಸೇವೆಗಳನ್ನು ಪಡೆದುಕೊಳ್ಳುವುದರಿಂದ, ಸ್ನೇಹದ ನೆಪದಲ್ಲಿ ಕೆಲವರು ಅಲ್ಲಲ್ಲಿ ಆತ್ಮವಂಚನೆ ಮಾಡಿಕೊಳ್ಳುತ್ತ ಮದ್ಯ-ಮಾಂಸ-ಮಾನಿನಿಯರ ಸಹವಾಸಗಳಲ್ಲಿ ತೊಡಗಿರುವುದರಿಂದ ಉಳಿದವರಿಗೆ ಭ್ರಮ ನಿರಸನವಾಗಿದೆ.

ಮಹರ್ಷಿ ವಿದ್ಯಾರಣ್ಯರು, ಸಮರ್ಥ ರಾಮದಾಸರು ಸನಾತನ ವೇದಜೀವನಕ್ಕೆ ಬಹಳ ಮಹತ್ವವನ್ನು ಕೊಟ್ಟವರು. ಸನ್ಯಾಸಿ ವೇಷದಲ್ಲಿ ಸಮಾಜವನ್ನು ಮೋಸಗೊಳಿಸುವ ಕೆಲವರು ಹಿಂದೂ ಸನಾತನ ಧರ್ಮಕ್ಕೆ ಕಳಂಕಪ್ರಾಯರಾಗಿದ್ದಾರೆ, ಕಂಟಕಪ್ರಾಯರಾಗಿದ್ದಾರೆ. ಮಾಡಬಾರದ್ದನ್ನು ಮಾಡಿಕೊಂಡು ತಮಗೆ ನ್ಯಾಯಾಂಗವಿಧಿಯಂತೆ ಶಿಕ್ಷೆಯಾಗುತ್ತದೆ ಎಂದೆನಿಸಿದಾಗ, “ಇದು ನಮ್ಮ ಜನಪ್ರಿಯತೆಯನ್ನು ಹಾಳುಗೆಡಹುವ ವ್ಯವಸ್ಥಿತ ಷಡ್ಯಂತ್ರ, ಇದು ಹಿಂದೂ ಧರ್ಮವನ್ನು ಹಾಳುಗೆಡವಲು ನಡೆಯುತ್ತಿರುವ ಷಡ್ಯಂತ್ರ” ಎಂದು ಕೂಗುತ್ತ ಹಿಂದೂ ಸಂಘಟನೆಗಳನ್ನು ಸಹಾಯಕ್ಕೆ ಕರೆಯುತ್ತಾರೆ. ಇದು ಇಂದಿನ ವಿಪರ್ಯಾಸ.

ಬ್ರಾಹ್ಮಣರಾದವರಿಗೆ ತ್ರಿಕಾಲ ಸಂಧ್ಯಾವಂದನೆಯಿದೆ. ಅದನ್ನು ದ್ವಿಕಾಲದಲ್ಲೇ ಮುಗಿಸಬಹುದಾದ ಪದ್ಧತಿಯೂ ಇದೆ. ಸಂಧ್ಯಾವಂದನೆಯಲ್ಲಿ ಯೋಗದ ಭಾಗವಿದೆ, ಪ್ರಾಣಾಯಾಮವಿದೆ, ಶರೀರದಲ್ಲಿರುವ ಸಪ್ತ ಚಕ್ರಗಳನ್ನು ಉದ್ದೀಪನ ಗೊಳಿಸುವ ನ್ಯಾಸ-ಮುದ್ರೆಗಳಿವೆ, “ಧೀ ಯೋ ಯೋನಃ ಪ್ರಚೋದಯಾತ್…” ಬುದ್ಧಿ ಪ್ರೇರೇಪಣೆಗೆ ಮಂತ್ರ-ಜಪಗಳಿವೆ. ಅಧುನಿಕರಾದ ನಮ್ಮಜನರಲ್ಲಿ ಎಷ್ಟು ಮನೆಗಳಲ್ಲಿ ಶಾಲೆಗೆ ಹೋಗುವ ಬಾಲಕರು ಸಂಧ್ಯಾವಂದನೆ ಮಾಡುತ್ತಾರೆ?

ನಮ್ಮ ಪೂಜಾ ವಿಧಿವಿಧಾನಗಳಲ್ಲಿ ಸಾರಾಸಗಾಟಾಗಿ ಯೋಗಾಚರಣೆಗಳಿವೆ. “ಲೋಕಹಿತಂ ಮಮಕರಣೀಯಂ” ಎಂಬ ಉದಾತ್ತ ಆದರ್ಶಗಳಿವೆ. ಪಂಚಭೂತ್ಮಕವಾದ ಶರೀರರಕ್ಕೆ ಆಹಾರವನ್ನು ನಿವೇದಿಸುತ್ತ ಅದೊಂದು ಯಜ್ಞವೆಂಬಂತೆ ನಡೆಸುವ ಪರಿಪಾಟವಿದೆ. “ಪ್ರಾಣಾಯ ಸ್ವಾಹಾಃ ….. ಅಪಾನಾಯ ಸ್ವಾಹಾಃ …ಯಾನಾಯ ಸ್ವಾಹಾಃ….”ಪಂಚ ವಾಯುಗಳ ಆರಾಧನೆಯಿದೆ. “ಅಂತಶ್ಚರತಿ ಭೂತೇಶು ಗುಹಾಯಾಂ ವಿಶ್ವತೋಮುಖ……”ಎಷ್ಟು ಮಕ್ಕಳು ಇದನ್ನು ಪಾಲಿಸುತ್ತಾರೆ? ನಡುವಯದ ಎಷ್ಟು ಪಾಲಕರಿಗೆ ಈ ಮಂತ್ರ-ತಂತ್ರಗಳಾಗಲೀ ಅರ್ಥವಾಗಲೀ, ಹಿಂದಿರುವ ವಿಜ್ಞಾನವಾಗಲೀ ತಿಳಿದಿದೆ?

ನಮ್ಮ ಬೇಸಿಕ್ ಆಚರಣೆಗಳಲ್ಲೇ ನಮಗೆ ಶ್ರದ್ಧೆ, ಆಸಕ್ತಿ ಇಲ್ಲದಿರುವಾಗ ಯತಿನಿಯಮಗಳಾಗಲೀ, ವೇದ-ಶಾಸ್ತ್ರಗಳ ಮಾಹಿತಿಯಾಗಲೀ ನಮಗೆಲ್ಲಿದೆ? ಈ ಕಾರಣದಿಂದಲೇ ಸನ್ಯಾಸಿ ವೇಷದವರು ಹೇಳಿದ್ದೆಲ್ಲ ಸತ್ಯವೆಂಬಂತೆ ತೋರುತ್ತದೆ. ಯಾವ ಸನ್ಯಾಸಿ ಬಾಹ್ಯಾಡಂಬರಗಳಲ್ಲಿ ವಿಶೇಷ ಆಸಕ್ತನೋ, ಯಾವ ಸನ್ಯಾಸಿ ಇಂದ್ರಿಯಗಳಿಗೆ ಅಧೀನನೋ ಅವನು ಸನ್ಯಾಸಿಯೇ ಅಲ್ಲ. ಸನ್ಯಾಸಿಗೆ ಶಂಕರರು ವಿಧಿಸಿದ ಮಹಾನುಶಾಸನದ ಜೊತೆಗೆ ಪಾತಂಜಲ ಯೋಗ ನಿಯಮಗಳು ಅನ್ವಯಿಸುತ್ತವೆ. ಇವಾವುದರ ಪರಿವೆಯೂ ಇಲ್ಲದ ಜನ ಅಂಧಾಭಿಮಾನದಿಂದ ಜೈಕಾರ ಕೂಗುತ್ತವೆ.

ಇರುವುದರಲ್ಲಿ ಒಂದು ಸಮಾಧಾನವೆಂದರೆ ಆರ್ಥಿಕವಾಗಿ ತೊಂದರೆಯಲ್ಲಿರುವವರು ಯಾರಾದರೂ ಕೇಸು ದಾಖಲಿಸಿದ್ದರೆ ಇಷ್ಟೊತ್ತಿಗೆ ಅವರನ್ನು ಈ ಲೋಕ ಬಿಟ್ಟು ಕಳಿಸುತ್ತಿದ್ದರು-ಹಳದೀ ತಾಲಿಬಾನಿಗರು. ಕಾಮಿ ಯಾರ ಕೈಯಲ್ಲಿ ಸಿಕ್ಕಿಬೀಳಬೇಕೋ ಅಂತವರ ಕೈಯಲ್ಲೇ ಸಿಕ್ಕಿಬಿದ್ದಿದ್ದಕ್ಕೆ ತುಮರಿಗೆ ಬಹಳ ಖುಷಿಯಿದೆ. ಹಾವಾಡಿಗ ಸಂಸ್ಥಾನವನ್ನು ಹದಕ್ಕೆ ಹಚ್ಚುವ ಕೆಲಸ ಯಾರಿಂದ ನಡೆದರೆ ಒಳ್ಳೆಯದೋ ಅವರಿಂದಲೇ ಅದು ನಡೆಯುತ್ತಿರುವುದು ದೇವರು ಕೊಟ್ಟ ಒಂದು ಆಯ್ಕೆ ಎಂದುಕೊಳ್ಳಬಹುದು. ಈ ಹಿಂದೆ ಪಾನಿಪೂರಿ ಕುಟುಂಬವನ್ನು ಚಿತ್ರಾನ್ನ ಮಾಡಿದ ಕುಖ್ಯಾತಿಯ ಜನ ಇಲ್ಲದಿದ್ದರೆ ಸುಮ್ಮನೆ ಬಿಡುತ್ತಿದ್ದರೆ? ಛೆ ಛೆ…

ನಮ್ಮ ವೇದಧರ್ಮ, ಅದರ ಪರಮ ವೈಜ್ಞಾನಿಕ ಆಚರಣೆಗಳು ನಮ್ಮ ಜನರಲ್ಲಿ ಇನ್ನಾದರೂ ಜಾಗೃತವಾಗಬೇಕು. ಯಾರನ್ನು ಪೀಠದಲ್ಲಿ ಕೂರಿಸುವರೋ, ದಾರಿ ತಪ್ಪಿದರೆ ಅವರನ್ನು ಪೀಠದಿಂದ ಎಳೆದೆರಡು ಬಿಟ್ಟು ಓಡಿಸಲಿಕ್ಕೂ ಹಿಂದೆಮುಂದೆ ನೋಡಬಾರದು. ಜೀವನ ಧರ್ಮಮಾರ್ಗದಲ್ಲಿ ನಡೆಯಬೇಕು.

ಚಾತುರ್ಮಾಸ ಎಂಬುದು ಯತಿಯ ಖಾಸಗೀ ತಪಸ್ಸಿನ ಸಮಯ. ಆ ಸಮಯದಲ್ಲಿ ಆಡಂಬರಗಳನ್ನು ನಡೆಸಬಾರದು; ಆದರೆ ಹಾವಾಡಿಗ ಸಂಸ್ಥಾನದಲ್ಲಿ ಈಗ ನಡೆಯುತ್ತಿರುವುದೆಲ್ಲ ವ್ಯತಿರಿಕ್ತ. ಚಾತುರ್ಮಾಸಕ್ಕೆ ಕೂರೋದು ಎಂದರೆ ಏಕಾಂತಕ್ಕೆ ಕರೆಯೋದು ಎಂದೇ ಅರ್ಥ! ಚಿತ್ರವಿಚಿತ್ರ ಆಕರ್ಷಣೆ, ಫೈವ್ ಸ್ಟಾರ್ ಅಲಂಕಾರಗಳು, ನಾನಾ ವಿಧವಾದ ಬ್ಯಾನರ್ ಗಳು, ಹಣ ಪೀಕುವ ಹಲವು ಯೋಜನೆಗಳು ಎಲ್ಲವೂ ’ಗಾತ್ರ ಚಾತುರ್ಮಾಸ’ದ ವೈಖರಿ. ಸಂತಾನ ಭಾಗ್ಯದಲ್ಲಿ ಕರುಣಿಸಿದ ಮಕ್ಕಳನ್ನು ಎತ್ತಿಕೊಂಡು ಆಡಿಸಲಿಕ್ಕೆ ಕಾಮಿಗಿದು ಸಕಾಲ.

Thumari Ramachandra

https://www.facebook.com/groups/1499395003680065/permalink/1645293305756900/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s