ಮುಲಾಮು ಕಲಾ

ಮುಲಾಮು ಕಲಾ

ಆರಂಭದಲ್ಲಿ ಕಲಾಂ ರಿಗೆ ನಮಸ್ಕರಿಸೋಣ. ಅವರೊಬ್ಬ ಅಪ್ಪಟ ದೇಶಪ್ರೇಮಿ, ಮಾನವತಾವಾದಿ, ವಿಜ್ಞಾನಿ, ಅಧ್ಯಾಪಕ, ಜನ ಬಯಸಿದ್ದ ರಾಷ್ಟ್ರಪತಿ ಎಲ್ಲವೂ ಕೂಡ. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಬ್ರಹ್ಮಚಾರಿ. ನಾನು ಕೇಳಿದ ಹಾಗೆ ಬುದ್ಧಿ ತಿಳಿದಮೇಲೆ ಅವರು ಮಾಂಸಾಹಾರ ತಿನ್ನಲಿಲ್ಲ. ಆಹಾರವನ್ನು ಯಥೇಚ್ಛ ತಿಂದಿದ್ದೂ ಇಲ್ಲ. ಎಲ್ಲದರಲ್ಲೂ ಶಿಸ್ತಿನ ನಿಯಮಗಳನ್ನು ಪಾಲಿಸಿಕೊಂಡಿದ್ದ ಅವರು ಶಾಲೆಯಲ್ಲಿ ಹಿಂದಿನ ಬೆಂಚಿನವರು; ಅಂದರೆ ಶಾಲೆಯಲ್ಲಿ ಹಿಂದಿನ ಬೆಂಚಿನಲ್ಲಿ ಕೂತವರೆಲ್ಲ ಅಬ್ದುಲ್ ಕಲಾಂ ಆಗುತ್ತಾರೆಂದಲ್ಲ; ಮುಂದಿನ ಬೆಂಚಿನವರೆಲ್ಲ ದೇಶವನ್ನೋ ಜಗತ್ತನ್ನೋ ಕಟ್ಟುವವರಾಗುತ್ತಾರೆ ಎಂಬುದೂ ಸರಿಯಲ್ಲ ಅಲ್ಲವೇ?

ಆದರೆ, ನನಗೆ ವಿಚಿತ್ರವೆನಿಸಿದ್ದು ರಾಮೇಶ್ವರದ ಈ ಫಕೀರ ರಾಷ್ಟ್ರಪತಿಯಾದರೂ ಸಹ ರಾಷ್ಟ್ರಪತಿ ಪೀಠವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಹೇಳಿಕೇಳಿ ಅವಿವಾಹಿತನಾಗಿದ್ದರಿಂದ ಮನಸ್ಸು ಮಾಡಿದ್ದರೆ, ನಮ್ಮ ಹಾವಾಡಿಗ ರಾಂಗ್ ವೇಷ್ ವರರಂತೆ ಬೇಕಾದಷ್ಟು ಹುಡುಗಿಯರನ್ನೋ ಹೆಂಗಸರನ್ನೋ ಕಾಸು ತೆತ್ತು ಕರೆಸಬಹುದಿತ್ತು. ಅವರನ್ನು ನೋಡಲು ಬರುವ ಸಿನಿಮಾ ನಿರ್ಮಾಪಕ ನಿರ್ದೇಶಕರುಗಳಿಗೇನು ಕೊರತೆಯಿತ್ತೇ? ಇಲ್ಲ. ಅವರು ಭಾಗವಹಿಸಿದ ಸಭೆ-ಸಮಾರಂಭಗಳಲ್ಲಿ ಮುತ್ತಿಕೊಳ್ಳುತ್ತಿದ್ದ ಜನರಲ್ಲಿ ಅಂತವರೂ ಇರುತ್ತಿದ್ದರು. ಅಚಾನಕ್ಕಾಗಿ ಯಾವ ಕೋಮಲೆಯೂ ದರ್ಶನ ಬಯಸಿ ಬರಲೂ ಇಲ್ಲ, ಎಂಟು ನೂರು ಕಮಲದ ಹೂವುಗಳನ್ನು ಹಾಸಿ ಮಲ್ಲಿಕೆಯನ್ನು ಸ್ವಾಗತಿಸುವ ಬೇವಾರ್ಸಿ ಹಿಪ್ಪಿ ಅಪಾಪೋಲಿ ನಡೆಸುವ ಕಾರ್ಯವೂ ಅಲ್ಲಿ ನಡೀಲಿಲ್ಲ.

ಹಮ್ರಿ ಹಕೀಮ ಬಿರುದಾಂಕಿತ ತುಮರಿ ರಾಮಚಂದ್ರ ಊರಿಗೆ ಬಿಜಯಂಗೈದಾಗ ಸಾಗರ ಪೇಟೆಯ ನೆಂಟರ ಮನೆಗೆ ದಕ್ಷಿಣ ಕನ್ನಡದ ಕೊಂಕಣಿ ಜನವೊಂದು ಬಂದಿತ್ತು. ಅವರ ಮಾತು ಹೀಗಿತ್ತು, “ನಿಮ್ಮ ಜನರಿಗೆ ತಲೆ ಸರಿಯಿಲ್ಲ ಮಾರಾಯ್ರೆ. ಇದ್ದಿದ್ದರೆ ಇಷ್ಟೊತ್ತಿಗೆ ಅವನನ್ನು ಕಲ್ಲುಹೊಡೆದು ಓಡಿಸುತ್ತಿದ್ದರು, ಬೇಡ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಿದ್ದರು. ನಿಮ್ಮಜನ ಬೋಳೆ ಅನ್ನೋದೆ ಇದಕ್ಕೆ.” ಅಷ್ಟೊತ್ತಿಗೆ ಅವರ ಜೊತೆಗಿದ್ದ ಯಾವುದೋ ಪೈ ಮಾಮನತ್ತ ತಿರುಗಿ ಹೇಳಿದರು:” ಹೈರೇ, ತೆ ಪಳೆ ಡೂಪ್ಲಿಕೇಟ್ ಸನ್ಯಾಸಿ ತೆ, ಸನ್ಯಾಸ ಧರ್ಮ್ ವಗೈರೆ ಕಶೀ ಬಿ ಕಳನಾ ತಕ. ಅತ್ ಪಳೆ ಪೂರಾ ಸರ್ಕಸ್ ಕರೂನ್ …..” ಹೀಗೇ ಇನ್ನೇನೇನೋ ಅಂದ್ರು. ತುಮರಿಗೆ ಕೊಂಕಣಿ ಶಬ್ದಗಳಲ್ಲಿ ಎಲ್ಲವೂ ಅರ್ಥವಾಗೋದಿಲ್ಲ ಬಿಡಿ.

ರಾಷ್ಟೀಯ ಹೆದ್ದಾರಿ ಹದಿನೇಳರಲ್ಲಿ ಕೆಲವು ಮನೆಗಳನ್ನು ಗುರುತು ಹಾಕಿಕೊಂಡಿದ್ದ ಹಾವಾಡಿಗ ಏನಾದರೂ ಕಾರಣ ಹುಡುಕಿ ತಿಂಗಳಿಗೊಮ್ಮೆಯಾದರೂ ಆ ಮಾರ್ಗವಾಗಿ ಹಾದುಹೋಗುವುದನ್ನು ಇರಿಸಿಕೊಂಡಿದ್ದ. ಅಲ್ಲೆಲ್ಲ ಅವನ ಕೆಲವು ಅಡ್ಡೆಗಳಿದ್ದವು. ಅಡ್ಡೆಗಳಲ್ಲಿ ಎಲ್ಲವೂ ಇವನು ಹೇಳಿದಂತಿರಲಿಲ್ಲ. ಆದರೂ ಗುರುಗಳು ಫೋನ್ ಮಾಡಿಸಿ, “ಹೀಗೆ ಹಾದು ಹೋಗ್ತಿದ್ದೇವೆ, ವಿಶ್ರಾಂತಿಗೆ ಬರ್ತೇವೆ” ಎಂದು ಹೇಳಿಸಿದಾಗ ಬೇಡಾ ಅನ್ನೋದಾದರೂ ಹೇಗೆ? ಮನೆಯ ಯಜಮಾನರುಗಳು ’ಜಗದ್ಗುರು ರಾಂಗ್ ವೇಷ್ ವರ’ರು ಬರುತ್ತಾರೆಂದು ಗಡಿಬಿಡಿಯಲ್ಲಿ ಯಾರನ್ನೋ ಹಿಡಿದು ಅರ್ಧಘಂಟೆಯೊಳಗೆ ಹೆದ್ದಾರಿಗೆ ಅಡ್ಡವಾಗಿ ಎತ್ತರದಲ್ಲಿ ತೋರಣ ಕಟ್ಟಿಸುತ್ತಿದ್ದರು.

ಹೇಳಿದ ಸಮಯಕ್ಕೆ ಅರ್ಧ ಗಂಟೆ ಮುಂಚೆಯೇ ಕಾಮಿ ಅಲ್ಲಾಡಿಸಿಕೊಂಡು ತೊನೆಯುತ್ತಾ ತೊನೆಯುತ್ತಾ ಹಾಜರು! ಆಮೇಲೆ ತಗೊಳಿ, ಧೂಳೀ ಪಾದಪೂಜೆ, ಅದೂ ಇದೂ ಸೇವೆ. ಅಂತಹ ಮನೆಗಳಲ್ಲಿ ಯಜಮಾನರುಗಳ ಪ್ರಾಯದ ಹೆಂಡಂದಿರೋ ಅಥವಾ ಹೆಣ್ಣುಮಕ್ಕಳೋ ಇರುತ್ತಿದ್ದರು. ಅವರಲ್ಲಿ ಕೆಲವು ಇವನ ಕಾಮತೃಷೆಗೆ ಬಲಿಯಾಗಿವೆಯಂತೆ. ಆದರೆ ಕೆಲವು ಮಾತ್ರ ಕರೆಯದ ಎಮ್ಮೆಯಂತೆ ಒದೆಯುತ್ತಿದ್ದವು; ಗಂಡನಿಗೆ/ ಅಪ್ಪನಿಗೆ ಹೇಳಿದರೆ ನಂಬುತ್ತಿರಲಿಲ್ಲ ಎಂದು ಒಳಗೊಳಗೇ ಹಿಂಸೆ ಅನುಭವಿಸುತ್ತಿದ್ದವು. “ಗುರುಗಳು ದೇವರನ್ನು ತೆಗೆದುಕೊಂಡು ಬರ್ತಾರೆ, ಪೂಜೆ ಮುಗಿಸಿಕೊಂಡು ಹೋಗ್ತಾರೆ, ಇದೆಲ್ಲ ನಡೆಯೋದಕ್ಕೆ ಯೋಗ ಬೇಕು” ಎಂಬ ಭಕ್ತಿ ಭಾವದಲ್ಲಿ ಇರುತ್ತಿದ್ದ ಯಜಮಾನರುಗಳ ಬೋಳುಗಳಿಗೆ ಎಣ್ಣೆಸವರಿ, ಆದಿ ಮಂಗಲ, ಮಧ್ಯ ಮಂಗಲ ಮತ್ತು ಅಂತ್ಯ ಮಂಗಲವೆನ್ನುತ್ತ ಮೂರು ನಾಮ ತೀಡುತ್ತಿದ್ದ.

ಮುಟ್ಟಾದ ಹೆಂಗಸರನ್ನು ಕಂಡರೆ ಪೂಜೆಯ ಪುರೋಹಿತರಿಗೇ ಮಡಿ ಶಾಸ್ತ್ರ. ಇನ್ನು ಸನ್ಯಾಸಿಗಳಿಗೆ ಹೇಗಿರಬೇಡ! ಸನ್ಯಾಸಿಗಳು ಹೆಣ್ಣು ಬೊಂಬೆಯನ್ನೂ ಸಹ ಬಹಳ ನೋಡಬಾರದು, ಮುಟ್ಟಬಾರದು. ಅಷ್ಟಾಂಗ ಯೋಗದ ಮೂಲಕ ಪಂಚೇಂದ್ರಿಯಗಳನ್ನು ಒಳಮುಖ ಮಾಡಿಕೊಳ್ಳಬೇಕು ಎಂಬುದು ನಿಯಮ. ಪಂಚೇಂದ್ರಿಯಗಳನ್ನು ಒಳಮುಖ ಮಾಡಿಕೊಳ್ಳಬೇಕು ಎಂದರೆ ಏಕಾಂತ ಕೋಣೆಯೊಳಮುಖ ಮಾಡಿಕೊಳ್ಳಬೇಕು ಎಂಬರ್ಥವಂತೂ ಇಲ್ಲ.

ಮಕ್ಕಳನ್ನು ಎತ್ತಿಕೊಂದರೆ ಮೈಮೇಲೆ ಮಲ-ಮೂತ್ರ ವಿಸರ್ಜಿಸುತ್ತವೆ ಎಂಬ ಕಾರಣದಿಂದ ಸನ್ಯಾಸಿಗಳು ಮಕ್ಕಳನ್ನು ಎತ್ತಿಕೊಳ್ಳೋದಿಲ್ಲ ಎಂದು ದೊಣ್ಣೆನಾಯಕರೊಬ್ಬರು ಅಪ್ಪಣೆ ಕೊಡಿಸಿದರು. ಸನ್ಯಾಸಿಯಾದವ ಸಂಸಾರಾಸಕ್ತನಾಗಬಾರದು. ಮಕ್ಕಳ ಮುದ್ದು, ನಿಷ್ಕಲ್ಮಶ ಪ್ರೀತಿ, ಲಲ್ಲೆಗರೆಯುವಿಕೆ, ಆಟ, ಮೃದುಮಧುರ ಸ್ಪರ್ಶ ಸನ್ಯಾಸಿಯ ಮನಸ್ಸನ್ನು ಚಂಚಲಗೊಳಿಸುತ್ತದೆಯೆಂಬ ತಾಂತ್ರಿಕ ಕಾರಣ ಇದೆಯೆಂದು ದೊಣ್ಣೆನಾಯಕ ಮಹಾಪಂಡಿತರು ತಿಳಿದುಕೊಳ್ಳಬೇಕು. ಸನ್ಯಾಸಿಗಳಿಗೆ ಅದರಲ್ಲೂ ಶಾಂಕರಮತದವರಿಗೆ ಮಹಾನುಶಾಸನವಿದೆ. ಅದರಲ್ಲಿರುವ ಯತಿನಿಯಮಗಳನ್ನು ಉಲ್ಲಂಘಿಸಿದವನು ಅಲ್ಲಲ್ಲಿ ಕಾಣುವ ಉಳಿದೆಲ್ಲ ಹಗಲು ವೇಷದಂತೆ ಸನ್ಯಾಸಿಯ ವೇಷದವನೇ ಹೊರತು ಸನ್ಯಾಸಿಯಲ್ಲ.

“ನಮ್ಮ ಜಗದ್ಗುರುಗಳು ಅತ್ಯಂತ ಸಮಾಜ ಮುಖಿಯಾಗಿದ್ದಾರೆ” ಎನ್ನುತ್ತ ಈರುಳ್ಳಿ ಬಜೆ, ಪಕೋಡ, ಮಸಾಲೆ ದೋಸೆ, ಪಾನಿ ಪೂರಿಗಳನ್ನೆಲ್ಲ ತಿನ್ನುವುದನ್ನು ಪ್ರೋತ್ಸಾಹಿಸಿದರೆ, ತಾನು ಹಳ್ಳಕ್ಕೆ ಬೀಳುವುದರ ಜೊತೆಗೆ ಸಮಾಜವನ್ನೊ ಹಳ್ಳಕ್ಕೆ ಬೀಳಿಸುತ್ತಾನೆ-ಅಂತಹ ಜಗದ್ಗುರು.

ರಾಜಪ್ರಭುತ್ವದಲ್ಲಿ, ತನ್ನ ವೈರಾಗ್ಯ ವಿಶೇಷಗಳಿಂದ ಗುರುವಾದವನು ಲೋಕ ಕಲ್ಯಾಣಕಾರ್ಯವನ್ನು ಅನುಮೋದಿಸುತ್ತಿದ್ದ. ನೊಂದ ಪ್ರಜೆಗಳ ಅಹವಾಲನ್ನು ಸ್ವೀಕರಿಸಿ, ತಪ್ಪಿ ನಡೆದರೆ ಆಳುವ ರಾಜರುಗಳನ್ನೂ ತಿದ್ದುತ್ತಿದ್ದ ಅಥವಾ ಶಿಕ್ಷಿಸುತ್ತಿದ್ದ. ಹೀಗಾಗಿ ಅವನಿಗೆ “ರಾಜಗುರು” ಎನ್ನುತ್ತಿದ್ದರು. ಹಾಗಾದರೆ ಗುರುವೇ ತಪ್ಪು ಮಾಡಿದರೆ? ಇಲ್ಲ ಇಲ್ಲ; ಖಂಡಿತ ಇಂದಿನ ಲೋಕಾಯುಕ್ತದಂತಹ ಹುದ್ದೆ ಅದಲ್ಲ. ಹಿಂದಿನ ಕಾಲದಲ್ಲಿ ಈರುಳ್ಳಿ ಉಪ್ಪಿಟ್ಟು ತಿನ್ನುವವರು ಗುರು ಸ್ಥಾನಕ್ಕೇರುತ್ತಿರಲಿಲ್ಲ. ಅವರು ಯೋಗಾರೂಢರಾಗಿರುತ್ತಿದ್ದರು. ಯೋಗವೇ ಅವರ ಚಿತ್ತವೃತ್ತಿಗಳನ್ನು ನಿಗ್ರಹಿಸುತ್ತ ವರ್ಷಗಳಲ್ಲಿ ಅವರಿಗೆ ಅಣಿಮಾ, ಗರಿಮಾ, ಲಘಿಮಾ, ಮಹಿಮಾ ಇತ್ಯಾದಿ ಅಷ್ಟ ಸಿದ್ಧಿಗಳನ್ನು ಪಡೆದುಕೊಳ್ಳಲು ನೆರವಾಗುತ್ತಿತ್ತು.

ಹೀಗಾಗಿ ಸುಂದರಿಯರು ಬಂದು ಮೈ ಹೊಸೆದರೂ ಕಿಂಚಿತ್ತೂ ಕರಗದ ಜೈನ ದಿಗಂಬರರಂತೆ ಅಥವಾ ಅದಕ್ಕೂ ಹೆಚ್ಚಿನ ಸಾಧನೆಗಳನ್ನು ಸನ್ಯಾಸಿಗಳು ನಡೆಸುತ್ತಿದ್ದರು. ಜಗತ್ತಿಗೇ ಗುರುವಾಗಬಲ್ಲ ಗುಣವಿಶೇಷಣಗಳಿಂದ ಬೆಳಗುವ ವ್ಯಕ್ತಿಯನ್ನು ಸಮಾಜ ಜಗದ್ಗುರುವೆಂದು ಸಾರುತ್ತಿತ್ತು. ಜಗದ್ಗುರುವೆಂದು ಹೆಸರು ಪಡೆದ ಶಂಕರರು ರಾಜವೈಭೋಗವನ್ನು ಮೈಲು ದೂರ ಇಟ್ಟಿದ್ದರು. ರಾಜರುಗಳ ಆಸ್ಥಾನಕ್ಕೆ ಮನಸ್ಸು ಮಾಡಿದರೆ ಮಾತ್ರ ತಾನೇ ನಡೆದುಹೋಗುತ್ತಿದ್ದರು; ಐಷಾರಾಮಿ ಕಾರು, ವಿಮಾನ ಇರಲಿಲ್ಲ-ಇದ್ದರೂ ಏರುತ್ತಿರಲಿಲ್ಲ. ಪ್ರಾಯಶಃ ಯೋಗದಿಂದ ಗಳಿಸಿದ ಅಷ್ಟಸಿದ್ಧಿಗಳಲ್ಲಿ ಅಂಜನ ಸಿದ್ಧಿಯಿಂದ ಬಯಸಿದೆಡೆಗೆ ಕ್ಷಣಮಾತ್ರದಲ್ಲಿ ತೆರಳುವ ಶಕ್ತಿಯನ್ನು ಅವರು ಪಡೆದಿದ್ದಿರಬಹುದು. ಯಾವೊಂದೂ ಸಾಧನೆಯೂ ಇಲ್ಲದ ನಮ್ಮ ಹಾವಾಡಿಗ ರಾಂಗ್ ವೇಷ್ ವರರು ಜಗದ್ಗುರು ಎಂದು ವ್ರಥಾ ಬೋರ್ಡು ಹಾಕಿಕೊಳ್ಳಬಹುದು.

ಬಿದ್ದ ಮಕ್ಕಳು ಯಾರೂ ನೋಡದಿದ್ದರೆ ಸುಮ್ಮನೆ ಎದ್ದು ಹೋಗುತ್ತವೆ; ಯಾರೋ ಕಂಡುಬಿಟ್ಟರೆ “ಬೋ…” ಎಂದು ಅಳಲು ಹಿಡಿಯುತ್ತವೆ. ನಮ್ಮ ಹಾವಾಡಿಗ ಜಗದ್ಗುರುಗಳ ಕತೆಯೂ ಹಾಗೇ. ಆಳಕ್ಕೆ ಬಿದ್ದಾಗಿದೆ. ಕೋಣೆಯೊಳಗೆ ಪಂಚಾಯ್ತಿ ನಡೆದಾಗ ಅತ್ತು ಕೆಲವರ ಕಾಲನ್ನೂ ಹಿಡಿದಿದ್ದಾಗಿದೆ. ಆದರೂ ಹೊರಗಡೆ ತನ್ನ ತಪ್ಪಿಲ್ಲ ಎಂದು ಸಾಧಿಸಿ ತೋರಿಸುವ ದುರ್ಯೋಧನ-ಸಾಹಸ. ಹಾಗಾಗಿ ದಿನಕ್ಕೊಂದೊಂದು ಕಸರತ್ತು. ಮಲ್ಲಿಕಕ್ಕೆ ಹಾಸಿದ್ದ ಕಮಲಕತೆ ಮರೆಸಲಿಕ್ಕೆ ದೊಡ್ಡ ಕಮಲವನ್ನೇರಿ ಪೋಸು ಕೊಡುವುದು. ಬಾವಯ್ಯನ ಪೂಜೆ, ಅಕ್ಕಯ್ಯನ ಪೂಜೆ, ಮುಲಾಮು ಕಲೆ, ಮಕ್ಕಳ ಸಾಕುವಿಕೆ, ಬಾಣಂತಿ ಪೂಜೆ, ಅಡ್ಡ ಬಾಣಂತಿ ಹಸ್ತ, ಹಕ್ಕಿಶಕುನ, ಅಷ್ಟಮಂಗಲ, ಭೂತದ ಕೋಲ ಇಂತದ್ದನ್ನೆಲ್ಲ ನಡೆಸುತ್ತ ಭಕ್ತಕುರಿಗಳಿಂದ ಹಣ ಪೀಕುವುದು ಮತ್ತು ಕಂಡಲ್ಲೆಲ್ಲ ಹಲ್ಲು ಗಿಂಜುವುದು. ಈಗಲೂ ಇಂತವರ ಮಂಗನಾಟಕ್ಕೆ ಹಾಡಲು / ನರ್ತಿಸಲು ಕೆಲವು ಮಹಿಳೆಯರು ಹೋಗುತ್ತಾರೆಂದರೆ ಅವರಿಗೆಲ್ಲ ಗೋವಿಂದನೇ ಗತಿ!

ಅಂದಹಾಗೆ ಸಾತ್ವಿಕ ಆಹಾರ ಸೇವಿಸಿ, ಸಾತ್ವಿಕ ಜೀವನ ನಡೆಸಿ, ಸಹಜವಾಗಿ ಜಗದ್ವಿಖ್ಯಾತಿ ಗಳಿಸಿದ ಕಲಾಂ ಮೇಷ್ಟ್ರು ಕನಸಿನಲ್ಲೂ ಹೆಣ್ಣಿನ ಸಂಗ ಬಯಸಲಿಲ್ಲವೇನೋ. ಅವರ ನೈತಿಕ ನಿಷ್ಠೆಗೆ ನಾವೆಲ್ಲ ಕೈ ಮುಗಿಯಲೇಬೇಕು.

ಯೋಗದಿಂದ ಅಣಿಮಾದಿ ಅಷ್ಟಸಿದ್ಧಿಗಳನ್ನು ಪಡೆದುಕೊಂಡಿದ್ದ ಸಮರ್ಥ ರಾಮದಾಸರ ಒಂದು ಕತೆಯೊಂದಿಗೆ ಅಂತ್ಯ ಮಂಗಲವನ್ನು ಮಾಡೋಣ:

ಒಮ್ಮೆ ಸಮರ್ಥ ರಾಮದಾಸರು ಭಿಕ್ಷಾಟನೆಗೆಂದು ಸಂಚರಿಸುವಾಗ ಒಂದು ಮನೆಯ ಮುಂದೆ ನಿಂತು ‘ಭಿಕ್ಷಾಂ ದೇಹಿ’ ಎನ್ನುತ್ತಾರೆ. ಆದರೆ ಆ ಮನೆಯ ಒಡತಿ ಯಾರಿಗೂ ಏನನ್ನೂ ನೀಡದವಳು. ಆಕೆ ಸಿಟ್ಟಿನಿಂದ, ‘ನೀಡುವುದಿಲ್ಲ ಹೋಗು. ದುಡಿದು ತಿನ್ನಲು ಧಾಡಿಯೆ?’ ಎನ್ನುತ್ತಾಳೆ. ರಾಮದಾಸರು ನಗುತ್ತ, ‘ಹಾಗೆನ್ನಬೇಡ ತಾಯಿ, ಈ ಜೋಳಿಗೆಗೆ ಏನಾದರೂ ಹಾಕು’ ಎನ್ನುತ್ತಾರೆ. ಆಗ ಆಕೆ ಮತ್ತಷ್ಟು ಕೋಪದಿಂದ, ‘ತಂದು ನೀಡಲು ದುಡಿದು ಇಟ್ಟಿರುವೆಯೇನು?’ ಎಂದು ಕೂಗಾಡುತ್ತಾಳೆ.

ನಂತರ ಅದೇ ಆಗ ನೆಲ ಒರೆಸಿದ ಹರಿದ ಚಿಂದಿ ಅರಿವೆಯನ್ನು ಬೀಸಿ ಜೋಳಿಗೆಯಲ್ಲಿ ಒಗೆಯುತ್ತ, ‘ತಗೊ! ಹಾಳಾಗಿಹೋಗು’ ಎನ್ನುತ್ತಾಳೆ. ಸಮರ್ಥರು ನಗುತ್ತಲೇ ಆ ಭಿಕ್ಷೆಯನ್ನು ಸ್ವೀಕರಿಸಿ ಹೊರಡುತ್ತಾರೆ. ಕೆರೆಯ ಬಳಿ ಬಂದು ಆ ಬಟ್ಟೆಯನ್ನು ನೀರಲ್ಲಿ ನೆನೆಸಿ ತಿಕ್ಕಿ ತೊಳೆದು ಸ್ವಚ್ಛಗೊಳಿಸಿ, ಬಿಸಿಲಿಗೆ ಒಣಗಿಸಿ ಅದರಲ್ಲಿನ ಒಂದೊಂದೇ ನೂಲಿನೆಳೆಯನ್ನು ಬಿಡಿಸಿ ಹೊಸೆದು ಬತ್ತಿಯನ್ನು ಮಾಡುತ್ತಾರೆ. ಹಣತೆಗಿಷ್ಟು ಎಣ್ಣೆ ಹಾಕಿ ದೇವರ ಮುಂದೆ ದೀಪ ಹಚ್ಚಿ ಕೈಮುಗಿದು ಪ್ರೀತಿ ತುಂಬಿದ ಹೃದಯದಿಂದ, ಆ ತಾಯಿಗೆ ಸಿಟ್ಟು ಕಡಿಮೆಗೊಳಿಸಿ ಅವಳ ಹೃದಯದಲ್ಲಿ ಸದಾಕಾಲ ನಿರ್ಮಲ ಶಾಂತಿ-ವಿವೇಕಗಳನ್ನು ನೆಲೆಗೊಳಿಸು ಎಂದು ಪ್ರಾರ್ಥಿಸುತ್ತಾರೆ.

ಇಲ್ಲಿ ಬತ್ತಿಯು ಉರಿಯುತ್ತಿರುವಂತೆ ಅಲ್ಲಿ ಆ ತಾಯಿಯ ಹೃದಯದಲ್ಲಿ ಸಿಟ್ಟು ಕರಗುತ್ತ ಕರಗುತ್ತ ಶಾಂತ ಭಾವಗಳು ಉದ್ದೀಪನಗೊಳ್ಳತೊಡಗುತ್ತವೆ. ಕೆಲವು ದಿವಸಗಳ ನಂತರ ಸಂಚರಿಸುತ್ತಿದ್ದಾಗ ಆ ತಾಯಿಯ ಮನೆಯ ಮುಂದೆ ಹೋಗುತ್ತಿರುವಾಗ ಅವರನ್ನು ಗುರುತಿಸಿ ಓಡಿಬಂದು ಪಾದ ಹಿಡಿದು, ಕ್ಷಮಿಸಿ ಎಂದು ಕಣ್ಣೀರು ಹರಿಸುತ್ತಾಳೆ. ರಾಮದಾಸರು ಆ ತಾಯಿಯನ್ನು ಸಂತೈಸಿ ಹರಸುತ್ತಾರೆ.

Thumari Ramachandra

source: https://www.facebook.com/groups/1499395003680065/permalink/1644967025789528/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s