ತುಮರಿ ತುರ್ಯಾನಂದ ಬೆಚ್ಚಿಬಿದ್ದ ಕತೆ

ತುಮರಿ ತುರ್ಯಾನಂದ ಬೆಚ್ಚಿಬಿದ್ದ ಕತೆ

“ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ, ಪದವಾಕ್ಯಪ್ರಮಾಣ ಪಾರೀವಾಳಕ್ಕೆ ಕಾಳು ಹಾಕುವುದರಲ್ಲಿ ಪ್ರಾವೀಣ, ಯಮನಿಯಮಾಸನಪ್ರಾಣಾಯಾಮಪ್ರತ್ಯಾಹಾರಧ್ಯಾನಧಾರಣಸಮಾಧ್ಯಷ್ಟಾಂಗಯೋಗಾನುಷ್ಠಾನ ರಹಿತ,
ತಪಶ್ಚಕ್ರವರ್ತ್ಯಾದ್ಯನೇಕವಿಶೇಷಣವಿಶಿಷ್ಟ ಶ್ರೀಮಜ್ಜಗಜ್ಜಗಜ್ಜದ್ಗುರು ೧೦೦೮ ಶ್ರೀ ಸಂತಾನೇಶ್ವರ ಶಿಷ್ಯ,
ಶ್ರೀ ಮರಿಸಂತಾನೇಶ್ವರ ಜ್ಯೇಷ್ಠ ಶಿಷ್ಯ, ಶ್ರೀಬುಡಬುಡಿಕೆಬುದ್ದುನಾಮಾದ್ಯವಿಚ್ಛಿನ್ನಗುರುಪರಂಪರಾಪ್ರಾಪ್ತ ಸಕಲಮಹಿಳಾ ಸಕಾಮದಾಯಿನೀ ಏಕಾಂತ ನಿಗಮಾಗಮ ಸಾರಹೃದಯ, ಸಾಂಖ್ಯತ್ರಯ ನಿರೋಧಕ, ವೈದಿಕಮಾರ್ಗದ ವರ್ತಕ, ಸರ್ವತಂತ್ರಸ್ವತಂತ್ರಾದಿ ಪ್ರಪಂಚದಲ್ಲಿರೋ ಸಕಲ ಬಿರುದಾಂಕಿತ, ಕಿಂಗ್ಸ್ ನದೀತೀರವಾಸ, ಕ್ಯಾಲಿಫೋರ್ನಿಯಾ ಮಹಾರಾಜಧಾನೀ ವೈಭವಸಿಂಹಾಸನಾಧೀಶ್ವರ, ವಿಖ್ಯಾತ ವ್ಯಾಖ್ಯಾನ ಚರ್ವಿತ ಚರ್ವಣ ಚಮಚಾ ಸಿಂಹಾಸನಾರೂಢ ಶ್ರೀಮದ್ರಾಜಾಧಿರಾಜಗುರು ತುಮರೀ ತುರ್ಯಾನಂದ ಯತೀಂದ್ರ ಪ್ರಭೋ ಬಹುಪರಾಕ್ ….ಬಹುಪರಾಕ್ …ಕ್ಯಾಕ್ ಕ್ಯಾಕ್ ಕ್ಯಾಕ್ ”

ಗೂಟ ಹಿಡಿದ ಗಿಂಡಿಗಳು ಗಂಟಲು ಕಿತ್ತುಹೋಗುವ ಹಾಗೆ ಕೂಗಿಕೊಂಡರು. ತುರ್ಯಾನಂದ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದ. ಇಂದು ಅವನಿಗೆ ಕಿರೀಟೋತ್ಸವ. ದಿನಾ ಕಾವಿ ತೊಡುವುದು ಇದ್ದಿದ್ದೇ. ಇಂದು ರೇಷ್ಮೆಯ ಕಾವಿ ಧಾರಣೆ. ಕಪೋಲಗಳಿಗೆ ಕ್ರೀಮ್ ಮೆತ್ತಿಕೊಂಡು ಬಾಯಿಗೆ ನಾಲ್ಕು ಬಾದಾಮಿ ಒಗೆದುಕೊಂಡು ಮೆಲ್ಲುತ್ತಾ, ನಿಧಾನವಾಗಿ ಸಭೆಗೆ ಬರುವಾಗ ಸುಮಂಗಲಿಯರು ಚೊಂಬು ಹಿಡಿದು ನಾ ಮುಂದು ತಾ ಮುಂದು ಅಂತ ಬಂದರು. ನೋಡಿದವರೇ ’ಹಳೆಯದೆಲ್ಲ’ ನೆನಪಾಗಿ ದೇಶಾವರಿ ನಗೆ ನಕ್ಕರು. ತುಮರಿ ಚೊಂಬುಗಳನ್ನು ಮುಟ್ಟುತ್ತ ಮುಂದೆ ಸಾಗಿ ಅದೆಂತದೋ ಸಿಂಹಾಸನವಂತೆ ಅದನ್ನು ಏರಿದ.

ವೇದಿಕೆಯಲ್ಲಿ ಎಲ್ಲಿ ನೋಡಿದರೂ ಅವನ ಸಂಸ್ಥಾನದ ಸಮವಸ್ತ್ರ ಧರಿಸಿದವರೇ ನಿಂತು ಬೆವರಿ ವಾಸನೆ ಹೊಡೆಯುತ್ತಿದ್ದರು. ಒಬ್ಬೊಬ್ಬರನ್ನೂ ನೋಡಬೇಕು ಪಾಪ….ತಾವು ಯಾವುದೋ ರಾಜನ ಆಸ್ಥಾನದಲ್ಲಿರುವಂತಹ ಭ್ರಮೆಯಲ್ಲಿಯೇ ಖುಷಿಪಡುತ್ತಿದ್ದರು. ಎಷ್ಟೆಂದರೂ ತುಮರಿ ತುರ್ಯಾನಂದ ಜಗದ್ಗುರುಗಳ ಮಹಾಸಂಸ್ಥಾನವಲ್ಲವೇ?

ಯಾರ್ಯಾರೋ ಬಂದರು, ರಾಜರಿಗೆ ಮುಜುರೆ ಮಾಡುವಂತೆ ಮಾಡಿದರು. ತುರ್ಯಾನಂದ ಸಣ್ಣಗೆ ನಕ್ಕ. ನಂತರ ವೇದ ಘೋಷ ಶುರುವಾಯ್ತು. ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಭಾರೀ ಪ್ರಿಯವಾದ ಅಥರ್ವಣ ವೇದಗಳ ಕೆಲವು ಮಂತ್ರಗಳು ಹೇಳಲ್ಪಟ್ಟವು. ಶಾಸ್ತ್ರ, ಪುರಾಣ, ಭಜನೆ, ಸಂಗೀತ, ನರ್ತನ, ಅಯ್ಯಯ್ಯೋ ನಾನಾ ವಿಧ ಸೇವೆಗಳು ಅಷ್ಟಾಂಗ ಸೇವೆ ನಡೆಯಿತು. ನರ್ತನ ಮಾಡಿದ ಹುಡುಗಿಯ ಸೊಂಟ ಬಳುಕುವುದನ್ನು ಕಂಡ ತುಮರಿಗೆ ಕಿರೀಟವನ್ನೆಲ್ಲ ಕಿತ್ತೆಸೆದು ತಕ್ಷಣವೇ ಏಕಾಂತ ದರ್ಶನ ನೀಡುವ ಮನಸ್ಸಾಯಿತು. ಒಳ್ಳೇ ಕವಳ ಹಾಕಿದವರಿಗೆ ಕೇಸರೀಬಾತು, ಮೈಸೂರ್ ಪಾಕು ಕೊಟ್ಟರೂ ಬೇಕೆನಿಸುವುದಿಲ್ಲವಂತೆ. ಅದೇ ರೀತಿ ಛೆ, ಇಂತಹ ಒಳ್ಳೇ ಫಿಗರು ಸಿಕ್ಕಿರುವಾಗ ಇದೆಲ್ಲ ಯಾಕೆ? “ಏಕಾಂತ ಸೇವೆ ಮಾಡಿ ಸಾಕು” ಎನ್ನೋಣ ಅನ್ನಿಸಿತು. ಹಾಗೆ ಹೇಳಲಾಗುತ್ತದೆಯೇ? ಸುಮ್ಮನಿದ್ದ

ತುರ್ಯಾನಂದನಿಗೂ ಸಾಕಷ್ಟು ಕುರಿಭಕ್ತರಿದ್ದರು. ಈ ಕಿರೀಟೋತ್ಸವದಲ್ಲಿ ಸಿಂಹಾಸನದ ಮೇಲೆ ಕಿರಾತಕನಂತೆ ಕುಳಿತ ತುಮರಿ ತುರ್ಯಾನಂದ ಮಹಾಸ್ವಾಮಿಗಳನ್ನು ನೋಡುವುದೇ ಜನ್ಮಜನ್ಮದ ಪುಣ್ಯವೆಂದುಕೊಂಡು ಕೆನ್ನೆಗೆ ಹೊಡೆದುಕೊಂಡು ಕೈಮುಗಿದರು. ಬೆಳಗಿನ ಮಸಾಲೆದೋಸೆ ಉಪಾಹಾರದ ತೇಗು ಹೊಡೆದವನೇ ಆಹಹ ಎಂತಹ ದಿವ್ಯ ಪರಿಮಳ ಎಂದುಕೊಂಡ ತುಮರಿ ತುರ್ಯಾನಂದ. ಎದುರಿಗೆ ಐಟಿಬಿಟಿ ಹುಡುಗಿಯರ ದಂಡು ಬಂದು ಫೋಟೋ ಕ್ಲಿಕ್ಕಿಸಿತು. ಸಭೆಯಲ್ಲಿದ್ದವರಲ್ಲಿ ಅನೇಕರು ಅದನ್ನು ಕಂಡು, ತಮ್ಮ ಕ್ಯಾಮೆರಾ ಸಾಮಾನುಗಳನ್ನೆಲ್ಲ ಹೊರಹಾಕಿ ಕೈಯಲ್ಲಿ ದೊಣ್ಣೆಯಂತಹ ಲೆನ್ಸ್ ಗೂಟವನ್ನು ಸರಿಪಡಿಸುತ್ತ ಫೋಟೋ ಕ್ಲಿಕ್ಕಿಸಲು ಶುರುವಿಟ್ಟುಕೊಂಡರು. “ಈಗ ಯಾರೂ ದಯಮಾಡಿ ಫೊಟೋ ತೆಗೆಯಬೇಡಿ, ಆಮೇಲೆ ಅದಕ್ಕೆ ಅವಕಾಶ ಮಾಡಿಕೊಡಲಾಗುವುದು” ಎಂದು ಭಕ್ತಗಣದ ಮುಖಂಡರಲ್ಲಿ ಕೆಲವರು ಮೈಕಿನಲ್ಲಿ ಕೂಗಿದರು.

ಅಷ್ಟು ಹೊತ್ತಿಗೆ ಸೇವೆಗಳೆಲ್ಲ ಮುಗಿದು ಮಂಗಳಾರತಿ ನಡೆಯಿತು. ತುಮರಿ ತುರ್ಯಾನಂದನ ಒಂದೊಂದು ಫೋಸೂ ಬಹಳ ಚೆನ್ನಾಗಿತ್ತು. ಸಾಕ್ಷಾತ್ ದೇವರ ಮರಿ ಕುಳಿತಹಾಗೆ ರಾಜಗಾಂಭೀರ್ಯದಿಂದ ಕುಳಿತಿದ್ದ ತುರ್ಯಾನಂದ. ಆದರೂ ಸಭೆಯಲ್ಲಿ ಅಲ್ಲಲ್ಲಿ ಏಕಾಂತ ಪಡೆದ ಸಖಿಯರ ಮುಖದಲ್ಲಿನ ಮಂದಹಾಸಕ್ಕೆ ಉತ್ತರಿಸುವ ಪ್ರಯತ್ನ ಮಾಡುತ್ತಿದ್ದ.

ಓಂ ರಾಜಾಧಿರಾಜಾಯ ಪ್ರಸಹ್ಯಸಾಹಿನೇ । ನಮೋ ವಯಂ ವೈಶ್ರವಣಾಯ
ಕುರ್ಮಹೇ । ಸ ಮೇ ಕಾಮಾನ್ ಕಾಮಕಾಮಾಯ ಮಹ್ಯಂ ಕಾಮೇಶ್ವರೋ ವೈಶ್ರವಣೋ
ದದಾತು । ಕುಬೇರಾಯ ವೈಶ್ರವಣಾಯ ಮಹಾರಾಜಾಯ ನಮಃ ।
ಓಂ ಸ್ವಸ್ತಿ ಸಾಮ್ರಾಜ್ಯಂ ಭೌಜ್ಯಂ ಸ್ವಾರಾಜ್ಯಂ ವೈರಾಜ್ಯಂ ಪಾರಮೇಷ್ಠ್ಯಂ
ರಾಜ್ಯಂ ಮಾಹಾರಾಜ್ಯಮಾಧಿಪತ್ಯಮಯಂ ಸಮಂತಪರ್ಯಾ ಈಸ್ಯಾತ್
ಸಾರ್ವಭೌಮಃ ಸಾರ್ವಾಯುಷ ಆಂತಾದಾಪರಾರ್ಧಾತ್ । ಪೃಥಿವ್ಯೈ
ಸಮುದ್ರಪರ್ಯಂತಾಯಾ ಏಕರಾಳಿತಿ । ತದಪ್ಯೇಷಶ್ಲೋಕೋಽಭಿಗೀತೋ
ಮರುತಃ ಪರಿವೇಷ್ಟಾರೋ ಮರುತ್ತಸ್ಯಾವಸನ್ ಗೃಹೇ ।
ಆವಿಕ್ಷಿತಸ್ಯ ಕಾಮಪ್ರೇರ್ವಿಶ್ವೇದೇವಾಃ ಸಭಾಸದ ಇತಿ

ಮಂತ್ರಪುಷ್ಪ ಹೇಳಿ ಮುಗಿದಿದ್ದೇ ತಡ, ಮಠದ ವೈದಿಕ ಭಕ್ತರೆಲ್ಲ ದಡ ದಡ ದಡ ದಡ ಅಂತ ಬಂದು ದಬೋಲ್ ಅಂತ ಬೋರಲು ಬಿದ್ದರು. ಕುರಿಭಕ್ತರೆಲ್ಲ ಇರುವಲ್ಲೇ ಅವರನ್ನು ಅನುಕರಿಸಿದರು. ಗಿಂಡಿಗಳು ತಾವಿರುವ ಜಾಗಗಳಲ್ಲೇ ಅಡ್ಡಬಿದ್ದು ಮುಜುರೆ ಮಾಡಿದವು.

ಅಷ್ಟರಲ್ಲಿ ದೂರದಲ್ಲಿ ಯಾರೋ ಮಾವಂದಿರು ಬರುತ್ತಿರುವ ಸುದ್ದಿ ಬಂತು. ತುರ್ಯಾನಂದನಿಗೆ ನೋಟೀಸು ನೀಡಲು ಬಂದಿದ್ದರಂತೆ ಅವರು. ತುರ್ಯಾನಂದ ಸೀದಾ ಎದ್ದು ಒಳಒಳಕೋಣೆಗೆ ಬಿಜಯಂಗೈದ. ಪ್ರವಚನ ಗಿವಚನ ಏನೂ ಇಲ್ಲ, ಮಹಾಸ್ವಾಮಿಗಳು ಬಹಳ ಬ್ಯೂಸಿ, ಮಂತ್ರಾಕ್ಷತೆ ಬೇಕಾದರೆ ನಾವೇ ಕೊಡ್ತೇವೆ ತೆಗೆದುಕೊಳ್ಳಿ ಎನ್ನುತ್ತ ಗಿಂಡಿಗಳಲ್ಲೇ ಒಂದಿಬ್ಬರು ಬಣ್ಣಹಚ್ಚಿದ ಅಕ್ಕಿಕಾಳು ವಿತರಿಸಿದರು.

ಒಳಗೆ ಸೇರಿದ ತುರ್ಯಾನಂದ ತುರ್ತಾಗಿ ಮೀಟಿಂಗು ಕರೆದ. ಮಾವಂದಿರನ್ನು ಅಡ್ಡಗಟ್ಟಲು ಬೇಕಾದ ತಂತ್ರವನ್ನು ರೂಪಿಸಿದ. ತಲೆಯಿಲ್ಲದ ಜನತೆಯನ್ನು ಕರೆತಂದು ಅವರ ಹೆಂಗಸರನ್ನೆಲ್ಲ ದಾರಿಯಲ್ಲಿ ಅಡ್ಡಡ್ಡ ಮಲಗಿಸಿಬಿಟ್ಟರು. ಮಲಗಿದವರನ್ನು ತುಳಿದರೆ ಮಾವಂದಿರ ಗ್ರಹಚಾರ ನೆಟ್ಟಗಿರಲಿಕ್ಕಿಲ್ಲ, ತುಳಿಯದೆ ಒಳಗೆ ಹೋಗುವುದು ಸಾಧ್ಯವಿಲ್ಲ. ಹೇಗಿದೆ ಈ ಪ್ಲಾನು? ಧೋ ಗುಟ್ಟು ಸುರಿವ ಮಳೆಯಲ್ಲೂ ಸುಮಾರು ಐದುಸಾವಿರ ಜನ ಜಮಾಯಿಸಿ ಪಾಳಿಯಲ್ಲಿ ಪಹರೆಗೆ ನಿಂತರು ಎಂದರೆ ತುರ್ಯಾನಂದ ಅವರೆಲ್ಲರಿಗೆ ತೀಡಿದ ಮೂರುನಾಮದ ಪವಾಡ ನಿಜಕ್ಕೂ ಮೆಚ್ಚುವಂತದ್ದೇ.

ಆಗ ಹೇಗೋ ತಪ್ಪಿಸಿಕೊಂಡ ತುರ್ಯಾನಂದ. ಅವನಿಗೆ ಬಂದವರು ಯಾರು? ಯಾಕಾಗಿ ಬಂದರು? ಎಲ್ಲವೂ ಗೊತ್ತಿತ್ತು. ಎಲ್ಲವೂ ಗೊತ್ತಿದ್ದೇ ಎಲ್ಲವನ್ನೂ ತನ್ನ ನಿರ್ದೇಶನದ ಮೂಲಕವೇ ನಿಯಂತ್ರಿಸಲು ಸೂಟ್ ಕೇಸ್ ಕಳಿಸುವ ವ್ಯವಸ್ಥೆ ಮಾಡಲು ರೆಡಿಯಾಗುತ್ತಿದ್ದ. ಅದಕ್ಕಾಗಿ ಸ್ವಲ್ಪ ತಡವಾಗಿತ್ತಷ್ಟೆ.

ಛೆ ಛೆ ಅದೆಲ್ಲ ಬಿಡಿ, ಇಂತಹ ಕತೆಗಳನ್ನು ನೀವು ಇನ್ನೆಲ್ಲೋ ಕೇಳಿ ಕೇಳಿ ವಾಕರಿಕೆ ಬರುವಷ್ಟಾಗಿದೆ ನಿಮಗೀಗ. ಈಗ ನೇರವಾಗಿ ಪರೀಕ್ಷಾ ಕೇಂದ್ರದ ಸೀನಿಗೆ ಬರೋಣ.

ಪರೀಕ್ಷಾ ಕೇಂದ್ರದಲ್ಲಿ ತಾನೊಬ್ಬ ದೊಡ್ಡ ಜಂಟಲ್ ಮನ್ ಮಹಾಸ್ವಾಮಿ ಎಂಬಂತೆ ನಟಿಸಿದನಂತೆ ತುರ್ಯಾನಂದ. ವೈದ್ಯಾಧಿಕಾರಿಗಳ ಹತ್ತಿರ “ಇದೆಲ್ಲಾ ಸುಳ್ಳು ಕೇಸ್ ಬಿದ್ದು ಹೋಗ್ತದೆ” ಎಂದನಂತೆ. ಒಳಗೆ ಹೋದಾಗ ಮಂಚದಮೇಲೆ ಮಲಗಲು ಹೇಳಿದರೆ “ಅಯ್ಯಯ್ಯೋ ನಮಗೆಲ್ಲ ಬಹಳ ಮಡಿಯಪ್ಪ, ನಾವು ಹಾಗೆಲ್ಲ ಮಲಗೋ ಹಾಗಿಲ್ಲ” ಎನ್ನುತ್ತ ಕಾವಿ ಶಾಟಿಯನ್ನು ಹಾಸಿ ಅದರ ಮೇಲೆ ಮಲಗಿದನಂತೆ. ಸಾಮಾನಿಗೆ ಸಂಬಂಧಿಸಿದ ಮೂರು ಪರೀಕ್ಷೆಗಳಿಗೆ ಮಾತ್ರ ಅನುಮತಿಯನ್ನೇ ನೀಡಲಿಲ್ಲವಂತೆ. ಪಾಪ ವೈದ್ಯಾಧಿಕಾರಿಗಳೇನು ಮಾಡ್ತಾರೆ? ಕೈಲಾಗೋದನ್ನು ಶಾಸ್ತ್ರಕ್ಕೆ ಮಾಡಿ ಮುಗಿಯಿತು ಎಂದರು.

ಹೊರಗೆ ಭಕ್ತಕುರಿಗಳಿಗೆ ಸುದ್ದಿ ಹೇಳಬೇಕಲ್ಲ? ಎಲ್ಲಾ ಮಾಧ್ಯಮಗಳಲ್ಲಿ ಅರೆಬರೆ ಸುದ್ದಿ ಕೇಳಿರ್ತಾರೆ. ಅದಕ್ಕೆ ತುರ್ಯಾನಂದ ಮಠದಲ್ಲಿ ಇನ್ನೊಂದು ಮೀಟಿಂಗು ಕರೆದು “ನಮ್ಮ ಸ್ವಾಮಿಗಳನ್ನು ಬಹಳ ಒಳ್ಳೆ ರೀತಿಯಲ್ಲಿ ನಡೆಸಿಕೊಂಡರು. ಹೊರಡುವಾಗ ಕಾಲಿಗೆ ಬಿದ್ದು ನಮಸ್ಕರಿಸಿದರು”ಎಂದು ಕತೆ ಹಬ್ಬಿಸಲು ಹೇಳಿದ.

“ಶ್ರೀಮದ್ರಾಜಾಧಿರಾಜಗುರು ತುಮರೀ ತುರ್ಯಾನಂದ ಯತೀಂದ್ರ ಪ್ರಭೋ ಬಹುಪರಾಕ್ ….ಬಹುಪರಾಕ್ …ಕ್ಯಾಕ್ ಕ್ಯಾಕ್ ಕ್ಯಾಕ್ ” ಅದೇನದು? ಪರಾಕು ಕೇಳಿಬರ್ತಿದೆ, ನಾವೆಲ್ಲಿದ್ದೇವೆ ಎನ್ನುತ್ತ ತುಮರಿ ತುರ್ಯಾನಂದ ಬೆಚ್ಚಿಬಿದ್ದು ಕನಸಿನಿಂದಾಚೆಗೆ ಬಂದ. ಹಾಸಿಗೆ ಬಿಟ್ಟೆದ್ದ ತುಮರಿ ರಾಮಚಂದ್ರ “ಛೆ, ಎಂತಾ ಕನಸಪ್ಪ….ಹಾಳಾದದ್ದು..”ಎಂದು ಬೈದುಕೊಳ್ಳುತ್ತ ಮುಖಮಾರ್ಜನೆಗೆ ಬಾತ್ ರೂಮಿಗೆ ಓಡಿಹೋದ.

Thumari Ramachandra

source: https://www.facebook.com/groups/1499395003680065/permalink/1642736486012582/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s