ಹಾವಾಡಿಗೇಶ್ವರ ಮತ್ತು ನಾನೂರು ಕಳ್ಳರು

ಹಾವಾಡಿಗೇಶ್ವರ ಮತ್ತು ನಾನೂರು ಕಳ್ಳರು

ಬರಹದ ಅಭಿರುಚಿಯವರಿಗೆ ಅಲಿಬಾಬಾ ಕತೆ ಸಾಮಾನ್ಯವಾಗಿ ಗೊತ್ತೇ ಇರುತ್ತದೆ. ಅದನ್ನೇ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಬರೆಯುವ ಪದ್ಧತಿಯೂ ಇದೆ. ಮೂಲಕಥೆಯ ಹೆಸರನ್ನು ಬಿಟ್ಟರೆ ಪೂರ್ಣಪಾಠವನ್ನು ಕೆಲವರು ಕೇಳಿರಲಿಕ್ಕಿಲ್ಲ; ಅದಕ್ಕಾಗಿ ಕತೆಯೊಡಗನೆ ಸಹಗಮನ ತುಮರಿಯ ಇಂದಿನ ಕಾಲಕ್ಷೇಪ.

ಹಿಂದೊಂದು ಕಾಲಕ್ಕೆ ಪರ್ಶಿಯಾದಲ್ಲಿದ್ದ ಅಲಿಬಾಬಾ ಎಂಬ ಬಡವ ಕಾಡಿಗೆ ಹೋಗಿ ಸೌದೆ ಕಡಿದು ತಂದು ಜೀವನ ಮಾಡುತ್ತಿದ್ದ. ಒಮ್ಮೆ ಅವನು ಸೌದೆ ಕಡಿಯುತ್ತಿದ್ದಾಗ ಕೇಳಿಬಂದ ಕುದುರೆ ಖುರಪುಟಗಳ ಶಬ್ದಕ್ಕೆ ಹೆದರಿ ಮರವೇರಿ ಅಡಗಿ ಕುಳಿತ. ಸ್ವಲ್ಪವೇ ಹೊತ್ತಿನಲ್ಲಿ ಅದೇ ಮರದ ಕೆಳಗೆ ನಲವತ್ತು ಕುದುರೆಗಳನ್ನೇರಿ ನಲ್ವತ್ತು ಕಳ್ಳರು ಬಂದಿಳಿದರು. ಪ್ರತಿಯೊಬ್ಬನ ಜೊತೆಗೆ ಅವನು ಕದ್ದು ತಂದ ಸಾಮಾನುಗಳ ಮೂಟೆಯೂ ಇತ್ತು. ಕಳ್ಳರ ಮುಖಂಡ ಹತ್ತಿರದಲ್ಲೇ ಇದ್ದ ಗವಿಯ ಬಳಿಗೆ ಹೋಗಿ “ಬಾಗಿಲು ತೆಗೆ ಸೇಸಮ್ಮ” ಎಂದತಕ್ಷಣ ಗುಹೆಯ ಬಾಗಿಲು ತೆರೆದುಕೊಂಡಿತು. ಕಳ್ಳರು ತಮ್ಮ ಮೂಟೆಗಳನ್ನು ಹೊತ್ತು ಒಳಗೆ ಹೋಗಿ ಅಲ್ಲೇ ಬಿಟ್ಟು ಹೊರಬಂದರು. ಮುಖಂಡನು “ಬಾಗಿಲು ಮುಚ್ಚಿಕೋ ಸೇಸಮ್ಮ” ಎಂದಕೂಡಲೆ ಗುಹೆಯ ಬಾಗಿಲು ಮುಚ್ಚಿಕೊಂಡಿತು. ಕಳ್ಳರು ಕುದುರೆಗಳನ್ನು ಹತ್ತಿ ಎತ್ತಲೋ ಹೊರಟುಹೋದರು.

ಎಲ್ಲವನ್ನೂ ಕೇಳಿಸಿಕೊಂಡಿದ್ದ ಅಲಿಬಾಬಾ ಮೆಲ್ಲನೆ ಕೆಳಗಿಳಿದು ಬಂದು ಗುಹೆಯ ಮುಂದೆ ನಿಂತು “ಬಾಗಿಲು ತೆಗೆ ಸೇಸಮ್ಮ” ಎಂದ. ತೆರೆದ ಬಾಗಿಲ ಮೂಲಕ ಗುಹೆಯೊಳಗೆ ಹೋದರೆ ಅಲ್ಲಿ ರಾಶಿರಾಶಿ ನಾಣ್ಯಗಳೂ ಮುತ್ತು ರತ್ನಗಳೂ ಬಿದ್ದಿದ್ದವು. ಅಲಿಬಾಬಾ ತಾನು ಹೊರುವಷ್ಟನ್ನು ಕಟ್ಟಿಕೊಂಡು “ಬಾಗಿಲು ಮುಚ್ಚಿಕೋ ಸೇಸಮ್ಮ” ಎಂದು ಬಾಗಿಲು ಮುಚ್ಚಿದ್ದನ್ನು ಖಾತ್ರಿ ಪಡಿಸಿಕೊಂಡು ಮನೆಗೆ ಬಂದ. ಕೆಲವೊಮ್ಮೆ ಬಾಗಿಲಿನಲ್ಲಿ ಬ್ರಹ್ಮರಾಕ್ಷಸರೂ ಇರುತ್ತಾರೆ ಎಂಬುದು ನಮ್ಮ ಹಾವಾಡಿಗ ಸ್ವಾಮಿಗಳು ತಪಸ್ಸಿದ್ಧಿಯಿಂದ ಕಂಡ ’ನಿಜವಾದ ಸತ್ಯ.’

ಅಲಿಬಾಬಾಬನ ಹೆಂಡತಿಗೆ ನಗನಾಣ್ಯಗಳನ್ನು ಕಂಡು ಸಖತ್ ಖುಷಿಯಾಗಿ, ಅಳೆದು ನೆಲದಲ್ಲಿ ಹುಗಿದಿಡಬೇಕೆಂದು ಅಲಿಬಾಬಾನ ಅಣ್ಣನ ಮನೆಗೆ ಹೋಗಿ ಅಳತೆಯ ಸೇರೊದನ್ನು ಕಡ ತಂದಳು. ಸೇರು ಕೊಡುವ ಮುಂಚೆ ಅವನಣ್ಣ ಕುತೂಹಲದಿಂದ ಸೇರಿನ ತಳಕ್ಕೆ ಸ್ವಲ್ಪ ಮೇಣವನ್ನು ಹಚ್ಚಿಕೊಟ್ಟಿದ್ದ. [ಆಗಲೇ ಇಂತಹ ಕಂತ್ರಿ ಬುದ್ಧಿಯ ಅಣ್ಣಂದಿರೂ ಇದ್ದರು ಎಂದಾಯ್ತು!] ಅಳೆದಾದ ನಂತರ ಅಲಿಬಾಬಾನ ಹೆಂಡತಿ ಸೇರನ್ನು ವಾಪಸು ಕೊಟ್ಟಳು. ತಳದಲ್ಲಿ ಮೇಣಕ್ಕೆ ಅಂಟಿಕೊಂಡಿದ್ದ ಬಂಗಾರದ ನಾಣ್ಯವನ್ನು ನೋಡಿ, ಅಣ್ಣ ತಮ್ಮನಲ್ಲಿಗೆ ಬಂದು “ಈ ಹಣ ನಿನಗೆಲ್ಲಿ ಸಿಕ್ಕಿತು ಹೇಳು” ಎಂದು ಬಲವಂತ ಮಾಡಿ,ವಿಷಯವೆಲ್ಲವನ್ನೂ ತಿಳಿದುಕೊಂಡು ಮರುದಿನವೇ ಹತ್ತು ಹೇಸರಗತ್ತೆಗಳನ್ನು ಹೊಡೆದುಕೊಂಡು ಗವಿಯ ಬಳಿಗೆ ಹೋದ. ಅವನು ನಗನಾಣ್ಯಗಳನ್ನು ಗಂಟುಕಟ್ಟುತ್ತಿದ್ದಾಗ ನಲವತ್ತು ಮಂದಿ ಕಳ್ಳರು ಅಲ್ಲಿಗೆ ಬಂದೇ ಬಿಟ್ಟರು. ಕಳ್ಳರಿಗೇ ಕಳ್ಳನೋ ಎನ್ನುತ್ತ ಅವನನ್ನು ಅವರು ಅಲ್ಲಿಯೇ ಹೊಡೆದು ಕೊಂದುಬಿಟ್ಟರು.

ಅಲಿಬಾಬಾನ ಹೆಂಡತಿ ಸೇರಿನ ತಳವನ್ನು ನೋಡದಷ್ಟು ದಡ್ಡಿಯಾಗಿದ್ದಳೇ?ಗೊತ್ತಿಲ್ಲ, ಮಹಾಭಾರತದಲ್ಲಿ ದ್ರೌಪದಿ ತೊಳೆದಿಟ್ಟ ಪಾತ್ರೆಯಲ್ಲಿ ಒಂದು ಅಗುಳು ಕೃಷ್ಣನಿಗೆ ಸಿಕ್ಕಿತ್ತಲ್ಲ? ದ್ರೌಪದಿ ಪಾತ್ರೆಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿರಲಿಲ್ಲವೇ? ಗೊತ್ತಿಲ್ಲ. ಕತೆಗಳಲ್ಲಿ ಬರುವ ಇಂತಹ ಕ್ಶುಲ್ಲಕ ಸಂಗತಿಗಳನ್ನು ಜಾಸ್ತಿ ಕೆದಕಿದರೆ ಕತೆ ಸೌಂದರ್ಯಗೆಡುತ್ತದೆ. ಕಂತ್ರಿಬುದ್ಧಿ ಹೆಚ್ಚಾದರೆ ಯಾವುದರಲ್ಲಿ ಪರ್ಯವಸಾನವಾಗುತ್ತದೆ ಎಂಬುದಕ್ಕೆ ಇದೂ ಒಂದು ಉದಾಹರಣೆ.

ಕಾಡಿಗೆ ಹೋದ ಗಂಡ ಎಷ್ಟು ಹೊತ್ತಾದರೂ ಬರಲಿಲ್ಲವೆಂದು ಅಣ್ಣನ ಹೆಂಡತಿ ಅಲಿಬಾಬಾನ ಮನೆಗೆ ಬಂದು ಗೋಳಿಟ್ಟಳು. ಎಷ್ಟೆಂದರೂ ಒಡಹುಟ್ಟಿದ ಅಣ್ಣನಲ್ಲವೇ? ಅಲಿಬಾಬಾ ಕಾಡಿಗೆ ಹೋಗಿ ಗುಹೆಯೊಳಗೆ ಬಿದ್ದಿದ್ದ ಅಣ್ಣನ ದೇಹವನ್ನು ತಂದು ಮಣ್ಣು ಮಾಡಿದ. ಆ ಊರಿನ ಜನ ಮಾತ್ರ ಬಡವನಾಗಿದ್ದ ಅಲಿಬಾಬಾ ಇದ್ದಕ್ಕಿದ್ದಂತೆ ಶ್ರೀಮಂತನಾದ ವಿಷಯ, ಅವನ ಅಣ್ಣ ಸತ್ತುಹೋದ ವಿಷಯಗಳನ್ನು ಪದೇ ಪದೇ ಮಾತನಾಡಿಕೊಂಡರು. ಸುದ್ದಿ ಕಳ್ಳರ ಮುಖಂಡನ ಕಿವಿಗೆ ಬಿತ್ತು.

ಅವನು ಅಲಿಬಾಬಾನನ್ನು ಸಾಯಿಸಬೇಕೆಂದುಕೊಂಡು ಎಣ್ಣೆಯ ವ್ಯಾಪಾರಿಯ ವೇಷದಲ್ಲಿ ಬಂದು “ಅಯ್ಯಾ, ಇದೊಂದು ರಾತ್ರಿ ನಿಮ್ಮ ಮನೆಯಲ್ಲಿ ಇರಲು ಸ್ವಲ್ಪ ಜಾಗ ಕೊಡಿ. ಬೆಳಗಾಗೆದ್ದು ಹೊರಟುಹೋಗ್ತೇನೆ. ನನ್ನ ಹತ್ತಿರ ಮೂವತ್ತೊಂಬತ್ತು ಎಣ್ಣೆಯ ಪೀಪಾಯಿಗಳಿವೆ. ಅದನ್ನೆಲ್ಲ ಎಲ್ಲಿಡಲಿ?” ಎಂದು ಕೇಳಿದ. “ಓಹೋ, ಅದಕ್ಕೇನಂತೆ, ಆಗಬಹುದು, ಪಿಪಾಯಿಗಳನ್ನು ಅಂಗಳದಲ್ಲಿಟ್ಟಿರಿ, ಯಾರೂ ಎತ್ತಿಕೊಂಡು ಹೋಗುವುದಿಲ್ಲ.”ಎಂದ ಅಲಿಬಾಬಾ.

ಅಲಿಬಾಬಾನ ಮನೆಯಲ್ಲಿ ಮಾರ್ಗನೀತಾ ಎಂಬ ಚುರುಕಾದ ಕೆಲಸದ ಹುಡುಗಿಯಿದ್ದಳು. ಅಡುಗೆಗೆ ಸ್ವಲ್ಪ ಎಣ್ಣೆ ತರಲೆಂದು ಅವಳು ಪೀಪಾಯಿಗಳ ಸಮೀಪ ಬಂದು ಮುಚ್ಚಳ ಸರಿಸುವಷ್ಟರಲ್ಲಿ, ಅದರೊಳಗೆ ಅಡಗಿದ್ದ ಕಳ್ಳ ಮುಖಂಡನೇ ತೆರೆದನೆಂದುಕೊಳ್ಳುತ್ತ “ಸಮಯವಾಯಿತೆ?” ಎಂದು ಕೇಳಿದ. ಇದರಲ್ಲೇನೋ ಮೋಸವಿದೆಯೆಂದರಿತ ಅವಳು ಮನೆಯೊಳಗಿದ್ದ ಎಣ್ಣೆಯನ್ನು ಕುದಿಸಿ ತಂದು ಪ್ರತಿಯೊಂದು ಪೀಪಾಯಿಯೊಳಗೂ ಸುರಿದಳು. ಒಳಗಿದ್ದ ಕಳ್ಳರು ಬೆಂದುಹೋದರು.

ಇಲ್ಲಿಯೂ ಕ್ಷುಲಕ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ನಲ್ವತ್ತು ಜನರು ಪಿಪಾಯಿಗಳಲ್ಲಿ ಬೆಂದುಹೋಗುವಷ್ಟು ಎಣ್ಣೆ ಅಲಿಬಾಬಾನ ಮನೆಯಲ್ಲಿತ್ತೇ? ಅದನ್ನೆಲ್ಲ ಒಟ್ಟಿಗೇ ಕಾಯಿಸಿ ಸುರಿದಳೇ? ಮೊದಲು ಕಾದ ಎಣ್ಣೆಯ ರುಚಿ ಸವಿದಾಗ ಕೂಗಿಕೊಳ್ಳಲಿಲ್ಲವೇ? ಮೊದಲೇ ಹೇಳಿದಹಾಗೆ ಇಲ್ಲಿ ಅದೆಲ್ಲ ಗೌಣ. ಅದಿರಲಿ, ಮೂವತ್ತೊಂಬತ್ತು ಕಳ್ಳರು ಕಮಕ್ ಕಿಮಕ್ ಎನ್ನದೆ ಅಲ್ಲೇ ಅಲ್ಲಾಹುವನ್ನು ಕಂಡರು, ಓಕೆ, ಬಿಟ್ಟಾಕಿ. ಊಟವಾದ ಬಳಿಕ ಮಾರ್ಗನೀತಾ ನರ್ತಕಿಯ ವೇಷ ಹಾಕಿಕೊಂಡು ಅಲಿಬಾಬಾ ಮತ್ತು ಅತಿಥಿಯ ಮುಂದೆ ನರ್ತನ ಮಾಡಲಾರಂಭಿಸಿದಳು. ಅತಿಥಿ ಕಳ್ಳ ತನ್ನ ರೂಪಕ್ಕೆ ಮಾರುಹೋಗಿ ನರ್ತನ ನೋಡುವುದರಲ್ಲಿ ಮೈಮರೆತಿದ್ದಾಗ ಕೈಲಿದ್ದ ಭರ್ಜಿಯಿಂದ ಅವನನ್ನು ತಿವಿದುಬಿಟ್ಟಳು. ಅರೇ ಇಸ್ಕಿ, ವೋ ಚೋರ್ ಸೀದಾ ಊಪರ್ ಗಯಾ ರೆ, ಚೋಡ್.

ಅಲಿಬಾಬಾ ಮಾರ್ಗನೀತಾಳ ಧೈರ್ಯಕ್ಕೆ ಮೆಚ್ಚಿ ಅವಳನ್ನು ತನ್ನ ಮಗನಿಗೆ ಮದುವೆ ಮಾಡಿಸಿಕೊಂಡ. ಮುಂದೆ ಅವರೆಲ್ಲರೂ ಸುಖವಾಗಿದ್ದರು ಎಂಬಲ್ಲಿಗೆ ಈ ಕತೆ ಖತಮ್ ಹೋಗಯಾ ರೆ.

ದೋರೆ ಎಂಬುದೊಂದು ಪ್ರದೇಶದಲ್ಲಿ ಯೋಗ ಸನ್ಯಾಸಿಯೊಬ್ಬರಿದ್ದು, ಕಾಶಿಯಾತ್ರೆಗೆ ಹೊರಟು ಸ್ಪೀಡಾಗಿ ಕಾರಿನಲ್ಲಿ ಹೋಗುತ್ತಿದ್ದಾಗ, ಸರಿಯಾಗಿ ಲಾಕ್ ಆಗಿರದ ಕಾರಿನ ಬಾಗಿಲು ತೆರೆದುಕೊಂಡು, ಹೆದ್ದಾರಿಯಲ್ಲಿ ಬಿದ್ದು ಅಪಘಾತದಲ್ಲಿ ತಲೆಯೊಡೆದು ಸತ್ತುಹೋದರು. ಅವರ ಮಹಾಸಮಾಧಿಗೆ ತೆರಳಿದ್ದ ನಮ್ಮ ಹಾವಾಡಿಗ ಶ್ರೀಸಂಸ್ಥಾನದವರಿಗೆ ಆ ರಾತ್ರಿ ದೋರೆಯ ಕೋಣೆಯಲ್ಲಿ ಬ್ರಹ್ಮರಾಕ್ಷಸರ ಕಾಟ ಅಷ್ಟಿಟಲ್ಲ! ಗಡ್ಡಬಿಟ್ಟ ಬ್ರಹ್ಮರಾಕ್ಷಸ, ಊದ್ದದ ಶರೀರದ ಆಜಾನುಬಾಹು ಬ್ರಹ್ಮರಾಕ್ಷಸ, ಕರ್ರಗಿನ ಬ್ರಹ್ಮರಾಕ್ಷಸ, ಕೆಂಪಿಕಣ್ಣಿನ ಬ್ರಹ್ಮರಾಕ್ಷಸ ಹೀಗೆ ಚೋಟುದ್ದದಿಂದ ಹಿಡಿದು ಆಕಾಶದೆತ್ತರದಷ್ಟು ಬ್ರಹ್ಮರಾಕ್ಷಸರ ದಂಡೇ ಕೋಣೆಯಲ್ಲಿ ಸೇರಿಕೊಂಡಿತ್ತು. ಅದನ್ನವರು ಬಹಳ ಪ್ರೀತಿಯಿಂದ ಕೆಲವು ಮಹಿಳಾ ಭಕ್ತರಲ್ಲಿ ಹೇಳಿಕೊಂಡರು.

ದೋರೆಯ ಯೋಗ ಸನ್ಯಾಸಿಗಳು ಹೆದ್ದಾರಿಯಲ್ಲಿ ಬಿದ್ದು ಅಂತ್ಯಕಾಣುವುದಕ್ಕೂ ಅದೇ ಬ್ರಹ್ಮರಾಕ್ಷಸರ ದಂಡೇ ಕಾರಣವೆಂದೂ ತಮ್ಮಂತಹ ಮಹಾತಪಸ್ವಿಗಳಿಗೇ ಇಷ್ಟೊಂದು ತೊಂದರೆ ಕೊಡಬೇಕಾದರೆ ಇನ್ನು ಅವರಿಗೆ ಎಷ್ಟು ತೊಂದರೆ ಕೊಟ್ಟಿರಲಿಕ್ಕಿಲ್ಲ? ಎಂದು ಆ ಮಹಿಳೆಯರ ಮನಸ್ಸಿಗೆ ಹುಳಬಿಟ್ಟರು. ಹೆದರಿ ಕಂಗಾಲಾದ ಮುದುಕು ಮಹಿಳೆಯರು ಹಾವಾಡಿಗೇಶ್ವರರು ದೋರೆಯಲ್ಲಿರುವವರೆಗೂ ಮತ್ತೆ ಆ ಕಡೆ ತಲೆಹಾಕಲಿಲ್ಲ. ಆಗಲೇ ಹಾವಾಡಿಸುವುದನ್ನು ತ್ರಿಕಾಲಾನುಷ್ಠಾನವಾಗಿ ಆರಂಭಿಸಿದ್ದ ಹಾವಾಡಿಗೇಶ್ವರರು ತಮ್ಮ ಕೆಲಸ ಸಲೀಸಾಗಿದ್ದಕ್ಕೆ ಒಳಗೊಳಗೇ ಖುಷಿಪಟ್ಟರು.

ಸದ್ಯಕ್ಕೆ ಹಾವಾಡಿಗೇಶ್ವರರೂ ಕಳ್ಳರ ಮುಖಂಡರೇ; ಸುತ್ತ ನಲ್ವತ್ತಲ್ಲ ನಾನೂರು ಮಂದಿ ಕಳ್ಳರಿದ್ದಾರೆ. ಭಕ್ತಕುರಿಗಳನ್ನು ಹಗಲಲ್ಲೇ ದೋಚುವುದು ಅವರ ಕಾಯಕ. ಇಲ್ಲಿ ಬಾಗಿಲು ತೆರೆಯಲಿಕ್ಕೆ ವಿಶಾರದಮ್ಮ ಮತ್ತು ನಮೇಸ ಇದ್ದಾರೆ. “ಬಾಗಿಲು ತೆರೆಯೇ ವಿಶಾರದಮ್ಮ” ಅಥವಾ “ಬಾಗಿಲು ತೆರೆಯೋ ನಮೇಸ” ಎಂದರೆ ಏಕಾಂತದ ಕೋಣೆಯ ಬಾಗಿಲು ತೆರೆಯುತ್ತದೆ. [ಯಾರೂ ಪ್ರಯತ್ನಿಸಲು ಹೋಗಬೇಡಿ ಮತ್ತೆ, ಹೋದರೆ ಕೊಂದು ಮುಗಿಸೋದು ಗ್ಯಾರಂಟಿ.] ಇಲ್ಲಿ ನಗನಾಣ್ಯಗಳ ಜೊತೆಗೆ ಹೆಣ್ಣುಗಳ್ಳತನವೂ ಆಗುತ್ತದೆ. ಶಿಖರ ನಗರದ ಹಾಸ್ಟೆಲುಗಳಿಂದ ಅಪರಾತ್ರಿಯಲ್ಲಿ ಹೆಣ್ಣುಮಕ್ಕಳನ್ನು ಕರೆತರಲಾಗುತ್ತದೆ. ಇಲ್ಲಿ ಬಾಗಿಲು ತೆಗೆಯುವ ಮಂತ್ರವನ್ನು ಹೇಳುವ ಅಧಿಕಾರವಿರೋದು ಹಾವಾಡಿಗ ಸಂಸ್ಥಾನಾಧೀಶ್ವರರಿಗೆ ಮಾತ್ರ. ಇಲ್ಲಿನ ಕಳ್ಳರ ಗ್ಯಾಂಗನ್ನು ಯಾವಾಗ ಮುಗಿಸುವುದೆಂದು ದೇವರಿಗೇ ಗೊತ್ತಿಲ್ಲವೇ ಎಂಬ ಅನುಮಾನ. ಇಲ್ಲಿನ ಕಳ್ಳನಿಗೆ ನರ್ತಕಿ ಭರ್ಜಿ ಹಾಕಲಿಲ್ಲ, ನಾಯಕಿ ದೂರು ಕೊಟ್ಟಿದ್ದಾಳೆ.

Thumari Ramachandra

source: https://www.facebook.com/groups/1499395003680065/permalink/1641236722829225/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s