ಆ ಮಕ್ಕಳ ಡಿ.ಎನ್.ಎ ತೆಗೆಸಿದರೆ ಹಾವಾಡಿಗ ಶ್ರೀಸಂಸ್ಥಾನವೇ ಅವುಗಳ ಅಪ್ಪ ಎಂಬುದು ಸಾಬೀತಾಗುತ್ತದೆ.

ಆ ಮಕ್ಕಳ ಡಿ.ಎನ್.ಎ ತೆಗೆಸಿದರೆ ಹಾವಾಡಿಗ ಶ್ರೀಸಂಸ್ಥಾನವೇ ಅವುಗಳ ಅಪ್ಪ ಎಂಬುದು ಸಾಬೀತಾಗುತ್ತದೆ.
_________________________

ಕವಳದ ಗೋಪಣ್ಣ ಬಹಳದಿನ ಸಿಕ್ಕಿರಲಿಲ್ಲ. ಅವನ ಮಾತುಗಳಲ್ಲಿ ಅವನು ಹೇಳಿದ ಕತೆಯನ್ನು ನಿಮಗೊಪ್ಪಿಸಿದರೆ ಎಲ್ಲರಿಗೂ ಅರ್ಥವಾಗಲಿಕ್ಕಿಲ್ಲ. ಹೀಗಾಗಿ ತುಮರಿಯೇ ನೇರವಾಗಿ ಬರೆಯುತ್ತಿದ್ದಾನೆ. ಗೋಪಣ್ಣನ ಹತ್ತಿರ ತುಮರಿ “ಮಮ ಹೇಳ್ಕ್ಯ” ಹೇಳಿದ್ದಾನೆ.

ಅದೊಂದು ಊರು. ಯಾವೂರು? ಯಾರು? ಎಲ್ಲಿ? ಎತ್ತ? ಅದನ್ನೆಲ್ಲ ಕೇಳುವ ಹಾಗಿಲ್ಲ. ಆ ಊರಿಗೊಬ್ಬ ಪಂಚಾಯ್ತಿ ಮುಖಂಡ, ನಮ್ಮವನೇ. ಪ್ರತೀವರ್ಷ ಆಗಸ್ಟ್ ಹದಿನೈದು ಬಂದರೆ ಆತನ ನೆನಪಾಗುತ್ತದೆ. ಧ್ವಜ ಹಾರಿಸುವ ಸಲುವಾಗಿ ಅವನನ್ನು ಕರೆಯಲು ಅವರ ಮನೆಗೆ ಹೋಗಬೇಕಿತ್ತು. ಬೆಳಗಿನ ಎಂಟುಗಂಟೆಯಾದರೂ ಆ ಮನುಷ್ಯನಿಗೆ ಕೆಲವೊಮ್ಮೆ ಬೆಳಗಾಗುತ್ತಿರಲಿಲ್ಲ. ಹೇಳಿಕೇಳಿ ಊರಿಗೇ ಮುಖಂಡನಪ್ಪ, ಆದರ್ಶವಾಗಿರಬೇಕು ಎಂಬುದು ಊರವರ ಅನಿಸಿಕೆ. ಆತನ ವ್ಯವಹಾರವೆಲ್ಲವೂ ತದ್ವಿರುದ್ಧ.

ನೋಡುವುದಕ್ಕೆ ತಕ್ಕಮಟ್ಟಿಗೆ ಸ್ಫುರದ್ರೂಪಿ. ಗರಿಗರಿ ಶರ್ಟು, ಬಿಳಿ ಅಡ್ಡ ಪಂಚೆ[ಮುಂಡು] ಕೈಲೊಂದು ಎಲ್.ಐ.ಸಿ ಡೈರಿ ಮತ್ತು ಚಿಕ್ಕ ಹ್ಯಾಂಡ್ ಬ್ಯಾಗು. ಕುಲಪತಿ ಬಾವಯ್ಯನಷ್ಟೇ ಎತ್ತರದ ಆಳ್ತನ. ವೇದಿಕೆ ಮತ್ತು ಮೈಕು ಸಿಕ್ಕಿಬಿಟ್ಟರೆ ವಾಗ್ಝರಿಗೆ ಎದುರ್ಗಿರುವವರೆಲ್ಲ ಮಂತ್ರಮುಗ್ಧರು. ಅವನಲ್ಲೇನು ಐಪ್ಯಾಡ್, ಐಫೋನ್ ಇರಲಿಲ್ಲ. ಕತೆ ಬರೆದುಕೊಡಲು ಕವಿಗಳೂ ಇರಲಿಲ್ಲ. ಅವನದ್ದೇ ಶೈಲಿಯಲ್ಲಿ ಅಮೋಘವಾಗಿ ಭಾಷಣ ಬಿಗಿಯುತ್ತಿದ್ದ. ಸಭೆಯಲ್ಲಿರುವ ಜನರ ಕಣ್ಣುಗಳಲ್ಲಿ ಕರುಣರಸ ಉಕ್ಕಿ ಹನಿಹನಿಯಾಗಿ ಹರಿಯುವಂತೆ ಮಾಡಬಲ್ಲ, ಅರೆಕ್ಷಣದಲ್ಲಿ ನಗೆಗಡಲಲ್ಲಿ ತೇಲಿಸಬಲ್ಲ ಅಸಾಧಾರಣ ವ್ಯಕ್ತಿ.

ಗದ್ದೆ, ತೋಟಗಳಲ್ಲಿ ಪಿಕಾಶಿ ಹಿಡಿದು ಸ್ವತಃ ಕೆಲಸಕ್ಕೂ ಸೈ. ಆಗ ನೋಡಬೇಕು, ಅಯ್ಯಯ್ಯೋ ಅಷ್ಟೆಲ್ಲಾ ಶ್ರೀಮಂತ ಮಹಲೋಭಿ, ಆಳು ಕರೆಸೋದಕ್ಕೆ ಆಗ್ತಿರಲಿಲ್ವ? ಎಂದು ನೋಡಿದವರು ಆಡಿಕೊಳ್ಳುವಷ್ಟು ಹಣ ಉಳಿತಾಯ ಮಾಡುವವ. ಸುಂದರ ಹೆಂಡತಿ, ನಾಲ್ಕು ಮಂದಿ ಮಕ್ಕಳು, ಅಂದದ ಹಂಚಿನ ಮನೆ ಚಂದದ ಸಂಸಾರ. ಊರಲ್ಲಿ ಅವನಷ್ಟು ಮಾತುಗಾರಿಕೆ, ಆಡ್ಯತೆ ಇದ್ದವರು ಇಲ್ಲವೇನೋ ಎಂಬಷ್ಟು ಮುನ್ನುಗುತ್ತ, ಸರಕಾರೀ ಅಧಿಕಾರಿಗಳಿಗೆ, ಬ್ಯಾಂಕ್ ಮ್ಯಾನೇಜರು, ಕೆ.ಇ.ಬಿ ಎಂಜಿನೀಯರು, ಹೊಸದಾಗಿ ಊರ ಶಾಲೆಗೆ ಬಂದ ಯಾವುದೋ ಮಾಸ್ತರು ಹೀಗೆ ಎಲ್ಲರನ್ನೂ ಮಾತಿನಿಂದ ಮೋಡಿಗೊಳಿಸಬಲ್ಲ ಚಾಣಾಕ್ಷ. ಅನ್ಯವರ್ಗಗಳ ಮನೆಗಳಲ್ಲಿ ಸಾಂಸಾರಿಕ ಜಗಳಗಳು ನಡೆದರೆ ಬಗೆಹರಿಸುವ ಜನ.

ಆದರೇನು ಮಾಡ್ತೀರಿ? ದೊಡ್ಡ ಕಚ್ಚೆಹರುಕ! ಆರುಮಕ್ಕಳ ತಾಯಿಯನ್ನೂ ಬಿಡದೆ ಹಾರಿ, ಆಕೆ ಅಪರಾಧೀ ಪ್ರಜ್ಞೆಯಿಂದ ಬಾವಿಗೆ ಹಾರಿ ಹರೋಹರವಾದ ಕತೆ ಊರವರಿಗೆಲ್ಲ ತಿಳಿದಿತ್ತು. ಹಳೆಯ ಮುದುಕಿಯರಿಂದ ಹಿಡಿದು ಎಳೆಯ ಹೆಣ್ಣು ಕಂದಮ್ಮಗಳ ವರೆಗೆ ಅವನ ಕಣ್ಣು ಸ್ಕ್ಯಾನ್ ಮಾಡದೇ ಇರೌವ ಜನವೇ ಇರಲಿಲ್ಲ. ಅದಿರಲಿ ಸ್ವಲ್ಪ ಲಕ್ಷಣವಾಗಿದ್ದರೆ ಯಾರಾದರೂ ಆಗಬಹುದು-ಕಸಮುಸುರೆ ಕೆಲಸಕ್ಕೆ ಬಂದವರಾದರೂ ಸರಿ. ರಾಯರು ಯಾಕೆ ಬೆಳಿಗ್ಗೆ ತಡವಾಗಿ ಏಳ್ತಾರೆ ಎಂಬುದು ಕೆಲವರಿಗೆ ಮಾತ್ರ ಗೊತ್ತಿತ್ತು.

ಇಂತಿಪ್ಪ ಮನುಷ್ಯ ಅನ್ಯವರ್ಗದ ಹೆಂಗಸರಿಗೆ ’ಏಕಾಂತ’ಕ್ಕೆ ಬೇಕಾಗಿ ಸಾಕಷ್ಟು ಹಣ, ಬಂಗಾರ ತೆತ್ತಿದ್ದ. ಕೂಲಿಮಾಡುವವರ ಮನೆಗಳಲ್ಲಿ ತೀರಾ ದುಬಾರಿಯಿರುವ ವಸ್ತು-ಒಡವೆಗಳು ಬಂದರೆ ಒಂದೋ ಅವರು ಕದ್ದಿರಬೇಕು ಅಥವಾ ಯಾರೋ ಕೊಟ್ಟಿರಬೇಕು ಎಂಬುದು ಕಾಮನ್ ಸೆನ್ಸ್; ಅದೂ ನಲ್ವತ್ತು ವರ್ಷಗಳ ಹಿಂದಿನ ಹಳ್ಳಿಯಲ್ಲಿ. ಹೀಗಾಗಿ ಬಂಗಾರದ ಬೋರಿಸರ ಹಾಕಿಕೊಂಡು ಅಲೆಯುವ ಸೌಭಾಗ್ಯ ಎಷ್ಟೋ ಕುಲೀನ ಸ್ತ್ರೀಯರಿಗೆ ಇರದಿದ್ದರೂ ಕೂಲಿ ಕೆಲಸದ ಕೆಲವು ಹೆಂಗಸರಿಗೆ ಆ ಯೋಗವಿತ್ತು. ಒಬ್ಬಳಿಗೆ ಹುಟ್ಟಿದ್ದ ಬೆಳ್ಳಗಿನ ಎರಡು ಗಂಡುಮಕ್ಕಳಂತೂ ಥೇಟ್ ಅವನದ್ದೇ ಸೀಲು.

ಇಷ್ಟೆಲ್ಲ ಇದ್ದೂ ಅವನ ಅಭಿಮಾನಿ ’ಹುಚ್ಚರು’ ಸಾಕಷ್ಟಿರುವುದರಿಂದ ಅವನ ನೈತಿಕತೆಯನ್ನು ಪ್ರಶ್ನಿಸುವ ಧೈರ್ಯಮಾಡಿದವರು ಯಾರೂ ಇಲ್ಲ. ಒಂದೊಮ್ಮೆ ಇಂದಿನಂತಿದ್ದರೆ ಡಿ.ಎನ್.ಎ ಎಗೆಸಿದ್ದರೆ ಊರಲ್ಲಿ ಯರ್ಯಾರು ಅವನ ಮಕ್ಕಳು ಎಂಬುದನ್ನು ಕಂಡುಕೊಳ್ಳಬಹುದಿತ್ತು. ಅವನ ಅಭಿಮಾನಿ ಬಳಗದಲ್ಲಿದ್ದ ಯುವಕರಲ್ಲಿ ಅವನಿಗೆ ಹುಟ್ಟಿದವರೂ ಅಂದರೆ ಅವನದೇ ಮಕ್ಕಳೂ ಇದ್ದರು.

ಈಗ ಮುಪ್ಪಡದಿ ಉಪ್ಪಿನಲ್ಲಿ ಹಾಕಿಟ್ಟ ಅಪ್ಪೆಮಿಡಿಯಂತಾಗಿದ್ದಾನೆ. ನಡೆಯಲೂ ತ್ರಾಣವಿಲ್ಲ. ಹೆಂಡತಿ ಕೈಲಾಸ ಸೇರಿದ್ದಾಳೆ. ಇಬ್ಬರು ಗಂಡುಮಕ್ಕಳಲ್ಲಿ ಪರಸ್ಪರ ಮುಖಮುಖ ನೋಡದ ವಾತಾವರಣ. ಸೊಸೆಯಂದಿರಲ್ಲಿ ಹಿರಿಯ ಸೊಸೆ ಶ್ರೀಮಾನ್ ಮಾವನ ಸೇವೆಯನ್ನಿ ಮೊದಲು ಬಲಾತ್ಕಾರವಾಗಿದ್ದರಿಂದಲೂ ಆಮೇಲೆ ಹೇಳಿಕೊಳ್ಳಲಾಗದೆಯೂ ನಡೆಸಿಬಂದವಳು. ಅವಳಿಗೆ ಮೊದಲಿಂದಲೇ ಒಂದು ನಮೂನೆಯ ದ್ವೇಷ. ಕಿರಿಸೊಸೆಗೆ ಮವ ಬಹಳ ದೂರ. ಗಂಡುಮಕ್ಕಳಿಗೆ ಅಪ್ಪ ಎಂದರೆ ಅಷ್ಟಕ್ಕಷ್ಟೆ. ಹೀಗಾಗಿ ಭೂಮಿಗೆ ಭಾರ, ಕೂಳಿಗೆ ದಂಡ ಅನ್ನೋ ರೀತಿಯಲ್ಲಿ ಇನ್ನೂ ಜೀವ ಇದೆ. ಖಾಯಿಲೆಗಳ ಗೂಡಲ್ಲಿ ಹಳತೆಲ್ಲ ನೆನಪಾಗಿ ಯಾತನೆ ಅನುಭವಿಸುವವರೆಗೂ ಬಹುಶಃ ಹಾಗೇ ಇರುತ್ತದೆ.

ಮಠದ ವೇಷಕ್ಕೂ ಆ ಮಹಾಶಯನಿಗೂ ಬಹಳ ಸಾಮ್ಯತೆಯಿದೆ ನೋಡಿ. ಕಚ್ಚೆಹರುಕರು ವಾಚಾಳಿಗಳೂ, ಎಲ್ಲದರಲ್ಲೂ ಮುನ್ನುಗ್ಗುವವರೂ [ಹೆಂಗಸರು ನೋಡಬೇಕಲ್ಲ?]ಆಗಿರುತ್ತಾರೆ ಅಂತಾಯ್ತು. ಹಾವಾಡಿಗ ಶ್ರೀಸಂಸ್ಥಾನದವರಿಗೂ ಸಾಕಷ್ಟು ಮಕ್ಕಳಿದ್ದಾವೆ. ಕೆಲವರ ಡಿ.ಎಸ್.ಎ ಟೆಸ್ಟ್ ಮಾಡಿಸಿದರೂ ಸಾಕು ಮತ್ತೊಂದು ಪವಾಡ ನಡೆದುಹೋಗುತ್ತದೆ. ಆಗ ಇನ್ನೊಂದು ಪವಾಡ ಪುಸ್ತಕ ಬರೆಯಬಹುದು.

[ಈಗ ಕಾಕಾಲ್ ಬಾವಯ್ಯನ ಅತ್ಯಂತ ಖಾಸಗಿ ಪದ]ಕಡೇ ಮಂಗಳಾರತಿ
^^^^^^^^^^^^^^^^^^^^^^^

ಕಲ್ಲು ಒಡೆಯುವ ಕೆಲಸ, ಇನ್ನಾವುದೋ ಕಠಿಣ ಕೆಲಸವಾದರೂ ಬೇಕು, ಕವನ ಹೆಣೆಯೋದು ಬೇಡ ಎಂದು ಮಹಾಕವಿ ಮುದ್ದಣ ಹೇಳಿದ್ದಾನೆ. ನರಸಿಂಹ ಸ್ವಾಮಿಯವರ ಹಿಂದಿನ ಸಾಲಿನ ಹುಡುಗರು ನಾವು ಎಂಬ ದಾಟಿಯಲ್ಲಿ ಕೆಳಗಿನ ಪದ್ಯವನ್ನು ಹೇಳಿಕೊಳ್ಳಿ. ಪದ್ಯ ಇನ್ನೂ ಬಹಳ ವಿಸ್ತಾರವಾಗಿದೆ; ಸದ್ಯಕ್ಕೆ ಇಷ್ಟು ಸಾಕು.

ಕಾವಿಯೆ ಹಾಸಿಗೆ ಕಾವಿಯೆ ಹೊದಿಕೆ
ಕಾವಿಯೆ ಎಲ್ಲಕು ಕೆಲವರಿಗೆ
ಬಾವಿಗೆ ಬಿದ್ದರು ಒಪ್ಪುವುದಿಲ್ಲ
ಗಾಯವ ತೋರಿಸು ಎಂಬರಿಗೆ

ಮಾಯ ಮಂತ್ರ ಮಾಟವ ನಡೆಸುತ
ನ್ಯಾಯದ ಹಾದಿಯ ತಪ್ಪಿದಗೆ
ಆಯ-ವ್ಯಯಗಳ ಲೆಕ್ಕವ ತಪ್ಪಿಸಿ
ಬಾಯಲಿ ಭಾಷಣ ಬಿಗಿಯುವಗೆ

ಅಬಲೆಯರೆಲ್ಲರ ’ಸಬಲೀಕರಣಕೆ’
ತಬಲೆ ಬಾರಿಸೆ ಕರೆಯುವಗೆ
ನಭದೆತ್ತರದ ಖ್ಯಾತಿಯ ಬಯಸುತ
’ಸುಭಗ’ನು ಎಂದು ತೋರಿಪಗೆ

ಹೋದೆಡೆಗೆಲ್ಲೆಡೆ ಏಕಾಂತವನು
ಗಾದಿ ಏರುತ ನಡೆಸಿಹಗೆ
ಬೀದಿನಾಯಿಯು ಎಷ್ಟೋ ಮೇಲು
ಗೋಧಿನಾಗನ ಗುಣದವಗೆ

ದೂರುವ ಜನರನು ದೂರಕೆ ಅಟ್ಟುತ
ಭೇರಿಯ ಬಾರಿಸಿ ಮೆರೆವವಗೆ
ದಾರಿಯಲಡ್ಡಗೇಟನು ನಿಲ್ಲಿಸಿ
ಬಾರೀ ಮೊತ್ತವ ತೆತ್ತವಗೆ

ಯಾರೇ ಬಂದರು ಹೆದರುವುದಿಲ್ಲ
ಭಾರೀ ಬಲವಿದೆ ಎಂಬವಗೆ
ಜಾರಲು ಬಹುವಿಧ ಸರ್ಕಸ್ ನಡೆಸುತ
ನೀರೆಯ ಬೈಯುವ ’ಸಂತ’ನಿಗೆ

Thumari Ramachandra

source: https://www.facebook.com/groups/1499395003680065/permalink/1640887412864156/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s