ಮುಕ್ತಿ ತೋರಿಸುತ್ತೇನೆಂದು 5000 ಮಹಿಳೆಯರ ಜೊತೆ ರತಿಕ್ರೀಡೆ ನಡೆಸಿದ್ದ ಸನ್ಯಾಸಿ..!

ಮುಕ್ತಿ ತೋರಿಸುತ್ತೇನೆಂದು 5000 ಮಹಿಳೆಯರ ಜೊತೆ ರತಿಕ್ರೀಡೆ ನಡೆಸಿದ್ದ ಸನ್ಯಾಸಿ..!

“ಮಂತ್ರಮೂಲೆ ಮಾವಿನಕಾಯಿ
.
.
.
ಮಿಕ್ಕಿದ್ದೆಲ್ಲ ನೀವೇ ಹೇಳ್ಕೊಳಿ, ನಮಗೆ ಸಮಯವಿಲ್ಲ.

ಬರೇ ಕಾಮ
.
.

ಮೊನ್ನೆ ಏಪ್ರಿಲ್ 27ರಂದು ಸುವಾರ್ಣ ಟಿವಿಯಲ್ಲೊಂದು ಸುದ್ದಿ ಬಂತು. ನಮ್ಮ ವ್ಯವಹಾರಕ್ಕೆ ಹೋಲಿಕೆ ಇದೆಯಲ್ಲ ಎಂದು ಕಿವಿಯರಳಿಸಿ ಕೇಳಿದಾಗ ದಕ್ಕಿದ್ದಿಷ್ಟು:

ಮೋಕ್ಷ ಕೊಡಿಸುತ್ತೇನೆಂದು ಮಹಿಳೆಯರನ್ನ ತಮ್ಮ ದೈಹಿಕ ಸುಖಕ್ಕೆ ಬಳಸಿಕೊಳ್ಳುವ ಸನ್ಯಾಸಿಗಳ ಬಗ್ಗೆ ಕೇಳಿದ್ದೀವಿ. ಇಂತಹ ಸನ್ಯಾಸಿಗಳು ಈಗಷ್ಟೇ ಅಲ್ಲ, 15 ಶತಮಾನದಲ್ಲೂ ಇಂತಹ ಸನ್ಯಾಸಿಯೊಬ್ಬ ಇದ್ದ. ಈತನನ್ನ ’ಮ್ಯಾನ್ ಆಫ್ 5000 ವುಮೆನ್’ ಎಂದೇ ಗುರ್ತಿಸಲಾಗುತ್ತಿತ್ತು. ಮೋಕ್ಷ ಪಡೆಯಬೇಕಾದರೆ ಮಾನವ ಜೀವನ ಎಲ್ಲ ಮಜಲುಗಳನ್ನ ಅನುಭವಿಸಬೇಕು. ಮೋಕ್ಷಕ್ಕೆ ಸೆಕ್ಸ್ ಒಂದೇ ಪ್ರಮುಖ ದಾರಿ ಎಂದು ಈ ಸನ್ಯಾಸಿ ಬೋಧನೆ ಮಾಡುತ್ತಿದ್ದನಂತೆ.

ಟಿಬೆಟ್’ನಲ್ಲಿ 1455ರಲ್ಲಿ ಹುಟ್ಟಿದ ಸನ್ಯಾಸಿ ದ್ರೌಪ್ಕಾ ಕುನ್ಲೆ ಇಂತಹ ಕ್ರೇಜಿ ಐಡಿಯಾದಿಂದ ಭಾರೀ ಸುದ್ದಿಯಾಗಿದ್ದನಂತೆ. ಕುನ್ಲೆ ತಮ್ಮ ಶಕ್ತಿಯಿಂದ ’ಕೆಟ್ಟ ಜನರ’ನ್ನ ಒಳ್ಳೆಯ ದಾರಿಗೆ ತರುತ್ತಿದ್ದರಂತೆ. ತನ್ನ ಮರ್ಮಾಂಗವನ್ನ ಭಕ್ತರಿಗೆ ಸೋಕಿಸುವ ಮೂಲಕ ಈತ ಅದ್ಬುತಗಳನ್ನ ಸಾಧಿಸುತ್ತಿದ್ದನಂತೆ. ಅಷ್ಟೇ ಅಲ್ಲ, ಮದ್ಯ ಸೇವಿಸಿ ತಂಪಾಗಿರಿ ಎಂದು ತನ್ನ ಅನುಯಾಯಿಗಳಿಗೆ ಸಲಹೆ ನೀಡುತ್ತಿದ್ದನಂತೆ.

ಈ ಸ್ವಾಮಿ ನಡೆಸಿದ ’ಕಲ್ಯಾಣ ಕಾರ್ಯ’ ಇಷ್ಟಕ್ಕೇ ಮುಗಿಯಲ್ಲ. ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳನ್ನ ಕರುಣಿಸುತ್ತಿದ್ದನಂತೆ. ಬರುವ ಮಹಿಳೆಯರ ಜೊತೆ ಲೈಂಗಿಕ ಕ್ರಿಯೆ ನಡೆಸಿ ತನ್ನ ಮರ್ಮಾಂಗವನ್ನ ಸೋಕಿಸಿ ’ಚಿಕಿತ್ಸೆ’ ಕೊಟ್ಟು, ಗರ್ಭ ಧರಿಸುವಂತೆ ಮಾಡುತ್ತಿದ್ದನಂತೆ. ಜನಮರುಳೋ ಜಾತ್ರೆಮರುಳೋ ಎಂಬಂತೆ, ಈತ ಮೃತಪಟ್ಟು 500ಕ್ಕೂ ಅಧಿಕ ವರ್ಷಗಳೇ ಕಳೆದಿದ್ದರೂ, ವಿದೇಶಗಳಿಂದಲೂ ಮಹಿಳೆಯರು ಇಲ್ಲಿಗೆ ಬಂದು, ಆ ಸನ್ಯಾಸಿಯ ಮರ್ಮಾಂಗವನ್ನೇ ಹೋಲುವ ಮರದ ಪ್ರತಿಕೃತಿಗೆ ಪೂಜೆ ಸಲ್ಲಿಸುತ್ತಾರಂತೆ. ಇದರಿಂದ ಈಗಲೂ ಮಹಿಳೆಯರಿಗೆ ಒಳ್ಳೆಯದಾಗುತ್ತಿದೆ ಎಂದು ನಂಬಿದ್ದಾರಂತೆ.

ಅವನ ವೀರ್ಯಸನ್ಯಾಸದ ಕತೆ ಕೇಳಿ ಮತ್ತು ಅವನ ಮರ್ಮಾಂಗದ ಅಸಾಧಾರಣ ಸಾಮರ್ಥ್ಯದ ಬಗ್ಗೆ ತಿಳಿದು ನಾವೂ ಯಾಕೆ ಹಾಗಾಗಬಾರದು ಎಂದು ಯೋಚಿಸಿದೆವು ನಾವು. ಸಂಪರ್ಕ ಸಾಧನಗಳೇ ನೆಟ್ಟಗಿಲ್ಲದಿದ್ದ ಆ ಕಾಲದಲ್ಲೇ ಐದು ಸಾವಿರ ಮಹಿಳೆಯರನ್ನು ಭೋಗಿಸಿದ ಅವನು ಅಷ್ಟೊಂದು ಅದೃಷ್ಟಮಾಡಿರಬೇಕು. ಎಂತೆಂತಹ ಸೂರ್ಯ-ಚಂದ್ರರನ್ನು ಹಿಡಿದೆತ್ತಿ ಆಡಿಸಿದನೋ! ನೆನಪಾದರೆ ನಮಗೂ ಆ ಸಂಖ್ಯೆಯನ್ನು ಮೀರಿಸುವ ಇಚ್ಛೆ ಅಧಿಕವಾಗುತ್ತದೆ. ನಾವು ಸತ್ತಮೇಲೆ ನಮ್ಮ ಸಾಮಾನಿನ ಪ್ರತಿಕೃತಿಯನ್ನೂ ನಮ್ಮಲ್ಲಿನ ಮಹಿಳೆಯರು ಪೂಜಿಸುವಂತಾಗಬೇಕು ಎಂಬುದೇ ನಮ್ಮಿಚ್ಛೆ.

ಸಮಾಜದಲ್ಲಿ ಜನಜೀವನ ಇರುವವರೆಗೂ ಯಾವುದೇ ಕೆಲಸಕ್ಕೂ ಪರ ಮತ್ತು ವಿರೋಧಗಳು ಇದ್ದೇ ಇರುತ್ತವೆ. ನಾವು ತಿದ್ದಿ ಅದ್ಭುತವಾಗಿ ಬರೆಸಿದ ಜಾತಕವನ್ನು ನೋಡಿ ಮರುಳಾಗದ ಕೂಚುಭಟ್ಟಗಳೆಷ್ಟಿಲ್ಲ? ಮತ್ತು ಅದೇ ಸತ್ಯವೆಂದು ನಂಬಿ ನಮ್ಮನ್ನು ಇಂದಿಗೂ ಆರಾಧಿಸುವ ಜನ ಎಷ್ಟಿಲ್ಲ?

ಇಂದು ಸಂಪರ್ಕ ಮತ್ತು ಸಂವಹನ ಮಾಧ್ಯಮಗಳು ಬೇಕಾದಷ್ಟಿವೆ. ಸ್ವಲ್ಪ ಚಾಲಾಕಿಯಾದರೆ ಯಾವ ಭಾಷೆಯನ್ನೂ ಕಲಿಯುವುದು ಕಷ್ಟವಲ್ಲ. ಅಷ್ಟಕ್ಕೂ ನಿರಕ್ಷರಕುಕ್ಷಿಗಳಾದ ಅದೆಷ್ಟೋ ಜನ ವ್ಯವಹಾರದಲ್ಲಿ ಅನಿವಾರ್ಯವಾಗಿ ಭಾಷೆಗಳನ್ನು ಕಲಿಯುವುದಿಲ್ಲವೇ? ನಮಗೂ ಉತ್ತರದ ಕಡೆಗೆ ಮತ್ತು ವಿದೇಶಕ್ಕೆ ಹೋಗಿ ಅಲ್ಲಿನ ಸೂರ್ಯ-ಚಂದ್ರರುಗಳ ಜೊತೆ ಆಟವಾಡುವ ಮನಸ್ಸಿದ್ದುದರಿಂದ, ಇಂಗ್ಲೀಷ್, ಹಿಂದಿ ಬರುವ ಜನರನ್ನು ಕರೆಸಿ, ಗುಪ್ತವಾಗಿ ಪಾಠಹೇಳಿಸಿಕೊಂಡು ಹರುಕುಮುರುಕು ಭಾಷೆಯನ್ನು ಕಲಿತಿದ್ದೇವೆ ನಾವು. ಮೂರನೆಯ ಪದ ಬಿಟ್ಟರೆ ನಾಲ್ಕನೆಯದಕ್ಕೆ ಬಡಬಡಿಸುತ್ತೇವೆ ಎಂಬುದು ಸರಿಯಾಗಿ ಅರಿತವರಿಗೆ ಗೊತ್ತು, ಆದರೂ ನಮ್ಮನ್ನು ’ಬಹುಭಾಷಾ ವಿಶಾರದ’ ಎಂಬರ್ಥದಲ್ಲಿ ಗೌರವಿಸುವ ತಿಳಿಗೇಡಿಗಳಿರುವುದರಿಂದ ನಮಗೆ ಅನುಕೂಲವೇ ಆಗಿದೆ.

ನಮ್ಮ ಹಿಂದಿನವರು ಅದ್ಯಾವುದೋ ಸೀಟನ್ನು ಏರಿರಲಿಲ್ಲವಂತೆ. ಅದಕ್ಕೂ ಹಿಂದಿನವರು ಏರಿದ ಒಂದೇ ವರ್ಷದಲ್ಲಿ ಅವರ ಅಧ್ಯಾಯ ಕೊನೆಗೊಂಡಿತ್ತು; ಪ್ರಾಯಶಃ ಅಂತದ್ದೊಂದು ಅಧೈರ್ಯದಿಂದಲೇ ನಮ್ಮ ಹಿಂದಿನವರು ಆ ಸೀಟನ್ನು ಏರಿರಲಿಲ್ಲವೇನೋ! ನಮಗಾದರೆ ಹಾಗಲ್ಲ, ನಾವು ಭಂಡ ಧೈರ್ಯದವರು; ಇಲ್ಲದಿದ್ದರೆ ಏಕಾಂತದಲ್ಲಿ ಇಷ್ಟೊಂದು ಏರಿಳಿಯಲು ಸಾಧ್ಯವಾಗುತ್ತಿತ್ತೇ? ಹತ್ತುವುದರಲ್ಲಿ ಎತ್ತಿದ ಕೈ ಎನಿಸಿದ ನಮಗೆ ಆ ಸೀಟನ್ನು ಹತ್ತುವುದೇನೂ ಕಷ್ಟವೆನಿಸಲಿಲ್ಲ. ಹತ್ತಿದ್ದರಿಂದ ನಮಗೇನು ಧಾಡಿಯೂ ಆಗಲಿಲ್ಲ. ನಮ್ಮ ಹಳದೀ ತಾಲಿಬಾನಿಗಳಿಗೆ ಪವಾಡಗಳ ಸಂಖ್ಯೆ ಹೆಚ್ಚಿಸಲಿಕ್ಕೆ ಇವೆಲ್ಲವೂ ಮಸಾಲೆ ಸರಕುಗಳಾಗಿವೆ ಎಂಬುದೇ ನಮಗೆ ಖುಷಿ.

ಮರಿಮಾಡಿದವರು ಅಂದರೆ ಶಿಷ್ಯ ಪರಿಗ್ರಹ ಮಾಡಿದ ಸೀನಿಯರ್ರು ಜೂನಿಯರ್ರನ್ನು ಜೊತೆಗೆ ಕರೆದುಕೊಂಡು ಓಡಾಡಿ, ಅವರಿಗೆ ಲೌಕಿಕವಾಗಿ ಮಠದ ರೀತಿ-ರಿವಾಜುಗಳನ್ನು ತಿಳಿಸಿಕೊಡಬೇಕಂತೆ. ನಮ್ಮ ವಿಷಯದಲ್ಲಿ ಹಾಗಾಗಲೇ ಇಲ್ಲ. ದೀಕ್ಷೆಯ ನಂತರ ನಾವು ಪರಸ್ಪರ ಮುಖ ಮುಖ ನೋಡಿಕೊಳ್ಳಲೇ ಇಲ್ಲ. ಹಿಂದಿನವರು ಹೇಳಿದ್ದು ನಮಗೆ ಆಗುತ್ತಲೇ ಇರಲಿಲ್ಲ. ಹಾಗಾಗಿ ಆಗ ಕೆಲವು ಪೀತ ಪತ್ರಿಕೆಗಳಲ್ಲಿ ಕೀಲಿ ಕೈ ಕೊಡದೇ, ಬಿಡಿಗಾಸನ್ನೂ ಕೊಡದೇ ಬರಿಗೈಲಿ ಇಟ್ಟಿದ್ದಾರೆಂದು ನಾವೇ ಬರೆಸಿದ್ದೆವು. ಆ ಮನುಷ್ಯ ನಂತರ ನಮ್ಮ ವಿರುದ್ಧವೇ ಬರೆಯಲು ಆರಂಭಿಸಿಬಿಟ್ಟ!

ಆರಂಭದಿಂದಲೂ ನಮ್ಮ ಸನ್ಯಾಸವೆಂಬುದು ವಿವಾದದ ಗೂಡು. ಕುರಿಬಲಿ, ಕೋಳಿಬಲಿಗಳನ್ನೂ ಬೆಂಬಲಿಸುವ ನಾವು ಮಾರಣಹೋಮಗಳನ್ನು ಮಾಡಿಸುವುದರಲ್ಲಿ ಬಹಳ ಆಸಕ್ತರು. ನಮ್ಮ ಹಗರಣಗಳು ಯಾರಿಗೂ ಗೊತ್ತಾಗದಂತೆ ಗೋಪ್ಯವಾಗಿಟ್ಟುಕೊಳ್ಳುವುದರಲ್ಲೂ ನಾವು ನಿಸ್ಸೀಮರು. ಆದರೂ ನಮ್ಮ ಜನರಿಗೆ ಈಗ ವಿಷಯಗಳು ಮನದಟ್ಟಾಗಿಬಿಟ್ಟಿವೆ. ಹಾಗಿದ್ದೂ ಸಹ ದೂರ ದಾಖಲಿಸಿ ಸುದ್ದಿಮಾಡಿದರೆ ಮನೆತನದ ಮರ್ಯಾದೆ ಹೋಗುತ್ತದಲ್ಲಾ ಎಂದು ಹೆದರಿ, ನಮ್ಮ ತಾಲೀಬಾನು ನಡೆಸುವ ದಾಳಿಗಳಿಗೆ ಹೆದರಿ ಸುಮ್ಮನಿದ್ದಾರೆ. ಒಂದೊಮ್ಮೆ ನಾವು ಒಳಗೆ ಹೋದರೆ ನಮ್ಮ ಮೇಲೆ ಸೊಮೋಟೋ ಕೇಸು ದಾಖಲಾಗುವುದು ನಿಶ್ಚಿತ. ಕೇಸುಗಳು ಒಂದೆರಡಲ್ಲ; ನೂರಾರು ಬೀಳುತ್ತವೆ ಎಂಬುದು ನಮ್ಮ ಅಡ್ಡಗೇಟುಗಳಿಗೂ ಗೊತ್ತು. ಅವರೆಲ್ಲರ ಹಿತಾಸಕ್ತಿಯನ್ನು ನಾವು ಕಾಪಾಡಿದ್ದರಿಂದ ನಮ್ಮ ಹಿತಾಸಕ್ತಿಯನ್ನು ಆರು ಕಾಪಾಡುತ್ತಿದ್ದಾರೆ.

ನಾವೆಷ್ಟೇ ತಪ್ಪು ಮಾಡಿದರೂ “ನಮ್ಮ ಗುರುಗಳು ತಪ್ಪು ಮಾಡಿಲ್ಲ” ಎಂದು ಬೆಂಬಲಿಸುವ ಜನ ಇದ್ದೇ ಇರುತ್ತಾರೆ. ಎಂತೆಂತೆಹ ಖತರ್ನಾಕ್ ಕೆಲಸಗಳನ್ನು ಮಾಡಿದವರಿಗೇ ಬೆಂಬಲಿಗರು ಇರ್ತಾರೆ, ನೂರಾರು ಮಹಿಳೆಯರ ಜೊತೆ ಮಜ ತೆಗೆದುಕೊಂಡವರಿಗೆ ಸಪೋರ್ಟಿಗೆ ಜನ ಇರೋದಿಲ್ವ? ಜನರಿಗೂ ಬುದ್ಧಿ ಅಷ್ಟಕ್ಕಷ್ಟೆ. ವಿರೋಧಿಗಳನ್ನು ವಿರೋಧಿಸಿ ಗೆಲ್ಲುತ್ತೇವೆ ಎಂಬುದೇ ಅವರ ಬಡಾಯಿ. ಅವರಿಗೆ ನಾವು ಕಚ್ಚೆಹರುಕರು ಎಂಬುದು ಖಂಡಿತ ಗೊತ್ತು, ಅದು ಅವರಿಗೆ ಬೇಕಾಗಿಲ್ಲ, ಅವರಿಗೆ ಬೇಕಾಗಿರುವುದು ಗುರುಗಳ ಪರ ವಕಾಲತ್ತು ಹಾಕಿ ತಾವು ಗೆದ್ದೆವು ಎನ್ನಿಸುವ ಅಹಂಕಾರ. ಹಾಗಾಗಿ ನಮ್ಮ ಜೊತೆ ಹೆಜ್ಜೆಹಾಕಿದ ಕೆಲವರು ಇನ್ನೂ ಪೂರ್ತಿ ಸುಸ್ತಾಗಿ ಕೂರಲಿಲ್ಲ. ”

Thumari Ramachandra

source: https://www.facebook.com/groups/1499395003680065/permalink/1640541426232088/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s