ಆಂತರಿಕ ಕೈಗಾರಿಕಾ ತಾಣ ಕಳ್ಳರ ಅಡಗುದಾಣವಾಗಬಾರದಲ್ಲವೇ?

ಆಂತರಿಕ ಕೈಗಾರಿಕಾ ತಾಣ ಕಳ್ಳರ ಅಡಗುದಾಣವಾಗಬಾರದಲ್ಲವೇ?

“ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ?
ಅರಿಯುವಂ ಸೋಂಕಿಂದೆ ಬಿಸಿಲುತನಿವುಗಳ
ನರನುಮಂತೆಯೇ ಮನಸಿನನುಭವದಿ ಕಾಣುವನು
ಪರಸತ್ವಮಹಿಮೆಯನು – ಮಂಕುತಿಮ್ಮ.

ಸೂರ್ಯ ಚಂದ್ರರು ಎದುರೇ ಇದ್ದರೂ ಕುರುಡನಿಗೆ ಕಾಣಲಾಗುವುದೆ? ಬಿಸಿಲಿನ ಬಿಸಿ ಮತ್ತು ಬೆಳದಿಂಗಳ ತಂಪನ್ನು ಸ್ಪರ್ಶಮಾತ್ರದಿಂದಲೇ ಅವನು ಅರಿಯುವುದಾಗುತ್ತದೆ. ಅದರಂತೆ, ಮನಸ್ಸಿಗೆ ನಿಲುಕುವ ಅನುಭವದಿಂದ ಮನುಷ್ಯನೂ ಸಹ ಪರಮಾತ್ವ ತತ್ವವನ್ನು ಕಾಣುತ್ತಾನೆ ಎಂಬುದು ಡಿವಿಜಿಯವರ ಹೇಳಿಕೆ.

ಅವರವರ ಭಾವಕ್ಕೆ ಅವರವರ ಬಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರನ ಭಕ್ತರಿಗೆ ಹರ, ಹರಿಯ ಭಕ್ತರಿಗೆ ಹರಿ
ನರರೇನು ಭಾವಿಸುವರದರಂತೆ ಕಾಣುವನು

-ಎಂದು ನಿಜಗುಣ ಶಿವಯೋಗಿಳು ಹೇಳಿದ್ದಾರೆ.

ಪರಮಾತ್ಮನೆಂದರೆ ಕಣ್ಣಿಗೆ ಕಾಣುವ ಆಕಾರವೆಂದಲ್ಲ. ಭಗವಂತ ಎಂಬುದೊಂದು ಭಾವನಾತ್ಮಕ ವಿಚಾರ. ಭಗವಂತನನ್ನು ಹರಿಯೆನ್ನುವವರೂ ಇದ್ದಾರೆ, ಹರನೆನ್ನುವವರೂ ಇದ್ದಾರೆ, ಇನ್ನೂ ಹಲವು ನಾಮ-ರೂಪಗಳಿಂದ ಧೇನಿಸುವವರಿದ್ದಾರೆ. ಎಲ್ಲ ನಾಮ-ರೂಪ-ಉಪಾಧಿಗಳಿಂದ ಆರಾಧಿಸಲ್ಪಡುವ ಶಕ್ತಿಯi ಮೂಲ ಒಂದೇ; ನಮ್ಮ ನಮ್ಮ ಭಾವನೆಯಲ್ಲಿ, ಮನೋಭೂಮಿಕೆಯಲ್ಲಿ ಪಡಿಮೂಡಿದ ನಾಮ-ರೂಪಗಳಿಂದ ನಾವು ಭಗವಂತ ಹೀಗೆಯೇ ಎನ್ನುತ್ತೇವಷ್ಟೆ.

ಮನುಷ್ಯನಿಗೆ ಹೊರಗಿನಿಂದ ಏನನ್ನಾದರೂ ಹೇಳಿಕೊಡಬಹುದು. ಹೀಗೆ ಮಾಡು-ಹೀಗೆ ಮಾಡಬೇಡ ಎಂದೆಲ್ಲ ತಿಳಿಸಿ ಹಾಗೆ ನಡೆದುಕೊಳ್ಳುವಂತೆ ಮಾಡಬಹುದು. ಅವನ ಅಂತರ್ಯದಲ್ಲಿ ನಡೆಯುವ ಮನೋವ್ಯಾಪಾರವನ್ನು ಮತ್ತು ಕ್ರಿಯೆಯನ್ನೂ ಹೇಳಿಕೊಡಲು ಅಥವಾ ನಿಯಂತ್ರಿಸಲು ನಮಗೆ ಸಾಧ್ಯವೇ? ಪ್ರತಿಯೊಬ್ಬರಿಗೂ ಅವರವರದ್ದೇ ಆದ ಅನುಭವವಿರುತ್ತದೆ. ಪ್ರತಿಯೊಬ್ಬರಿಗೂ ಅವರವರ ಅನುಭವದ ಪ್ರಕಾರ ಆ ಪರತತ್ವದ ದರ್ಶನವಾಗುತ್ತದೆ.

ಯಾರೊಬ್ಬರ ಅಂತರಂಗವನ್ನು ಹೊಕ್ಕು ನೋಡಲೂ ನಮ್ಮಿಂದ ಸಾಧ್ಯವಿಲ್ಲ. ಅವರವರೇ ಅವರ ಅಂತರಂಗವನ್ನು ಹೊಕ್ಕು ನೋಡಿದರೆ, ಅವರವರ ಭಾವನೆಗೆ ತಕ್ಕಂತೆ ಪರಮಾತ್ಮ ಅಷ್ಟು ದೊಡ್ಡದಾಗಿಯೋ ಸಣ್ಣದಾಗಿಯೋ ಕಾಣಿಸುತ್ತಾನೆ. ಮಿಥ್ಯಾ ಪ್ರಪಂಚದ ಬ್ರಹ್ಮಾಂಡ ಬಹಳ ದೊಡ್ಡದು; ಯೋಗಿಗೆ ಈ ಪ್ರಪಂಚ ಅಥವಾ ಬ್ರಹ್ಮಾಂಡ ಬಹಳ ಚಿಕ್ಕದು. ಜನಸಾಮಾನ್ಯ ಈ ಪ್ರಪಂಚವನ್ನು ಭೋಗಾಸಕ್ತಿಯಿಂದ ನೋಡುತ್ತಾನೆ; ಪರಮಯೋಗಿ ಅದನ್ನು ಯೋಗಾಸಕ್ತಿಯಿಂದ ನೋಡುತ್ತಾನೆ. ಅಂದರೆ ವ್ಯಕ್ತಿಯ ಮನಸ್ಸಿನಲ್ಲಿರುವ ಭಾವನೆಗೆ ತಕ್ಕಂತೆ ಎಲ್ಲವೂ ಕಾಣುತ್ತದೆ ಯಾಕೆಂದರೆ ಇಹದ ರಹಸ್ಯ ಎಲ್ಲರ ಅರಿವಿಗೆ ನಿಲುಕುವುದಿಲ್ಲ. ದೇವರು ನಿರಾಕಾರ, ನಿರಾಮಯ ಎಂದು ವೇದಗಳು ಸಾರುತ್ತವೆ. ಹೀಗಿದ್ದೂ ಕೆಲವರಿಗೆ ಮನೆಯಲ್ಲಿರುವ ಸಣ್ಣ ಮೂರ್ತಿಯೇ ದೇವರು ಮತ್ತು ಉಳಿದೆಡೆ ದೇವರಿಲ್ಲ.

ಕನಕದಾಸರಿಗೂ ಸೇರಿದಂತೆ ಹಲವು ಶಿಷ್ಯರಿಗೆ ಯಾರೂ ಇಲ್ಲದ ಜಾಗದಲ್ಲಿ ಅಡಗಿ ತಿಂದುಬರುವಂತೆ ತಿಳಿಸಿ ಬಾಳೆಯ ಹಣ್ಣನ್ನು ಅವರ ಗುರುಗಳು ಕೊಟ್ಟರು. ಎಲ್ಲರೂ ಅಲ್ಲಲ್ಲಿ ಬಾಗಿಲ ಮರೆಯಲ್ಲಿ, ಗೋಡೆಯೆ ಇರುಕಿನಲ್ಲಿ, ಯಾವ್ಯಾವುದೋ ಸಂದು-ಮೂಲೆಗಳಲ್ಲಿ ನಿಂತು ತಿಂದುಬಂದರೆ ಕನಕ ಅದನ್ನು ಹಾಗೆಯೇ ಹಿಡಿದು ಮರಳಿ ಬಂದ!

“ಏನಯ್ಯಾ ಕನಕಾ? ಬಾಳೆಹಣ್ಣನ್ನು ತಿನ್ನಲು ನಿನಗೆ ಜಾಗ ಸಿಗಲಿಲ್ಲವೇ?” ಎಂದು ಗುರುಗಳು ಕೇಳಿದರು.

ವಿನಮ್ರನಾಗಿ ಕನಕ ಉತ್ತರಿಸಿದ, “ಸ್ವಾಮೀ, ಎಲ್ಲರಂತೆ ನಾನೂ ಸಹ ಸಂದು-ಮೂಲೆಗಳನ್ನು ಹುಡುಕಿ ಹೋದದ್ದು ನಿಜ. ಆದರೆ ಸರ್ವಾಂತರ್ಯಾಮಿಯಾದ ಭಗವಂತನ ಕಣ್ಣಿನಿಂದ ತಪ್ಪಿಸಿಕೊಂಡು ತಿನ್ನಲು ನನ್ನಿಂದ ಸಾಧ್ಯವಾಗಲಿಲ್ಲ. ಯಾರಿಗೂ ತೋರಿಸಬಾರದೆಂದು ತಾವು ಹೇಳಿದ್ದಿರಿ. ಯಾರಿಗೂ ತೋರಿಸದೇ ತಿಂದೆನೆಂದರೆ ಅಪರಾಧವಾಗುತ್ತದೆ; ಆತ್ಮವಂಚನೆಯಾಗುತ್ತದೆ. ಹೀಗಾಗಿ ತಿನ್ನಲಾರದೆ ಮರಳಿ ತಂದೆ.”

ಮನಸ್ಸಿನ ಪ್ರಬುದ್ಧ ಸ್ಥಿತಿ ಕನಕನಿಗೆ ಬಾಳೆಯ ಹಣ್ಣನ್ನು ತಿನ್ನಲು ಬಿಡಲಿಲ್ಲ, ಅದೇ ಯೋಗದಲ್ಲಿ ಹೇಳಿದ ಪ್ರತ್ಯಾಹಾರದ ಆರಂಭಿಕ ಹಂತ, ಕನಕನಿಗೆ ಫಾರ್ಮಲ್ ಎಜುಕೇಶನ್ ಇರಲಿಲ್ಲ-ಹಾಗಾಗಿ ಅದನ್ನೆಲ್ಲ ಹೇಳಲು ಬರುತ್ತಿರಲಿಲ್ಲ; ಎಲ್ಲರ ಕಣ್ತಪ್ಪಿಸಿ ಬಾಳೆಯ ಹಣ್ಣನ್ನು ತಿಂದವರು ತಾವು ಮಂಗಗಳಾದುದನ್ನು ಆಗ ಅರಿತಿರಬೇಕು; ಅಥವಾ “ಈ ಕನಕ ಹೀಗೆ, ಎಲ್ಲದರಲ್ಲೂ ಕೊಂಕು ಬುದ್ಧಿ” ಎಂದು ತಮ್ಮೊಳಗೇ ಆಡಿಕೊಂಡಿರಬಹುದು.

ಯೋಗ ಹೇಳುತ್ತದೆ-ದೇವರು ಹೃದಯದಲ್ಲೇ ಇದ್ದಾನೆ, ಕಳೆಬೆಳೆದ ಹೊಲದಲ್ಲಿ ಬೆಳೆಯಾವುದು ಕಳೆಯಾವುದು ಗೊತ್ತಾಗುವುದು ಕಷ್ಟವಾದಂತೆ ಪ್ರಾಪಂಚಿಕ ವ್ಯವಹಾರದ ಕಳೆಗಳು ಬೆಳೆದ ಮನಸ್ಸಿನಲ್ಲಿ ದೇವರು ಎಂಬ ಬೆಳೆಯನ್ನು ಹುಡುಕುವುದು ಬಹಳ ಕಷ್ಟ. ತಿಳಿನೀರ ತಳದಲ್ಲಿ ಕುಳಿತಿರುವ ಬಂಗಾರದ ನಾಣ್ಯ ಥಳುಕಿನ ಬಣ್ಣ-ಬೆಳಕು ಸೇರಿದರೆ ಕಾಣಿಸುವುದಿಲ್ಲ.

ನೋಡಿ, “ದೇವರು ಇದೇ ಮೂರ್ತಿ”ಎಂದು ಕೆವರು ವಾದಿಸಬಹುದು. ಅದೇ ದೇವರಲ್ಲ; ಅದರೊಳಗೆ ದೇವರು ಎಂದರೆ ಅವರಿಗೆ ಬೇಸರವಾಗಬಹುದು. ಆದರಿಸಬೇಕಾದ ರೀತಿಯಲ್ಲಿ ಆದರಿಸಿದರೆ ಕಲಶ, ಮಂಡಲ, ಚಿತ್ರ, ಪ್ರತಿಮೆ ಅಥವಾ ವಿಗ್ರಹದೊಳಗೆ ದೇವರು ಸನ್ನಿಹಿತನಾಗುತ್ತಾನೆ. ಅನುಸರಿಸುವ ರೀತಿಯೇ ಸರಿಯಿಲ್ಲದಿದ್ದರೆ ಯಾವುದರಲ್ಲೂ ಏನೂ ಇಲ್ಲ. ಭಕ್ತನಿಗೆ ಅಷ್ಟೊಂದು ಕಣ್ತುಂಬಿಸಿ ಕಾಣಿಕೆ ಪಡೆದುಕೊಳ್ಳುವ ದೇವರು ಕಳ್ಳನಿಗೆ ಕೈತುಂಬ ಅದನ್ನೇ ನೀಡಿ ಕಳಿಸಬಹುದು; ಅಲ್ಲಿ ಎರಡು ವಿಧದ ಕರ್ಮಗಳು ನಡೆಯುತ್ತವೆ. ಒಂದು ಉತ್ತಮ ಕರ್ಮ, ಇನ್ನೊಂದು ಅಧಮ ಕರ್ಮ. ಅವರವರ ಭಾವಕ್ಕೆ ತಕ್ಕಂತೆ ಇಬ್ಬರ ಮನದಲ್ಲೂ ತಪ್ಪುಗಳಿಲ್ಲ. ಯಾರಿಗೆ ಯಾವ ಫಲವೆಂದು ನಿರ್ಧರಿಸುವ ಶಕ್ತಿ ಮಾತ್ರ ಅವರಿಗಿಲ್ಲ.

ಕೆಲವೊಮ್ಮೆ ಸಂದಿಗ್ಧ ಹೀಗಿರುತ್ತದೆ: ಹಸಿದ ಹದ್ದೊಂದು ಹಾವನ್ನು ಹಿಡಿದು ಹಾರುತ್ತಿತ್ತು. ಹದ್ದಿನ ಹಿಡಿತಕ್ಕೊಳಗಾಗಿ ಸಾಯುತ್ತಿರುವ ಹಾವು ಹದ್ದನ್ನು ಕಚ್ಚಲೆತ್ನಿಸುತ್ತ ವಿಷವನ್ನು ಉಗುಳಿತ್ತು. ಅತಿಥಿಸತ್ಕಾರ ನಿಷ್ಠನಾದ ಬ್ರಾಹ್ಮಣನೋರ್ವ ಮಧ್ಯಾಹ್ನ ಯಾರೂ ಸಿಗಲಿಲ್ಲವೆಂಬ ಕಾರಣಕ್ಕೆ ಪಾತ್ರೆಗಳಲ್ಲಿ ಆಹಾರವನ್ನು ತೆಗೆದುಕೊಂಡು ಹೊರಗೆ ಯಾರಾದರೂ ಹಸಿದವರು ಸಿಕ್ಕಾರೆಂದು ಹೊರಟಿದ್ದ. ಮೇಲಿನಿಂದ ಉದುರಿದ ಹಾವಿನ ವಿಷದ ಹನಿಗಳು ಆಹಾರದ ಪಾತ್ರೆಯಲ್ಲಿ ಬಿದ್ದವು. ಬ್ರಾಹ್ಮಣ ಭಕ್ತಿಯಿಂದ ಅನ್ನದಾನ ಮಾಡಿದ. ಉಂಡವರು ಕೈಲಾಸ ಕಂಡರು! ಪಾಪ ಯಾರಿಗೆ? ಹದ್ದಿಗೋ? ಹಾವಿಗೋ? ಬ್ರಾಹ್ಮಣನಿಗೋ? ಇಂತಹ ಕ್ಲೇಶಗಳು ಜನಜೀವನದಲ್ಲಿ ಒಂದೆರಡಲ್ಲ. ಇವುಗಳನ್ನು ನಿರ್ಧರಿಸುವುದೂ ನಮ್ಮಿಂದ ಸಾಧ್ಯವಾಗುವುದಿಲ್ಲ.

ನಮ್ಮ ಭಾವನೆಗಳಲ್ಲಿ ಪರತತ್ವ ಬೃಹತ್ತಾಗಬೇಕು ಮತ್ತು ಆ ಭಾವ ಗಟ್ಟಿಯಾಗಿ, ಸ್ಥಿರವಾಗಿ, ದೀರ್ಘಕಾಲ ಇರಬೇಕೆಂಬ ಪ್ರಯತ್ನ ನಮ್ಮದಾಗಬೇಕು. ಸಾಮಾನ್ಯ ಮನುಷ್ಯನ ಮನಸ್ಸೆಂಬುದು ಕಳೆಬೆಳೆದ ಹೊಲ. ಆಧುನಿಕ ವಿದ್ಯೆಯನ್ನು ಅವನೆಷ್ಟೇ ಕಲಿತಿದ್ದರೂ ಮನೋನಿಗ್ರಹ ವಿದ್ಯೆಯನ್ನು ಕಲಿಯದಿದ್ದರೆ ಯಾವ ಪ್ರಯೋಜನವೂ ಇಲ್ಲ. ಕೇವಲ ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದರಿಂದ, ಯಾರದೋ ಪ್ರವಚನ ಕೇಳುವುದರಿಂದ ಮನೋನಿಗ್ರಹವಿದ್ಯೆಯನ್ನು ಕಲಿಯುವುದು ಸಾಧ್ಯವಿಲ್ಲ. ಅದಕ್ಕಿರುವ ಏಕೈಕ ಮಾರ್ಗವೆಂದರೆ ಯೋಗವೊಂದೇ.

ಯೋಗದ ಹಂಗಿಲ್ಲದ ಹಾವಾಡಿಗ ಸಂಸ್ಥಾನದವರಾದ ನಾವು ಇಂತಹ ಹಲವು ಕತೆಗಳನ್ನು ಶಿಷ್ಯಗಣಗಳಿಗೆ ಇನ್ನಷ್ಟು ಬಣ್ಣ ಹಚ್ಚಿ ಬಡಿಸುತ್ತೇವೆ; ಆದರೆ ನಮಗೆ ಮಾತ್ರ ಅವು ಬೇಕಾಗಿಲ್ಲ. ಬುಸ್ಸಪ್ಪನ ಕತೆಗಳಿಗಂತೂ ನಮ್ಮಲ್ಲಿ ಕೊರತೆಯೇ ಇಲ್ಲ.

ಕಾನ್ಕುಳಿಯಲ್ಲಿ ಬುಸ್ಸಪ್ಪನನ್ನು ಹೊರಗೆ ಬಿಟ್ಟು ಆಡಿಸಿದ ಕೋಣೆಯನ್ನೇ ವಾಸ್ತುದೋಷವೆಂದು ಕೆಡವಿಸಿಬಿಟ್ಟಿದ್ದೇವೆ ನಾವು. ಅದರಂತೆ ಇನ್ನಷ್ಟು ಕಡೆಗೆ ಹಾಗೆ ಮಾಡಿದ್ದೇವೆ, ಎಲ್ಲವನ್ನೂ ಇಲ್ಲಿ ಹೇಳಲಾಗುವುದಿಲ್ಲ. ಹಾದರದ ಕತೆಗಳಿಗೆ ಆಧಾರವೇ ಸಿಗಬಾರದು ಎಂಬುದು ನಮ್ಮ ಉದ್ದೇಶ; ಹಾಗಾಗಿ ವಾಸ್ತು, ಅಷ್ಟಮಂಗಲ, ದೃಷ್ಟಿ, ಮಾಟ, ಮಂತ್ರ, ಯಂತ್ರ, ತಂತ್ರ ಎಲ್ಲವನ್ನೂ ಬಳಸಿಕೊಳ್ಳುತ್ತಿದ್ದೇವೆ.

ಅಷ್ಟಮಂಗಲದವನಿಗೆ ಮ್ಯಾಚ್ ಫಿಕ್ಸ್ ಮಾಡಿಕೊಂಡರೆ ಇಷ್ಟವಾಗುವ ಹೇಳಿಕೆಯನ್ನೇ ನೀಡುತ್ತಾನೆ; ಉಳಿದ ಎಲ್ಲಾ ಕಲಾವಿದರೂ ಅಷ್ಟೆ-ಅವರನ್ನೆಲ್ಲ ಮೊದಲೇ ಮಾತನಾಡಿಸಿಬಿಟ್ಟರೆ ಎಲ್ಲವೂ ನಮ್ಮ ನೇರಕ್ಕೇ ನಡೆಯುತ್ತದೆ. ನಮ್ಮ ಆಂತರಿಕ ಕೈಗಾರಿಕಾ ತಾಣ ಎಂಬುದು ಕಳ್ಳರ ಅಂದರೆ ಕಳ್ಳ ಭಾವನೆಗಳು ಮತ್ತು ದುಷ್ಟ ಯೋಚನೆಗಳ ಅಡಗುದಾಣವಾಗಿದೆ.

ಮಂಜು ಗಾವಿಗೆ ಕೊಂಕಣಿ ಭಕ್ತನೊಬ್ಬ ದಾನವಾಗಿ ಕೊಟ್ಟ ಅರವತ್ತು ಸೆಂಟ್ಸ್ ಜಾಗವನ್ನು ಸೈಟುಗಳನ್ನಾಗಿ ಪರಿವರ್ತಿಸಿ ಮಾರಿದ್ದೇವೆ ನಾವು. ಮೊದಲು ಅಲ್ಲಿ ಶಾಲೆ ನಿರ್ಮಿಸುತ್ತೇವೆ ಅಂತ ಅವರಿಂದ ಪಡೆದುಕೊಂಡಿದ್ದು. ಅಲ್ಲಿಗೆ ಹೋಗಲು ಸರಿಯಾದ ದಾರಿಯಿಲ್ಲ, ದಾರಿಗಾಗಿ ಜಾಗ ಬಿಡಬೇಕು ಅಂತ ಪಕ್ಕದಲ್ಲಿರುವ ಪ್ರೊಫೆಸರ್ ಮನೆಯ ಕಾಂಪೌಂಡನ್ನು ತುರ್ತಾಗಿ ರಾತ್ರೋರಾತ್ರಿ, ಪ್ರೊಫೆಸರ್ ಅವರ ಮುದಿ ತಾಯಿ ಮಾತ್ರ ಮನೆಯಲ್ಲಿರುವಾಗ, ಒಡೆದು ದಾರಿ ಮಾಡಿಸಿದೆವು.

ಇಂತಹ ನೂರಾರು ಶಿಷ್ಯೋದ್ಧಾರಕ ಸುಧಾರಣೆಗಳನ್ನು ಮಾಡಿದ್ದೇವೆ ನಾವು. ಬಿಡುವಾದಾಗ ಒಂದೊಂದಾಗಿ ಪ್ರವಚನದಲ್ಲಿ ನಿಮಗೆ ಹೇಳುತ್ತ ಹೋಗುತ್ತೇವೆ. ಪರಮ ಮಂಗಲವೂ ಪರಮ ಪವಿತ್ರವೂ ಆದ ಅಂತಹ ಕತೆಗಳನ್ನು ಕೇಳುವಾಗ ನೀವು, ಆದಿ ಮಂಗಲ ಅಂತ್ಯಮಂಗಲ ಮತ್ತು ಮಧ್ಯಮಂಗಲದ ಜೊತೆಗೆ ಅಷ್ಟಮಂಗಲದ ಕತೆಗಳನ್ನೂ ಸೇರಿಸಿಕೊಂಡು ಕೇಳಬೇಕಾಗುತ್ತದಷ್ಟೆ.

ಒಂದೆರಡು ದಿನಗಳಲ್ಲಿ ಸುಂದರ ರಾವಣನ ಕತೆಯನ್ನು ಕೇಳಲಿದ್ದೀರಿ. ಈಗ ವಿಶೇಷತಃ ಮಹಿಳಾ ಶಿಷ್ಯರು ಎಲ್ಲವನ್ನೂ ಅರ್ಪಣೆ ಮಾಡಿದ ಭಾವನೆಯಲ್ಲಿ ಎಲ್ಲವನ್ನೂ ಬಿಚ್ಚಾಕಿ ಎರಡೂ ಕೈ ಮೇಲೆತ್ತಿ ಚಪ್ಪಾಳೆ ತಟ್ಟುತ್ತ ನರ್ತನ ಮಾಡಿ.

ಬರೇ ಕಾಮ

ಬರೇ ಕಾಮ”

Thumari Ramachandra

source: https://www.facebook.com/groups/1499395003680065/permalink/1638151403137757/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s