ಅರೆ ಅರೆ ಸಾಗುತಿದೆ..ಕಾಮದ ಗಾಳಿಗೆ ಕಾಮಿಯ ದೋಣಿಯು ಎಲ್ಲಿಗೆ ಹೋಗುತಿದೆ?

ಅರೆ ಅರೆ ಸಾಗುತಿದೆ..ಕಾಮದ ಗಾಳಿಗೆ ಕಾಮಿಯ ದೋಣಿಯು ಎಲ್ಲಿಗೆ ಹೋಗುತಿದೆ?

ಯಕ್ಷಗಾನದಲ್ಲಿ ಸಭಾಲಕ್ಷಣ ಅಂತ ಪೂರ್ವರಂಗವೊಂದಿತ್ತು; ಅದರ ಅಗತ್ಯತೆ ನಮಗೀಗ ಕಾಣುತ್ತಿದೆ ಯಾಕೆಂದರೆ ಯಕ್ಷಗಾನವೆಂಬುದು ಕೇವಲ ನಾಟ್ಯವಲ್ಲ, ಕೇವಲ ಮಾತುಗಾರಿಜೆಯೂ ಅಲ್ಲ; ನರ್ತನ, ಗಾಯನ, ವಾದನ, ವಚನ-ವಾಚನ, ಆಂಗಿಕ, ಆಹಾರ್ಯ, ಸಾತ್ವಿಕ [ಸತ್ವವುಳ್ಳದ್ದು ಎಂದರ್ಥ] ಎಲ್ಲವನ್ನೂ ಒಳಗೊಂಡ ಅದೊಂದು ಸಮಗ್ರ ಕಲೆ. ಆ ಕಲೆಯ ರಸದೌತಣವನ್ನು ಅನುಭವಿಸಬೇಕಾದರೆ ಅದಕ್ಕೊಂದು ಮನೋಭೂಮಿಕೆ [ಮೂಡ್] ಸಿದ್ಧವಾಗಬೇಕು. ಆ ತಯಾರಿಗಾಗಿ ಪೂರ್ವರಂಗ ನಿರ್ವಹಿಸಲ್ಪಡುತ್ತಿತ್ತು.

ಯಕ್ಷಗಾನದಲ್ಲಿ ಪೂರ್ವರಂಗ ಇಲ್ಲದಿದ್ದರೂ ಒಂದೊಮ್ಮೆ ನಡೆದುಬಿಡಬಹುದು. ಆದರೆ ಯೋಗದಲ್ಲಿ ಹಾಗಲ್ಲ. ಯೋಗದ ಬಗ್ಗೆ ಇತ್ತೀಚೆಗೆ ಬಹಳ ತಲೆಕೆಡಿಸಿಕೊಂಡಿದ್ದೆ. ಯೋಗಿಗಳಿಗೂ ಹಾದರದ ಮನೋಭಾವ ಹೋಗುವುದಿಲ್ಲವೇ? ಎಂಬುದು ನನ್ನಲ್ಲಿದ್ದ ಪ್ರಶ್ನೆ. ಅದಕ್ಕೆ ಸಿಕ್ಕ ಉತ್ತರ ಮಾತ್ರ ಸುದೀರ್ಘ ಮತ್ತು ಸವಿಸ್ತಾರ. ಅದನ್ನು ಅರಗಿಸಿಕೊಂಡು ಕನ್ನಡದಲ್ಲಿ ಬರೆಯಲಿಕ್ಕೆ ಬಹಳ ಸಮಯ ಹಿಡಿಯಿತು.

ಯೋಗಕ್ಕೆ ಅಧಿಕಾರಿ ಯಾರು ಅಥವಾ ಯೋಗವನ್ನು ನಡೆಸುವ ಅರ್ಹತೆ ಯಾರಿಗಿದೆ ಎಂಬುದು ಬಹುದೊಡ್ಡ ಪ್ರಶ್ನೆ. ಮೇಲ್ನೋಟಕ್ಕೆ ಎಲ್ಲರೂ ಒಳ್ಳೆಯವರೇ ಮತ್ತು ಆಸ್ತಿಕರೇ ಆಗಿ ಕಾಣಿಸಬಹುದು. ಅನೇಕರು ವೇಷ-ಭೂಷಣಗಳಿಂದ ಸಾಧು, ಸಂತ, ಸನ್ಯಾಸಿಗಳೇ ಆಗಿರಬಹುದು. ಇಂತಹ ಅನೇಕರಲ್ಲಿ ಢಾಂಬಿಕತೆ ಮನೆಮಾಡಿರುತ್ತದೆ.

ಯಾರು ಪ್ರಾಪಂಚಿಕ ವಸ್ತು-ವಿಷಯ-ವೈಭೋಗದಲ್ಲಿ ಆಸಕ್ತನಾಗಿರುತ್ತಾನೋ, ಯಾವನು ಜನಮೆಚ್ಚುಗೆಗಾಗಿ ಇಲ್ಲಸಲ್ಲದ್ದನ್ನು ಶಾಸ್ತ್ರವೆಂಬ ಹೆಸರಿನಲ್ಲಿ ಆಚರಿಸಲು ಅನುಮೋದಿಸುತ್ತಾನೋ, ಯಾರು ಜನರ ಓಲೈಕೆಗಾಗಿ ತೀರಾ ಹೆಚ್ಚು ಮಾತನಾಡುತ್ತಾನೋ[ವಾಚಾಳಿಯೋ], ಪ್ರಾಪಂಚಿಕ ವಿಷಯಗಳಲ್ಲಿ ಅತ್ಯಾಸಕ್ತರಾದ ಜನರೊಡನೆ ಅತಿಯಾಗಿ ಯಾವನು ಬೆರೆಯುತ್ತಾನೋ, ಯಾವನು [ಅಂತರಂಗ ಅಥವಾ ಬಹಿರಂಗ] ಕ್ರೂರಿಯೋ, ಅತ್ಯಾಚಾರಿಯೋ, ಲೌಕಿಕ ವ್ಯವಹಾರ-ವ್ಯಾಜ್ಯಗಳಲ್ಲಿ ಸಿಲುಕಿಕೊಂಡಿರುವನೋ, ಯಾವನು ಜಗಳಗಂಟನೋ, ಪರೋಪದ್ರವಿಯೋ, ಯೋಗದಲ್ಲಿ ನಂಬಿಕೆಯಿಲ್ಲದವನೋ, ಅಂಥವನಿಗೆ ಯೋಗಾಚರಣೆಗೆ ಅಧಿಕಾರವಿಲ್ಲ; ಒಂದೊಮ್ಮೆ ಅವನು ಯೋಗವನ್ನು ಆಚರಿಸಿದರೂ ಯಾವ ರೀತಿಯ ಪ್ರಯೋಜನವನ್ನಾಗಲೀ ಸಿದ್ಧಿಗಳನ್ನಾಗಲೀ ಪಡೆಯಲಾರ. ಇಂಥವನನ್ನು ಗುರುವೆಂದು ಅವನಲ್ಲಿ ಯೋಗ ಕಲಿಯುವುದೂ ಸಹ ಕಲಿಕೆಯಲ್ಲಿ ಆಸಕ್ತಿಯುಳ್ಳವನ ಅಧಿಕಾರವನ್ನು ಮೊಟಕುಗೊಳಿಸುತ್ತದೆ.

ಯೋಗಕ್ಕೆ ಅಧಿಕಾರ ಯಾರಿಗಿದೆ ಎಂದು ಹುಡುಕಿದಾಗ ಉತ್ತಮ, ಮಧ್ಯಮ ಮತ್ತು ಅಧಮ ಎಂಬ ಮೂರು ವರ್ಗದ ಜನರನ್ನು ಕಾಣಬಹುದು. ಇಲ್ಲಿನ ವರ್ಗೀಕರಣ ನಡೆಯುವುದು ವ್ಯಕ್ತಿ ಪಡೆದುಕೊಂಡ ಸಂಸ್ಕಾರ, ಬುದ್ಧಿಮತ್ತೆ, ಮುಮುಕ್ಷುತ್ವ ಮತ್ತು ವೈರಾಗ್ಯದ ಹಂತಗಳಿಂದ.

ಗುರುವಿನ ಆಯ್ಕೆಯಲ್ಲಿ ನಿಮಗೆ ಇದೆಲ್ಲ ತಿಳಿದಿರಬೇಕು. ಗುರುವೆಂಬಾತ ಪ್ರಾಪಂಚಿಕ ಮತ್ತು ವ್ಯಾವಹಾರಿಕ ವಿಷಯಗಳಿಂದ ಸಾಧ್ಯವಾದಷ್ಟೂ ದೂರವಿರುತ್ತಾನೆ. ಅತ್ಯಾಚಾರ, ಅನಾಚಾರ, ಮೋಸ, ವಂಚನೆ, ಲೂಟಿ, ಪರಸ್ತ್ರೀಗಮನ, ಸ್ವೇಚ್ಛಾಚಾರ, ರಾಜಸ/ತಾಮಸ ಆಹಾರಗಳ ಸೇವನೆ ಇವುಗಳನ್ನು ನಡೆಸುವುದಿಲ್ಲ. ಬಾಹ್ಯಾಂತರಂಗದಲ್ಲಿ ಏಕನಿಷ್ಠೆಯುಳ್ಳವನಾಗಿದ್ದು ಆಡಂಬರ ರಹಿತ ಬದುಕನ್ನು ನಡೆಸುತ್ತಾನೆ. ಸರಳ-ಸಾತ್ವಿಕ ನಡೆ-ನುಡಿಗಳಿಂದ ಕೂಡಿದ್ದು ಪರರನ್ನು ನೋಯಿಸುವ ಮಾತುಗಳನ್ನು ಆಡುವುದಿಲ್ಲ; ಕೆಟ್ಟ ಬೈಗುಳ ಪದಗಳನ್ನು ಉಪಯೋಗಿಸುವುದಿಲ್ಲ. ಯೋಗದಲ್ಲಿ ಶ್ರದ್ಧಾ-ಭಕ್ತಿ ಉಳ್ಳವನಾಗಿದ್ದು ಗುರುಪರಂಪರೆಗೆ ದ್ರೋಹವಾಗದಂತೆ ನಡೆದುಕೊಳ್ಳುವವನಾಗಿರುತ್ತಾನೆ. ಪ್ರಾಮಾಣಿಕನಾಗಿದ್ದು ಸದಾ ಸರ್ವದಾ ಸತ್ಯವನ್ನೇ ಪಾಲಿಸುತ್ತಾನೆ. ಎಲ್ಲರಲ್ಲಿಯೂ ದಯೆ, ಕರುಣೆ ಉಳ್ಳವನಾಗಿರುತ್ತಾನೆ.

ಉತ್ತಮ ಯೋಗಗುರುವನ್ನು ಆಯ್ದುಕೊಂಡು, ಅವನ ಚರಣಗಳಲ್ಲಿ ನಮಸ್ಕರಿಸಿಕೊಂಡು, ಮಾರ್ಗದರ್ಶನ ಪಡೆದುಕೊಳ್ಳಬೇಕು. ಯೋಗವನ್ನು ಆಚರಿಸಲು ಉದ್ಯುಕ್ತನಾಗುವ ವ್ಯಕ್ತಿ ಮೇಲೆ ಹೇಳಿದ ಉತ್ತಮ ಗುಣಗಳಿಂದ ಕೂಡಿ ಸಂಸ್ಕಾರಭರಿತನಾಗಿರಬೇಕು. ಸಂಸಾರಿಯಾಗಿದ್ದರೂ ಸಹ ಪರಸ್ತ್ರೀಯರ ವಿಷಯದಲ್ಲಿ ಮಾತೃತ್ವವನ್ನು ಕಾಣುವಂತಹ ಸ್ವಭಾವದವನಿರಬೇಕು. ಅದಿಲ್ಲದಿದ್ದರೆ ಯೋಗವನ್ನು ಆಚರಿಸುವ ಅಧಿಕಾರವೇ ಅವನಿಗೆ ಇರುವುದಿಲ್ಲ.

ನುರಿತ ಯೋಗಿಯು ಯೋಗಕ್ಕೆ ನಿರೋಧವನ್ನು ತಂದೊಡ್ಡುವ ಆಹಾರವನ್ನು ವರ್ಜಿಸಬೇಕು. ಉಪ್ಪು, ಹುಳಿ, ಖಾರ, ಕಹಿ, ಸಾಸಿವೆ, ಇಂಗು, ಬಿಸಿ ಪದಾರ್ಥಗಳು, ಈರುಳ್ಳಿ, ಬೆಳ್ಳುಳ್ಳಿ, ಬೆಂಕಿಯ ಆರಾಧನೆ, ಹೆಣ್ಣು, ಅತಿಯಾದ ನಡಿಗೆ, ಸೂರ್ಯೋದಯದಲ್ಲಿ ಸ್ನಾನ, ಉಪವಾಸ ವ್ರತಗಳಿಂದ ದೇಹವನ್ನು ಜರ್ಜರಿತಗೊಳಿಸುವುದು ಮೊದಲಾದವುಗಳನ್ನು ಬಹಳ ದೂರ ಇಡುತ್ತಾನೆ.

ಆರಂಭಿಕ ಹಂತದಲ್ಲಿ ಹಾಲು ಮತ್ತು ತುಪ್ಪವನ್ನು ಬಳಸಬಹುದು. ಅದೇರೀತಿ ಗೋಧಿ, ಹಸಿರು ಧಾನ್ಯಗಳು ಮತ್ತು ಕೆಂಪು ಅಕ್ಕಿಯನ್ನು ಬಳಸಬಹುದು. ಹೀಗೆ ಮಾಡಿದಲ್ಲಿ ಯೋಗಿಯು ಉಸಿರಾಟವನ್ನು ತಾನಿಷ್ಟಪಟ್ಟಂತೆ ದೀರ್ಘಕಾಲದವರೆಗೆ ನಿಯಂತ್ರಿಸಲು ಸಾಧ್ಯವಾಗುವುದು. ಹೀಗೆ ಹೊರಗಿನಿಂದ ಯಾವುದೇ ಶ್ವಾಸೋಛ್ವಾಸ ನಡೆಸದೇ, ತನ್ನೊಳಗೇ ತಡೆಹಿಡಿದ ವಾಯುವಿನಿಂದ ’ಕೇವಲ ಕುಂಭಕ’ವನ್ನು ಆಚರಿಸಬಲ್ಲವನಾಗುತ್ತಾನೆ. ಹೀಗೆ ಕೇವಲ ಕುಂಭಕವನ್ನು ಆಚರಿಸಲು ಮೊದಲುಮಾಡಿದವನಿಗೆ ಮೂರು ಜಗದಲ್ಲಿ ಪಡೆದುಕೊಳ್ಳಲಾಗದ್ದು ಯಾವುದೂ ಇರುವುದಿಲ್ಲ!

ಯೋಗದ ಆರಂಭದಲ್ಲೇ ಅವನಿಂದ ಬೆವರು ಹೊರಬರುತ್ತದೆ. ಕಪ್ಪೆಯು ಜಿಗಿಯುವ ಹಾಗೆ, ಪದ್ಮಾಸನದಲ್ಲಿ ಕುಳಿತ ಯೋಗಿಯು ಹಾಗೆಯೇ ಭೂಮಿಯಮೇಲೆ ಚಲಿಸುತ್ತಾನೆ. ಇದು ಇನ್ನೂ ಮುಂದಿನ ಹಂತಕ್ಕೇರಿದಾಗ ನೆಲದಿಂದ ತಂತಾನೇ ಮೇಲಕ್ಕೇರುವ ಮಟ್ಟಕ್ಕೆ ಬೆಳೆಯುತ್ತಾನೆ. ಆಗ ಅವನಿಗೆ ಹಲವು ಸಿದ್ಧಿಗಳು ಮೈಗೂಡುತ್ತವೆ. ಚಿಕ್ಕ ಅಥವಾ ದೊಡ್ಡ ಯಾವುದೇ ನೋವಿನ ಅನುಭವ ಅವನಿಗೆ ಇರುವುದಿಲ್ಲ. ಶಿಶ್ನದ ನಿಮಿರುವಿಕೆ ಮತ್ತು ನಿದ್ರೆ ಎರಡನ್ನೂ ಸಂಪೂರ್ಣ ತೆಗೆದು ಹಾಕುತ್ತಾನೆ. ಕಣ್ಣೀರು ಹರಿಯುವುದು, ಜೊಲ್ಲು ಸುರಿಯುವುದು, ಬೆವರು ಅಸರುವುದು, ಬಾಯಿಯ ದುರ್ನಾತ ಹೊರಹೊಮ್ಮುವುದು ಇವೆಲ್ಲವೂ ಅವನಲ್ಲಿ ಉದಯವಾಗುವುದೇ ಇಲ್ಲ!

ಇನ್ನೂ ಮುಂದಿನ ಹಂತದಲ್ಲಿ ಅವನು ಇನ್ನಷ್ಟು ಸಿದ್ಧಿಗಳನ್ನು ಪಡೆದುಕೊಳ್ಳುತ್ತಾನೆ; ಅವುಗಳಲ್ಲಿ ‘ಭೂಚರ ಸಿದ್ಧಿ’ ಎಂಬ ವಿಶಿಷ್ಟ ಸಿದ್ಧಿಯು ಈ ಪ್ರಪಂಚದ ಎಲ್ಲ ಸಜೀವ-ನಿರ್ಜೀವ ವಸ್ತುಗಳನ್ನು ತನ್ನ ನಿಯಂತ್ರಣದಲ್ಲಿಡಲು ಅವಕಾಶ ಕಲ್ಪಿಸುತ್ತದೆ. ಅವನ ಒಂದೇ ಉಸಿರಿನಿಂದ ಕಾಡಿನ ಕ್ರೂರ-ಹಿಂಸ್ರ ಪಶುಗಳು ಸತ್ತುಹೋಗಬಹುದು! ಆದರೆ ಯೋಗಿ ಹಾಗಾಗುವುದನ್ನು ಬಯಸಲಾರ. ಸಾಕ್ಷಾತ್ ಪ್ರೇಮಮಯೀ ಜಗನ್ನಿಯಾಮಕನಂತೆ ಸುಂದರವಾಗಿ ಕಂಗೊಳಿಸುತ್ತಾನೆ. ವೀರ್ಯ ತಡೆಹಿಡಿಯಲ್ಪಟ್ಟಿರುವುದರಿಂದ ಆತನ ಶರೀರದಿಂದ ಸುಗಂಧವು ಹೊರಸೂಸುತ್ತದೆ.

ಅಂತರಂಗದ ದನಿಯೇ ಯೋಗಿಗೆ ಸಿಂಧುವಾದ ಆಹಾರವನ್ನು ಆಯ್ದುಕೊಳ್ಳಲು ಪ್ರೇರೇಪಿಸುತ್ತದೆ. ನೀವು ನೀವಾಗಿಯೇ ಯೋಗಿಗೆ ಯೋಗ್ಯವಾದ ಆಹಾರ ಕ್ರಮಗಳಲ್ಲಿ ಆಯ್ದುಕೊಂಡು, ಯೋಗಿಯ ಆಹಾರ ಸಂಹಿತೆಗೆ ಧಕ್ಕೆಬಾರದಂತೆ ಒಂದು ಯಾದಿಯನ್ನು ತಯಾರಿಸಿಕೊಳ್ಳಬಹುದು. ಸಂಪೂರ್ಣ ಸಾತ್ವಿಕ ಆಹಾರವನ್ನು ಅರ್ಧಹೊಟ್ಟೆಯಷ್ಟು ಮಾತ್ರ ತೆಗೆದುಕೊಳ್ಳಬೇಕು. ಉಳಿದರ್ಧ ಹೊಟ್ಟೆಯಲ್ಲಿ ಕಾಲು ಭಾಗವನ್ನು ಶುದ್ಧ ನೀರಿನಿಂದ ಭರ್ತಿಮಾಡಬೇಕು. ಉಳಿದ ಕಾಲುಭಾಗವನ್ನು ವಾಯು ವೃದ್ಧಿಯಾಗುವುದಕ್ಕೆ ಅವಕಾಶ ನೀಡುವ ಸಲುವಾಗಿ ಹಾಗೇ ಬಿಡಬೇಕು.

ಯೋಗವನ್ನು ಆಚರಿಸಬಯಸುವ ಒಬ್ಬ ಸಾಮಾನ್ಯ ವ್ಯಕ್ತಿಗೇ ಯೋಗದ ನಿಯಮಗಳು ಹೀಗಿವೆ ಎನ್ನುವಾಗ ನಿಜವಾದ ಸನ್ಯಾಸಿಗೆ ಹೇಗಿರಬೇಡ? ಅಂದಹಾಗೆ ಮೇಲಿನ ಎಲ್ಲ ಷರತ್ತುಗಳಲ್ಲೂ ಹಾವಾಡಿಗ ಮಹಸಂಸ್ಥಾನದವರು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ; ಹಾಗಾಗಿಯೇ ಯೋಗ ಫಲಿಸಲಿಲ್ಲ, ಫಲಿಸುವುದೂ ಇಲ್ಲ.

ಇನ್ನು ಹಾವಾಡಿಗ ಸಂಸ್ಥಾನದವರ ಹಗರಣಗಳಿಗಂತೂ ಲೆಕ್ಕವೇ ಇಲ್ಲ. ಅವುಗಳನ್ನೆಲ್ಲ ಪರಿಶೀಲಿಸುವ ಹಡಗು ಆಕಡೆ ಹೋಗಿದೆ. ಇಂಚಿಂಚೂ ಬಿಡದೇ ಮಾಹಿತಿ ಕಲೆಹಾಕುವ ಪ್ರಯತ್ನ ನಡೆದಿದೆ. ಆದರೆ ಕಾಮಿಯ ದೋಣಿ ಮಾತ್ರ ಎತ್ತಹೊರಟಿದೆ ಮತ್ತು ಎಲ್ಲಿಗೆ ಸೇರಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ದೈಹಿಕವಾಗಿ ಇಲ್ಲಿದ್ದರೂ ಮಾನಸಿಕವಾಗಿ ಇಲ್ಲಿಲ್ಲ; ಪೂಜೆ-ಪುನಸ್ಕಾರಗಳೆಲ್ಲ ನೆಗೆದುಬಿದ್ದು ಕೇವಲ ಢಾಂಬಿಕತೆಯಿಂದ ನಡೆಯುತ್ತಿವೆ.

ಅನ್ನ ಬೆಂದಿದೆಯೋ ಇಲ್ಲವೋ ಎಂದು ನೋಡಲು ಒಂದು ಅಗುಳನ್ನು ಎತ್ತಿ ಹಿಸುಕಿ ನೋಡಿದರೆ ಸಾಕು, ಬದಲಿಗೆ ಪಾತ್ರೆಯಲ್ಲಿರುವ ಅನ್ನವನ್ನೆಲ್ಲ ರಾಶಿ ಹಾಕಿ ಹಿಸುಕಿ ನೋಡುವರೇ? ಇಲ್ಲ. ಹಾವಾಡಿಗ ಸಂಸ್ಥಾನದ ಒಂದೆರಡು ಹಗರಣಗಳೇ ಅಲ್ಲೇನು ನಡೆಯುತ್ತಿದೆ ಎಂದು ಅರಿಯುವುದಕ್ಕೆ ಸಾಕು; ಅಲ್ಲಿನ ಹಗರಣಗಳನ್ನು ಕೆದಕಿದರೆ ಆಸ್ತಿಕ ಮಹಾಶಯರು ದೇವರಲ್ಲೇ ನಂಬಿಕೆ ಕಳೆದುಕೊಂಡಾರು.

ಸಮಾಜದ ಮರ್ಯಾದೆ ಹೋಗುತ್ತದೆ, ಸೀಟಿನಲ್ಲೇ ಉಳಿಸಿಕೊಳ್ಳೋಣ ಎಂಬ ಪ್ರಚಾರ ನಡೆಯುತ್ತಿದೆಯಂತೆ; ಸಮಾಜಕ್ಕೆ ಇನ್ನೂ ಮರ್ಯಾದೆ ಇದೆಯೇ ಹಾಗಾದರೆ? ಮರ್ಯಾದೆ ಇದ್ದರೆ ಇಷ್ಟೆಲ್ಲ ಆಗಲು ಬಿಡುತ್ತಿದ್ದರೇ? ಅಷ್ಟಕ್ಕೂ ಈ ಸರ್ವತಂತ್ರ ಸ್ವತಂತ್ರ ಎಂಬ ಸರ್ವಾಧಿಕಾರೀ ಧೋರಣೆಯೇ ಸಮಾಜ ಘಾತುಕವಾದದ್ದು. ಹಿಂದೊಂದು ಕಾಲಕ್ಕೆ ಅದಕ್ಕೆ ಯೋಗ್ಯವಾದ ಯೋಗಿಗಳು ಇದ್ದರು, ಈಗಲೂ ಅಪರೂಪಕ್ಕೆ ಕೆಲವರು ಸಿಗಬಹುದು. ಆದರೆ ಯೋಗಿಗಳು ಎಂದು ಹೇಳಿಕೊಂಡು ತಿರುಗುವವರೆಲ್ಲ ಯೋಗಿಗಳೆನ್ನಲು ಸಾಧ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧ್ಯಾಷ್ಟಾಂಗಯೋಗ …ಎಂದೆಲ್ಲ ಪದವಾಕ್ಯಗಳಲ್ಲಿ ಪ್ರಾವೀಣ್ಯವನ್ನು ತೋರಿಸುವ ’ಮಹಾನುಭಾವರೆಲ್ಲರೂ’ ಹಾಗೇ ಇದ್ದಾರೆಂದರ್ಥವಲ್ಲ. ಬಣ್ಣ ಮಾಸುವ ವರೆಗೆ ಗ್ಯಾರಂಟೀ ಗೋಲ್ದು ಅಪ್ಪಟ ಚಿನ್ನಕ್ಕಿಂತ ಚೆನ್ನಾಗಿ ಕಾಣುತ್ತದೆ.

ಇಷ್ಟೆಲ್ಲ ನಡೆದರೂ ಇನ್ನೂ ಕೆಲವರು ಜೈಕಾರ ಹಾಕುವುದಕ್ಕೆ ಅವರ ಸ್ವಾರ್ಥಪರ ಪ್ರಾಯೋಜಿತ ವ್ಯವಹಾರಗಳೇ ಕಾರಣ ಎನ್ನುವುದನ್ನು ಬೇರೆ ಯಾರೋ ಹಳದೀ ಶಾಲಿನ ಬಾವಯ್ಯಂದಿರು ವೇದಿಕೆಯೇರಿ ಅಧಿಕೃತವಾಗಿ ಘೋಷಿಸಬೇಕಾದ ಅಗತ್ಯವೇನಿಲ್ಲ ಬಿಡಿ.

Thumari Ramachandra

source: https://www.facebook.com/groups/1499395003680065/permalink/1637348226551408/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s