ಮೊಟ್ಟೆಯ ಆಮ್ಲೆಟ್ ಕಟ್ಟಿಸಿಕೊಂಡು ಬರುವ ಭಕ್ತರಿಗೆ ಕಟ್ಟ ಕಡೆಯವರೆಗೂ ಆಶೀರ್ವಾದ

ಮೊಟ್ಟೆಯ ಆಮ್ಲೆಟ್ ಕಟ್ಟಿಸಿಕೊಂಡು ಬರುವ ಭಕ್ತರಿಗೆ ಕಟ್ಟ ಕಡೆಯವರೆಗೂ ಆಶೀರ್ವಾದ

“ನೀವು ಐದಾರು ದಿನಗಳಿಂದ ತುಮರಿಯ ಮೂಲಕ ನಮ್ಮ ಮಾತನ್ನು ಕೇಳಲಿಲ್ಲ. ತುಮರಿ ರಜಾ ಬರಹಕ್ಕೆ ಹೊಡೆದಿದ್ದನಲ್ಲ? ಇಂದು ಮತ್ತೆ ಬೊಗಳಲು ಆರಂಭಿಸಿದ್ದಾನೆ, ಕೇಳಿ.

ಬೊಗಳಲು ಎನ್ನುವುದಕ್ಕೆ ಕಾರಣವಿದೆ. ನಮ್ಮ ವಿರೋಧಿಗಳು ನಿನ್ನೆ, ಇಂದು ಎಲ್ಲ ದಕ್ಷಿಣ ಕನ್ನಡದ ಕಡೆಗೆ ತನಿಖೆ ನಡೆಸುವುದಕ್ಕೆ ಮಾಹಿತಿ ನೀಡುತ್ತಿದ್ದಾರಲ್ಲ. ಅವರು ಇಂದು ದಡಕ್ಕಲ್ ಕಡೆಗೆ ಹೋಗಿದ್ದರು. ಅಲ್ಲಿನ ನಮ್ಮ ಶಿಷ್ಯ ಇದ್ದಾನಲ್ಲ. ಅವ ಅವರನ್ನು ಆರಕ್ಷಕರೆದುರೇ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. “ಸಾಕಿಕೊಂಡ ನಾಯಿಗಳೂ ಕಚ್ಚುತ್ತವೆ” ಎಂದು ಹೇಳಿದ್ದಾನಂತೆ. ಪರವಾಗಿಲ್ಲ, ನಮ್ಮ ತರಬೇತಿ ಅಷ್ಟರಮಟ್ಟಿಗಿನ ’ಸಂಸ್ಕಾರ’ವನ್ನು ಕೊಟ್ಟಿದೆ ಅಂತಾಯ್ತು.

ಇನ್ನೊಂದೇನೆಂದರೆ ಆ ನಮ್ಮ ಶಿಷ್ಯನಿಗೂ ತಲೆಯೊಳಗೆ ಇರೋದು ಕೊಳೆತ ಆಲೂಗಡ್ಡೆ ಅಂತ ನಮಗೆ ಗೊತ್ತಿಲ್ಲವೆ? ನಾವು ನಮ್ಮ ಹಳದೀ ತಾಲಿಬಾನ್ ಬಳಗದಲ್ಲಿ ಯಾವ ಶಿಷ್ಯ ಹೇಗೆ ಎಂದು ನೋಡಿಕೊಂಡೇ ವ್ಯವಹರಿಸುತ್ತೇವೆ. ಟ್ಯಾಂಕಿನಲ್ಲಿ ಪೆಟ್ರೋಲ್ ಎಷ್ಟಿದೆಯೆಂದು ಕಡ್ಡಿ ಹಾಕಿ ನೋಡಿಯೇ ಮುಂದೆ ಗಾಡಿ ಓಡಿಸುವುದು ನಾವು. ಹಾಗಾಗಿಯೇ ಅಲ್ಲವೇ ಇಲ್ಲಿಯವರೆಗೆ ನಮ್ಮನ್ನು ಏನೂ ಮಾಡದೆ ಬಿಟ್ಟಿದ್ದು? ನಮ್ಮ ಜಾಗದಲ್ಲಿ ಯಾರೋ ಬಡಪಾಯಿ ಇದ್ದಿದ್ದದ್ರೆ ಇಷ್ಟೊತ್ತಿಗೆ ಚಡ್ಡಿ ಅಲ್ಲಲ್ಲ ಬುಲ್-ಪೀನ ಹರಿದು ಶ್ಮಶಾನಕ್ಕೆ ತೋರಣ ಕಟ್ಟುತ್ತಿದ್ದರು. ನಮಗೇನೋ ಕೈಯಿದೆ, ಕೈಯಲ್ಲೂ ಮೊದಲು ಕಾಣಿಕೆ ದೇಣಿಗೆ ಅಂತ ಹೊಡ್ಕಂಡಿರುದು ಸಾಕಷ್ಟಿದೆ, ತಳ್ತೇವೆ ನಡೆಯುತ್ತದೆ.

ಆ ನಮ್ಮ ಶಿಷ್ಯ ಎಲ್ಲಾದರೂ ಚೂರುಪಾರು ತಲೆ ಉಪಯೋಗಿಸಿ, “ಹೌದಾ? ನಮ್ಮ ಮನೆಯಲ್ಲಿ ಎಷ್ಟು ಹೊತ್ತಿಗೆ ಎಲ್ಲಿ ಏನು ನಡೆಯಿತು? ಆಗ ನಾವೆಲ್ಲ ಎಲ್ಲಿ ಇದ್ದೆವು? ಎನ್ನುವಂತಹ ಪ್ರಶ್ನೆಗಳನ್ನು ಅವರಲ್ಲೇ ಕೇಳಿ ತನ್ನ ಸಂಶಯವನ್ನು ಪರಿಹರಿಸಿಕೊಳ್ಳುತ್ತಾನೇನೋ ಎಂಬ ಅನುಮಾನ ನಮ್ಮನ್ನು ಕಾಡುತ್ತಿತ್ತು ಮಾರಾಯರೆ. ಸದ್ಯಕ್ಕೆ ಅವ ಅಷ್ಟು ತಲೆ ಓಡಿಸಲಿಲ್ಲ. ನಮ್ಮಲ್ಲಿ ಮೆದುಳನ್ನು ಅಡವು ಇಟ್ಟವರ ಕತೆಗಳೆಲ್ಲ ಇಷ್ಟೇ. ಅಲ್ಲಿ ನಮಗೆ ಬೇಕಾದಂತೆ ಕೆಲಸ ನಡೆಯುತ್ತದೆ.

ಜನಸಾಗರದಲ್ಲಿ ನಮ್ಮ ಪ್ರಬಲ ವಿರೋಧಿಗಳಲ್ಲಿ ಗೋಳಿ ವೀರಪ್ಪ ಅಂತ ಒಬ್ಬ ಇರೋದು ಗೊತ್ತಾಗಿದೆ. ಎಲ್ಲೋ ಹೆಸರು ಕೇಳಿದ ಹಾಗಿದೆಯಲ್ಲಾ ಎಂದುಕೊಂಡೆವು…ಆಗ ನೆನಪಾಯ್ತು. 1993-94ರಲ್ಲಿ ಈ ಸೀಟಿಗೆ ಬರುವಾಗ ಅವರ ಕಾಲಿಗೆ ಬಿದ್ದಿದ್ದು. ನಮ್ಮ ಆಯ್ಕೆಯ ಸಮಿತಿಯ ಅಧ್ಯಕ್ಷನಾಗಿ ಆತ ಕಾರ್ಯನಿರ್ವಹಿಸಿದ್ದು ನೆನಪಾಗುತ್ತಿದೆ. “ಊರಮನೆ ಮನುಷ್ಯ, ಒಳ್ಳೆ ಹುಡುಗ, ಇವನನ್ನೇ ಆಯ್ಕೆ ಮಾಡೋಣ” ಎಂದು ಸಿಕ್ಕಾಪಟ್ಟೆ ಒತ್ತಡ ಹಾಕಿದ ಅದೇ ಮನುಷ್ಯ ಇಂದು ನಮ್ಮ ವಿರೋಧಿ ಅಂದರೆ ಎಂತಹ ವಿಪರ್ಯಾಸವಲ್ಲವೇ?

ಮೊನ್ನೆ ನಮ್ಮ ವಿರೋಧಿಗಳು ಅಲ್ಲಿ ಸಭೆ ಸೇರಿಸಿದ್ದರಲ್ಲ, ಅಲ್ಲಿಗೆ ಅವನೂ ಹೋಗಿದ್ದನಂತೆ. ನಾವು ತಡಮಾಡಲಿಲ್ಲ, ನಮ್ಮ ಹಳದೀ ತಾಲಿಬಾನಿನ ಸ್ಥಳೀಯ ಘಟಕಕ್ಕೆ ತಿಳಿಸಿ, 15-20 ಜನರನ್ನು ಒಟ್ಟುಮಾಡಿಕೊಂಡು ಧಮಕಿ ಹಾಕಲು ಹೇಳಿದೆವು; ಯಥಾಪ್ರಕಾರ ನಾವಿ ನಿರ್ದೇಶಿಸಿದಂತೆ ನಮ್ಮ ಅಡ್ಡಗೇಟನ್ನು ಸರಿಸಿಟ್ಟುಕೊಂಡು ಅಷ್ಟೇ ಜನರ ಗುಂಪು, ವೀರಪ್ಪ ಮೀಟಿಂಗಿಗೆ ಹೋದ ಸಮಯದಲ್ಲೇ ವೀರಪ್ಪನ ಮನೆಗೆ ನುಗ್ಗಿತು.

ಅವರ ಮನೆಯಲ್ಲಿದ್ದ ಹೆಂಗಸರನ್ನೆಲ್ಲ ಬೆದರಿಸಿ, “ಯಾಕೆ ಮೀಟಿಂಗಿಗೆ ಹೋಗಬೇಕಾಗಿತ್ತು? ನಮ್ಮ ಗುರುಗಳನ್ನು ವಿರೋಧಿಸಬಾರದು ಎಂದು ತಿಳಿಯುವುದಿಲ್ಲವೇ? ಇವತ್ತೇನೋ ಬಿಟ್ಟಿದ್ದೇವೆ, ಇನ್ನು ಮುಂದೆ ಹೀಗೇ ಮಾಡಿದರೆ ಪರಿಸ್ಥಿತಿ ನೆಟ್ಟಗಿರಲಿಕ್ಕಿಲ್ಲ” ಎಂದು ಜೋರಾಗಿ ಧಮಕಿ ಹಾಕಿದ್ದಾರೆ.

ನಮ್ಮ ವಿರುದ್ಧ ಯಾರೇ, ಎಲ್ಲೇ ಒಂದು ಮಾತನಾಡಿದರೂ ನಮಗೆ ಸುದ್ದಿ ಗೊತ್ತಾಗುತ್ತದೆ. ಅದಕ್ಕೆ ತಕ್ಷಣ ನಮ್ಮ ನಿರ್ದೇಶನ ಹೋಗುತ್ತದೆ. ನಾವು ಕಾವಿ ಧರಿಸಿದ್ದೇವೆ ಅಂದರೆ ಕೈಗೆ ಬಳೆ ಹಾಕಿಕೊಂಡಿದ್ದೇವೆ ಅಂತ ಅರ್ಥವೇ? ಕೈಗೆ ಬಳೆತೊಟ್ಟವರೇ ಈ ಕಾಲದಲ್ಲಿ ಎಷ್ಟೆಲ್ಲ ಸಾಧನೆ ಮಾಡ್ತಾರೆ. ಹಾಗಾಗಿಯೇ ಕೈಗ ಬಳೆ ಹಾಕಿದವರಲ್ಲಿ ಬಹಳ ಜನರನ್ನು ನಾವು ಜಾಸ್ತಿ ಮೆಚ್ಚುತ್ತೇವೆ. ಮೆಚ್ಚುಗೆಯನ್ನು ತೋರಿಸಲು ಏಕಾಂತ ದರ್ಶನ ನೀಡುತ್ತೇವೆ.

ಎಲಾ ವೀರಪ್ಪ, ಪೊಗರು ನೋಡಿ, ಬಳೆಹಾಕಿದವರ ’ಸಬಲೀಕರಣ’ಕ್ಕೆ ಮುಂದಾದ ನಮ್ಮ ಕೈಗೇ ಬಳೆತೊಡಿಸಿ ಕರೆದೊಯ್ಯುವದಕ್ಕೆ ವ್ಯವಸ್ಥೆ ಮಾಡುತ್ತಿರುವವರನ್ನು ಬೆಂಬಲಿಸುವುದೆಂದರೇನು? ಯಾಕೆ ಹಾಗೆ ತಲೆ ಓಡಿಸಬೇಕು? ಅಧಿಕಾರ ಕೊಟ್ಟವ ಕೋಡಂಗಿ, ಇಸಗಂಡವ ವೀರ್ಯಭದ್ರ ಅಂತ ಗೊತ್ತಿಲ್ಲವೇ? ಸೀಟಿಗೆ ಬರೋದಕ್ಕಾಗಿ ನಾವು ಅವನ ಕಾಲಿಗೆ ಬಿದ್ದ ಹತ್ತು ಪಟ್ಟು ಸೀಟಿಗೆ ಬಂದ ಮೇಲೆ ಅವನೇ ನಮ್ಮ ಕಾಲಿಗೆ ಬಿದ್ದಿದ್ದಾನೆ ಬಿಡಿ; ಯಾಕೆಂದರೆ ನಾವೆಂದರೆ ಯಾರು? ಶ್ರೀಸಂಸ್ಥಾನ-ಜಗದ್ಗುರು ಶೋಭರಾಜಾಚಾರ್ಯ ಹಾವಾಡಿಗೇಶ್ವರ ಸುರತರತಿ ಮಹಾಸ್ವಾಮಿಗಳು.

ನಮ್ಮಲ್ಲಿ ಯಮ, ನಿಯಮ, ಅಸನ ಎಲ್ಲಾ ಮಾಡ್ತಾ ಕೂತ್ಕಳೋದಿಲ್ಲ, ಏನಿದ್ರೂ ಸ್ಕೂಲಿನ ಆಯಮ್ಮ, ನಿಮ್ಮಮ್ಮ, ನಿಮ್ಮಮ್ಮನ ಅಮ್ಮ ಯಾರಿದ್ದರೂ ಪರವಾಗಿಲ್ಲ, ನಡೀಲಿಕ್ಕೆ ಬರ್ತದೆ ಅಂತಾದ್ರೆ ಕರ್ಕೊಂಡು ಬನ್ನಿ, ಏಕಾಂತ ಗ್ಯಾರಂಟಿ! ಯಾಕೆಂದ್ರೆ….ಯಾಕೆಂದ್ರೆ…..ಯಾಕೆಂದ್ರೆ ನಮಗೀಗ ಹೊಸಬರು ಯಾರೂ ಸಿಗ್ತಾ ಇಲ್ಲ. ಇರುವವರ ಜೊತೆ ಮಾಡಿದ್ದೇ ಮಾಡಿ ಬೇಜಾರು…..ಅದೇ ಸೂರ್ಯ-ಅದೇ ಚಂದ್ರ. ಕೆಲಸ ನಡೀತಾ ಇರ್ಬೇಕು. ಮಂಚ ಕಾಲೀ ಬೀಳಬಾರ್ದು.

ನಮ್ಮ ಬಾವಯ್ಯಂಗೆ ಕೋಳಿಮೊಟ್ಟೆ ಆಮ್ಲೇಟ್ ಅಂದರೆ ತುಂಬ ತುಂಬ ಇಷ್ಟ. ಮಂಜ ಭಟ್ಟನ ಎದುರಿಗೆ ಒಂದ್ಸಲ ಎರಡುಮೂರು ಎಗ್ ಆಮ್ಲೆಟ್ ತಿಂದುಬಿಟ್ಟಿಡ್ನಂತೆ. ಆಮೇಲೆ ನಾವು ಹೇಳಿದೆವು,”ಯಾಕೋ ಬಾವ ಹಾಗ್ಮಾಡ್ದೆ? ನಾಳೆ ಊರಲ್ಲೆಲ್ಲ ಪ್ರಚಾರ ಮಾಡೋದಿಲ್ವೆ ಅವನು? ಇನ್ಮೇಲೆ ತಿನ್ನೋದಾದ್ರೆ ಪಾರ್ಸೆಲ್ ತರ್ಸಿಬಿಡು. ಯಾರೋ ಹೇಳ್ತಾರೆ ಅಂತ ಬಿಡಲಿಕ್ಕಾಗ್ತದ್ಯೇ? ನಮಗೆ ಬೇಕಾದದ್ದನೆಲ್ಲ ಪಡೆದುಕೊಳ್ಳಲೇಬೇಕು, ನಮಗೆ ಬೇಕಾದ ಹಾಗೆ ಬದುಕಬೇಕು. ನಾವು ಆಳಲಿಕ್ಕೆ ಇರೋರು, ಆಳಿಸಿಕೊಳ್ಳಲಿಕ್ಕೆ ಇರೋರಲ್ಲ, ಅರ್ಥವಾಯ್ತಲ್ಲ?”

ಅಲ್ಲಿಂದೀಚೆಗೆ ನಮ್ಮ ಬಾವಯ್ಯ ನಂದಿನಿ ಡೀಲಕ್ಸ್ ಗೆ ಫೋನ್ ಮಾಡಿ ಪಾರ್ಸೆಲ್ ತರಿಸೋದಕ್ಕೆ ಆರಂಭ ಮಾಡಿಕೊಂಡ. ನಮಗೂ ಎಗ್ ಆಮ್ಲೆಟ್ ಬಹಳ ಇಷ್ಟ. ಜೊತೆಗೆ ಇನ್ನೂ ಕೆಲವು ರೀತಿಯ ಮಾಂಸವೂ ಸಹ. ಚಾತುರ್ಮಾಸದಲ್ಲಿ ಮಾತ್ರ ಯತಿಗಳು ಮಾಂಸ ತಿನ್ಬಾರ್ದು ಎಂದು ಹೊರಡಿಸಿದ್ದೇವೆ ನಾವು. ಅದರರ್ಥ ಉಳಿದ ಕಾಲದಲ್ಲಿ ಸನ್ಯಾಸಿಯಾದವನೂ ಮಾಂಸ ತಿನ್ನಬಹುದು ಅಂತ. ಮಾಂಸ ತಿನ್ಬಾರ್ದು, ಮದ್ಯ ಸೇವಿಸಬಾರದು, ಮಾನಿನಿಯರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು ಎಂಬ ನಿಯಮಗಳು ನಮಗಂತೂ ಚಾತುರ್ಮಾಸದಲ್ಲೂ ಸಹ ಅಪ್ಲೈ ಆಗುವುದಿಲ್ಲ.

ಹಿಂದೆ ದೇವತೆಗಳೇ ಸುರಾಪಾನ ಮಾಡಿದ್ರಂತೆ. ಇಂದು ಈ ಹುಲುಮಾನವ ಲೋಕದಲ್ಲಿ ಸುರಾಪಾನ ಮಾಡದ ಜನರಿಗೆ ಬೆಲೆಯೇ ಇಲ್ಲ. ಲೈಫ್ ಈಸ್ ಶಾರ್ಟ್-ಎಂಜಾಯ್ ಟು ದಿ ಬೆಸ್ಟ್ ಅನ್ನೋಹಾಗೆ ಜೀವನ ಚಿಕ್ಕದು; ಅದನ್ನು ಅತ್ಯಂತ ರಸಿಕರಾಗಿ ಅನುಭವಿಸಬೇಕು ಎಂಬುದೇ ನಮ್ಮ ಧ್ಯೇಯ. ಯಾರೋ ಹೇಳಿದ್ದಾರೆ ಅಂತ ಮೂಗು ಮುಚ್ಚಿಕೊಂಡು ತಪಸ್ಸು ಮಾಡೋದಕ್ಕೆ ನಮಗೆಂತ ತಲೆ ಕೆಟ್ಟಿದ್ಯೇ? ಎಲ್ಲರಂತೆ ಉಪ್ಪು-ಖಾರ ತಿನ್ನೋ ದೇಹ, ಸಪ್ಪಗಿರು ಅಂದುಬಿಟ್ರೆ ಹೇಗೆ?

ನಿಮಗೇನ್ ಬೇಕು? ಮಂತ್ರಾಕ್ಷತೆ ಬೇಕು. ಕೆಲವರಿಗೆ ಫೈನಾನ್ಸ್ ಬೇಕು, ಇನ್ನು ಕೆಲವರಿಗೆ ಹೆಣ್ಣು ಬೇಕು, ಇನ್ನೂ ಕೆಲವರಿಗೆ ರಾಜಕೀಯದ ಕೆಲಸ ಆಗಬೇಕು, ಚಿಲ್ಲರೆ ಜನರಿಗೆ ಸರಕಾರಿ ನೌಕರಿ ವರ್ಗಾವರ್ಗಿ, ವ್ಯಾಜ್ಯ ನಿವಾರಣೆ ಇಂತದ್ದೆಲ್ಲ. ಅದನ್ನೆಲ್ಲ ನಾವು ಮಾಡ್ತೇವೆ. ಹಳದೀ ತಾಲಿಬಾನಿನ ಬೇಟೆ ನಾಯಿಗಳನ್ನು ಸಾಕಿಕೊಂಡಿಲ್ಲವೇ? ಅವು ಹೆಸರಿಗೆ ನಾಯಿಗಳಷ್ಟೆ, ಶರೀರದಲ್ಲಿ ಆನೆಗಳು. ಅವುಗಳನ್ನು ನೋಡಿಕೊಳ್ಳುವುದಕ್ಕೆ “ನಾಯಿ ಮಾವುತ”ರಿದ್ದಾರೆ. ನಾಯಿ ಮಾವುತರಿಗೆ ಹೆಚ್ಚಿನ ಸಂಬಳ, ಕಾರು ಇತ್ಯಾದಿಯೆಲ್ಲ ಕೊಟ್ಟಿದ್ದೇವೆ.

ನಾವು ಎಲ್ಲದಕ್ಕೂ ಸಿದ್ಧ; ಬೆಂಗಳೂರಿನ ಆಟೋ ಬೆನ್ನಮೇಲೆ ಬರೆದಿರ್ತದಲ್ಲ-’ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ’ ಅಂತ, ನಾವು ಹಾಗೇ. ನಮ್ಮಿಂದ ಏನಾದರೂ ಬೇಕಾದರೆ ಬನ್ನಿ, ನಾಲ್ಕು ಗೋಡೆ ಮಧ್ಯೆ ಕುಳಿತು ಮಾತಾಡೋಣ., ಅದು ಬಿಟ್ಟು ನಿಮಗೆ ಬೇಕಾದಲ್ಲೆಲ್ಲ ಮೀಟಿಂಗು ಪಾಟಿಂಗು ಅಂದ್ರೆ ಅಷ್ಟೆ, ನಮ್ಮ ಹಳದೀ ತಾಲಿಬಾನ್ ಕಳಿಸಿ ನಿಮ್ಮನ್ನೆಲ್ಲ ಉಡಾಯಿಸಿಬಿಡ್ತೇವೆ ನಾವು. ಯಾಕೆಂದ್ರೆ…ಯಾಕೆಂದ್ರೆ….ಯಾಕೆಂದ್ರೆ ನಮ್ಮದು ವೀರ್ಯಸನ್ಯಾಸ.

ಸಮಾಜದಲ್ಲಿ ಎಂಬತ್ತು ಪರ್ಸೆಂಟ್ ಜನರಿಗೆ ಈಗ ನಮ್ಮ ಅಸಲೀಯತ್ತು ಗೊತ್ತಾಗಿಬಿಟ್ಟಿದೆ. ಅವರೆಲ್ಲ ಗುಪ್ತ ಮತದಾನದ ಮೂಲಕ ನಾವು ಸೀಟಿನಲ್ಲಿ ಇರಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲು ಪ್ರಯತ್ನ ಮಾಡುತ್ತಿದ್ದಾರೆಂಬ ವದಂತಿ ಇದೆ. ರಕ್ತಬೀಜಾಸುರರು, ಎಲ್ಲೆಲ್ಲಿ ಹುಟ್ಟುತ್ತಾರೋ ಅವರಿಗೇ ಗೊತ್ತಾಗೋದಿಲ್ಲ.

ಈಗ ನಾವು ಕೊಡು-ತೆಕ್ಕೊಳ್ಳುವ ವ್ಯವಹಾರ ಮಾತಾಡೋಣ. ನಮ್ಮ ಪ್ರೀತ್ಯರ್ಥವಾಗಿ ನೀವು ಪಾದಪೂಜೆ, ಭಿಕ್ಷಾಸೇವೆ ಮಾಡೋದು ಮಾಡಿ; ಆದರೆ ಅದೆಲ್ಲದಕ್ಕಿಂತ ಹೆಚ್ಚಾಗಿ ನಮಗೆ ಹೊಸ ’ಪೀಸು’, ಹೊಸ ಬಾಟಲಿ, ಹೊಸ ಕಬಾಬ್ ಇಂತದ್ದನ್ನು ಗುಪ್ತವಾಗಿ ಸಪ್ಲೈ ಮಾಡಿದರೆ ಕಟ್ಟಕಡೆಯ ವರೆಗೂ ನಿಮಗೆ ನಮ್ಮ ಆಶೀರ್ವಾದವಿರುತ್ತದೆ. ನಮ್ಮ ’ತಪಸ್ಸಿ’ನ ಫಲ ಅಂದ್ರೆ ಅಷ್ಟಿಷ್ಟಲ್ಲ; ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಪವಾಡಗಳ ಬಗ್ಗೆ ಹಳದೀ ತಾಲೀಬಾನ್ ಭಕ್ತರು ಪುಂಖಾನುಪುಂಖವಾಗಿ ಬರೆದದ್ದನ್ನು ನೀವು ಓದಬಹುದು.

ನಮ್ಮ ಪವಾಡಗಳ ಮಹಿಮೆ ತಾಳಲಾರದೆ ಎಲ್ಲೆಡೆ ಹನುಮಾನ್ ಚಾಲೀಸ್ ಪಠಿಸುತ್ತಿದ್ದಾರೆ, ಇನ್ನೂ ಕೆಲವರು ಪುಸ್ತಕ ಪರಿಕರ ನಮ್ಮ ಬಳಗದಿಂದಲೇ ಪಡೆದುಕೊಂಡು ಆದಿತ್ಯ ಹೃದಯ ಪಾರಾಯಣ ಹೋಮ ಎಲ್ಲ ಮಾಡ್ತಿದ್ದಾರೆ. ಯಾಕೆಂದರೆ ಬರೆದವರಿಗೇ ನಮ್ಮ ಪವಾಡಗಳು ಅಷ್ಟೆಲ್ಲ ’ಮಹಿಮಾನ್ವಿತ’ ಎಂಬುದು ಗೊತ್ತಿದೆ; ನಾಳೆ ಚಾತುರ್ಮಾಸದೊಳಗೇ ಎತ್ತಾಕ್ಕೊಂಡೋದ್ರೆ ಕಷ್ಟ ಅಂತ, ನಿರ್ವಿಘ್ನವಾಗಿ ಚಾತುರ್ಮಾಸ ಸಾಗಲಿ ಅಂತ ಹಾಗೆ ಮಾಡ್ತಿದ್ದಾರಂತೆ. ಈ ಸಲ ಚಾತುರ್ಮಾಸ ಬರೀ ಬೇಜಾರು-ಬೋರು. ಚಿಕ್ಕವರನ್ನು ಕರೆದರೆ ಅವರ ಅಮ್ಮಂದಿರೂ ಬರುತ್ತಾರಲ್ಲ? ಆಗಲೇ ನಾವು ಕಣ್ತುಂಬಾ ಬೇಕಾದ್ದನ್ನು ಸವಿಯಬಹುದು ಎಂಬ ಲೆಕ್ಕಾಚಾರದಲ್ಲಿ ಹಾಗೆ ಮಾಡಿದ್ದೇವೆ.

ನಮ್ಮ ಕುಲಪತಿ ಬಾವಯ್ಯನ ತಲೆ ಅಂದರೆ ತಲೆ; ಅವನಿರೋದಕ್ಕಾಗಿ ಇವತ್ತಿಗೂ ನಾವು ಇಲ್ಲಿದ್ದೇವೆ. ನಮ್ಮ ಪೂರ್ವಾಶ್ರಮದ ಮೂಲ ಹೆಸರಿನಲ್ಲಿ ಇರುವ ಪಾಸ್ ಪೋರ್ಟ್ ನಾವಿನ್ನೂ ಗುಪ್ತವಾಗಿ ಇರಿಸಿಕೊಂಡಿದ್ದೇವೆ; ತೋರಿಕೆಗೆ ಒಂದನ್ನು ಕೊಟ್ಟಿದ್ದೇವೆ. ನಮ್ಮ ಬಾವಯ್ಯನದು ಅಂತಾ ಪ್ರಶ್ನೆ ಬರಲಿಲ್ಲ, ಅವನಲ್ಲೇ ಇದೆ. ಸಮಯ ಬಂದರೆ ಒಟ್ಟಿಗೇ ಹಾರಬಹುದು ಎಂದುಕೊಂಡಿದ್ದೇವೆ-ಚಂದ್ರಶೇಖರ ಇಟ್ಲಂಗೆ ಕಾಣದ ಹಾಗೆ.

ಪ್ರವಚನ ಬಾಳ ಉದ್ದ ಆಯ್ತಲ್ವೇ? ನಾಳೆ ನಾಡಿದ್ದು ಮುಂದುವರಿಸೋಣ. ಬಾವಯ್ಯಂಗೆ ನಿನ್ನೆ ಇಂದು ಎಗ್ ಆಮ್ಲೇಟ್ ಸಿಗಲಿಲ್ಲ. ಯಾರಾದರೂ ನಮ್ಮಲ್ಲಿಗೆ ಬರುವವರು ಸಾಧ್ಯವಾದರೆ ತಂದುಕೊಟ್ಟು ಸೇವೆ ಮಾಡಿ, ಮಂತ್ರಾಕ್ಷತೆ ತೆಗೆದುಕೊಂಡು ಹೋಗಬಹುದು. [ಮಂತ್ರಾಕ್ಷತೆಗೇನು ಕೊರತೆಯಿಲ್ಲ, ಕ್ವಿಂಟಾಲ್ ಲೆಕ್ಕದಲ್ಲಿ ಅಕ್ಕಿ-ಅರಿಷಿಣ ಪುಡಿ ಹಾಕೋದು ಕಲ್ಸೋದೇ. ನಮ್ಮ ನಮೇಸ ಅದನ್ನೆಲ್ಲ ಮಾಡ್ತಾ ಇರ್ತಾನೆ]”

Thumari Ramachandra

source: https://www.facebook.com/groups/1499395003680065/permalink/1635431756743055/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s