ಕತೆಯ ಕವಿ ಆದಿಕವಿಯ ಕಾವ್ಯದ ಬದಲಿಗೆ ಕುಮಾರವ್ಯಾಸ ಭಾರತ ಎತ್ತಿಕೊಳ್ಳೋಣವೆಂದ

ಕತೆಯ ಕವಿ ಆದಿಕವಿಯ ಕಾವ್ಯದ ಬದಲಿಗೆ ಕುಮಾರವ್ಯಾಸ ಭಾರತ ಎತ್ತಿಕೊಳ್ಳೋಣವೆಂದ

“ನಮ್ಮ ಕತೆಯ ಮಹಾಕವಿಯನ್ನು ನೀವು ನೋಡಿದ್ದೀರಿ. ಆದಿಮಾನವನನ್ನು ಹೋಲುವ ನಮ್ಮ ಕವಿಗೆ ನಮ್ಮೊಡನೆ ಬಿಡಿಸಿಕೊಳ್ಳಲಾರದ ಬಾಂಧವ್ಯ. ಅವರ ಕಾವ್ಯಾತ್ಮಕತೆ ಜನರಿಗೆ ತಲುಪಲಿಕ್ಕೊಂದು ಜಾಗ ಬೇಡವೇ? ಅದಕ್ಕೇ ಅವರು ನಮ್ಮನ್ನು ಆತುಕೊಂಡದ್ದು. ಆಮೇಲೆ ಮನೆ ಕಟ್ಟಿದ್ದು ಇತ್ಯಾದಿಯೆಲ್ಲ ಬಿಡಿ, ಋಣಾನುಬಂಧ.

ನಾವು ಸಿಕ್ಕಾಕಿಕೊಳ್ಳುವುದರಲ್ಲಿದ್ದಾಗ ಮಾಡಿದ ಪ್ಲಾನಿಂಗ್ ಮತ್ತು ಸರ್ಜರಿ ಯಲ್ಲಿ ಅವರಿಲ್ಲದಿದ್ದರೆ ನಮಗೆ ಕಷ್ಟವಾಗುತ್ತಿತ್ತು. ಅವರಿಗೆ ನಾವು; ನಮಗೂ ಅವರು ಬೇಕು. ನಮ್ಮಲ್ಲಿ ಇರುವವರೆಲ್ಲರ ಸಂಬಂಧಗಳೂ ಹೀಗೆಯೇ. ಅವರ ಸಾಹಿತ್ಯಕ್ಕೆ ಬೇರೆ ಕಡೆಗೆ ಬೆಲೆಯಿಲ್ಲ, ನಮಗೆ, ನಮ್ಮ ಊಳಿಗದ ಆಳಿನಂತೆ ನಾವು ಹೇಳಿದ್ದನ್ನೆಲ್ಲ ಶಿರಸಾವಹಿಸಿ, ಕಾಗಕ್ಕ ಗುಬ್ಬಕ್ಕನ ಕತೆ ಬರೆದುಕೊಡುವ ಅಂತಹ ಕವಿ ಯಾರೂ ಸಿಗಲಿಲ್ಲ. ಮೇಲಾಗಿ ನಮ್ಮ ಊರಮನೆಯವರೇ ಆದ್ದರಿಂದ ಅದೊಂದು ಸಾಫ್ಟ್ ಕಾರ್ನರ್ ಕೂಡ ನಮಗಿದೆ.

“ಗುರುಗಳೇ, ಆದಿಕವಿಯ ಕತೆಯನ್ನು ಕೇಳಲು ಜನರಿಗೆ ಈಗ ವ್ಯವಧಾನವಿಲ್ಲ. ಕತೆಗೆ ಪೂರಕವಾಗಿ ಹಾಡಬೇಕಾದ ಗೀತೆಗಳನ್ನು ಇಂಪಾಗಿ ಹಾಡುವ ಮಧುರ ಕಂಠದ ಹೆಣ್ಣುಮಕ್ಕಳು ಅಥವಾ ಹೆಂಗಸರು ಯಾರೂ ಒಪ್ಪುತ್ತಿಲ್ಲ. ಹೀಗಾಗಿ ಇನ್ನುಮುಂದೆ ಕುಮಾರವ್ಯಾಸನ ಕರ್ಣಾಟ ಭಾರತವನ್ನು ಹೇಳಲು ಆರಂಭಿದರೆ ಒಳಿತು ಎಂಬುದು ನನ್ನ ಸಲಹೆ” ಎನ್ನುತ್ತಿದ್ದಾರೆ ನಮ್ಮ ಕವಿ.

“ಗುರುಗಳೇ, ಇಲ್ಲಿ ಕೇಳಿ….

ತಿಣಿಕಿದನು ಫಣಿರಾಯ ರಾಮ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿವರ

ಇಷ್ಟನ್ನು ಹೇಳುತ್ತಿದ್ದರೆ ಸಭೆಯಲ್ಲಿ ಚಪ್ಪಾಳೆ ಬೀಳುತ್ತದೆ. ಒಬ್ಬ ಗಮಕಿಯನ್ನು ಹಾಕಿಬಿಟ್ಟರೆ ಆಯಿತು. ಗಮಕಿಗೆ ಅಂತಹ ಶಾರೀರವೇನೂ ಬೇಕಿಲ್ಲ. ಲಯದಲ್ಲಿ ಹಾಡಿಕೊಂಡು ಹೋಗ್ತಾರೆ. ಅದಕ್ಕೆ ಪಕ್ಕವಾದ್ಯಗಳವರ ಅಗತ್ಯವೂ ಬೇಕಾಗೋದಿಲ್ಲ. ಶೃತಿ ಇದ್ದರೆ ಸಾಕು. ಈಗ ದುಡ್ಡಿಲ್ಲದ ಕಾಲದಲ್ಲಿ ಚಾತುರ್ಮಾಸದಲ್ಲಿ ಕತೆ ಮಾಡಬೇಕು ಅಂದರೆ ಹೀಗೆ ಮಾಡೋದೇ ಉತ್ತಮ ಅಂತ ಕಾಣ್ತದೆ.

ಮತ್ತೆ, ಗುರುಗಳೇ, ಇದು ಅಂತಿಂಥ ಕಾವ್ಯವಲ್ಲ ಅಂತ ಕುಮಾರವ್ಯಾಸನೇ ಹೇಳಿದ್ದಾನೆ.

ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ

ವೀರ್ಯಸನ್ಯಾಸಿಗಳಾದ ತಾವು ಇದನ್ನು ಸವಿಸ್ತಾರವಾಗಿ ಹೇಳುತ್ತಿದ್ದರೆ ಬಿಸಿಬಿಸಿ ಹೋಳಿಗೆಗೆ ತಾಜಾ ತುಪ್ಪ ಹಾಕಿಕೊಂಡು ತಿಂದ ಹಾಗಾಗುತ್ತದೆ” ಎಂದು ಹೇಳಿದ್ದಾರೆ.

ನಮಗೂ ಸ್ವಲ್ಪ ಹಾಗೇ ಅನ್ನಿಸಿತು. ನೋಡಿ, ನಮ್ಮಲ್ಲಿ ಕೈಲಿ ಸಾಕಷ್ಟಿದ್ದಾಗ ಭಟ್ಟ, ಭಂಡಾರಿ, ಭಜಂತ್ರಿ, ಬಾಣಸಿಗ, ಕರಗಿ, ಚರಗಿ, ವಿವಾದದ ನಾಮಣ್ಣ, ಮರುಳು ಕಲಾವಿದ ಎಲ್ಲರೂ ಬರ್ತಾರೆ, ಆರ್ಥಿಕವಾಗಿ ನಾವು ಸೋತಿದ್ದೇವೆ ಎಂಬ ಸುದ್ದಿ ಸಿಕ್ಕರೆ ಯಾರೂ ಬರೋದಿಲ್ಲ. ಈಗೀಗ ಸಂಸಾರಿಗಿರುವ ತಾಪತ್ರಯಕ್ಕಿಂತ ಸನ್ಯಾಸಿ ವೇಷದ ನಮ್ಮ ತಾಪತ್ರಯ ಬಹಳ ಹೆಚ್ಚಿದೆ.

ಆದರೂ ಇರೋದ್ರೊಳಗೆ ನಾವೇನೂ ಕುಗ್ಗಿಲ್ಲ ಅಂತ ತೋರಿಸ್ತಾನೇ ಇರ್ಬೇಕಲ್ಲ? ಹೀಗಾಗಿ ಸ್ವಲ್ಪ ಬದಲಾವಣೆ ಮಾಡಿ ಈ ರೀತಿ ಕತೆ ಯಾಕೆ ಮಾಡ್ಬಾರ್ದು ಎಂದು ಯೋಚಿಸುತ್ತಿದ್ದೇವೆ.

ಹಾಂ…ಇನ್ನೊಂದು ವಿಷಯ ಹೇಳೋದಕ್ಕೆ ಮರ್ತಿದ್ದೆವು ನಾವು…ಲಿಂಬೆಹುಳಿ ಸುದ್ದಿ. ಲಿಂಬೆಹುಳಿಗೂ ನಮ್ಮ ಇಮ್ಮಡಿ ವಿಶ್ವೇಶ್ವರಯ್ಯನವರಿಗೂ ಗಳಸ್ಯ ಕಂಠಸ್ಯ. ಲಿಂಬೆಹುಳಿಗೆ ಗಂಡಸರಾದರೂ ಹೆಂಗಸರಾದರೂ ಎಲ್ಲಾ ಒಂದೇ ಅಂತೆ; ಹುಳಿಗೆ ಭೇದಭಾವ ಗೊತ್ತಾಗುತ್ತದೆಯೇ? ಅದಕ್ಕೆ. ಹೀಗಾಗಿ ಈ ಸಲದ ಕತೆ ಕೇಳಲು ಬಂದವರಿಗೆ(?) ಕೋಸಂಬ್ರಿ ಉಸಳಿ ಬದಲಿಗೆ ಲಿಂಬೆಹುಳಿ ಪಾನಕದ ಸೇವೆ ನೀಡೋಣ ಅಂತ. ಹೇಗೂ ನಮ್ಮಲ್ಲಿ ಆಗಾಗ ’ಪಾನಕ’ದ ಸೇವೆ ನಡೀತಾನೇ ಇರ್ತದೆ. ಅದೇ ರೀತಿ ಕತೆಯ ನಂತರವೂ ಅದನ್ನೇ ವಿತರಿಸಿದರೆ ಆಯ್ತು ಅಂತ.

ಇನ್ನೊಂದು ಗುಟ್ಟು ಹೇಳ್ತೇವೆ ಕೇಳಿ- ಈಗೀಗ ಕತೆಗೆ ಸೇವೆ ಅಂತೆಲ್ಲ ಯಾರೂ ಹಣ ನೀಡ್ತಾ ಇಲ್ಲ. ’ಪ್ರಸಾದದ ಸೇವೆ’ ಅಂತ ಕೋಸಂಬ್ರಿ, ಉಸಳಿ ಇತ್ಯಾದಿಗಳನ್ನು ತಯಾರಿಸುವ ಖರ್ಚಿಗೆ ಯಾರೂ ತಯಾರಾಗ್ತಾ ಇಲ್ಲ. ಹೀಗಾಗಿ ನಮ್ಮ ಇಮ್ಮಡಿಗೆ ಹೇಳಿ ಲಿಂಬೆಹುಳಿ ಸೇವೆ ಮಾಡ್ಸಿ ಎಂದು ಕೇಳಿದ್ದೇವೆ. ಲಿಂಬೆಹುಳಿ ಸೇವೆ ಈಗಾಗಲೇ ಆರಂಭವಾಗಿದೆ ಅನ್ನೋದು ನಮಗೆ ಇರುವುದರಲ್ಲೇ ಖುಶಿ.

ಜಗದ್ಗುರು ಶೋಭರಾಜಾಚಾರ್ಯ ಹಾವಾಡಿಗ ಮಹಾಸಂಸ್ಥಾನಕ್ಕೆ ಇಳಿದ ಯಾವ ಯತಿಗಳೂ ಬೆಂಬಲ ನೀಡುತ್ತಿಲ್ಲವೆಂದು ಎಷ್ಟೇ ಬೊಬ್ಬೆ ಹೊಡೆದರೂ ಒಬ್ಬನೇ ಒಬ್ಬ ಕಾವಿಧಾರಿಯೂ ಮುಂದೆ ಬಾರದಿರುವುದನ್ನು ನೋಡಿ ಅವರಮೇಲೆಲ್ಲ ಅಸಾಧ್ಯ ಕೋಪ ಬಂದಿದೆ ನಮಗೆ. ಸಮಯ ಬರುತ್ತದೆ, ಆವರಿಗೆಲ್ಲ ತಕ್ಕ ಶಾಸ್ತಿ ಮಾಡೇ ಮಾಡ್ತೇವೆ ನಾವು.

ಹಳ್ಳಿಕಡೆಗೆ ಪಾದಪೂಜೆ ಭಿಕ್ಷ ಅಂತೆಲ್ಲ ಬಿಕ್ಕೆ ತಿರುಗುವುದನ್ನಿ ನಿಲ್ಲಿಸಿ ಈಗ ರಾಜಧಾನಿಯಲ್ಲೇ ಇದ್ದೇವೆ. ಮುಂದಿನ ವ್ಯವಹಾರಗಳನ್ನು ನೋಡಿಕೊಳ್ಳಬೇಕಲ್ಲ. ನಮ್ಮ ದುರದೃಷ್ಟಕ್ಕೆ ಈ ಸಲ ಚಾತುರ್ಮಾಸವೂ ತಡವಾಗಿ ಆರಂಭವಾಗ್ತಾ ಇದೆ; ಅದಿಲ್ಲದಿದ್ದರೆ ನಾವು ಇನ್ನೇನು ಚಾತುರ್ಮಾಸಕ್ಕೆ ಕೂತುಬಿಡುತ್ತಿದ್ದೆವು. ಚಾತುರ್ಮಾಸಕ್ಕೆ ಕೂತಾಗ ಯಾರೂ ಏನೂ ಮಾಡುವ ಹಾಗಿಲ್ಲ; ಅದು ನಮ್ಮಲ್ಲಿನ ಯತಿ ನಿಯಮ ಅಂತ ಹೇಳಿದ್ದೇವೆ ನಾವು.

ಚಾತುರ್ಮಾಸದ ಬೋರ್ಡು ನೇತು ಹಾಕಿದ ಮೇಲೆ ಒಳಗಿಂದ ನಾವೇನೇ ಬೇಕಾದ್ರೂ ಮಾಡಬಹುದು. ಏಕಾಂತವಾದರೂ ಸರಿ, ದೋಖಾ ಕೊಡೋದಾದರೂ ಸರಿ. ಚಾತುರ್ಮಾಸದಲ್ಲಿ ಬೇಡವಾದವರು ಬಂದರೆ ಅಡ್ಡಡ್ಡ ಮಲಗೋದಕ್ಕೆ ಯಾರನ್ನು ಕರಸೋದು ಅಂತ ಯೋಚಿಸ್ತಿದ್ದೇವೆ. ಕುರಿವಾಡೆಯಲ್ಲಿ ಅದಕ್ಕೆ ವ್ಯವಸ್ಥೆ ಇತ್ತಿ. ಆದರೆ ಅದೊಂದನ್ನು ನೋಡ್ತಾ ಇದ್ರೆ ಬಾಕಿ ಸೂಟ್ ಕೇಸ್ ತಳ್ಳೋ ವ್ಯವಹಾರ ಎಲ್ಲ ನೋಡ್ಕೋಬೇಕಲ್ಲ?”

Thumari Ramachandra

source: https://www.facebook.com/groups/1499395003680065/permalink/1633173523635545/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s