ಗೋವಿನಹಳ್ಳಿ ದೊಣ್ಣೆನಾಯಕನ ಕಥೆ

ಗೋವಿನಹಳ್ಳಿ ದೊಣ್ಣೆನಾಯಕನ ಕಥೆ

[ಕಳ್ಳ ಸನ್ಯಾಸಿಗಳಿಗೆ ಗಂಟಲು ನೋವು ಎಂಬುದೊಂದು ನೆಪವಾಗಬಹುದು; ಅಲ್ಲಿ ನೋಯುವುದು ಗಂಟಲಲ್ಲ ಮತ್ತೊಂದು. ಆದರೆ ನಮ್ಮ ಭಾಗವತರ ವಿಷಯದಲ್ಲಿ ಹಾಗಿಲ್ಲ. ಅವರು ಅತ್ಯಂತ ಪ್ರಾಮಾಣಿಕ, ಸರಳ ಸಜ್ಜನ. ಭಾಗವತರ ಗಂಟಲು ಎಂಬುದು ಕಳಪೆ ಕಾಮಗಾರಿಯ ರಸ್ತೆಯಂತಾಗಿ, ಬಹಳ ರಿಪೇರಿ ಅಗತ್ಯ ಇರುವುದರಿಂದ ಇಂದಿನವರೆಗೂ ಅವರ ಮರು ಪ್ರವೇಶವೋ ಪುರಪ್ರವೇಶವೋ ಆಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಕತೆಯನ್ನು ಮುಂದುವರಿಸಬೇಕಾದ ಅನಿವಾರ್ಯತೆಯಲ್ಲಿ ಹೀಗೆ ಮುಂದಡಿ ಇಡುತ್ತಿದ್ದೇವೆ. ಕಲಾಭಿಮಾನಿಗಳು ಸಹಕರಿಸಬೇಕಾಗಿ ಕೋರುತ್ತೇವೆ.]

“ಎಲವೆಲವೆಲವೋ ಹೋಯ್….ನಾವು ಯಾರೆಂದು ತಿಳಿದಿದ್ದೀರಿ? ಗೋವಿನಹಳ್ಳಿ ದೊಣ್ಣೆನಾಯಕರು ಎಂದರೆ ನಾವೇ. ಹಾವಿನಹಳ್ಳಿ ದೊಣ್ಣೆನಾಯಕನ ಸಹೋದ್ಯೋಗಿಗಳು ನಾವು. ಮಹಾವಿಷ್ಣುವಿನ ದ್ವಾರಪಾಲಕ ಜಯವಿಜಯರಲ್ಲಿ ಜಯ ಎಂಬಾತನ ಅಪರಾವತಾರವಾಗಿ ಈ ನಮ್ಮ ಹಳದೀ ತಾಲಿಬಾನ್ ಪ್ರತಿನಿಧಿ ಕೋಟೆಯ ಮಹಾದ್ವಾರದ ಒಂದು ಪಕ್ಕಕ್ಕೆ ನಿಂತು, ತಾನೇ ಸಾಕ್ಷಾತ್ ಮಹಾವಿಷ್ಣುವಿನ ಅವತಾರಸ್ವರೂಪವೆಂದ ನಮ್ಮ ಮಹಾಸ್ವಾಮಿಗಳನ್ನು ಕಾಯುತ್ತಿದ್ದೇವೆ.

ನಮಗೆ ಸ್ಥ್ರೀಯರೆಂದರೆ ಅಪಾರ ’ಗೌರವ’ವಾದ್ದರಿಂದ ಮತ್ತು ನಾವು ಸ್ತ್ರೀಯರನ್ನು ಅತಿ ’ಪ್ರೀತಿ’ಯಿಂದ ಮೈದಡವುದರಿಂದ ಜನರೆಲ್ಲ ನಮ್ಮನ್ನು ಸ್ತ್ರೀಧರ ನಾಮದಿಂದ ಗುಣಗಾನ ಮಾಡುತ್ತಾರೆ. ಇಂತಿಪ್ಪ ಈ ಗಳಿಗೆಯಲ್ಲಿ ಯಾರೋ ಬರುತ್ತಿರುವ ಹಾಗಿದೆಯಲ್ಲಾ…..?

ಓ, ಇವನೋ? ಇವ ಮೊದಲಿಂದ ನಮಗೆ ಗೊತ್ತು. ಓ ಆವತ್ತು ಇವ ನಮ್ಮಲ್ಲಿಗೆ ಬಂದಿದ್ದ. ಅವನ ನಮ್ಮ ನಡುವೆ ನಡೆದ ಸನ್ನಿವೇಶ-ಸಂಭಾಷಣೆಗಳನ್ನು ಕಥಾರೂಪವಾಗಿ ಇನ್ನೊಮ್ಮೆ ನೆನಪುಮಾಡಿಕೊಳ್ಳುತ್ತೇನೆ.

ಹಂಸಕ್ಷೀರ ನ್ಯಾಯ, ಬೀಜವೃಕ್ಷ ನ್ಯಾಯ ಮೊದಲಾದ ನ್ಯಾಯಗಳ ಬಗ್ಗೆ ಅಗಾಗ ಕೇಳುತ್ತಿರುತ್ತೇವಲ್ಲ?. ಹಾಲಿಗೆ ನೀರನ್ನು ಬೆರೆಸಿ ಹಂಸ ಪಕ್ಷಿಯ ಮುಂದೆ ಇಟ್ಟರೆ, ಹಾಲನ್ನು ಮಾತ್ರ ಕುಡಿದು ನೀರನ್ನು ಹಾಗೇ ಬಿಡುತ್ತದಂತೆ. ಯಾವುದೇ ವಿಚಾರದಲ್ಲೂ, ಒಳ್ಳೆಯದನ್ನು ಮಾತ್ರ ಸ್ವೀಕರಿಸಿ, ಕೆಟ್ಟದ್ದನ್ನು ತಿರಸ್ಕರಿಸಿ ಎಂದು ಹೇಳುವಾಗ ಆ ನ್ಯಾಯವನ್ನು ಬಳಸುವುದು ಲೋಕಾರೂಢಿ.

ಬೀಜ ಮೊದಲೋ? ವೃಕ್ಷ ಮೊದಲೋ? ಇನ್ನೂ ನಿರ್ಧಾರವಾಗಿಲ್ಲ! ನಮ್ಮ ಸಂಸ್ಥಾನದ ಬೀಜ ಎಲ್ಲೆಲ್ಲೂ ಬಿದ್ದಿದ್ದರಿಂದ ನಾವು ಬೀಜವೇ ಮೊದಲಿರಬಹುದೋ ಎಂದು ಯೋಚಿಸಿದರೆ, ಅವರು ಹುಟ್ಟುವುದಕ್ಕೊಂದು ಅಂತದ್ದೇ ಬೀಜ ಬಿದ್ದಿರಬೇಕಲ್ಲವೇ? ಆ ಬೀಜ ಬೀಳುವುದಕ್ಕೆ ಕಾರಣೀಕರ್ತರಾದವರು ಹುಟ್ಟುವುದಕ್ಕೂ ಯಾವುದೋ ಬೀಜ ಬಿದ್ದಿರಲೇಬೇಕು. ಈಗಾಗಲೇ ನಮಗೆ ನ್ಯಾಯ ಎಂದರೇ ಹೆದರಿ ಹಾರಿಬೀಳುವಷ್ಟು ಸುಸ್ತಾಗಿದೆ. ಹೀಗಾಗಿ ನಾವು ಆ ನ್ಯಾಯದ ಗೋಜಿಗೆ ಸದ್ಯಕ್ಕೆ ಹೋಗುವುದೇ ಬೇಡ.

ಆದರೂ, ಅಂದು ಇವ ಬಂದಾಗ ನಮ್ಮಲ್ಲಿ ನಡೆದ ಮಾತುಕತೆಯಲ್ಲಿ ’ವಿಷಕ್ರಿಮಿ ನ್ಯಾಯ’ ಎಂಬ ಸ್ವಾರಸ್ಯಕರ ನ್ಯಾಯ ಪ್ರಸ್ತಾಪವಾಗಿತ್ತು. ಅದರ ಬಗ್ಗೆ ನಾವೀಗ ನೆನಪುಮಾಡಿಕೊಳುತ್ತಿದ್ದೇವೆ.

ಅನಂತರಾಮಯ್ಯನೆಂಬ ಒಬ್ಬ ಸಾತ್ವಿಕ ದೇಶ ಸಂಚಾರಕ್ಕೆ ಹೊರಟಿರುತ್ತಾನೆ . ನಿತ್ಯವೂ ಕಾಲ್ನಡಿಗೆಯಲ್ಲೇ ಹಲವು ಮೈಲುಗಳಷ್ಟು ಸಾಗುತ್ತ ದಾರಿಯುದ್ದಕ್ಕೂ ಸಿಗುವ ಊರೂರುಗಳ ಜನಜೀವನದ ಬಗ್ಗೆ ತಿಳಿದುಕೊಳುತ್ತ ಮುಂದೆ ಸಾಗುತ್ತಾನೆ. ಅಂದರೆ ’ಪರಿವ್ರಾಜಕ’ರಾದ ನಮ್ಮ ಮಹಾಸ್ವಾಮಿಗಳು ತಮ್ಮ ಶಿಷ್ಯೋತ್ತಮರಿಂದ ಹೊಸ ಹೊಸ ಕಾರುಗಳನ್ನು ತರಿಸಿ ವರ್ಷಗಟ್ಟಲೆ ಬಿಟ್ಟಿಯಲ್ಲಿ ಬಳಸಿಕೊಳ್ಳುತ್ತಿದ್ದರಲ್ಲ? ಇವ ಹಾಗೆ ಮಾಡಲಿಲ್ಲ ಎಂದರ್ಥ.

ಅದಿರಲಿ, ಹಲವು ಗ್ರಾಮಗಳನ್ನು ದಾಟಿ ಮುಂದುವರಿಯುವ ವೇಳೆ ಈ ಮನುಷ್ಯ ನಮ್ಮಲ್ಲಿಗೆ ಬಂದಿದ್ದ. ಆಗಲೇ ಕತ್ತಲೆಯಾಗತೊಡಗಿತ್ತು. ನಮ್ಮ ಗ್ರಾಮದಲ್ಲಿ ಉಳಕೊಳ್ಳಲು ಏನಾದರೂ ವ್ಯವಸ್ಥೆ ಆಗಬೇಕಲ್ಲ ಎಂದು ಯೋಚಿಸಿ ಎದುರಿಗೆ ಸಿಕ್ಕ ನಮ್ಮಲ್ಲಿ ವಿಚಾರಿಸಿದ. [ನಾವಾಅಗ ಆಫ್ ಡ್ಯೂಟಿಯಲ್ಲಿ ತಂಬಿಗೆಗೆ ನಮ್ಮ ಸ್ವಾಮಿಗಳ ಭಾಷೆಯಲ್ಲಿ ಕಮಂಡಲಿಗೆ ಹೋಗಿ ಬರುತ್ತಿದ್ದೆವು ಎಂದಿಟ್ಟುಕೊಳ್ಳಿ] ಆಗ ಮುಖಾಮುಖಿಯಾದ ನಮ್ಮ ನಡುವೆ ಈ ರೀತಿ ಸಂಭಾಷಣೆ ಜರುಗಿತು-

ಅ.ರಾ. : ” ಅಯ್ಯಾ ಈ ಊರಿನಲ್ಲಿ ದೊಡ್ಡವರು ಯಾರಿದ್ದಾರೆ?”

ಗೋ.ದೊ.ನಾ. : “ತಾಳೆ ಮರಕ್ಕಿಂತ ದೊಡ್ಡವರು ಯಾರೂ ಇಲ್ಲ”

ಅ.ರಾ. : “ಹೋಗಲಿ, ಯಾರು ದಾನಿಗಳಿದ್ದಾರೆ?”

ಗೋ.ದೊ.ನಾ.: “ಬಾಯಿ ಮಾತಿನಲ್ಲಿ ಇರುವವರೆಲ್ಲರೂ ದಾನಿಗಳೇ ”

ಅ.ರಾ.: “ಹೋಗಲಿ ಬಿಡು, ದಕ್ಷರು ಯಾರಿದ್ದಾರೆ?”

ಗೋ.ದೊ.ನಾ.: “ಇನ್ನೊಬ್ಬರ ಸಂಪತ್ತನ್ನು ಅಪಹರಿಸುವುದರಲ್ಲಿ ಎಲ್ಲರೂ ದಕ್ಷರೆ ”

ನಮ್ಮ ಉತ್ತರದಿಂದ ತಲೆಕೆರೆದುಕೊಳ್ಳುವಂತಾಗಿ ಅನಂತರಾಮಯ್ಯ ಕೇಳಿದ, ” ಅಯ್ಯಾ ಇಂತಲ್ಲಿ ನೀವು ಹೇಗಪ್ಪಾ ಬದುಕುತ್ತೀರಿ?”

ಗೋ.ದೊ.ನಾ. : “ವಿಷಕ್ರಿಮಿ ನ್ಯಾಯದಂತೆ ಬದುಕುತ್ತೇವೆ”

ಅ.ರಾ.: “ನಾನು ಹಲವು ನ್ಯಾಯಗಳನ್ನು ಕೇಳಿದ್ದೇನೆ, ಆದರೆ ಇದು ನನಗೆ ವಿಚಿತ್ರವಾಗಿದೆ! ಅದೇನಪ್ಪಾ ವಿಷಕ್ರಿಮಿ ನ್ಯಾಯ ಅಂದರೆ?”

ಗೋ.ದೊ.ನಾ. :”ನರಮನುಷ್ಯನೇ, ಉಪ್ಪಿನಕಾಯಿ ಕಣ್ಣಿಗೆ ಬಿದ್ದರೆ ಏನಾಗುತ್ತದೆ ಹೇಳು?”

ಅ.ರಾ.: ” ಕಣ್ಣು ಉರಿಯುತ್ತದಪ್ಪಾ, ವಿಪರೀತ ಉರಿಯುತ್ತದೆ”

ಗೋ.ದೊ.ನಾ. : “ಆದರೆ ಉಪ್ಪಿನಕಾಯಿಯಲ್ಲಿಯೇ ಹುಟ್ಟಿದ ಹುಳಕ್ಕೆ ಕಣ್ಣು ಉರಿಯುವುದುಂಟೇ?”

ಅ.ರಾ.: “ಇಲ್ಲಪ್ಪ, ಉಪ್ಪಿನಕಾಯಲ್ಲಿ ಹುಟ್ಟಿದ ಹುಳಕ್ಕೆ ಅದೇ ಮಹಾಸಮುದ್ರ, ಸುಖದ ಸಾಗರ. ಆದರೆ ಹುಳಹುಟ್ಟಿದ ಉಪ್ಪಿನಕಾಯನ್ನು ಜನ ಮಾತ್ರ ತಿನ್ನೋದಿಲ್ಲ!”

ಗೋ.ದೊ.ನಾ.: ” ವಿಷಯ ಉಪ್ಪಿನಕಾಯನ್ನು ಜನ ತಿನ್ನೋದಲ್ಲ, ಉಪ್ಪಿನಕಾಯಲ್ಲಿ ಹುಟ್ಟಿಬೆಳೆದ ಹುಳಕ್ಕೆ ಅಲ್ಲೇ ಆಶ್ರಯಯವೂ ಆಹಾರವೂ ಸಿಗುವುದಿಲ್ಲವೇ? ಚರಂಡಿಗಳಲ್ಲಿ ಹುಟ್ಟಿಬೆಳೆಯುವ ಹುಳಕ್ಕೂ ಅಲ್ಲೇ ಆಹಾರ ಮತ್ತು ಆಶ್ರಯ ಒದಗುವುದು ಸರಿಯಷ್ಟೇ? ಹಾಗೆಯೇ, ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ನಮಗೆ ಇದು ಅಭ್ಯಾಸವಾಗಿ ಹೋಗಿದೆ . ನಿನಗೆ ಮಾತ್ರ ಇದು ಹೊಸತು ಅಷ್ಟೆ!”

ನಮ್ಮ-ಅವನ ಸಂಭಾಷಣೆ ಅಲ್ಲಿಗೆ ಮುಗಿದಿತ್ತು. ಅಂದಹಾಗೆ, ನಮ್ಮ ವೀರ್ಯಸನ್ಯಾಸದ ಮಹಾಸ್ವಾಮಿಗಳು ಸತತ ಏಕಾಂತ ನಡೆಸಿ, ಕಂಡಲ್ಲೆಲ್ಲ ವೀರ್ಯತೂರಿ ಪಾವನಗೊಳಿಸಿದ ಈ ಕ್ಷೇತ್ರವೇ ನಮಗೆ ದಿವ್ಯಕ್ಷೇತ್ರವಾಗಿದೆ. ಜಗದ್ಗುರು ಶೋಭರಾಜಾಚಾರ್ಯ ಹಾವಾಡಿಗ ಮಹಾಸಂಸ್ಥಾನಾಧೀಶ್ವರರ ವೀರ್ಯದ ದಿವ್ಯ ಪರಿಮಳವನ್ನು ನಿತ್ಯವೂ ಆಘ್ರಾಣಿಸುತ್ತ ನಾವು ಧನ್ಯರಾಗಿದ್ದೇವೆ.

[ಭಾಗವತರು ಬರದ ಕಾರಣ ಚಂಡೆ-ಮದ್ದಳೆಗಳವರೂ ರಜಾ ಹಾಕಿದ್ದಾರೆ. ಹೀಗಾಗಿ ವೇಷಧಾರಿ ಯಾವುದೇ ಸದ್ದಿಲ್ಲದೇ ಹಾಗೇ ಎದ್ದು ಚೌಕಿಗೆ ಹೋಗಿದ್ದಾನೆ ಎಂಬಲ್ಲಿಗೆ ಈ ಕಥಾನಕ ಇಲ್ಲಿಗೆ ಒಮ್ಮೆ ನಿಲ್ಲುತ್ತದೆ. ಸಮಯ ಬಂದರೆ ಮತ್ತೆ ಭಾಗವತರು, ಚಂಡೆ-ಮದ್ದಳೆಗಳಿಂದ ಸರ್ವಾಲಂಕೃತ ಯಕ್ಷಗಾನ ಮುಂದುವರಿಯುತ್ತದೆ. ಪ್ರೇಕ್ಷಕ ಮಹನೀಯರನ್ನು ನಿರಾಸೆಗೊಳಿಸಬಾರದೆಂಬ ಕಾರಣಕ್ಕಾಗಿ, ತುರ್ತಾಗಿ ಮತ್ತು ತ್ವರಿತವಾಗಿ ಈ ಆಖ್ಯಾನವನ್ನು ಆಡಿತೋರಿಸಿದ್ದೇವೆ.]

Thumari Ramachandra

source: https://www.facebook.com/groups/1499395003680065/permalink/1633483490271215/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s