ಕದ್ದು ನೋಡುವ ಹಳದೀ ತಾಲಿಬಾನ್ ಬಳಗದ ಮಾಹಿತಿಗಾಗಿ-

ಕದ್ದು ನೋಡುವ ಹಳದೀ ತಾಲಿಬಾನ್ ಬಳಗದ ಮಾಹಿತಿಗಾಗಿ-

’ಹಮರಿ ಹಕೀಮ್ ಚಂದ್’ ಎಂಬ ಬಿರುದನ್ನು ದಯಪಾಲಿಸಿ, ಅದರಿಂದಲೇ ತೃಪ್ತಿ ಪಟ್ಟುಕೊಂಡ ನಿಮಗೆಲ್ಲ ಬಹಳ ಕೃತಜ್ಞ. ಯಾವುದನ್ನು ಎಲ್ಲರೂ ಹೇಳಲಾಗದೋ, ಯಾವುದನ್ನು ಎಲ್ಲರಿಗೂ ಹೇಳುವುದು ಕಷ್ಟವಾಗುವುದೋ ಅದನ್ನು ಹೇಳಲು, ಆತ್ಮವಂಚನೆಯಿಲ್ಲದ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ.

ಸುರರು ಅಂದರೆ ದೇವತೆಗಳು ಮತ್ತು ಅಸುರರು ಅಂದರೆ ರಕ್ಕಸರು ಹಿಂದೆ ಒಂದೇ ಕುಟುಂಬದವರಂತೆ. ಅಸುರರನ್ನು “ಪೂರ್ವದೇವತಾ” ಎಂದೂ ಕರೆಯುವರಂತೆ. ದೈವ ಸೃಷ್ಟಿಯಲ್ಲಿ ಸೃಷ್ಟಿಕರ್ತನ ಇಚ್ಛೆಯಂತೆ ಪಾಶವೀ ಅಥವಾ ಅದಕ್ಕಿಂತ ಹೀನ ಕೃತ್ಯಕ್ಕಿಳಿದು ಅವರು ಅಸುರರಾದರು. ಪೂರ್ವದಲ್ಲಿ ದೇವತೆಗಳಾಗಿದ್ದುದರಿಂದ ಅವರಲ್ಲಿಯೂ ಕೆಲವು ಮಂತ್ರ ತಂತ್ರಗಳು, ಮಾಯಾವಿದ್ಯೆಗಳು ಉಳಿದುಕೊಂಡವು. ಯಾಕೆ ಅವರು ಅಸುರರಾದರು ಎಂಬುದಕ್ಕೆ ಉತ್ತರವನ್ನುನೀವೇ ಹುಡುಕಿಕೊಳ್ಳಿ.

ಅದೇರೀತಿಯಲ್ಲಿ ಇಂದು ಹಳದೀ ತಾಲಿಬಾನ್ ಎಂಬ ಪಡೆ ತಯಾರಾಗಿದೆ ಎಂದರೆ ತಪ್ಪಾಗಲಾರದೇನೋ. ಪೂರ್ವದಲ್ಲಿ ಒಂದೇ ಸಮಾಜವಾಗಿದ್ದ ತಾವು ಇಂದು ಸಮಾಜದ ಪ್ರತ್ಯೇಕ ಭಾಗವಾಗಿ ಗುರುತಿಸಿಕೊಳ್ಳಲು ಇಷ್ಟಪಟ್ಟು, ಹಾರುವ ಮೊಲದ ಮೂರೇ ಕಾಲುಗಳನ್ನು ಕಂಡು, ಅದನ್ನೇ ಸತ್ಯ ಎಂದಿರಿ. ಮೊಲ ಕುಳಿತಾಗಲೋ ನಿಂತಾಗಲೋ ಉಪಾಯವಾಗಿ ಎಣಿಸಿನೋಡುವ ವಿವೇಚನೆ ನಿಮ್ಮಲಿರಲಿಲ್ಲ; ಹೀಗಾಗಿ ನಾಲ್ಕನೇ ಕಾಲು ಕಾಣಲಿಲ್ಲ.ನಾಲ್ಕನೇ ಕಾಲು ಕಂಡವರು ಹೇಳಿದ್ದನ್ನು ನಂಬುವುದಕ್ಕೂ ನೀವು ಸಿದ್ಧರಿಲ್ಲ ಯಾಕೆಂದರೆ, ನೀವದನ್ನು ಪ್ರತ್ಯಕ್ಷ ಕಾಣಲಿಲ್ಲ.

ಯಾವುದು ಧರ್ಮದ ಹೆಗ್ಗುರುತಾಗಿರಬೇಕಾಗಿತ್ತೋ ಅದು ಕಾಮದ ಕೂಪವಾದಾಗ ಅದನ್ನು ನಿಗ್ರಹಿಸುವ ಯೋಚನೆ ನಿಮಗೆ ಬರಲೇ ಇಲ್ಲ. ಇಂದು ನೀವೆಲ್ಲಿದ್ದೀರಿ ಎಂದು ನಿಮ್ಮ ಎದೆ ತಟ್ಟಿ ಕೇಳಿಕೊಳ್ಳಿ; ಯಾಕೆಂದರೆ ಆ ದಿನ ಸನಿಹ ಬಂದಿದೆ. ಸಮಾಜವನ್ನೇ ಒಂದು ಶಕ್ತಿ ಒಡೆಯುತ್ತದೆ ಎಂದಾದರೆ ಅದನ್ನು ಅಸುರೀಶಕ್ತಿ ಎನ್ನದಿರಲಾದೀತೇ? ನಿಮ್ಮೆಲ್ಲರ ಇಚ್ಛೆಯಂತೆ ನಮ್ಮ ಸಮಾಜ ಮಾನಸಿಕವಾಗಿ ಹೋಳಾಗಿದೆ; ಅಧಿಕೃತವಾಗಿ ಪ್ರತ್ಯೇಕವಾಗುವುದೊಂದು ಬಾಕಿ ಇದೆ.

ಅನ್ಯ ಸಮುದಾಯದ ಜನರಿಗೆ ಈ ವಿಷಯ ನಗೆಪಾಟಲಿಗೆ ಕಾರಣವಾದೀತು; ಆದರೂ ಮಡಿಅಲ್ಲಿಬಿದ್ದ ಬೆಂಕಿಯ ಉಂಡೆಯನ್ನು ಹಾಗೇ ಇರಿಸಿಕೊಳ್ಳಲು ಸಾಧ್ಯವಾಗುವುದೇ? ಅದು ಹೊರಬರಲೇಬೇಕು. ಒತ್ತಾಯಕ್ಕೆ ಬಸಿರಾದ ಹೆಣ್ಣು ಮತ್ತೆಲ್ಲೋ ಹಡೆಯಲೇಬೇಕು; ಹಡೆಯುವ ಮುನ್ನವೇ ಅಬಾರ್ಶನ್ ನಡೆಯಬಹುದು ಆ ಪ್ರಶ್ನೆ ಬೇರೆ. ಚಪ್ಪಲಿಯನ್ನು ಅದರ ಜಾಗದಲ್ಲೇ ಇರಿಸುವ ಬದಲು ’ವಾಸ್ತು ತಜ್ಞ’ರೆನಿಸಿಕೊಂಡ ಕೆಲವರ ಸಲಹೆಯ ಮೇರೆಗೆ ದೇವರ ಪೀಠದಲ್ಲಿಡುವವರೂ ಈ ಕಾಲದಲ್ಲಿದ್ದಾರೆ; ಯಾಕೆಂದರೆ ಕಂಡ ಕಂಡವರ ಸಲಹೆ ಕೇಳುವ ಆ ಜನ ವಿವೇಚನಾ ಶೂನ್ಯರಾಗಿರುತ್ತಾರೆ.

’ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು’ ಎಂಬ ಗಾದೆ ಹಿಂದೆಂದಿಗಿಂತ ಇಂದು ನನಗೆ ಮತ್ತು ನಮ್ಮಂತಹ ಜನರಿಗೆ ಸಮಾಜದ ವಿಷಯದಲ್ಲಿ ಸ್ಪಷ್ಟವಾಗಿ ಅರ್ಥವಾಗಿದೆ. ಹೆಚ್ಚಿಗೆ ಮಾತಮಾಡಿ ಮನಸ್ಸು ಹಾಳುಮಾಡಿಕೊಳ್ಳುವುದಕ್ಕಿಂತ, ವಿವೇಚನೆ ಇರಿಸಿಕೊಂಡು ವ್ಯವಹರಿಸಿ ಎಂದು ನಿಮ್ಮನ್ನು ಎಚ್ಚರಿಸುತ್ತಿದ್ದೇನೆ. ಮುಂದೆಂದೋ ಪಾಶ್ಚಾತ್ತಾಪ ಪಡುವ ಬದಲು ಇಂದೇ ಆ ಕೆಲಸ ಮಾಡಿ ಚಪ್ಪಲಿಯನ್ನು ಚಪ್ಪಲಿಯ ಗೂಡಿನಲ್ಲೇ ಇರಿಸಿ ಎಂಬುದು ನಮ್ಮ ಹೇಳಿಕೆ.

ಮುಂದಿನ ಕೆಲವು ದಿನಗಳ ಕಾಲ, ’ಹಮರಿ ಹಕೀಮ್ ಚಂದ್’ ಬರೆಯುವುದಿಲ್ಲ. ಆತ ಓಡಿಹೋದನೆಂದೋ, ಅವನಿಗೆ ಹಣ ಸಂದಾಯವಾಗಲಿಲ್ಲವೆಂದೋ ನೀವು ಭೇರಿ ಬಾರಿಸಿಕೊಂಡು ತಿರುಗಲಿಕ್ಕೆ ನಮ್ಮ ಅಭ್ಯಂತರವೇನೂ ಇರುವುದಿಲ್ಲ. ಮರಳಿ ಬಂದು ಮತ್ತೆ ವಿಷಯಗಳು ಮುನ್ನಡೆದಾಗ “ಹಣ ಕೊಟ್ಟರು ಮತ್ತೆ ಬಂದ” ಎನ್ನಲು ನೀವು ಮರೆಯುವುದಿಲ್ಲ. ಹಣತೆಗೆದುಕೊಂಡು ಶಂಖ ಹೊಡೆಯಲು ಮಂಚನಬೆಲೆ, ಅತ್ತಿಬೆಲೆ, ಸೂಲಿಬೆಲೆಗಳಿಂದ ಬಂದ ಜನ ನಾವಲ್ಲ.

ಸಮಾಜದ ಕಷ್ಟವನ್ನು ಕಂಡು, ನೊಂದ ಮನಸ್ಸಿನ ಜನಸಂದೋಹದ ದನಿಗಷ್ಟು ದನಿಗೂಡೊಸುವ ಸಲುವಾಗಿ ಜೊತೆಯಾದ ಜನ ನಾವೇ ಹೊರತು ಯಾರೋ ಸರ ಅಡವಿಟ್ಟು ನೀಡಿದ ಹಣಕ್ಕಾಗಿ ಬಾಯ್ದೆರೆದು ಕುಳಿತುಕೊಂಡವರಲ್ಲ. ಸೂಟ್ ಕೇಸ್ ಸಲ್ಲಿಸುವ ಪ್ರಮೇಯವೇ ಇಲ್ಲದ ಕಾರಣ, ಕೆಲವರು ಅಂತಹ ಪಾಪದ ಹಣದ ಅಗತ್ಯವನ್ನು ಅಂಟಿಸಿಕೊಂಡ ಹಾಗೆ ಬೇಡುವ ಬಡತನವೂ ನಮಗಿಲ್ಲ. ನಮ್ಮ ಪಾಡಿಗೆ ಉಂಡುಟ್ಟು ಸುಖವಾಗಿರುವ ನಮಗೆ ಸಮಾಜಕ್ಕಂಟಿದ ಶನಿ ತೊಲಗಿದರೆ ಸಾಕು ಎಂಬುದಷ್ಟೆ ಉದ್ದೇಶ. ’ಕುರಿಗಳನ್ನು ಕೇಳಿ ಮಸಾಲೆ ಅರೆಯುತ್ತಾರೆಯೇ?’ ಎಂಬ ಮಾತಿನಂತೆ ನಿಮ್ಮನ್ನು ಕೇಳಿ ನಡೆಯಬೇಕಾದ ಅನಿವಾರ್ಯತೆ ನಮಗಿಲ್ಲ.

ನಿಮ್ಮ ಹಮ್ಮು ಅಹಂಕಾರಕ್ಕೆ ನಮ್ಮ ಬಳಗದ ಉದಾಸೀನತೆಯೇ ಮದ್ದು ಎಂಬುದನ್ನು ಸ್ಪಷ್ಟವಾಗಿ ನಿವೇದಿಸುತ್ತ, ಕೆಲವು ದಿನ ಮಜಾ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದೇನೆ, ನಾನು ಬರೆಯದಿದ್ದರೂ ಓದುತ್ತಿರುವುದಿಲ್ಲ ಎಂದುಕೊಳ್ಳುವುದೇನೂ ಬೇಡ ಎಂಬ ಸಂದೇಶವನ್ನೂ ನೀಡಲು ಮರೆಯುವುದಿಲ್ಲ. ನಡುನಡುವೆ ಸಮಯವಾದರೆ ಬರೆಯಬಾರದು ಎಂದೇನೂ ಇಲ್ಲ.

Thumari Ramachandra

source: https://www.facebook.com/groups/1499395003680065/permalink/1633547803598117/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s