“ದೇವರು ಈಗ ನಿನ್ನೊಡೆನೆಯೇ ಇದ್ದಾನೆ; ದೇವರಿಗೆ ನಿನ್ನನ್ನು ಅರ್ಪಿಸಿಕೊಂಡು ಕೃತಾರ್ಥಳಾಗು”

“ದೇವರು ಈಗ ನಿನ್ನೊಡೆನೆಯೇ ಇದ್ದಾನೆ; ದೇವರಿಗೆ ನಿನ್ನನ್ನು ಅರ್ಪಿಸಿಕೊಂಡು ಕೃತಾರ್ಥಳಾಗು”

ತುಮರಿಗೆ ಗಣಪತಣ್ಣ ಸಿಗದೇ ದಶಕಗಳೇ ಕಳೆದಿದ್ದವು. ಗಣಪತಣ್ಣ ಕರಾವಳಿಯವರು. ನಮ್ಮಲ್ಲಿನ ಮಾಬ್ಲಗಿರಿಯೊಟ್ಟಿಗೆ ವಾಚ್ ರಿಪೇರಿ ಮಾಡುತ್ತಿದ್ದವರು. ಘಟ್ಟದ ಮೇಲಿನ ವಾತಾವರಣ ಹಿಡಿಸಿ, ಶಿವಮೊಗ್ಗ ಜಿಲ್ಲೆಗೆ ಬಂದವರು. ಅವರ ಪರಿಚಯ ಇಷ್ಟೇ ಸಾಕು.

ತುಮರಿ ಊರಿಗೆ ಬಂದಾಗ, ಗಣಪತಣ್ಣನೊಡನೆ ಒಂದು ಕವಳ ಹಾಕುವ ಮನಸ್ಸಾಗಿ ಅವರಲ್ಲಿಗೆ ಹೋಗಿದ್ದ. ಆ ಸಮಯದಲ್ಲಿ ಊರಿನಲ್ಲಿ ಎಲ್ಲಿ ನೋಡಿದರೂ ಕಾಮಿಯದೇ ಸುದ್ದಿ, ಯಾರ ಬಾಯಲ್ಲಿ ನೋಡಿದರೂ ಕಚ್ಚೆಹರುಕನದ್ದೇ ಕತೆಗಳು. ಅರ್ಧರ್ಧ ಎಲೆಯಲ್ಲಿ ಕವಳ ಸುತ್ತಿ ಬಾಯಿಗಿಟ್ಟುಕೊಡು, “ಹ್ರಾ….ಹ್ರಾ…” ಎಂದು ಬಾಯಲ್ಲಿರುವ ಕವಳವನ್ನು ಒಂದೆಡೆಗೆ ಪುಟ್ಟಗೆ ಮಾಡಿಕೊಳ್ಳುತ್ತ ಮಾತನಾಡುವ ಶೈಲಿಯಲ್ಲಿ ನಮ್ಮ ಜನರದ್ದು ಎತ್ತಿದ ಕೈ. ಅದಕ್ಕೆ ಅಂದು ಗಣಪತಣ್ಣ ಸಾಕ್ಷಿಯಾಗಿದ್ದ, ತುಮರಿಯೂ ಸಾಥ್ ಕೊಟ್ಟಿದ್ದ ಅನ್ನಿ.

“ಕಚ್ಚೆಹರುಕರ ಕತೆಯೇ ಹಾಂಗಿರ್ತದ್ಯ. ನಮ್ಮ ಘಟ್ಟದ ತಳಗೆ ಒಂದ್ ಕಡಿಗೆ, 35-40 ವರ್ಷದ ಡಂಬಾರಿ ಒಬ್ಬಿದ್ನ. ಹೈಸ್ಕೂಲಿಗೆ ಹೋಗುವ ಹುಡುಗಿಗೆ ಪಾಠ ಹೇಳ್ಕೊಡ್ತೆ ಹೇಳಿ ದಿನಾ ಆ ಹುಡುಗಿ ಮನಗೆ ಬರ್ತಿದ್ದ. ಆ ಕಾಲದಲ್ಲಿ ಹಳ್ಳಿಲಿ ಕರೆಂಟು ಶಾಸ್ತ್ರಕ್ಕಷ್ಟೆ ಇರ್ತಿತ್ತು. ಸಂಜಿಮುಂದೆ ಕರೆಂಟ್ ಹೋದ್ರೆ ಕೆಲವೊಮ್ಮೆ ಬರ್ತಿರ್ಲಿಲ್ಲ.

ಒಂದ್ ದಿನ ರಾತ್ರಿ ಮನೆಲಿ ದೊಡ್ಡವರೆಲ್ಲ ಎಲ್ಲೋ ಹೋಗಿದ್ರು. ಹೈಸ್ಕೂಲ್ ಹುಡುಗಿ ಪರೀಕ್ಷೆ ಹತ್ರ ಬಂತು ಹೇಳಿ ಮನೇಲೆ ಇತ್ತು. ಡಂಬಾರಿ ಪೋರ ಬಂದಿದ್ದ. ಸುಮಾರು ಹತ್ತು ಗಂಟೆ ಆಗದ್ಯನ, ಆಗ ಬಾಜು ಮನೆಯವರು ಎಂತಕೋ ಹುಡುಗಿ ಮನೆಗೆ ಹೋಗಿದಾರೆ.

ಹೋಗಿ ನೋಡದ್ರೆ ಚಿಮಣಿ ಬುರಡೆ ಉರೀತಾ ಉಂಟು. ಯಾರೂ ಕಾಣ್ಲಿಲ್ಲ. ಸ್ವಲ್ಪ ಬಗ್ಗಿ ಕೋಣೆಯೊಳಗೆ ನೋಡದ್ರೆ, ಯಾರೋ ಮಲಗದ ಹಾಂಗಿತ್ತು. ಚಾದರ ಮೇಲೆ ಕೆಳಗೆ ಆಗ್ತಿತ್ತು. ಏನೋ ನಡ್ದದೆ ಹೇಳಿ ಅನುಮಾನ ಬಂದು ಜೋರಾಗಿ ಕೂಗಿದ ಹೊಡ್ತಕ್ಕೆ ಡಂಬಾರಿ ಪೋರ ಪಂಜಿನೂ ಅಲ್ಲೇ ಬಿಟ್ಟು ನಿಕ್ಕರ್ ಎಳ್ಕಂಡು ಓಡೋದ. ಪರಿಸ್ಥಿತಿ ನೋಡದ್ರೆ ಇನ್ನೂ ಆರಂಭದ ಹಂತದಲ್ಲಿತ್ತು. ಹೀಗಾಗಿ ಕೂಸು ಬಚಾವು. ಅದರ ನಂತ್ರ ಡಂಬಾರಿ ಪೋರ ಬಾಳ ವರ್ಷ ಕಾಣಲೇ ಇಲ್ಲ.

ತುಮರಿ, ನಿಂಗೆ ಗೋಕರ್ಣ ಭಟ್ರ ಶಿರಸಿಗೆ ಬಂದಿದ್ ಗೊತ್ತಿಲ್ಯನ? ಶಿರಸಿಲಿ ಒಂದ್ ಹೆಗದೇರ ಮನೆಗೆ ಗೋಕರ್ಣ ಭಟ್ರ ಸವಾರಿ ಬಂತು. ಹಳೇ ಕಾಲ ಹೇಳಿದ್ನಲ-ಕರೆಂಟು ಗಿರೆಂಟು ಎಲ್ಲ ಅಷ್ಟಕ್ಕಷ್ಟೆಯ. ಪ್ರಸಾದ ಎಲ್ಲ ಕೊಟ್ಟು ಮುಗಿಸಿ ನಂತರ ಹೆಗಡೇರ ಒತ್ತಾಯಕ್ಕೆ ಆ ದಿವಸ ಅವರ ಮನೇಲೇ ಇರವು ಹೇಳಿ ತೀರ್ಮಾನಾತು.

ಆ ಕಾಲ್ದಲ್ಲೆಲ್ಲ ಹಳ್ಳಿಕಡಿಗೆ ಓಪನ್ ಬಚ್ಚಲು. ಮೈಮೇಲೆ ಬಟ್ಟೆ ಹಾಕ್ಕಂಡೆ ಸ್ನಾನ ಮಾಡ್ತಿದ್ರು. ಹೆಗಡೇರ ಹೆಂಡ್ತಿ ಒಳ್ಳೆ ಸ್ಫುರದ್ರೂಪಿ. ಸ್ನಾನಕ್ಕೆ ಹೋಗಿದ್ದನ್ನು ಗೋಕರ್ಣ ಭಟ್ರು ದೂರದಿಂದಲೇ ಕಂಡಿದ್ರು. ಹೆಗಡೇರು ಅಲ್ಲೇ ಹೊರಗೆಲ್ಲೋ ಹೋಗಿದ್ರು. ಭಟ್ರು ಎದ್ದು ಸೀದಾ ಬಚ್ಚಲಿಗೆ ಹೋದವ್ರೆ ಹೆಗಡೇರ ಹೆಂಡತೀನ ಅಪ್ಪಗಂಡ್ರು…ತಗ ….ಅವಳು ಕೂಗಿ ಊರಿಗೆಲ್ಲ ಸುದ್ದಿ ಹಬ್ಬಿ ಜನ ಸೇರಿ, ಭಟ್ಟ ಗಂಟುಬಿಂಟು ಎಲ್ಲಾ ಅಲ್ಲೇ ಬಿಟ್ಟಿಕಿ ಪರಾರಿ. ಸೀದಾ ಮೂರ್ ಹಳ್ಳಿ ದಾಟಿ ದೂರದ ಊರಿಗೆಲ್ಲೋ ಹೋದನಂತೆ ಆ ಕಳ್ಳ ಭಟ್ಟ.

ಬೀಚ್ ನಲ್ಲಿ ವಿದೇಶೀ ಹೆಣ್ಮಕ್ಕಳು ಬರ್ತಾರ್ಯ. ಅವರನ್ನೆಲ್ಲ ನೋಡಬೇಕು. ನಮ್ಮ ’ಹಾವಾಡಿಗ’ನೂ ಮೊದಲು ಅಲ್ಲೆಲ್ಲ ಬೇಕಾದಷ್ಟು ಓಡಾಡಿದವ್ನೇಯ. ನಿತ್ಯ ಅಲ್ಲೆಲ್ಲ ಓಡಾಡಿ ಅವರನ್ನೆಲ್ಲ ಕಣ್ತುಂಬ ಕಂಡ್ಕೆಂಡು ಬತ್ತಿದ್ನ. ಯಾವಾಗ ಸಿಗಲಕ್ಕು ಹೇಳ ಯೋಚನೆ ಮನಸ್ನಲ್ಲಿ. ಭಟ್ರ ಮನೆ ಹುಡುಗಿ ಹಿಡ್ಕಳಕೆ ಹೋಗಿ ಹೊಡೆತ ತಿನ್ನೋವರಿಗೆ ಆಗಿತ್ತು…..” ಗಣಪತಣ್ಣನ ಚುಟುಕು ಕತೆಗಳಿಗೆ ಮಿತಿಯಿರಲಿಲ್ಲ. ಕತೆಗಳು ಎಲ್ಲಿಂದಲೋ ಆರಂಭವಾಗಿ ಎಲ್ಲೆಲ್ಲೋ ಹೋಗಿ ಎಲ್ಲೆಲ್ಲೋ ಅಂತ್ಯಕಾಣುತ್ತಿದ್ದವು. ನನಗಂತೂ ಮಾರಿ ಜಾತ್ರೆಲಿ ಜೇಂಟ್ ವ್ಹೀಲ್ ಹತ್ತಿದ ಹಾಗಿತ್ತು.

ಬೆಳ್ಳಿಪರದೆಯ ಮೇಲೆ ಗುಂಡಗಿನ ಸೂರ್ಯ-ಚಂದ್ರರನ್ನಿಟ್ಟುಕೊಂಡು ಕುಣಿಯುವ ಸುಂದರಿಯನ್ನು ಕಂಡು ಕರುಬಿದ ಹುಡುಗ ಮುಂದೊಂದು ದಿನ ಆಕೆ ಅಷ್ಟು ಸಲೀಸಾಗಿ ತನಗೆ ಒಲಿದು ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಹುಡುಗ ಊರು ತೊರೆದು ಗುಡ್ಡದತ್ತ ಓಡಿದ. ಅಲ್ಲಿ ’ಧ್ಯಾನ’ಕ್ಕೆ ಕುಳಿತ. ಯಾವ ಧ್ಯಾನವೆಂದು ಹೊಸದಾಗಿ ಹೇಳಬೇಕೇ?

ಜನಮರುಳೋ ಜಾತ್ರೆ ಮರುಳೋ ಎಂಬಂತೆ ಧ್ಯಾನಕ್ಕೆ ಕುಳಿತ ದಿನದಿಂದಲೇ ಸುದ್ದಿ ಹಳ್ಳಿ ಹಳ್ಳಿಗಳಿಗೆ ಹಬ್ಬಿತು. ಆ ಹುಡುಗನನ್ನು ನೋಡಲು ಜನ ಜಮಾಯಿಸತೊಡಗಿದರು. ಬರುವವರಲ್ಲಿ ಸಾಂಸಾರಿಕ ತಾಪತ್ರಯಗಳಲ್ಲಿ ಬಳಲಿದವರೂ ಇರುತ್ತಿದ್ದರು. ಅವರ ದೃಷ್ಟಿಯಲ್ಲಿ ’ತಪಸ್ಸಿ’ಗೆ ಕುಳಿತ ಹುಡುಗ ತಪಸ್ವಿಯಾಗಿಬಿಟ್ಟಿದ್ದ; ಅವನ ಅನುಗ್ರಹ ಪಡೆದರೆ ಕಷ್ಟಗಳು ನೀಗಬಹುದೆಂಬ ಭಾವನೆ ಬಂತು. ನಡುವೆ ಒಂದಷ್ಟು [ಹಳದೀ ತಾಲಿಬಾನ್ ರೀತಿಯ] ಏಜೆಂಟರು ಹುಟ್ಟಿಕೊಂಡರು. ’ತಪಸ್ವಿ’ಗಳ ಸುತ್ತ ಪುಂಖಾನುಪುಂಖವಾಗಿ ಪವಾಡದ ಕತೆಗಳನ್ನು ಕಟ್ಟಿಹೇಳಿದರು.

ನಗರ ಮತ್ತು ಪಟ್ಟಣವಾಸಿಗಳಿಗೆ ಊರಹೊರಗಿನ ಸೃಷ್ಟಿ ಸೌಂದರ್ಯ ನೋಡಲೆಲ್ಲಿದೆ ಸಮಯ? ಕಷ್ಟದಲ್ಲಿ ಬಳಲುವವರು ನಿಸರ್ಗದ ಮಡಿಲಿಗೆ ಓಡಿ ಬಂದಾಗ, ಪ್ರಕೃತಿಮಾತೆಯ ಆನಂದದ ಅಪ್ಪುಗೆ ಅವರ ಅರ್ಧ ನೋವನ್ನು ನಿವಾರಿಸುತ್ತದೆ. ಹೀಗಾಗಿ ’ತಪಸ್ವಿ’ಗಳ ಹತ್ತಿರ ಬಂದವರಿಗೂ ಏನೋ ಬದಲಾವಣೆ ಬಂದಂತೆನಿಸಿತು. ಜೊತೆಗೆ ಆತ ಹೇಳಿದ ಚಿತ್ರವಿಚಿತ್ರ ಧ್ಯಾನ ವಿಧಾನಗಳಿಗೆ ಅವರು ಮಾರುಹೋದರು. ಸಾಮೂಹಿಕ ಭಜನೆ, ಪ್ರಾರ್ಥನೆ, ಅಡುಗೆ-ಊಟ ಇವೆಲ್ಲ ಅವರಿಗೆ ಖುಷಿಕೊಟ್ಟಿತು.

ಬಂದವರಲ್ಲಿ ಹುಡುಗರು ತಮಗೆ ಬೇಕಾದ ಹುಡುಗಿಯರನ್ನೂ, ಹುಡುಗಿಯರು ತಮಗೆ ಬೇಕಾದ ಹುಡುಗರನ್ನೂ ಕಂಡುಕೊಂಡರು. ಮಹಿಳೆಯರು ’ಮಹರ್ಷಿ’ಗಳಲ್ಲಿ ದೇವರನ್ನೇ ಕಂಡರು. ತಪಸ್ವಿಗಳು ಪ್ರಸಾದಿಸಿದ ಕನೆಕ್ಷನ್ ಪಡೆದುಕೊಂಡು ’ಮಹನೀಯರು’ ತೃಪ್ತರಾಗತೊಡಗಿದರು. ಮುಂದೆ ನಡೆದ ರಾಸಲೀಲೆಗಳ ವರ್ಣರಂಜಿತಾ ಕಥೆ ನಿಮ್ಮೆಲ್ಲರ ಬಿಡದಿಗಳಲ್ಲಿರುವ ಟಿವಿಗಳಲ್ಲಿ ನೀವು ನೋಡಿಯೇ ಇರುತ್ತೀರಿ.

ಆ ಮಹಾನ್ ’ತಪಸ್ವಿ’ಗೆ ಸರಿಸಾಟಿಯಾದ ಅಥವಾ ಅವನಿಗಿಂತ ಎರಡೂ ಕೈ ಮಿಗಿಲಾದ ಬಹುದೊಡ್ಡ ಘನ’ತಪಸ್ವಿ’ಯೇ ನಮ್ಮ ಹಾವಾಡಿಗ ಮಹಾಸಂಸ್ಥಾನದ ಪೀಠಾಧೀಶ್ವರರು. ಅಲ್ಲಿ ಆ ’ತಪಸ್ವಿ’ಗಳು ತಮಗೆ ಬೇಕಾದದ್ದನ್ನೆಲ್ಲ ಪಡೆದರು, ಇಲ್ಲಿ ಇವರೂ ಸಹ ತಮಗೆ ಬೇಕಾದ್ದರ ಜೊತೆಗೆ ಹೆಚ್ಚುವರಿಯಾಗಿ ಸಿಗುವುದನ್ನೂ ಹೊಡೆದುಕೊಂಡರು.

ತಮ್ಮನ್ನು ನಂಬಿದ ಹಲವು ಹೆಣ್ಣು ಕುರಿಗಳಿಗೆ ’ದೇವರನ್ನು’ ತೋರಿಸಿ ಅವರ ಜನ್ಮಸಾರ್ಥಕಗೊಳಿಸಿದರು. ಮಂದ ಬೆಳಕಿನ ಏಕಾಂತದಲ್ಲಿ ತಾನೆಲ್ಲಿದ್ದೇನೆಂಬ ಅರಿವನ್ನೂ ಮೀರಿದ ಅರೆ ಅರಿವಳಿಕೆಗೆ ಈಡಾಗುತ್ತಿದ್ದ ಆಕೆಗೆ ಗುರುವರ್ಯರು,”ದೇವರು ಈಗ ನಿನ್ನೊಡೆನೆಯೇ ಇದ್ದಾನೆ; ದೇವರಿಗೆ ನಿನ್ನನ್ನು ಅರ್ಪಿಸಿಕೊಂಡು ಕೃತಾರ್ಥಳಾಗು” ಎಂದು ಹಲುಬುತ್ತಿದ್ದರು. ಕಚಗುಳಿ ಇಡುತ್ತಿದ್ದರು, ಕಾಲಮೇಲೆ ಕೂರಿಸಿಕೊಂಡು ಮುದ್ದಿಸುತ್ತಿದ್ದರು, [ಪ್ರಪಂಚವನ್ನು ಬೆಳಗುವ] ಸೂರ್ಯ-ಚಂದ್ರರೊಡನೆ ಆಟವಾಡುತ್ತಿದ್ದರು. “ಜೀನ್ಸ್ ಧರಿಸಿದರೆ ನಮ್ಮ ಬುಸ್ಸಪ್ಪನಿಗೆ ಬಹಳ ಖುಷಿಯಾಗುತ್ತದೆ, ದೇವರು ಸದಾ ಸಂಪ್ರೀತನಾಗಿ ಸತತವಾಗಿ ನಿನ್ನೊಡನೆಯೇ ಇದ್ದುಬಿಡ್ತಾನೆ” ಎನ್ನುತ್ತಿದ್ದರು. ಗಲ್ಲ ಹಿಂಡಿ, ಕಿವಿ ಕಚ್ಚಿ, ತುಟಿಗಳ ಮೇಲೆ ತಮ್ಮ ಅಸಹ್ಯವಾಸನೆ ಹೊಡೆಯುವ ಬಾಯನ್ನೊತ್ತಿ ಆಣೆ ಹಾಕಿಸುತ್ತಿದ್ದರು.

ಅರ್ಪಿಸಿದವರಿಗೆ ಅಪ್ಪಣೆಯಾಗುತ್ತದೆ ಎನ್ನುವ ಗುರುಗಳು ಅರ್ಪಿಸಿಕೊಂಡ ಹೆಣ್ಣುಕುರಿಗಳ ಗಂಡ ಬಕರಾಗಳಿಗೆ ಒಂದಷ್ಟು ಸವಲತ್ತು ಕೊಟ್ಟರು; ಆರ್ಥಿಕವಾಗಿ ದುರ್ಬಲರಾದ ಬಕರಾಗಳಿಗೆ ಸುವರ್ಣ ಮಂತ್ರಾಕ್ಷತೆ ಬರುತ್ತಿರಲಾಗಿ ಅವರೆಲ್ಲ ಕಮಕ್-ಕಿಮಕ್ ಎನ್ನಲಿಲ್ಲ. ಮಕ್ಕಳಿಲ್ಲದವರಿಗೆ ಮಕ್ಕಳಭಾಗ್ಯ ಕಾಣುವಂತಾಯಿತು. ಇನ್ನೇನು ಬೇಕು? ಎಲ್ಲೋ ಒಮ್ಮೊಮ್ಮೆ ಹಾವಾಡಿಗ ಸಂಸ್ಥಾನ ಕರೆದರೆ ಹೋಗಿ ಏಕಾಂತ ದರ್ಶನ ಪಡೆದರೆ ತೊಂದರೆಯೇನು? ಸಮಾಜದಲ್ಲಿ ನಾವೂ ಅನುಕೂಲಸ್ಥರು ಮತ್ತು ಶ್ರೀಗುರುಗಳ ದಿವ್ಯಕೃಪೆಗೆ ಪಾತ್ರರಾದವರೆನಿಸುತ್ತೇವೆ ಎಂದುಕೊಂಡವರೇ ಹಲವರು.

ಗಂಟೆಗಟ್ಟಲೆ ಹೀಗೆ ಕತಾಕಾಲಕ್ಷೇಪ ನಡೆಯುತ್ತಿತ್ತು. ಸತ್ಯನಾರಾಯಣ ಕತೆಯೂ ಅಲ್ಲ ಶನಿಕತೆಯೂ ಅಲ್ಲ, ಇದು ಸಮಾಜಕ್ಕೆ ಹಿಡಿದ ’ಶನಿ’ಯ ಕತೆ ಎಂದು ಹೆಗಲ ಮೇಲಿದ್ದ ಟರ್ಕಿ ಟವೆಲ್ ಝಾಡಿಸಿದ ಗಣಪತಣ್ಣ. “ಅಮೆರಿಕಕ್ಕೆ ಹೋಗೋದ್ರೊಳಗೆ ಮನೆಗೊಂದ್ಸಲ ಬಂದ್ ಹೋಗ” ಎನ್ನುತ್ತಿದ್ದಂತೆ, ಅಲ್ಲಿಗೆ ನಮ್ಮಿಬ್ಬರ ಮಾತುಕತೆ ಅಂತ್ಯ ಕಂಡಿತು.

Thumari Ramachandra

source: https://www.facebook.com/groups/1499395003680065/permalink/1632794630340101/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s