ಅತ್ಯಂತ ಪ್ರಾಮಾಣಿಕರೆಂಬ ಭಾವನೆ ಹುಟ್ಟಿಸಲಿಕ್ಕೆಂದೇ ನಾವೂ ಸಮರ್ಥ ಪುರುಷರು ಎಂದಿದ್ದೇವೆ.

ಅತ್ಯಂತ ಪ್ರಾಮಾಣಿಕರೆಂಬ ಭಾವನೆ ಹುಟ್ಟಿಸಲಿಕ್ಕೆಂದೇ ನಾವೂ ಸಮರ್ಥ ಪುರುಷರು ಎಂದಿದ್ದೇವೆ.

“ಅದೊಂದು ಕುಗ್ರಾಮ. ಅಲ್ಲೊಬ್ಬ ಒಬ್ಬ ಮುಗ್ಧ, ಪ್ರಾಮಾಣಿಕ ಗೃಹಸ್ಥನಿದ್ದ. ಸಾಧು ಸಂತರು ದೇವರು ಎಂದರೆ ಅವನಿಗೆ ಅತೀವ ನಂಬಿಕೆ. ಒಂದು ದಿನ ಕಪಟ ಸನ್ಯಾಸಿಯೊಬ್ಬ ಅವನ ಮನೆಗೆ ಬಂದ. ಮಹಾನ್ ತಪಸ್ವಿಯಂತೆ ಪೋಸು ಕೊಡುತ್ತಿದ್ದ ಅವನ ಮಾತಿನ ವರಸೆಗೆ ಈ ಗೃಹಸ್ಥ ಬಹಳ ಪ್ರಭಾವಿತನಾಗಿಬಿಟ್ಟ.

ಸನ್ಯಾಸಿಗಳು ಸಂಸಾರಿಗಳ ಮನೆಗಳಲ್ಲಿ ಬಹಳ ದಿನ ಒಂದೇ ಕಡೆ ಇರಬಾರದು ಎಂಬ ನಿಯಮವಿದೆ.ಹೀಗಾಗಿ, ಮನೆಗೆ ಬಂದ ಮಹಾನ್ ತಪಸ್ವಿಗೆ ಆ ಗೃಹಸ್ಥ ಹತ್ತಿರದ ಕಾಡಿನಲ್ಲಿ ಒಂದು ಪರ್ಣಶಾಲೆಯನ್ನು ಕಟ್ಟಿಕೊಟ್ಟ. ಸನ್ಯಾಸಿ ಬಹುದೊಡ್ಡ ತಪಸ್ವಿ ಎಂದು ಭಾವಿಸಿ ಸ್ವಾಮಿಗಳಿಗೆ ಏನೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತ ಹಗಲಿರುಳೂ ಸ್ವಾಮಿಗಳ ಸೇವೆಗೆ ನಿಂತುಬಿಟ್ಟ.

ಏನಾಶ್ಚರ್ಯ! ಅದೇ ಸಮಯದಲ್ಲಿ ಆ ಕುಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಾಯಿತು. ಇರುವ ಕೆಲವೇ ಮನೆಗಳಲ್ಲಿ ದಿನ ಬಿಟ್ಟು ದಿನ ಕಳ್ಳತನ ನಡೆಯುತ್ತಿರುವ ಸುದ್ದಿಗಳು ಹಬ್ಬಿದವು. ಸಾಕ್ಷಾತ್ ಬಗವಂತನ ಸ್ವರೂಪದಂತಿರುವ ಸ್ವಾಮಿಗಳೇ ತಮ್ಮ ರಕ್ಷಣೆಗೆ ಮಂತ್ರಾಕ್ಷತೆ ಒಗೆಯುತ್ತಿರುವಾಗ ಗೃಹಸ್ಥ ಕಂಗೆಡಲಿಲ್ಲ. ಅಷ್ಟೊತ್ತಿಗೇ ಸ್ವಾಮಿಗಳು ಗ್ರಾಮದ ಹೊರಗೆ ಕಾನನ ವಾಸಿಯಾಗಿರುವುದನ್ನು ತಿಳಿದ ಅವರ ಶಿಷ್ಯರಲ್ಲಿ ಕೆಲವರು “ನಾವಿದ್ದೇವೆ ಗುರುಗಳೇ, ನಾವಿದ್ದೇವೆ ನಿಮ್ಮ ಜೊತೆಗೆ” ಎಂದು ಅಲ್ಲಿಗೆ ಬಂದು ಸೇರಿದರು. ಗೃಹಸ್ಥನ ಮುಂದೆ ತಮ್ಮ ಗುರುಗಳ ಗುಣಗಾನ ಮಾಡಿದರು.

ಹಸೀ ಗೋಡೆಗೆ ಹರಳಿಟ್ಟ ಹಾಗೆ, ಡೂಪ್ಲಿಕೇಟ್ ಸರ್ಟಿಫಿಕೇಟಿಗೆ ಒರಿಜಿನಲ್ ಸೀಲು ಬಿದ್ದು ನಕಲಿಯೇ ಅಸಲಿಯಾದ ಹಾಗೆ, ಹೆಚ್ಚೇಕೆ ನಮ್ಮ ಸರ್ಕಾರ ಘೋಷಿಸಿದಾಗ ಅಕ್ರಮ ಜಾಗವೆಲ್ಲ ಸಕ್ರಮವಾದ ಹಾಗೆ, ಗೃಹಸ್ಥನ ಮನಸ್ಸಿನಲ್ಲಿ ಸದರೀ ಸನ್ಯಾಸಿ ಮಹಾತಪಸ್ವಿಯೆಂಬ ಮುದ್ರೆ ಬಿದ್ದು ಶಾಶ್ವತ ಜಾಗ ಸಿಕ್ಕಿಬಿಟ್ಟಿತು. ನಿಲ್ಲುವುದಕ್ಕೆ, ಕೂರುವುದಕ್ಕೆ, ಮಲಗುವುದಕ್ಕೂ ಸಹ ಸ್ವಾಮಿಗಳ ಆಶೀರ್ವಾದ ಇರಲಿ ಎಂದು ಬೇಡತೊಡಗಿದ.

ಊರಲ್ಲಿ ಕಳ್ಳತನವಾಗುತ್ತಿದ್ದ ಹಿನ್ನೆಲೆಯಲ್ಲಿ ಒಂದು ದಿನ, ತನ್ನ ಮನೆಯಲ್ಲಿದ್ದ ಪಿತ್ರಾರ್ಜಿತವಾದ ಮತ್ತು ಸ್ವಯಮಾರ್ಜಿತವಾದ ಚಿನ್ನದ ಒಡವೆಗಳನ್ನೂ, ಚಿನ್ನದ ನಾಣ್ಯಗಳನ್ನೂ ಒಂದು ಬಟ್ಟೆಯಲ್ಲಿ ಗಂಟುಕಟ್ಟಿ ಬಿರಬಿರನೆ ಸಾಗಿ, ತಪಸ್ವಿಯ ಪರ್ಣಕುಟಿಯನ್ನು ಸೇರಿದ.

ಸನ್ಯಾಸಿಗೆ ಉದ್ದಂಡ ಸಮಸ್ಕಾರ ಮಾಡಿ ವಿಷಯ ಪ್ರಸ್ತಾಪಿಸುತ್ತ, ‘ಗುರುಗಳೇ, ಊರಿನಲ್ಲಿ ಯಾವ ಭದ್ರತೆಯೂ ಇಲ್ಲ. ನಮ್ಮಲ್ಲಿರುವ ಹಳೆಯ ಮರದ ಕಪಾಟುಗಳಿಗೆ ಗೆದ್ದಲು ಹಿಡಿದಿದೆ. ಸರ್ವಸಂಗ ಪರಿತ್ಯಾಗಿಗಳೂ ತಪೋಧನರೂ ಆದ ತಮ್ಮ ಪರ್ಣಕುಟಿಗೆ ಕಳ್ಳರು ಬರುವುದಿಲ್ಲ. ಅದಕ್ಕಾಗಿ ತಮ್ಮ ಪರ್ಣಕುಟಿಯಲ್ಲಿ ಇವುಗಳನ್ನು ಬಚ್ಚಿಡಲೆಂದು ತಂದೆ, ಆಗಬಹುದೇ?” ಎಂದು ಕೇಳಿದ. ಸನ್ಯಾಸಿ ತನ್ನ ಸುಕೋಮಲ ಗುಲಾಬಿ ಪಕಳೆಗಳಂತಹ ತುಟಿಗಳನ್ನು ತೆರೆದು ಮೃದುವಾಗಿ ಮಂದಹಾಸ ಬೀರಿ ಹೇಳಿದ, “ಅಯ್ಯಾ ಶಿಷ್ಯೋತ್ತಮಾ, ನಮ್ಮಂತಹ ಸನ್ಯಾಸಿಗಳಿಗೆ ಬಂಗಾರವೂ ಮಣ್ಣೂ ಎಲ್ಲವೂ ಒಂದೇ. ನಮ್ಮಿಂದಾಗಲೀ ನಮ್ಮ ಶಿಷ್ಯರಿಂದಾಗಲೀ ನಿನ್ನ ಗಂಟಿಗೆ ಯಾವ ಸಂಚಕಾರವೂ ಬರಲಾರದು. ನೀನು ಅದನ್ನು ಇಲ್ಲಿ ಎಲ್ಲಿ ಬೇಕಾದರೂ ಇಡಬಹುದು.”

ಪರ್ಣಕುಟಿಯ ಮೂಲೆಯಲ್ಲಿ ಒಂದೆಡೆಗೆ ನೆಲವನ್ನು ಅಗೆದ ಆ ಗೃಹಸ್ಥ, ಹೊಂಡದಲ್ಲಿ ತನ್ನ ಬಂಗಾರವಿದ್ದ ಬಟ್ಟೆಯ ಗಂಟನ್ನು ಇಟ್ಟು ಮಣ್ಣು ಮುಚ್ಚಿ ಕೃತಾರ್ಥ ಭಾವ ತಳೆದ. ಪರಮಯೋಗಿ, ಮಹಾಸ್ವಾಮಿಯಾದ ಈ ಸನ್ಯಾಸಿಗೆ ಆಸೆ, ಲೋಭ ಬರುವುದು ಸಾಧ್ಯವೇ ಇಲ್ಲವೆಂಬ ಅಚಲ ವಿಶ್ವಾಸದಿಂದ ಮನೆಯಕಡೆ ಹೆಜ್ಜೆ ಹಾಕಿದ.

ಕೇವಲ ನಾಲ್ಕಾರು ದಿನಗಳಷ್ಟೇ ಕಳೆದಿದ್ದವು. ಕಳ್ಳ ಸನ್ಯಾಸಿ ನೆಲವನ್ನು ಅಗೆದು ಬಂಗಾರದ ಗಂಟನ್ನು ಅಲ್ಲಿಂದ ಎತ್ತಿ,ತನ್ನ ಕಳ್ಳಶಿಷ್ಯರಿಗೆ ಪಾಲುದಾರಿಕೆ ನೀಡುವ ಮಾತುಕೊಟ್ಟು ಬೇರೆಡೆಗೆ ಸಾಗಿಸಿದ. ನಂತರ ಅದೇ ದಿನ ಗೃಹಸ್ಥನ ಮನೆಗೆ ಬಂದವನೇ,”ಅಯ್ಯಾ ಶಿಷ್ಯನೇ, ತ್ಯಾಗಿಗಳಾದ ನಾವು ಒಂದೇ ಜಾಗದಲ್ಲಿ ಬಹಳಷ್ಟು ದಿನ ಇರುವುದು ತರವಲ್ಲ. ಸನ್ಯಾಸಿಗೆ ’ಕರತಲ ಭಿಕ್ಷ-ತರುತಲ ವಾಸ’ ಎಂದು ಹೇಳುತ್ತಾರಲ್ಲ.. ಕೇಳಿದ್ದೀಯಷ್ಟೆ? ಇಂದು ಮಧ್ಯಾಹ್ನವೇ ನಾವು ಇಲ್ಲಿಂದ ಹೊರಟು ಭಗವಂತ ಅಪ್ಪಣೆಕೊಡುವ ದಿಕ್ಕಿನತ್ತ ಪ್ರಯಾಣ ಬೆಳೆಸುತ್ತೇವೆ. ನೀನು ಮಾಡಿದ ಸೇವೆ ನಮಗೆ ಬಹಳ ತೃಪ್ತಿ ತಂದಿದೆ. ದೇವರು ನಿನಗೆ ಸಕಲ ವಿಧದಲ್ಲೂ ಒಳಿತನ್ನುಂಟುಮಾಡಲಿ” ಎಂದ.

“ಗುರುಗಳೇ, ಇಷ್ಟು ದಿನ ತಾವು ಇಲ್ಲಿದ್ದು ನಮ್ಮ ಜನ್ಮವನ್ನು ಪಾವನ ಗೊಳಿಸಿದಿರಿ. ಇನ್ನಷ್ಟು ದಿನ ಇಲ್ಲೇ ಉಳಿಯಿರಿ, ನೀವು ’ಏಕಾಂತ’ ಮಾಡುತ್ತ ಏಕಾಗ್ರತೆಯಲ್ಲಿರುವಾಗಾಗಲೀ ಅಥವಾ ’ವಿಶ್ರಾಂತಿ’ಪಡೆಯುತ್ತಿರುವಾಗಾಗಲೀ ಅಥವಾ ಇನ್ನಾವುದೇ ಗಳಿಗೆಯಲ್ಲಾಗಲೀ, ನಿಮ್ಮನ್ನು ಯಾರೂ ಎತ್ತಿಕೊಂಡು ಹೋಗದಂತೆ ನಮ್ಮ ಜನರನ್ನಿಟ್ಟು ನಿಮಗೆ ಪಾಳಿಯಮೇಲೆ ಸುರಕ್ಷೆ ಒದಗಿಸುತ್ತೇನೆ, ಈಸಲದ ಚಾತುರ್ಮಾಸವನ್ನು ಇಲ್ಲೇ ಮಗಿಸಿ ನಂತರ ಮುಂದಕ್ಕೆ ತೆರಳುವಿರಂತೆ” ಎಂದು ಗೃಹಸ್ಥ ಎಷ್ಟು ಹೇಳಿದರೂ ಸನ್ಯಾಸಿ ಒಪ್ಪಲೇ ಇಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ ಗೃಹಸ್ಥ, ಅದೇ ಮಧ್ಯಾಹ್ನ ಗುರುಗಳನ್ನು ಊರ ಹೊರಗಿನವರೆಗೂ ಬೀಳ್ಕೊಟ್ಟು ಬಂದ.

ಊರಾಚೆಗೆ ಹೋದ ’ಪರಮ ತೇಜಸ್ವಿಗಳು’ ಕೇವಲ ಗಂಟೆಯೊಳಗೆ ಮತ್ತೆ ಮರಳಿ ಗೃಹಸ್ಥನ ಮನೆಗೆ ಬಂದರು! ಗುರುಗಳ ಜೊತೆಯಲ್ಲಿ “…ಸ್ವಾಮೀಜೀ ಕಿ ಜೈ ….ಬೋ ಪರಾಕ್, ನಾವಿದ್ದೇವೆ, ಸ್ವಾಮಿಗಳ ಸತತ ಸೇವೆಗೆ ನಾವಿದ್ದೇವೆ, ಗುರುಗಳಿಗೆ ಯಾವುದೇ ಅನಾನುಕೂಲ ಆಗದಂತೆ ಅವರ ಜೊತೆಗೆ ಸದಾ ನಾವಿದ್ದೇವೆ” ಎನ್ನುತ್ತ ಕೆಲವು ಶಿಷ್ಯರೂ ಇದ್ದರು. ಮನೆಗೆ ಬಂದ ಸನ್ಯಾಸಿ ಒಂದು ಹುಲ್ಲುಕಡ್ಡಿಯನ್ನು ತೆಗೆದು ಗೃಹಸ್ಥನಿಗೆ ನೀಡುತ್ತ, “ವತ್ಸಾ, ನೀನು ಕಟ್ಟಿಕೊಟ್ಟ ಪರ್ಣಕುಟಿಯಿಂದ ಹೊರಡುವಾಗ ನಮ್ಮ ಜಟೆಯಲ್ಲಿ ಒಂದು ಹುಲ್ಲುಕಡ್ಡಿ ಸೇರಿ ಹೋಗಿತ್ತು. ನಮ್ಮದಲ್ಲದ್ದನ್ನು ನಾವು ಎಂದಿಗೂ ತೆಗೆದುಕೊಳ್ಳಲಾರೆವು. ದಯಮಾಡಿ ಇದನ್ನು ತೆಗೆದುಕೋ’ ಎಂದ.

ಪರಮ ವೈರಾಗ್ಯದ ಸನ್ಯಾಸಿಯ ಈ ಅಪ್ಪಟ ಪ್ರಾಮಾಣಿಕ ನಿಲುವನ್ನು ಕಂಡು ಗೃಹಸ್ಥ ಬಹಳ ರೋಮಾಂಚಿತನಗೊಂಡ. ಈ ಘಟನೆಯನ್ನು ಅನತಿದೂದರಿಂದ ವೀಕ್ಷಿಸುತ್ತಿದ್ದ ಗೃಹಸ್ಥನ ತಾಯಿ ಮಗನನ್ನು ಹತ್ತಿರಕ್ಕೆ ಕರೆದು, “ಮಗೂ, ಈ ಸನ್ಯಾಸಿಗೆ ಏನಾದರೂ ವಸ್ತು-ಒಡವೆಗಳನ್ನು ಕೊಟ್ಟಿದ್ದೀಯಾ? ಎಂದು ಕೇಳಿದಳು. ‘ಹೌದಮ್ಮ, ಗ್ರಾಮದಲ್ಲಿ ಕಳ್ಳತನವಾಗುತ್ತಿರುವುದರಿಂದ ಹೆದರಿ, ಮನೆಯಲ್ಲಿದ್ದ ಒಡವೆಗಳನ್ನೆಲ್ಲ ಸ್ವಾಮೀಜಿಯ ಪರ್ಣಕುಟಿಯಲ್ಲೇ ನೆಲದಲ್ಲಿ ಬಚ್ಚಿಟ್ಟಿದ್ದೇನೆ’ ” ಈಗ ತಕ್ಷಣವೇ ಅಲ್ಲಿಗೆ ಹೋಗು, ಅಲ್ಲಿಯೇ ಇದೆಯೋ ನೋಡು. ಇಲ್ಲದಿದ್ದರೆ ಓಡೋಡಿ ಹೋಗಿ ಆ ಸನ್ಯಾಸಿಯನ್ನು ಹಿಡಿ. ಅವನೇ ಕಳವು ಮಾಡಿರುತ್ತಾನೆ’ ಎಂದು ಅನುಭವದ ಹಿತೋಕ್ತಿಯನ್ನು ಹೇಳಿದಳು.

ಒಂಬತ್ತು ತಿಂಗಳು ತನ್ನೊಡಲಲ್ಲಿ ಹೊತ್ತು, ಹೆತ್ತು, ಕಷ್ಟಪಟ್ಟು ಬೆಳೆಸಿದ ತಾಯುಯ ಮಾತಿನಲ್ಲಿ ಅವನಿಗೆ ನಂಬಿಕೆಯೇ ಇರಲಿಲ್ಲ; ಆದರೂ ಏನೋ ನೋಡೋಣವೆಂದುಕೊಳ್ಳುತ್ತ ಮನಸ್ಸಿಲ್ಲದ ಮನಸ್ಸಿನಲ್ಲಿ ಓಡಿಹೋಗಿ ನೋಡಿದ.

ಪರ್ಟಕುಟಿಯಲ್ಲಿ ಏನೊಂದೂ ಇರಲಿಲ್ಲ. ಹೂತಿಟ್ಟ ಆಭರಣಗಳೆಲ್ಲ ನಾಪತ್ತೆಯಾಗಿದ್ದವು. ಅಮ್ಮ ಹೇಳಿದಂತೆ ನಾಲ್ಕು ಜನರನ್ನು ಕರೆದುಕೊಂಡು ಓಡೋಡುತ್ತ ಹೋಗಿ ಕಪಟ ಸನ್ಯಾಸಿಗೂ ಅವನ ಕಳ್ಳಕೊರಮ ಶಿಷ್ಯರಿಗೂ ಗೂಸಾಕೊಟ್ಟು ತದುಕಿದಾಗ ಎಲ್ಲವೂ ಸಿಕ್ಕವು. ಆಗ ಆತ ತಾಯಿಯಲ್ಲಿ ಕೇಳಿದ, “ಅಮ್ಮಾ, ನಿನಗೆ ಆ ಸನ್ಯಾಸಿಯ ಮೇಲೆ ಹೇಗೆ ಸಂಶಯ ಬಂತು?’ “ನೋಡು ಮಗನೇ, ಮನುಷ್ಯ ಅನುಭವದಿಂದ ಮತ್ತು ವಿವೇಚನೆಯಿಂದ ಹಲವನ್ನು ಅರಿಯಬೇಕು. ಹುಲ್ಲುಕಡ್ಡಿಯನ್ನು ಮರಳಿ ತಂದುಕೊಡುವ ಅಗತ್ಯವೇನೂ ಇರಲಿಲ್ಲ. ಅದನ್ನು ಅಲ್ಲೇ ಬಿಸಾಡಬಹುದಿತ್ತು. ಹುಲ್ಲುಕಡ್ಡಿಯನ್ನು ತಂದಾಗಲೇ ಅವನು ಕಪಟ ಸನ್ಯಾಸಿ ಎಂಬುದು ಮನಸ್ಸಿಗೆ ಖಾತ್ರಿಯಾಯಿತು. ಅಗತ್ಯಕ್ಕಿಂತ ಅತಿಯಾದ ಪ್ರಾಮಾಣಿಕತೆ ತೋರಿದ ಅವನು ಕಳ್ಳನೇ ಎಂದು ಮನಸ್ಸು ಚೀರಿತು”ಎಂದಳು.

ಸಮಾಜದೆದುರು ಯಾವ ಸನ್ಯಾಸಿ ಅತಿಯಾದ ಪ್ರಾಮಾಣಿಕತೆ ತೋರಿಸಿ ಮಂದಹಾಸ ಚೆಲ್ಲುತ್ತ ಬೆಳಗುಮಾಡುತ್ತಾನೋ ಅವನ ರಾತ್ರಿಗಳಲ್ಲಿ ಅದಮ್ಯ ವಿಶ್ವಾಸವಿರಿಸಿದ ಶಿಷ್ಯಂದಿರ ಹೆಂಗಸರೊಡನೆ, ಅವರ ಹರೆಯದ ಹೆಣ್ಣುಮಕ್ಕಳೊಡನೆ ’ಏಕಾಂತ’ಗಳು ನಡೆಯುತ್ತವೆ ಎಂದೇ ಅರ್ಥ. ಅಂತವರು ಮಹಾ ಕಪಟಿಗಳಾಗಿರುತ್ತಾರೆ. ತಾನು ತುಂಬ ಪ್ರಾಮಾಣಿಕ, ತನ್ನಷ್ಟು ಪ್ರಾಮಾಣಿಕರು ಯಾರೂ ಇಲ್ಲ ಎಂದು ಮೇಲಿಂದ ಮೇಲೆ ಪ್ರದರ್ಶನಕ್ಕೆ ಇಳಿಯುವವರು ಅಪ್ರಾಮಾಣಿಕರು. ಪ್ರಾಮಾಣಿಕರು ತಾವು ಪ್ರಾಮಾಣಿಕರೆಂದು ನಗಾರಿ ಬಾರಿಸುವುದಿಲ್ಲ, ಕಹಳೆ ಊದುವುದಿಲ್ಲ, ತಮ್ಮ ಪಾಡಿಗೆ ತಾವು ಪ್ರಾಮಾಣಿಕರಾಗಿ ಬದುಕುತ್ತಾರೆ.

ಪಾಂಡಿತ್ಯ ಇಲ್ಲದವರು ತಾವು ಘನಪಂಡಿತರು ಎಂದು ತೋರಿಸಿಕೊಳ್ಳುತ್ತಾರೆ. ಉದಾಹರಣೆಗೆ ನಮ್ಮ ಕುಲಪತಿ ಬಾವಯ್ಯನವರಿಲ್ಲವೇ? ಹಾಗೆ. ನಮ್ಮನ್ನು ಹಿಡಿದು ಪರೀಕ್ಷಿಸಿದರೆ ವೀರ್ಯ ಹೊರಬರುವುದು ಗ್ಯಾರಂಟಿ. ಹೀಗಾಗಿ ನಾವು ಮಾಡಿದ ಪ್ಲಾನು-“ಸನ್ಯಾಸಿಗೆ ವೀರ್ಯ ಹೊರಬಂದರೆ ಬ್ರಹ್ಮಚರ್ಯ ಭಂಗವಾಗುತ್ತದೆ” ಎಂದು ಹೇಳಿದ್ದು. ಸನ್ಯಾಸತ್ವ ನಿಜವಾಗಿಯೂ ಇದ್ದರೆ ಸಿದ್ಧಾಸನ ಹಾಕುವ ಅವರಲ್ಲಿ ವೀರ್ಯೋತ್ಪನ್ನ ಕ್ರಿಯೆ ನಿಂತು ಹೋಗುತ್ತದೆ ಎಂದು ಪತಂಜಲಿಯ ಯೋಗ ಸೂತ್ರ ಹೇಳುತ್ತದೆ. ವೀರ್ಯವೇ ಉತ್ಪಾದನೆಯಾಗದಾಗ ಹೊರಗೆ ಬರುವುದು ದೂರದ ಮಾತು. ಇದನ್ನೆಲ್ಲ ಅರಿಯದ ಶಿಷ್ಯಸ್ತೋಮಕ್ಕೆ ನಾವು ಸಾಚಾ ಎಂದು ತೋರಿಸಿಕೊಳ್ಳಲು ಮತ್ತು ಸತ್ಯಾನಂದನಿಗೆ ನಡೆಸಿದಂತೆ ನಮಗೂ ಪರೀಕ್ಷೆ ನಡೆಸಬಹುದೆಂದು, “ನಾವು ಸಮರ್ಥ ಪುರುಷರು” ಎಂಬ ಹೇಳಿಕೆಯನ್ನು ಅವರು ಕೇಳುವುದಕ್ಕಿಂತ ಮೊದಲೇ ನಾವು ಹೇಳಿಬಿಟ್ಟಿದ್ದೇವೆ.”

Thumari Ramachandra

source: https://www.facebook.com/groups/1499395003680065/permalink/1632480293704868/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s