ಇನ್ನಷ್ಟು ಕಚ್ಚೆಹರುಕರ ಸುದ್ದಿಗಳು

ಇನ್ನಷ್ಟು ಕಚ್ಚೆಹರುಕರ ಸುದ್ದಿಗಳು

“ಅರ್ಧ ದಶಕದ ಹಿಂದಿನ ಮಾತು. ಬಿ.ಎಸ್.ಸಿ ಮುಗಿಸಿದ್ದ ಎಳೆಯ ಹುಡುಗನಿಗೆ ನೌಕರಿ ಹುಡುಕುವ ತವಕ. ದೂರದ ಮುಂಬೈ ನಗರಕ್ಕೆ ಹಾರುವವನಿದ್ದ. ಅದೇ ಸಮಯದಲ್ಲಿ ಕಚ್ಚೆಹರುಕನೊಬ್ಬ ಚೋರ್‍ಮನ್ ಆಗಿರುವ ವಿದ್ಯಾಸಂಸ್ಥೆಯೊಂದು ಪ್ರೌಢಶಾಲೆಯನ್ನು ಆರಂಭಿಸಿತ್ತು. ಅವರು ಮಾಸ್ತರಿಕೆ ಮಾಡುವ ಪದವೀಧರರ ತಲಾಶ್ ನಡೆಸುತ್ತಿದ್ದರು.

ಆಗೆಲ್ಲ ಹಳ್ಳಿಗಳಲ್ಲಿ ಪದವಿ ಮುಗಿದವರೇ ಕಡಿಮೆ. ಸರಕಾರೀ ನೌಕರಿಯ ಆದೇಶ ಅಂಚೆಯ ಮೂಲಕ ಮನೆ ಬಾಗಿಲಿಗೆ ಬರುತ್ತಿದ್ದ ಕಾಲ. ಅಂತಹ ಸಮಯದಲ್ಲಿ ಆ ಹುಡುಗನಿಗೆ ಬೇರೆಲ್ಲಾದರೂ ನೌಕರಿ ಸಿಗುತ್ತಿತ್ತು. ಆದರೆ ಕಚ್ಚೆಹರುಕ ಚೋತ್ಮನ್ ಮತ್ತವನ ಸಂಗಡಿಗರು ಬಿಡಬೇಕಲ್ಲ? ಆ ಹುಡುಗನ ತಂದೆಯನ್ನು ಕಂಡರು. “ನಿಮ್ಮ ಮಗನನ್ನು ನಮ್ಮ ಸ್ಕೂಲಿಗೆ ಹೆಡ್ ಮಾಸ್ಟರ್ ಮಾಡುತ್ತೇವೆ, ಒಳ್ಳೆಯ ಸಂಬಳ ಕೊಡುತ್ತೇವೆ” ಎಂದರು.

ಹತ್ತಾರುಬಾರಿ ಯೋಚಿಸಿದ ಹುಡುಗನ ಅಪ್ಪ, ಊರಮನೆಯ ಸಮೀಪವೇ ಆಯಿತಲ್ಲ ಅಂತ ಅವರ ಮಾತಿಗೆ ಒಪ್ಪಿದ. ಸ್ಫುರದ್ರೂಪಿ ಹುಡುಗ ಆ ವಿದ್ಯಾಸಂಸ್ಥೆಗೆ ಹೆಡ್ ಮಾಸ್ಟರ್ ಆಗಿ ಸೇರಿದ. ಹೇಳಿಕೇಳಿ ಹವ್ಯಕ ಹುಡುಗ; ಒಳ್ಳೇ ಬ್ರಿಲಿಯಂಟ್ ಛಾಪು. ಮೇಲಾಗಿ ಯಾವುದೇ ಚಟಗಳ ಗಂಧಗಾಳಿ ಸೋಕಿರದ ಶುದ್ಧ ಹಸ್ತದ ಪದವೀಧರ.

ಯಾವ ಘಳಿಗೆಯಲ್ಲಿ ಆ ಸ್ಕೂಲಿಗೆ ಸೇರಿಕೊಂಶನೋ ಪಾಪ, ಕಾಲ ಬದಲಾಗುತ್ತ ನಡೆದಿತ್ತು. ಮಾಸ್ತರನನ್ನು ಕಂಡು ಹೊಟ್ಟೆ ಕಿಚ್ಚುಪಟ್ಟ ಜನರೆಷ್ಟೋ! ಆಡಳಿತ ಮಂಡಳಿಗೂ ಮಾಸ್ತರ ಅಚ್ಚುಮೆಚ್ಚು. ಆಡಳಿತ ಮಂಡಳಿಯ ಕೈಕೆಳಗೆ ಕೆಲಸಮಾಡುವ ಮಾಸ್ತರ ಅವರು ಹೇಳಿದ ಹಾಗೆ ಕೇಳಬೇಕಲ್ಲ? ಸ್ಕೂಲಿನ ಸಮಯ ಮುಗಿದ ಮೇಲೆ, ಶನಿವಾರ ಮತ್ತು ಭಾನುವಾರಗಳಂದು ಚೋರ್‍ಮನ್ ಮನೆಗೆ ಬರುವಂತೆ ಬುಲಾವ್ ಬಂತು.

ಮನೆಗೆ ಕರೆಸಿಕೊಂಡ ಚೋರ್‍ಮನ್ ಇಸ್ಪೀಟು ರೆಮ್ಮಿ ಜೂಜಾಟವನ್ನು ಒತ್ತಾಯ ಪೂರ್ವಕವಾಗಿ ಕಲಿಸಿದ. ನೌಕರಿಯ ಮೇಲಿನ ಆಸೆಯಿಂದ ಛೋರ್‍ಮನ್ ಹೇಳಿದ್ದಕ್ಕೆಲ್ಲ ಮಾಸ್ತರ ಹೂಂ ಗುಟ್ಟಿದ. ನಂತರ ಆ ಚೋರ್‍ಮನ್ ಮತ್ತವನ ಬಳಗ ತಮ್ಮಲ್ಲಿರುವ ಎಲ್ಲಾ ಚಟಗಳನ್ನೂ ಒಂದೊಂದಾಗಿ ಒತ್ತಾಯ ಪೂರ್ವಕವಾಗಿ, ಆಗ್ರಹಪೂರ್ವಕವಾಗಿ ಆ ಮಾಸ್ತರನಿಗೆ ’ಧಾರೆ’ ಎರೆದರು. ಮಾಸ್ತರ ಅಡ್ಡದಾರಿ ಹಿಡಿದ.

ಆಗಲೇ ಕುಲೀನ ಮನೆತನದ ಸುಂದರ ಕನ್ಯೆಯನ್ನು ಮದುವೆಯಾಗಿದ್ದರೂ, ಪರಸ್ತ್ರೀಯರ ಸಹವಾಸ ಚೆನ್ನಾಗಿರುತ್ತದೆಂದು ರೈಲು ಹತ್ತಿಸಿ ಅದನ್ನೂ ಅವನಿಗೆ ಒತ್ತಾಯ ಪೂರ್ವಕವಾಗಿ ಅಂಟಿಸಿದರು. ಸಮಯ ಸಿಕ್ಕಾಗಲೆಲ್ಲಾ ಕಚ್ಚೆಹರುಕರ ಟೋಳಿ ಊರೂರನ್ನು ಸುತ್ತಿತ್ತಿತ್ತು. ಗುಂಪಿನಲ್ಲಿ ಯಾರಾದರೊಬ್ಬ ಒಬ್ಬಳನ್ನು ಗುರುತಿಸುವುದು ಮತ್ತು ಹೇಗಾದರೂ ಮಾಡಿ ಎಲ್ಲರೂ ಅವಳನ್ನು ಸಾಲಾಗಿ ಸಂಭೋಗಿಸುವುದು ನಡೆಯುತ್ತಿತ್ತು. ಆದರೆ ಈ ವಿಷಯ ಅತ್ಯಂತ ಗೌಪ್ಯವಾಗಿತ್ತು.

ಶಾಲೆಯಲ್ಲಿ ಮಾಸ್ತರನ ಕಲಿಸುವ ಮೆಥಡ್ಸ್ ಎಲ್ಲ ಬಹಳ ಚೆನ್ನಾಗಿತ್ತು; ಆತನ ಪಾಠಕ್ರಮಕ್ಕೆ ವಿದ್ಯಾರ್ಥಿಗಳು ತಲೆದೂಗುತ್ತಿದ್ದರು. ಕ್ರಮೇಣ ಪಾಠಮಾಡುವಾಗ ಮಾಸ್ತರನ ಗಮನ ಹತ್ತನೇ ಕ್ಲಾಸಿನ ಲಕ್ಷಣವಾದ ಹುಡುಗಿಯರ ಮೇಲೆ ಹರಿಯತೊಡಗಿತು. ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯ ಓದಿಗೆ ಟ್ಯೂಶನ್ ನೀಡುವ ನೆಪದಲ್ಲಿ ಸುಂದರ ಹುಡುಗಿಯರನು ಒಬ್ಬೊಬ್ಬರನ್ನಾಗಿ ಎಲ್ಲೆಲ್ಲಿಗೋ ಬರಲು ಹೇಳುತ್ತಿದ್ದ ಮಾಸ್ತರ ಅವರಲ್ಲಿ ಕೆಲವರಿಗೆ ’ಜಪಾನ್’ ಇನ್ನೂ ಕೆಲವರಿಗೆ ಪೂರ್ತಿ ’ಜರ್ಮನಿ’ಯನ್ನೂ ತೋರಿಸಿಬಿಟ್ಟ. ಕೆಲವು ಹುಡುಗಿಯರು ಬಸುರಿಯರಾದಾಗ ಅಬಾರ್ಶನ್ ಮಾಡಿಸಿದ.

ಅತ್ತ ಆಡಳಿತ ಮಂಡಳಿಯಲ್ಲಿ ಇದ್ದ ಒಬ್ಬಿಬ್ಬರು ಸದ್ಗೃಹಸ್ಥ ಸದಸ್ಯರು ಉಸಿರುಗಟ್ಟುವ ವಾತಾವರಣದಿಂದ ರಾಜೀನಾಮೆ ನೀಡಿದಾಗ ಆ ಜಾಗಕ್ಕೆ ಬೇರೆ ಕಚ್ಚೆಹರುಕರೇ ಬಂದು ಕುಳಿತರು. ಕಚ್ಚೆಹರುಕ ಸದಸ್ಯನೋರ್ವನ ಮಗಳು ಅದೇ ಶಾಲೆಯಲ್ಲಿ ಓದುತ್ತಿದ್ದಾಗ ಮಾಸ್ತರ ಹೇಗೋ ಪುಸಲಾಯಿಸಿ ಅವಳಿಗೂ ’ಜರ್ಮನಿ’ ತೋರಿಸಿಬಿಟ್ಟ. ವಿಷಯ ಹೇಗೋ ಅಪ್ಪನ ಕಿವಿಗೆ ಬಿದ್ದು ಆತ ಬೋರ್ಡ್ ಮೀಟಿಂಗ್‍ನಲ್ಲಿ ತಗಾದೆ ತೆಗೆದು ಮಾಸ್ತರನನ್ನು ಕೆಲಸದಿಂದ ವಜಾಗೊಳಿಸುವಂತೆ ಕೂಗಾಡಿದ.

ಸ್ಕೂಲು ಆಗಲೇ ಅನುದಾನಿತ ಸ್ಕೂಲಾಗಿದ್ದರಿಂದ ವಜಾಗೊಳಿಸುವುದಕ್ಕೆ ಸರಕಾರದ ಅನುಮತಿ ಬೇಕಾಗಿತ್ತು. ಹೀಗಾಗಿ ಇಡೀ ಆಡಳಿತ ಮಂಡಳಿ ಮಾಸ್ತರನ ವಿರುದ್ಧ ತಿರುಗಿ ಬಿತ್ತು. ಬಹಳ ದೊಡ್ಡಮಟ್ಟದಲ್ಲಿ ಚಳುಚಳಿಗಳನ್ನು ನಡೆಸಿದರು, ಸ್ಕೂಲ್ ಮುಂಭಾಗದಲ್ಲಿ ಹಾದುಹೋಗುವ ಡಾಮರು ರಸ್ತೆಯಲ್ಲಿ ಎಲ್ಲೆಲ್ಲೂ “ಬಾಲೆಯರನ್ನು ಬಸಿರುಮಾಡಿದ……..ವನಿಗೆ ಧಿಕ್ಕಾರ” ಎಂದು ಬರೆಸಿದರು.

ಕರೆದುಕೊಟ್ಟ ನೌಕರಿಯನ್ನು ಕೊಟ್ಟವರೇ ಕಸಿದುಕೊಂಡರು. ನಡುವಯಸ್ಸಿನಲ್ಲಿ ಮಾಸ್ತರ ಬೀದಿ ಪಾಲಾದ. ಅಷ್ಟೇ ಅಲ್ಲ. ಅವನ ಅಪರಾಧಕ್ಕೆ ಶಾಸ್ತಿಯಾಗಿ ಅವನನ್ನು ನಮ್ಮ ಹಿಂದಿನವರಲ್ಲಿಗೆ ಎಳೆದುತರಲಾಯ್ತು. ಹಿಂದಿನವರು ಅವನಿಗೆ ಬೇಕಾಬಿಟ್ಟಿ ನೀರಿಳಿಸಿ, ನಂತರ ನಮ್ಮ ಶಾಸ್ತ್ರಿಗಳನ್ನು ಕರೆದು ಒಂದಷ್ಟು ಹೋಮ, ನೇಮಗಳನ್ನು ನಡೆಸಿ ಶುದ್ಧೀಕರಣ ಮಾಡುವಂತೆ ತಿಳಿಸಿದರು. ಬದುಕಲು ಬಿಟ್ಟಿದ್ದಕ್ಕೆ ಮಾಸ್ತರ ಅವರು ಹೇಳಿದಂತೆಲ್ಲ ನಡೆದುಕೊಂಡ.

ಅತ್ತ ಮಾಸ್ತರ ಹೆಂಡತಿ, ಮಕ್ಕಳು, ಬಾವ ಎಲ್ಲರೂ ಬಹಳ ಮನಸೊಂದರು. ಉದರಂಭರಣೆಗಾಗಿ ಅವಕಾಶ ಹುಡುಕಿ ಮಾಸ್ತರ ಬೆಂಗಳೂರು ಸೇರಿದ. ಖಾಲಿ ಬಿದ್ದ ಹೆಡ್ ಮಾಸ್ತರನ ಜಾಗಕ್ಕೆ ಸಹಾಯಕ ಶಿಕ್ಷಕನೊಬ್ಬ ಹಂಗಾಮಿಯಾಗಿ ಕೆಲಸಮಾಡಿದ. ಅದೇ ಪ್ರೌಢಶಾಲೆಯಲ್ಲಿ ಈ ಶಿಕ್ಷಕ ಬಳಗದವರ ಕಲಿಸುವಿಕೆಯಲ್ಲಿ ವಿದ್ಯಾಭ್ಯಾಸ ನಡೆಸಿದ್ದ ಸೂಜಿ ಭಟ್ಟ ಅಷ್ಟೊತ್ತಿಗಾಗಲೇ ಪೋಸ್ಟ್ ಗ್ರಾಜುವೇಟ್ ಮುಗಿಸಿ ನೌಕರಿ ಹುಡುಕುತ್ತಿದ್ದ. ತನ್ನ ರಾಜಕೀಯ ಶಕ್ತಿ ಬಳಸಿ ಕಚ್ಚೆಹರುಕು ಆಡಳಿತ ಮಂಡಳಿಯ ಮನವೊಲಿಸಿದ ಆತ ವಿದ್ಯಾದಾನ ಮಾಡಿದ ಗುರುವೃಂದದವರಿಗೆ ಹೆಡ್ ಮಾಸ್ಟರ್ ಆಗಿ ನೇಮಕಗೊಂಡು ಅವರೆಲ್ಲರನ್ನೂ ಓವರ್ ಟೇಕ್ ಮಾಡಿದ.

ಅಂದು ನಮ್ಮ ಹಿಂದಿನವರು ಕಚ್ಚೆಹರುಕ ಮಾಸ್ತರನನ್ನು ಶಿಕ್ಷಿಸಿದರು. ಅವನಮೇಲೆ ದೂರು ಕೊಟ್ಟು ತಮ್ಮ ಬಳಿ ಎಳೆದುತಂದ ಆಡಳಿತ ಮಂಡಳುಯಯ ಜನ ಸುಭಗರೆಂದು ನಂಬಿದ್ದರು. ಪಾಪದ ಹುಡುಗನಿಗೆ ಕಚ್ಚೆಹರುಕುತನವನ್ನು ಕಲಿಸಿದ್ದು ಸಮಾಜದ ಕೆಟ್ಟ ಗುಂಪು. ಕೆಟ್ಟಗುಂಪಿನ ಪ್ರಚೋದನೆಗೆ ಕೆಲಸದಿಂದ ವಜಾಗೊಳಿಸಲು ಸಮ್ಮತಿಸಿದ್ದು ನಮ್ಮ ಹಿಂದಿನವರು. ಅದರ ಪಾಪವೇ ಇಂದು ಸೀಟನ್ನು ಕಾಡಿತೇ? ಗೊತ್ತಿಲ್ಲ.

ಇಂದು ಈ ಸೀಟಿನಲ್ಲಿರುವ ನಾವೇ ಕಚ್ಚೆಹರುಕರು. ಹೋಮ ಶಾಂತಿಗಳೆಲ್ಲ ಇಳಿದವರ ಕಚ್ಚೆಹರುಕುತನದ ಶುದ್ಧೀಕರಣಕ್ಕೆ. ನಾವು ಸದಾ ಶುದ್ಧರು ಮತ್ತು ಸದಾ ’ಮುಗ್ಧ’ರು. ಮುಗ್ಧೆಯರನ್ನು ಅವರಗಂಡನಿಂದ ದೂರ ಮಾಡಿಕೊಂಡು ಬಳಸಿಕೊಳ್ಳುವುದರಲ್ಲಿ ನಿಸ್ಸೀಮರು. ಇದು ನಮ್ಮ ಇನ್ನೊಂದು ಪೂರ್ವೇತಿಹಾಸ.”

Thumari Ramachandra

source: https://www.facebook.com/groups/1499395003680065/permalink/1632014573751440/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s