ಶೃಂಗೇರಿ ಎಂಬ ಹೆಸರೇ ನಮಗೆ ಅಲರ್ಜಿ-’ಹಾವಾಡಿಗ’ ಮಹಾಸಂಸ್ಥಾನಾಧೀಶ್ವರರು

ಶೃಂಗೇರಿ ಎಂಬ ಹೆಸರೇ ನಮಗೆ ಅಲರ್ಜಿ-’ಹಾವಾಡಿಗ’ ಮಹಾಸಂಸ್ಥಾನಾಧೀಶ್ವರರು

“ನಿನ್ನೆ ಮೊನ್ನೆಯತನಕ ನಮ್ಮ ವಿರುದ್ಧವೇ ಉಳಿದಿದ್ದ ’ಹರಿ’,’ಹರ’, ’ರಾಘವಾಂಕ’ರಂತ ಅಂಡೆಪಿರ್ಕಿಗಳನ್ನೆಲ್ಲ ಇಂದು ನಾವು ನಮ್ಮ ತೆಕ್ಕೆಗೆ ಎಳೆದುಕೊಂಡಿದ್ದೇವೆ. ಅಗ್ನಿ ಮಂಜುವಿನ ಭಾಷಣವನ್ನು ಅವರೆಲ್ಲ ಕೇಳಿದ್ದರೂ “ಅದರಲ್ಲಿ ಹೇಳಿದ್ದೆಲ್ಲ ಸುಳ್ಳು” ಎಂದು ನಾವು ಹೇಳಿದ್ದೇವೆ. ತನ್ಮೂಲಕ “ನಮ್ಮ ಸ್ವಾಮೀಜಿ ಬಹಳ ಸಾಚಾ, ಬಹಳ ಘನತೆವೆತ್ತವರು, ಸಮಾಜಕ್ಕೆ ಬಹಳಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ” ಎಂದು ಹೇಳಿಸಲು ಆರಂಭಿಸಿದ್ದೇವೆ. ಆದರೂ ಇಮ್ಮಡಿ ವಿಶ್ವೇಶ್ವರಯ್ಯನ ಜಾಗ ತುಂಬುವುದು ಅವರಿಂದ ಸಾಧ್ಯವಿಲ್ಲ ಬಿಡಿ.

ತುಮರಿ ರಾಮಚಂದ್ರ ಅನ್ನೋನು ನಿನ್ನೆ ನಮ್ಮ ವಿರೋಧಿಗಳಾದ ಶೃಂಗೇರಿಯವರ ಗುರುವಂದನಾ ಕಾರ್ಯಕ್ರಮ ನೋಡುತ್ತಿದ್ದನಂತೆ. ನಾವೂ ಅಲ್ಪಸ್ವಲ್ಪ ಕದ್ದು ನೋಡಿದ್ದೇವೆ; ಅ ಪ್ರಶ್ನೆ ಬೇರೆ. ಮುಂದಿನಸಲ ನಮ್ಮ ಕಾರ್ಯಕ್ರಮ ಇದಕ್ಕೂ ಗ್ರಾಂಡ್ ಆಗಿರಬೇಕು, ನಮಗೆ ಸಿಂಗಲ್ ವೇದಿಕೆಯಲ್ಲ, ಅಂತಸ್ತುಳ್ಳ ಡಬ್ಬಲ್ ವೇದಿಕೆಯಲ್ಲಿ ಅಷ್ಟಕೋನದ ದೊಡ್ಡ ಮಂಟಪಮಾಡಿ ಅದರಲ್ಲಿ ಬಹಳ ಎತ್ತರದ ಸಿಂಹಾಸನ ಹೂಡಿ, ಪ್ರವೇಶಿಸುತಿರುವಂತೆಯೇ ನೂರಾರು ಮಹಿಳೆಯರು ಆರತಿ ಎತ್ತುವಂತೆ ಮಾಡಬೇಕೆಂದು ಸಂಕಲ್ಪಿಸಿದ್ದೇವೆ. ಇದೊಂದರಲ್ಲಿ ಸಿಕ್ಕಿಹಾಕಿಕೊಳ್ಳದಿದ್ದರೆ ನಾವಿಷ್ಟೊತ್ತಿಗೆ ಇನ್ನಷ್ಟ್ ಸಾವಿರ ಬೋಳುಗಳಿಗೆ ಎಣ್ಣೆ ಹಚ್ಚುತ್ತಿದ್ದೆವು; ಆದರೇನು ಮಾಡೋಣ? ನಮ್ಮ ಸ್ಥಿತಿ ಇಂದು ಹೀಗಾಗಿದೆ.

ಅದಿರಲಿ, ಸಜ್ಜನರಾಗಬಯಸುವವರು ಸಜ್ಜನರ ಸಂಗವನ್ನೇ ಮಾಡಬೇಕು ಮತ್ತು ಸಜ್ಜನರ ಲಕ್ಷಣಗಳೇನು ಎಂಬುದನ್ನು ತಿಳಿಸಿದ ಶೃಂಗೇರಿಯವರು, ಪರಸ್ತ್ರೀಯರನ್ನು ಅಮ್ಮನಂತೆ ಕಾಣಬೇಕು ಎಂದು ಹೇಳಿದರು. ಹಾಗಾದರೆ ಎಲ್ಲರೂ ಹಾಗೇ ಮಾಡುತ್ತಾರೇನು? ರಾವಣ ಬಹಳ ನಿಷ್ಠಾವಂತನಾಗಿದ್ದ ಎಂದು ಹೇಳಿದಾಗ ನಮಗೆ ಬಹಳ ಸಮಾಧಾನವಾಯಿತು; ಯಾಕೆಂದರೆ ರಾವಣನಂತೆಯೇ ನಾವೂ ಹೊರಗೆ ಬಹಳ ನಿಷ್ಠಾವಂತರು.

ಆದರೆ, ರಾವಣ ಪರಸ್ತ್ರೀ ವ್ಯಾಮೋಹದಿಂದಲೇ ಪತನಗೊಂಡ ಎಂದಾಗ, ವೇಗದಲ್ಲಿ ಓಡುತ್ತಿರುವ ಕಾರಿನ ನಾಲ್ಕೂ ಟೈರ್ ಟ್ಯೂಬ್‍ಗಳು ಒಮ್ಮೆಲೇ ಠುಸ್ ಎಂದು ಬರ್ಸ್ಟ್ ಆದಂತೆನಿಸಿ ಎಲ್ಲಿಲ್ಲದ ಕೋಪ ಬಂತು ನಮಗೆ. ಸೀತೆಯ ಗಂಡ ಎಂದು ಹೇಳಿಕೊಂಡು ಅಲೆಯುತ್ತಿರುವ ನಮ್ಮನ್ನು ಮಂಡೋದರಿಯ ಪತಿಗೆ ಹೋಲಿಸುತ್ತಾರಲ್ಲ ಎಂಬುದು ಅರ್ಥವಾಯಿತು.

“ವ್ಯಕ್ತಿ ಜೀವನದಲ್ಲಿ ಅನ್ಯರಿಗೆ ಉಪಕಾರ ಮಾಡುವ ಸ್ಥಿತಿಯಲ್ಲಿಲ್ಲದಾಗ ಉಪಕಾರ ಮಾಡಬೇಕಾದ ಅಗತ್ಯವಿಲ್ಲ; ಆದರೆ ಅಪಕಾರ ಮಾಡಬಾರದು. ವಿನಾಕಾರಣ ಇನ್ನೊಬ್ಬನನ್ನು ಹಿಂಸಿಸಬಾರದು; ಹಾಗೆ ಹಿಂಸಿಸಿದರೆ, ತೊಂದರೆಕೊಟ್ಟರೆ ಅದರಿಂದಾಗುವ ದುಷ್ಪರಿಣಾಮ ವಿಪರೀತವಾಗಿರುತ್ತದೆ” ಎಂದು ಹೇಳಿದ್ದು ನಮ್ಮ ಕೀಳು ವ್ಯವಹಾರದ ಮಧ್ಯೆ ನಾವು ಅವರನ್ನು ಎಳೆಯಲು ಪ್ರಯತ್ನಿಸಿದ್ದಕ್ಕೆ ಎಂದರೆ ತಪ್ಪಾಗಲಾರದಷ್ಟೇ?

ಅಂದಹಾಗೆ ಐದು ತಿಂಗಳ ಹಿಂದೆ ಶಿಷ್ಯ ಸ್ವೀಕಾರದ ಸಮಯದಲ್ಲೂ ಅವರು “ಕೇವಲ ಜಾತಕ ನೋಡಿ ಆಯ್ಕೆ ಮಾಡಿದ್ದಲ್ಲ” ಎಂದಾಗ ನಮಗೆ ದಂಗಾಗಿತ್ತು; ಯಾಕೆಂದರೆ ನಾವು ಅಲ್ಲಿಂದಿಲ್ಲಿಗೂ ಮಾಡಿದ ಅಷ್ಟೂ ಲಫಡಾಗಳನ್ನೂ ಪರೋಕ್ಷವಾಗಿ ಅವರು ಬಲ್ಲರು. ಕಾನೂನಿನ ಕುಣಿಕೆಯಿಂದ ನಾವು ತಪ್ಪಿಸಿಕೊಂಡರೂ ಇನ್ನೆಂದೂ ನಮ್ಮನ್ನವರು ಕ್ಷಮಿಸಲಾರರು. ಮನಸ್ಸು ಮಾಡಿದರೆ ನಮ್ಮನ್ನು ಶಿಕ್ಷಿಸಬಲ್ಲವರು ಸದ್ಯಕ್ಕೆ ಅವರೊಬ್ಬರೇ ಎಂಬುದು ನಮಗೆ ಗೊತ್ತಿದೆ.

ನಮ್ಮ ವಿರೋಧಿ ಬಣದ ಮುಖಂಡನನ್ನು ಸನ್ಮಾನ ಮಾಡಿದಾಗಲಂತೂ ನಮ್ಮ ಎದೆಗೆ ಚಾಕು ಹಾಕಿದಷ್ಟು ನೋವಾಯ್ತು. ಶೃಂಗೇರಿಗಿಂತ ನಮ್ಮ ಸಂಸ್ಥಾನವೇ ದೊಡ್ಡದು ಎಂದು ಬಿಂಬಿಸಲು ಹೊರಟಿದ್ದ ನಾವು ಇದನ್ನೆಲ್ಲ ಕಣ್ಣಾರೆ ಕಂಡು ಸಹಿಸುವುದಾದರೂ ಹೇಗೆ?

ಅಂದಹಾಗೆ ಅವರ ಶಿಷ್ಯರಲ್ಲಿ ಅವರಿಗೆ ವಿರೋಧಿಗಳೇ ಇಲ್ಲವಲ್ಲ ಎಂಬುದು ನಮಗೆ ಆಶ್ಚರ್ಯ ತಂದಿದೆ. ನಾವು ನಮ್ಮ ಮಟ್ಟಕ್ಕೆ, “ಅವರದ್ದೂ ನಮ್ಮಂತೆಯೇ, ಇನ್ನೇನು ಮಹಾ” ಅಂದುಕೊಂಡಿದ್ದೆವು, ಆದರೆ ಅಲ್ಲಿನ ಶಿಸ್ತು, ಸ್ವಚ್ಛತೆ, ತ್ಯಾಗ, ತಪಸ್ಸು, ಆಡ್ಯತೆ, ಪಾಂಡಿತ್ಯ, ಧರ್ಮಾಚರಣೆ, ನೀತಿ-ನಿಯತ್ತು, ಅನುಷ್ಠಾನ, ಸಮಾಜ ಸೇವೆ, ಮಾರ್ಗದರ್ಶನ ಎಲ್ಲವನ್ನೂ ಕಂಡು ನಾವು, ಜ್ವರ ತಲೆಗೆ ಹತ್ತಿದವರು ಹಲುಬುವಂತೆ ಹಲುಬುತ್ತಿರುವುದು ನಿಜ.

ಕೆಲವೊಮ್ಮೆ, ನಮ್ಮ ಎಡವಟ್ಟಿಗೆಲ್ಲ ನಮ್ಮ ಕುಲಪತಿ ಬಾವಯ್ಯನೇ ಮೂಲ ಕಾರಣ ಅಂತ ನಾವೂ ಅಂದುಕೊಳ್ಳುತ್ತೇವೆ. ಅವನು ಹೇಳಿದಂತೆ ಡಾನ್ಸ್ ಮಾಡದಿದ್ದರೆ ನಮಗೆ ಇಷ್ಟೊಂದು ಅನಾಹುತ ಆಗುತ್ತಿರಲಿಲ್ಲ. ಈಗ ಒಳಹರಿವೇ ನಿಂತುಹೋಗಿ, ಹೊರಹರಿವು ಅಸಾಧ್ಯವಾಗಿ, ಕೈಕಾಲು ನಿತ್ರಾಣವಾಗಿ, ಇರುವಲ್ಲೇ ತರಗುಟ್ಟಲು ಸುರುವಾಗಿದೆ.

ಇನ್ನೊಂದು ಕಡೆ ಬೇರೆ ಮುಖದಲ್ಲಿ ಸಭೆ ಕರೆಯುವ ನಮ್ಮ ಸಮಾಜದ[ತಾವು ತಟಸ್ಥ ಎಂದು ಭೋಂಗು ಬಿಡುವ] ಪಟಾಲಂ ಬಳಗ ಅಲ್ಲಿಗೆ ಬಂದವರಿಗೆಲ್ಲ ಮತ್ತೆ ನಮ್ಮ ಸಂಸ್ಥಾನದ ಪರವಾಗಿ ವಕಾಲತ್ತು ಹಾಕುವಂತೆ ಎಣ್ಣೆ ಸವರಿ ಕಳಿಸುತ್ತದೆ. ಮತ್ತು ಮುಖವಾಣಿ ಎಂದು ಅವರೇ ಹೇಳಿಕೊಳ್ಳುವ ಪತ್ರಿಕೆಯಲ್ಲಿ ನಮ್ಮನ್ನೇ ಹೊಗಳಿ ಬರೆಯಿಸುತ್ತದೆ. ಹಾಗಾಗಿಯೇ ಇದ್ದಕ್ಕಿದ್ದಂತೆ ನಿನ್ನೆಯಿಂದ ಕೆಲವರು ಬದಲಾಗಿ ನಮ್ಮನ್ನು ಬೆಂಬಲಿಸತೊಡಗಿದ್ದು.

ಆದರೂ, ಈ ನಡುವೆ ನಮ್ಮಲ್ಲಿಂದ್ದ ಅನೇಕ ಜನ ನಮ್ಮನ್ನು ಬಿಟ್ಟುಹೋದದ್ದು ನಿಜ. ಏನೋ ಒತ್ತಾಯಕ್ಕೆ, ಮುಖ ಭಿಡೆಯಕ್ಕೆ ಇಲ್ಲೀವರೆಗೆ ಅವರು ಎಳೆದಿದ್ದಾರೆ; ಇನ್ನು ತಮ್ಮಿಂದಾಗದು ಎಂದು ಕೈಚೆಲ್ಲಿದ್ದಾರೆ. ಅಷ್ಟೇ ಅಲ್ಲ; ನಾವು ಸರಿಯಿಲ್ಲ ಎಂಬುದು ಅವರೆಲ್ಲರ ಮನಸ್ಸಿಗೆ ಸಾಬೀತಾಗಿದೆ. ಹೀಗಾದ್ದರಿಂದ ಪಟಾಲಮ್ಮಿಂದ ಬೇರ್ಪಟ್ಟವರು ಸೀದಾ ಹೋಗಿ ನಮ್ಮ ವಿರೋಧಿಗಳನ್ನು ಸೇರಿಕೊಂಡಿದ್ದಾರೆ.

ವರ್ಷಗಳ ಹಿಂದೆ ನಾವೂ ಒಂದು ಚಾನೆಲ್ ಮಾಡಬೇಕೆಂದುಕೊಂಡಿದ್ದೆವು; ಹಾಗೇನಾದರೂ ಮಾಡಿಕೊಂಡಿದ್ದರೆ, ಚುನಾವಣೆಗಳ ಸಮಯದಲ್ಲಿ, ರಾಜಕಾರಣಿಗಳ ಒಡೆತನದ ಚಾನೆಲ್‍ಗಳಲ್ಲಿ ಅವರಿಗೆ ಬೇಕಾದ್ದನ್ನಷ್ಟೇ ಇಡೀದಿನ ಹೇಗೆ ತುರುಕುತ್ತಿರುತ್ತಾರೋ ಹಾಗೆ ನಾವೂ ಕೂಡ ಸದಾ ನಮಗೆ ಬೇಕಾದ್ದನ್ನೇ ಹಾಕಿಸಬಹುದಿತ್ತು. ಎಲ್ಲವೂ ರೆಡಿಯಾಗಿ ಒಂದಷ್ಟು ಲಕ್ಷ ಹಣವನ್ನೂ ಹೂಡಿದ್ದಾಗಿತ್ತು; ಆದರೆ, ಇಮ್ಮಡಿಯ ಸ್ಕೆಚ್ ವರ್ಕ್ ಔಟ್ ಆಗದೆ, ನಮ್ಮ ಪವಾಡವೂ ನಡೆಯದೆ, ಆ ಪ್ರಾಜೆಕ್ಟು ಗೋತಾ ಹೊಡೆಯಿತು. ಎಷ್ಟೆಂದರೂ ಭಕ್ತಕುರಿಗಳು ಕೊಟ್ಟ ಹಣವಷ್ಟೇ? ಹೋದರೆ ಹೋಗಲಿ ಅಂತಹ ಹತ್ತುಪಟ್ಟು ತರಿಸಿಕೊಳ್ಳುವ ತಾಕತ್ತಿದೆ ಎಂದುಕೊಂಡು ಸುಮ್ಮನಾದೆವು.

ವರ್ಷಗಳ ಹಿಂದೆ, ಇಮ್ಮಡಿ ವಿಶ್ವೇಶ್ವರಯ್ಯನ ಸುಪರ್ದಿಯಲ್ಲಿ ನಾವು ಬೆಳಿಗ್ಗೆ ಲೋಕ ಸಂದೇಶ ಕೊಡುತ್ತಿದ್ದೆವು; ಹಾಗೆ ಮಾತನಾಡುವಾಗ ನಮ್ಮ ಹಾವ, ಭಾವ, ಭಂಗಿಗಳನ್ನು ಮತ್ತು ಕಣ್ಣುಗಳನ್ನು ಕಂಡ ಜನ “ಓಹೊಹೋ ಮಹಾಸ್ವಾಮಿಗಳಪ್ಪಾ” ಎಂದುಕೊಂಡಿರಬೇಕು. ಆದರೆ ವಾಹಿನಿಯಲ್ಲಿ ಕೆಲಸಮಾಡುವ ಹೆಣ್ಣುಬೆಕ್ಕುಗಳಿಗೆ ನಮ್ಮ ಅಡ್ಡಕಸುಬಿ ಅನಾಚಾರದ ಸುಳಿವು ಸಿಕ್ಕಿಬಿಟ್ಟಿತ್ತು; ನಮ್ಮ ಸಂದೇಶದ ನಂತರ ಅವು ಪರಸ್ಪರ ಮುಖ ಮುಖ ನೋಡಿಕೊಂಡು ಮುಸಿಮುಸಿ ನಗುತ್ತಿದ್ದವು.

ಶೃಂಗೇರಿ ಇಲ್ಲಿಯವರೆಗೆ ಯಾವುದೇ ವಿವಾದದಲ್ಲಿ ಸಿಲುಕಿಕೊಂಡಿಲ್ಲ, ಸಕ್ರಿಯ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ, ರಾಜಕಾರಣಿಗಳಿಗೆ ಮಣೆಹಾಕುವುದೂ ಇಲ್ಲ, ಆಸೇತು ಹಿಮಾಚಲ ಹಬ್ಬಿರುವ ಹಿಂದೂ ಸಮಾಜಕ್ಕೆ ಅದು ನಿಜಕ್ಕೂ ಶೃಂಗಪ್ರಾಯವಾಗಿದೆ, ಕಿರೀಟಪ್ರಾಯವಾಗಿದೆ. ದಗಾಕೋರರು, ವಂಚಕರು, ಲಂಪಟರು, ಮತಿಹೀನ ’ಪಂಡಿತರು’, ಸಮಾಜ ಘಾತುಕರು ಆ ಸ್ವಾಮಿಗಳ ಎದುರು ನಿಂತು ಮಾತನಾಡಲು ಹೆದರುತ್ತಾರೆ. ಅಷ್ಟೇ ಅಲ್ಲ ಈಗ ನಮಗೂ ಸಹ ಅವರೆದುರು ನಿಲ್ಲುವ ಎದೆಗಾರಿಕೆ ಇಲ್ಲ.

“ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಪದವಾಕ್ಯ ಪ್ರಮಾಣ ಪಾರವಾರಾಪಾರೀಣ ಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನಧಾರಣ ಸಮಾಧ್ಯಷ್ಟಾಂಗಯೋಗಾನುಷ್ಠಾನನಿಷ್ಠ ಷಡ್ದರ್ಶನಸ್ಥಾಪನಾಚಾರ್ಯ ತಪಶ್ಚಕ್ರವರ್ತ್ಯಾದ್ಯನೇಕ ವಿಶೇಷಣವಿಶಿಷ್ಟ” ಎಂಬುದು ಸಾಮಾನ್ಯವಾಗಿ ಶಂಕರ ಪರಂಪರೆಯ ಯತಿಗಳು ಬಳಸುವ ಬಿರುದುಗಳು. ಇವುಗಳಲ್ಲಿ ಷಡ್ದರ್ಶನಗಳೆಂದರೆ ನ್ಯಾಯ ದರ್ಶನ, ವೈಶೇಷಿಕ ದರ್ಶನ, ಸಾಂಖ್ಯ ದರ್ಶನ, ಯೋಗ ದರ್ಶನ, ಮೀಮಾಂಸ ದರ್ಶನ ಮತ್ತು ವೇದಾಂತ ದರ್ಶನ, ಇವುಗಳೆಲ್ಲವನ್ನೂ ಅರಿತಿರುವ ಕೆಲವೇ ವಿದ್ವಾಂಸರುಗಳಲ್ಲಿ ಶೃಂಗೇರಿಯವರೂ ಒಬ್ಬರು; ನಮಗೆ ಮಾತ್ರ ಇದೆಲ್ಲದರ ಗಂಧಗಾಳಿಯೂ ಇಲ್ಲ.

ವಿಶೇಷವೆಂದರೆ ಈ ಷದ್ದರ್ಶನಗಳ ಸಂಪೂರ್ಣ ದರ್ಶನ ಪಡೆದ ವ್ಯಕ್ತಿಯನ್ನು ದಾರ್ಶನಿಕ ಎಂಬುದು ಸರಿ. ಯಾಕೆಂದರೆ ಇವೆಲ್ಲ ಅನುಭೂತಿಗೆ ನಿಲುಕುವ ವಿಷಯಗಳೇ ಹೊರತು ಕೇವಲ ಪಠ್ಯಗಳನ್ನು ಓದಿದ ಮಾತ್ರಕ್ಕೆ ಅರಿವಿಗೆ ಬರುವ ವಿಷಯಗಳಲ್ಲ.

ಇದಲ್ಲದೆ,

ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ |
ಧೀರ್ವಿದ್ಯಾ ಸತ್ಯಮಕ್ರೋಧಃ ದಶಕಂ ಧರ್ಮ ಲಕ್ಷಣಮ್||

[ಇದನ್ನೇ, ಸಂಸಾರಿಯಾದವನಿಗೆ ಅನ್ವಯಿಸುವ ರೀತಿಯಲ್ಲಿ, ನಾರಾಯಣ ಪಂಡಿತನ ಹಿತೋಪದೇಶದ ಮಿತ್ರಲಾಭದ ಏಳನೇ ಶ್ಲೋಕ ಹೀಗೆ ಹೇಳುತ್ತದೆ-

ಇಜ್ಯಾಧ್ಯಯನದಾನಾನಿ ತಪಃ ಸತ್ಯಂ ಧೃತಿ ಕ್ಷಮಾ |
ಅಲೋಭ ಇತಿ ಮಾರ್ಗೋsಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ||

ಯಾಗ ಮಾಡುವುದು, ಅಧ್ಯಯಯನ ನಿರತರಾಗಿರುವುದು, ದಾನ, ತಪಸ್ಸು, ಸತ್ಯವನ್ನೇ ನುಡಿಯುವುದು, ಧೈರ್ಯವನ್ನು ಹೊಂದಿರುವುದು, ಕ್ಷಮಾಗುಣ, ಲೋಭವಿಲ್ಲದಿರುವುದು ಇವು ಎಂಟು ಧರ್ಮಕ್ಕೆ ಇರುವಂತಹ ಮಾರ್ಗಗಳು.]

ಮಹರ್ಷಿ ಪತಂಜಲಿಯ ಯೋಗಸೂತ್ರದಲ್ಲಿ ಅರ್ಹತೆಯನ್ನು ಹೇಳುವಾಗಲೇ ಇವೆಲ್ಲವೂ ಹೇಳಲ್ಪಟ್ಟಿವೆ. ನಿಜವಾದ ಸನ್ಯಾಸಿಗಳಲ್ಲಿ ಮಾತ್ರ ಕಾಣುವ ಧರ್ಮದ ಈ ಹತ್ತು ಲಕ್ಷಣಗಳನ್ನು ಶೃಂಗೇರಿಯವರಲ್ಲಿ ಕಾಣಬಹುದು. ಆದರೆ, ನಮಗೂ ಈ ಶ್ಲೋಕದಲ್ಲಿ ಹೇಳಿದ ಹತ್ತು ನಿಯಮಗಳಿಗೂ ಯಾವುದೇ ಸಂಬಂಧವೂ ಇಲ್ಲ.

ಮೂಕನನ್ನು ಮಾತನಾಡಿಸಬಲ್ಲ, ಹೆಳವನಿಗೆ ಹಿಮಾಲಯವೇರುವ ತಾಕತ್ತನ್ನು ಕೊಡಬಲ್ಲ ತಪೋನಿರತ ಸಿದ್ಧ ಸಾಧ್ಯರ, ವಿಭಾಂಡಕ-ಋಷ್ಯಶೃಂಗರ ನೆಲೆವೀಡು ಶೃಂಗೇರಿ ಎಂಬುದು ಸುಳ್ಳಲ್ಲ. ಬ್ರಹ್ಮಾಂಡವನ್ನು ರಚಿಸಿದ ಶಕ್ತಿ ಶಾರದೆಯಾಗಿ ನೆಲೆಸಿದ ದಿವ್ಯ ಕ್ಷೇತ್ರ ಅದೆಂಬುದರಲ್ಲಿ ನಮಗೆ ಅನುಮಾನವೇನೂ ಇಲ್ಲ. ಒಟ್ಟಂದದಲ್ಲಿ ಹೇಳಬೇಕಾದರೆ ಶೃಂಗೇರಿಯವರ ನೂರರ ಒಂದಂಶವೂ ನಾವಾಗಲು ಸಾಧ್ಯವಿಲ್ಲ; ಆದರೂ ನಾವು ಅವರನ್ನು ಮೀರಿಸುವ ಅರ್ಹತೆಯುಳ್ಳವರೆಂದು ಭೋಂಗು ಬಿಟ್ಟಿದ್ದೇವೆ.

ಹೋಗಲಿ ಬಿಡಿ, ಅದೆಲ್ಲ ಈಗ ಬೇಡ, ಈಗ ನಮಗೆ ಬೇಕಾದುದೇನು ಗೊತ್ತೇ? ಹೇಗಾದರೂ ಮಾಡಿ, ನಮ್ಮ ಸಮಾಜ ನಮ್ಮ ವಿರುದ್ಧ ತಿರುಗಿಬಿದ್ದಿದ್ದಕ್ಕೆ ಶೃಂಗೇರಿಯವರ ಮಸಲತ್ತೇ ಕಾರಣ ಎಂದು ರೂಪಿಸುವುದು. ಈಗೀಗ ಶೃಂಗೇರಿ ಎಂಬ ಹೆಸರೇ ನಮಗೆ ಅಲರ್ಜಿ ಮಾರಾಯ್ರೆ.”

Thumari Ramachandra

source: https://www.facebook.com/groups/1499395003680065/permalink/1631166770502887/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s